ಹೀಲಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೀಲಿಯಂ ಲೇಸರ್

ಸೂರ್ಯಧಾತು ತುದಾ 'ಹೀಲಿಯಮ್' ಒಂದು ರಾಸಾಯನಿಕ ಅನಿಲ. ಜಲಜನಕದ ಬಳಿಕ ಅತ್ಯಂತ ಹಗುರವಾದ ಮೂಲವಸ್ತು.ಇದರ ಪರಮಾಣು ಸಂಖ್ಯೆ ೨. ಸೂರ್ಯಧಾತುವು ಒಂದು ಜಡ ಅನಿಲ. ಇದು ಬ್ರಹ್ಮಾಂಡದಲ್ಲಿ ಹೇರಳವಾಗಿರುವ ಅನಿಲವಾದರೂ ಭೂಮಿಯಲ್ಲಿ ಅಲ್ಪ ಪ್ರಮಾಣದಲ್ಲಿದೆ. ಸೂರ್ಯ ಹಾಗೂ ನಕ್ಷತ್ರಗಳು ಮುಖ್ಯವಾಗಿ ಸೂರ್ಯಧಾತು ಹಾಗೂ ಜಲಜನಕಗಳಿಂದ ಮಾಡಲ್ಪಟ್ಟಿವೆ. ಇವುಗಳಲ್ಲಿ ಜಲಜನಕ ಪರಮಾಣುಗಳು ಸಂಯೋಗ [fuse]ಗೊಂಡು ಸೂರ್ಯಧಾತು ಪರಮಾಣುಗಳಾಗುವ ಕ್ರಿಯೆಯಿಂದಾಗಿ ನಿರಂತರವಾಗಿ ಶಕ್ತಿ ಬಿಡುಗಡೆ ಆಗುತ್ತಿರುತ್ತದೆ. ಇದೇ ತತ್ವ ಜಲಜನಕ ಬಾಂಬ್ ನ ಉತ್ಪಾದನೆಯಲ್ಲಿ ಬಳಕೆಯಾಗಿದೆ. ಫ್ರಾನ್ಸ್ಪಿಯರೆ ಜೆ.ಜಾನ್ಸೆನ್ ಮೊದಲಿಗೆ ಸೂರ್ಯಧಾತುವನ್ನು ೧೮೬೮ರಲ್ಲಿ ಸೂರ್ಯನ ಮೇಲ್ಮೈಯಲ್ಲಿ ಗುರುತಿಸಿದರು. ಇದು ಒಂದು ಜಡ ಅನಿಲವಾದುದರಿಂದ ಕೈಗಾರಿಕೆ, ವೈದ್ಯಕೀಯ, ವೈಜ್ಞಾನಿಕ ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ಧಾರಾಳವಾಗಿ ಬಳಕೆಯಲ್ಲಿದೆ. ದ್ರವ ಸೂರ್ಯಧಾತುವನ್ನು ಸತ್ತ ದೇಹಗಳನ್ನು ಸಂರಕ್ಷಿಸಲು ಬಳಸುವರು.

"https://kn.wikipedia.org/w/index.php?title=ಹೀಲಿಯಮ್&oldid=1047119" ಇಂದ ಪಡೆಯಲ್ಪಟ್ಟಿದೆ