ಸ್ಟೀಫನ್‌ ಹಾಕಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಟೀಫನ್‌ ವಿಲಿಯಂ ಹಾಕಿಂಗ್
Stephen Hawking.StarChild.jpg
NASAದಲ್ಲಿ ಸ್ಟೀಫನ್‌ ಹಾಕಿಂಗ್
ಜನನಸ್ಟೀಫನ್‌ ವಿಲಿಯಮ್ ಹಾಕಿಂಗ್
(1942-01-08) ೮ ಜನವರಿ ೧೯೪೨ (ವಯಸ್ಸು ೮೧)
ಆಕ್ಸ್‌ಫರ್ಡ್, ಇಂಗ್ಲೆಂಡ್
ಮರಣ14 March 2018(2018-03-14) (aged 76)
ಕೇಂಬ್ರಿಡ್ಜ್, ಕೇಂಬ್ರಿಡ್ಜ್ ಶೈರ್, ಇಂಗ್ಲೆಂಡ್
ವಾಸಇಂಗ್ಲೆಂಡ್
ರಾಷ್ಟ್ರೀಯತೆಬ್ರಿಟಿಶ್
ಕಾರ್ಯಕ್ಷೇತ್ರಗಳುApplied mathematician
Theoretical physicist
ಸಂಸ್ಥೆಗಳುUniversity of Cambridge
Perimeter Institute for Theoretical Physics
ಅಭ್ಯಸಿಸಿದ ಸಂಸ್ಥೆUniversity of Oxford
University of Cambridge
ಡಾಕ್ಟರೆಟ್ ಸಲಹೆಗಾರರುDennis Sciama
Other academic advisorsRobert Berman
ಡಾಕ್ಟರೆಟ್ ವಿದ್ಯಾರ್ಥಿಗಳುBruce Allen
Raphael Bousso
Fay Dowker
Malcolm Perry
Bernard Carr
Gary Gibbons
Harvey Reall
Don Page
Tim Prestidge
Raymond Laflamme
Julian Luttrell
ಪ್ರಸಿದ್ಧಿಗೆ ಕಾರಣBlack holes
Theoretical cosmology
Quantum gravity
InfluencesDikran Tahta
ಗಮನಾರ್ಹ ಪ್ರಶಸ್ತಿಗಳುPrince of Asturias Award (1989)
Copley Medal (2006)
Presidential Medal of Freedom (2009)
ಹಸ್ತಾಕ್ಷರ
ಸ್ಟೀಫನ್‌ ವಿಲಿಯಂ ಹಾಕಿಂಗ್'s signature

ಸ್ಟೀಪನ್ ವಿಲಿಯಂ ಹಾಕಿಂಗ್' (8 ಜನವರಿ 1942 - 14 ಮಾರ್ಚ್ 2018) ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಥಿಯರಿಟಿಕಲ್ ಕಾಸ್ಮಾಲಜಿ ಸೆಂಟರ್ನಲ್ಲಿ ಇಂಗ್ಲಿಷ್ ಸೈದ್ಧಾಂತಿಕ ಭೌತವಿಜ್ಞಾನಿ, ವಿಶ್ವವಿಜ್ಞಾನಿ.[೧]

ಇತಿವೃತ್ತ[ಬದಲಾಯಿಸಿ]

  • ಸ್ಟೀಫನ್ ವಿಲಿಯಂ ಹಾಕಿಂಗ್ ಲೇಖಕ ಮತ್ತು ಸಂಶೋಧನಾ ನಿರ್ದೇಶಕರಾಗಿದ್ದರು. ಅವರ ವೈಜ್ಞಾನಿಕ ಕೃತಿಗಳು ಸಾಮಾನ್ಯ ಸಾಪೇಕ್ಷತೆಯ ಚೌಕಟ್ಟಿನಲ್ಲಿನ ಗುರುತ್ವ ಏಕತ್ವ ಪ್ರಮೇಯಗಳ ಮೇಲೆ ರೋಜರ್ ಪೆನ್ರೋಸ್ ಸಹಯೋಗದೊಂದಿಗೆ ಮತ್ತು ಕಪ್ಪು ಕುಳಿಗಳು ವಿಕಿರಣವನ್ನು ಹೊರಸೂಸುವ ಸೈದ್ಧಾಂತಿಕ ಭವಿಷ್ಯವನ್ನು ಸಾಮಾನ್ಯವಾಗಿ ಹಾಕಿಂಗ್ ವಿಕಿರಣ ಎಂದು ಕರೆಯಲಾಗುತ್ತಿತ್ತು.
  • ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಒಕ್ಕೂಟವು ವಿವರಿಸಿರುವ ವಿಶ್ವವಿಜ್ಞಾನದ ಸಿದ್ಧಾಂತವನ್ನು ಮೊದಲ ಬಾರಿಗೆ ಹಾಕಿಂಗ್ ರಚಿಸಿದರು. ಅವರು ಕ್ವಾಂಟಮ್ ಮೆಕ್ಯಾನಿಕ್ಸ್ನ ಅನೇಕ-ಲೋಕಗಳ ವ್ಯಾಖ್ಯಾನದ ಹುರುಪಿನ ಬೆಂಬಲಿಗರಾಗಿದ್ದರು. ಹಾಕಿಂಗ್ ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್ನ ಜೀವಮಾನದ ಸದಸ್ಯರಾಗಿದ್ದ ರಾಯಲ್ ಸೊಸೈಟಿ ಆಫ್ ಆರ್ಟ್ಸ್ (FRSA) ನ ಗೌರವಾನ್ವಿತ ಫೆಲೋ ಆಗಿದ್ದರು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಅಧ್ಯಕ್ಷೀಯ ಪದಕ ಸ್ವಾತಂತ್ರ್ಯದ ಸ್ವೀಕರಿಸುವವರಾಗಿದ್ದರು.
  • 2002 ರಲ್ಲಿ, ಬಿಬಿಸಿಯ 100 ಗ್ರೇಟೆಸ್ಟ್ ಬ್ರಿಟನ್ನ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಹಾಕಿಂಗ್ 25 ನೇ ಸ್ಥಾನವನ್ನು ಪಡೆದರು.1979 ಮತ್ತು 2009 ರ ನಡುವೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅವರು ಗಣಿತಶಾಸ್ತ್ರದ ಲ್ಯೂಕಾಶಿಯಾದ ಪ್ರಾಧ್ಯಾಪಕರಾಗಿದ್ದರು ಮತ್ತು ಜನಪ್ರಿಯ ವಿಜ್ಞಾನದ ಕೃತಿಗಳೊಂದಿಗೆ ವಾಣಿಜ್ಯ ಯಶಸ್ಸನ್ನು ಸಾಧಿಸಿದರು,
  • ಇದರಲ್ಲಿ ಅವರು ತಮ್ಮದೇ ಆದ ಸಿದ್ಧಾಂತಗಳು ಮತ್ತು ವಿಶ್ವವಿಜ್ಞಾನವನ್ನು ಸಾಮಾನ್ಯವಾಗಿ ಚರ್ಚಿಸುತ್ತಾರೆ.ಅವರ ಪುಸ್ತಕ, ಎ ಬ್ರೀಫ್ ಹಿಸ್ಟರಿ ಆಫ್ ಟೈಮ್, ಬ್ರಿಟಿಷ್ ಸಂಡೇ ಟೈಮ್ಸ್ನ ಅತ್ಯುತ್ತಮ-ಮಾರಾಟದ ಪಟ್ಟಿಯಲ್ಲಿ 237 ವಾರಗಳ ದಾಖಲೆಯಿತ್ತು.
  • ಹಾಕಿಂಗ್ ಒಂದು ಅಪರೂಪದ ಮುಂಚಿನ-ಪ್ರಾರಂಭದ ನಿಧಾನಗತಿಯ ಪ್ರಗತಿ ಹೊಂದಿದ ಅಮೈಟ್ರೊಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ಎಎಲ್ಎಸ್) ಅನ್ನು ಹೊಂದಿದ್ದನು, ಇದನ್ನು ಮೋಟಾರು ನರಕೋಶ ರೋಗ ಅಥವಾ ಲೌ ಗೆಹ್ರಿಗ್ನ ಕಾಯಿಲೆ ಎಂದು ಕರೆಯಲಾಗುತ್ತದೆ, ಅದು ನಿಧಾನವಾಗಿ ಅವನನ್ನು ದಶಕಗಳಲ್ಲಿ ಪಾರ್ಶ್ವವಾಯುವಿಗೆ ಒಳಪಡಿಸಿತು.
  • ಅವರ ಮಾತಿನ ನಷ್ಟದ ನಂತರವೂ, ಭಾಷಣ-ಉತ್ಪಾದಿಸುವ ಸಾಧನದ ಮೂಲಕ ಅವರು ಕೈಯಲ್ಲಿ-ಹಿಡಿದ ಸ್ವಿಚ್ನ ಬಳಕೆಯ ಮೂಲಕ ಸಂವಹನ ನಡೆಸಲು ಸಾಧ್ಯವಾಯಿತು.

ಜನನ/ಬದುಕು[ಬದಲಾಯಿಸಿ]

  • ಸ್ಟೀಫನ್ ಹಾಕಿಂಗ್ ಜನಿಸಿದ್ದು ಜನವರಿ 8, 1942ರಂದು. 1962ನೇ ಇಸ್ವಿಯಲ್ಲಿ ಸ್ಟೀಫನ್ ಹಾಕಿಂಗ್‌ಗೆ ಇಪ್ಪತ್ತೊಂದು ವರ್ಷ. ಅನಾರೋಗ್ಯವೆಂದು ತಪಾಸಣೆಗೆ ಹೋದಾಗ ಬರಸಿಡಿಲಿನಂಥ ವಿಷಯವನ್ನು ವೈದ್ಯರು ತಿಳಿಸಿದರು. ಅದು ಅವರ ಜೀವನದ ಗತಿಯನ್ನೇ ಬದಲಿಸಿತು. ವೈದ್ಯರ ತೀರ್ಮಾನದಂತೆ ಹಾಕಿಂಗ್‌ಗೆ ಆದದ್ದು ಅಮಿಯೋಟ್ರಾಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್.
  • ಅದರ ಹೆಸರು ಎಷ್ಟು ಕ್ಲಿಷ್ಟವೋ ರೋಗವೂ ಅಷ್ಟೇ ಕ್ಲಿಷ್ಟ. ಅದು ನಿಧಾನವಾಗಿ ದೇಹವನ್ನು ಅಶಕ್ತ ಮಾಡುತ್ತ, ಶಕ್ತಿಯನ್ನು ಹೀರುವ, ಪರಿಹಾರವಿಲ್ಲದ, ಖಚಿತವಾಗಿ ತ್ವರಿತ ಸಾವಿಗೆ ದೂಡುವ ರೋಗ. ವೈದ್ಯರು ಕೇವಲ ಒಂದೆರಡು ವರ್ಷಗಳ ಬದುಕು ಉಳಿದಿದೆ ಎಂದರು. ಆಗ ಸ್ಟೀಫನ್ ಹಾಕಿಂಗ್ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಸಂಶೋಧನೆ ಮಾಡುತ್ತಿದ್ದರು.
  • ಸಂಶೋಧನೆ ಅಷ್ಟೇನೂ ಚೆನ್ನಾಗಿ ಮುಂದುವರೆದಿರಲಿಲ್ಲ. ಹಾಕಿಂಗ್‌ಗೂ ಅದರಲ್ಲಿ ಅಷ್ಟು ತೀಕ್ಷ್ಣವಾದ ಆಸಕ್ತಿ ಕಂಡಿರಲಿಲ್ಲ. ವೈದ್ಯರ ವರದಿ ಅವರ ಬದುಕಿನಲ್ಲಿ ಬಂದ ಬಹುದೊಡ್ಡ ತಿರುವು. ಆಗ ಅವರ ಮುಂದೆ ಇದ್ದದ್ದು ಎರಡೇ ಹಾದಿಗಳು. ಒಂದು, ದುಃಖದಿಂದ ಕೆಲಸವೆಲ್ಲವನ್ನು ನಿಲ್ಲಿಸಿ ಕೊರಗುತ್ತ ಸಾವಿಗಾಗಿ ಕಾಯuವುದು.
  • ಇನ್ನೊಂದು ಉಳಿದ ಸ್ವಲ್ಪವೇ ಸಮಯವನ್ನು ಸರಿಯಾಗಿ ಬಳಸಿ ಸಾಧನೆ ಮಾಡುವುದು. ಹಾಕಿಂಗ್ ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ಇವರಿಗೆ ಸ್ಫೂರ್ತಿಯಾಗಿ ನಿಂತವರು, ಇವರ ಜೊತೆಗಾತಿ ಜೇನ್. ಆಕೆಯ ಚೇತೋಹಾರಿಯಾದ ಮಾತುಗಳು, ಪ್ರೋತ್ಸಾಹ ಹಾಕಿಂಗ್‌ ಅವರನ್ನು ಬಡಿದೆಬ್ಬಿಸಿದವು. ನಿಜ, ಅವರಿಗೆ ಸಾವಿನ ಭಯವಿತ್ತು.
  • ಆದರೆ, ಅದಕ್ಕಿಂತ ಹೆಚ್ಚಾಗಿ ಸಾವು ಬರುವುದಕ್ಕಿಂತ ಮೊದಲು ಯಾವ ಸಾಧನೆಯನ್ನೂ ಮಾಡದಿರುವುದರ ಭಯವಿತ್ತು. ಮುಂಬರುವ ತಿಂಗಳುಗಳಲ್ಲಿ ಅವರ ಆರೋಗ್ಯ ಎಷ್ಟೆಷ್ಟು ಕುಸಿಯುತ್ತಿತ್ತೋ ಅವರ ಸಾಧನೆಯ ಮಟ್ಟ ಅಷ್ಟಷ್ಟು ಏರುತ್ತಿತ್ತು. 1974ರಲ್ಲಿ ರಾಯಲ್ ಸೊಸೈಟಿಯ ಅತ್ಯಂತ ಕಿರಿಯ ವಯಸ್ಸಿನ ಫೆಲೋ ಆಗಿ ಆಯ್ಕೆಯಾದರು.
  • 1982ರಲ್ಲಿ ಬ್ರಿಟಿಷ್ ಸರಕಾರ, ತನ್ನ ಅತ್ಯುಚ್ಛ ಗೌರವವಾದ ‘ಕಮಾಂಡರ್ ಆಫ್ ದ ಆರ್ಡರ್ ಆಫ್ ದ ಬ್ರಿಟಿಷ್ ಎಂಪಾಯರ್‌’ ಇವರಿಗೆ ನೀಡಿ ಗೌರವಿಸಿತು. ಅವರ ತಲಸ್ಪರ್ಶಿಯಾದ ಅಧ್ಯಯನದಿಂದ ಸೈದ್ಧಾಂತಿಕ ಖಗೋಲಶಾಸ್ತ್ರದಲ್ಲಿ ಅದರಲ್ಲೂ ಕಪ್ಪು ರಂಧ್ರಗಳ ಬಗ್ಗೆ ಅವರು ನೀಡಿದ ಕೊಡುಗೆ ಅನನ್ಯವಾದದ್ದು.
  • ಆಗ ಅವರು ಬರೆದ ಗ್ರಂಥ, ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ವಿಜ್ಞಾನದ ಗ್ರಂಥಗಳಲ್ಲಿ ಒಂದು ವಿಶೇಷ ಮೈಲಿಗಲ್ಲು. ಅದು ಪ್ರಪಂಚದ ಅತ್ಯಂತ ಜನಪ್ರಿಯ ವಿಜ್ಞಾನದ ಪುಸ್ತಕವಾಗಿ ದಾಖಲಾಗಿದೆ.

ಈ ಸಾಧನೆಯ ಭರಾಟೆಯಲ್ಲಿ ಇವರೇ ಸಾವನ್ನು ಮರೆತರೋ ಅಥವಾ ಯಮ ಬೆರಗಾಗಿ ಮರೆತು ಹೋದನೋ ತಿಳಿಯದು.

  • ಒಂದೆರಡು ವರ್ಷಗಳೂ ಬದುಕುವುದು ಸಾಧ್ಯವಿಲ್ಲವೆಂದು ನಲವತ್ತಾರು ವರ್ಷಗಳ ಹಿಂದೆ ಹೇಳಿದ್ದ ವಿಜ್ಞಾನಕ್ಕೆ ಸವಾಲೆಂಬಂತೆ ತಮ್ಮ ಕೊನೆಯ ದಿನಗಳವರೆವಿಗೂ ಸಂಶೋಧನೆಯನ್ನು ನಡೆಸಿದ್ದರು. ಅವರ ದೇಹ ಸಂಪೂರ್ಣ ನಿಶ್ಚೇಷ್ಟಿತವಾಗಿತ್ತು, ಅವರು ಸದಾಕಾಲವೂ ಗಾಲಿಕುರ್ಚಿಯ ಮೇಲೆಯೇ ಇರಬೇಕಾಗಿತ್ತು. ಅವರ ಧ್ವನಿಯನ್ನು ಅರ್ಥೈಸಿಕೊಳ್ಳಲು ಕಂಪ್ಯೂಟರ್‌ ಬಳಸಬೇಕಿತ್ತು.
  • ಆದರೆ, ಮಿದುಳು ಮಾತ್ರ ನಿಖರತೆ ಕಾಪಾಡಿಕೊಂಡಿತ್ತು. ಇಂದಿನವರೆವಿಗೂ ಹಾಕಿಂಗ್‌ ಅವರು ಪ್ರಪಂಚದ ಇಂದಿನ ವಿಜ್ಞಾನಿಗಳಲ್ಲಿ ಮುಂಚೂಣಿಯಲ್ಲಿದ್ದರು, ಲಕ್ಷಾಂತರ ಯುವ ವಿಜ್ಞಾನಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ಕೆಲವೊಮ್ಮೆ ಜೀವನದಲ್ಲಿ ಬರುವ ಆಘಾತಗಳು ಧನಾತ್ಮಕ ಬದಲಾವಣೆ ತರುತ್ತವೆ.
  • ಹೇಡಿಗಳಿಗೆ, ಸಾಧಕರಿಗೆ ಇರುವ ವ್ಯತ್ಯಾಸ ಒಂದೇ. ಹೇಡಿಗಳು ಎಲ್ಲಿ ಸಾವು ಬಂದೀತೋ ಎಂದು ಹೆದರುತ್ತ ಏನನ್ನೂ ಮಾಡದೇ ಸಾವಿನ ಬಾಗಿಲು ತೆಗೆದು ಕಾಯುತ್ತ ಕುಳಿತಿರುತ್ತಾರೆ. ಸಾಧಕರು ದುಡಿದುಡಿದು ಸಾಧಿಸಿ ಸಾವನ್ನು ಹೆದರಿಸುತ್ತಾರೆ. ಒಂದು ದಿನ ಸಾವು ಅನಿರ್ವಾರ್ಯವೆನಿಸಿದಾಗ ತಾವು ಇದುವರೆವಿಗೂ ಬದುಕಿದ್ದಕ್ಕೆ ಏನೂ ಕೊರೆ ಮಾಡಲಿಲ್ಲ ಎಂಬ ಸಂತೃಪ್ತಿಯಿಂದ ಬದುಕಿಗೆ ವಿದಾಯ ಹೇಳುತ್ತಾರೆ.

ನಿಧನ[ಬದಲಾಯಿಸಿ]

ವಿಜ್ಞಾನದ ವಿಸ್ಮಯರೆಂದೆನಿಸಿದ್ದ, ಆಲ್ಬರ್ಟ್ ಐನ್ ಸ್ಟೈನ್ ನಂತರದ ಮಹಾನ್ ಭೌತವಿಜ್ಞಾನಿ ಎನಿಸಿದ್ದ ಸ್ಟೀಫನ್ ಹಾಕಿಂಗ್ ತಮ್ಮ 76ನೆಯ ವಯಸ್ಸಿನಲ್ಲಿ ನಿಧನರಾದರು.[೨]

ಹೆಚ್ಚಿನ ಓದಿಗೆ[ಬದಲಾಯಿಸಿ]

  • ವಿಜ್ಞಾನಲೋಕದ ವಿಜೃಂಭಿತ ತಾರೆ ಸ್ಟೀಫನ್ ಹಾಕಿಂಗ್ನಾ-ನಾಗೇಶ ಹೆಗಡೆ-15 Mar, 2018[೧]
  • ಶತಮಾನದ ವಿಜ್ಞಾನಿ ಇನ್ನಿಲ್ಲ-ಪಿಟಿಐ-15 Mar, 2018[೨]

ಉಲ್ಲೇಖ[ಬದಲಾಯಿಸಿ]

  1. "ದೇಹಾತೀತವಾದ ಚೈತನ್ಯ". Prajavani.net. Retrieved 15 March 2018.[ಶಾಶ್ವತವಾಗಿ ಮಡಿದ ಕೊಂಡಿ]
  2. (2014 ರಲ್ಲಿ ಪ್ರಜಾವಾಣಿಯಲ್ಲಿ ಮೂಡಿಬಂದ ಡಾ. ಗುರುರಾಜ ಕರಜಗಿ ಅವರ ‘ಕರುಣಾಳು ಬಾ ಬೆಳಕೆ’ ಅಂಕಣದ ಲೇಖನ ಕೆಲವು ಸಾಂದರ್ಭಿಕ ಬದಲಾವಣೆಗಳೊಂದಿಗೆ )