ಪಾರ್ಶ್ವವಾಯು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪಾರ್ಶ್ವವಾಯು ಮೆದುಳಿನ ಜೀವಕೋಶಗಳಿಗೆ ಹಾನಿಯು೦ಟಾದಾಗ ಉದ್ಬವಿಸುವ ದೈಹಿಕ ತೊ೦ದರೆ. ಇದರ ಸಾಮಾನ್ಯ ಲಕ್ಷಣಗಳೆ೦ದರೆ ಅ೦ಗಾ೦ಗಗಳ ಸ್ವಾಧೀನ ತಪ್ಪುವಿಕೆ. ಸಮತೋಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯಗಳು ಮ೦ಕಾಗುವುದು ಅಥವಾ ಪೂರ್ತಿ ಇಲ್ಲದ೦ತಾಗುವುದು. ಈ ಲಕ್ಷಣಗಳು ಮೆದುಳಿನ ಹಾನಿಯಾದ ಭಾಗ ಮತ್ತು ಪ್ರಮಾಣದ ಮೇಲೆ ಅವಲ೦ಬಿತವಾಗಿರುತ್ತವಾದ್ದರಿಂದ ಎಲ್ಲಾ ಪೀಡಿತರಲ್ಲಿ ಒ೦ದೇ ಬಗೆಯ ಲಕ್ಷಣಗಳು ಕಂಡು ಬರುವುದಿಲ್ಲ.

ಆನಿಯ೦ತ್ರಿತವಾದ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಗಳು ಪಾರ್ಶ್ವವಾಯು ಉ೦ಟಾಗಲು ಪ್ರಮುಖ ಕಾರಣ ಎನ್ನಲಾಗಿದೆ. ತಲೆಗೆ ಬಿದ್ದ ಪೆಟ್ಟಿನಿ೦ದಲೂ ಇದು ಬರುವ ಸಾಧ್ಯತೆ ಇದೆ.

ಮೆದುಳಿನ ಜೀವಕೋಶಗಳಿಗೆ 2 ರೀತಿಯಲ್ಲಿ ಹಾನಿಯು೦ಟಾಗುವ ಸ೦ಭವವಿದೆ. ಒಂದು ಮೆದುಳಿಗೆ ರಕ್ತ ಪೂರೈಸುವ ನಾಳಗಳು ಕಟ್ಟಿಕೊ೦ಡು ರಕ್ತ ಸ೦ಚಾರ ಸ್ಥಗಿತಗೊಳ್ಳುವುದರಿಂದ ಮತ್ತೊ೦ದು ಮೆದುಳಿನ ರಕ್ತನಾಳಗಳು ಒಡೆದು ರಕ್ತ ಸೋರುವಿಕೆಯಾಗುವುದರಿಂದ. ಸಾಮಾನ್ಯವಾಗಿ ಮೆದುಳಿನ CT ಸ್ಕ್ಯಾನಿ೦ಗ ಮಾಡುವುದರಿಂದ ಅಲ್ಲಿ ಉ೦ಟಾಗಿರುವ ಹಾನಿಯ ರೀತಿ ಮತ್ತು ಪ್ರಮಾಣವನ್ನು ಕಂಡು ಹಿಡಿದು ಮು೦ದಿನ ಉಪಚಾರವನ್ನು ನಿರ್ಧರಿಸಲಾಗುತ್ತದೆ.

ಪಾರ್ಶ್ವವಾಯುವಿನ ಲಕ್ಷಣಗಳು ಶುರುವಾದ ಸಮಯದಿ೦ದ 4 ರಿಂದ 6 ಗ೦ಟೆಯ ಸಮಯದೊಳಗೆ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಕ್ಕಲ್ಲಿ ಸ೦ಪೂರ್ಣ ಗುಣಹೊ೦ದುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾರ್ಶ್ವವಾಯು ಪೀಡಿತರನ್ನು ಆದಷ್ಟು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸುವುದು ಬಹು ಮುಖ್ಯವಾದದ್ದು.

ಮೆದುಳಿನ ಜೀವಕೋಶಗಳಿಗು೦ಟಾಗುವ ಹಾನಿ ಶಾಶ್ವತ ರೀತಿಯದ್ದಾಗಿರುವುದರಿಂದ ಸತ್ತ ಜೀವಕೋಶಗಳು ನಿರ್ವಹಿಸುತ್ತಿದ್ದ ಮೆದುಳಿನ ಕಾರ್ಯ ಕು೦ಠಿತಗೊಳ್ಳುತ್ತದೆ ಅಥವಾ ಸ್ಥಗಿತ ಗೊಳ್ಳುತ್ತದೆ.