ಕಲ್ಕಿ

ವಿಕಿಪೀಡಿಯ ಇಂದ
Jump to navigation Jump to search

shree krishna

೧೮ನೇ ಶತಮಾನದ ಒಂದು ತಾಮ್ರಪತ್ರದಲ್ಲಿ ಕಲ್ಕಿಯ ಚಿತ್ರಣ

ಕಲ್ಕಿ ವಿಷ್ಣುವಿನ ಹತ್ತನೆಯ ಹಾಗೂ ಕೊನೆಯ ಅವತಾರ. ಕಲಿಯುಗದ ಕೊನೆಯಲ್ಲಿ ಆಗಲಿದೆ. ಕಲಿಮಹಾಪುರುಷನ ಪ್ರಭಾವದಿಂದ ಜನರಲ್ಲಿ ಧರ್ಮ, ದಯೆ ಮೊದಲಾದ ಗುಣಗಳು ಅಳಿದು ಅಧರ್ಮ ಅತಿ ಹೆಚ್ಚಿದಾಗ ವಿಷ್ಣು ಕಲ್ಕಿಯಾಗಿ ಅವತರಿಸಿ ಅಶ್ವಾರೂಢನಾಗಿ, ಖಡ್ಗ ಹಿಡಿದು ಹೊರಟು ಮ್ಲೇಚ್ಛ ಸಮೂಹವನ್ನು ಸಂಹರಿಸಿ, ಜಗತ್ತಿನಲ್ಲಿ ಧರ್ಮಸಂರಕ್ಷಣೆ ಮಾಡಿ ಶಾಂತಿಸೌಖ್ಯಗಳನ್ನು ನೆಲೆಗೊಳಿಸುತ್ತಾನೆಂದು ನಂಬಿಕೆ. ವೈದಿಕ ಸಾಹಿತ್ಯದಲ್ಲಿ ಕಲ್ಕಿಯು ಮಹಾವಿಷ್ಣುವಿನ ಹತ್ತನೆಯ ಮತ್ತು ಕೊನೆಯ ಅವತಾರ. ಅವನು ಈಗ ಇರುವ , ಅಸತ್ಯ, ಅಧರ್ಮ ಮತ್ತು ಅನ್ಯಾಯಗಳಿಂದ ಕೂಡಿದ ಕಲಿಯುಗವನ್ನು ಕೊನೆಗೊಳಿಸಿ ಸತ್ಯ,ಧರ್ಮ,ನ್ಯಾಯಗಳ ಕೃತಯುಗ ಅಂದರೆ ಸತ್ಯಯುಗವನ್ನು ಸ್ಥಾಪಿಸುವನು. ಬೌದ್ಧಧರ್ಮದಲ್ಲಿ ಶಾಂಭಲಾ ರಾಜ್ಯದ ೨೫ ಜನ ಅರಸರು ಕಲ್ಕಿ ಎಂಬ ಬಿರುದನ್ನು ಹೊಂದಿರುತ್ತಾರೆ.

ಗರುಡಪುರಾಣದಲ್ಲಿ ಹತ್ತು ಅವತಾರಗಳನ್ನು ಹೇಳಿದ್ದು ಕಲ್ಕಿ ಹತ್ತನೆಯ ಅವತಾರವಾಗಿದೆ. ಭಾಗವತ ಪುರಾಣದಲ್ಲಿ ಒಟ್ಟು ೨೫ ಅವತಾರಗಳನ್ನು ಹೇಳಿದೆಯಾದರೂ ಮೊದಲಿಗೆ ೨೨ ಅವತಾರಗಳನ್ನು ಮಾತ್ರ ಪಟ್ಟಿ ಮಾಡಿದ್ದು ಕಲ್ಕಿಯು ೨೨ನೆಯ ಅವತಾರವಾಗಿದ್ದಾನೆ.

ಅವನು ರೆಕ್ಕೆಗಳುಳ್ಳ ದೇವದತ್ತ ಎಂಬ ಹೆಸರಿನ ಬಿಳಿಯ ಬಣ್ಣದ ಕುದುರೆಯ ಮೇಲೆ ಎಡಗೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಕಲಿಯುಗವನ್ನು ಕೊನೆಗೊಳಿಸಲು ಬರುತ್ತಾನೆ ಎಂದು ಅವನನ್ನು ಕಲ್ಪಿಸಲಾಗಿದೆ. ವಿಷ್ಣುಪುರಾಣ, ಅಗ್ನಿಪುರಾಣ ಗಳಲ್ಲೂ ಕಲ್ಕಿಯ ಬಗ್ಗೆ ಸೂಚಿಸಲಾಗಿದೆ.

ಕಲ್ಕಿಪುರಾಣದಲ್ಲಿ ಕಲ್ಕಿಯ ಅವತಾರ ಯಾವಾಗ ಹೇಗೆ ಆಗುವುದು, ಅವನು ಏನು ಮಾಡುತ್ತಾನೆ ಎಂಬ ಬಗ್ಗೆ ವಿವರಗಳಿವೆ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಲ್ಕಿ&oldid=920652" ಇಂದ ಪಡೆಯಲ್ಪಟ್ಟಿದೆ