ಮನುಸ್ಮೃತಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಮನುಸ್ಮೃತಿ[೧] ಅಥವಾ "ಮನುವಿನ ನಿಯಮಗಳು"; ಮಾನವಧರ್ಮಶಾಸ್ತ್ರ ಎಂದೂ ಪರಿಚಿತವಾಗಿದೆ. ಹಿಂದೂ ಧರ್ಮಧರ್ಮಶಾಸ್ತ್ರ ಪಠ್ಯ ಸಂಪ್ರದಾಯದ ಅತ್ಯಂತ ಪ್ರಮುಖ ಮತ್ತು ಅತ್ಯಂತ ಮುಂಚಿನ ಛಂದೋಬದ್ಧ ಕೃತಿ. ಪಠ್ಯವು ಮನ್ವಂತರ ಕಾಲದ್ದು. ಮನ್ವಂತರವೆಂದರೆ ಐದು ವರ್ಷಗಳಿಗೊಮ್ಮೆ ಬದಲಾಗುವ ಅಧಿಕೃತ ಕಾನೂನು ಸಚಿವಾಲಯವಾಗಿತ್ತು. ಐದು ವರ್ಷಗಳಿಗೊಮ್ಮೆ ಮನುವಿನ ಸ್ಥಾನ ಬದಲಾಗುತ್ತಿತ್ತು. ಮನುವು, ಅವರಿಗೆ "ಎಲ್ಲ ಸಾಮಾಜಿಕ ವರ್ಗಗಳ ನಿಯಮ" ಹೇಳೆಂದು ಬೇಡಿಕೊಳ್ಳುವ, ಋಷಿಗಳಿಗೆ ಕೊಟ್ಟ ಒಂದು ಪ್ರವಚನದ ರೂಪದಲ್ಲಿದೆ. ಮನುಸ್ಮೃತಿಯು ಅದನ್ನು ಅನುಸರಿಸಿದ ಎಲ್ಲ ಮುಂದಿನ ಧರ್ಮಶಾಸ್ತ್ರಗಳಿಗೆ ಸ್ವೀಕಾರಾರ್ಹ ಮಾನದಂಡವಾಯಿತು.

ಮನ್ವಂತರ ಸಿದ್ದಾಂತ

ಮನ್ವಂತರದ ಪರಿಕಲ್ಪನೆಗೂ, ದೇಶದ ರಾಜಕೀಯ ವ್ಯವಸ್ಥೆಗೂ ಸಂಬಂಧವಿದೆ. ಒಂದು ನಿರ್ಧಿಷ್ಟ ಅವಧಿಯವರೆವಿಗೂ ಒಂದು ನಿಯೋಗದ ಕೈಯಲ್ಲಿ ಪ್ರಭುತ್ವ ಇರುತ್ತದೆ. ಈ ನಿಯೋಗದ ಅಧಿಕಾರಿ ಮನು. ಇವರೊಂದಿಗೆ ಸಪ್ತರ್ಷಿಗಳು ,ಸ್ವರ್ಗಲೋಕದ ಅಧಿಪತಿ ಇಂದ್ರ ಇರುತ್ತಾನೆಂದು ನಂಬುತ್ತಾರೆ. ಈ ಅವಧಿಯ ಹೆಸರೇ ಮನ್ವಂತರ ಯುಗ. ಒಬ್ಬ ಮನುವಿನ ಅವಧಿ ಮುಗಿದ ಬಳಿಕ ಮತ್ತೊಬ್ಬ ಮನು ಅಧಿಕಾರಕ್ಕೆ ಬರುತ್ತಾನೆ. ಹೀಗೆ ಹದಿನಾಲ್ಕು ಮನ್ವಂತರಗಳಿಗೆ ಒಂದು ಕಾಲ ಚಕ್ರ ಮುಗಿಯುತ್ತದೆ. ಈಗಾಗಲೇ ಏಳು ಜನ ಮನುಗಳು ಸಂದು ಹೋಗಿದ್ದಾರೆ. ಅವರೆಂದರೆ-

 1. ಸ್ವಾಯಂಭುವ ಮನು -ಧರ್ಮಸೂತ್ರದ ಕರ್ತೃ
 2. ಸ್ವಾರೋಚಿತ ಮನು
 3. ಔತ್ತಮಿ ಮನು
 4. ರೈವತ ಮನು
 5. ವೈವಸ್ವತ ಮನು
 6. ಚಾಕ್ಷುಷ ಮನು
 7. ಸುಮತಿ ಭಾರ್ಗವ ಇವನೇ 'ಮನುಸ್ಪೃತಿ'ಯ ಕರ್ತೃ.

ಮನುಸ್ಪೃತಿಯ ಅಧ್ಯಾಯಗಳು

 • ಅಧ್ಯಾಯ 1

ಕಲಿಸುವುದು, ಕಲಿಯುವುದು, ಯಜ್ಞ ಮಾಡುವುದು,.ಯಜ್ಞ ಮಾಡಿಸುವುದು, ದಾನ ನೀಡುವುದು, ದಾನ ಸ್ವೀಕರಿಸುವುದು ಇವು ಆರು ಬ್ರಾಹ್ಮಣನ ಕರ್ಮಗಳು (ಶ್ಲೋಕ 88) ಮಾಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳ ಜನರ (ಬ್ರಾಹ್ಮಣ ಕ್ಷತ್ರಿಯ ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು ಆದೇಶಿಸಿದ್ದಾನೆ. (91) ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯನ್ನು ಆಳುವ ಅಧಿಕಾರ ಪಡೆದುಕೊಂಡಿರುತ್ತಾನೆ. ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ.ಜೀವಿಗಳ ಒಡೆಯನಾಗುತ್ತಾನೆ (೯೯) ಈ ಭೂಮಿಯಲ್ಲಿ ಇರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿದೆ. ಬ್ರಾಹ್ಮಣನು.ಶ್ರೇಷ್ಟವಾದ ಜನ್ಮವನ್ನು ಪಡೆದಿದ್ದರಿಂದ ಇವೆಲ್ಲವನ್ನು ಹೊಂದಲು ಅವನೇ ಅರ್ಹನಾಗುತ್ತಾನೆ (೧೦೦)

 • ಅಧ್ಯಾಯ ೨

ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ ಸೂಚಕವಾದ ಹಾಗು ಶೂದ್ರನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು. (೩೧)

 • ಅಧ್ಯಾಯ ೩

ಎಂತಹ ಅನಿವಾರ್ಯ ಸಂದರ್ಭದಲ್ಲೂ ಬ್ರಾಹ್ಮಣ ಹಾಗೂ ಕ್ಷತ್ರಿಯ ಗಂಡುಗಳು ಶೂದ್ರ ಜಾತಿಯ ಸ್ತ್ರೀಯನ್ನು ಪ್ರಥಮ ಹೆಂಡತಿ ಎಂದು ಪರಿಗಣಿಸಬಾರದು (೧೪) ಬ್ರಾಹ್ಮಣರು ಶ್ರಾದ್ಧ ಭೋಜನ ಮಾಡುತ್ತಿರುವಾಗ ಅವರನ್ನು ಚಾಂಡಾಲ, ಹಂದಿ, ಕೋಳಿ, ನಾಯಿ ಮತ್ತು ಮುಟ್ಟಾದವಳು ಹಾಗೂ ನಪುಂಸಕರು ನೋಡಬಾರದು (೨೩೯) ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಗಳ ಗಾಳಿ ತಟ್ಟುವುದರಿಂದ, ನಾಯಿಯು ನೋಡುವುದರಿಂದ ಹಾಗೂ ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ (೨೪೧)

 • ಅಧ್ಯಾಯ ೪

ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ, ವೇದ ವಿರೋಧಿಗಳಾದ ಪಾಷಂಡಿಗಳ ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು (೬೧) ಶೂದ್ರನಿಗೆ ಬುದ್ಧಿ ಹೇಳಬಾರದು, ಯಜ್ಞದ ಹವಿಸ್ಸಿನ ಶೇಷವನ್ನು ಹಾಗೂ ಎಂಜಲನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು. ವ್ರತಾಚರಣೆಯನ್ನು ಹೇಳಿ ಕೊಡಬಾರದು (೮೦) ಶೂದ್ರನಿಗೆ ಧರ್ಮೋಪದೇಶ ಮಾಡುವವನು, ವ್ರತಾಚರಣೆಗಳನ್ನು ಹೇಳಿಕೊಡುವವನು, ಆ ಶೂದ್ರನ ಜೊತೆಗೆ ತಾನು ಕೂಡ ಅಸಂವೃತವೆಂಬ ನರಕಕ್ಕೆ ಹೋಗುವನು (೮೧) ಊರಲ್ಲಿ ಶವ ಇರುವಾಗ, ಶೂದ್ರನು ಹತ್ತಿರದಲ್ಲಿರುವಾಗ, ಆಕ್ರಂದನದ ಧ್ವನಿ ಕೇಳುತ್ತಿರುವಾಗ ಮತ್ತು ಜನರ ಗುಂಪು ನೆರೆದಿರುವಾಗ ವೇದವನ್ನೋದಬಾರದು (೧೦೮) ಬೇಕು ಬೇಕೆಂದೇ ಯಾರಾದರೂ ಕೋಪಗೊಂಡು ಒಬ್ಬ ಬ್ರಾಹ್ಮಣನಿಗೆ ಹೊಡೆದರು ಸಾಕು, ಅವರು ಇಪ್ಪತ್ತೊಂದು ಜಂಗಮಗಳು ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ (೧೬೬) ಕಮ್ಮಾರ, ಬೇಡ, ರಂಗವೇಧಿಕೆಯನ್ನು ಅಳಂಕರಿಸುವವನು, ಬಂಗಾರದ ಕೆಲಸ ಮಾಡುವ ಪತ್ತಾರ್, ಬಿದಿರಿನ ಕೆಲಸ ಮಾಡುವವನು, ಶಸ್ತ್ರಾಸ್ತ್ರ ಮಾರುವವನು ಈ ಎಲ್ಲರ ಮನೆಯ ಅನ್ನವನ್ನು ಬ್ರಾಹ್ಮಣನು ಉಣ್ಣಬಾರದು (೨೧೫) ರಾಜಾನ್ನವು ತೇಜಸ್ಸನ್ನು, ಶೂದ್ರಾನ್ನವು ಬ್ರಹ್ಮವರ್ಚಸ್ಸನ್ನು, ಸ್ವರ್ಣಕಾರನ ಅನ್ನವು ಆಯಸ್ಸನ್ನು ಹಾಗೂ ಚರ್ಮಕಾರನ ಅನ್ನವು ಕೀರ್ತಿಯನ್ನು ನಾಶ ಮಾಡುತ್ತದೆ (೨೧೮)

 • ಅಧ್ಯಾಯ ೫

ಪತಿಯ ನಡತೆಯು ಚೆನ್ನಾಗಿಲ್ಲದಿದ್ದರೂ, ಅವನು ಕಾಮಾತುರನಾಗಿ ಅನ್ಯಹೆಂಗಸರಲ್ಲಿ ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಹೆಂಡತಿಯು ಆ ತನ್ನ ಪತಿಯನ್ನು ದೇವರೆಂದು ಭಾವಿಸಿ ಅವನ ಸೇವೆ ಮಾಡಬೇಕು (೧೫೪)

 • ಅಧ್ಯಾಯ ೭

ತನಗೆ ಸಾಯುವಂತಹ ಆಪತ್ತು ಬಂದರೂ ರಾಜನು ವೇದವಿದ್ವಾಂಸನಾದ ಬ್ರಾಹ್ಮಣನಿಂದ ತೆರಿಗೆಯನ್ನು ಪಡೆಯಬಾರದು. ಶ್ರೋತ್ರಿಯನಾದ ಬ್ರಾಹ್ಮಣನು ಎಂದಿಗೂ ಈ ಅರಸನಾಳುವ ರಾಜ್ಯದಲ್ಲಿ ಹಸಿವಿನಿಂದ ಬಳಲಬಾರದು (೧೩೩) ಯಾವ ಅರಸನ ರಾಜ್ಯದಲ್ಲಿ ಬ್ರಾಹ್ಮಣನು ಹಸಿವಿನಿಂದ ಬಳಲುತ್ತಾನೋ ಆ ರಾಜ್ಯವು ಕೂಡ ಬರಗಾಲದಿಂದ ಪೀಡಿತವಾಗಿ ಹಸಿವಿನಿಂದ ಹೇಳುತ್ತದೆ. ನಾಶವಾಗುತ್ತದೆ (೧೩೪)

 • ಅಧ್ಯಾಯ ೮

ಯಾವ ರಾಷ್ಟ್ರವು ಹೆಚ್ಚಾಗಿ ಶೂದ್ರರಿಂದಲೇ ತುಂಬಿರುತ್ತದೋ,ನಾಸ್ತಿಕರಿಂದ ಆಕ್ರಮಿಸಲ್ಪಡುತ್ತದೋ, ಬ್ರಾಹ್ಮಣ ರಹಿತವಾಗಿರುತ್ತದೋ, ಆ ರಾಜ್ಯವು ದುರ್ಭಿಕ್ಷ ರೋಗಗಳಿಂದ ಜರ್ಜರಿತವಾಗಿ ಬೇಗನೆ ನಾಶವಾಗಿ ಬಿಡುತ್ತದೆ (೨೨) ಬ್ರಾಹ್ಮಣನನ್ನು ಬೈದರೆ ಕ್ಣತ್ರಿಯನಿಗೆ ನೂರು ಒಣಗಲು ದಂಡವನ್ನು ಬೋಧಿಸಬೇಕು. ವೈಶ್ಯನಿಗೆ ನೂರೈವತ್ತು ಅಥವಾ ಇನ್ನೂರು ಒಣಗಲು ದಂಡ ವಿಧಿಸಬೇಕು. ಹಾಗೂ ಬ್ರಾಹ್ಮಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ ಬೋಧಿಸಬೇಕು (೨೬೭) ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ ಬೈದಂಥ ಆ ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು (೨೭೧)

 • ಅಧ್ಯಾಯ ೯

ಶಯ್ಯೆ, ಆಸನ, ಅಲಂಕಾರ ಇವುಗಳ ಮೋಹ, ಕಾಮ, ಕ್ರಿಶ, ಅಪ್ರಾಮಾಣಿಕತೆ, ಪತಿ ದ್ರೋಹ ಮತ್ತು ದುರ್ನಡತೆ ಇವೆಲ್ಲಾ ಸಾಮಾನ್ಯವಾಗಿ ಸ್ತ್ರೀಯರಲ್ಲಿರುವ ಸ್ವಾಭಾವಿಕ ಗುಣಗಳು (೧೭) ಮೃತ ಬ್ರಾಹ್ಮಣನ.ಆಸ್ತಿಯನ್ನು ರಾಜನು ವಶಪಡಿಸಬಾರದು. ಆದರೆ ಇತರ ವರ್ಣದವರು ಮೃತಪಟ್ಟರೆ ರಾಜನು ಅವರ ಆಸ್ತಿಯನ್ನು ಹೊಂದಲು ಅರ್ಹನಾಗುತ್ತಾನೆ (೧೮೯)

ಮನುಸ್ಮೃತಿಯೊಳಗೆ ಇರುವ ವಿಷಯ

 1. ಲೋಕಗಳ ಉದ್ದಾರಕ್ಕಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನನ್ನೂ , ಭುಜದಿಂದ ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರ ನನ್ನೂ ಸೃಷ್ಟಿಸಿದನು ( ಅಧ್ಯಾಯ -1:31)
 2. ಮಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳ( ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು ಆದೇಶಿಸಿದ್ದಾನೆ (ಅ- 1:91)
 3. ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯಲ್ಲಿ ಆಳುವ ಅಧಿಕಾರ ಪಡೆದುಕೊಂಡು ಹುಟ್ಟಿರುತ್ತಾನೆ ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ ಜೀವಿಗಳ ಒಡೆಯನಾಗಿರುತ್ತಾನೆ (ಅ-1:99)
 4. ಈ ಭೂಮಿಯಲ್ಲಿ ಸೇರಿರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿವೆ. ಬ್ರಾಹ್ಮಣನು ಶ್ರೇಷ್ಡ ವಾದ ಜನ್ಮವನ್ನು ಪಡೆದದ್ದರಿಂದ ಇವೆಲ್ಲವನ್ನೂ ಹೊಂದಲು ಅವನೇ ಅರ್ಹನಾಗಿರುತ್ತಾನೆ (ಅ-1:100)
 5. ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ ಸೂಚಕವಾದ ಹಾಗೂ ಶೂದ್ರನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು. (ಅ-2:31)
 6. ಬ್ರಾಹ್ಮಣರಿಗೆ ಇಷ್ಟವಾಗುವ ಎಲ್ಲ ರುಚಿಕರ ಪದಾರ್ಥಗಳನ್ನು ಅವರಿಗೆ ನೀಡಬೇಕು. ಅವರ ಜೊತೆ ಪರಬ್ರಹ್ಮ ವಿಚಾರವನ್ನು ಚರ್ಚಿಸಬೇಕು. ಇದರಿಂದ ಪಿತೃಗಳಿಗೆ ಪ್ರೀತಿಯುಂಟಾಗುತ್ತದೆ (ಅ-3:231)
 7. ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಯ ಗಾಳಿ ತಾಕುವುದರಿಂದ, ನಾಯಿ ನೋಡುವುದರಿಂದ ಹಾಗೂ ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ ( ಅ- 3:241)
 8. ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ ವೇದವಿರೋಧಿಗಳಾದ ಪಾಷಂಡಿಗಳ ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು ( ಅ-4:61)
 9. ಶೂದ್ರನಿಗೆ ವಿದ್ಯೆ ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು. ವ್ರತಾಚರಣೆ ಹೇಳಿಕೊಡಬಾರದು. (ಅ- 4:80)
 10. ಬ್ರಾಹ್ಮಣರನ್ನು ವಧಿಸಲು ದ್ವಿಜಾತಿಯವರು ದಂಡಗಳನ್ನೆತ್ತಿದರೆ, ಬರಿ ಎತ್ತಿದ ಮಾತ್ರಕ್ಕೆ ನೂರು ವರ್ಷಗಳ ತನಕ ತಾಮಿಸ್ರವೆಂಬ ನರಕದಲ್ಲಿ ಬೀಳುತ್ತಾರೆ (ಅ- 4:165)
 11. ಬೇಕು ಬೇಕೆಂದೇ ಯಾರಾದರೂ ಕೋಪಕೊಂಡು ಬ್ರಾಹ್ಮಣನಿಗೆ ಹೊಡೆದರೂ ಸಾಕು ಅವರು ಇಪ್ಪತ್ತೊಂದು ಜನ್ಮ ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ. (ಅ-4:166)
 12. ಪುರಾಣ ಕಾಲದಲ್ಲಿ ಮಾಡಿದ ಯಜ್ಞಗಳಲ್ಲಿ ಬ್ರಾಹ್ಮಣ ಹಾಗೂ ಕ್ಷತ್ರಿಯರು ಮಾಡಿದಂತಹ ಯಾಗಗಳಲ್ಲಿ, ಶಾಸ್ತ್ರಗಳಲ್ಲಿ ತಿನ್ನಬಹುದೆಂದು ಹೇಳಿದ ಮೃಗಪಕ್ಷಿಗಳನ್ನು ಬಲಿನೀಡಿ ಅವುಗಳ ಮಾಂಸದಿಂದ ಪುರೋಡಾಶನವನ್ನು (ಹವಿಸ್ಸನ್ನು) ಮಾಡಿದ್ದರು (ಅ-5 :23)
 13. ಬ್ರಾಹ್ಮಣರಿಗೆ ಅಪೇಕ್ಷೆಯುಂಟಾದಾಗ ಯಜ್ಞವಿಧಿಗಳಲ್ಲಿ ಮಂತ್ರಜಲದಿಂದ ಪ್ರೋಕ್ಷಿತವಾದ ಮಾಂಸವನ್ನು ಹಾಗೂ ಶಾಸ್ತ್ರವಿಧಿಗಳಲ್ಲಿ ಹೇಳಲಾದ ರೀತಿಯಿಂದ ಶ್ರಾದ್ಧದೂಟದಲ್ಲಿನ ಮಾಂಸವನ್ನು ತಿನ್ನಬಹುದು. ಹಾಗೆಯೇ ಆಹಾರ ಸಿಗದೆ ಪ್ರಾಣ ಸಂಕಟ ಉಂಟಾದಾಗ ಅನಿವಾರ್ಯವಾಗಿ ಮಾಂಸವನ್ನು ತಿನ್ನಬಹುದು (ಅ-5:27)
 14. ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮ ಜೀವ ಜಂತುಗಳನ್ನು, ಚರಾಚರ ವಸ್ತುಗಳನ್ನು ತಿನ್ನಲಿಕ್ಕೆಂದೇ ಪರಮಾತ್ಮನು ಸೃಷ್ಟಿಸಿದ್ದಾನೆ (ಅ- 5:28)
 15. ಹೀಗೆ ಯಜ್ಞ, ಶ್ರಾದ್ಧ ಹಾಗೂ ಮಧುಪರ್ಕ ಇತ್ಯಾದಿ ಕಾರ್ಯಗಳಿಗಾಗಿ ಮಾತ್ರ ವೇದಜ್ಞನಾದ ಬ್ರಾಹ್ಮಣನು ಪಶುವನ್ನು ಕೊಂದರೆ ಅವನು ತನ್ನ ಜತೆಗೆ ಆ ಪಶುವಿಗೂ ಉತ್ತಮ ಗತಿಯನ್ನು ಉಂಟು ಮಾಡುತ್ತಾನೆ (ಅ- 5:42)
 16. ಪತಿಯ ನಡತೆಯು ಚೆನ್ನಾಗಿಲ್ಲವಾದರೂ, ಅವನು ಕಾಮಾತುರನಾಗಿ ಅನ್ಯ ಹೆಂಗಸಲ್ಲಿ ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಆ ಹೆಂಗಸು ಆ ತನ್ನ ಪತಿಯನ್ನು ದೇವರೆಂದೇ ಭಾವಿಸಿ ಅವನ ಸೇವೆ ಮಾಡಬೇಕು ( ಅ- 5:154)
 17. ವಿದ್ಯೆ ಕಲಿತು ಗುರುಕುಲದಿಂದ ಹೊರಬರುವ ಬ್ರಾಹ್ಮಣ ವಿದ್ವಾಂಸರನ್ನು ರಾಜನು ಸತ್ಕರಿಸಬೇಕು. ವಿದ್ಯಾವಂತ ಬ್ರಾಹ್ಮಣರಿಗೆ ನೀಡುವ ನಿಧಿಯು ಅಕ್ಷಯವಾದ ಫಲವನ್ನು ಉಂಟು ಮಾಡುತ್ತದೆ ( ಅ-7:82)
 18. ಯಾವ ರಾಜನ ನ್ಯಾಯಸಭೆಯಲ್ಲಿ ಶೂದ್ರನು ಧರ್ಮವಿಚಾರ ವಿಮರ್ಶೆ ಮಾಡುತ್ತಾನೋ, ಆ ರಾಜನ ದೇಶವು ಕೆಸರಿನಲ್ಲಿ ಬಿದ್ದ ಹಸುವಿನಂತಾಗಿ ಬಿಡುತ್ತದೆ. ಅಂತಹ ರಾಜನು ನೋಡು ನೋಡುತ್ತಿದ್ದಂತೆಯೇ ಕಷ್ಟ ಪಡುತ್ತಾನೆ (ಅ-8:21)
 19. ಯಾವ ರಾಜ್ಯವು ಹೆಚ್ಚಾಗಿ ಶೂದ್ರರಿಂದ ತುಂಬಿರುತ್ತದೋ, ನಾಸ್ತಿಕರಿಂದ ಆಕ್ರಮಿಸಲ್ಪಡು ತ್ತದೋ, ಬ್ರಾಹ್ಮಣರಹಿತವಾಗಿರುತ್ತದೋ ಆ ರಾಜ್ಯವು ದುರ್ಭಿಕ್ಷ ರೋಗಗಳಿಂದ ಜರ್ಜರಿತ ವಾಗಿ ಬೇಗನೆ ನಾಶವಾಗಿ ಬಿಡುತ್ತದೆ (ಅ-8:22)
 20. ಪರಸ್ಪರ ವಿರುದ್ಧ ಸಾಕ್ಷಿಗಳು ಹೇಳಲ್ಪಟ್ಟಾಗ ರಾಜನು ಬಹುಮತದ ಅಭಿಪ್ರಾಯ ಮನ್ನಿಸ ಬೇಕು. ಸಮಾನ ಇಬ್ಬರಲ್ಲಿ ಪರಸ್ಪರ ವಿರುದ್ಧ ಸಾಕ್ಷಿ ನುಡಿದರೆ ಗುಣವಂತನ ಸಾಕ್ಷಿ ಮನ್ನಿಸಬೇಕು. ಗುಣವಂತರಲ್ಲಿ ವಿರೋಧ ಸಾಕ್ಷಿ ಉಂಟಾದಾಗ ರಾಜನು ಬ್ರಾಹ್ಮಣ ಶ್ರೇಷ್ಟನ ಸಾಕ್ಷಿ ನಂಬಬೇಕು (ಅ-8:73)
 21. ಬ್ರಾಹ್ಮಣನನ್ನು ಬೈದರೆ ಕ್ಷತ್ರಿಯನಿಗೆ ನೂರು ಪಣಗಳ ದಂಡ, ವೈಶ್ಯನಿಗೆ ನೂರೈವತ್ತು ಅಥವಾ ಇನ್ನೂರು ಪಣಗಳ ದಂಡ. ಬ್ರಾಹ್ಮಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ (ಮರಣ ದಂಡನೆ) ವಿಧಿಸಬೇಕು. (ಅ- 8:627)
 22. ಉಪನಯನ ಸಂಸ್ಕಾರ ಹೊಂದಲು ಅರ್ಹತೆಯಿಲ್ಲದ ಶೂದ್ರನು ದ್ವಿಜಾತಿಯವರಾದ ಬ್ರಾಹ್ಮಣ ಕ್ಷತ್ರಿಯ ವೈಶ್ಯರನ್ನು ಹೀನವಾದ ಕೆಟ್ಟ ಮಾತುಗಳಿಂದ ಬೈದರೆ ಕೆಳ ಜಾತಿಯಲ್ಲಿ ಹುಟ್ಟಿದ ಆ ಶೂದ್ರನ ನಾಲಿಗೆಯನ್ನು ಛೇಧಿಸತಕ್ಕದ್ದು. ಏಕೆಂದರೆ ಅವನು ಕೆಳಜಾತಿಯವನು ( ಅ-8:270)
 23. ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ ಬೈದಂತ ಆ ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು (ಅ- 8:271)
 24. ಬ್ರಾಹಣರಿಗೆ ಅಹಂಕಾರದಂದ ಧರ್ಮವನ್ನು ಬೋಧಿಸುವ ಶೂದ್ರನಿಗೆ ರಾಜನು ಬಾಯಲ್ಲಿ ಹಾಗೂ ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಿಸಬೇಕು (ಅ-8:272)
 25. ಬ್ರಾಹ್ಮಣ ಮೊದಲಾದ ಶ್ರೇಷ್ಟ ಜಾತಿಯವರನ್ನು ತನ್ನ ಕೈಕಾಲು ಮುಂತಾದ ಯಾವುದಾದರೂ ಅಂಗದಿಂದ ಅಂತ್ಯಜನು ( ಶೂದ್ರನು) ಹೊಡೆದರೆ ಅವನ ಆ ಅಂಗವನ್ನು ( ಕೈ ಕಾಲು ಇತ್ಯಾದಿಯನ್ನು ) ಕತ್ತರಿಸಬೇಕು. ಇದು ಮನುವು ಹೇಳಿದ ಶಾಸನವು (ಅ-8:279)
 26. ಬ್ರಾಹ್ಮಣನ ಜತೆಗೆ ಒಂದೇ ಆಸನದಲ್ಲಿ ಕುಳಿತ ಅಂತ್ಯಜನಿಗೆ ಅಥವಾ ಶೂದ್ರನಿಗೆ ಸೊಂಟದಲ್ಲಿ ಬರೆ ಎಳೆದು ಊರಿನಿಂದ ಹೊರಗೆ ಹಾಕಬೇಕು ಅಥವಾ ಅವನ ಕುಂಡೆಯನ್ನು ಕತ್ತರಿಸಬೇಕು ( ಆಗ ಅವನು ಸಾಯಬಾರದು) (ಅ- 8:281)
 27. ಶೂದ್ರನು ಬೇಕೆಂತಲೇ ಸೊಕ್ಕಿನಿಂದ ಬ್ರಾಹ್ಮಣನ ಮೇಲೆ ಉಗುಳಿದರೆ ಅವನ ತುಟಿ ಕತ್ತರಿಸಬೇಕು. ಮೂತ್ರ ಚೆಲ್ಲಿ ಅವಮಾನಿಸಿದರೆ ಅವನ ಶಿಶ್ನ ಕತ್ತರಿಸಬೇಕು. ಬೇಕೆಂತಲೇ ಹೂಸು ಬಿಟ್ಟು ಅವಮಾನಿಸಿದರೆ ಅವನ ಗುದವನ್ನು ಕತ್ತರಿಸಬೇಕು (ಅ-8:282)
 28. ತನಗಿಂತ ಮೇಲು ಜಾತಿಯವನೊಡನೆ ಸಂಭೋಗ ಬಯಸಿ ಕೂಡಿಕೊಂಡ ಕನ್ಯೆಗೆ ದಂಡ ಹಾಕಬಾರದು. ತನಗಿಂತ ಕೀಳು ಜಾತಿಯವನೊಡನೆ ಸಂಭೋಗ ಬಯಸಿದ ಕನ್ಯೆಯನ್ನು ಮನೆಯಲ್ಲಿಯೇ ಗೃಹಬಂಧನದಲ್ಲಿರಿಸಬೇಕು (ಅ-8:365)
 29. ಓರ್ವ ವೈಶ್ಯನು ಓರ್ವ ಬ್ರಾಹ್ಮಣ ಸ್ತ್ರೀಯನ್ನು ಭೋಗಿಸಿದರೆ ಅವರ ಸರ್ವಸ್ವವನ್ನೂ ಕಸಿದು ಕೊಂಡು ಅವನಿಗೆ ಒಂದು ವರ್ಷ ಸೆರೆಮನೆವಾಸ ವಿಧಿಸಬೇಕು. ಕ್ಷತ್ರಿಯನು ಬ್ರಾಹ್ಮಣ ಸ್ತ್ರೀಯನ್ನು ಕೆಡಿಸಿದರೆ ಅವನ ತಲೆಗೆ ಮೂತ್ರ ಹಚ್ಚಿ ಬೋಳಿಸಬೇಕು (ಅ-8:375)
 30. ಪತಿ ಮೊದಲಾದವರಿಂದ ರಕ್ಷಿತಳಾಗಿರುವ ಬ್ರಾಹ್ಮಣ ಸ್ತ್ರೀಯನ್ನು ಕ್ಷತ್ರಿಯ ವೈಶ್ಯರು ಭೋಗಿಸಿದರೆ ಅವರಿಗೂ ಶೂದ್ರರಿಗೆ ವಿಧಿಸಿದಂತೆ ಸರ್ವಸ್ವಾಪರಹಾರದ ದಂಡ ಹಾಕಿ ಹುಲ್ಲಿನ ಬಣವೆಯಲ್ಲಿಟ್ಟು ಬೆಂಕಿಹಚ್ಚಿ ಅವರನ್ನು ಸುಡಬೇಕು (ಅ-8:377)
 31. ಇಂತಹ ಅಪರಾಧ ಮಾಡಿದ ಬ್ರಾಹ್ಮಣನಿಗೆ ತಲೆ ಬೋಳಿಸಿ ಅವಮಾನಿಸಿದರೆ ಸಾಕು. ಅದು ಅವನ ಮಟ್ಟಿಗೆ ಮರಣದಂಡನೆಗೆ ಸಮನಾದ ಶಿಕ್ಷೆಯಾಗಿರುವುದು. ಉಳಿದವರಿಗೆ ಮಾತ್ರ ಮರಣದಂಡನೆಯನ್ನೇ ವಿಧಿಸಬೇಕು (ಅ-8:379)
 32. ಒಬ್ಬ ಬ್ರಾಹ್ಮಣನು ಎಲ್ಲ ವಿಧದ ಅಪರಾಧ, ಪಾಪ ಮಾಡಿದರೂ ಅವನನ್ನು ಕೊಲ್ಲಬಾರದು. ಅವನ ಸರ್ವಸ್ವ ಅಪಹರಿಸಿ ಅವನನ್ನು ದೇಶದಿಂದ ಹೊರಕ್ಕೆ ಹಾಕಬೇಕು (ಅ-8:380)
 33. ಶಯ್ಯೆ, ಆಸನ, ಅಲಂಕಾರ, ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ ಮತ್ತು ದುರ್ನಡತೆ ಇವೆಲ್ಲಾ ಸಾಮಾನ್ಯವಾಗಿ ಸ್ತ್ರೀಯಲ್ಲಿರುವ ಸ್ವಾಭಾವಿಕ ಗುಣಗಳು (ಅ-9:17)
 34. ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಲು ಮಂತ್ರಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಸದಾ ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ. (ಅ: 9:19)
 35. ಮೂವತ್ತು ವಯಸಿನ ಪುರುಷ ಹನ್ನೆರಡು ವಯಸ್ಸಿನ ಸುಂದರ ಕನ್ಯೆಯನ್ನು ಮದುವೆಯಾಗ ಬೇಕು. ಇಲ್ಲವೇ ಇಪ್ಪತ್ತನಾಲ್ಕು ವರ್ಷದವನು ಎಂಟು ವರ್ಷದ ಕನ್ಯೆಯನ್ನು ಮದುವೆ ಮಾಡಿ ಕೊಳ್ಳಬೇಕು. ಅದಕ್ಕಿಂತ ಮೊದಲೇ ವಿವಾಹವಾದವನು ತೊಂದರೆ ಅನುಭವಿಸುತ್ತಾನೆ (ಅ: 9:94)
 36. ರಾಜನು ತನ್ನ ಮೇಲೆ ಎಷ್ಟೇ ಸಂಕಷ್ಟಗಳ ಬಂದೆರಗಿದರೂ ಬ್ರಾಹ್ಮಣರ ಮೇಲೆ ಕೋಪ ಗೊಳ್ಳಬಾರದು. ಏಕೆಂದರೆ ಬ್ರಾಹ್ಮಣನ ಶಾಪದಿಂದ ರಾಜನ ಸರ್ವಸ್ವವೂ ನಷ್ಟವಾಗಿ ಬಿಡುವುದು ( ಅ-9:313)
 37. ಬ್ರಾಹ್ಮಣರು ಕೋಪಗೊಂಡರೆ ಹೊಸ ಲೋಕಗಳನ್ನೇ ಸೃಷ್ಟಿಸಬಲ್ಲರು. ಹೊಸ ಲೋಕಪಾಲ ರನ್ನು ನೇಮಿಸಬಲ್ಲರು.ದೇವತೆಗಳ ದೈವತ್ವವನ್ನೇ ಅಳಿಸಿಬಿಡಬಲ್ಲರು. ಅಂಥ ಬ್ರಾಹ್ಮಣ ರನ್ನು ರೇಗಿಸಿ ಯಾವ ರಾಜ ತಾನೇ ಸಮೃದ್ಧಿ ಹೊಂದಬಲ್ಲನು? (ಅ-9:315)
 38. ಬ್ರಾಹ್ಮಣನ ಸೇವೆಯೇ ಶೂದ್ರನ ವಿಶಿಷ್ಟ ಕರ್ತವ್ಯವಾಗಿದೆ. ಅವನು ಬೇರೆ ಕೆಲಸ ಮಾಡಿದರೆ ಅವನಿಗೆ ಯಾವ ಫಲವೂ ಸಿಗುವುದಿಲ್ಲ (ಅ-10:123)
 39. ಹಣ ಸಂಪಾದನೆ ಮಾಡುವ ಸಾಮರ್ಥ್ಯವು ಇದ್ದರೂ ಶೂದ್ರನು ಹಣ ಸಂಪಾದಿಸಬಾರದು. ಹಣ ಸಂಪಾದನೆ ಮಾಡಿದರೆ ಶೂದ್ರನು ಬ್ರಾಹ್ಮಣರನ್ನು ಕಡೆಗಣಿಸುತ್ತಾನೆ (ಅ-10:129)

ವಿವಾದಿತ ಕೃತಿಯಾಗಿ ಮನುಸ್ಮೃತಿ

ಸುಮತಿ ಭಾರ್ಗವ ರಚಿಸಿರುವ 'ಮನುಸ್ಪೃತಿ'ಯು ಸಮಾಜದಲ್ಲಿನ ಅಸಮಾನತೆ[೨]ಗೆ, ಅಸ್ಪೃಶ್ಯತೆಯಂತಹ ಮೌಢ್ಯದ ಆಚರಣೆಗೆ ಇದು ಕಾರಣವಾಗಿದೆ ಎಂಬುದನ್ನು ಗ್ರಹಿಸಿದ ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ಮತ್ತು ಡಾ.ಬಿಆರ್.ಅಂಬೇಡ್ಕರ್[೩] ಅವರಂತಹ ಮಹನೀಯರು ಬಹಿರಂಗವಾಗಿ 'ಮನುಸ್ಪೃತಿ'ಯನ್ನು ಸುಡುವುದರ ಮೂಲಕ, ಆ ಕೃತಿಯನ್ನು, ಅದರೊಳಗಿನ ವರ್ಣಭೇಧ ನೀತಿ[೪] ಹಾಗೂ ಸಮಾಜದ ತಾರತಮ್ಯಗಳನ್ನು ಧಿಕ್ಕರಿಸುತ್ತಾರೆ. ಬಹುಶಃ ಸುಮತಿ ಭಾರ್ಗವನ 'ಮನುಸ್ಪೃತಿ'ಯಷ್ಟು ವಿವಾದಕ್ಕೆ ಒಳಗಾದ ಕೃತಿ[೫] ಮತ್ತೊಂದಿಲ್ಲ. ಬಾಬಾಸಾಹೇಬ್ ಅಂಬೇಡ್ಕರರ ನೇತೃತ್ವದಲ್ಲಿ 24-12-1927 ರಂದು ಸಾರ್ವಜನಿಕವಾಗಿ ಮನುಸ್ಮೃತಿಯನ್ನು ಸುಡಲಾಗಿತ್ತು. ಮನುಸ್ಮೃತಿ ಈ ದೇಶದ ಶೂದ್ರರಿಗೆ, ಮಹಿಳೆಯರಿಗೆ ಮತ್ತು ದಲಿತರಿಗೆ ಮಾಡಿರುವ ಮಹಾಮೋಸವನ್ನು ಬಯಲಿಗೆಳೆದು ಸುಡಲಾಗಿತ್ತು. ಇಂತಹ ಮನುಸ್ಮೃತಿ ಇಂದಿಗೂ ಮನುವಾದಿಗಳಿಗೆ ಪೂಜ್ಯನೀಯವಾಗಿದೆ. ಹೈ ಕೋರ್ಟ್ ಮುಂದೆ ಮನುವಿನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಸ್ಮ್ರುತಿಗಳನ್ನು ಕಾಲ, ದೇಶ ಮತ್ತು ಗುಣಗಳಿಗೆ ತಕ್ಕ೦ತೆ ಬದಲಯಿಸಬೆಕಾಗುತ್ತದೆ [೧] Archived 2017-10-17 at the Wayback Machine.. ಹಾಗಾಗಿ ಮನುಸ್ಮ್ರುತಿಯನ್ನು ಹಾಗೆಯೇ ಅನುಸರಿಸಬೇಕೇ ಹೊರೆತು ಘರ್ಷಣೆ ಮಾಡುವುದರಿ೦ದ ಏನು ಪ್ರಯೊಜನವಿಲ್ಲ.

ಉಲ್ಲೇಖಗಳು

 1. https://www.vishwavani.news/jatiganati-bhats/[permanent dead link]
 2. https://groups.google.com/forum/#!msg/kannadastf/7Y6OVHwirxY/qPZBoK_CAwAJ
 3. http://samvada.org/2012/news/tumkur-samarasya-prog/
 4. http://www.varthabharati.in/article/ankana/6756
 5. http://kannada.oneindia.com/news/india/abvp-rebels-burn-manusmriti-in-jnu-campus-101629.html