ವಿಷಯಕ್ಕೆ ಹೋಗು

ಧರ್ಮಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧರ್ಮಶಾಸ್ತ್ರ ಸಂಸ್ಕೃತ ಪಠ್ಯಗಳ ಒಂದು ಪ್ರಕಾರ ಮತ್ತು ಹಿಂದೂ ಧರ್ಮಕ್ಕೆ (ಧಾರ್ಮಿಕ ಹಾಗು ಕಾನೂನುಬದ್ಧ ಕರ್ತವ್ಯ) ಸಂಬಂಧಿಸಿದ ಶಾಸ್ತ್ರವನ್ನು ಸೂಚಿಸುತ್ತದೆ. ಧರ್ಮಶಾಸ್ತ್ರದ ಭಾರಿ ಗಾತ್ರದ ಪಠ್ಯ ಸಂಗ್ರಹವು ಮುಖ್ಯವಾಗಿ ಭಾರತದಲ್ಲಿನ ಬ್ರಾಹ್ಮಣ ಸಂಪ್ರದಾಯದ ಉತ್ಪತ್ತಿಯಾಗಿದೆ ಮತ್ತು ಒಂದು ನಿಪುಣ ಸಂಪ್ರದಾಯದ ವಿಸ್ತಾರವಾದ ವಿದ್ವತ್ಪೂರ್ಣ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಅದರ ಅತ್ಯಾಧುನಿಕ ನ್ಯಾಯತತ್ವದ ಕಾರಣ, ಮುಂಚಿನ ಬ್ರಿಟಿಷ್ ವಸಾಹತು ಆಡಳಿತಗಾರರು ಧರ್ಮಶಾಸ್ತ್ರವು ಭಾರತದಲ್ಲಿನ ಹಿಂದೂಗಳಿಗೆ ನಾಡಿನ ಕಾನೂನೆಂದು ತೆಗೆದುಕೊಂಡರು.