ವಿಷಯಕ್ಕೆ ಹೋಗು

ಚರ್ಚೆಪುಟ:ಮನುಸ್ಮೃತಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ, ಮನುಸ್ಮೃತಿಯೊಳಗೆ ಇರುವ ವಿಷಯ ವಿಭಾಗದಡಿಯಲ್ಲಿ ಕೇವಲ ಬ್ರಾಹ್ಮಣ-ಶೂದ್ರ ವಿಷಯಗಳನ್ನು ಮಾತ್ರ ಹಾಕಲಾಗಿದೆ. ಆದರೆ ಮನುಸ್ಮೃತಿಯಲ್ಲಿರುವ ವಿಷಯಗಳು ಇಷ್ಟೇ ಅಲ್ಲ (ಇದು ಮಾತ್ರ ಅಲ್ಲ). ವಿಶ್ವಕೋಶದಲ್ಲಿ selective mentioning ತಪ್ಪು ಮಾಹಿತಿ ಕೊಡುವ ಸಾಧ್ಯತೆ ಇದೆ--Vikas Hegde (ಚರ್ಚೆ) ೦೫:೦೪, ೧೪ ಮಾರ್ಚ್ ೨೦೧೭ (UTC)

ತಪ್ಪು ಮಾಹಿತಿ ಕೊಡುವ ಉದ್ದೇಶದಿಂದಲೇ ಬರೆದಿರುವ ಲೇಖನ ಇದು. ಮನುಸ್ಮೃತಿಗೆ ಮಾಡಿರುವ ಘೋರ ಅನ್ಯಾಯ. Srinirg (ಚರ್ಚೆ) ೧೦:೨೯, ೧ ಡಿಸೆಂಬರ್ ೨೦೨೧ (UTC)

ಕೇವಲ ದುರುದ್ದೇಶದಿಂದ ಬರೆದ ಲೇಖನ[ಬದಲಾಯಿಸಿ]

ಈ ಲೇಖನವನ್ನು ಏತಕ್ಕಾಗಿ ಬರೆದರು ಅಂತ ಸ್ಪಷ್ಟವಾಗಿಯೇ ಇದೆ. ಆದರೆ ಈ ಲೇಖನವನ್ನು ಅನುಮೋದಿಸಿದ ಮುಖ್ಯ ಸಂಪಾದಕ ಯಾರು? ಯಾವ ಪ್ರಭೃತಿಯು ಈ ಲೇಖನದ ಪ್ರಕಾಶನಕ್ಕೆ ಅನುಮತಿ ಕೊಟ್ಟ(ರು?)? ಸದರಿ ಲೇಖಕನಿಗೆ ಸಂಸ್ಕೃತಭಾಷಾಪಾಟವ ಇದೆ ಅಂತ ಮೌಲ್ಯಮಾಪನ ಮಾಡಿದ ಆ ಮಹಾನುಭಾವ(ರು?) ಯಾರು? ಸಂಸ್ಕೃತ ಭಾಷಾ ಪಾಟವ ಇಲ್ಲದೆ ಇದ್ದರೆ ಅನುವಾದವು ಹೇಗೆ ಸಿಂಧುವಾಗುತ್ತದೆ? ಇಷ್ಟಕ್ಕೂ ಈ ಲೇಖನ ಲಾಕ್ ಆಗಿರುವುದು ಯಾಕೆ? ಸಂಸ್ಕೃತ ಮೂಲವನ್ನು ಕೊಡದೆ ಅನುವಾದವನ್ನು ಮಾತ್ರವೇ ಕೊಟ್ಟಿರುವುದು ಯಾಕೆ? ಮೂಲದ ಆಶಯಕ್ಕೆ ಸರ್ವಥಾ ವಿರುದ್ಧವಾದ ಅನುವಾದವನ್ನು ಅನುಮೋದಿಸಿದ ಮುಖ್ಯ ಸಂಪಾದಕ ಯಾರು? ಕೇವಲ ದುರುದ್ದೇಶದಿಂದ ಕೂಡಿದ ಲೇಖನ. ಶೆಲ್ಡನ್ ಪೋಲಾಕನ "modus operendi" ಸ್ಫುಟವಾಗಿ ಹೊಡೆದು ಕಾಣುತ್ತಿದೆ. ಇವತ್ತೇ ಡಿಲೀಟ್ ಮಾಡಿ. --Srinirg (ಚರ್ಚೆ) ೧೬:೩೫, ೧ ಡಿಸೆಂಬರ್ ೨೦೨೧ (UTC)— ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Srinirg (ಚರ್ಚೆಸಂಪಾದನೆಗಳು)

ಸಾಲುಗಳನ್ನು ತೆಗೆಯಲಾಗಿದೆ[ಬದಲಾಯಿಸಿ]

ಸರಿಯಾದ (authentic & verifiable) ಉಲ್ಲೇಖವಿಲ್ಲದ, ಯಾರದೋ ಆಲೋಚನಾ ಧಾಟಿಗಳನ್ನು ತುರುಕಿಸಿದ, ಸಾಲುಗಳನ್ನು ತೆಗೆಯಲಾಗಿದೆ.--ಪವನಜ ಯು. ಬಿ. (ಚರ್ಚೆ) ೧೫:೩೩, ೧ ಡಿಸೆಂಬರ್ ೨೦೨೧ (UTC)

ಭಗವಂತಾ, ಈಗ ನೆಮ್ಮದಿಯಾಗಿ ಉಸಿರಾಡಬಹುದು. ಧನ್ಯವಾದಗಳು ಸರ್. ಸತ್ಯಕ್ಕೆ ಜಯ ಅಂತ ತೋರಿಸಿಕೊಟ್ಟಿರಿ. ಅನೇಕ ದನ್ಯವಾದಗಳು. Srinirg (ಚರ್ಚೆ) ೧೬:೦೦, ೧ ಡಿಸೆಂಬರ್ ೨೦೨೧ (UTC)