ಗಣೇಶ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Ganesh.jpg

ಗಣೇಶ ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬ. ಭಾರತದಲ್ಲಿ ಬಹಳ ಜನರು ಪೂಜಿಸುವ ದೇವರು. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ, ಗಣೇಶ ಶಿವ ಮತ್ತು ಪಾರ್ವತಿಯರ ಮಗ. ಗಣೇಶನನ್ನು ಕನ್ನಡದಲ್ಲಿ, ಮಲೆಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ವಿನಾಯಕ ಎಂದೂ, ತಮಿಳು ಭಾಷೆಯಲ್ಲಿ ವಿನಾಯಗರ್, ಪಿಳ್ಳಾಯರ್ ಎಂದೂ , ತೆಲುಗಿನಲ್ಲಿ ವಿನಾಯಕುಡು ಎಂದು ಕರೆಯಲಾಗುತ್ತದೆ. ಗಣೇಶನನ್ನು ವಿದ್ಯಾಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಗಣೇಶನ ಹೆಸರಿನೊಡನೆ "ಶ್ರೀ" ಎಂಬ ಅಕ್ಷರದೊಂದಿಗೆ ಸಂಬೋಧಿಸಲಾಗುತ್ತದೆ. ಗಣೇಶನ ಭಕ್ತರನ್ನು ಗಾಣಪತ್ಯರು ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ, ಇತರ ದೇಶಗಳಲ್ಲೂ ಗಣೇಶನನ್ನು ಪೂಜಿಸಲಾಗುತ್ತದೆ. ಭಾರತದ ಅನೇಕ ನಗರಗಳಲ್ಲಿ, ವಿಶೇಷವಾಗಿ ಮುಂಬಯಿಯಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

'ಹೊಳಲ್ಕೆರೆಯ ಈ ಪ್ರಸನ್ನ ಗಣಪತಿಯ ಕೇಶಾಲಂಕಾರದ ವೈಶಿಷ್ಟ್ಯತೆ ನೋಡಿ'

ಶಾರೀರಿಕ ವೈಶಿಷ್ಟ್ಯಗಳು[ಬದಲಾಯಿಸಿ]

ಗಣೇಶನ ಶರೀರದ ಪ್ರತಿಯೊಂದು ಅಂಗಾಂಗವೂ ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ:ಮ

 • ಆನೆಯ ತಲೆ ನಂಬಿಕೆ,ಬುದ್ಧಿವಂತಿಕೆ ಮತ್ತು ವಿವೇಚನಾಶಕ್ತಿಯನ್ನು ಸೂಚಿಸುತ್ತದೆ;
 • ಗಣೇಶನಿಗೆ ಒಂದು ದಂತ ಇರುವುದೆಂಬ ಸಂಗತಿ(ಇನ್ನೊಂದು ದಂತ ಭಗ್ನವಾಗಿದೆ),ಎಲ್ಲ ದ್ವಂದ್ವಗಳನ್ನೂ ಮೀರಿ ನಿಲ್ಲುವ ಗಣೇಶನ ಸಾಮರ್ಥ್ಯವನ್ನು ಸೂಚಿಸುತ್ತದೆ ;
 • ಅಗಲವಾದ ಕಿವಿಗಳು ವಿವೇಕ,ನೆರವು ಕೋರುವ ಜನಗಳ ಮೊರೆಯನ್ನು ಆಲಿಸುವ ಸಾಮರ್ಥ್ಯವನ್ನು ಸೂಚಿಸುವುದಲ್ಲದೆ, ಆಧ್ಯಾತ್ಮಿಕ ಸತ್ಯಗಳ ಬಗ್ಗೆ ಚಿಂತನೆ ಮಾಡುವುದನ್ನು ಪ್ರಕಟಪಡಿಸುತ್ತವೆ.ಚಿಂತನೆಗಳನ್ನು ಅರ್ಥೈಸಿಕೊಳ್ಳಲು ಕೇಳಿಸಿಕೊಳ್ಳಬೇಕಾದುದರ ಪ್ರಾಮುಖ್ಯತೆಯನ್ನು ಅವು ಸೂಚಿಸುತ್ತವೆ.ಜ್ಞಾನವನ್ನು ಸಂಪಾದಿಸಲು ಕಿವಿಗಳು ಉಪಯೋಗಿಯಾಗಿವೆ.ಅಗಲವಾದ ಕಿವಿಗಳು "ಯಾವಾಗ ದೇವರು ಅರಿವಿಗೆ ಬರುವನೋ,ಆಗಲೇ ಎಲ್ಲಾ ಜ್ಞಾನವೂ ಅರಿವಾದಂತೆಯೇ" ಎಂಬುದನ್ನು ಸೂಚಿಸುತ್ತವೆ;
 • ವಕ್ರವಾದ ಸೊಂಡಿಲು ಸತ್ಯ ಮತ್ತು ಮಿಥ್ಯೆಗಳ ನಡುವಣ ವ್ಯತ್ಯಾಸವನ್ನು ಗುರುತಿಸುವಲ್ಲಿ ತಾನಾಗಿಯೇ ವಿವೇಚನಾಶಕ್ತಿಯ ರೂಪದಲ್ಲಿ ಪ್ರಕಟವಾಗುವ ಬುದ್ಧಿಶಕ್ತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ;
 • ಹಣೆಯ ಮೇಲೆ ಚಿತ್ರಿತವಾದ ತ್ರಿಶೂಲವು (ಶಿವನ ಆಯುಧ ತ್ರಿಶೂಲಕ್ಕೆ ಸಮಾನವಾದ) ಕಾಲವನ್ನು ಸಂಕೇತಿಸುವುದಲ್ಲದೆ(ಭೂತ, ವರ್ತಮಾನ ಮತ್ತು ಭವಿಷ್ಯತ್) ಅದರ ಮೇಲೆ ಗಣೇಶನ ಪ್ರಭುತ್ವವನ್ನು ಸೂಚಿಸುತ್ತದೆ.
 • ಗಣೇಶನ ದೊಡ್ಡ ಹೊಟ್ಟೆ ಯಲ್ಲಿ ಅಸಂಖ್ಯಾತವಾದ ಲೋಕಗಳು ಅಡಗಿವೆ.ಅದು ಪ್ರಕೃತಿಯ ಔದಾರ್ಯ ಹಾಗೂ ಸ್ಥೈರ್ಯವನ್ನು ಸಂಕೇತಿಸುವುದಲ್ಲದೆ,ಪ್ರಪಂಚದ ದುಃಖ,ಕ್ಲೇಶಗಳೆಲ್ಲವನ್ನೂ ನುಂಗಿ ಜಗತ್ತನ್ನು ರಕ್ಷಿಸುವ ಗಣೇಶನ ಸಾಮರ್ಥ್ಯವನ್ನು ಸೂಚಿಸುತ್ತದೆ;
 • ಗಣೇಶನು ಕಾಲುಗಳನ್ನು ಇಟ್ಟಿರುವ ರೀತಿ, (ಒಂದು ನೆಲದ ಮೇಲೆ, ಇನ್ನೊಂದು ಎತ್ತಿರುವ ರೀತಿ) ಇಹ ಮತ್ತು ಪರಲೋಕಗಳಲ್ಲಿ ಬಾಳುವುವದರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಲೋಕದಲ್ಲಿಲ್ಲದೆಯೇ ಲೋಕದಲ್ಲಿ ಬಾಳುವ ಸಾಮರ್ಥ್ಯವನ್ನು ಎತ್ತಿ ಹಿಡಿದಿದೆ
 • ಹೆಚ್ಚಿನ ತಾತ್ವಿಕ ಅರ್ಥಕ್ಕೆ ಶ್ರೀ ಸಿದ್ಧಿ ವಿನಾಯಕ ನೋಡಿ

ಓಂಕಾರದ ಆಕಾರವುಳ್ಳ ದೈವ[ಬದಲಾಯಿಸಿ]

ಗಣೇಶನನ್ನು "ಓಂಕಾರ" ಎಂದು ಕರೆಯಲಾಗುತ್ತದೆ. ಗಣೇಶನ ದೇಹಸ್ವರೂಪವು ದೇವನಾಗರಿ ಲಿಪಿಯ ಅಕ್ಷರದಂತಿದೆ. ಈ ಕಾರಣದಿಂದ ಗಣೇಶನನ್ನು ಇಡೀ ವಿಶ್ವದದ ಪ್ರತಿರೂಪ ಎಂದು ಪರಿಗಣಿಸಲಾಗುತ್ತದೆ. ವಿಶ್ವದ ಮೂಲದಲ್ಲಿರುವ ಕಾರಣ ವಿಶ್ವಾಧಾರ,ಜಗದೋದ್ಧಾರ ಎಂದೂ ಕರೆಯಲಾಗುತ್ತದೆ.

ಮೂಷಿಕ ವಾಹನ ಗಣೇಶ[ಬದಲಾಯಿಸಿ]

ತಲಕಾಡಿನ ವೈದ್ಯೇಶ್ವರ ದೇವಸ್ಥಾನದಲ್ಲಿನ ಒಂದು ಶಿಲ್ಪ

ಗಣೇಶನ ವಾಹನವಾದ ಇಲಿಯನ್ನು ಪ್ರತಿಭೆಯ ಸಂಕೇತವೆಂದು ತಿಳಿಯಲಾಗಿದೆ.

ಒಂದು ವಿವರಣೆಯ ಪ್ರಕಾರ,ಗಣೇಶನ ದೈವಿಕ ವಾಹನ,ಇಲಿ ಅಥವಾ ಮೂಷಿಕ ವಿವೇಕ ಪ್ರತಿಭೆ ಹಾಗೂ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ.

ಶನಿ ದೃಷ್ಟಿ(ಶನಿ ಕಾಟ)[ಬದಲಾಯಿಸಿ]

ಬ್ರಹ್ಮವೈವರ್ತ ಪುರಾಣದಲ್ಲಿನ, ಅಷ್ಟೇನೂ ಪ್ರಸಿದ್ಧವಲ್ಲದ ಕಥೆಯೊಂದು ಗಣೇಶನ ಹುಟ್ಟಿನ ಬಗ್ಗೆ ಬೇರೆಯೇ ಚಿತ್ರಣವನ್ನು ಕೊಡುತ್ತದೆ. ವಿಷ್ಣುವನ್ನು ಒಲಿಸಿಕೊಂಡರೆ ಒಬ್ಬ ಮಗನನ್ನು ಕರುಣಿಸುವನೆಂದು, ಪಾರ್ವತಿಯು, ಶಿವನ ಆಜ್ಞಾನುಸಾರವಾಗಿ ಒಂದು ವರ್ಷ ಉಪವಾಸ (ಪುಣ್ಯಕ ವ್ರತ)ಮಾಡುತ್ತಾಳೆ. ಭಗವಾನ್ ಕೃಷ್ಣನು ಅವತಾರ ಸಮಾಪ್ತಿಯಾದ ನಂತರ,ಪ್ರತಿಯೊಂದು ಕಲ್ಪದಲ್ಲೂ(eon)ತಾನು ಅವಳ ಮಗನಾಗಿ ಅವತರಿಸುವೆನೆಂದು ಘೋಷಿಸುತ್ತಾನೆ. ಅದರಂತೆಯೇ,ಕೃಷ್ಣನು ಮನೋಹರ ರೂಪದ ಶಿಶುವಾಗಿ ಪಾರ್ವತಿಗೆ ಜನ್ಮ ತಳೆಯುತ್ತಾನೆ.ಈ ಘಟನೆಯನ್ನು ಅತ್ಯಧಿಕ ಸಂಭ್ರಮದಿಂದ ಆಚರಿಸಿ, ಎಲ್ಲಾ ದೇವಾನುದೇವತೆಗಳನ್ನು ಮಗುವನ್ನು ನೋಡಲು ಆಹ್ವಾನಿಸಲಾಗುತ್ತದೆ. ಆದರೆ ಸೂರ್ಯನ ಮಗನಾದ ಶನಿಯು (Saturn),ಶನಿದೃಷ್ಟಿ ಶಿಶುವಿಗೆ ಹಾನಿಕಾರಕವಾದುದರಿಂದ ಮಗುವನ್ನು ದೃಷ್ಟಿಸಲು ಹಿಂಜರಿಯುತ್ತಾನೆ. ಅಂದರೂ ಪಾರ್ವತಿಯು ಶನಿಯನ್ನು ಶಿಶುವನ್ನು ನೋಡೆಂದು ಆಗ್ರಹಿಸಲು,ಶನಿಯು ಮಗುವನ್ನು ನೋಡಿದ್ದೇ ತಡ,ತಕ್ಷಣವೇ ಶಿಶುವಿನ ತಲೆ ಉರುಳಿ ಬಿದ್ದು ಗೋಲೋಕ(Goloka)ಕ್ಕೆ ಹಾರಿ ಹೋಗುತ್ತದೆ. ದುಃಖದಲ್ಲಿ ಮುಳುಗಿದ ಶಿವ ಮತ್ತು ಪಾರ್ವತಿಯರನ್ನು ಕಂಡು,ವಿಷ್ಣು ತನ್ನ ವಾಹನವಾದ ಗರುಡನನ್ನು(divine eagle) ಏರಿ,ಪುಷ್ಪ-ಭದ್ರ ವೆಂಬ ನದೀತೀರದಿಂದ ಮರಿಯಾನೆಯೊಂದರ ತಲೆಯನ್ನು ತರುತ್ತಾನೆ. ಆನೆಯ ತಲೆಯನ್ನು ಪಾರ್ವತಿಯ ಮಗನ ರುಂಡವಿಲ್ಲದ ದೇಹಕ್ಕೆ ಜೋಡಿಸಿ,ಅವನನ್ನು ಪುನರುಜ್ಜೀವಿತಗೊಳಿಸುತ್ತಾರೆ.ಆ ಶಿಶುವನ್ನು ಗಣೇಶನೆಂದು ಹೆಸರಿಸಿ,ದೇವತೆಗಳೆಲ್ಲರೂ ಅವನನ್ನು ಆಶೀರ್ವದಿಸುತ್ತಾರೆ ಮತ್ತು ಅವನಿಗೆ ಶಕ್ತಿ ಸಾಮರ್ಥ್ಯ ಹಾಗೂ ಅಭಿವೃದ್ಧಿಯನ್ನು ಹಾರೈಸುತ್ತಾರೆ.

ಗಣೇಶನ ಮಾತೃಭಕ್ತಿ[ಬದಲಾಯಿಸಿ]

ಒಮ್ಮೆ ಆಟವಾಡುತ್ತಿದ್ದಾಗ ಗಣೇಶ ಒಂದು ಬೆಕ್ಕನ್ನು ಗಾಯಗೊಳಿಸಿದ.ಅವನು ಮನೆಗೆ ಹಿಂದಿರುಗಿದಾಗ,ಅವನ ತಾಯಿಯ ಶರೀರದ ಮೇಲೆ ಒಂದು ಗಾಯವನ್ನು ಕಂಡ.ಅವಳು ಹೇಗೆ ಗಾಯಗೊಂಡಳೆಂದು ಕೇಳಿದ.ತಾಯಿ ಪಾರ್ವತಿ ಇದಕ್ಕೆ ಕಾರಣ ಬೇರಾರೂ ಅಲ್ಲ,ಸ್ವಯಂ ಗಣೇಶನೇ! ಎಂದು ತಿಳಿಸಿದಳು.ಆಶ್ಚರ್ಯಗೊಂಡ ಗಣೇಶ ತಾನು ಯಾವಾಗ ಆಕೆಯನ್ನು ಗಾಯಗೊಳಿಸಿದೆನೆಂದು ತಿಳಿಯಲಿಚ್ಛಿಸಿದ.ಆಗ ಪಾರ್ವತಿ ತಾನೇ ದೇವಿ,ದೈವಿಕಶಕ್ತಿ,ಎಲ್ಲ ಜೀವರಾಶಿಗಳಲ್ಲಿ ಅಂತರ್ಗತವಾಗಿ ಇರುವವಳು ಎಂದು ವಿವರಿಸಿದಳು.ಅವನು ಬೆಕ್ಕನ್ನು ಗಾಯಗೊಳಿಸಿದಾಗ ಅವಳಿಗೇ ಘಾಸಿಯಾಯಿತು.ಆಗ ಗಣೇಶನಿಗೆ ಸ್ತ್ರೀಯರೆಲ್ಲಾ ಅವನ ತಾಯಿಯ ಯಥಾರ್ಥವಾದ ಪ್ರಕಟರೂಪ(ಪ್ರತಿರೂಪ)ವೆಂದು ಜ್ಞಾನೋದಯವಾಯಿತು.ಅವನು ಮದುವೆಯಾಗುವುದಿಲ್ಲವೆಂದು ನಿಶ್ಚಯಿಸಿದ.ಹೀಗೆ ಗಣಪತಿಯು ಆಜನ್ಮ ನೈಷ್ಠಿಕ ಬ್ರಹ್ಮಚಾರಿಯಾಗಿ,ಬ್ರಹ್ಮಚರ್ಯದ ಕಟ್ಟುನಿಟ್ಟಿನ ನಿಯಮಗಳ ಪಾಲಕನಾಗಿ ಉಳಿದ.ಆದರೂ,ಕೆಲವು ಸನಾತನ ಗ್ರಂಥ ಹಾಗೂ ಪ್ರತಿಮೆಗಳಲ್ಲಿ ಕೆಲವು ಕಡೆ ಗಣೇಶನು ಬ್ರಹ್ಮನ ಇಬ್ಬರು ಪುತ್ರಿಯರನ್ನು ವಿವಾಹವಾಗಿರುವಂತೆ ಚಿತ್ರಿಸಲಾಗಿದೆ: ಬುದ್ಧಿ (ಬುದ್ಧಿಶಕ್ತಿ) ಮತ್ತು ಸಿದ್ಧಿ (ಆಧ್ಯಾತ್ಮಿಕ ಶಕ್ತಿ).

ಗಣೇಶನಿಗಿರುವ ವಿವಿಧ ಹೆಸರುಗಳು[ಬದಲಾಯಿಸಿ]

ಗಣೇಶನಿಗೆ ಇತರ ಹಿಂದೂ ದೇವತೆಗಳಂತೆಯೇ ಅನೇಕ ಹೆಸರುಗಳಿವೆ. ಸಹಸ್ರನಾಮದ ಮೂಲಕ ಗಣೇಶನನ್ನು ಸಾವಿರಾರು ಹೆಸರುಗಳಿಂದ ಪೂಜಿಸಲಾಗುತ್ತದೆ. ಪ್ರತಿ ಹೆಸರು ಬೇರೆ ಬೇರೆ ಅರ್ಥವನ್ನು ಹೊಂದಿದೆ. ಗಣೇಶ, ಗಣಪತಿ, ವಿನಾಯಕ ಎಂಬುದರ ಜೊತೆಗೆ ಗಣೇಶನಿಗಿರುವ ಇತರ ಹೆಸರುಗಳಲ್ಲಿ ಕೆಲವು ಇಲ್ಲಿದೆ -

 • ಅಮೇಯ (ಸಂಸ್ಕೃತ: अमेय), - ಅಂತ್ಯವಿಲ್ಲದವನು
 • ಅನಂಗಪೂಜಿತ (ಸಂಸ್ಕೃತ: आनंगपूजीता), ಆಕಾರವಿಲ್ಲದವನು
 • ಓಂಕಾರ (ಸಂಸ್ಕೃತ: ॐ कार), the ಓಂ- ಆಕಾರದಲ್ಲಿರುವ ಶರೀರವುಳ್ಳವನು
 • ಬಾಲಚಂದ್ರ (ಸಂಸ್ಕೃತ: बालचंदृ), ಚಂದ್ರನನ್ನು ತಲೆಯಲ್ಲಿ ಧರಿಸಿದವನು
 • ಚಿಂತಾಮಣಿ (ಸಂಸ್ಕೃತचिंतामणि/चिन्तामणि), ಚಿಂತೆಗಳನ್ನು ನಾಶಮಾಡುವವನು
 • ಗಜಕರ್ಣ (ಸಂಸ್ಕೃತ: गजकर्ण), ಆನೆಯ ಕಿವಿಯಂತೆ ಕಿವಿಯನ್ನು ಹೊಂದಿದವನು
 • ಗಜಾನನ (ಸಂಸ್ಕೃತ: गजानन्), ಆನೆಯ ತಲೆಹೊಂದಿದವನು
 • ಗಜವದನ,(ಸಂಸ್ಕೃತ :गजवदन्) ಆನೆಯಂತೆ ಮುಖವುಳ್ಳವನು
 • ಗಜಾಧ್ಯಕ್ಷ (ಸಂಸ್ಕೃತ: गणध्यक्शमा), ಗಣಗಳ ಗುಂಪಿಗೆ ನಾಯಕನಾದವನು
 • ಗಣಪತಿ (ಸಂಸ್ಕೃತ: गणपती), ಗಣಗಳ ಒಡೆಯನಾದವನು
 • ಗಣನಾಯಕ, (ಸಂಸ್ಕೃತ: गणनायक्), ಗಣಗಳ ನಾಯಕ
 • ಏಕದಂತ (ಸಂಸ್ಕೃತ: एकदंत), ಒಂದೇ ದಂತವನ್ನು ಹೊಂದಿದವನು
 • ಲಂಬೋದರ (ಸಂಸ್ಕೃತ: लंबोदर), ದೊಡ್ಡ ಹೊಟ್ಟೆಯನ್ನು ಹೊಂದಿದವನು
 • ಮೂಷಿಕ ವಾಹನ,(ಸಂಸ್ಕೃತ:मूषिक वाहन), ಇಲಿಯನ್ನು ವಾಹನವಾಗಿಸಿಕೊಂಡವನು
 • ಶೂರ್ಪಕರ್ಣ,(ಸಂಸ್ಕೃತ: शूर्पकर्ण), ಅಗಲವಾದ ಕಿವಿಯುಳ್ಳವನು
 • ಸುಮುಖ (ಸಂಸ್ಕೃತ: सुमुख), ಸುಂದರವಾದ ಮುಖವುಳ್ಳವನು
 • ವಕ್ರತುಂಡ (ಸಂಸ್ಕೃತ: वक्रतुंड), ಮುರಿದ ದಂತವುಳ್ಳವನು (ಡೊಂಕಾದ ಸೊಂಡಿಲು ಉಳ್ಳವನು)
 • ವಿಘ್ನಹರ್ತ (ಸಂಸ್ಕೃತ: विघ्नहर्त), ತೊಂದರೆಗಳನ್ನು ನಿವಾರಿಸುವವನು
 • ವಿಘ್ನ ವಿನಾಶಕ,(ಸಂಸ್ಕೃತ: विघ्न विनाशक), ವಿಘ್ನಗಳನ್ನು ನಾಶಮಾಡುವವನು
 • ವಿಘ್ನೇಶ ಅಥವಾ ವಿಘ್ನೇಶ್ವರ (ಸಂಸ್ಕೃತ: विग्णेशवर), ವಿಘ್ನಗಳನ್ನು ನಿವಾರಿಸುವವನು
 • ವಿಕಟ (ಸಂಸ್ಕೃತ: विकट), ವಿಲಕ್ಷಣ ರೂಪವನ್ನು ಹೊಂದಿದವನು
 • ವಿನಾಯಕ, (ಸಂಸ್ಕೃತ विनायक), ವಿಘ್ನಗಳನ್ನು ನಿವಾರಿಸುವವನು
 • ವಿಶ್ವಧರ (ಸಂಸ್ಕೃತ:विश्वधर), ಅಥವಾ ಜಗದೋದ್ಧಾರ(ಸಂಸ್ಕೃತ: जगदॊद्धार), ಜಗತ್ತನ್ನು ಪಾಲಿಸುವವನು
 • ವಿಶ್ವವಂತ(ಸಂಸ್ಕೃತ: विश्ववंत) ಅಥವಾ ಜಗನ್ನಾಥ(ಸಂಸ್ಕೃತ: जगन्नाथ), ಜಗತ್ತಿಗೆ ಒಡೆಯ
 • ಆಕೃತಿಯಲ್ಲಿ ಚಿಕ್ಕದಾಗಿರುವ ಗಣಪತಿಯ ವಿಗ್ರಹವನ್ನು ಬಾಲ ಗಣಪತಿ, ಬಾಲ ಗಣೇಶ ಎಂದೂ ಕರೆಯಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

The majority of documentation on Ganesha is in Sanskrit. A collection of useful documents can be found here. At the same site can be found some documents and translations in English here.

 • Prof. Pradeep Sarkar, The reflection of ancient India in modern India
 • A. Daniélou, Le polythéisme hindou, Paris. 1960. pp. 443-452.
 • Ram Swaroop Joon, History of the Jats, 1938,1965, New Delhi.
 • Thakur Deshraj, Jat Itihas, Maharaja Suraj Mal Smarak Shiksha Sansthan, Delhi. 1936. (in Hindi)

ಹೊರಗಿನ ಸಂಪರ್ಕಗಳು[ಬದಲಾಯಿಸಿ]


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ HinduSwastika.svg
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ
"https://kn.wikipedia.org/w/index.php?title=ಗಣೇಶ&oldid=576226" ಇಂದ ಪಡೆಯಲ್ಪಟ್ಟಿದೆ