ಬಾದಾಮಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬಾದಾಮಿ
India-locator-map-blank.svg
Red pog.svg
ಬಾದಾಮಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಾಗಲಕೋಟೆ
ನಿರ್ದೇಶಾಂಕಗಳು 15° N 75° E
ವಿಸ್ತಾರ
 - ಎತ್ತರ
12.6 km²
 - 586 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೨೫೮೫೧
 - - /ಕಿಮಿ2 (-/ಚದರ ಮಿ)/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೮೨ ೨೦೧
 - +೯೧ (೦) ೮೩೫೭
 - ಕೆಎ-೨೯
ಅಂತರ್ಜಾಲ ತಾಣ: gmail
ಈ ಲೇಖನವು ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ ಸ್ಥಳದ ಬಗ್ಗೆ. ಅಡಿಗೆಗೆ ಉಪಯೋಗಿಸುವ ಬಾದಾಮಿ ಪದಾರ್ಥದ ಮಾಹಿತಿಗೆ ಈ ಲೇಖನ ನೋಡಿ.
Cave-Badami.jpg
Old Kannada inscription of Chalukya King Mangalesha dated 578 CE at Badami cave temple no.3
Bhuthanatha group of temples facing the Agasythya thertha
Mallikarjuna group of temples at Badami in Bagalkot district, Karnataka
Shiva image in Cave temple no. 1
Vishnu image in Cave temple No. 3
Badami Caves

ಚಾಲುಕ್ಯ ಮಹಾಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಇತಿಹಾಸ ಪ್ರಸಿದ್ಧ ಬಾದಾಮಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತವಾಗಿವೆ. ಈ ಗುಡ್ಡದ ಬುಡದಲ್ಲಿರುವ ಕೆರೆಯ ಪಶ್ಚಿಮ ತೀರದಲ್ಲಿ ಊರು ಹಬ್ಬಿದೆ. ಗುಡ್ಡದ ಮೇಲೆ ಕೋಟೆಯೂ ಚಾಲುಕ್ಯರ ಕಾಲದ ದೇವಾಲಯಗಳೂ ಕಟ್ಟಡಗಳೂ ಇವೆ. ಕೆರೆಯ ಉತ್ತರದ ದಡದ ಮೇಲೆ ಬಂಡೆಯೊಂದರ ಮೇಲೆ ಕಪ್ಪೆ ಅರಭಟ್ಟನ ಶಾಸನವನ್ನು ಕಾಣಬಹುದು. ಹತ್ತಿರದಲ್ಲೆ ಇನ್ನೊಂದು ಬಂಡೆಯ ಮೇಲೆ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ ಪಲ್ಲವ ನರಸಿಂಹವರ್ಮನ ಜಯಶಾಸನವನ್ನೂ ಕಾಣಬಹುದು. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ (ಐವಳಿ) ಪಟ್ಟದಕಲ್ಲುಗಳೂ, ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ.

ಇತಿವೃತ್ತ[ಬದಲಾಯಿಸಿ]

ಸಾಮಾನ್ಯ ಶಕವರ್ಷ ೬೪೨ರಲ್ಲಿ ಇಮ್ಮಡಿ ಪುಲಿಕೇಶಿಯ ಕೊನೆಗಾಲದಲ್ಲಿ ಪಲ್ಲವರು ಬಾದಾಮಿಯನ್ನು ಮುತ್ತಿ ಹಾಳುಗೆಡವಿದರು (೨). ಸಾಮ್ರಾಜ್ಯದಲ್ಲಿ ಅರಾಜಕತೆ ಮೂಡಿತು. ೧೩ ವರ್ಷಗಳ ನಂತರ ಪುಲಿಕೇಶಿಯ ಮಗ ವಿಕ್ರಮಾದಿತ್ಯ ಪಲ್ಲವರನ್ನು ಸೋಲಿಸಿ ರಾಜ್ಯವನ್ನು ಪುನರ್ಘಟಿಸಿದ. ಸಾ.ಶ ೭೫೦ರ ವೇಳೆಗೆ ಸಾಮ್ರಾಜ್ಯ ಬಲಗುಂದುತ್ತಿತ್ತು. ೭೫೩ರಲ್ಲಿ ರಾಷ್ಟ್ರಕೂಟರ ವಂಶದವನಾದ ದಂತಿದುರ್ಗ ಸಾಮ್ರಾಟ ಇಮ್ಮಡಿ ಕೀರ್ತಿವರ್ಮನನ್ನು ಬದಿಗೊತ್ತಿ ತನ್ನ ರಾಜವಂಶವನ್ನು ಸ್ಥಾಪಿಸಿದ (೧). ಅಲ್ಲಿಗೆ ಬಾದಾಮಿಯು ಚರಿತ್ರೆಯ ಮುಖಪುಟದಿಂದ ಮರೆಯಾಯಿತು. ಮುಂದೆ ಚಾಲುಕ್ಯ ವಂಶದವರು ಮತ್ತೆ ರಾಜ್ಯಕ್ಕೆ ಬಂದಾಗ ಕಲ್ಯಾಣ ರಾಜಧಾನಿಯಾಯಿತು.

ಇಡೀ ಭಾರತದ ಚರಿತ್ರೆ ಸಂಸ್ಕೃತಿಗಳ ಮೇಲೆ ತಮ್ಮ ಅಚ್ಚೊತ್ತಿದ ಚಾಲುಕ್ಯರ ಬಾದಾಮಿಯು ಸರ್ವಥಾ ಪ್ರೇಕ್ಷಣೀಯ, ಸರ್ವಥಾ ಆದರಣೀಯ. ಬಾದಾಮಿಗೆ ಬೆಂಗಳೂರು, ಬಾಗಲಕೋಟೆ, ಬಿಜಾಪುರ, ಹೊಸಪೇಟೆ, ಹುಬ್ಬಳ್ಳಿ, ಧಾರವಾಡ, ಗದಗ ಮುಂತಾದೆಡೆಗಳಿಂದ ಬಸ್ ಸಂಪರ್ಕವಿದೆ. ಗದಗ-ಸೊಲ್ಲಾಪುರ ರೈಲು ಮಾರ್ಗವು ಬಾದಾಮಿಯನ್ನು ಹಾಯ್ದು ಹೋಗುತ್ತದೆ. ವಸತಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ (KSTDC) ನಡೆಸುವ ಹೊಟೆಲ್ ಅನುಕೂಲವಾಗಿದೆ.

ಜನಸಂಖ್ಯೆ[ಬದಲಾಯಿಸಿ]

೨೦೦೧ ರ ಜನಗಣತಿಯ ಪ್ರಕಾರ ಬಾದಾಮಿ ಪಟ್ಟಣದ ಜನಸಂಖ್ಯೆ 25847 (೨೦೦೧ ರ ಜನಗಣತಿ ಪ್ರಕಾರ) ಇಲ್ಲಿನ ಸಾಕ್ಷರತೆ ಪ್ರಮಾಣ ೬೦%. ಪುರುಷರಲ್ಲಿ ---%, ಮಹಿಳೆಯರಲ್ಲಿ ---% ರಷ್ಟು ಸಾಕ್ಷರ ಪ್ರಮಾಣ ಇದೆ.[೧]BAdami is a great place.

ಶೈಕ್ಷಣಿಕ[ಬದಲಾಯಿಸಿ]

ಪ್ರಮುಖ ವಿದ್ಯಾಸಂಸ್ಥೆಗಳು

 • ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆ, ಬಾದಾಮಿ.
 • ಶ್ರೀ ಕಾಳಿದಾಸ ವಿದ್ಯಾವರ್ಧಕ ಸಂಸ್ಥೆ, ಬಾದಾಮಿ
 • ಸ್ವಾಮಿ ವಿವೇಕಾನಂದ ಶಾಲೆ, ಬಾದಾಮಿ

ದಿನ ಪತ್ರಿಕೆ[ಬದಲಾಯಿಸಿ]

 • ಪ್ರಜಾವಾಣಿ ದಿನಪತ್ರಿಕೆ
 • ಕನ್ನಡ ಪ್ರಭ
 • ಸಂಯುಕ್ತ ಕರ್ನಾಟಕ
 • ವಿಜಯ ಕರ್ನಾಟಕ
 • ಹೊಸ ದಿಗಂತ

ಸಾಂಸ್ಕೃತಿಕ[ಬದಲಾಯಿಸಿ]

ಪರಂಪರೆ

 • ನಮ್ಮೂರ ಜಾತ್ರೆ

ಟೆಂಪ್ಲೇಟು:ಬನಶಂಕರಿ ಜಾತ್ರೆ

 ಸಂಗೀತ ಮತ್ತು ಕಲೆ 

'ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು

ಪ್ರಮುಖ ಬೆಳೆಗಳು[ಬದಲಾಯಿಸಿ]

ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ). ಪ್ರಮುಖ ಆಹಾರ ಧಾನ್ಯ ಜೋಳ ಜೊತೆಗೆ ಗೋಧಿ, ಬೇಳೆಕಾಳುಗಳು.

ಹವಾಮಾನ[ಬದಲಾಯಿಸಿ]

 • ಬೇಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ [[]] ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ [[]] ಡಿಗ್ರಿವರೆಗೆ (ಡಿಸೆಂಬರನಲ್ಲಿ) ಉಷ್ಣತೆ ಇರುತ್ತದೆ. ಬೇಸಿಗೆ - [[]]°C-೩೯°C , ಚಳಿಗಾಲ - [[]]°C-[[]]°C
 • ಮಳೆ - ಪ್ರತಿ ವರ್ಷ ಮಳೆ ಸರಾಸರಿ [[]] ಮಿಮಿ ಗಳಷ್ಟು ಆಗಿರುತ್ತದೆ.
 • ಗಾಳಿ -ಗಾಳಿ ವೇಗ [[]] ಕಿಮಿ/ಗಂ (ಜೂನ), [[]] ಕಿಮಿ/ಗಂ (ಜುಲೈ)ಹಾಗೂ [[]] ಕಿಮಿ/ಗಂ (ಅಗಸ್ಟ) ಇರುತ್ತದೆ.

ಸಮೀಪದ ಸ್ಥಳಗಳು[ಬದಲಾಯಿಸಿ]

‍* ಪಟ್ಟದಕಲ್ಲು

ರಾಜಕೀಯ[ಬದಲಾಯಿಸಿ]

ಶಾಸಕರು ಇಂದಿನ ೨೦೦೮ ಶಾಸಕರು [[]] ಒಟ್ಟು ಫಲಿತಾಂಶ.'

ಮೈಸೂರು ವಿಧಾನಸಭೆ ಚುನಾವಣೆ- ೧೯೫೭- ೧೯೭೨ ಕರ್ನಾಟಕ ವಿಧಾನಸಭೆ ಚುನಾವಣೆ- ೧೯೭೮- ೨೦೦೮


Flag of the Indian National Congress.svg ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)| ಭಾರತೀಯ ಜನತಾ ಪಕ್ಷ (BJP)| Janata Dal (secular).jpgಜನತಾ ದಳ(ಎಸ್)JD(S) | JanataDalUnitedFlag.PNGಜನತಾ ದಳ(ಯು)JD(U)| BLANK.jpg ಪಕ್ಷೇತರ(IND)|


ಹಿಂದಿನ ಶಾಸಕರು

ವರ್ಷ್ ಹೆಸರು ಪಕ್ಷ
೨೦೦೪ {{}}
೧೯೯೯ {{}}
೧೯೯೪ {{}}
೧೯೮೯ {{}}
೧೯೮೫ {{}}
೧೯೮೩ {{}}
೧೯೭೮ ()
೧೯೭೨ {{}}
೧೯೬೭ ()
೧೯೬೨ {{}}
೧೯೫೭ {{}}


ಪ್ರವಾಸ[ಬದಲಾಯಿಸಿ]

ಮಲ್ಲಿಕಾರ್ಜುನ ದೇವಾಲಯ[ಬದಲಾಯಿಸಿ]

ಬಾದಾಮಿಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಮರಳುಗಲ್ಲಿನಿಂದ ನಿರ್ಮಿತ ಗುಹೆ ದೇವಾಲಯಗಳನ್ನು ನೋಡಬಹುದು. ಇವು ತಮ್ಮ ಪುರಾತನ ಮತ್ತು ಧಾರ್ಮಿಕ ಆಚರಣೆಗಳು ಹಾಗು ವಿಷಯಗಳನ್ನು ಕ್ರಿಯಾಶೀಲ ಕೆತ್ತನೆಗಳ ಮೂಲಕ ವಿವರಿಸುತ್ತವೆ. ನಾಲ್ಕು ಗುಹೆಗಳುಳ್ಳ ದೇವಾಲಯದಲ್ಲಿ ಅತ್ಯಂತ ಹಳೆಯದು 5ನೇ ಶತಮಾನದ ಗುಹೆ ದೇವಾಲಯ. ಈ ದೇವಾಲಯದಲ್ಲಿ ಶಿವನ ಅರ್ಧನಾರೀಶ್ವರ ಮತ್ತು ಹರಿಹರ ಅವತಾರಗಳ ಕೆತ್ತನೆಗಳಿದ್ದು ನಟರಾಜನ ಅವತಾರದಲ್ಲಿ ತಾಂಡವ ನೃತ್ಯದಲ್ಲಿ ತೊಡಗಿರುವ ಕೆತ್ತನೆಯನ್ನು ಕಾಣಬಹುದಾಗಿದೆ. ಪರಮ ಶಿವನನ್ನು ಹರಿಹರನ ಬಲಕ್ಕೆ ಮತ್ತು ವಿಷ್ಣುವನ್ನು ಎಡಭಾಗದಲ್ಲಿ ಇರಿಸಲಾಗಿದೆ. ಈ ಗುಹೆಗೆ ಭೇಟಿ ಕೊಟ್ಟಾಗ ಮಹಿಷಾಸುರಮರ್ಧಿನಿ ಮತ್ತು ಗಣಪತಿ ,ಶಿವಲಿಂಗ ಹಾಗೂ ಷಣ್ಮುಖರನ್ನೂ ಕಾಣಬಹುದು.

ಎರಡನೇ ಗುಹೆ[ಬದಲಾಯಿಸಿ]

ಎರಡನೇ ಗುಹೆ ಸ್ವಾಮಿ ವಿಷ್ಣುವಿಗೆ ಸಮರ್ಪಿಸಲಾಗಿದ್ದು ಇಲ್ಲಿನ ವರಾಹ ಮತ್ತು ತ್ರಿವಿಕ್ರಮರ ಅವತಾರಗಳಲ್ಲಿ ಬಿಂಬಿಸಲಾಗಿದೆ. ಪುರಾಣದಲ್ಲಿ ಹೇಳಿರುವ ವಿಷ್ಣು ಮತ್ತು ಆತನ ಗರುಡ ಅವತಾರವನ್ನು ಈ ದೇವಾಲಯದ ಛಾವಣಿಯಲ್ಲಿ ಕಾಣಬಹುದು. 100 ಅಡಿ ಆಳವಿರುವ ಈ ಮೂರನೇ ಗುಹೆಯಲ್ಲಿ ತ್ರಿವಿಕ್ರಮ ಹಾಗೂ ನರಸಿಂಹರ ಅವತಾರದಲ್ಲಿ ವಿಷ್ಣುವಿನ 3 ಕಲಾಕೃತಿಗಳಿವೆ. ಇದರ ಜೊತೆಗೆ ಪ್ರವಾಸಿಗರು ಶಿವ ಮತ್ತು ಪಾರ್ವತಿಯರ ಕಲ್ಯಾಣ ಮಹೋತ್ಸವದ ದೃಶ್ಯಗಳನ್ನು ಈ ದೇವಾಲಯದ ಗೋಡೆಗಳ ಮೇಲೆ ಕಲಾಕೃತಿಗಳ ರೂಪದಲ್ಲಿ ಕಾಣಬಹುದು. ನಾಲ್ಕನೇ ಗುಹೆ ದೇವಾಲಯ ಜೈನ ಧರ್ಮಕ್ಕೆ ಸಮರ್ಪಿತವಾಗಿದ್ದು ಮಹಾವೀರನು ಕುಳಿತಿರುವ ಭಂಗಿಯ ಕಲಾಕೃತಿ ಮತ್ತು ತೀರ್ಥಂಕರ ಪಾರ್ಶ್ವನಾಥರ ಪ್ರತಿಮೆಯನ್ನು ಗುಹೆಯ ಜೊತೆಯಲ್ಲೇ ನಿರ್ಮಿಸಿರುವುದನ್ನು ಕಾಣಬಹುದು.

ಭೂತನಾಥ ದೇವಾಲಯ[ಬದಲಾಯಿಸಿ]

ಭೂತನಾಥ ದೇವಾಲಯಗಳ ಸಮೂಹದ ಒಂದು ಭಾಗವಾಗಿಹ ಮಲ್ಲಿಕಾರ್ಜುನ ದೇವಾಲಯವು ಗುಂಪಿನ ಎರಡನೇ ಮಹತ್ವದ ದೇವಾಲಯವಾಗಿದೆ. ಅಗಸ್ತ್ಯ ಪುಷ್ಕರಿಣಿಯ ಈಶಾನ್ಯ ದಿಕ್ಕಿನಲ್ಲಿರುವ ಈ ದೇವಾಲಯವು ಕಲ್ಯಾಣ ಚಾಲುಕ್ಯರ ಸಹಜ ವಾಸ್ತು ಶೈಲಿಯ ವಿಶೇಷತೆಯಾದ ಎತ್ತರಿಸಿದ ಬೃಹತ್ ನಿರ್ಮಾಣವಾಗಿದೆ. ದೇವಾಲಯವು ಸಮಾಂತರವಾದ ವೇದಿಕೆಗಳು, ಬೃಹತ್ ಚೌಕ ಗೋಪುರಾಕೃತಿ ಮತ್ತು ಸಾದಾ ಗೋಡೆಗಳು ಮತ್ತು ಕೋನವಾದ ಛಾವಣಿಗಳುಳ್ಳ ತೆರೆದ ಮಂಟಪಗಳನ್ನು ಹೊಂದಿದೆ. ಬಾದಾಮಿಯನ್ನು ಪ್ರವಾಸಿಸುವವರು ನೋಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಮಲ್ಲಿಕಾರ್ಜುನ ದೇವಾಲಯವನ್ನು ಸೇರಿಸಿಕೊಳ್ಳಬಹುದು.

ಪುರಾತನ ವಸ್ತುಸಂಗ್ರಹಾಲಯ[ಬದಲಾಯಿಸಿ]

ಬಾದಾಮಿಯನ್ನು ನೋಡಲು ಹೋಗುವ ಪ್ರವಾಸಿಗರು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದಾದ ಪುರಾತನ ವಸ್ತುಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡಲೇಬೇಕು. ಈ ವಸ್ತು ಸಂಗ್ರಹಾಲಯವನ್ನು 1979ರಲ್ಲಿ ಭಾರತದ ಪುರಾತತ್ವ ಇಲಾಖೆ ನಿರ್ಮಿಸಿದ್ದು ಆ ಸಮಯದಲ್ಲಿನ ಶಾಸನಗಳನ್ನು, ಕೆತ್ತನೆಗಳನ್ನು ಹಾಗೂ ಸಂಶೋಧಿತ ವಸ್ತುಗಳನ್ನು ಸಂರಕ್ಷಿಸಲು ಬಳಸಲಾಗುತಿತ್ತು. ಆದರೆ 1982 ರಷ್ಟರಲ್ಲಿ ಇದನ್ನು ವಿಶಿಷ್ಟವಾದ ಸ್ಥಳೀಯ ಕೆತ್ತನೆಗಳನ್ನು ಪ್ರದರ್ಶಿಸುವಂತಹ ಸಂಗ್ರಹಾಲಯವಾಗಿ ಮಾರ್ಪಾಡು ಮಾಡಲಾಯಿತು.

ಈ ಸಂಗ್ರಹಾಲಯವನ್ನು ಸಂದರ್ಶಿಸುವ ಸಮಯದಲ್ಲಿ ಪ್ರವಾಸಿಗರು ಸಮೃದ್ಧಿ ಗೆ ಹೆಸರಾದ ಲಜ್ಜಾ ಗೌರಿ ಆಕೃತಿಗಳು ಮತ್ತು 6ನೇ ಶತಮಾನದಿಂದ 16ನೇ ಶತಮಾನಗಳ ಅವಧಿಯಲ್ಲಿ ನಿರ್ಮಿಸಿದ ಪ್ರಾಚೀನ ಶಾಸನಗಳನ್ನು ಕಾಣಬಹುದು. ಈ ಸಂಗ್ರಹಾಲಯದಲ್ಲಿ 4 ಪ್ರದರ್ಶನಾ ಘಟಕಗಳಿದ್ದು ಅವುಗಳಲ್ಲಿ ಶಿವ, ವಿಷ್ಣುವಿನ ವಿವಿಧ ಅವತಾರಗಳು, ಗಣಪತಿ ಹಾಗೂ ಭಗವದ್ಗೀತೆಯನ್ನು ಬಿಂಬಿಸುವ ಹಲವು ದೃಶ್ಯಾವಳಿಗಳನ್ನು ಪ್ರದರ್ಶಿಸುತ್ತವೆ. ಶಿವನ ವಾಹನವಾದ ಸುಂದರವಾದ ನಂದಿಯ ವಿಗ್ರಹವನ್ನು ಸಂಗ್ರಹಾಲಯದ ಪ್ರವೇಶದಲ್ಲಿ ಇರಿಸಲಾಗಿದೆ.

ಈ ಸಂಗ್ರಹಾಲಯದಲ್ಲಿ ನಾಲ್ಕು ಪ್ರದರ್ಶನಾಗೂಡುಗಳಿದ್ದು ಮುಂಭಾಗದಲ್ಲಿ ಮತ್ತು ವರಾಂಡದಲ್ಲಿಯೂ ಸಹ ತೆರೆದ ಪ್ರದರ್ಶನಾ ಗೂಡುಗಳಿವೆ. ಇಲ್ಲಿನ ಪ್ರದರ್ಶನಗೂಡುಗಳಲ್ಲಿ ಒಂದರಲ್ಲಿರುವ ಶಿಡ್ಲಫಡಿ ಗುಹೆಯೂ ಪ್ರಾಚೀನ ಕಾಲದ ಕಲ್ಲಿನ ನೆಲೆಗೆ ಸಾಕ್ಷಿಯಾಗಿದೆ. ಕಲ್ಲಿನ ಕಲಾಕೃತಿಗಳೊಂದಿಗೆ ಈ ಪ್ರದರ್ಶನಾಗೂಡು ಪ್ರಾಚೀನ ಕಲೆ ಹಾಗೂ ಹಲವು ಶಾಸನಗಳನ್ನು ಪ್ರದರ್ಶಿಸುತ್ತದೆ. ಅಲ್ಲಿರುವ ತೆರೆದ ವರಾಂಡ ಪ್ರದರ್ಶನಾಗೂಡಿನಲ್ಲಿ ಪ್ರವಾಸಿಗರು ವೀರಗಲ್ಲುಗಳನ್ನು, ದ್ವಾರಪಾಲಕ ಜೋಡಿಯ ಆಕರ್ಷಕ ಚಿತ್ರಕಲೆ ಮತ್ತು ಶಾಸನಗಳನ್ನು ನೋಡಬಹುದು. ಸಂಗ್ರಹಾಲಯದ ಹೊಸ ಪ್ರದರ್ಶನಾಗೂಡಿನಲ್ಲಿ ಹಲವು ಶಿಲಾಶಾಸನ ವಿವರಗಳು ಮತ್ತು ವಾಸ್ತುಶಿಲ್ಪಗಳನ್ನು ಪ್ರದರ್ಶಿಸಲಾಗಿದೆ.

ರಸ್ತೆ ಸಾರಿಗೆ[ಬದಲಾಯಿಸಿ]

ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ ಬಾದಾಮಿ ಪಟ್ಟಣ ಸಾರಿಗೆ ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ.

ನಗರ ಆಡಳಿತ[ಬದಲಾಯಿಸಿ]

ವಾರ್ಡ್ ಗಳು ನಗರದಲ್ಲಿ ಒಟ್ಟು [೨೨] ವಾರ್ಡ್ ಗಳು ಇರುತ್ತವೆ.

ಬಾದಾಮಿ ಪ್ರಮುಖ ಬಡಾವಣೆಗಳು

 • ಚಾಲುಕ್ಯ ನಗರ, ವಿದ್ಯಾ ನಗರ, ಆನಂದ ನಗರ, ಬ್ಯಾಂಕ ಕಾಲೊನಿ, ಮೆಣಬಸದಿ ರಸ್ತೆ, ಉಳ್ಳಾಗಡ್ಡಿ ಓಣಿ,
 • ತಟಕೋಟಿ, ಕೀಲ್ಲಾ ಓಣಿ, ತಲವಾರ ಓಣಿ, ಗಾಂಧಿ ನಗರ,

ಸಿನಿಮಾ ಚಿತ್ರ ಮಂದಿರಗಳು ಶ್ರೀ ಮಹಾಕೂಟೆಶ್ವರ, ಶ್ರೀ ಕುಮಾರೆಶ್ವರ, ಶೀತಲ್

ಖಾದ್ಯ[ಬದಲಾಯಿಸಿ]

ರೊಟ್ಟಿ , ಪಲ್ಯ

ಚಿತ್ರ ಗ್ಯಾಲರಿ[ಬದಲಾಯಿಸಿ]

ಟೆಂಪ್ಲೇಟು:ಬಾದಾಮಿ ಚಿತ್ರ ಗ್ಯಾಲರಿ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. ENGILSH

ಟಿಪ್ಪಣಿಗಳು[ಬದಲಾಯಿಸಿ]

೧. The Chalukyas of Badami Ed. Dr. M. S. Nagaraja Rao, The Mythic Society, Bangalore 1978

೨. ಪಲ್ಲವ ಸೈನಿಕರು ಬಾದಾಮಿಯಿಂದ ಕೊಂಡೊಯ್ದ ಗಣಪನ ಪ್ರತಿಮೆಯೊಂದನ್ನು ಕಂಚಿಯ ದೇವಾಲಯದ ಪ್ರಾಕಾರದಲ್ಲಿ ಪ್ರತಿಷ್ಠಾಪಿಸಲಾಯಿತು. ಇದುವೆ ವಾತಾಪಿ ಗಣಪತಿ. ಮುತ್ತುಸ್ವಾಮಿ ದೀಕ್ಷಿತರು ತಮ್ಮ ಪ್ರಸಿದ್ಢ ಕೃತಿಯಲ್ಲಿ ಭಜಿಸಿದ್ದು ಈ ಗಣಪನನ್ನೆ. ವಾತಾಪಿಯೆಂದರೆ ಬಾದಾಮಿಯೆ.

Bagalkotmap.jpg
ಬಾಗಲಕೋಟೆ ಜಿಲ್ಲೆಯ- ತಾಲೂಕುಗಳು
ಬಾಗಲಕೋಟೆ | ಜಮಖಂಡಿ | ಹುನಗುಂದ | ಬಾದಾಮಿ | ಮುಧೋಳ | ಬೀಳಗಿ | ಗುಳೇದಗುಡ್ಡ | ರಬಕವಿ-ಬನಹಟ್ಟಿ | ಇಳಕಲ್ಲ
"https://kn.wikipedia.org/w/index.php?title=ಬಾದಾಮಿ&oldid=720848" ಇಂದ ಪಡೆಯಲ್ಪಟ್ಟಿದೆ