ಗುಳೇದಗುಡ್ಡ

ವಿಕಿಪೀಡಿಯ ಇಂದ
Jump to navigation Jump to search
Guledgudda

ಗುಳೇದಗುಡ್ದ
town
ದೇಶ India
ರಾಜ್ಯಕರ್ನಾಟಕ
ಜಿಲ್ಲೆಬಾಗಲಕೋಟೆ
Area
 • Total೪.೮೭ km (೧.೮೮ sq mi)
Elevation
೫೧೫ m (೧,೬೯೦ ft)
Population
 (2001)
 • Total೩೩,೯೯೧
 • Density೬,೯೭೯.೬೭/km (೧೮,೦೭೭.೩/sq mi)
ಭಾಷೆ
 • Officialಕನ್ನಡ
ಸಮಯ ವಲಯUTC+5:30 (IST)
PIN
587 203
Telephone code08357
ವಾಹನ ನೊಂದಣಿKA-29

ಗುಳೇದಗುಡ್ಡ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ತಾಲ್ಲೂಕಿನ ಒಂದು ಪಟ್ಟಣ; ಹೋಬಳಿ ಕೇಂದ್ರ ಉ.ಅ. 160 3' ಮತ್ತು ಪು.ರೇ 750 47' ಮೇಲೆ ಬಾದಾಮಿಯಿಂದ ಈಶ್ಯಾನಕ್ಕೆ 15 ಕಿಮೀ ದೂರದಲ್ಲಿದೆ; ಗುಳೇದಗುಡ್ಡ ರೋಡ್ ರೈಲು ನಿಲ್ದಾಣಕ್ಕೆ ಈ ಸ್ಥಳದಿಂದ 10 ಕಿಮೀ ದೂರ.

ಇತಿಹಾಸ[ಬದಲಾಯಿಸಿ]

ಗುಳೇದಗುಡ್ಡ ಪಟ್ಟಣ ಹಿಂದೆ ಇಲ್ಲಿರುವ ಬೆಟ್ಟದ ಮೇಲಿತ್ತು. ಈಗಲೂ ಅಲ್ಲಿ ಪಟ್ಟಣದ ಅವಶೇಷಗಳನ್ನು ಕಾಣಬಹುದು. 1580ರಲ್ಲಿ ಬಿಜಾಪುರದ ಎರಡನೆಯ ಇಬ್ರಾಹಿಂ ಆದಿಲ್ಶಹ ಇಲ್ಲಿ ಒಂದು ಕೋಟೆ ಕಟ್ಟಿಸಿದ. 1706ರಲ್ಲಿ ಒಂದು ಸುಂದರ ಜಲಾಶಯದ ದಂಡೆಯ ಮೇಲೆ ಈ ಪಟ್ಟಣದ ಸ್ಥಾಪನೆಯಾಯಿತು. 1750ರಲ್ಲಿ ಈ ಪಟ್ಟಣ ಲೂಟಿಗೆ ಒಳಗಾಯಿತು. 1787ರಲ್ಲಿ ಇದು ಟಿಪ್ಪುವಿನ ಅಧೀನಕ್ಕೆ ಬಂತು. ಅನಂತರ ಮರಾಠರು ಇದನ್ನು ಲೂಟಿ ಮಾಡಿದಾಗ ಇಲ್ಲಿಯ ನಿವಾಸಿಗಳನೇಕರು ಇಲ್ಲಿಂದ ಓಡಿಹೋದರು. ದೇಸಾಯಿ ಮನೆತನದ ಪ್ರಭಾವದಿಂದಾಗಿ ಅವರು ಮತ್ತೆ ಇಲ್ಲಿಗೆ ಬಂದು ನೆಲೆಸಿದರು. ಮತ್ತೆ ನರಸಿಂಹನೆಂಬವನು ಈ ನಗರವನ್ನು ಲೂಟಿ ಮಾಡಿದ. ಜನ ಪುನಃ ಓಡಿಹೋದರು. 1818ರಲ್ಲಿ ದೇಸಾಯಿ ಪರಿವಾರದವರ ಒತ್ತಾಯ ಮತ್ತು ಸಹಯೋಗದಿಂದಾಗಿ ಜನರಲ್ ಮನ್ರೋ ಈ ಜನ ಪುನಃ ಇಲ್ಲಿಯೇ ವಾಸ ಮಾಡಲು ಅನುಕೂಲ ಮಾಡಿಕೊಟ್ಟ . ಮರಾಠರು ಗಜೇಂದ್ರಗಡ ಯುದ್ಧದಲ್ಲಿ ಮೈಸೂರ್ ಸಾಮ್ರಾಜ್ಯದ  ಟಿಪ್ಪುವಿನ ವಿರುದ್ಧ ಸೋತಾಗ ಸೋತ ಸೇಡಿನಿಂದ ಅವರು ಹಿಂತಿರಿಗುವಾಗ ಗುಳೇದ್ಗುಡ್ಡವನ್ನ ಲೂಟಿ ಮಾಡಿ ಹೋದರು ಅದೇರೀತಿ ಮೈಸೂರಿನ ದಕ್ಷಿಣ ಭಾಗವಾದ ಶ್ರೀರಂಗನಾಥ ದೇವಸ್ಥಾನವನ್ನು ಭಗ್ನಗೊಳಿಸಿದರು ಆದರಿಂದ ಗುಳೇದ್ಗುಡ್ಡ ಕೋಟೆ ನಾಶವಾಗಿದೆ

ವೈಶಿಷ್ಠ್ಯಗಳು[ಬದಲಾಯಿಸಿ]

ಗುಳೇದಗುಡ್ಡ ಅಭಿವೃದ್ದಿ ಹೊಂದುತ್ತಿರುವ ಒಂದು ಪಟ್ಟಣ. ಇಲ್ಲಿ ತಯಾರಾಗುವ ಕುಪ್ಪುಸದ ಕಣಗಳು ಭಾರತದಲ್ಲೆಲ್ಲ ಪ್ರಸಿದ್ಧಿ ಪಡೆದಿವೆ. ಇಳಕಲ್ಲ ಸೀರೆ, ಅಮೀನಗಡದ ಕರದಂಟು, ಗುಳೆದಗುಡ್ಡದ ಕಣ-ಇದು ಉತ್ತರ ಕರ್ನಾಟಕದಲ್ಲಿ ಮನೆಮಾತು. ಇಲ್ಲಿ ತಯಾರಾಗುವ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು ಸೊಲ್ಲಾಪುರ, ಮುಂಬಯಿ, ಪುಣೆ, ಅಹ್ಮದ್‍ನಗರಗಳಿಗೆ ಸಾಗುತ್ತವೆ. ಗುಳೇದಗುಡ್ಡದ ಹತ್ತಿರ ಬೆಲೆಬಾಳುವ ಕಲ್ಲುಗಣಿಗಳುಂಟು. 
  • 1 ದೇವಾಲಯಗಳು
  • A.ಶ್ರೀ ಮುಕೇಶ್ವರಿ ದೇವಾಲಯ
  • B. ಬನಶ೦ಕರಿ ದೇವಾಲಯ

ಉಲ್ಲೇಖ[ಬದಲಾಯಿಸಿ]

??

  • ವರ್ಗ??


Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: