ವಿಷಯಕ್ಕೆ ಹೋಗು

ಗುಳೇದಗುಡ್ಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Guledgudda
ಗುಳೇದಗುಡ್ದ
town
ದೇಶ India
ರಾಜ್ಯಕರ್ನಾಟಕ
ಜಿಲ್ಲೆಬಾಗಲಕೋಟೆ
Area
 • Total೪.೮೭ km (೧.೮೮ sq mi)
Elevation
೫೧೫ m (೧,೬೯೦ ft)
Population
 (2001)
 • Total೩೩,೯೯೧
 • Density೬,೯೭೯.೬೭/km (೧೮,೦೭೭.೩/sq mi)
ಭಾಷೆ
 • Officialಕನ್ನಡ
Time zoneUTC+5:30 (IST)
PIN
587 203
Telephone code08357
Vehicle registrationKA-29

ಗುಳೇದಗುಡ್ಡ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ತಾಲ್ಲೂಕಿನ ಒಂದು ಪಟ್ಟಣ; ಹೋಬಳಿ ಕೇಂದ್ರ ಉ.ಅ. 160 3' ಮತ್ತು ಪು.ರೇ 750 47' ಮೇಲೆ ಬಾದಾಮಿಯಿಂದ ಈಶ್ಯಾನಕ್ಕೆ 15 ಕಿಮೀ ದೂರದಲ್ಲಿದೆ; ಗುಳೇದಗುಡ್ಡ ರೋಡ್ ರೈಲು ನಿಲ್ದಾಣಕ್ಕೆ ಈ ಸ್ಥಳದಿಂದ 10 ಕಿಮೀ ದೂರ.

ಇತಿಹಾಸ

[ಬದಲಾಯಿಸಿ]

ಗುಳೇದಗುಡ್ಡ ಪಟ್ಟಣ ಹಿಂದೆ ಇಲ್ಲಿರುವ ಬೆಟ್ಟದ ಮೇಲಿತ್ತು. ಈಗಲೂ ಅಲ್ಲಿ ಪಟ್ಟಣದ ಅವಶೇಷಗಳನ್ನು ಕಾಣಬಹುದು. 1580ರಲ್ಲಿ ಬಿಜಾಪುರದ ಎರಡನೆಯ ಇಬ್ರಾಹಿಂ ಆದಿಲ್ಶಹ ಇಲ್ಲಿ ಒಂದು ಕೋಟೆ ಕಟ್ಟಿಸಿದ. 1706ರಲ್ಲಿ ಒಂದು ಸುಂದರ ಜಲಾಶಯದ ದಂಡೆಯ ಮೇಲೆ ಈ ಪಟ್ಟಣದ ಸ್ಥಾಪನೆಯಾಯಿತು. 1750ರಲ್ಲಿ ಈ ಪಟ್ಟಣ ಲೂಟಿಗೆ ಒಳಗಾಯಿತು. 1787ರಲ್ಲಿ ಇದು ಟಿಪ್ಪುವಿನ ಅಧೀನಕ್ಕೆ ಬಂತು. ಅನಂತರ ಮರಾಠರು ಇದನ್ನು ಲೂಟಿ ಮಾಡಿದಾಗ ಇಲ್ಲಿಯ ನಿವಾಸಿಗಳನೇಕರು ಇಲ್ಲಿಂದ ಓಡಿಹೋದರು. ದೇಸಾಯಿ ಮನೆತನದ ಪ್ರಭಾವದಿಂದಾಗಿ ಅವರು ಮತ್ತೆ ಇಲ್ಲಿಗೆ ಬಂದು ನೆಲೆಸಿದರು. ಮತ್ತೆ ನರಸಿಂಹನೆಂಬವನು ಈ ನಗರವನ್ನು ಲೂಟಿ ಮಾಡಿದ. ಜನ ಪುನಃ ಓಡಿಹೋದರು. 1818ರಲ್ಲಿ ದೇಸಾಯಿ ಪರಿವಾರದವರ ಒತ್ತಾಯ ಮತ್ತು ಸಹಯೋಗದಿಂದಾಗಿ ಜನರಲ್ ಮನ್ರೋ ಈ ಜನ ಪುನಃ ಇಲ್ಲಿಯೇ ವಾಸ ಮಾಡಲು ಅನುಕೂಲ ಮಾಡಿಕೊಟ್ಟ . ಮರಾಠರು ಗಜೇಂದ್ರಗಡ ಯುದ್ಧದಲ್ಲಿ ಮೈಸೂರ್ ಸಾಮ್ರಾಜ್ಯದ  ಟಿಪ್ಪುವಿನ ವಿರುದ್ಧ ಸೋತಾಗ ಸೋತ ಸೇಡಿನಿಂದ ಅವರು ಹಿಂತಿರಿಗುವಾಗ ಗುಳೇದ್ಗುಡ್ಡವನ್ನ ಲೂಟಿ ಮಾಡಿ ಹೋದರು ಅದೇರೀತಿ ಮೈಸೂರಿನ ದಕ್ಷಿಣ ಭಾಗವಾದ ಶ್ರೀರಂಗನಾಥ ದೇವಸ್ಥಾನವನ್ನು ಭಗ್ನಗೊಳಿಸಿದರು ಆದರಿಂದ ಗುಳೇದ್ಗುಡ್ಡ ಕೋಟೆ ನಾಶವಾಗಿದೆ ತಡಾಂತರ ಗುಳೇದಗುಡ್ಡ ಮರಾಠ ಹೇಗೂ ಮೈಸೂರು ಸಾಮ್ರಾಜ್ಯದ ಗಡಿ ಇತ್ತು ತಡನಂತರ ಮೈಸೂರಿನ ನವಾಬ್ ಹೈದರ್ ಅಲಿ ಹೇಗು ಟಿಪ್ಪು ಈ ಕೋಟೆಯನ್ನು ಜೀರ್ಣೋದ್ದಾರ ಮಾಡು ಪ್ರಯತ್ನ ಮಾಡಿದರೂ ಅದೇ ಮಂಗಳೂರ ಓಪಂಡ ವಾಗಿ ಹಣಕಸಿನ ತೊಂದರೆ ಆದ ಕಾರಣ ಕೋಟೆ ಕಾರ್ಯ ಅಪೂರ್ಣವಾಯಿತು ಅದ್ರಿತಿ ಹೈಡ್ರಬಡಿನ ನಿಜಂ ಕೂಡ ಗುಳೇದಗುಡ್ಡವನ್ನು ಆಕ್ರಮಿಸಲು ಪ್ರಯತ್ನ ಮಾಡಿದನು

ವೈಶಿಷ್ಠ್ಯಗಳು

[ಬದಲಾಯಿಸಿ]
ಗುಳೇದಗುಡ್ಡ ಅಭಿವೃದ್ದಿ ಹೊಂದುತ್ತಿರುವ ಒಂದು ಪಟ್ಟಣ. ಇಲ್ಲಿ ತಯಾರಾಗುವ ಕುಪ್ಪುಸದ ಕಣಗಳು ಭಾರತದಲ್ಲೆಲ್ಲ ಪ್ರಸಿದ್ಧಿ ಪಡೆದಿವೆ. ಇಳಕಲ್ಲ ಸೀರೆ, ಅಮೀನಗಡದ ಕರದಂಟು, ಗುಳೆದಗುಡ್ಡದ ಕಣ-ಇದು ಉತ್ತರ ಕರ್ನಾಟಕದಲ್ಲಿ ಮನೆಮಾತು. ಇಲ್ಲಿ ತಯಾರಾಗುವ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು ಸೊಲ್ಲಾಪುರ, ಮುಂಬಯಿ, ಪುಣೆ, ನಾಸಿಕ್, ಪಂಡರಾಪುರ  ಅಹ್ಮದ್‍ನಗರಗಳಿಗೆ ಸಾಗುತ್ತವೆ. 


  • ಗುಳೇದಗುಡ್ಡ ನಗರದ ಪ್ರಮುಖ ದೇವಾಲಯಗಳು
  • ಗ್ರಾಮ ದೇವತೆ ಶ್ರೀ ಮುಕೇಶ್ವರಿ ದೇವಾಲಯ
  • ಶ್ರೀ ಬನಶ೦ಕರಿ ದೇವಾಲಯ
  • ಶ್ರೀ ಅಂಬಾಭವಾನಿ ದೇವಾಲಯ
  • ಶ್ರೀ ಸಾಲೇಶ್ವರ ದೇವಾಲಯದ ಪಕ್ಷಿ-ನೋಟ

ನಮ್ಮ ಪ್ರಾಚೀನ ಕರ್ನಾಟಕದಲ್ಲಿ - ನಾಟಕದಿಂದ ಹಿಡಿದು ಆಡಳಿತ ನ್ಯಾಯ ದಾನಗಳ ವರೆಗೆ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿದ್ದು, ದೇವಾಲಯಗಳ ನಮ್ಮ ಜನಾಂಗದ ಆಸ್ತಿಕ ಮನೋಭಾವದ ದ್ಯೋತಕವಾಗಿವೆ. ೧೮೧೮ರಲ್ಲಿ ಜನರಲ್ ಮನೋ ಅವರ ನೆರವಿನೊಂದಿಗೆ ಗುಳೇದಗುಡ್ಡವನ್ನು ವ್ಯವಸ್ಥಿತ ರೂಪಕ್ಕೆ ತಂದ ಕೋಟೆಕಲ್ ದೇಸಾಯಿ ಮನೆತನದ ಪೂರ್ವಜರು- ಈ ಊರಲ್ಲಿಯ ಹಲವಾರು ಭಾಗ ಗಳಲ್ಲಿ ಗೌಡರನ್ನು ನಿಯೋಜಿಸಿದ್ದರು. ಇಂದಿನ ಹೊಸಪೇಟೆಯ ಭಾಗದ ಇನಾಮು ಸಹಿತ ಗೌಡರಾಗಿದ್ದ ಶ್ರೀ ಸೋಮಲಿಂಗಪ್ಪ ರುದ್ರಪ್ಪ ಗೌಡರ ಪೂರ್ವಜರು ೩೦ ಮನೆಗಳನ್ನು ಶ್ರೀ ಚೆನ್ನಬಸಪ್ಪ ಬಸಪ್ಪ ಗೌಡರ ಪೂರ್ವಜರು ೦೯ ಮನೆಗಳನ್ನು ವಿಭಾಗಿಸಿಕೊಂಡು ಉಭಯತರೂ ಐದೈದು ಜನ ಪಂಚರನ್ನು ಕೂಡಿಸಿಕೊಂಡು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗಲೇ ಸರ್ವರ ನೆರವಿನೊಂದಿಗೆ ಶ್ರೀ ಸಾಲೇಶ್ವರ ದೇವಸ್ಥಾನವನ್ನು ಪ್ರತಿಷ್ಠಾಪಿಸಿದರು.

ಶ್ರೀ ಪಟ್ಟಸಾಲಿ ಹಾಗೂ ಶ್ರೀ ಶಿವಸಾಮಸಾಲಿ ಜನಾಂಗದ ಆರಾಧ್ಯ ಕುಲದೈವ ವಾದ ಶ್ರೀ ಸಾಲೇಶ್ವರ ಮೂರ್ತಿ ಪ್ರತಿಷ್ಠಾಪನೆಯ ನಂತರ ಗೌಡರು ಹಾಗೂ ಹಿರಿಯರ ನೇತೃತ್ವದಲ್ಲಿ ದೇವರ ಉಪಾಸನಾ ವ್ಯವಸ್ಥೆ, ದೇವಾಲಯದ ಕಟ್ಟಡದ ವ್ಯವಸ್ಥೆಗಳು ಕಾಲದ ಜೊತೆಗೆ ಕ್ರಮವಾಗಿ ಸಾಗಿ ಬಂದಿರುವದು ಶ್ಲಾಘನೀಯ. ೧೯೩೬ರಲ್ಲಿಯೇ ಮ್ಯಾಲಿನ ಪೇಟೆಯ ಭಕ್ತರ ನೆರವಿನೊಂದಿಗೆ ಗೋಪುರ, ಮಂಟಪ ನಿರ್ಮಾಣಗೊಂಡಿರುವದಕ್ಕೆ ಕಳಸಾ ರೋಹಣದ ಕಾರಗಳು ಸಾಂಗವಾಗಿ ನೆರವೇರಿದವು. ಇದು ಮೊದಲನೇ ಹಂತ. ಕಾಲಾ ನಂತರದಲ್ಲಿ ಮೊಗಸಾಲೆ (ಪಡಸಾಲೆ) ಯನ್ನು ಪೂರ್ಣಗೊಳಿಸಲು ಶ್ರೀ ರುದ್ರಪ್ಪ ವಾಳದ ಉಂಕಿ, ಶ್ರೀ ಅಮರಪ್ಪ ಮಗೆಣ್ಣಿ, ಶ್ರೀ ತೋಟಪ್ಪ ಹಟ್ಟಿ, ಶ್ರೀ ಬಸಪ್ಪ ಅಂಕದ, ಶ್ರೀ ಸಾರಂಗಪ್ಪ ಸಾರಂಗಿ, ಶ್ರೀ ಮಲ್ಲಪ್ಪ ರೊಡಗೈ, ಶ್ರೀ ಸಂಗಪ್ಪ ದೊಡಮನಿ, ಶ್ರೀ ವೀರಬಸಪ್ಪ ಭಾವಿ, ಶ್ರೀ ಮುರಿಗೆಪ್ಪ ಶಿವಪ್ಪ ರಾಜನಾಳ, ಶ್ರೀ ಮಲ್ಲಪ್ಪ ಮದ್ದಾನಿ, ಶ್ರೀ ನಾಗಪ್ಪ ವಿ. ಜಾಲಿಹಾಳ, ಶ್ರೀ ಬಸಪ್ಪ ಗಾಣಿಗೇರ ಮುಂತಾದ ಮಹನೀಯರು ಶ್ರಮಿಸಿದ್ದು ಸ್ಮರಣಾರ್ಹ ವಾಗಿದೆ. ಅಂದು ೧೯೫೧-೫೨ರಲ್ಲಿ ದೇಣಿಗೆ ನೀಡಿ ನೆರವಾದ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಮಸ್ತ ಭಕ್ತ ಮಂಡಳಿಗೆ ನಾವು ಚಿರಋಣಿಗಳಾಗಿದ್ದೇವೆ. ಎಲ್ಲರ ಹಣ- ನೆಣದ ತ್ಯಾಗದ ಫಲವಾಗಿ ೧೯೫೪ರಲ್ಲಿ ಮೊಗಸಾಲೆಯ ಮೇಲಿನ ಅಂಕಣದ ಕಾರ್ ಪೂರ್ಣಗೊಂಡಿತು. ೧೯೫೮ರಲ್ಲಿ ಕೆಳಗಣ ಮೊಗಸಾಲೆಯ ಆವರಣದ ಛತ್ತು ನಿರ್ಮಾಣ ಗೊಂಡಿತು. ಈ ಸಂದರ್ಭದಲ್ಲಿ ಈ ಕಾಯಕ್ಕೆ ಬಳ್ಳಾರಿಯ ಉಂಕಿ, ದೊಡ್ಡ ರುದ್ರಪ್ಪನವರು ನೀಡಿದ ಭಕ್ತಿ ಸೇವೆಗೆ ನಾವು ಕೃತಜ್ಞರಾಗಿದ್ದೇವೆ. ದೇವಾಲಯದ ಪ್ರಗತಿಯನ್ನು ವೀಕ್ಷಿಸಲು ಬಂದ ಮುಂಬೈಯ ಸೇಡಜಿಯವರು ಮಾಗಸಾಲೆಯ ಕಬ್ಬಿಣ ಕಟಾಂಜನದ ಕಾಠ್ಯ ನಿರ್ವಹಿಸಿದರು. ಗರ್ಭಗೃಹದ (ಗುಡಿ) ಟಾಯಿಲ್ಸ್ ಜೋಡಣೆಗಾಗಿ ಶ್ರೀ ಹಿರಣ್ಯಪ್ಪ ವಿ. ಉದ್ದೂರವರು ೧೦೦೧/- ರೂ. ನ್ನು ಶ್ರೀ ವೀರಪ್ಪ ಸಿದ್ದಪ್ಪ ಹಟ್ಟಿಯವರು ರೂ. ೫೦೧/- ಹಾಗೂ ಶ್ರೀ ಬಸವಣ್ಣೆಪ್ಪ ಕಲ್ಲೂರ ಸಾ. ಶಿರೋಳ ಇವರು ೫೦೧/- ರೂ. ಹೀಗೆ ಅನೇಕ  ಮಹನೀಯರು ನೀಡಿದ ದಾನದ ಫಲಕ ದೇವಾಲಯದಲ್ಲಿದೆ ಎಲ್ಲರೂ ಅಭಿನಂದ, ನಾರ್ಹರಾಗಿದ್ದಾರೆ.
ಶ್ರೀ ಸಾಲೇಶ್ವರ ದೇವಾಲಯದ ವಿನ್ಯಾಸ ದಕ್ಷಿಣೋತ್ತರಗಳಲ್ಲಿ ೧೦ ಫೂಟು,ಪೂರ್ವ ಪಶ್ಚಿಮ ೮ ಫೂಟು ಹೀಗೆ ೮೦ ಚದುರ ಅಡಿಗಳಲ್ಲಿರುವ ಗರ್ಭಗುಡಿಯಲ್ಲಿ ಮಧ್ಯದಲ್ಲಿ ಅತ್ಯಂತ ಸುಂದರವಾದ ಶ್ರೀ ಸಾಲೇಶ್ವರ (ಈಶ್ವರ ಲಿಂಗ) ನ ಪ್ರತಿಷ್ಠಾಪನೆಯಾಗಿದೆ. 

ಉತ್ತರ-ದಕ್ಷಿಣ ೧೮ ಅಡಿ, ಪೂರ್ವ ಪಶ್ಚಿಮ ೧೪ ಅಡಿ ಇರುವ ನಂದಿ ವಿಗ್ರಹದ ಮಂಟಪದಲ್ಲಿ ಆಕರ್ಷಣೀಯವಾದ ಜೀವಂತ ನಂದಿಯನ್ನು ಸ್ಥಾಪಿಸಲಾಗಿದೆ. ದಕ್ಷಿಣೋತ್ತರ ೧೮ ಅಡಿ ಹಾಗೂ ಪೂರ್ವ ಪಶ್ಚಿಮ ೧೨ ಅಡಿ ಇರುವ ಮಧ್ಯ ಮಂಟಪವಾಗಲಿ, ದಕ್ಷಿಣೋತ್ತರದ ೨೮ ಅಡಿಗಳು ಹಾಗೂ ಪೂರ್ವ ಪಶ್ಚಿಮ ೧೪ ಅಡಿಗಳಷ್ಟು ವಿಶಾಲವಾದ ಮುಖಮಂಟಪವಾಗಲಿ- ದೇವಾಲಯದ ಸೌಂದಯ್ಯವನ್ನು ವರ್ಧಿಸಿವೆ. ೮ ಅಡಿ ವ್ಯಾಸದ ೧೪ ಅಡಿ ಎತ್ತರದ ನೂರಾಹನ್ನೊಂದು ಕಳಶಗಳಿಂದ ಶೋಭಿಸುವ ಸಣ್ಣ ಗೋಪುರವು ಬರುವ ಭಕ್ತರಿಗೆ ದೇವಾಲಯಕ್ಕೆ ಕುಂದಣವನ್ನು ಜೋಡಿಸಿದಷ್ಟು ಸಾಂದವಾದ ಪರಿಣಾಮ ಬೀರುತ್ತಿದೆ. ಒಟ್ಟಾರೆ ಪೂರ್ವಪಶ್ಚಿಮಗಳಲ್ಲಿ ೫೬ ಅಡಿಗಳಷ್ಟು, ದಕ್ಷಿಣೋತ್ತರಗಳಲ್ಲಿ ೨೮ ಅಡಿಗಳಷ್ಟು ವಿಶಾಲವಾದ ಸ್ಥಳದಲ್ಲಿ ಪೂರ್ಣಗೊಂಡಿರುವ ದೇವಾಲಯವು ಅಡಿಪಾಯದಿಂದ ಗೋಪುರದ ತುದಿಯವರೆಗೂ ೫೧ ಅಡಿಗಳಷ್ಟು ಬೆಳೆದು ನಿಂತಿದೆ. ಗೋಪುರದ ತುದಿ ಮೇಲಾರದಿಂದ ಮೇಲೆ ೩೩.೫. ಅಡಿಗಳಷ್ಟಿದ್ದು, ಕೆಳಭಾಗ ೧೭ ಅಡಿಗಳಷ್ಟು ಇದ್ದು ೧೪ ಅಡಿಸುತ್ತಳತೆಯ ಗೋಪುರದ ದೇವಾಲಯ ಒಟ್ಟಾರೆ ಸರ್ವಾಂಗ ಸುಂದರವಾಗಿದೆ.

ಈ ದೇವಾಲಯದ ಕೆತ್ತನೆಯನ್ನು ಮಾಡಿದ ಶಿಲ್ಪಿಗಳು ಹಲವಾರು ಜನರು ಸುತ್ತಣ ಗೋಪುರ, ಮಂಟಪಗಳು, ಮಂಟಪದ ಸಣ್ಣ ಕಂಭಗಳು, ಕಂಬಗಳಿಗೊಂದೊಂದು ಕಳಶಗಳು ಹೀಗೆ ಆ ಕಲ್ಲು ಕಲ್ಲುಗಳು ಶಿಲ್ಪಿಯ ಹೆಸರನ್ನಡಗಿಸಿಕೊಂಡಿದ್ದರೂ ಕಲಾ ಕುಸುರಿಯನ್ನು ಸಾರುತ್ತಿವೆ. ದೇವಾಲಯದ ಮಧ್ಯ ಮಂಟಪದಿಂದ ಮುಖ ಮಂಟಪದ ವರೆಗಿನ ಭಾಗದ ಸ್ಥಪತಿಗಳು ಶ್ರೀಪಾದಪ್ಪ ಹಾಗೂ ಶ್ರೀ ರಾಮಣ್ಣ ಅಮರಗೋಳ ಎಂಬವರು. ಈ ಕೆತ್ತನೆ ಕಾರ್ ಅವರದೇ ಆಗಿದೆ. ಎಂದು ಹೇಳುವದುಂಟು ದೇವಾಲಯದ ಮುಖ ಮಂಟಪದಲ್ಲಿರುವ ಹಲವು ವಿಗ್ರಹಗಳಲ್ಲಿ ನರಸಿಂಹ ಹಾಗೂ ಉಗ್ರನರಸಿಂಹರ ಶಿಲ್ಪಗಳು ಕಣ್ಮನ ಸೆಳೆಯುವಂಥವುಗಳಾಗಿವೆ. ಮುಖ ಮಂಟಪದಲ್ಲಿ ಜೋಡಿ ಪಟ್ಟಿ ಕಂಬಗಳು ಅವಕ್ಕೆ ಸರಿದೊರೆಯಾಗಿರುವ ಗದ್ದುಗೆಗಳು, ಆನೆಯ ಸೊಂಡಿಯಿಂದ ಪ್ರಾರಂಭವಾಗುವ ಕಲಾ ವೈಭವ, ಆ ಜೋಡಿ ಆನೆಗಳ ಮಧ್ಯದಲ್ಲಿ ಶ್ರೀಕಾರವು ಉತ್ಪತ್ತಿಯಾಗಿರುವುದು ಕಲಾತ್ಮಕ ವಾಗಿದೆ. ಮತ್ತೊಂದು ಕಡೆಗೆ ಜೋಡಿ ಹಕ್ಕಿಗಳಿಂದ ಕುಸುರಿ ಕಲೆ ಪ್ರಾರಂಭವಾಗಿದ್ದು ಮಧ್ಯದಲ್ಲಿಯ ಓಂ ಎಂಬುದು ಓಂಕಾರವನ್ನು ಧ್ವನಿಸುತ್ತಿದೆ. ಮಧ್ಯದಲ್ಲಿ ಪರಮೇಶ್ವನ ಮೂರ್ತಿ ಅಕ್ಕ-ಪಕ್ಕಗಳಲ್ಲಿರುವ ಸಿಂಹಗಳು ಹಾಗೂ ಪುಟ್ಟ ಪ್ರಮಾಣದಲ್ಲಿರುವ ದ್ವಾರಪಾಲಕರು ನಿಂತಿದ್ದಾರೆ. ಅಲ್ಲಲ್ಲಿ ಕಲಾ ಪುಷ್ಪಗಳು, ಅರಳಿವೆ. ದೇವಾಲಯದ ಮೇಲ್ಗಡೆ ಛಾವಣಿಯ ಮೇಲೆ ಜೋಡಿ ಬಸವ ವಿಗ್ರಹಗಳ, ಶೋಭೆಯನ್ನು ತಂದಿವೆ. ಕಂಬಗಳಾಗಲಿ, ಗದ್ದುಗೆಗಳಾಗಲಿ. ಆನೆ ಸಿಂಹಗಳಾಗಲಿ ಮನ ಮೋಹಕವಾಗಿವೆ. ಆನೆ- ಸಿಂಹಗಳನ್ನು ಹರದೊಳ್ಳಿಯ ಶ್ರೀ ತಿಪ್ಪಣ್ಣ ಬಡಿಗೇರ ಇವರೇ ಸೃಷ್ಟಿಸಿದ ಕಲಾವಿದರಾಗಿದ್ದಾರೆಂದು ಹೇಳುವದುಂಟು. ಸುಮಾರು ೨೦೦ ವರ್ಷಗಳ ಇತಿಹಾಸವನ್ನು ಪಡೆದಿರುವ ಈ ಸಾಲೇಶ್ವರ ದೇವಾಲಯದ ಒಳಗೆ ಲಿಂಗ, ನಂದಿ, ಗಣೇಶ, ಪಾರ್ವತಿಯರು- ಈ ದೇವಾಲಯದ ಬಲಗಡೆಗೆ ವೀರಭದ್ರೇಶ್ವರರು ಸಾಕಾರ ರೂಪ ತಳೆದು ಕಣ್ಮನ ಸೆಳೆಯುತ್ತಿರುವದು ಗಮನಾರ್ಹ ಇದು ನಮ್ಮ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿದೆ.

ರಥೋತ್ಸವ 
ಗುಳೇದಗುಡ್ಡದ ಶ್ರೀ ಸಾಲೇಶ್ವರ ದೇವಾಲಯದ ರಥೋತ್ಸವವು ಪ್ರತಿ ವರ್ಷ ಭಾರತ ಹುಣ್ಣಿಮೆಯ ಮರುದಿನ ವಿಜೃಂಭಣೆಯಿಂದ ಜರುಗುತ್ತದೆ. ಈ ರಥೋತ್ಸವಕ್ಕೆ ಕೇವಲ ಗುಳೇದಗುಡ್ಡದವರಲ್ಲದೇ ಸುತ್ತ ಮುತ್ತಲಿನ ಗ್ರಾಮಸ್ಥರೂ ಪಟ್ಟಣದ ಜನರೂ ಆಗಮಿಸುತ್ತಾರೆ. ವರ್ಷಕ್ಕೊಮ್ಮೆ ಭಕ್ತಾದಿಗಳು ಬಂಧು-ಬಾಂಧವರು ಭಾವೈಕ್ಯತೆಯಿಂದ ಕೂಡಿ ಆಚರಿಸುವ ಜಾತ್ರೆಯಾಗಿದೆ. ಅವರಾತ್ರಿ ಅಮವಾಸ್ಯೆಯಂದು ತೇರಿನ ಮನೆಯಿಂದ ಹೊರತಂದ ರಥವನ್ನು ರಥೋತ್ಸವ ಮುಗಿದ ನಂತರ ಶಿವರಾತ್ರಿ ಅಮವಾಸ್ಯೆಗೆ ಮರಳಿ ತೇರಿನ ಮನೆ ಸೇರಿಸುವ ಪದ್ಧತಿ ರೂಢಿಯಲ್ಲಿದೆ. ದಕ್ಷಿಣೋತ್ತರವಾಗಿ ಹತ್ತು ಅಡಿ, ಪೂರ್ವ-ಪಶ್ಚಿಮ ೧೨ ಅಡಿಗಳಷ್ಟು ಉದ್ದಗಲವಿರುವ ೨೫ ಅಡಿ ಎತ್ತರವಿರುವ ೫.೫ ಅಡಿ ವ್ಯಾಸದ ೭ ಇಂಚಿನ ದಪ್ಪದ ಬೃಹತ್ ಗಾಲಿಗಳಿರುವ ಈ ರಥವೂ ಸಹ ಶ್ರೀ ತಿಪ್ಪಣ್ಣ ಬಡಿಗೇರ ದುರಸ್ತಿಗೊಂಡಿರುವ ರಥದ ಮುಂಭಾಗ-ಹಿಂಭಾಗಗಳಲ್ಲಿ ಎರಡೂ ಕಡೆಗಿರುವ ಸಿಂಹಗಳಿಂದ ಮಧ್ಯದಲ್ಲಿಯ ಆನೆ ಯಿಂದ ಸಾಲಂಕೃತಗೊಂಡಿದೆ. (ಭವ್ಯವಾಗಿದೆ) ರಥೋತ್ಸವದಲ್ಲಿ ಪಾಲ್ಗೊಳ್ಳುವದೇ ಒಂದು ಸಂಭ್ರಮ! ಇದೂ ಸಹ ಒಂದು ಸೇವೆಯೇ. ಶ್ರೀಶೈಲಪ್ಪ ಸಾರಂಗಿ, ಶ್ರೀ ಈಶ್ವರಪ್ಪ ರಾಜನಾಳ, ಶ್ರೀ ಆದಪ್ಪ ಮೆಗೆಣ್ಣಿ, ಶ್ರೀ ಶಿವಪ್ಪ ಸಂಗಪ್ಪ ಬಸುಪಟ್ಟದ ಮುಂತಾದ ಅನೇಕ ಹಿರಿಯರು ರಥೋತ್ಸವದಲ್ಲಿ ಸಕ್ರಿಯರಾಗಿ ಶ್ರದ್ಧೆಯಿಂದ ಪಾಲ್ಗೊಂಡದ್ದೇ ಒಂದು ಆದರ್ಶ. ಇಂದಿಗೂ ಇಂಥ ಅನೇಕ ಹಿರಿಯರು ನಮಗೆ ಮಾದರಿಯಾಗಿದ್ದಾರೆ.
ರಥೋತ್ಸವದ ಸಂದರ್ಭದಲ್ಲಿ ಶ್ರೀ ದೊಡಮನಿ, ಶ್ರೀ ಭಾವಿ, ಶ್ರೀ ಉಂಕಿ, ಶ್ರೀ ಸಂಗನಬಸವೇಶ್ವರ (ಎಸ್. ಆರ್. ಗೌಡ್ರ), ಶ್ರೀ ರಾಜನಾಳ, ಶ್ರೀ ಸಿಂದಗಿ- ಹೀಗೆ ಆಯಾ ಹೆಸರಿನ ನಾಟ್ಯ ಸಂಘಗಳು ಹೊಸಪೇಟೆಯಲ್ಲಿ ನಾಟಕಗಳನ್ನು ಆಡುವದರ ಜೊತೆಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರ್ವಹಿಸುವದು ಸ್ವಾಗತಾರ್ಹವಾಗಿದೆ. ಜಾತ್ರೆಯ ೫ ದಿನಗಳೂ ನೈವೇದ್ಯ, ಕಾಯಿ, ಕರ್ಪುರಗಳೊಂದಿಗೆ ಹಬ್ಬದ ಸಡಗರ ಸಂಭ್ರಮಗಳು ವಿಜೃಂಭಿಸುತ್ತಿರುತ್ತವೆ.

ಒಟ್ಟಾರೆ ನಮ್ಮ ಜನರು ಭಾವನಾ ಜೀವಿಗಳು ನೇಕಾರಿಕೆ ಇಲ್ಲಿಯ ಮೂಲ ವೃತ್ತಿಯಾದರೂ ಬೇಸಾಯ ಮುಂತಾದ ಇತರ ವೃತ್ತಿಗಳೂ ಸಹ ಇಲ್ಲವೆಂದು ಹೇಳುವಂತಿಲ್ಲ. ಸದಾ ದುಡಿಮೆಗೆ ಮಹತ್ವ ನೀಡಿದ ನಮ್ಮ ಸಮುದಾಯ ಇಂದಿಗೂ ಭಾರತೀಯ ಸಾಂಸ್ಕೃತಿಯನ್ನು ಪರಂಪರೆಯನ್ನುಳಿಸಿಕೊಂಡಿದೆ. ಸಮನ್ವಯ ಸಂಸ್ಕೃತಿ ನಮ್ಮ ವೈಲಕ್ಷಣ್ಯವಾಗಿದೆ.

  • ಶ್ರೀ ನೀಲಕಂಠೇಶ್ವರ ದೇವಾಲಯ
  • ಶ್ರೀ ಸಂಗನಬಸವೇಶ್ವರ ದೇವಾಲಯ
  • ಹರದೊಳ್ಳಿ ಹನುಮಂತನ ದೇವಾಲಯ
  • ಬಾಲಾಜಿ ಮಂದಿರ
  • ಶ್ರೀ ಗಣೇಶ ದೇವಾಲಯ
  • ಶ್ರೀ ಕಾಳಿಕಾದೇವಿ ದೇವಸ್ಥಾನ
  • ಹಾದಿ ಬಸವೇಶ್ವರ ದೇವಸ್ಥಾನ
  • ಶ್ರೀ ಜಗನ್ನಾಥ ಮಂದಿರ
  • ಶ್ರೀ ಗುರುಸಿದ್ದೇಶ್ವರ ಮಠದ ಇತಿಹಾಸ ಶ್ರೀ ಮಠದ ಪರಂಪರೆ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠವು ಕ್ರಾಂತಿಕಾರಿ ವೈಚಾರಿಕ ತತ್ವಾಧಾರದ ಮೇಲೆ ಸ್ಥಾಪಿತವಾದ ಮಠಗಳಲ್ಲೊಂದಾಗಿದೆ. ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯದ ಸರ್ವ ಸಮಾನತೆಯ ಸಂಕೇತವಾಗಿ ಕಟ್ಟಿದ ಮಠವಾಗಿದೆ. ಹಿಂದೂ ಧರ್ಮದಲ್ಲಿರುವ ಶ್ರೇಣೀಕೃತ ವ್ಯವಸ್ಥೆಯು ವೀರಶೈವ ಲಿಂಗಾಯತ ಧರ್ಮದಲ್ಲಿಯೂ ಇರುವ ತಾರತಮ್ಯವನ್ನು ವ್ಯವಸ್ಥೆಯನ್ನು ವಿರೋಧಿಸಿ, ನಿವಾರಿಸಿ ಶರಣಧರ್ಮಕ್ಕನುಗುಣವಾಗಿ ಸಮಾನತೆ, ಸಮನ್ವಯ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಕ್ಕನುಗುಣವಾದ ಆಶಯಗಳನ್ನು ಕ್ರಿಯಾಶೀಲಗೊಳಿಸಿ ಧರ್ಮ- ದೇವರ ಹೆಸರಿನಲ್ಲಿ ಒಡೆದಾಳುವ ನೀತಿಯನ್ನು ಖಂಡಿಸಿ, ಮಾನವೀಯ ಮೌಲ್ಯಗಳನ್ನು ನೈಜ ಧರ್ಮಧಾರಿತವಾದ ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಸದುದ್ದೇಶದ ಸಾಮಾಜಿಕ ನ್ಯಾಯ ಗಮನಿಸಿ 20ನೇ ಶತಮಾನದ ಆದಿಭಾಗದಲ್ಲಿ ಅಕ್ಕಲಕೋಟೆಯ ಶಿವಯೋಗಿ ಶ್ರೀ ರೇವಣಸಿದ್ದ ಶಿವಶರಣರ ಹೋರಾಟದ ಫಲವಾಗಿ ಈ ಶ್ರೀಮಠ ಹುಟ್ಟಿಕೊಂಡಿದೆ. ಆದ್ಯ ವಚನಕಾರ ದೇವರ ದಾಸಿಮಯ್ಯನವರ ಸುತನಾದ ಏಕೋರಾಮನು ಕೇದಾರ ಪೀಠದ ಮೊದಲ ಜಗದ್ಗುರುವಾಗಿದ್ದರಿಂದ, ಸಪ್ತ ಸಾಲಿಗಳಲ್ಲಿ ಪ್ರಥಮಸಾಲಿ ಪಟ್ಟಸಾಲಿ ನೇಕಾರ ಪರಂಪರೆಯವರು ಪೀಠಾದಿಪತಿಗಳಾಗಲು ಅರ್ಹರೆಂಬ ಮಾನದಂಡವನ್ನಿಟ್ಟುಕೊಂಡು, ಪುರಾಣಾಗಮ ಇತಿಹಾಸವನು ಲಕ್ಷಿಸಿ, ಸ್ವತಂತ್ರವಾದ ಗುರುಪೀಠವನ್ನು 1937 ಡಿಸೆಂಬರ 27 ರಂದು 'ವೈಯಾಕರಣಕೇಸರಿ' ಬಿರುದಾಂಕಿತ ವೇದಾಂತ ಶಾಸ್ತ್ರ, ತರ್ಕ, ನ್ಯಾಯ ಪಂಡಿತ ವರೇಣ್ಯರಾದ ಪೂಜ್ಯ ಶ್ರೀ ಗುರುಸಿದ್ದ ದೇವರನ್ನು ಪಟ್ಟಾಭಿಷೇಕ್ತರನ್ನಾಗಿ ಮಾಡಿ, ಶ್ರೀಮದ್ ಹಿಮವತ್ಕೇದಾರ ವೈರಾಗ್ಯ ಸಿಂಹಾಸನಾಧೀಶ ಏಕೋರಾಮ ಕರಕಮಲ ಸಂಜಾತ ಶ್ರೀ 1008 ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಮಹಾಸ್ವಾಮಿಗಳೆಂಬ ನಾಮಧೇಯದಿಂದ ಅನೇಕ ಗುರುವಿರಕ್ತಪೂಜ್ಯರ ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪೀಠಾಧಿಪತಿಗಳೆಂದು ಘೋಷಿಸಿ, ಜಯಘೋಷಮಾಡಿ ಚಾರಿತ್ರಿಕ ಘಟನೆಯನ್ನಾಗಿ ಪುರಸ್ಕರಿಸಿದರು. ಬಯಲಲ್ಲಿ ಪಟ್ಟಾಭಿಷಿಕ್ತರಾದ ಪೂಜ್ಯರು ತಮ್ಮ ಪಾಂಡಿತ್ಯ, ಪೂಜಾಫಲ, ತಪಃಶಕ್ತಿಯಿಂದ ಸಮಾಜೋಧಾರ್ಮಿಕ ಶೈಕ್ಷಣಿಕ ಸೇವೆಗಳನ್ನು ಅಹೋರಾತ್ರಿ ಕೈಗೊಂಡು, ತಮ್ಮ ಕಾಲದ ಕರ್ನಾಟಕದ ಪ್ರಮುಖ ಮಠಾದಿಪತಿಗಳಿಗೆ ತಾವು ಸ್ಥಾಪಿಸಿದ ಪಾಠಶಾಲೆ ಹಾಗೂ ಸಂಚಾರಿ ಸಂಸ್ಕೃತ ಪಾಠಶಾಲೆಯ ಮೂಲಕ ಉಚಿತ ಶಿಕ್ಷಣ ನೀಡಿದ ಶಿಕ್ಷಣಪ್ರೇಮಿ ಶ್ರೀ ಇವರು. ಕಾಶೀ ವಿಶ್ವವಿದ್ಯಾಲಯದ ಸ್ಥಾಪಕರಾದ ಪಂಡಿತ ಮದನ ಮೋಹನ ಮಾಲವೀಯವರಿಂದ 'ವೈಯಾಕರಣ ಕೇಸರಿ' ಬಿರುದು ಪಡೆದ ಕಾಶೀ ಪಂಡಿತರಾದರೂ ಕೂಡಾ, ವೈಚಾರಿಕ ನಿಲುವನ್ನು ಹೊಂದಿದವರಾಗಿ ಅಂಧಃಶೃದ್ದೆ, ಕಂದಾಚಾರ, ಮೌಡ್ಯಗಳಿಗೆ ತಡೆಯೊಡ್ಡಿ ಜನರನ್ನು ಸದಾಚಾರ, ಸದ್ಗುಣ ಸಹಿತ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ನಡೆಯುವಂತೆ ಪ್ರೇರೇಪಿಸುವ ಪಾವನಮೂರ್ತಿಗಳಾಗಿದ್ದರು. ಈ ಮಾನವತಾಧರ್ಮ ಗಟ್ಟಿಯಾಗಲು ಜನ ಮೊದಲು ಸುಶಿಕ್ಷಿತರಾಗಬೇಕೆಂದು ಅರಿತು ಅದಕ್ಕಾಗಿ ಶ್ರೀ ಜಗದ್ಗುರು ಗುರುಸಿದ್ದೇಶ್ವರ ವಿದ್ಯಾವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಜಾತಿ, ಮತ, ಪಂಥ ಹಾಗೂ ಧರ್ಮಗಳ ಭೇದವೆನಿಸದೆ ಎಲ್ಲರಿಗೂ ಸಮಾನವಕಾಶವನ್ನಿತ್ತು, ಎಲ್ಲ ಸೌಲಭ್ಯ ಸಹಿತ ಉಚಿತ ಶಿಕ್ಷಣ ಹಾಗೂ ಸಂಸ್ಕೃತಿ, ಸಂಸ್ಕಾರಗಳನ್ನು ಧಾರೆಯೆರೆದರು. ನಿರ್ಗತಿಕರ, ನಿರ್ಲಕ್ಷಿತ, ಬಿದ್ದವರ, ಬಡ ಹಿಂದುಳಿದ ದಲಿತರ ಧ್ವನಿಯಾಗಿ ಸೇವೆಗೈವ ಸುಮಾರು 20 ಅಂಗಸಂಸ್ಥೆಗಳನ್ನು ನೆಲೆಗೊಳಿಸಿದರು. ಹಲವು ಹಂತದ ಹತ್ತಾರು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಧರ್ಮ, ಆಧ್ಯಾತ್ಮ ನೀತಿ, ಸಂಸ್ಕೃತಿಗೆ ಒತ್ತು ಕೊಟ್ಟು ಜನಮನವನ್ನು ಹಸನುಗೊಳಿಸಿದ ಮಹಾತ್ಮರಿವರು. ಪಾವನ ಮೂರ್ತಿಗಳಾಗಿ ಮಹಿಳೆಯರ, ಮಕ್ಕಳ ಹಾಗೂ ಪರಮ ನಿರಂಜನರಾಗಿ ಮಹಾನ್ ತಪಸ್ವಿಗಳಾಗಿ ಪೀಠವನ್ನು ಪ್ರವರ್ಧನಗೊಳಿಸಿ ನೂರೊಂದು ಸಂವತ್ಸರಗಳ ತುಂಬುಬಾಳನ್ನು ಸಾರ್ಥಕ ಗೊಳಿಸಿಕೊಂಡು ಭಕ್ತರ ಕಾಮಧೇನುವಾಗಿ ಹೃನ್ಮಂದಿರಗಳಲ್ಲಿ ಸ್ಥಿರವಾಗಿ ನೆಲೆಸಿ ಮಾರ್ಗೇಶ್ವರ ವಧಿ ಅಷ್ಟಮಿಯಂದು ಬಯಲಲ್ಲಿ ಬಯಲಾಗಿ ಶೂನ್ಯ ಸಂಪಾದನೆಯನ್ನು ಹೊಂದಿದವರಾದರು. ಅವರ ಪುಣ್ಯ ಸ್ಮರಣೆಯನ್ನು ಪೀಠವು 'ಶರಣ ಸಂಗಮ ಸಮಾರಂಭ' ವೆಂಬ ಅಭಿದಾನದಿಂದ ಧರ್ಮ, ಆಧ್ಯಾತ್ಮ, ಕಲೆ, ಸಾಹಿತ್ಯ ಸಂಸ್ಕೃತಿಗಳ ಸಂಗಮವಾಗಿ ಸಹಿಷ್ಣುತೆಯು ಸರ್ವರ ಜೀವನಕ್ಕೂ ಸಂಜೀವಿನಿಯಾಗುವಂತೆ ಅಖಂಡ ಮೂವತ್ತೇಳು ವರ್ಷಗಳಿಂದ ವೈವಿಧ್ಯಮಯವಾಗಿ ಆಚರಿಸಿ ಮೂವತ್ತೆಂಟನೆಯ ಸಮಾರಂಭ ನೆರವೇರುತ್ತಿದೆ. ಸಮಸ್ತ ಮಾನವ ಕಲ್ಯಾಣದ ಗುರಿ ಹೊಂದಿದ ಪಟ್ಟಸಾಲಿ ನೇಕಾರ ಗುರುಪೀಠದ ಸಾಂಕೇತಿಕವಾದ ಈ ಸಮಾರಂಭ ವಿಶೇಷವಾದುದು.

ಉಲ್ಲೇಖ

[ಬದಲಾಯಿಸಿ]

??

  • ವರ್ಗ??


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: