ಉಪ್ಪಿಟ್ಟು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಉಪ್ಪಿಟ್ಟು

ಉಪ್ಪಿಟ್ಟು ಅಥವಾ ಖಾರಾಭಾತ್ ದಕ್ಷಿಣ ಭಾರತದ ಒಂದು ದಿನ ನಿತ್ಯದ ತಿನಿಸು. ಇತರ ಭಾಷೆಗಳಲ್ಲಿ ಇದನ್ನು "ಉಪ್ಮ" ಎಂದೂ ಕರೆಯಲಾಗುತ್ತದೆ.

ತಯಾರಿಸುವ ವಿಧಾನ[ಬದಲಾಯಿಸಿ]

 • ಸಾಮಾಗ್ರಿಗಳು:
 1. ರವೆ - ೧ ಬಟ್ಟಲು
 2. ಎಣ್ಣೆ - ಒಗ್ಗರಣೆಗೆ ತಕ್ಕಷ್ಟು
 3. ತರಕಾರಿ - ಒಂದು ಅಥವಾ ಮಿಶ್ರ ತರಕಾರಿ ಬಳಸಬಹುದು
 4. ಸಾಸಿವೆ - ಒಗ್ಗರಣೆಗೆ ತಕ್ಕಷ್ಟು
 5. ಕಡಲೆ ಬೇಳೆ - ಒಗ್ಗರಣೆಗೆ ತಕ್ಕಷ್ಟು
 6. ಉದ್ದಿನ ಬೇಳೆ - ಒಗ್ಗರಣೆಗೆ ತಕ್ಕಷ್ಟು
 7. ನೀರು - ೨ ಬಟ್ಟಲು
 8. ಉಪ್ಪು - ರುಚಿಗೆ ತಕ್ಕಷ್ಟು
 9. ನಿ೦ಬೆಹಣ್ಣು - ೧
 10. ಹಸಿಮೆಣಸಿನಕಾಯಿ - ೨-೪ (ಖಾರದ ಮೇಲೆ ಅವಲಂಬಿಸಿರುತ್ತದೆ)
 • ತಯಾರಿಸುವ ವಿಧಾನ:
 1. ರವೆಯನ್ನು ಒಂದು ಬಾಣಲೆಯಲ್ಲಿ ಹುರಿದುಕೊಳ್ಳಿ.
 2. ಅದೇ ಬಾಣಲೆಗೆ ಎಣ್ಣೆ ಹಾಕಿ, ಅದು ಕಾದಮೇಲೆ ಸಾಸಿವೆ, ಕಡಲೆಬೇಲೆ, ಉದ್ದಿನ ಬೇಳೆ, (ಬೇಕಾದರೆ ೧ ಚಿಟಿಕೆ ಅರಿಶಿನ) ಹಾಕಿ.
 3. ಹೆಚ್ಚಿ ತೊಳೆದುಕೊಂಡ ತರಕಾರಿ- ಮೆಣಸಿನಕಾಯಿ ಗಳನ್ನು ಬಾಣಲೆಗೆ ಹಾಕಿ ಚೆನ್ನಾಗಿ ಬಾಡಿಸಿ.
 4. ನಂತರ ಬಾಣಲೆಗೆ ನೀರನ್ನು ಹಾಕಿ, ತರಕಾರಿಯನ್ನು ಬೇಯಿಸಿ.
 5. ತರಕಾರಿ ಬೆಂದ ನಂತರ ಉಪ್ಪನ್ನು ರುಚಿಗೆ ತಕ್ಕಷ್ಟು ಹಾಕಿ, ಕಲಕಿ.
 6. ನಂತರ ಹುರಿದ ರವೆಯನ್ನು ಹಾಕಿ, ಚೆನ್ನಾಗಿ ಕೆದಕಿ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಿ.
 7. ನಿ೦ಬೆಹಣ್ಣಿನ ರಸವನ್ನು ಹಿ೦ಡಿ ಚನ್ನಾಗಿ ಕಲಸಿರಿ

ನಂತರ ಚಟ್ನಿಯೊಂದಿಗೆ ಬಡಿಸಿ.