ಉಪ್ಪಿಟ್ಟು
ಗೋಚರ
ಉಪ್ಪಿಟ್ಟು ಅಥವಾ ಉಪ್ಮಾ ಭಾರತೀಯ ಒಂದು ದಿನ ನಿತ್ಯದ ತಿನಿಸು. ಈ ಖಾದ್ಯವನ್ನು ಮುಖ್ಯವಾಗಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಮತ್ತು ಶ್ರೀಲಂಕಾದಲ್ಲಿ ತಯಾರಿಸಲಾಗುತ್ತದೆ.ವಿವಿಧ ಮಸಾಲೆಗಳು ಮತ್ತು/ ತರಕಾರಿಗಳನ್ನು ಸಾಮಾನ್ಯವಾಗಿ ಅಡುಗೆ ಸಮಯದಲ್ಲಿ ಸೇರಿಸಲಾಗುತ್ತದೆ, ಇದು ವೈಯಕ್ತಿಕ ಆದ್ಯತೆಗಳನ್ನು ಅವಲಂಬಿಸಿರುತ್ತದೆ.ಇಂದು ಇದು ಭಾರತದ ಬಹುತೇಕ ಭಾಗಗಳಲ್ಲಿ ಜನಪ್ರಿಯವಾಗಿದೆ ಮತ್ತು ವಿವಿಧ ರೀತಿಯಲ್ಲಿ ತಯಾರಿಸಲಾಗುತ್ತದೆ.
ತಯಾರಿಸುವ ವಿಧಾನ
[ಬದಲಾಯಿಸಿ]- ಸಾಮಾಗ್ರಿಗಳು:
- ರವೆ - ೧ ಬಟ್ಟಲು
- ಎಣ್ಣೆ - ಒಗ್ಗರಣೆಗೆ ತಕ್ಕಷ್ಟು
- ತರಕಾರಿ - ಒಂದು ಅಥವಾ ಮಿಶ್ರ ತರಕಾರಿ ಬಳಸಬಹುದು
- ಸಾಸಿವೆ - ಒಗ್ಗರಣೆಗೆ ತಕ್ಕಷ್ಟು
- ಕಡಲೆ ಬೇಳೆ - ಒಗ್ಗರಣೆಗೆ ತಕ್ಕಷ್ಟು
- ಉದ್ದಿನ ಬೇಳೆ - ಒಗ್ಗರಣೆಗೆ ತಕ್ಕಷ್ಟು
- ನೀರು - ೨ ಬಟ್ಟಲು
- ಉಪ್ಪು - ರುಚಿಗೆ ತಕ್ಕಷ್ಟು
- ನಿ೦ಬೆಹಣ್ಣು - ೧
- ಹಸಿಮೆಣಸಿನಕಾಯಿ - ೨-೪ (ಖಾರದ ಮೇಲೆ ಅವಲಂಬಿಸಿರುತ್ತದೆ)
- ತಯಾರಿಸುವ ವಿಧಾನ:
- ರವೆಯನ್ನು ಒಂದು ಬಾಣಲೆಯಲ್ಲಿ ಹುರಿದುಕೊಳ್ಳಿ.
- ಅದೇ ಬಾಣಲೆಗೆ ಎಣ್ಣೆ ಹಾಕಿ, ಅದು ಕಾದಮೇಲೆ ಸಾಸಿವೆ, ಕಡಲೆಬೇಲೆ, ಉದ್ದಿನ ಬೇಳೆ, (ಬೇಕಾದರೆ ೧ ಚಿಟಿಕೆ ಅರಿಶಿನ) ಹಾಕಿ.
- ಹೆಚ್ಚಿ ತೊಳೆದುಕೊಂಡ ತರಕಾರಿ- ಮೆಣಸಿನಕಾಯಿ ಗಳನ್ನು ಬಾಣಲೆಗೆ ಹಾಕಿ ಚೆನ್ನಾಗಿ ಬಾಡಿಸಿ.
- ನಂತರ ಬಾಣಲೆಗೆ ನೀರನ್ನು ಹಾಕಿ, ತರಕಾರಿಯನ್ನು ಬೇಯಿಸಿ.
- ತರಕಾರಿ ಬೆಂದ ನಂತರ ಉಪ್ಪನ್ನು ರುಚಿಗೆ ತಕ್ಕಷ್ಟು ಹಾಕಿ, ಕಲಕಿ.
- ನಂತರ ಹುರಿದ ರವೆಯನ್ನು ಹಾಕಿ, ಚೆನ್ನಾಗಿ ಕೆದಕಿ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಿ.
- ನಿ೦ಬೆಹಣ್ಣಿನ ರಸವನ್ನು ಹಿ೦ಡಿ ಚನ್ನಾಗಿ ಕಲಸಿರಿ
ನಂತರ ಚಟ್ನಿಯೊಂದಿಗೆ ಬಡಿಸಿ.
Upma ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.