ಮೀಟರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಐತಿಹಾಸಿಕವಾಗಿ ಮೀಟರ್‍ನ ಅಳತೆಯನ್ನು ಸೂಚಿಸುತ್ತಿದ್ದ ಪ್ಲಾಟಿನಮ್-ಇರಿಡಿಯಮ್ ಲೋಹದ ಪಟ್ಟಿ

ಮೀಟರ್ ಎಂಬುದು ಅಂತರರಾಷ್ಟ್ರೀಯ ಮಾಪನ ಪ್ರಮಾಣ ಪದ್ಧತಿಯಲ್ಲಿ (en:SI units) ಉದ್ದದ ಅಳತೆಯ ಮೂಲ ಪ್ರಮಾಣ. ಐತಿಹಾಸಿಕವಾಗಿ ಇದು ಭೂಮಿಯ ಸಮಭಾಜಕ ವೃತ್ತದಿಂದ ಉತ್ತರ ಧ್ರುವದ ವರೆಗಿನ ದೂರದ ೧೦ ಮಿಲಿಯನ್ರ ಒಂದು ಭಾಗವಾಗಿ ನಿರ್ಧಾರಿತವಾಯಿತು. ಈ ಅಳತೆಯನ್ನು ಫ್ರಾನ್ಸ್ನ ವಿಜ್ಞಾನ ಪರಿಷತ್ತಿನಲ್ಲಿ ಒಂದು ಪ್ಲಾಟಿನಮ್-ಇರಿಡಿಯಮ್ ಲೋಹದ ಪಟ್ಟಿಯ ಮೇಲೆ ಎರಡು ಗೆರೆಗಳಿಂದ ಸೂಚಿತವಾಗಿತ್ತು. ಈಗ ತೂಕ ಮತ್ತು ಅಳತೆಗಳ ಅಂತರರಾಷ್ಟ್ರೀಯ ಪ್ರಾಧಿಕಾರವು ಈ ಅಳತೆಯನ್ನು ಬೆಳಕು ಒಂದು ಕ್ಷಣದ ೨೯೯,೭೯೨,೪೫೮ನೇ ಭಾಗದಲ್ಲಿ ಚಲಿಸುವ ದೂರವಾಗಿ ನಿರ್ದಿಷ್ಟ ಮಾಡಿದೆ.

SI ಪದ್ಧತಿಯಲ್ಲಿ ಮೀಟರ್ ಆಧಾರಿತ ಇತರ ಮಾಪನಗಳು[ಬದಲಾಯಿಸಿ]

SI ಪದ್ಧತಿಯ ಪ್ರಕಾರ ಮೂಲ ಮಾಪನಗಳ ದಶಕಾಂಶಗಳನ್ನು ಇತರ ಮಾಪನಗಳಾಗಿ ಉಪಯೋಗಿಸಲ್ಪಡುತ್ತವೆ. ಈ ರೀತಿಯ ಮಾಪನಗಳ ಪಟ್ಟಿ ಕೆಳಗಿದೆ. ಪ್ರಮುಖ ಮಾಪನಗಳನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸಲಾಗಿದೆ.[೧]

ದಶಕಾಂಶ ಹೆಸರು ಚಿಹ್ನೆ ದಶಕಾಂಶ ಹೆಸರು ಚಿಹ್ನೆ
10−1 ಡೆಸಿಮೀಟರ್ dm 101 ಡೆಸಿಮೀಟರ್ dam
10−2 ಸೆಂಟಿಮೀಟರ್ cm 102 ಹೆಕ್ಟೋಮೀಟರ್ hm
10−3 ಮಿಲಿಮೀಟರ್' mm 103 ಕಿಲೋಮೀಟರ್ km
10−6 ಮೈಕ್ರೋಮೀಟರ್ µm 106 ಮೆಗಾಮೀಟರ್ Mm
10−9 ನ್ಯಾನೋಮೀಟರ್ nm 109 ಗಿಗಾಮೀಟರ್ Gm
10−12 ಪಿಕೋಮೀಟರ್ pm 1012 ಟೆರಾಮೀಟರ್ Tm
10−15 ಫೆಮ್ಟೋಮೀಟರ್ (fermi) fm 1015 ಪೇಟಾಮೀಟರ್ Pm
10−18 ಅಟ್ಟೋಮೀಟರ್ am 1018 ಎಕ್ಸಾಮೀಟರ್ Em
10−21 ಝೆಪ್ಟೋಮೀಟರ್ zm 1021 ಜೆಟ್ಟಾಮೀಟರ್ Zm
10−24 ಯೊಕ್ಟೋಮೀಟರ್ ym 1024 ಯೊಟ್ಟಾ ಮೀಟರ್ Ym
  1. The term “most commonly used” is based on those with more than 5 million Google hits on the American spelling.
"http://kn.wikipedia.org/w/index.php?title=ಮೀಟರ್&oldid=323331" ಇಂದ ಪಡೆಯಲ್ಪಟ್ಟಿದೆ