ಮುಧೋಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಮುಧೋಳ
India-locator-map-blank.svg
Red pog.svg
ಮುಧೋಳ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಾಗಲಕೋಟೆ
ನಿರ್ದೇಶಾಂಕಗಳು 16.35° N 75.2833° E
ವಿಸ್ತಾರ
 - ಎತ್ತರ
8.49 km²
 - 548 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
42461
 - 5001.29/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 587 313
 - +08350
 - KA-48
ಅಂತರ್ಜಾಲ ತಾಣ: https://www.nammamudhol.com

ಮುಧೋಳ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಬಾಗಲಕೋಟೆ ಜಿಲ್ಲೆಯಲ್ಲಿರುವ ಒಂದು ತಾಲೂಕು ಕೇಂದ್ರ. ಇದು ಬಾಗಲಕೋಟೆ ನಗರದಿಂದ ಸುಮಾರು ೫೦ ಕಿ.ಮಿ ದೂರದಲ್ಲಿದ್ದು, ಘಟಪ್ರಭ ನದಿಯ ತೀರದಲ್ಲಿದೆ. ಸ್ಥಳೀಯ 'ಮುಧೋಳ ಹೊಂಡ' ಎಂಬ ನಾಯಿಯ ತಳಿಯು ಪ್ರಸಿದ್ಧಿ ಪಡೆದಿದೆ. ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಮತ್ತು ಇಂಡಿಯನ್ ನ್ಯಾಶನಲ್ ಕೆನಲ್ ಕ್ಲಬ್ (ಐಎನ್ಕೆಸಿ) ಈ ತಳಿಯನ್ನು ವಿಭಿನ್ನ ತಳಿಯ ಹೆಸರಿನಲ್ಲಿ ಗುರುತಿಸುತ್ತವೆ. KCI ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸುತ್ತದೆ. ಆದರೆ ಭಾರತೀಯ ರಾಷ್ಟ್ರೀಯ ಕೆನಲ್ ಕ್ಲಬ್ಬು ಮುಧೋಳ ಹೌಂಡ್ಎಂಬ ಹೆಸರಿನೊಂದಿಗೆ ಗುರುತಿಸಿದೆ. ನಾಯಿಯ ಈ ತಳಿಯನ್ನು German shepherd ಅಥವಾ ಸ್ವಿಸ್ ನಾಯಿಯ ಬದಲು ಭಾರತೀಯ ಸೈನ್ಯದಲ್ಲಿ ಕಾಣಬಹುದಾಗಿದೆ. ಮುಧೋಳ ಕನ್ನಡ ಸಂಸ್ಕೃತಿಯ ಒಂದು ಮುಖ್ಯ ತಾಣ. ಹಳೆಗನ್ನಡದ ಹೆಸರಾಂತ ಮಹಾನ್ ಕವಿ ಚಕ್ರವರ್ತಿ ರನ್ನ ಜನಿಸಿದ ಊರು ಈ ಮುಧೋಳ್ ತಾಲೂಕಿನ ಬೆಳಗಲಿ ಎಂಬ ಗ್ರಾಮ. ಇಗಲೂ ಈ ಗ್ರಾಮ ರನ್ನಬೆಳಗಲಿ ಎಂದೇ ಹೆಸರಾಗಿದೆ.

ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ಖ್ಯಾತಿಪಡೆದಿರುವ ತುಮಕೂರಿನ ಸಿದ್ಧಗಂಗೆಯ ಡಾ ಶಿವಕುಮಾರ ಸ್ವಾಮೀಜಿಯ ಪ್ರೇರಣೆಯೊಂದಿಗೆ ಜನಹಿತ ಟ್ರಸ್ಟ್ (SKRS) ಅನ್ನ, ಅಕ್ಷರ, ಆರೋಗ್ಯ, ಪರಿಸರ ಕ್ಷೇತ್ರದಲ್ಲಿ ಅವಿರತವಾಗಿ ಶ್ರಮಿಸುತ್ತಿದೆ. ಉಚಿತ ಆರೋಗ್ಯ ಚಿಕಿತ್ಸೆ, ಉಚಿತ ಯೋಗ ತರಬೇತಿ, ಉಚಿತ ಸ್ಪರ್ಧಾತ್ಮಕ ತರಬೇತಿ, ಮಾದರಿ ಪರೀಕ್ಷೆಗಳು, ಜನಹಿತಕ್ಕಾಗಿ ವನಮಹೋತ್ಸವ, ಉಸಿರುಹಂಚೋಣ ಅಭಿಯಾನ, 236 ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯುಟರ್ ತರಬೇತಿ, ಪ್ರತಿವರ್ಷ 75 ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಹೀಗೆ ಹತ್ತು ಹಲವು ಸೇವಾಪ್ರಕಲ್ಪಗಳ ಮೂಲಕವಾಗಿ ಜನಕಲ್ಯಾಣಕ್ಕೆ ಕಟಿಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ.

"https://kn.wikipedia.org/w/index.php?title=ಮುಧೋಳ&oldid=1026863" ಇಂದ ಪಡೆಯಲ್ಪಟ್ಟಿದೆ