ವಿಷಯಕ್ಕೆ ಹೋಗು

ಬಜ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಜ್ಜಿ ಅಥವಾ ಭಜಿ ಹಲವು ವಿಧಗಳನ್ನು ಹೊಂದಿರುವ, ಫ್ರಿಟರ್ಅನ್ನು ಹೋಲುವ ಒಂದು ಖಾರದ ಭಾರತೀಯ ತಿನಿಸು. ಭಾರತೀಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ಹೊರಗೆ ಇಂತಹ ತಯಾರಿಕೆಗಳನ್ನು ಹಲವುವೇಳೆ ಪಕೋಡಾ ಎಂದು ಕರೆಯಲಾಗುತ್ತದೆ. ಅದನ್ನು ಸಾಮಾನ್ಯವಾಗಿ ವಿವಿಧ ಭಾರತೀಯ ಉಟಗಳ ಜೊತೆ ಮೇಲ್ತಿನಿಸಾಗಿ ಬಡಿಸಲಾಗುತ್ತದೆ, ಆದರೆ ಒಂಟಿಯಾಗಿ ಲಘು ಆಹಾರವಾಗಿ ತಿನ್ನುವಷ್ಟು ಜನಪ್ರಿಯವಾಗಿದೆ. ಇದು ಒಂದು ಜನಪ್ರಿಯ ಬೀದಿ ಆಹಾರವಾಗಿದೆ ಮತ್ತು ಹೆದ್ದಾರಿಗಳ ಢಾಬಾಗಳಲ್ಲಿ ಮಾರಾಟಕ್ಕೆ ಕಾಣಸಿಗುತ್ತದೆ.

"https://kn.wikipedia.org/w/index.php?title=ಬಜ್ಜಿ&oldid=1174508" ಇಂದ ಪಡೆಯಲ್ಪಟ್ಟಿದೆ