ಚಪಾತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Chapatiroll.jpg

ಚಪಾತಿಯು ಭಾರತೀಯ ಉಪಖಂಡದ ಒಂದು ಬಗೆಯ ಉಬ್ಬಿರದ ಚಪ್ಪಟೆ ರೊಟ್ಟಿ. ಇದರ ರೂಪಾಂತರಗಳು ತುರ್ಕ್‌ಮೇನಿಸ್ತಾನ್, ಯೂಗ್ಯಾಂಡಾ, ಕೀನ್ಯಾ ಮತ್ತು ಟಾಂಜಾನೀಯಾವನ್ನು ಒಳಗೊಂಡಂತೆ ಪೂರ್ವ ಆಫ್ರಿಕಾದ ರಾಷ್ಟ್ರಗಳು, ಮತ್ತು ಇತರ ರಾಷ್ಟ್ರಗಳ ಪೈಕಿ ಘಾನಾವೂ ಸೇರಿದಂತೆ ಪಶ್ಚಿಮ ಆಫ್ರಿಕಾದಲ್ಲಿ ಕಾಣುತ್ತವೆ. ಮುಘಲ್ ಸಾಮ್ರಾಟ ಅಕ್ಬರ್‌ನ ವಜೀರ್‌ನಾಗಿದ್ದ ಅಬುಲ್-ಫಜಲ್ ಇಬ್ನ್ ಮುಬಾರಕ್‌ನಿಂದ ಬರೆಯಲ್ಪಟ್ಟ ಒಂದು ೧೬ನೆಯ ಶತಮಾನದ ದಸ್ತಾವೇಜಾದ ಐನ್-ಇ-ಅಕ್ಬರಿಯಲ್ಲಿ ಚಪಾತಿಯ ಬಗ್ಗೆ ಟಿಪ್ಪಣಿ ಮಾಡಲಾಗಿದೆ.[೧]


ಮಾಡುವ ವಿಧಾನ :- ಗೋಧಿ ಹಿಟ್ಟು ೫ ಕಪ್, ಸಿಹಿ ಬೇಕಾದರೆ ಸಕ್ಕರೆ ೧ ಚಮಚ,ತೆಂಗಿನ ಎಣ್ಣೆ ೩ ಚಮಚ,ತುಪ್ಪ ೨ ಚಮಚ,ಬಾಳೆಹಣ್ಣು ೨,ಸ್ವಲ್ಪ ಬಿಸಿಮಾಡಿದ ನೀರು ೧ ಕಪ್,ರುಚ್ಚಿಗೆ ತಕ್ಕಷ್ಟ ಉಪ್ಪು . ಮಾಡುವ ವಿಧಾನ :- ಒಂದು ಅಗಲವಾದ ಪಾತ್ರೆಗೆ ನೀರು,ಸಕ್ಕರೆ,ತುಪ್ಪ,ಬಾಳೆಹಣ್ಣು ಹಾಕಿ ಸರಿಯಾಗಿ ಕಲಸಿಕೊಳಬೇಕು, ನಂತರ ಅದಕ್ಕೆ ಗೋಧಿ ಹಿಟ್ಟನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ ಕೊನೆಗೆ ಅದಕ್ಕೆ ಎಣ್ಣಿ ಹಾಕಿ ಕಲಸಿಟ್ಟು , ಅರ್ಧ ಗಂಟೆ ನಂತರ ಉಂಡೆಗಳನ್ನು ಮಾಡಿಟ್ಟು ಅದನ್ನು ಗೋಧಿ ಹಿಟ್ಟಿನಲ್ಲಿ ಅದ್ದಿ ಲಟ್ಟಿಸಬೇಕು . ನಂತರ ಒಲೆಯಲ್ಲಿ ತವ ಬಿಸಿ ಮಾಡಿ ಅದಕ್ಕೆ ಚಪಾತಿಯನ್ನು ಹಾಕಿ ಕಾಯಿಸಿ ಸಣ್ಣ ಸಣ್ಣ ಗುಳ್ಳೆ ಬಂದಾಗ ಚಪಾತಿಯನ್ನು ಬೆಂಕಿಗೆ ಇಟ್ಟು ಅದು ಸರಿಯಾಗಿ ಉಬ್ಬಿದ ನಂತರ ತುಪ್ಪ ಸವರಿ ಬಿಸಿ ಬಿಸಿ ಚಪಾತಿಯನ್ನು ಮೈಸೂರು ಬಾಳೆಹಣ್ಣಿನ ಜೋತೆಗೆ ತಿನ್ನಲು ಕೊಡಿ.

ಉಲ್ಲೇಖಗಳು[ಬದಲಾಯಿಸಿ]"https://kn.wikipedia.org/w/index.php?title=ಚಪಾತಿ&oldid=816948" ಇಂದ ಪಡೆಯಲ್ಪಟ್ಟಿದೆ