ವಿಷಯಕ್ಕೆ ಹೋಗು

ಬುದ್ಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಕ್ಕಲು ಇಲ್ಲಿ ಪುನರ್ನಿರ್ದೇಶಿಸುತ್ತದೆ. ವಿವೇಕ ಲೇಖನಕ್ಕಾಗಿ ಇಲ್ಲಿ ನೋಡಿ.

ಬುದ್ಧಿ ಒಂದು ವೈದಿಕ ಸಂಸ್ಕೃತ ಶಬ್ದ. ಇದರರ್ಥ "ಪರಿಕಲ್ಪನೆಗಳನ್ನು ರೂಪಿಸುವ ಮತ್ತು ಉಳಿಸಿಕೊಳ್ಳುವ, ಪ್ರತಿಪಾದಿಸುವ, ಗ್ರಹಿಸುವ, ನಿರ್ಣಯಿಸುವ, ತಿಳಿದುಕೊಳ್ಳುವ, ಅರ್ಥಮಾಡಿಕೊಳ್ಳುವ" ಬೌದ್ಧಿಕ ಸಾಮರ್ಥ್ಯ ಮತ್ತು ಶಕ್ತಿ.

ಇತಿವೃತ್ತ[ಬದಲಾಯಿಸಿ]

ಬುದ್ಧಿ ಶಬ್ದ ವೈದಿಕ ಸಂಸ್ಕೃತ ಮೂಲ ಬುಧ್ ನಿಂದ ವ್ಯುತ್ಪನ್ನವಾಗಿದೆ, ಮತ್ತು ಅಕ್ಷರಶಃ ಇದರರ್ಥ "ಎಚ್ಚರಗೊಳ್ಳು, ಜಾಗೃತವಾಗು, ಗಮನಿಸು, ಲಕ್ಷ್ಯಕೊಡು, ಕಲಿ, ಅರಿವು ಮಾಡಿಕೊಳ್ಳು, ತಿಳಿ, ಪುನಃ ಪ್ರಜ್ಞೆ ಹೊಂದಿರು" ಎಂದು.[೧] ಈ ಪದವು ಋಗ್ವೇದ ಮತ್ತು ಇತರ ವೈದಿಕ ಸಾಹಿತ್ಯದಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ಬುದ್ಧಿಯ ಅರ್ಥ "ಬುದ್ಧಿವಂತಿಕೆ, ಯೋಚನೆ, ಮತಿ, ಮನಸ್ಸು", ಬೌದ್ಧಿಕ ಸಾಮರ್ಥ್ಯ, ಮತ್ತು ಯಾವುದನ್ನಾದರೂ "ವಿವೇಚಿಸುವ, ನಿರ್ಣಯಿಸುವ, ತಿಳಿದುಕೊಳ್ಳುವ, ಅರ್ಥಮಾಡಿಕೊಳ್ಳುವ" ಸಾಮರ್ಥ್ಯ ಎಂದು ಮೊನಿಯರ್ ವಿಲಿಯಮ್ಸ್ ಹೇಳುತ್ತಾರೆ.[೨] ಬುದ್ಧಿ ಬುಧ್ ನಿಂದ ವ್ಯುತ್ಪನ್ನವಾದ ಒಂದು ಸ್ತ್ರೀಲಿಂಗ ಸಂಸ್ಕೃತ ನಾಮಪದ. ಇದೇ ಮೂಲ ಹೆಚ್ಚು ಪರಿಚಿತ ಪುಲ್ಲಿಂಗ ರೂಪ ಬುದ್ಧ ಮತ್ತು ಅಮೂರ್ತ ನಾಮಪದ ಬೋಧಿಯ ಆಧಾರವಾಗಿದೆ. ಬುದ್ಧಿ ಮನಸ್ ಮತ್ತು ಅಹಂಕಾರ ಪದಗಳಿಂದ ಭಿನ್ನವಾಗಿದೆ.[೩][೪]

ಉಲ್ಲೇಖಗಳು[ಬದಲಾಯಿಸಿ]

  1. Sir Monier Monier-Williams; Ernst Leumann; Carl Cappeller (2002). A Sanskrit-English Dictionary: Etymologically and Philologically Arranged with Special Reference to Cognate Indo-European Languages. Motilal Banarsidass. p. 733. ISBN 978-81-208-3105-6.
  2. Jadunath Sinha (2013). Indian Psychology Perception. Routledge. pp. 120–121. ISBN 978-1-136-34605-7.
  3. Sir Monier Monier-Williams; Ernst Leumann; Carl Cappeller (2002). A Sanskrit-English Dictionary: Etymologically and Philologically Arranged with Special Reference to Cognate Indo-European Languages. Motilal Banarsidass. pp. 124, 783–784. ISBN 978-81-208-3105-6.
  4. Ian Whicher (1998). The Integrity of the Yoga Darsana: A Reconsideration of Classical Yoga. State University of New York Press. pp. 18, 71, 77, 92–95, 219, 231. ISBN 978-0-7914-3815-2.
"https://kn.wikipedia.org/w/index.php?title=ಬುದ್ಧಿ&oldid=741679" ಇಂದ ಪಡೆಯಲ್ಪಟ್ಟಿದೆ