ವಿಷಯಕ್ಕೆ ಹೋಗು

ವಿವೇಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿವೇಕ ತಾರ್ಕಿಕತೆ ಬಳಸಿ ತಮ್ಮನ್ನು ತಾವೇ ನಿಯಂತ್ರಿಸುವ ಮತ್ತು ಹಿಡಿತದಲ್ಲಿಡುವ ಸಾಮರ್ಥ್ಯ. ಅದನ್ನು ಶಾಸ್ತ್ರೀಯವಾಗಿ ಒಂದು ಸದ್ಗುಣವೆಂದು, ಮತ್ತು ನಿರ್ದಿಷ್ಟವಾಗಿ ನಾಲ್ಕು ಪ್ರಧಾನ ಸದ್ಗುಣಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.

ಇದನ್ನು ಹಲವುವೇಳೆ ಬುದ್ಧಿವಂತಿಕೆ, ಒಳನೋಟ ಮತ್ತು ಜ್ಞಾನದೊಂದಿಗೆ ಸಂಬಂಧಿಸಲಾಗುತ್ತದೆ. ಈ ಸಂದರ್ಭದಲ್ಲಿ, ಸದ್ಗುಣವು ಸದ್ಗುಣಶೀಲ ಮತ್ತು ಅನೈತಿಕ ಕ್ರಮಗಳ ನಡುವೆ ನಿರ್ಣಯಿಸುವ ಸಾಮರ್ಥ್ಯ, ಕೇವಲ ಒಂದು ಸಾಮಾನ್ಯ ಅರ್ಥದಲ್ಲಲ್ಲದೇ, ನಿರ್ದಿಷ್ಟ ಸಮಯ ಮತ್ತು ಸ್ಥಳದಲ್ಲಿ ಸೂಕ್ತ ಕ್ರಿಯೆಗಳಿಗೆ ಸಂಬಂಧಿಸಿದಂತೆ. ವಿವೇಕ ತಾನೇ ಯಾವ ಕಾರ್ಯಗಳನ್ನೂ ನಿರ್ವಹಿಸುವುದಿಲ್ಲವಾದರೂ, ಮತ್ತು ಕೇವಲ ಜ್ಞಾನದೊಂದಿಗೆ ಸಂಬಂಧಪಟ್ಟಿದೆಯಾದರೂ, ಎಲ್ಲ ಸದ್ಗುಣಗಳು ಅದರಿಂದಲೇ ನಿಯಂತ್ರಿಸಪಡಬೇಕು. ಕ್ರಿಯೆಗಳು ಧೈರ್ಯಮಯವಾಗಿದ್ದಾಗ, ಉದಾಹರಣೆಗೆ, ಒಂದು ವಿವೇಕಯುಕ್ತ ಕ್ರಿಯೆ, ಮತ್ತು ಇದು ಅಜಾಗರೂಕ ಅಥವಾ ಹೇಡಿತನದ ಕ್ರಿಯೆಗಳಿಂದ ಭಿನ್ನವಾಗಿದೆ, ಮತ್ತು ಇದೇ ಕಾರಣಕ್ಕಾಗಿ ಇದನ್ನು ಒಂದು ಪ್ರಧಾನ ಸದ್ಗುಣವೆಂದು ವರ್ಗೀಕರಿಸಲಾಗುತ್ತದೆ.

ಈಗೀಗ ಆಧುನಿಕ ಭಾಷೆಯಲ್ಲಿ, ಈ ಶಬ್ದ ಜಾಗರೂಕತೆ ಶಬ್ದದೊಂದಿಗೆ ಹೆಚ್ಚು ಸಮಾನಾರ್ಥಕವಾಗಿ ಹೋಗಿದೆ. ಈ ಅರ್ಥದಲ್ಲಿ, ವಿವೇಕ ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಕೆಯೆಂದಾಗುತ್ತದೆ. ಆಗ ಕೂಡ ಅನಗತ್ಯ ಅಪಾಯಗಳ ಸಂಬಂಧದಲ್ಲಿ ಅದು ಸದ್ಗುಣವಾಗಿಯೇ ಉಳಿಯುತ್ತದೆ, ಆದರೆ, ವಿನಾಕಾರಣ ಅತಿ ಎಚ್ಚರಿಕೆಗೆ ವಿಸ್ತರಿಸಲ್ಪಟ್ಟಾಗ, ಹೇಡಿತನದ ದುರಾಚಾರ ಆಗಬಹುದು.

"https://kn.wikipedia.org/w/index.php?title=ವಿವೇಕ&oldid=800054" ಇಂದ ಪಡೆಯಲ್ಪಟ್ಟಿದೆ