ವಿಷಯಕ್ಕೆ ಹೋಗು

ದುರಾಚಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾನೂನಿನಲ್ಲಿ, ದುರಾಚಾರ (ದುರ್ನಡತೆ) ಎಂದರೆ ಪೂರ್ವಯೋಜಿತ ಅಥವಾ ಉದ್ದೇಶಪೂರ್ವಕ ಸಂಕಲ್ಪದಿಂದ ಅಥವಾ ತಮ್ಮ ಕ್ರಿಯೆಗಳ ಪರಿಣಾಮಗಳಿಗೆ ಹಠಮಾರಿ ಉದಾಸೀನತೆಯಿಂದ ಉತ್ತೇಜಿತವಾದ ತಪ್ಪಾದ, ಸರಿಯಲ್ಲದ, ಅಥವಾ ಕಾನೂನುಬಾಹಿರ ಆಚಾರ/ನಡತೆ. ದುರಾಚಾರವು ಸ್ವೀಕಾರಾರ್ಹವಲ್ಲದ ಅಥವಾ ಸರಿಯಲ್ಲದ ವರ್ತನೆಯೆಂದು ಪರಿಗಣಿಸಲ್ಪಡಬಹುದು, ವಿಶೇಷವಾಗಿ ಒಬ್ಬ ವೃತ್ತಿಪರ ವ್ಯಕ್ತಿಗೆ. ದುರಾಚಾರದ ಎರಡು ವರ್ಗಗಳೆಂದರೆ ಲೈಂಗಿಕ ದುರಾಚಾರ ಮತ್ತು ಅಧಿಕೃತ ದುರಾಚಾರ. ಶಾಲಾ ಶಿಸ್ತಿನ ಸಂಬಂಧದಲ್ಲಿ, "ದುರಾಚಾರ/ದುರ್ನಡತೆ" ಎಂದರೆ ಸಾಮಾನ್ಯವಾಗಿ ಶಾಲಾ ಅಧಿಕಾರಿಗಳು ಸ್ವೀಕಾರಾರ್ಹವಲ್ಲದ ಆದರೆ ಅಪರಾಧಿಕ ಉಲ್ಲಂಘಿಸದಿರದ್ದು ಎಂದು ಅರ್ಥಮಾಡಿಕೊಳ್ಳಲಾದ ವಿದ್ಯಾರ್ಥಿಯ ವರ್ತನೆ. ಇದರಲ್ಲಿ ಗೈರುಹಾಜರಿ, ತಡವಾಗಿ ಬರುವ ಗುಣ, ಬೆದರಿಸುವಿಕೆ/ಪುಂಡತನ ಮತ್ತು ಸೂಕ್ತವಲ್ಲದ ಭಾಷೆ ಸೇರಿವೆ. ಕಾರ್ಯಸ್ಥಳದಲ್ಲಿನ ದುರಾಚಾರವು ಸಾಮಾನ್ಯವಾಗಿ ಎರಡು ವರ್ಗಗಳಲ್ಲಿ ಬರುತ್ತದೆ. ಗೌಣ ದುರಾಚಾರವು ಸ್ವೀಕಾರಾರ್ಹವಲ್ಲವೆಂದು ಕಾಣಲ್ಪಡುತ್ತದೆ ಆದರೆ ಕ್ರಿಮಿನಲ್ ಅಪರಾಧವಲ್ಲ (ಉದಾ. ತಡವಾಗಿ ಬರುವುದು, ವಿದ್ಯಾರ್ಹತೆಗಳನ್ನು ನಕಲಿ ಮಾಡುವುದು).[]

ಉಲ್ಲೇಖಗಳು

[ಬದಲಾಯಿಸಿ]
  1. "Dishonesty in Medical Research" (PDF). Medico-legalsociety.org.uk. Archived from the original (PDF) on 21 May 2013. Retrieved 1 December 2014.


"https://kn.wikipedia.org/w/index.php?title=ದುರಾಚಾರ&oldid=948036" ಇಂದ ಪಡೆಯಲ್ಪಟ್ಟಿದೆ