ಬುದ್ಧಿ
- ಅಕ್ಕಲು ಇಲ್ಲಿ ಪುನರ್ನಿರ್ದೇಶಿಸುತ್ತದೆ. ವಿವೇಕ ಲೇಖನಕ್ಕಾಗಿ ಇಲ್ಲಿ ನೋಡಿ.
ಬುದ್ಧಿ ಒಂದು ವೈದಿಕ ಸಂಸ್ಕೃತ ಶಬ್ದ. ಇದರರ್ಥ "ಪರಿಕಲ್ಪನೆಗಳನ್ನು ರೂಪಿಸುವ ಮತ್ತು ಉಳಿಸಿಕೊಳ್ಳುವ, ಪ್ರತಿಪಾದಿಸುವ, ಗ್ರಹಿಸುವ, ನಿರ್ಣಯಿಸುವ, ತಿಳಿದುಕೊಳ್ಳುವ, ಅರ್ಥಮಾಡಿಕೊಳ್ಳುವ" ಬೌದ್ಧಿಕ ಸಾಮರ್ಥ್ಯ ಮತ್ತು ಶಕ್ತಿ.
ಇತಿವೃತ್ತ
[ಬದಲಾಯಿಸಿ]ಬುದ್ಧಿ ಶಬ್ದ ವೈದಿಕ ಸಂಸ್ಕೃತ ಮೂಲ ಬುಧ್ ನಿಂದ ವ್ಯುತ್ಪನ್ನವಾಗಿದೆ, ಮತ್ತು ಅಕ್ಷರಶಃ ಇದರರ್ಥ "ಎಚ್ಚರಗೊಳ್ಳು, ಜಾಗೃತವಾಗು, ಗಮನಿಸು, ಲಕ್ಷ್ಯಕೊಡು, ಕಲಿ, ಅರಿವು ಮಾಡಿಕೊಳ್ಳು, ತಿಳಿ, ಪುನಃ ಪ್ರಜ್ಞೆ ಹೊಂದಿರು" ಎಂದು.[೧] ಈ ಪದವು ಋಗ್ವೇದ ಮತ್ತು ಇತರ ವೈದಿಕ ಸಾಹಿತ್ಯದಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ಬುದ್ಧಿಯ ಅರ್ಥ "ಬುದ್ಧಿವಂತಿಕೆ, ಯೋಚನೆ, ಮತಿ, ಮನಸ್ಸು", ಬೌದ್ಧಿಕ ಸಾಮರ್ಥ್ಯ, ಮತ್ತು ಯಾವುದನ್ನಾದರೂ "ವಿವೇಚಿಸುವ, ನಿರ್ಣಯಿಸುವ, ತಿಳಿದುಕೊಳ್ಳುವ, ಅರ್ಥಮಾಡಿಕೊಳ್ಳುವ" ಸಾಮರ್ಥ್ಯ ಎಂದು ಮೊನಿಯರ್ ವಿಲಿಯಮ್ಸ್ ಹೇಳುತ್ತಾರೆ.[೨] ಬುದ್ಧಿ ಬುಧ್ ನಿಂದ ವ್ಯುತ್ಪನ್ನವಾದ ಒಂದು ಸ್ತ್ರೀಲಿಂಗ ಸಂಸ್ಕೃತ ನಾಮಪದ. ಇದೇ ಮೂಲ ಹೆಚ್ಚು ಪರಿಚಿತ ಪುಲ್ಲಿಂಗ ರೂಪ ಬುದ್ಧ ಮತ್ತು ಅಮೂರ್ತ ನಾಮಪದ ಬೋಧಿಯ ಆಧಾರವಾಗಿದೆ. ಬುದ್ಧಿ ಮನಸ್ ಮತ್ತು ಅಹಂಕಾರ ಪದಗಳಿಂದ ಭಿನ್ನವಾಗಿದೆ.[೩][೪]
ಉಲ್ಲೇಖಗಳು
[ಬದಲಾಯಿಸಿ]- ↑ Sir Monier Monier-Williams; Ernst Leumann; Carl Cappeller (2002). A Sanskrit-English Dictionary: Etymologically and Philologically Arranged with Special Reference to Cognate Indo-European Languages. Motilal Banarsidass. p. 733. ISBN 978-81-208-3105-6.
- ↑ Jadunath Sinha (2013). Indian Psychology Perception. Routledge. pp. 120–121. ISBN 978-1-136-34605-7.
- ↑ Sir Monier Monier-Williams; Ernst Leumann; Carl Cappeller (2002). A Sanskrit-English Dictionary: Etymologically and Philologically Arranged with Special Reference to Cognate Indo-European Languages. Motilal Banarsidass. pp. 124, 783–784. ISBN 978-81-208-3105-6.
- ↑ Ian Whicher (1998). The Integrity of the Yoga Darsana: A Reconsideration of Classical Yoga. State University of New York Press. pp. 18, 71, 77, 92–95, 219, 231. ISBN 978-0-7914-3815-2.