ತಲಕಾಡು

ವಿಕಿಪೀಡಿಯ ಇಂದ
Jump to navigation Jump to search
Talakadu
ತಲಕಾಡು
Talakadu
Town
Vaidyeshvara temple, Talakad
Vaidyeshvara temple, Talakad
Talakadu is located in Karnataka
Talakadu
Talakadu
Location in Karnataka, India
Coordinates: 12°13′N 77°02′E / 12.22°N 77.03°E / 12.22; 77.03ನಿರ್ದೇಶಾಂಕಗಳು: 12°13′N 77°02′E / 12.22°N 77.03°E / 12.22; 77.03
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಮೈಸೂರು ಜಿಲ್ಲೆ
ಎತ್ತರ೭೦೦
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯIST (ಯುಟಿಸಿ+5:30)
Close up view of the shrine and mantapa (hall) outer wall at Vaidyeshvara temple
A view of Talkad

ತಲಕಾಡು,[೧][೨] ಮೈಸೂರು ಜಿಲ್ಲೆಯಲ್ಲಿನ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಇದು ಮೈಸೂರಿನಿಂದ ಸುಮಾರು ೪೫ ಕಿ.ಮೀ ದೂರದಲ್ಲಿದೆ. ಇಲ್ಲಿನ ಅತಿ ಸುಂದರವಾದ ಕಾವೇರಿ ನದಿ, ಮರಳು ಮತ್ತು ಇಲ್ಲಿನ ಪುರಾತನ ದೇವಸ್ಥಾನಗಳು ಜನರನ್ನು ಆಕರ್ಷಿಸುವಲ್ಲಿ ಯಶಸ್ವೀಯಾಗಿವೆ. ಇಲ್ಲಿರುವ ದೇವಾಲಯಗಳು ಗಂಗರ ಕಾಲದ ದೇವಾಲಯಗಳು[೩][೪]. ಇಲ್ಲಿ ನಡೆಯುವ ಪಂಚಲಿಂಗ ದರ್ಶನ ವಿಶೇಷವಾದದ್ದು. ಪಂಚಲಿಂಗ ದರ್ಶನವು ೧೨ ಅಥವಾ ೧೩ ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು ಐತಿಹಾಸಿಕವಾಗಿ ಹಾಗೂ ಧಾರ್ಮಿಕವಾಗಿ ಪ್ರಸಿದ್ದ ಸ್ಥಳವಾಗಿದೆ. ತಲಕಾಡು ಒಂದು ಕಾಲದಲ್ಲಿ 30 ದೇವಾಲಯಗಳಿಂದ ಕೂಡಿದ ಭವ್ಯ ನಗರವಾಗಿತ್ತು. ಆದರೆ 16ನೇ ಶತಮಾನದಲ್ಲಿ ಇವುಗಳೆಲ್ಲವು ಮರಳಿನಲ್ಲಿ ಮುಚ್ಚಿ ಹೋದವು. ಪವಿತ್ರವಾದ ತಲಕಾಡು ಕ್ಷೇತ್ರದಲ್ಲಿ ಪಂಚಲಿಂಗ ಸ್ವರೂಪಿಯಾಗಿ ಈಶ್ವರನು ನೆಲಸಿದ್ದಾನೆ. ತಲಕಾಡು ದಕ್ಷಿಣಕಾಶಿ ಎಂದು ಹೆಸರುವಾಸಿಯಾಗಿದೆ.

ಇತಿಹಾಸ[ಬದಲಾಯಿಸಿ]

 • ಈ ಪಟ್ಟಣದ ಹೆಸರು ಒಂದು ಸಂಪ್ರದಾಯದ ಪ್ರಕಾರ ಇಬ್ಬರು ಅವಳಿ ಸಹೋದರರ ಹೆಸರು ತಲಾ ಮತ್ತು ಕಾಡು. ಒಂದು ಮರವನ್ನು ಕಡಿಯುತ್ತಿರುವಾಗ ಅವರು ಒಂದು ಆನೆಯನ್ನು ನೋಡಿದರು, ಆನೆಯಲ್ಲಿ ಶಿವನ ಪ್ರತಿಮೆಯನ್ನು ಕಂಡರು. ಆ ಮರವು ಪುನಃ ಮರು ಪ್ರತಿಷ್ಟಾಪನೆ ಆಯಿತು. ಎಲ್ಲರಿಗೂ ಮೋಕ್ಷ ಸಿಕ್ಕಿತು. ಅಂದಿನಿಂದ ಆ ಜಾಗಕ್ಕೆ ತಲಕಾಡು ಎಂದು ಹೆಸರು ಬಂತು. ಎರಡು ಕಲ್ಲುಗಳಲ್ಲಿ ಅವಳಿ ಜವಳಿಯ ಚಿತ್ರವೂ ಬಂತು. ಆ ಕಲ್ಲುಗಳು ವೀರಭದ್ರಸ್ವಾಮಿಯ ದೇವಸ್ಥಾನದ ಮುಂದೆ ಇಟ್ಟಿದ್ದಾರೆ.
 • ಕೆಲವು ವರ್ಷ ನಂತರ ಶ್ರೀರಾಮ ಅಲ್ಲಿ ಬಂದು ವಿಶ್ರಾಂತಿಯನ್ನು ಪಡೆದನು. ಮೊದಲಿನ ಅಧಿಕೃತದಲ್ಲಿ ತಲಕಾಡು ಗಂಗರ ವಂಶದಲ್ಲಿ ಸೇರಿತು. ಹರಿವರ್ಮ ಜಾಗವನ್ನು ಹುಡುಕಲು ಸಹಾಯ ಪಡೆದಿದ್ದರು. ಕಾಲಕ್ರಮದ ಪ್ರಕಾರ ಇದು ಸ್ಕಂಧ ಪುರಾಣದಲ್ಲಿ ಅಳವಡಿಸಲಾಗಿದೆ. ಆದರೆ ಅವರು ದಲವಂತ್ ಪುರದಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ತಲಕಾಡು ರಾಜಧಾನಿ ಆಯಿತು. ೧೧ನೇ ಶತಮಾನದಲ್ಲಿ ಗಂಗಾರಾಜರಿಂದ ಚೋಳರಾಜರು ವಶಪಡಿಸಿಕೊಂಡರು.
 • ಅಂದಿನಿಂದ ಆ ಸ್ಥಳವನ್ನು ರಾಜರಾಜಪುರ ಎಂದು ಹೆಸರಿಟ್ಟರು. ಸುಮಾರು ೧೦೦ ವರ್ಷಗಳ ಮುಂದೆ ಹೊಯ್ಸಳ ರಾಜ ವಿಷ್ಣು ವರ್ಧನ ಚೋಳ ರಾಜ ವಂಶವನ್ನು ಮೈಸೂರಿನಿಂದ ಹೊರಹಾಕಿದರು. ಆಗ ತಲಕಾಡುವಿನಲ್ಲಿ ೭ ಪಟ್ಟಣಗಳು ಮತ್ತು ೫ ಮತಾಸ್‍ನ್ನು ವಶಪಡಿಸಿಕೊಂಡರು. ಮಾಲಂಗಿಯ ಪಟ್ಟಣವು ನದಿಯ ಎದರು ಇತ್ತು. ಅದು ಒಂದು ದೊಡ್ಡ ಪಟ್ಟಣವಾಗಿತ್ತು. ಅದರ ಹೆಸರು ಜನತಾಪುರ. ೧೪ನೇ ಶತಮಾನದ ಮಧ್ಯದಲ್ಲಿ ಹೊಯ್ಸಳ ರಾಜ್ಯಕ್ಕೆ ಸ್ವಾಧಿನಕ್ಕೆ ಬಂತು. ವಿಜಯ ನಗರ ಸೋಮರಾಜರಿಗೆ ಸೇರಿತ್ತು.

ಪೌರಾಣಿಕ[ಬದಲಾಯಿಸಿ]

 • ಹಿಂದೆ ವಸಿಷ್ಠ ಕುಲದ ಸೋಮದತ್ತನೆಂಬ ಬ್ರಾಹ್ಮಣನಿದ್ದನು. ಅವನು ಸಂಸಾರದಲ್ಲಿ ಜಿಗುಪ್ಸೆಹೊಂದಿ ವಾರಣಾಸಿಗೆ ಹೋಗಿ ವಿಶ್ವೇಶ್ವರನನ್ನು ಕುರಿತು ತಪಸ್ಸನ್ನಾಚರಿಸಿದನು. ಕಾಶಿ ವಿಶ್ವೇಶ್ವರನು ಅವನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದನು. ತಮಗೆ ಮತ್ತು ತನ್ನ ಶಿಷ್ಯರಿಗೆ ಸಶರೀರ ಮುಕ್ತಿಯನ್ನು ಕರುಣಿಸಬೇಕೆಂದು ಸೋಮದತ್ತನು ಬೇಡಿಕೊಂಡನು.
 • ಆದರೆ ಆ ಸ್ವಾಮಿಯು ಸೋಮದತ್ತನಿಗೆ ಅಲ್ಲಿ ಮುಕ್ತಿ ದೊರೆಯಲಾರದೆಂದೂ, ಆತನು ತನ್ನ ಶಿಷ್ಯರೊಡನೆ ದಕ್ಷಿಣಕ್ಕೆ ಪ್ರಯಾಣ ಮಾಡಿ ದಕ್ಷಿಣ ಗಂಗೆ ಎಂದು ಹೆಸರಾಗಿರುವ ಪವಿತ್ರ ಕಾವೇರಿಯ ತೀರದಲ್ಲಿನ ಗಜಾರಣ್ಯ ಕ್ಷೇತ್ರಕ್ಕೆ ಹೋಗಬೇಕೆಂದು ತಿಳಿಸುತ್ತ ಆ ಕ್ಷೇತ್ರ ಕಾವೇರಿ ಮತ್ತು ಕಪಿಲ ಸಂಗಮದಿಂದ ಕೆಲವೇ ಹರಿದಾರಿಗಳಲ್ಲಿ ಮುಂದೆ ಆ ಕ್ಷೇತ್ರದಲ್ಲಿ ನಾನು ವೈಧ್ಯೇಶ್ವರನೆಂದು ಕಾಣಿಸಿಕೊಳ್ಳುತ್ತೇನೆ.
 • ಅಲ್ಲಿನ ಋಚೀಕ ಋಷಿಯ ಆಶ್ರಮದಲ್ಲಿದ್ದುಕೊಂಡು ನೀನು ತಪಸ್ಸನ್ನಾಚರಿಸು, ಕಾಶಿಗಿಂತಲೂ ಮಿಗಿಲಾದ ಮಹಿಮೆಯಿಂದ ಕೂಡಿದ ಆ ಸ್ಥಳದಲ್ಲಿ ನಿನಗೆ ಸಾಯುಜ್ಯ ಸುಲಭವಾಗಿ ಪ್ರಾಪ್ತವಾಗುತ್ತದೆ ಎಂದು ತಿಳಿಸಿದನು. ಸೋಮದತ್ತನು ವಿಶ್ವೇಶ್ವರನ ನುಡಿಯಂತೆ ತನ್ನ ಶಿಷ್ಯ ಪರಿವಾರದೊಡನೆ ದಕ್ಷಿಣ ದಿಕ್ಕಿಗೆ ಪ್ರಯಾಣವನ್ನು ಕೈಗೊಂಡನು. ಅವರು ವಿಂಧ್ಯ ಪರ್ವತದ ದಟ್ಟವಾದ ಕಾಡುಗಳನ್ನು ದಾಟುತ್ತಿದ್ದರು.
 • ಆಗ ಇದ್ದಕಿದ್ದ ಹಾಗೆಯೇ ದೊಡ್ಡ ಆನೆಗಳ ಹಿಂಡೊಂದು ಅವರ ಮೇಲೆ ಎರಗಿ ಬಂತು. ಗಾಬರಿಗೊಂಡ ಸೋಮದತ್ತ ಮತ್ತು ಅವನ ಶಿಷ್ಯರು ಆನೆ ಆನೆ ಎಂದು ಕೂಗುತ್ತಲೇ ಆ ಮದ್ದಾನೆಗಳಿಗೆ ಬಲಿಯಾಗಿ ಪ್ರಾಣ ನೀಗಿದರು. ಅವರು ಸಾಯವ ಸಂದರ್ಭದಲ್ಲಿ ಅನೆಯ ಸ್ವರೂಪವನ್ನೆ ಕಲ್ಪಿಸಿಕೊಂಡು ಹೆದರಿದ್ದರಿಂದ ಮುಂದೆ ಅವರಿಗೆ ಆನೆಯ ಜನ್ಮವೇ ಪ್ರಾಪ್ತವಾಯಿತು. ವಿಶ್ವೇಶ್ವರನು ತಿಳಿಸಿದ್ದ ಪವಿತ್ರ ಗಜಾರಣ್ಯ ಕ್ಷೇತ್ರದಲ್ಲಿ ಕಾವೇರಿಯ ತೀರದಲ್ಲಿ ಅವರು ಆನೆಯಾಗಿಯೇ ಹುಟ್ಟಿದರು.
 • ಗಜಾರಣ್ಯ ಕ್ಷೇತ್ರದಲ್ಲಿ ಒಂದು ಸೊಂಪಾಗಿ ಬೆಳೆದ ಬೂರುಗದ ಮರ, ಆ ಮರದ ಬುಡದಲ್ಲಿ ದಟ್ಟವಾಗಿ ಕವಿದ ಪೊದೆಗಳು, ಆನೆಗಳು ಅಲ್ಲಿನ ಗೋಕರ್ಣ ಸರೋವರದಲ್ಲಿ ಮಿಂದು, ಸೊಂಡಿಲಲ್ಲಿ ನೀರನ್ನು ತುಂಬಿಕೊಂಡು ಕಮಲವನ್ನು ಕಚ್ಚಿ ಆ ಮರದ ಬುಡದ ಪೊದೆಯ ಕಡೆ ಬರುತ್ತಿದ್ದವು. ಬಂದು ಸೊಂಡಿಲ ನೀರನ್ನು ಚುಮುಕಿಸಿ ಆ ಪೊದೆಯ ಮೇಲೆ ಹೂವಿಟ್ಟು ನಮಿಸಿ ಹೋಗುತ್ತಿದ್ದವು. ಆ ದೃಶ್ಯವನ್ನು 'ತಲ' 'ಕಾಡ' ಎಂಬ ಇಬ್ಬರು ಬೇಡರು ನಿತ್ಯವೂ ನೋಡುತ್ತಿದ್ದರು.
 • ಆಶ್ಚರ್ಯಗೊಂಡ ಅವರು ಅದೇನು ಎಂಬುದನ್ನು ಪರೀಕ್ಷಿಸಬೇಕೆಂದು ಎರಡು ಕೊಡಲಿಗಳನ್ನು ತೆಗೆದುಕೊಂಡು ಬಂದರು. ಪೊದೆಗಳನ್ನು ಕಡಿದರು. ಕಡಿಯುವಾಗ ಅವರ ಕೊಡಲಿ ಯಾವುದೋ ವಸ್ತುವಿಗೆ ತಾಕಿದಂತಾಯಿತು. ರಕ್ತ ಚಿಮ್ಮಿತು. ಅದೇನೆಂದು ನೋಡುವಲ್ಲಿ ಅದೊಂದು ಶಿವಲಿಂಗ. ಅದರ ನೆತ್ತಿಯಿಂದ ರಕ್ತ ಹರಿಯುತ್ತಿದೆ. ಇದನ್ನು ನೋಡಿದ ಅವರು ಹೆದರಿ ನಡುಗತೊಡಗಿದರು. ಆಗ ಅಶರೀರವಾಣಿಯೊಂದಾಯಿತು.
 • "ಎಲೈ ಕಿರಾತಕರೆ, ನಿಮಗೆ ಒಳ್ಳೆಯದನ್ನು ಮಾಡುವುದಕ್ಕಾಗಿಯೇ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ. ಈ ಬೂರುಗದ ಮರದ ಎಲೆಯನ್ನು ಹಣ್ಣನ್ನೂ ಅರೆದು ಗಾಯವಾದ ಜಾಗಕ್ಕೆ ಬಳಿಯಿರಿ, ಸುರಿಯುವ ರಕ್ತ ನಿಲ್ಲುತ್ತದೆ. ಅಷ್ಟೇ ಅಲ್ಲ, ರಕ್ತ ಹಾಲಾಗುತ್ತದೆ, ಆ ಹಾಲನ್ನು ನೀವು ಸೇವಿಸಿದರೆ ನಿಮಗೆ ಗಣಪದವಿ ದೊರೆಯುತ್ತದೆ".
 • ದೇವವಾಣಿಗೆ ಬೇಡರು ತಲೆಬಾಗಿದರು. ಕೂಡಲೇ ಬೂರುಗದ ಮರದ ಎಲೆಯನ್ನು ಹಣ್ಣನ್ನು ತೇದು ಗಾಯಕ್ಕೆ ಹಚ್ಚಿದರು. ರಕ್ತ ಹರಿಯುವುದಕ್ಕೆ ಬದಲಾಗಿ ಹಾಲು ಹರಿಯಿತು. ಅದನ್ನು ಸೇವಿಸಿದ ಬೇಡರಿಗೆ ಗಣಪದವಿ ದೊರೆಯಿತು. ಆ ತಲ ಕಾಡ ಎನ್ನುವ ಬೇಡರಿಗೆ ಅಲ್ಲಿ ಮೊದಲ ಬಾರಿಗೆ ಮೋಕ್ಷ ಪ್ರಾಪ್ತವಾದ್ದರಿಂದ ಆ ಸ್ಥಳಕ್ಕೆ "ತಲಕಾಡು" ಎನ್ನುವ ಹೆಸರನ್ನು ಹೊತ್ತಿತ್ತು. ಅದೇ ಈಗಿನ ತಲಕಾಡು.
 • ಆನೆಯ ರೂಪಿನ ಸೋಮದತ್ತನೂ ಹಾಲನ್ನು ಸೇವಿಸಿ ಶರೀರವನ್ನು ಪಡೆದು ಸಶರೀರಿಯಾಗಿ ಮೋಕ್ಷವನ್ನು ಪಡೆದನು. ತನ್ನ ಗಾಯಕ್ಕೆ ತಾನೇ ವೈದ್ಯವನ್ನು ಸೂಚಿಸಿದವನಲ್ಲವೆ? ಆದುದರಿಂದಲೇ ವೈದ್ಯನಾಥ ಅಥವಾ ವೈಧ್ಯೇಶ್ವರನೆಂದು ಹೆಸರಾಯಿತು. ಮೊದಲಿಗೆ ಸಿದ್ಧಾರಣ್ಯ ಕ್ಷೇತ್ರವಾಗಿದ್ದ ಈ ನೆಲೆ ಅನೆಗಳು ಮೋಕ್ಷವನ್ನು ಪಡೆದ ಮೇಲೆ ಗಜಾರಣ್ಯಕ್ಷೇತ್ರವಾಯಿತು.

ಅಲಮೇಲಮ್ಮ‌ನ ಶಾಪ[ಬದಲಾಯಿಸಿ]

 • ವಿಜಯನಗರದರಸ ಪ್ರತಿನಿಧಿಯಾದ ಶ್ರೀರಂಗರಾಯ ಎಂಬಾತ ಶ್ರೀರಂಗಪಟ್ಟಣವನ್ನಾಳುತ್ತಿದ್ದ. ಅವನಿಗೆ ಬೆನ್ನುಪಣಿರೋಗ ಬಂದು ಯಾವ ಔಷಧದಿಂದಲೂ ಗುಣವಾಗದಿದ್ದಾಗ ವೈದ್ಯನಾಥೇಶ್ವರನಿಗೆ ಪೂಜೆ ಮಾಡಿ ತನ್ನ ರೋಗದಿಂದ ಮುಕ್ತಿಪಡೆಯಲು ತಲಕಾಡಿಗೆ ಆಗಮಿಸಿದ. ಪತಿ ಮರಣಾವಸ್ಥೆಯಲ್ಲಿರುವನೆಂದು ತಿಳಿದ ರಾಣಿ ತಾನೂ ಜೊತೆಗೆ ಬಂದಳು. ರಾಜ ತಲಕಾಡಿನಲ್ಲಿ ತನ್ನ ಕೊನೆಯುಸಿರೆಳೆದ. ಆತನ ಪತ್ನಿ ಅಲಮೇಲಮ್ಮ[೫] ತಲಕಾಡಿನ ಸನಿಹದ ಮಾಲಂಗಿ ಗ್ರಾಮದಲ್ಲಿ ನೆಲೆಸಿದಳು.
 • ಆಗ ರಾಜನಿಲ್ಲದ ಶ್ರೀರಂಗಪಟ್ಟಣವನ್ನು ಮೈಸೂರು ಅರಸರು ತಮ್ಮ ಕೈವಶ ಮಾಡಿಕೊಂಡರು. ಆಗ ಅವರಿಗೆ ಅಲಮೇಲಮ್ಮ ಬಳಿ ಇರುವ ಅಮೂಲ್ಯ ಅಭರಣಗಳ ವಿಷಯ ತಿಳಿಯಿತು. ಅದನ್ನು ಪಡೆಯಲು ಸೈನ್ಯ ಸಮೇತ ಧಾವಿಸಿದರು. ಆಗ ದಾರಿಕಾಣದ ಅಲಮೇಲಮ್ಮ ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ, ಮೈಸೂರು ಅರಸರಿಗೆ ಮೊಮ್ಮಕ್ಕಳೇ ಆಗದಿರಲಿ ಎಂದು ಶಪಿಸಿ, ತಾನೂ ಮಾಲಂಗಿ ಮಡುವಿಗೆ ಮುಳುಗಿ ಸತ್ತಳಂತೆ.
 • ಹೀಗಾಗೇ ತಲಕಾಡು ಮರಳಾಯಿತು, ಮಾಲಂಗಿ ಮಡುವಾಯಿತು, ಮೈಸೂರು ಅರಸರಿಗೆ ವಂಶೋದ್ಧಾರಕ ಸಂತಾನ ಭಾಗ್ಯವೇ ಇರಲಿಲ್ಲ ಎಂದು ಮತ್ತೊಂದು ಕಥೆ ಹೇಳುತ್ತದೆ. ಮತ್ತೊಂದು ಐತಿಹ್ಯದ ಪ್ರಕಾರ ೧೬೧೦ರಲ್ಲಿ ಮೈಸೂರು ರಾಜರು ತಲಕಾಡನ್ನು ವಶಪಡಿಸಿಕೊಂಡರು. ತಿರುಮಲರಾಜರು ಅಥವಾ ರಂಗಾ ರಾಯರು ಶ್ರೀರಂಗಪಟ್ಟಣದ ವಿಜಯನಗರ ವಂಶದ ಮುಖ್ಯಸ್ಥರು, ಅವರಿಗೆ ವಾಸಿಯಾಗದ ಖಾಯಿಲೆ ಬಂತು.
 • ಆದುದರಿಂದ ಅವರು ತಲಕಾಡಿನ ವೈದ್ಯೇಶ್ವರ ಸ್ವಾಮಿಗೆ ಹರಕೆ ತೀರಿಸಲು ಬಂದರು. ಅವರ ಎರಡನೆಯ ಪತ್ನಿ ಅಲಮೇಲಮ್ಮನವರು ಶ್ರೀರಂಗಪಟ್ಟಣದ ಸರ್ಕಾರಕ್ಕೆ ವಹಿಸಿಕೊಟ್ಟರು. ಆದರೆ ಅವರು ತನ್ನ ಗಂಡ ಸಾಯುವ ಮೊದಲು ತಲಕಾಡಿಗೆ ಬಂದರು. ಶ್ರೀರಂಗಪಟ್ಟಣದ ರಾಜ್ಯವನ್ನು ಮೈಸೂರು ರಾಜಮನೆತನಕ್ಕೆ ವಹಿಸಿಕೊಟ್ಟರು. ಅಂದಿನಿಂದ ಮೈಸೂರು ರಾಜರ ಅಧೀನದಲ್ಲಿ ಇತ್ತು.
 • ಮೈಸೂರು ಮಹಾರಾಜರು ರಾಣಿಯ ಒಡವೆಗಳನ್ನು ಪಡೆದುಕೊಳ್ಳಲು ಸೈನಿಕರನ್ನು ಕಳುಹಿಸಿದರು. ಆಗ ರಾಣಿ ಅಲುಮೇಲಮ್ಮ ಕಾವೇರಿ ನದಿಯ ದಡಕ್ಕೆ ಹೋಗಿ ತನ್ನ ಒಡವೆಗಳನ್ನು ನದಿಯಲ್ಲಿ ಬಿಸಾಕಿ ತಾನೂ ನೀರನಲ್ಲಿ ಧುಮುಕಿ ಆತ್ಮಹತ್ಯೆ ಮಾಡಿಕೊಂಡಳು. ಆತ್ನಹತ್ನೆ ಮಾಡಿಕೊಳ್ಳುವ ಮುಂಚೆ ಶಾಪವನ್ನು ಕೊಟ್ಟಳು.
 • ತಲಕಾಡು ಮರಳಾಗಿ;
 • ಮಾಲಿಂಗಿ ಮಡುವಾಗಿ
 • ಮೈಸೂರು ಒಡೆಯರಿಗೆ ಮಕ್ಕಳಾಗದೆ ಹೋಗಲಿ -ಅಂದಿನಿಂದಲೂ ಅಲುಮೇಲಮ್ಮನ ಶಾಪ ಇತಿಹಾಸದಲ್ಲಿ ಉಳಿಯಿತು.


 • ಹಳೆಯ ನಗರ ತಲಕಾಡು ಸಂಪೂರ್ಣವಾಗಿ ಮರಳುಗಾಡಾಯಿತು, ಅಂದರೆ ಸುಮಾರು ೧ ಮೈಲಿನಷ್ಟು. ಕೇವಲ ಮೇಲಿನ ಎರಡು ಪಗೋಡಗಳು ಕಾಣಿಸುತ್ತದೆ. ಪ್ರಮುಖವಾಗಿ ನೈಋತ್ಯ ಮುಂಗಾರು ಅವಧಿಯಲ್ಲಿ ಅಲ್ಲಿನ ನಿವಾಸಿಗಳು ತಮ್ಮ ಮನೆಯನ್ನು ತ್ಯಜಿಸುತ್ತಾರೆ, ಕಾರಣ ಅಲ್ಲಿ ೯ ರಿಂದ ೧೦ ಅಡಿಗಳಷ್ಟು ಮರಳು ಸಂಗ್ರಹವಾಗುತ್ತದೆ. ಅದಾಗ್ಯೂ ಮಾಧನಮಂತ್ರಿ ಅಣೆಕಟ್ಟು ಮತ್ತು ಚಾನಲ್ ಗಳ ಪ್ರಭಾವದಿಂದ ಶ್ರೀಮಂತ ತೇವ ಕೃಷಿಯಿಂದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
 • ೩೦ ದೇವಾಲಯಗಳು ಮರಳಿನಲ್ಲಿ ಅಡಗಿದೆ, ಆದರೆ ಕೀರ್ತಿ ನಾರಾಯಣ ದೇವಸ್ಥಾನವು ಮಾತ್ರ ಯಶಸ್ವಿಯಾಗಿ ಉತ್ಖನನವಾಗಿದೆ. ಮರಳು ಮೂಲಕ ತೆರೆದ ಅತ್ಯಂತ ಭವ್ಯವಾದ ದೇವಾಲಯ ವೈಧ್ಯನಾಥೇಶ್ವರ ಎಂಬುದು ಮಾತ್ರ.ಕಳೆದ ಶತಮಾನದ ಆರಂಭಿಕ ಭಾಗದಲ್ಲಿ ಎರಡು ದೇವಾಲಯಗಳು ಆನಂದೇಶ್ವರ ಮತ್ತು ಗೌರಿ ಶಂಕರ ಅಗೆದು ತೆಗೆಯಲಾಯಿತು.
 • ನಾಲ್ಕು ತುಣುಕು ದಾಖಲೆಗಳು ಪಟಾಲೇಶ್ವರ ದೇವಾಲಯದ ಹೊರ

ಕೆಲವು ದಂತ ಕಥೆಗಳು[ಬದಲಾಯಿಸಿ]

 • ಹಲವಾರು ಇತರ ಆಸಕ್ತಿಕರ ದಂತಕಥೆಗಳು ಈ ದೇವಾಲಯವನ್ನು ಸುತ್ತುವರಿದಿದೆ. ಇದು ತಪಸ್ವಿ ಸೋಮದತ್ತರು ಶಿವಪೂಜೆಯನ್ನು ಮಾಡಲು ಸಿದ್ದಾರಣ್ಯ ಕ್ಷೇತ್ರಕ್ಕೆ ಮುಖ್ಯಸ್ಥರಾಗಿರುತ್ತಾರೆ ಎಂದು ನಂಬಲಾಗಿದೆ. ಆದರೆ ಮಾರ್ಗಮಧ್ಯದಲ್ಲಿ ಕಾಡಾನೆಗಳಿಗೆ ಕೊಲ್ಲಲ್ಪಟ್ಟರು. ನಂತರ ಅವರು ಮತ್ತು ಅವರ ಅನುಯಾಯಿಗಳು ಮರು ಅವತರಿಸಿದ್ದಾರೆಂದು ಮತ್ತು ತಲಕಾಡು ಒಂದು ಮರದ ರೂಪದಲ್ಲಿ ಶಿವನಿಗೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆಂದು ನಂಬಲಾಗಿದೆ.
 • ಎರಡು ಬೇಟೆಗಾರರು ತಲಾ ಮತ್ತು ಕಾಡ ಮರ ಕಡಿಯುವಾಗ ಕೊಡಲಿಯಿಂದ ಮರವು ಅಪ್ಪಳಿಸಿ ಅವರ ಮೇಲೆ ಬಿತ್ತು. ಅವರು ರಕ್ತ ಸುರಿಸುತ್ತಾ ಮುಂದಕ್ಕೆ ಹುಡುಕಲು ಒಬ್ಬ ಮರದ ಎಲೆಗಳು ಮತ್ತು ಹಣ್ಣುಗಳ ಜೊತೆಗೆ ಮರದ ಗಾಯ ಧರಿಸಿದ್ದ. ಅವನಿಂದ ಇವರಿಬ್ಬರು ಅಮರರಾದರು. ಶಿವನು ಈ ಘಟನೆಯ ಮೂಲಕ ಸ್ವತಃ ಅ ಸ್ಠಳದಲ್ಲಿ ವಾಸಿಯಾದ ಎಂದು ನಂಬಲಾಗಿದೆ. ಆತನನ್ನು ವೈಧ್ಯನಾಥೇಶ‍್ವರ ಎಂದು ಕರೆಯಲಾಗುತ್ತದೆ. ಇಲ್ಲಿ ಎಲ್ಲಾ ಪಂಚಲಿಂಗಗಳ ಬಗ್ಗೆ ದಂತೆಕಥೆಗಳಿವೆ.
 • ತಲಕಾಡಿನ ಶಿವನಿಗೆ ಗಜಾರಣ್ಯನಾಥ ಎಂದೂ ಕರೆಯುತ್ತಾರೆ. ಇದಕ್ಕೂ ಒಂದು ಕಥೆಯಿದೆ. ಆನೆಯ ಜನ್ಮ ಪಡೆದಿದ್ದ ಸೋಮದತ್ತನೆಂಬ ಋಷಿ ಮತ್ತು ಆತನ ಶಿಷ್ಯರು ಇಲ್ಲಿ ಮೋಕ್ಷ ಪಡೆದಿದ್ದರಿಂದ ಇದು ಗಜಾರಣ್ಯ ಕ್ಷೇತ್ರವೆಂದು ಪ್ರಸಿದ್ಧವಾಗಿದೆ[೬]. ಇಂದಿಗೂ ತಲಕಾಡು[೭] ತನ್ನ ಪ್ರಾಚೀನ ಸಂಪತ್ತನ್ನು ಉಳಿಸಿಕೊಂಡು8ಬಂದಿದ್ದು ಸುಮಾರು ಇಪ್ಪತ್ತು ಸಾವಿರ ಜನಸಂಖ್ಯೆಯನ್ನು ಹೊಂದಿದೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿನೀಡುತ್ತಾರೆ .

ದೇವಾಲಯಗಳು[ಬದಲಾಯಿಸಿ]

 • ತಲಕಾಡು[೮] ದೇವಾಲಯಗಳನ್ನು ಮರಳು ಆವರಿಸುತ್ತದೆ. ೨೦೦೯ರಲ್ಲಿ ನಡೆದ ಪಂಚಲಿಂಗ ದರ್ಶನ ಹಾಗೂ ಪ್ರತಿ ೧೨ ವರ್ಷಕ್ಕೊಮ್ಮೆ ನಡೆಯುವ ಪಂಚಲಿಂಗ ದರ್ಶನ[೯]ವು ಪ್ರಸಿದ್ಧಿಯಾಗಿದೆ.
 • ಎರಡು ನಕ್ಷತ್ರಗಳು ಒಂದುಗೂಡಲು ಅಂದರೆ ಪಂಚಲಿಂಗ ದರ್ಶನ ಕಾರ್ತಿಕ ಮಾಸದಲ್ಲಿ ಅಮವಾಸ್ಯೆಯ ದಿನ ಆಚರಿಸಲಾಗುತ್ತದೆ. ಸಂಪ್ರದಾಯಸ್ಥರು ಮೊದಲು ಗೋಕರ್ಣ ತೀರ್ಥದಲ್ಲಿ ಸ್ನಾನ ಮಾಡಬೇಕು. ನಂತರ ಗೋಕರ್ಣೇಶ್ವರ ಮತ್ತು ಚಂಡಿಕಾ ದೇವಿ ಪೂಜೆ, ತದನಂತರ ವೈಧ್ಯನಾಥೇಶ್ವರನ ಪೂಜೆ, ನಂತರ ಕ್ರಮವಾಗಿ ಅರ್ಕೇಶ್ವರ, ಪಾತಾಳೇಶ್ವರ, ಮರುಳೇಶ್ವರ ಮತ್ತು ಮಲ್ಲಿಕಾರ್ಜುನರಿಗೆ ಪೂಜೆ.
 • ಅಂತಿಮವಾಗಿ ಕೀರ್ತಿ ನಾರಾಯಣ ಪೂಜೆ. ಸ್ಥಳೀಯ ದಂತ ಕಥೆಯ ಪ್ರಕಾರ, ರಾಮಾನುಜಾಚಾರ್ಯರು ಕರ್ನಾಟಕದಲ್ಲಿ ಬಿಡಾರ ಹೂಡಿ ದಾಗ ಅವರು ಪಂಚ ನಾರಾಯಣ ದೇವಾಲಯವನ್ನು ಸ್ಥಾಪಿಸಿದರು. ಅಂದೇ ಕೀರ್ತಿ ನಾರಾಯಣ ದೇವಾಲಯವನ್ನು ಪ್ರತಿಷ್ಠಾಪಿಸಲಾಯಿತು.
 1. ತಲಕಾಡು ಪಾತಾಳೇಶ್ವರ,
 2. ಮರುಳೇಶ್ವರ,
 3. ಅರ್ಕೇಶ್ವರ,
 4. ವೈದ್ಯನಾಥೇಶ್ವರ ಮತ್ತು
 5. ಮಲ್ಲಿಕಾರ್ಜುನ ದೇವಾಲಯಗಳು ಐದು ಲಿಂಗಗಳನ್ನು ಪ್ರತಿನಿಧಿಸಿಲು, ಶಿವನ ೫ ಮುಖಗಳನ್ನು ಪಂಚಪತಿ ಎಂದು ರೂಪಿಸಲು ಸಾಧ್ಯವಾಯಿತು. ಈ ದೇವಾಲಯದಲ್ಲಿ ಕೀರ್ತಿ ನಾರಾಯಣ ದೇವಾಲಯವೂ ಕೂಡ ಪಂಚ ನಾರಾಯಣದಲ್ಲಿ ಒಂದಾಗಿದೆ. ಇಲ್ಲಿ ಸುಮಾರು ಕ್ರಿ.ಶ 1880 ರಲ್ಲಿ ಕ್ರೈಸ್ತ ಮಿಷನರಿಗಳು ಈ ಸ್ಥಳದಲ್ಲಿ ಕ್ರೈಸ್ತ ಧರ್ಮವನ್ನೂ ಸಹ ಪ್ರಾರಂಭಿಸಿರುತ್ತಾರೆ.

Gallery[ಬದಲಾಯಿಸಿ]

ಹೆಚ್ಚಿನ ಓದಿಗೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. http://vikrama.in/%E0%B2%A4%E0%B2%B2%E0%B2%95%E0%B2%BE%E0%B2%A1%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AA%E0%B2%82%E0%B2%9A%E0%B2%B2%E0%B2%BF%E0%B2%82%E0%B2%97-%E0%B2%A6%E0%B2%B0%E0%B3%8D/
 2. https://kannada.oneindia.com/news/mysore/talakadu-panchalinga-darshana-history-mythology-story-079743.html
 3. http://www.shastriyakannada.org/DataBase/KANNADA%20UNICODE%20HTML/Land%20history%20and%20persons/GANGAS%20OF%20TALAKADU.html
 4. https://honalu.net/2015/04/01/%E0%B2%A8%E0%B2%AE%E0%B3%8D%E0%B2%AE-%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6%E0%B2%B0%E0%B2%B8%E0%B2%B0%E0%B3%81-%E0%B2%A4%E0%B2%B2%E0%B2%95%E0%B2%BE%E0%B2%A1%E0%B2%BF%E0%B2%A8/
 5. https://vijaykarnataka.indiatimes.com/religion/-/articleshow/15533816.cms
 6. http://rcmysore-portal.kar.nic.in/temples/talakadutemple/kan-sthala.html
 7. http://kannada.webdunia.com/article/about-jainism-in-kannada/%E0%B2%A4%E0%B2%B2%E0%B2%95%E0%B2%BE%E0%B2%A1%E0%B3%81-107052500010_1.htm
 8. https://kannada.nativeplanet.com/talakadu/
 9. http://rcmysore-portal.kar.nic.in/temples/talakadutemple/kan-sthala.html
"https://kn.wikipedia.org/w/index.php?title=ತಲಕಾಡು&oldid=930100" ಇಂದ ಪಡೆಯಲ್ಪಟ್ಟಿದೆ