ಗಂಗ (ರಾಜಮನೆತನ)

ವಿಕಿಪೀಡಿಯ ಇಂದ
Jump to navigation Jump to search
ಗಂಗರ ಸಾಮ್ರಾಜ್ಯದ ವಿಸ್ತಾರ

ಗಂಗರು ಸುಮಾರು ೪ನೇ ಶತಮಾನದಿಂದ ಸುಮಾರು ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಧಗಳನ್ನು ಬೆಳಸಿ ಸರಿಸಮಾನರಾಗಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ). ೮ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು. ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ.ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೊಳತೂರು ಗ್ರಾಮದ ಶ್ರೀ ಸೋಮೇಶ್ವರಸ್ವಾಮಿ ದೇವಾಲಯ.

ಗಂಗ ನಾಡಿನ ತಿರುಳುಭಾಗವನ್ನು ಗಂಗವಾಡಿ ಎಂದು ಕರೆಯಲಾಗುತ್ತಿತ್ತು. ಇದು ೯೬೦೦೦ ಗ್ರಾಮಗಳ ಘಟಕ - ಶಾಸನಗಳಲ್ಲಿ ಗಂಗವಾಡಿ ತೊಂಭತ್ತಾರುಸಾಸಿರ ಎಂದೇ ಸಾಮಾನ್ಯವಾದ ಉಲ್ಲೇಖ.'ಗಂಗರು ಮೂಲತಃ ಪಾ ಪಾಳೇಗಾರರ ಪಂಗಡದವರಾದ ಬುಡಕಟ್ಟು ಇಗಿನ ವಾಲ್ಮೀಕಿನಾಯಕ ಸಮಾಜಕ್ಕೆ ಸೇರಿದವರು' ಗಂಗವಾಡಿಯ ನಾಗರಿಕರೆ ಗಂಗವಾಡಿಕಾರರು. ಈ ಹೆಸರು ಇಂದಿಗೂ ಪಾಳೇಗಾರು‌ಎಂದಾಗಿ ಉಳಿದಿಕೊಂಡು ಬಂದಿದೆ.

ಗಂಗ ರಾಜವಂಶದ ಸ್ಥೂಲ ಚರಿತ್ರೆ[ಬದಲಾಯಿಸಿ]

ಗಂಗರು ಸ್ಥಳಿಯರಾಗಿದ್ದು ಕೋಲಾರ,ಬೆಂಗಳೂರು,ತುಮಕೂರು,ಮೈಸೂರು,ಚಾಮರಾಜನಗರ,ಮಂಡ್ಯ,ಹಾಸನ ಜಿಲ್ಲೆಗಳನ್ನು ಒಳಗೊಂಡಂತೆ ದಕ್ಷಿಣ ಕರ್ನಾಟಕದಲ್ಲಿ ಶಾತವಾಹನರ ನಂತರ ಅಧಿಕಾರಕ್ಕೆ ಬಂದರು. ರೈತ ಸಮುದಾಯಕ್ಕೆ ಸೇರಿದವರಾಗಿದ್ದರು. ಇವರ ಮೊದಲ ರಾಜಧಾನಿ ಕೋಲಾರ.ನಂತರ ತಲಕಾಡಿನಿಂದ ಆಳಿದರು. ಚನ್ನಪಟ್ಟಣ ಬಳಿಯ ಮಾಕುಂದ ಮತ್ತು ನೆಲಮಂಗಲ ಬಳಿಯ ಮಣ್ಣೆ ಇವರ ಉಪ ರಾಜಧಾನಿಗಳಾಗಿದ್ದವು.ಇವರು ಕ್ರಿ.ಶ.೩ನೇಶತಮಾನದಿಂದ ೧೦ ನೇ ಶತಮಾನದವರೆಗೆ ಸುಮಾರು ೮೦೦ ವರ್ಷಗಳ ಕಾಲ ಸುಧೀರ್ಘ ಆಳ್ವಿಕೆ ನಡೆಸಿದರು.ಇವರು ಜೈನಧರ್ಮಕ್ಕೆ ವಿಶೇಷ ಒತ್ತು ನೀಡಿದರು. ಗಂಗರಲ್ಲಿ ಪ್ರಸಿದ್ಧನಾದ ದೊರೆ ಶ್ರೀಪುರುಷನು ರಾಷ್ಟ್ರಕೂಟರ ವಿರುದ್ಧ ಸುಧೀರ್ಘ ಕಾಲ ಹೋರಾಟ ನಡೆಸಿದನು. ಶ್ರೀಪುರುಷನು ಕುಣಿಗಲ್ಲಿನ ದೊಡ್ಡಕೆರೆಯನ್ನು ನಿರ್ಮಿಸಿದನು. ರಾಚಮಲ್ಲನ ಮಂತ್ರಿಯಾದ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಸು. ಕ್ರಿ.ಶ. ೯೮೦ರಲ್ಲಿ ಗೊಮ್ಮಟೇಶ್ವರನ ಏಕಶಿಲಾ ಮಹಾಮೂರ್ತಿಯನ್ನು ಕಡೆಸಿದನು. ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕರ್ನಾಟಕದಲ್ಲಿ ಕೊನೆಗೊಂಡಿತು ಹಾಗು ಇವರ ಮುಂದಿನ ಪೀಳಿಗೆಯು ಮುಂದೆ ಓಡಿಶದಲ್ಲಿ ನೆಲೆಯೂರಿ ಅಲ್ಲಿ ಸಾಮ್ರಾಜ್ಯ ಸ್ತಾಪಿಸಲು ಯಶಸ್ವಿಯಾಯಿತು ಅದನ್ನೇ ಪೂರ್ವದ ಗಂಗರು ಎಂದು ಇತಿಹಾಸಕಾರರು ಕರೆದರು. ಇವರ ವಂಶಸ್ತರಾದ ಪೂರ್ವದ ಗಂಗರು ವಿಶ್ವ ಪ್ರಸಿದ್ದ ಕೊನಾರ್ಕ್ ಸೂರ್ಯ ಮಂದಿರ ಹಾಗು ಪೂರಿ ಜಗನ್ನಾಥ ಮಂದಿರವನ್ನು ಓಡಿಶದಲ್ಲಿ ಕಟ್ಟಿದರು.

.

ಪ್ರಸಿದ್ಧ ರಾಜರುಗಳು[ಬದಲಾಯಿಸಿ]

೧.ದಡಿಗ or ಕೊಂಗುಣೀವರ್ಮ, (ಕ್ರಿ.ಶ. ೩೨೫-೩೫೦)-ಇವನು ಗಂಗ ವಂಶದ ಸ್ಥಾಪಕ ೨. ಮಾಧವ, (ಕ್ರಿ.ಶ. ೩೫೦-೩೭೫) ೩. ಆರ್ಯವರ್ಮ, (ಕ್ರಿ.ಶ. ೩೭೫-೪೦೦) ೪. ಮಾಧವ-೩, (ಕ್ರಿ.ಶ. ೪೪೦-೪೬೯) ೫. ಅವಿನೀತ, (ಕ್ರಿ.ಶ. ೪೬೯-೫೨೯) ೬. ದುರ್ವಿನೀತ, (ಕ್ರಿ.ಶ. ೫೨೯-೫೭೯) ೭. ಶ್ರೀವಿಕ್ರಮ, (ಕ್ರಿ.ಶ. ೬೨೯-೬೫೪) ೮. ಭೂವಿಕ್ರಮ, (ಕ್ರಿ.ಶ. ೬೫೪-೬೭೯) ೯. ಶಿವಮಾರ-೧, (ಕ್ರಿ.ಶ. ೬೭೯-೭೨೫) ೧೦. ಶ್ರೀಪುರುಷ, (ಕ್ರಿ.ಶ. ೭೨೫-೭೮೮) ೧೧. ಸೈಗೊಟ್ಟ ಶಿವಮಾರ, (ಕ್ರಿ.ಶ. ೭೮೮-೮೧೬) ೧೨. ರಾಚಮಲ್ಲ, (ಕ್ರಿ.ಶ. ೮೧೬-೮೪೩) ೧೩. ನೀತಿಮಾರ್ಗ ಎರೆಗಂಗ (ಕ್ರಿ.ಶ. ೮೪೩-೮೭೦) ೧೪. ರಾಚಮಲ್ಲ-೨, (ಕ್ರಿ.ಶ. ೮೭೦-೯೧೯) ೧೫. ಎರೆಗಂಗ ೧೬. ಬೂತುಗ-೨, ಕ್ರಿ.ಶ. ೯೩೬-೯೬೧) ೧೭. ಮಾರಸಿಂಹ-೨, (ಕ್ರಿ.ಶ. ೯೬೩-೯೭೪) ೧೮. ರಾಚಮಲ್ಲ-೩, (ಕ್ರಿ.ಶ. ೯೭೪-೯೯೯) ೧೯. ರಾಚಮಲ್ಲ-೪,

ಇತರ ರಾಜಮನೆತನಗಳೊಂದಿಗಿನ ಸಂಬಂಧಗಳು[ಬದಲಾಯಿಸಿ]

ಶಿರೋಲೇಖ[ಬದಲಾಯಿಸಿ]

ಗೊಮ್ಮಟೇಶ್ವರ ಇರುವುದು - ಹಾಸನ ಜಿಲ್ಲೆಯಲ್ಲಿ ಶ್ರವಣಬೆಳಗೋಳದ ಪ್ರಾಚೀನ ಹೆಸರು - ಕಾಥವಪುರಿ ಗಂಗರ ಮೊದಲ ರಾಜಧಾನಿ - ಕುವಲಾಲ ಗಂಗರ ಎರಡನೇ ರಾಜಧಾನಿ - ತಲಕಾಡು ಗಂಗರ ಮೂರನೇ ರಾಜಧಾನಿ - ಮಾಕುಂದ ಗಂಗರ ಕಾಲದ ಗಣ್ಯ ಕೇಂದ್ರ - ನಂದಿ ದುರ್ಗ ಅಥವಾ ನಂದಿ ಬೆಟ್ಟ ದಡಿಗನಿಗೆ ಇರುವ ಇನ್ನೋಂದು ಹೆಸರು - ಕೊಂಗುಣಿವರ್ಮ ಗೊಮ್ಮಟೇಶ್ವರನ ವಿಗ್ರಹ ನಿರ್ಮಾಣವಾದ ವರ್ಷ - ಕ್ರಿ.ಶ. 982 ಗಂಗರ ಕಾಲದ ಗ್ರಾಮದ ಮುಖ್ಯಸ್ಥ - ಪ್ರಭುಗಾವುಂಡ ಗಂಗರ ಕಾಲದಲ್ಲಿದ್ದ ಹಿರಿಯ ರೈತರ ಸಮಿತಿ - ಪ್ರಜೆಗಾಮುಂಡ ಗಂಗರ ಕಾಲದಲ್ಲಿದ ಕುಟುಂಬ ಪ್ರಮುಖರ ಕೂಟ - ಮಹಾಜನ ಗಂಗರ ಕಾಲದಲ್ಲಿದ ದೊಡ್ಡ ನೆಯ್ಗೆಯ ಕೇಂದ್ರ - ವಿಜಯ ಪುರ ಗಂಗರ ಕಾಲದ ಶಿಕ್ಷಣ ಕೇಂದ್ರಗಳು - ಮಠಗಳು , ಅಗ್ರಹಾರ , ಹಾಗೂ ಬ್ರಹ್ಮಪುರಿ ಬ್ರಹ್ಮಪುರಿ ಎಂದರೆ - ಒಂದು ಪೇಟೆಯಲ್ಲಿನ ಬ್ರಾಹ್ಮಣರ ಬೀದಿ ಗಂಗರ ಕಾಲದ ಪ್ರಸಿದ್ದ ವಿದ್ಯಾಕೇಂದ್ರ - ಶ್ರವಮಬೆಳಗೋಳ ಜೈನ ಮಠ ಬಾಣನ “ ಕಾದಂಬರಿ ” ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು - ನಾಗವರ್ಮ ಗಂಗರ ಕಾಲದಲ್ಲಿ ಭತ್ತ ಕುಟ್ಟುವಾಗ ಹೇಳುವ ಗೀತೆಗಳನ್ನು ಒಳಗೊಂಡ ಕೃತಿ - ಗಜಾಷ್ಟಕ ಗಂಗರ ಕಾಲದ ಪಂಚಕೂಟ ಬಸದಿ ಇರುವ ಸ್ಥಳ - ಕದಂಬ ಹಳ್ಳಿ ಬೆಂಗಳೂರಿನ ಮ್ಯೂಸಿಯಂ ನಲ್ಲಿರುವ ಗಂಗರ ಕಾಲದ ವೀರಗಲ್ಲಿನ ಹೆಸರು - ಬೇಗೂರು ವೀರಗಲ್ಲು

ಇತಿಹಾಸ[ಬದಲಾಯಿಸಿ]

ಕರ್ನಾಟಕದ ಇತಿಹಾಸ ಒಂದು ಭಾಗ
 - 
GBerunda.JPG
ಕರ್ನಾಟಕದ ಹೆಸರಿನ ಮೂಲ
ಕದಂಬ ಸಾಮ್ರಾಜ್ಯ ಮತ್ತು ಗಂಗ ಸಾಮ್ರಾಜ್ಯ
ಚಾಲುಕ್ಯ ಸಾಮ್ರಾಜ್ಯ
ರಾಷ್ಟ್ರಕೂಟ ಸಾಮ್ರಾಜ್ಯ
ಕಲ್ಯಾಣಿಯ ಚಾಲುಕ್ಯ ಸಾಮ್ರಾಜ್ಯ
ವೆಂಗಿಯ (ಪೂರ್ವ) ಚಾಲುಕ್ಯರು ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ಬಹಮನಿ ಸುಲ್ತಾನರ ಆಳ್ವಿಕೆ
ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆ
ಮೈಸೂರು ಸಂಸ್ಥಾನ
ಕರ್ನಾಟಕದ ಏಕೀಕರಣ

ವಾಸ್ತು ಶಿಲ್ಪ    ಕೋಟೆಗಳು    ರಾಜ ಮಹಾರಾಜರು

ಗಂಗರು ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು ಗಂಗರ ರಾಜ್ಯ ಕೋಲಾರ , ತುಮಕೂರು , ಬೆಂಗಳೂರು , ಮಂಡ್ಯ ಹಾಗೂ ಮೈಸೂರನ್ನ ಒಳಗೊಂಡಿತ್ತು . ಗಂಗರು ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಸಾಮಾಂತರಾಗಿದ್ದರು . “ಕೋಲಾರ ” ಅಥವಾ “ ಕುವಲಾಲ ” ಇವರ ಆರಂಭದ ರಾಜಧಾನಿ ಗಂಗರ ಎರಡನೇ ರಾಜಧಾನಿ “ ತಲಕಾಡು “ ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು . ಗಂಗರಲ್ಲಿ ಪ್ರಸಿದ್ದನಾದ ದೊರೆ “ ಶ್ರೀ ಪುರುಷ” ರಾಚಮಲ್ಲನ ಮಂತ್ರಿಯಾದ “ಚಾವುಂಡ ರಾಯನು ” ಶ್ರವಣ ಬೆಳಗೋಳದಲ್ಲಿ ಕ್ರಿ.ಶ.980 ರಲ್ಲಿ “ಗೊಮ್ಮಟೇಶ್ವರನ ” ಏಕಶಿಲಾ ಮೂರ್ತಿಯನ್ನು ಕೆತ್ತಿಸಿದನು . ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು ಚನ್ನಪಟ್ಟಣ್ಣದ “ ಮಾಕುಂದ ” ಹಾಗೂ ಬೆಂಗಳೂರು ಜಿಲ್ಲೆಯ ನೆಲಮಂಗಲ ಬಳಿಯ “ ಮನ್ನೇಯ ” ಇವರ ಿತರ ರಾಜಧಾನಿ . ಗಂಗರನ್ನು “ ತಲಕಾಡಿನ ಗಂಗರು ” ಎಂದು ಪ್ರಸಿದ್ದರಾಗಿದ್ದರು . ಗಂಗರ ರಾಜ ಮುದ್ರೆ ಅಥವಾ ರಾಜ ಲಾಂಛನ “ ಮದಗಜ ” ಗಂಗರು “ ಗಂಗಟಕಾರರು ” ಎಂದು ಹೆಸರುವಾಸಿಯಾಗಿದ್ದರು . ಗಂಗರು ಆಳಿತದ ಪ್ರದೇಶವನ್ನು “ ಗಂಗವಾಡಿ ಅಥವಾ ಗಂಗನಾಡು ” ಎಂದು ಕರೆಯುತ್ತಿದ್ದರು . ಗಂಗರು ಸ್ವತಂತ್ರರಾಗಿ ಕ್ರಿ.ಶ. 350 – 600 ರವರೆಗೆ ಆಳ್ವಿಕೆ ಮಾಡಿದ್ದಾರೆ . ಗಂಗರು ಚಾಲುಕ್ಯರ ಸಾಮಂತರಾಗಿ ಕ್ರಿ.ಶ.600 - 758 ರವರೆಗೆ ಆಳ್ವಿಕೆ ಮಾಡಿದರು . ಗಂಗರು ರಾಷ್ಷ್ರಕೂಟರ ಸಾಮಾಂತರಾಗಿ ಕ್ರಿ.ಶ.757 – 973 ರವರೆಗೆ ಆಳ್ವಿಕೆ ಮಾಡಿದರು . ಗಂಗರು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973 – 990 ರವರೆಗೆ ಆಳ್ವಿಕೆ ಮಾಡಿದರು . “ತಲಕಾಡು ” ಗಂಗರ ಪ್ರಧಾನ ಆಡಳಿತ ಕೇಂದ್ರವಾಗಿತ್ತು .

ಗಂಗರ ಮೂಲ ದೈವಿ ಸಿದ್ದಾಂತದ ಪ್ರಕಾರ ಇವರು ಇಕ್ಷಾಕು ವಂಶದವರೆಂದು ಕಣ್ವ ಮೂವಗ ಪ್ರಕಾರ ಇವರು “ ಕಣ್ವ ” ವಂಶದವರು ಎಂದು ತಮಿಳು ಮೂಲ - ಇವರು ಮೂಲತಃ “ಪೆರೂರು ” ಆಗಿದ್ದು ( ಕೊಯಮತ್ತೂರು ) ಇವರು ತಮಿಳು ಮೂಲದಿಂದ ಬಂದವರೆಂದು ಹೇಳಲಾಗಿದೆ . ಕನ್ನಡ ಸಿದ್ದಾಂತದ ಪ್ರಕಾರ ಇವರು ಅಚ್ಚ ಕನ್ನಡಿಗರು - ಗಂಗರು ರಾಜಧಾನಿ ತಲಕಾಡು ದಕ್ಷಿಣ ಗಂಗೆ ಕಾವೇರಿ ನದಿಯ ದಡದಲ್ಲಿದ್ದರಿಂದ ಈ ವಂಶಕ್ಕೆ “ಗಂಗ ” ಎಂದು ಹೆಸರು ಬಂದಿದೆ .

ಗಂಗ ಮನೆತನದ ರಾಜರುಗಳು ದಡಿಗ ಒಂದನೇ ಮಾಧವ ಎರಡನೇ ಮಾಧವ ಮೂರನೇ ಮಾಧವ ಅವನೀತ ದುರ್ವಿನೀತ ಶ್ರೀಪುರುಷ ಎರಡನೇ ಶಿವಮಾರ ಒಂದನೇ ರಾಚ ಮಲ್ಲ

ಗಂಗರ ರಾಜಕೀಯ ಇತಿಹಾಸ '( ದಡಿಗ or ಕೊಂಗುಣಿ ವರ್ಮ ) ಇವನು ಗಂಗ ವಂಶದ ಸ್ಥಾಪಕ “ ಕುವಲಾಲ ಅಥವಾ ಕೋಲಾರ ” ಇವನ ರಾಜಧಾನಿ . ಬಾಣರನ್ನು ಸೋಲಿಸಿ ಗಂಗ ವಂಶಕ್ಕೆ ಅಡಿಪಾಯ ಹಾಕಿದ ಧರ್ಮ ಮಹಾರಾಜ ಹಾಗೂ ಬಾಣ ವಂಶದವನ ದಾವಲನ ಎಂಬುದು ಇವನ ಬಿರುದುದಳು .' ಈತನ ಗುರುವಿನ ಹೆಸರು - ಸಿಂಹ ನಂದಿ ( ಜೈನಗುರು ) ಸಿಂಹ ನಂದಿಯ ಇಚ್ಛೆಯ ಮೇರೆಗೆ ಶಿವಮೊಗ್ಗದ “ ದುಂಡಲಿ ” ಎಂಬಲ್ಲಿ ಒಂದು ಚೈತ್ಯಲಾಯವನ್ನು ನಿರ್ಮಿಸಿದನು .

ಒಂದನೇ ಮಾಧವ ದಡಿಗನ ನಂತರ ಅಧಿಕಾರಕ್ಕೆ ಬಂದವನು ಈತ ಸ್ವತಃ ಕವಿಯಾಗಿದ್ದನು ಹಾಗೂ ಕವಿಗಳಿಗೆ ಆಶ್ರಯ ನೀಡಿದ್ದನು ಈತ ರಚಿಸಿದ ಕೃತಿ - “ ದತ್ತ ಸೂತ್ರ ” ಇವನ ನಂತರ ಹರಿವರ್ಮ ಹಾಗೂ 2 ನೇ ಮಾಧವ ಆಳಿದರು

ಮೂರನೇ ಮಾಧವ ಇವನು ತಂಡಂಗಾಲ ಮಾಧವ ಎಂದು ಹೆಸರಾಗಿದ್ದಾನೆ . ಈತ ಕದಂಬ ಅರಸ ಕಾಕುಸ್ಥವರ್ಮನ ಮಗಳನ್ನು ವಿವಾಹವಾಗಿದ್ದ ವಿಜಯ ಕೀರ್ತಿ -ಅವನ ದೀಕ್ಷಾ ಗುರುಗಳಾಗಿದ್ದರು .

ಅವನೀತ ಈತ ಮೂರನೇ ಮಾಧವನ ಮಗ ಈತ ಶಿವನ ಆರಾಧಕನಾಗಿದ್ದನು . ಈತ ಸರ್ವಧರ್ಮ ಸಮನ್ವಯಿಯಾಗಿದ್ದನು ಇತನನ್ನ ಶಾಸನಗಳು “ ಹರ ಚರಣಾರ ಎಂದ ಪ್ರಣಿಪಾತ ” ಎಂದು ಉಲ್ಲೇಕಿಸಿದೆ.

ದುರ್ವಿನೀತ ಈತ ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ. ಈತ ವೈಷ್ಣವ ಮತಾವಲಂಬಿಯಾಗಿದ್ದನು. ಬಾರವಿಯ 15 ನೇ ದಗಂಕ್ಕೆ ಭಾಷ್ಯವನ್ನ ಬರೆದನು ಇತ “ಗುಣಾಡ್ಯನ ” “ ವಡ್ಡ ಕಥಾವನ್ನು ” ಪೈಶಾಚಿ ಭಾಷೆಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದರು ಆತನ ಗುರು - ಪುಷ್ಯಪಾದ ಅಥವಾ ದೇವಾನಂದೀತನ ಬಿರುದುಗಳು - ಅವನೀತ ಸ್ತರ ಪೂಜಾಲಾಯ . ಅಹೀತ , ಅನೀತ ಹಾಗೂ ಧರ್ಮ ಮಹಾರಾಜ ಕುಲೋಥರ , ನೀತಿಶಾಸ್ತ್ರ ವಕ್ತ , ಪ್ರಯೋಕ್ಷ ಕುಶಲ ಈತನ ಗುರುಗಳಿಂದ ದೇವಾನಂದಿಯು ಸಂಸ್ಕೃತ ವ್ಯಾಕರಣ ಶಬ್ದಾವತಾರ ವನ್ನು ಬರೆದಿದ್ದಾನೆ .

'ಶ್ರೀಪುರಷ ದುರ್ವಿನೀತ ನಂತರ ಅಧಿಕಾರಕ್ಕೆ ಬಂದವನು ಈತ “ ಗಜಶಾಸ್ತ್ರ ” ಎಂಬ ಕೃತಿಯನ್ನ ರಚಿಸಿದರು ಈತ ರಾಜಧಾನಿಯನ್ನು ಮಾಕುಂದದಿಂದ - ಮಾನ್ಯಪರಕ್ಕೆ ಬದಲಾಯಿಸಿದನು ಒಂದನೇ ಶಿವಮಾರನಿಗೆ - ್ವನಿ ಮಹೇಂದ್ರ ಎಂಬ ಬಿರುದಿತ್ತು “ತುಂಡಕ ಕದನ ” ದಲ್ಲಿ ಪಲ್ಲವರನ್ನು ಸೋಲಿಸಿದವನು ಇವನ ಕಾಲದಲ್ಲಿ ಗಂಗರಾಜ್ಯ “ಶ್ರೀರಾಜ್ಯ ” ಎಂದು ಕರೆಸಿಕೊಂಡಿತು . ಈತನ ಬಿರುದುಗಳು - ರಾಜಕೇಸರಿ , ಪೆರ್ಮಾಡಿ , ಶ್ರೀವಲ್ಲಭ , ಬೀಮಕೋಪ

ಎರಡನೇ ಶಿವಮಾರ ಈತನ ಇನ್ನೊಂದು ಹೆಸರು - ಸೈಗೋತ ಈತನ ಕೃತಿಗಳು - ಗಜಾಷ್ಮಕ , ಸೇತುಬಂಧ ಹಾಗೂ ಶಿವಮಾರ ತರ್ಕ ಈತ ಶ್ರವಣಬೆಳಗೊಳದಲ್ಲಿ ಜೈನ ಬಸದಿಯನ್ನು ನಿರ್ಮಿಸಿದನು ಈತನ ತಂದೆಯ ಹೆಸರು - ಶ್ರೀಪುರುಷ

ಎರಡನೇ ಬೂತುಗ ಈತ “ ತತ್ಕೋಳಂ ಕದನದಲ್ಲಿ ” ಚೋಳರ ರಾಜಾದಿತ್ಯನನ್ನು ಕೊಂದನು . ಆತನ ಬಿರುದು - ಮಹಾರಾಜಾದಿರಾಜ

ಮಂತ್ರಿ ಚಾವುಂಡರಾಯ ಈತ ಗಂಗರ ಆಸ್ಥಾನದಲ್ಲಿ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿದ್ದ ಈತ ಅಜ್ಞಾತಸೇನಾ ಭಟ್ಟಾರಕ ಹಾಗೂ ನೇಮಿಚಂದ್ರ ಮುನಿಯ ಅನುಯಾಯಿ ಈತನ ಬಿರುದು - ಸತ್ಯವಿದಿಷ್ಠಿರ ಈತನ ಕೃತಿಗಳು - ಸಂಸ್ಕೃತದಲ್ಲಿ “ಚರಿತ್ರಾಸಾರ ” ಕನ್ನಡದಲ್ಲಿ ಚಾವುಂಡರಾಯ ಪುರಾಣ ಅಥವಾ ಅಥವಾ “ ತ್ರಿಷಷ್ಠಿ ಲಕ್ಷಣ ಮಹಾಪುರಾಣ ” ಹಾಗೂ ಲೋಕೋಪಾಕರ ( ವಿಶ್ವಕೋಶ ) ಈತನ ಮೊದಲ ಹೆಸರು - ಚಾವುಂಡರಾಜ ರಾಚಮಲ್ಲನು ಚಾವುಂಡರಾಯನಿಗೆ ನೀಡಿದ ಬಿರುದು - “ರಾಯ ’ ಚಾವುಂಡರಾಯನ ಮಹಾತ್ಸಾದನೆ -' ಶ್ರವಣಬೆಳಗೋಳದ ಬಾಹುಬಲಿಯ ವಿಗ್ರಹ ನಿರ್ಮಾಣ ಈತನ ಆಶ್ರಯ ಪಡೆದ ಕನ್ನಡದ ಹೆಸರಾಂತ ಕವಿ - ರನ್ನ ಈತ ಗಂಗರ ಅರಸ 2ನೇ ಮಾರಸಿಂಹ ಆಳ್ವಿಕೆಯಲ್ಲಿ - ಪ್ರಧಾನ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿ ನಿಯುಕ್ತಿಗೊಂಡ 4 ನೇ ರಾಚಮಲ್ಲ ಈತನಿಗೆ ನೀಡಿದ ಬಿರುದು - ಸಮರ ಪರಶುರಾಮ ಗೋಣೂರು ಕದನದಲ್ಲಿ ಜಗದೇಕ ವೀರನನ್ನು ಸೋಲಿಸಿ “ವೀರ ಮಾರ್ತಂಡ ” ಎಂಬ ಬಿರುದು ಪಡೆದ . ಪಾಂಡ್ಯ ಅರಸ ರಾಜಾದಿತ್ಯನನ್ನು ಸೋಲಿಸಿ “ರಣಸಂಗ ಸಿಂಗ ” ಎಂಬ ಬಿರುದನ್ನು ಪಡೆದ ಈತನ ಬಿರುದು - ಭುಜ ವಿಕ್ರಮ , ಸಮರ ದುರಂಧರ ಈತನ ತಾಯಿ - ಕಾಳಲಾದೇವಿ ಗೊಮ್ಮಟೇಶ್ವರನನ್ನು ಕೆತ್ತನೆಯ ಮೇಲ್ವಿಚಾರಕ ಶಿಲ್ಪಿ - ಅರಿಪ್ಪಾನೇಮಿ ಗೊಮ್ಮಟೇಶ್ವರ ವಿಗ್ರಹ ನಿರ್ಮಾಣವಾದದು - ಕ್ರಿ.ಶ.981 – 983 ಈತನ ಇನ್ನೊಂದು ಮಹಾನ್ ಕಾರ್ಯ - ಚಾವುಂಡರಾಯ ಬಸದಿಯ ನಿರ್ಮಾಣ

ಗಂಗರ ಆಢಳಿತ ರಾಜ - ಆಡಳಿತದ ಮುಖ್ಯಸ್ಥ ಈತನನ್ನು “ ಧ್ಮಮಾಹಾರಾಜ” ರೆಂದು ಕರೆಯುತ್ತಿದ್ದರು . ಮಂತ್ರಿ ಮಂಡಲ - ರಾಜನಿಗೆ ಸಹಾಯಕರಾಗಿದ್ದರು ಪ್ರಧಾನ ಮಂತ್ರಿಯನ್ನು - ಸರ್ಮಾಧಿಕಾರಿ ಎಂದು ಕರೆಯುತ್ತಿದ್ದರು ವಿದೇಶಾಂಗ ಮಂತ್ರಿಯನ್ನು - ಸಂಧಿ ವಿಗ್ರಹಿ ಎಂದು ಕರೆಯುತ್ತಿದ್ದರು ಸೈನ್ಯದ ಮುಖ್ಯಸ್ಥ - ದಂಡನಾಯಕ ನಾಗಿರುತ್ತಿದ್ದ ಖಜಾನೆ ಮುಖ್ಯಧಿಕಾರಿಯನ್ನು - ಹಿರಿಯ ಭಂಡಾರಿಕ ಎಂದು ಕರೆಯುತ್ತಿದ್ದರು ರಾಜನ ಉಡುಪಗಳ ಉಸ್ತುವಾರಿಕ - ಮಹಾಪಸಾಯಿಕಿ ಅರಮನೆಯ ಮೇಲ್ವಿಚಾರಕನನ್ನು - ಮನೆ ವರ್ಗಡೆ ಎಂದು ಕರೆಯುತ್ತಿದ್ದರು . ಲೆಕ್ಕ ಪತ್ರಗಳ ವಿಭಾಗಾಧಿಕಾರಿಯನ್ನು - ಶ್ರೀಕರಣಿಕ ಎಂದು ಕರೆಯುತ್ತಿದ್ದರು ರಾಜ್ಯವನ್ನು - ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು ಪ್ರಾಂತ್ಯಗಳ ಮುಖ್ಯಸ್ಥ - ಪ್ರಾಂತ್ಯಾಧಿಕಾರಿ ಪ್ರಾಂತ್ಯಗಳ ವಿಭಾಗಗಳು - ವಿಭಾಗ ಹಾಗೂ ಕಂಪನ ವಿಷಯಗಳ ಮುಖ್ಯಸ್ಥ - ವಿಷಯ ಪತಿ ಕಂಪನಗಳ ಮುಖ್ಯಸ್ಥ - 'ಗೌಡ ಅಥವಾ ನಾಡ ಗೌಡ' ನಗರಾಡಳಿತ ಮುಖ್ಯಸ್ಥ - ನಾಗರೀಕ ಪಟ್ಟಣ್ಣದ ಮುಖ್ಯಸ್ಥ - ಪಟ್ಟಣ್ಣ ಸ್ವಾಮಿ ಗ್ರಾಮಾಢಳಿತ - 'ಗೌಡ' ಮತ್ತು ಕರಣಿಕನಿಗೆ ಸೇರಿತ್ತು . ಗಜದಳದ ಮುಖ್ಯಸ್ಥ - ಗಜ ಸಹನಿ ಅಶ್ವ ಪಡೆಯ ಮುಖ್ಯಸ್ಥ - ಅಶ್ವಾಧ್ಯಕ್ಷ ಗಂಗರ ಕಾಲದ ನಾಣ್ಯಗಳು - ಪೊನ್ನ , ಸುವರ್ಣ , ಗದ್ಯಾಣ , ನಿಷ್ಕ , ಹಾಗೂ ಬೆಳ್ಳಿಯ ಪಣ , ಹಾಗೂ ಹಗ , ಕಾಸು ಇವರ ಸಮಾಜದಲ್ಲಿ ರಾಜರ ಸ್ವಾಮಿ ನಿಷ್ಠೆಗೆ ಪ್ರಾಣತ್ಯಾಗ ಮಾಡುವ ಪದ್ದತಿ - ಗರುಡ ಪದ್ದತಿ , ಅಸ್ಥಿತ್ವದಲ್ಲಿತ್ತು ಸಾಂಸ್ಕೃತಿಕ ಸಾಧನೆ ಶ್ರವಣಬೆಳಗೋಳ ಹಾಗೂ ತಲಕಾಡು ಅವರ ಪ್ರಸಿದ್ದ ಶಿಕ್ಷಮ ಕೇಂದ್ರಗಳು ಕಾಳಮುಬಾ , ಕಪಾಲಿಕಾ ಹಾಗೂ ಪಾಶುಪಥಿ - ಇವರ ಶೈವ ಪಂಥಗಳು ಇವರ ಕಾಲದಲ್ಲಿ ಪ್ರಬಲವಾಗಿ ಬೆಳೆದ ಧರ್ಮ - ಜೈನ ಧರ್ಮ ಗಂಗ ರಾಜ್ಯ ಸ್ಥಾಪನೆಗೆ ಕಾರಣನಾದ ಜೈನ ಮುನಿ - ಸಿಂಹ ನಂದಿ ಶ್ರವಣಬೆಳಗೋಳ ಜೈನರ ಕಾಶಿ ಎಂದು ಪ್ರಸಿದ್ದಿಯಾಗಿದೆ

ಸಾಹಿತ್ಯ, ಸಂಸ್ಕೃತಿ, ಜನಜೀವನ[ಬದಲಾಯಿಸಿ]

ಗಂಗರ ಆಶ್ರಯದಲ್ಲಿ ಬರೆಯಲ್ಪಟ್ಟ ಮಹಾ ಕೃತಿಗಳು

ದತ್ತಕ ಸೂತ್ರ - raja2 ನೇ ಮಾಧವ ಶೂದ್ರಂತ ಹಾಗೂ ಹರಿವಂಶ - ಗುಣವರ್ಮ ಛಂದೋಬುದಿ - 1ನೇ ನಾಗವರ್ಮ ಗಜಾಷ್ಟಕ , ಸೇತುಬಂಧ ,ಶಿವಮಾರ ತರ್ಕ - 2 ನೇ ಶಿವಮಾರ ಚಂದ್ರ ಪ್ರಭಾ ಪುರಾಮ - ವೀರನಂದಿ ಬೃಹತ್ ಕಥಾವನ್ನು ಸಂಸ್ಕೃತ ಭಾಷೆಗೆ ಅನುವಾದ ಹಾಗೂ ಭಾರವಿಯ ಕಿರತಾರ್ಜುನಿಯ ಕೃತಿಗೆ ಭಾಷ್ಯ - ದುರ್ವೀನಿತ ಗಜಶಾಸ್ತ್ರ - ಶ್ರೀಪುರುಷ

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಗಂಗರ ಕೊಡುಗೆ :- ಇವರ ವಾಸ್ತು ಶಿಲ್ಪ ಕದಂಬರು ಹಾಗೂ ಪಲ್ಲವರ ಕಲೆಯ ಮಿಶ್ರಣವಾಗಿದೆ ಮನ್ನೇಯ ಕಪಿಲಶ್ವರ ದೇವಾಲಾಯ - ವಾಸ್ತು ಶಿಲ್ಪಿ ದೃಷ್ಠಿಯಿಂದ ಪ್ರಸಿದ್ದಿ ಗಂಗರ ಕಾಲದ ಪ್ರಮುಖ ಬಸದಿಗಳು - ಪಾಶ್ವನಾಥ ಬಸದಿ ಹಾಗೂ ಚಾವುಂಡರಾಯ ಬಸದಿ ಶ್ರಣಬೆಳಗೋಳದಲ್ಲಿರುವ ಪ್ರಮುಖ ಸ್ಥಂಭಗಳು - ಮಾನಸ್ತಂಭ , ಬ್ರಹ್ಮದೇವರ ಸ್ತಂಭ ಹಾಗೂ ತ್ಯಾಗದ ಬ್ರಹ್ಮ ದೇವರ ಸ್ತಂಭ ಗಂಗರ ಕಾಲದ ಅಭೂತ ಪೂರ್ವ ಶಿಲ್ಪ ಕಲಾ ಕೆತ್ತನೆ - ಶ್ರವಮಬೆಳಗೋಳದ ಗೊಮ್ಮಟ ಇವರ ಕಾಲದಲ್ಲಿ ಪ್ರಸಿದ್ದ ನೃತ್ಯಗಾತಿ - ಬಾಚಲು ದೇವಿ ಬಾಚಲು ದೇವಿಗೆ ಇದ್ದ ಬಿರುದುಗಳು - ನೃತ್ಯವಿಶಾರದೆ ಹಾಗೂ ಪಾತ್ರ ಜಗದವಳೆ

ಗಂಗರ ಆಡಳಿತದ ಹರವು: ಮೊದಲು ‘ಕುವಲಾಳ’(ಕೋಲಾರ)ದಿಂದ ಆಳುತ್ತಿದ್ದ ದಡಿಗ ಮತ್ತು ಮಾದವರು ಹಾಗು ಇನ್ನಿತರ ಗಂಗರಸರು ಹರಿವರ‍್ಮನ ಹೊತ್ತಿನಲ್ಲಿ ( ಕ್ರಿ.ಶ 390- 410) ಕುವಲಾಳವನ್ನುಬಿಟ್ಟು ತಲಕಾಡಿನಿಂದ ಆಳಲಾರಂಬಿಸಿದರು ಹೀಗೆ ತಲಕಾಡು ಮೇಲ್ಪಟ್ಟಣವಾಯಿತು. ಚನ್ನಪಟ್ಟಣ ಬಳಿಯ ಮಾಕುಂದ ಮತ್ತು ನೆಲಮಂಗಲ ಬಳಿಯ ಮಾನ್ಯಪುರ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ಇವರ ಕಿರುಪಟ್ಟಣಗಳಾಗಿದ್ದವು, ಹಾಗು ಮಾನ್ಯಪುರದಲ್ಲಿ ಇವರ ಅರಮನೆ ಕೂಡ ಇದ್ದಿತ್ತು. ಹೀಗಾಗಿ ಕೋಲಾರ, ಬೆಂಗಳೂರು, ತುಮಕೂರು ಇವರ ಆಡಳಿತದ ಬಾಗವಾಯ್ತು. ಅವಿನೀತನು(ಕ್ರಿ.ಶ 469 – 529) ತನ್ನ ಆಡಳಿತದ ಹರವನ್ನು ಕೊಂಗುನಾಡಿನವರೆಗೆ ಹರಡಿದನು, ಹಾಗು ಸೆಂದ್ರಕ (ಚಿಕ್ಕಮಗಳೂರು ಜಿಲ್ಲೆಯ ಬಾಗಗಳು), ಪುನ್ನಾಟ ಮತ್ತು ಪನ್ನಾಡ(ಚಾಮರಾಜನಗರ ಜಿಲ್ಲೆಯ ಬಾಗಗಳು)ದವರೆಗೂ ವಿಸ್ತರಿಸಿದನು.

ಗಂಗನಾಡಿನ ತಿರುಳುಬಾಗವನ್ನು ‘ಗಂಗವಾಡಿ’ ಎಂದು ಕರೆಯಲಾಗುತ್ತಿತ್ತು. ಗಂಗವಾಡಿ ಬಾಗವು ಮಲೆನಾಡು, ಅರೆ-ಮಲೆನಾಡು, ಬಯಲುಸೀಮೆಯನ್ನು ಒಳಗೊಂಡಿತ್ತು. ’ಪುನ್ನಾಟ’ಕ್ಕೆ ತಲಕಾಡಿನ ಗಂಗರು ತಮ್ಮ ಆಡಳಿತವನ್ನು ವಿಸ್ತರಿಸಿದ ಸಂಗತಿಯನ್ನು ಮಡಕೆರೆ(ಕ್ರಿ.ಶ 466), ಸಾಲಿಗ್ರಾಮ (ಕ್ರಿ.ಶ 600ರ ಸುಮಾರು), ತಿರುಮೊರೆಕೋಳಿ(ಕ್ರಿ.ಶ 700ರ ಸುಮಾರು), ಕುಲಗಾಣ, ದೇಬೂರು ಮತ್ತು ಹೆಬ್ಬೂರಿನ ಕಲ್ಬರಹಗಳು ಹೇಳುತ್ತವೆ. ಹಿಂದೆ ಪುನ್ನಾಟವು ಒಂದು ಚಿಕ್ಕ ನಾಡಗಿತ್ತು ಎಂದು ಅವನೀತನ ಕಲ್ಬರಹಗಳಿಂದ ತಿಳಿದು ಬರುತ್ತದೆ ಹಾಗು ಪುನ್ನಾಟರ ಪಟ್ಟದರಸಿಯನ್ನು ಅವನೀತನು ಮದುವೆಯಾಗುತ್ತಾನೆ ಮತ್ತು ಅವನ ಮಗನೇ ದುರ‍್ವಿನೀತ. ಗಂಗರಸರಲ್ಲೇ ಗಟ್ಟಿಗನಾದ ‘ದುರ‍್ವಿನೀತ’ನು (ಕ್ರಿ.ಶ 529 – 579 ) ತಮಿಳುನಾಡಿನ ತೊಂಡಯ್ಮಂಡಲದ ಕಾಳಗದಲ್ಲಿ ಪಲ್ಲವರನ್ನು ಸೋಲಿಸಿದನು. ನಲ್ಲಾಳ ಮತ್ತು ಕಡಗತ್ತುರು ಕಲ್ಬರಹವು ಇದರ ಬಗ್ಗೆ ವಿವರಿಸುತ್ತದೆ. ಹೀಗಾಗಿ ತಮಿಳುನಾಡಿನ ಹಲವು ಬಾಗವನ್ನು ಕನ್ನಡಿಗರಾದ ಗಂಗರು ಆಳಿದರು.

ದುರ‍್ವಿನೀತನ ಆಡಳಿತದ ಹರವು ತೆಂಕಣದಲ್ಲಿ ತಮಿಳುನಾಡಿನ ಕೊಯಮತ್ತೂರಿನಿಂದ ಬಡಗಣದ ಬಳ್ಳಾರಿಯವರೆಗೆ ಹರಡಿತ್ತು. ದುರ‍್ವಿನೀತನು ತನ್ನ ಮಗಳನ್ನೇ ಕನ್ನಡಿಗರ ಕೆಚ್ಚೆದೆಯ ಚಾಲುಕ್ಯರರಸು ಇಮ್ಮಡಿ ಪುಲಿಕೇಶಿಗೆ ಮಾಡುವೆಮಾಡಿಕೊಟ್ಟಿದ್ದ, ಇದು ರಾಜ್ಯವನ್ನಾಳಲು ಇನ್ನೂ ಸಹಾಯ ಮಾಡಿತು. ದುರ‍್ವಿನೀತನು ಕಲೆ ಮತ್ತು ಸಾಹಿತ್ಯಕ್ಕೆ ಬೆಂಬಲ ನೀಡಿದ್ದನು, ಅವನೇ ‘ಶಬ್ದಾವತಾರ‘ ಎಂಬ ಹೊತ್ತಿಗೆಯನ್ನು ಬರೆದಿದ್ದನೆಂದು ‘ಗುಮ್ಮರೆಡ್ಡಿಪುರದ ಕಲ್ಬರಹ’ವು ತಿಳಿಸುತ್ತದೆ. ಗಂಗರರಸ ಇಮ್ಮಡಿ ಶಿವಮಾರನು (ಕ್ರಿ.ಶ) ರಾಶ್ಟ್ರಕೂಟರೊಂದಿಗೆ ಹಗೆ ಸಾದಿಸಿದ್ದನು. ಆದರೆ ಹಲ ವರುಶಗಳ ನಂತರ ರಾಶ್ಟ್ರಕೂಟರ ಒಂದನೇ ಅಮೋಗವರ‍್ಶನು ತನ್ನಮಗಳಾದ ಚಂದ್ರಬ್ಬಲಬ್ಬೆಯನ್ನು ಏರೆಗಂಗ ನೀತಿಮಾರ‍್ಗನ ಮಗ ಒಂದನೇ ಬೂತುಗನಿಗೆ ಮದುವೆಮಾಡಿಕೊಟ್ಟನು. ಅಲ್ಲಿಂದ ಈ ಎರಡು ಕನ್ನಡದ ಅರಸುಮನೆತನಗಳು ಒಡನಾಡಿಗಳಾದವು.

ರಾಶ್ಟ್ರಕೂಟರ ಮುಮ್ಮುಡಿ ಅಮೋಗವರ‍್ಶನು ಗಂಗರ ಇಮ್ಮಡಿ ಬೂತುಗನಿಗೆ(ಕ್ರಿ.ಶ 938 – 961) ಗದ್ದುಗೆಯೇರಲು ಸಹಾಯ ಮಾಡಿದನು. ಬಳಿಕ ಮುಮ್ಮುಡಿ ಅಮೋಗವರ‍್ಶನ ಮಗ ಮುಮ್ಮುಡಿ ಕ್ರಿಶ್ಣನು, ಇಮ್ಮಡಿ ಬೂತುಗನ ಜೊತೆ ಸೇರಿ ತಮಿಳುನಾಡಿನ ತಕ್ಕೊಳಂನಲ್ಲಿ ಚೋಳರನ್ನು ಸೋಲಿಸಿದರು. ಈ ಕಾಳಗದ ಮಾಹಿತಿಯನ್ನು ‘ಅತಕೂರಿನ ಕಲ್ಬರಹದಲ್ಲಿ’ ಕೆತ್ತಿಸಿಸಲಾಗಿದೆ. ಕ್ರಿ.ಶ 963 ರಲ್ಲಿ ಪಟ್ಟಕ್ಕೇರಿದ ಗಂಗರರಸ ಇಮ್ಮಡಿ ಮಾರಸಿಂಹನು ಬಡಗಣ ಬಾರತದ ಗುರ‍್ಜರ-ಪ್ರತಿಹಾರ ಮತ್ತು ಪರಮಾರರನ್ನು ಸೋಲಿಸಲು ರಾಶ್ಟ್ರಕೂಟರಿಗೆ ಸಹಾಯ ಮಾಡಿದನು. ಇಮ್ಮಡಿ ಮಾರಸಿಂಹ ಮತ್ತು ನಾಲ್ವಡಿ ರಾಚಮಲ್ಲರ ಹೊತ್ತಿನಲ್ಲಿ ಹೆಸರಾಂತ ಮಂತ್ರಿಯಾಗಿ, ಪಡೆಯ ಮೇಲುಗನಾಗಿ ಮತ್ತು ಕವಿಯಾಗಿ ಚಾವುಂಡರಾಯನು ಸೇವೆಸಲ್ಲಿಸಿದನು. ಹತ್ತುನೂರರ ಹೊತ್ತಿನಲ್ಲಿ ಗಂಗರ ಆಡಳಿತ ಕೊನೆಗೊಂಡಿತು.

ಗಂಗರ ಆಡಳಿತದ ಬಗೆ: ಗಂಗರು ತಮ್ಮದೇಯಾದ ರೀತಿಯಲ್ಲಿ ನಾಡಿನ ಏಳಿಗೆಗೆ ಆಡಳಿತವನ್ನು ನೀಡಿದರು. ಕದಂಬರಂತೆ ಗಂಗರು ಕೂಡ ಆಡಳಿತದಲ್ಲಿ ಕನ್ನಡವನ್ನು ಬಳಸಿದರು, ಇವರ ಎಲ್ಲಾ ಕಲ್ಬರಹಗಳು ಕನ್ನಡದಲ್ಲಿವೆ. ಗಂಗರಿಗೆ ನಾಡಿನ ಹರವನ್ನು ಹೆಚ್ಚಿಸಿಕೊಳ್ಳುವುದು ಎಷ್ಟು ಮುಕ್ಯವಾಗಿತ್ತೋ ಹಾಗೆಯೇ ಮಂದಿಗೆ ಒಳ್ಳೆಯ ಆಡಳಿತವನ್ನು ನೀಡುವದು ಅಷ್ಟೇ ಮುಕ್ಯವಾಗಿತ್ತು ಎಂದು ಕಲ್ಬರಹಗಳಿಂದ ತಿಳಿದುಬರುತ್ತದೆ. ಗಂಗರ ಆಡಳಿತದ ನೆಲವನ್ನು ಹಲವು ಬಾಗಗಳಾಗಿ ವಿಂಗಡಿಸಲಾಗಿತ್ತು, ಅವುಗಳೆಂದರೆ ರಾಷ್ಟ್ರ(ಜಿಲ್ಲೆ) ಮತ್ತು ವಿಶಯ(ಸಾವಿರ ಹಳ್ಳಿಗಳು). ಸರಿಸುಮಾರು 800ರ ಹೊತ್ತಿನಲ್ಲಿ ‘ವಿಶಯ’ ಎಂಬ ಸಂಸ್ಕ್ರುತ ಪದದ ಬದಲಾಗಿ ‘ನಾಡು‘ ಎಂದು ಬಳಸಿಕೊಂಡರು. ಎತ್ತುಗೆಗೆ: ಸಿಂದನಾಡು, ಪುನ್ನಾಡು(ಪುನ್ನಾಟ). ನಾಡು ಎಂದರೆ ಸಾವಿರ ಹಳ್ಳಿಗಳನ್ನೊಳಗೊಂಡ ಒಂದು ಬಾಗವಾಗಿತ್ತು. ಇವುಗಳಲ್ಲಿ ದೊಡ್ಡ ನಾಡೆಂದರೆ ‘ಗಂಗವಾಡಿ’. ಗಂಗನಾಡಿನ ತಿರುಳುಬಾಗವನ್ನು ಗಂಗವಾಡಿ ಎಂದು ಕರೆಯಲಾಗುತ್ತಿತ್ತು, ಇದು 96000 ಹಳ್ಳಿಗಳ ಒಕ್ಕೂಟ, ಹಾಗು ಗಂಗರ ಹಲವಾರು ಕಲ್ಬರಹಗಳಲ್ಲಿ ಗಂಗವಾಡಿಯನ್ನು ‘ತೊಂಬತ್ತಾರುಸಾಸಿರ’ (ತೊಂಬತ್ತಾರು ಸಾವಿರ ಹಳ್ಳಿಗಳು = ತೊಂಬತ್ತಾರು ನಾಡುಗಳು) ಎಂದೇ ಒಕ್ಕಣಿಸಲಾಗಿದೆ.

ಗಂಗವಾಡಿಯ ಮಂದಿಯನ್ನು ‘ಗಂಗಡಿಕಾರ’ರು ಎಂದು ಕರೆಯುತ್ತಿದ್ದರು ಹಾಗು ಈ ಹೆಸರು ಇಂದಿಗೂ ಹಳೆಮೈಸೂರು ಬಾಗದಲ್ಲಿ ‘ಗಂಗಡಿಕಾರ’ ಎಂದಾಗಿ ಉಳಿದಿಕೊಂಡು ಬಂದಿದೆ. ಗಂಗರ ಹಲವಾರು ಕಲ್ಬರಹಗಳಿಂದ ಅವರ ಆಡಳಿತದಲ್ಲಿ ಬಳಸುತ್ತಿದ್ದ ಹೆಸರುಗಳನ್ನು ತಿಳಿಯಬಹುದಾಗಿದೆ. ಅರಿದಾಳುವನ್ನು ಸರ‍್ವಾದಿಕಾರಿ, ಹಣಕಾಸು ನೋಡಿಕೊಳ್ಳುವವರನ್ನು ಶ್ರೀಬಂಡಾರಿ, ಹೊರನಾಡಿನ ಆಳ್ವಿಕವಲಾಳುವನ್ನು (minister) ಸಂದಿವಿಗ್ರಹ, ನಾಡಾಳುವನ್ನು ಮಹಾಪ್ರದಾನ, ಪಡೆಯ ಮೇಲಾಳನ್ನು ದಂಡನಾಯಕ, ಆರಯ್ಗನನ್ನು ಮನೆಪೆರ‍್ಗಡೆ, ಆನೆಪಡೆಯ ಮೇಲಾಳುವನ್ನು ಗಜಸಹಾನಿ, ಕುದುರೆಪಡೆಯ ವೀಳ್ಯದೆಲೆ ನೋಡಿಕೊಳ್ಳುವವರನ್ನು ಅಡೆಪ ಎಂದು, ಅರಸರ ನೆರವಿಗನನ್ನು ರಾಜಸೂತ್ರದಾರಿ, ಗುಟ್ಟಿನ ನೆರವಿಗನನ್ನು ರಹಸ್ಯಾದಿಕ್ರುತ ಹಳೆಯ ದಾಕಲೆಗಳನ್ನು ನೋಡಿಕೊಳ್ಳುವವರನ್ನು ಶಾಸನದೊರೆ, ನೆಲದಳೆವಿಗನನ್ನು ರಜ್ಜುಕ, ಹಣಕಾಸಿನ ಲೆಕ್ಕಾಚಾರವನ್ನು ನೋಡಿಕೊಳ್ಳುವವನನ್ನು ಲೆಕ್ಕಿಗನೆಂದು ಕರೆಯುತ್ತಿದ್ದರು.

TalakadInscription ಕ್ರಿ.ಶ. 726 ರ ತಲಕಾಡಿನ ಕಲ್ಬರಹ ನಿಯೋಗಿಯು ಅರಮನೆಯ ಮೇಲುಸ್ತುವಾರಿ, ಅರಸುಮನೆತನದ ಬಟ್ಟೆ ಮತ್ತು ಒಡವೆಯನ್ನು ನೋಡಿಕೊಳ್ಳುತ್ತಿದ್ದನು. ಅರಸರ ಸಬೆಗಳನ್ನು ಮತ್ತು ಹೆಬ್ಬಾಗಿಲಿನ ಉಸ್ತುವಾರಿ ನೋಡಿಕೊಳ್ಳುವವರನ್ನು ಪಡಿಯಾರ ಎಂದು ಕರೆಯುತ್ತಿದ್ದರು. ಪೆರ‍್ಗಡೆಯು ಗಂಗರ ನಾಡಿನಲ್ಲಿ ತಮ್ಮ ಕಸುಬನ್ನು ಮಾಡುತ್ತಿದ್ದ ಅಕ್ಕಸಾಲಿಗರು, ಕಲೆಗಾರರು, ಕಮ್ಮಾರರು ಮತ್ತು ಕುಂಬಾರರ ಮೇಲ್ವಿಚಾರಣೆ ಮಾಡುತ್ತಿದ್ದನು. ಗಂಗರ ನಾಡಿನ ಸುಂಕ ಮತ್ತು ತೆರಿಗೆಯನ್ನು ನೋಡಿಕೊಳ್ಳುತ್ತಿದ್ದವನನ್ನು ಸುಂಕಪೆರ‍್ಗಡೆ ಎಂದು ಕರೆಯುತ್ತಿದ್ದರು. ಈ ಸುಂಕ ಪೆರ‍್ಗಡೆಯ ಕೆಳಗೆ ನಾಡಬೊವರು ಕೆಲಸ ಮಾಡುತ್ತಿದ್ದರು. ನೆಲದ ಮೇಲುಸ್ತುವಾರಿ ನೋಡಿಕೊಳ್ಳುವವನನ್ನು ಪ್ರಬು ಎಂಬ ಬಿರುದಿನಿಂದ ಕರೆಯುತ್ತಿದ್ದರು. ಹಳ್ಳಿಗಳ ಮೇಲುಗರನ್ನು ಗಾವುಂಡ ಎಂದು ಕರೆಯುತ್ತಿದ್ದರು.

ಮಾವಳ್ಳಿ, ಕುಂಸಿ, ದೊಡ್ಡಹೊಮ್ಮ ಹಾಗು ಇನ್ನಿತರ ಕಲ್ಬರಹಗಲ್ಲಿ ಹೇಳಿರುವಂತೆ ಮಂದಿಯ ಅನುಕೂಲಕ್ಕಾಗಿ ನದಿ, ಹೊಳೆ, ಕಾಲುವೆ, ಹಳ್ಳಿಗಳ ಎಲ್ಲೆ, ಬೆಟ್ಟ ಗುಡ್ಡಗಳು, ಕೋಟೆಗಳು, ಕಾಡುಗಳು, ದೇವಸ್ತಾನಗಳು, ನೀರಿನ ತೊಟ್ಟಿಗಳ ಇರುವಿಕೆಯ ಗುರುತುಗಳನ್ನು ಮಾಡಿದ್ದರು. ಹಾಗೆಯೇ ಆಯಾ ನೆಲದ ಮಣ್ಣಿಗೆ ಸರಿಯಾಗಿ ಯಾವ ಯಾವ ಬೆಳೆಗಳನ್ನು ಬೆಳೆಯಬೇಕೆಂಬುದನ್ನು ತಿಳಿಸಿದ್ದರು. ಅದಕ್ಕಾಗಿ ನೀರಾವರಿ ಕಾಲುವೆ ಮತ್ತು ತೊಟ್ಟಿಗಳನ್ನು ಕಟ್ಟಿಸಿದ್ದರು. ಕಲ್ಬರಹಗಳಲ್ಲಿ ಹೇಳಿರುವಂತೆ ಬೇಡರಿಗಾಗಿಯೇ ಹಳ್ಳಿಗಳು ಇರುತ್ತಿದ್ದವು ಹಾಗು ಅದನ್ನು ‘ಬೇಡಪಳ್ಳಿ’ ಎಂದು ಕರೆಯುತ್ತಿದ್ದರು. ಮಯ್ಗಾವಲುಗಾರರನ್ನು ವೆಲಾವಳಿ ಎಂದು ಕರೆಯುತ್ತಿದ್ದರು.

ಗಂಗರು ತಮ್ಮ ಲಾಂಚನವಾಗಿ ಮದದಾನೆಯನ್ನು ಬಳಸಿಕೊಂಡರು, ಇದರ ಹಿನ್ನೆಲೆ ಹಳೆಮೈಸೂರು ಬಾಗದಲ್ಲಿ ಆನೆಗಳು ಹೆಚ್ಚು ಇದ್ದುದರಿಂದವಿರಬಹುದು. ಮೇಲುಕೋಟೆಯ ತಾಮ್ರದ ಬರಹ, ಮಾಂಬಳ್ಳಿ ಕಲ್ಬರಹ ಮತ್ತು ಮೇಡುತಂಬಳ್ಳಿ ಕಲ್ಬರಹಗಳಿಂದ ಗಂಗವಾಡಿ ಬಾಗವು ಮಲೆನಾಡು, ಅರೆ-ಮಲೆನಾಡು, ಬಯಲುಸೀಮೆಯನ್ನು ಒಳಗೊಂಡಿದ್ದರಿಂದ ಆಯಾ ಬಾಗಗಳಲ್ಲಿ ಅಡಿಕೆ, ಕಾಳು ಮೆಣಸು, ತೆಂಗು, ಬತ್ತ, ರಾಗಿ, ಎಣ್ಣೆ ಬೀಜಗಳು ಹಾಗು ಜೋಳ ಈ ಬೆಳೆಗಳಿಗೆ ಕಾವೇರಿ, ತುಂಗಬದ್ರ, ವೇದಾವತಿ ನದಿಗಳಿಗೆ ಕಟ್ಟಿದ ಅಣೆಕಟ್ಟುಗಳಿಂದ ಕಾಲುವೆಗಳಲ್ಲಿ ನೀರುಣಿಸುತ್ತಿದ್ದರು. ಗಂಗರಸು ನಾಲ್ವಡಿ ರಾಚಮಲ್ಲನ ದೊಡ್ಡಹೊಮ್ಮ ಕಲ್ಬರಹದಿಂದ ಹಲವಾರು ಮಣ್ಣು ಮತ್ತು ನೆಲದ ಬಗೆಯನ್ನು ತಿಳಿಸುವ ಕನ್ನಡದ ಪದಗಳು ಕಂಡುಬರುತ್ತದೆ. ಕರಿಮಣ್ಣಿಯ-ಕಪ್ಪುಮಣ್ಣು, ಕೆಬ್ಬಯಮಣ್ಣು- ಕೆಂಪುಮಣ್ಣು ಎಂದು, ಹಸಿನೆಲ-ಕಳನಿ, ಗಳ್ಡೆ, ಪಣ್ಯ ಎಂದು ಕರೆಯುತ್ತಿದ್ದರು. ರೈತರ ಬಗ್ಗೆ ಹೆಚ್ಚು ಒಲವಿದ್ದ ತಲಕಾಡಿನ ಗಂಗರು ಹಸುಸಾಕಣೆಗೆ ಒತ್ತು ನೀಡಿದರು. ಹಲವು ಹಸು ಸಾಕಣೆಯ ಹಟ್ಟಿಗಳನ್ನು ಅವರೇ ನಡೆಸುತ್ತಿದ್ದರು.

ಹಲವಾರು ನ್ಯಾಯ ತೀರ‍್ಮಾನಗಳನ್ನು ಮತ್ತು ಮಂದಿಯ ಹಣಕಾಸಿನ ಪರಿಸ್ತಿತಿ ನೋಡಿ ಸುಂಕ ರದ್ದತಿಯ ತೀರ‍್ಮಾನಗಳನ್ನು ಹಳ್ಳಿಯ ಮೇಲುಗಾರಾದ ಗಾವುಂಡರೆ ತೆಗೆದುಕೊಳ್ಳುತ್ತಿದ್ದರು, ಹೀಗಾಗಿ ಆಡಳಿತವನ್ನು ಕೆಳಗಿನ ಅದಿಕಾರಿಗಳಿಗೆ ಹಂಚಿದ್ದರು. ರದ್ದು ಮಾಡಿದ ಸುಂಕವನ್ನು ‘ಮಾನ್ಯ’ ಎಂದು ಕರೆಯಲಾಗುತ್ತಿತ್ತು. ಸುಂಕ ‘ಮಾನ್ಯ’ವಾದ ನೆಲವನ್ನು ಸೈನ್ಯದಲ್ಲಿ ಕಾದಾಡಿದವರಿಗೆ ಮತ್ತು ನಾಡವೀರರಿಗೆ ಕೊಡುತ್ತಿದ್ದರು, ಇದನ್ನು ಬಿಳವ್ರುತ್ತಿ(ಬಿೞವ್ರುತ್ತಿ) ಹಾಗು ಕಲ್ನಾಡ್ ಎಂದು ಕರೆಯುತ್ತಿದ್ದರು ಈ ಸಂಗತಿಯನ್ನು ನರಸಿಂಹಪುರದ ಕಲ್ಬರಹದಲ್ಲಿ ತಿಳಿಸಲಾಗಿದೆ. ಒಳಸುಂಕವನ್ನು ಅಂತಕರ ಎಂದು ಕರೆಯುತ್ತಿದ್ದರು, ರಾಜನಿಂದ ಬಂದ ಬಹುಮಾನವನ್ನು ಉತ್ಕೊಟವೆಂದು ಕರೆಯುತ್ತಿದ್ದರು. ಆಮದು ವಸ್ತುಗಳ ಸುಂಕ ಮತ್ತು ತೆರಿಗೆಗೆ ಸುಲಿಕ ಎಂದು ಕರೆಯುತ್ತಿದ್ದರು. ಕ್ರುಶಿಯ ಮೇಲಿನ ತೆರಿಗೆಯನ್ನು ‘ಸಿದ್ದಾಯ’ ಎಂದು ಮಾರಾಟದ ಮೇಲಿನ ತೆರಿಗೆಯನ್ನು ಪೊತ್ತೊಂದಿ ಎಂದು ಕರೆಯುತ್ತಿದ್ದರು. ಇವೆಲ್ಲವನ್ನೂ ನಾಡಿನ(ಸಾವಿರಹಳ್ಳಿಗಳು) ಮೇಲುಗರು ಮತ್ತು ಸುಂಕಪೆರ‍್ಗಡೆಯವರು ಲೆಕ್ಕಾಚಾರ ಮಾಡುತ್ತಿದ್ದರು. ಹಲವು ಕಡೆಗಳಲ್ಲಿ ‘ಪೊತ್ತೊಂದಿ’ ತೆರಿಗೆಯನ್ನು ಹತ್ತನೇ ಒಂದು ಬಾಗದ ತೆರಿಗೆ ಎಂದು, ‘ಐದಾಳ್ವಿ’ಯನ್ನು ಐದನೇ ಒಂದು ಬಾಗದ ತೆರಿಗೆ ಎಂದು, ‘ಏಳಾಳ್ವಿ’ಯನ್ನು ಏಳನೇ ಒಂದು ಬಾಗದ ತೆರಿಗೆ ಎಂದು ಕರೆಯುತ್ತಿದ್ದರು. ಮಣ್ಣದಾರೆ ಎಂಬ ಸುಂಕವನ್ನು ನೆಲಗಂದಾಯದ ಜೊತೆಗೆ ಕುರಿಂಬದೆರೆ ಎಂಬ ಕುರಿಸಾಕಣೆ ಮೇಲಿನ ಸುಂಕವನ್ನು ಕುರುಬರು ಅವರ ಮುಖಂಡನಿಗೆ ಕೊಡುತ್ತಿದ್ದರು.

ಹಲವು ಕಿರುಸುಂಕವನ್ನು ಕಿರುದೆರೆ ಎಂದು ಕರೆಯುತ್ತಿದ್ದರು. ಕಾಳಗದ ಹೊತ್ತಿನಲ್ಲಿ ಪಡೆಯ ಕಾಳಗದ ತರಬೇತಿಗಾಗಿ ಹಾಗು ಕುದುರೆ ಪಡೆಯ ಕುದುರೆಗಳು, ಆನೆಪಡೆಯ ಆನೆಗಳನ್ನು ಮೇಯಿಸಲು ಹಲವು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದರು ಹಾಗು ಇದಕ್ಕಾಗಿ ಸುಂಕ ತೆರಿಗೆಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು. ಮಂದಿಯ ಅನುಕೂಲಕ್ಕಾಗಿ ನೀರಿನ ತೊಟ್ಟಿಗಳನ್ನು ಕಟ್ಟಿಸುತ್ತಿದ್ದರು ಇದರ ಹಣಕಾಸಿಗೆ ಬಿಟ್ಟುವತ್ತ ಎಂಬ ತೆರಿಗೆಯನ್ನು ಹಾಕುತ್ತಿದ್ದರು. ಹೀಗೆ ಆಳ್ವಿಕೆಯಲ್ಲಿ ಗಟ್ಟಿಗರಾದ ತಲಕಾಡಿನ ಗಂಗರು ಯಾವುದೇ ಅರಸುಮನೆತನಗಳಿಗಿಂತ ಕಮ್ಮಿಯಿಲ್ಲದೆ ಕನ್ನಡ ನಾಡಿನ ಏಳಿಗೆಗಾಗಿ ಒಳ್ಳೆಯ ಆಡಳಿತ ನೀಡಿದರು.