ಕಬಿನಿ ನದಿ
ಕಬಿನಿ ಮತ್ತು ಕಪಿಲಾ ಎಂದೂ ಕರೆಯಲ್ಪಡುವ ಕಬಿನಿ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು. ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿ, ಪನಮರಮ್ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದ ತಿರುಮಕೂಡಲು ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಮುಂದೆ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಇದು ಸರ್ಗೂರು ಪಟ್ಟಣದ ಹತ್ತಿರ ಬೃಹತ್ ಕಬಿನಿ ಆಣೆಕಟ್ಟಿನಲ್ಲಿ ಅದರ ನೀರು ಸಂಗ್ರಹಿಸಲಾಗುತ್ತದೆ . ಬೇಸಿಗೆಯಲ್ಲಿ ಈ ನದಿಯ ಹಿನ್ನೀರಿನಲ್ಲಿ ವಿಶೇಷವಾದ ವನ್ಯಜೀವಿ ಬಹಳ ಹೇರಳವಾಗಿರುತ್ತವೆ. ಕಬಿನಿ ಅಣೆಕಟ್ಟಿನ ಉದ್ದ ೨.೨೮೪ ಅಡಿ (೬೯೬ ಮೀ), ೧೯.೫೨ ಟಿಎಂಸಿರಷ್ಟು ನೀರನ್ನು ಒಟ್ಟು ಶೇಖರಿಸಬಹುದು, ಆದರೆ ಹೂಳು ಸಂಗ್ರಹಗೊಳ್ಳುವ ಕಾರಣ ನೀರು ಗಣನೀಯವಾಗಿ ಕಡಿಮೆಯಾಗುತ್ತಿದೆ. ಕಬಿನಿ ಅಣೆಕಟ್ಟು ಮೈಸೂರು ಜಿಲ್ಲೆಯ ಹೆಗ್ಗದದೇವನ ಕೋಟೆ ತಾಲ್ಲೂಕಿನ ಸರ್ಗೂರು ಪಟ್ಟಣದಿಂದ ೧೭ ಕಿ.ಮೀ. (೧೧ ಮೈಲು) ಮತ್ತು ೬ ಕಿ.ಮೀ. (೪.೫ ಮೈಲು) ದೂರದ ಗ್ರಾಮಗಳಾದ ಬಿಚ್ಚನಹಳ್ಳಿಯ ಮತ್ತು ಬಿದರಹಳ್ಳಿಯ ನಡುವೆ ಸ್ಥಾಪಿತವಾಗಿದೆ.
