ತೆರಿಗೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕುತೆರಿಗೆ(tax) ಎಂಬುದು ಸರ್ಕಾರದ ಆರ್ಥಿಕ ವ್ಯವಸ್ಥೆಯ ಒಂದು ಭಾಗ. ತೆರಿಗೆಯು ಒಂದು ಸರ್ಕಾರ ಅಥವಾ ಅದರ ಕಾರ್ಯಾತ್ಮಕ ಸಮಾನವಾದ ಸಂಸ್ಥೆಯು ತೆರಿಗೆದಾರನ ಮೇಲೆ ಹೇರುವ ಶುಲ್ಕ. ಮಾರಾಟಗಾರ ಮತ್ತು ಕೊಳ್ಳುವವರ ಮಧ್ಯೆ ವಸ್ತುವೊಂದು ಮಾರಲ್ಪಟ್ಟಾಗ ಸ್ಥಳೀಯ ವಾಣಿಜ್ಯ ತೆರಿಗೆ ಇಲಾಖೆಯು ಸದರಿ ವಸ್ತುವಿನ ಮೇಲೆ ವಿಧಿಸುವ ಶುಲ್ಕವನ್ನು ತೆರಿಗೆಯೆಂದು ಹೇಳಬಹುದು. ಗಮನಿಸಬೇಕಾದ ಅಂಶವೆಂದರೆ,ಇಲ್ಲಿ ಮಾರಲ್ಪಡುವ ವಸ್ತು ಕಣ್ಣಿಗೆ ಕಾಣಿಸುವ (visible) ಮತ್ತು ಅದೃಶ್ಯರೂಪ (Invisible but felt)ದ್ದಾದರೂ ಆಗಿರಬಹುದು. ಸ್ಥಳೀಯ ಸರ್ಕಾರ ಈ ತೆರಿಗೆಯನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಸಂಬಳಕ್ಕೆ ಮತ್ತು ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ವ್ಯಯ ಮಾಡುತ್ತದೆ. ಹಾಗೆಯೇ ಸುಂಕ ಕೂಡ ತೆರಿಗೆಯ ಇನ್ನೊಂದು ರೂಪವೇ ಆಗಿದೆ. ತೆರಿಗೆದಾರರು ತೆರಿಗೆಯನ್ನು ಪೂರ್ಣವಾಗಿ ಭರಿಸದ ಸಂದರ್ಭದಲ್ಲಿ ಅವರಿಗೆ ಶಿಕ್ಷೆ ವಿಧಿಸಬಹುದಾಗಿದೆ.

ತೆರಿಗೆಯ ವಿಧಗಳು[ಬದಲಾಯಿಸಿ]

ಸರ್ಕಾರವು ಅನೇಕ ರೀತಿಯ ತೆರಿಗೆಗಳನ್ನು ನಾನಾ ಹಂತದಲ್ಲಿ ವಿಧಿಸುತ್ತದೆ. ಅವು ಕೆಳಗಿನಂತಿವೆ.

ಇದಲ್ಲದೇ ಇನ್ನೂ ಅನೇಕ ರೀತಿಯ ತೆರಿಗೆಗಳನ್ನು ಗಮನಿಸಬಹುದಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ತೆರಿಗೆ&oldid=528525" ಇಂದ ಪಡೆಯಲ್ಪಟ್ಟಿದೆ