ಸೇವಾ ತೆರಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಸೇವಾ ತೆರಿಗೆಯು ಕೇಂದ್ರ ಸರ್ಕಾರ ಜಾರಿಗೊಳಿಸಿದ ತೆರಿಗೆಯಾಗಿದೆ. ಆದ್ದರಿಂದ ಇದು ರಾಷ್ಟ್ರ ಮಟ್ಟದ ತೆರಿಗೆ ವ್ಯವಸ್ಥೆಯಾಗಿರುತ್ತದೆ. ಸರಕುಗಳ ತಯಾರಿ ಮತ್ತು ಮಾರಾಟ ಹಾಗೂ ಸೇವೆಗಳ ಬಳಕೆಗೆ ಹೆಚ್ಚು ವ್ಯಾಪಕ ಮತ್ತು ಸಮಗ್ರವಾದ ತೆರಿಗೆ ವಿಧಿಸುವ ವ್ಯವಸ್ಥೆ[೧].

ತೆರಿಗೆ ನಿಯಮದ ಪ್ರಕಾರ ೨೦೧೧ರಿಂದ ಒಬ್ಬ ವ್ಯಕ್ತಿಯು ಸೇವಾ ತೆರಿಗೆಯನ್ನು ಪಾವತಿಸಬೇಕು. ೧೯೯೪ರ ಸೇವಾ ತೆರಿಗೆ ನಿಯಮದ ಪ್ರಕಾರ, ವ್ಯಕ್ತಿಯು ಸೇವೆ ನೀಡುವವರೇ ಆಗಿರಲಿ ಅಥವಾ ಸ್ವೀಕರಿಸುವವರೇ ಆಗಿರಲಿ ಸೇವಾ ತೆರಿಗೆಯನ್ನು ಪಾವತಿಸಬೇಕು. ಇದೊಂದು ಪರೋಕ್ಷ ತೆರಿಗೆಯಾಗಿದೆ. ಸೇವೆ ಒದಗಿಸುವವರು ಗ್ರಾಹಕರಿಂದ (ಸೇವೆ ಪಡೆಯುವವರು) ತೆರಿಗೆಯನ್ನು ಪಡೆದು, ಅದನ್ನೇ ಭಾರತ ಸರ್ಕಾರಕ್ಕೆ ಪಾವತಿಸುತ್ತಾರೆ. ಪ್ರಸ್ತುತವಾಗಿ ೧ ಜೂನ್ ೨೦೧೬ ರಿಂದ ಸೇವಾ ತೆರಿಗೆ ದರವು ೧೫ ಶೇಕಡವಾಗಿದೆ.

ಹಿನ್ನೆಲೆ[ಬದಲಾಯಿಸಿ]

ತೆರಿಗೆ ಸುಧಾರಣೆಯ ಡಾ. ರಾಜಾ ಚೆಲ್ಲಯ್ಯ ಸಮಿತಿಯು ಸೇವಾ ತೆರಿಗೆಯನ್ನು ಜಾರಿಗೆ ತರಲು ಶಿಫಾರಸು ಮಾಡಿತು. ಸೇವಾ ತೆರಿಗೆಯ ದರವು ಮೊದಲ ವರ್ಷದಿಂದ (೧ ಜುಲೈ ೧೯೯೪) ೧೩ ಮೇ ೨೦೦೩ರವರೆಗೆ ಶೇಕಡ ೫. ಹಣಕಾಸು ಕಾಯ್ದೆಯಿಂದಾಗಿ ಸೇವಾ ತೆರಿಗೆಯು ಶೇಕಡ ೧೨ಕ್ಕೆ ಏರಿತು. ತೆರಿಗೆ ಸಂಗ್ರಹವು ೧೯೯೪-೯೫ರಿಂದ ೨೦೧೨-೧೩ವರೆಗೆ ಸಹಾ ಗಣನೀಯವಾಗಿ ಬೆಳೆದಿದೆ. ಅದು ೧೯೯೪-೯೫ರಲ್ಲಿ ₹ ೪೧೦ ಕೋಟಿ (US $ ೬೧ ಮಿಲಿಯನ್) ನಿಂದ ೨೦೧೨-೧೩ರಲ್ಲಿ ೧೩೨.೫೧೮ ಕೋಟಿ (US $ ೨೦ಬಿಲಿಯನ್).

ಶೇಕಡ ಐದರಿಂದ ಅತ್ಯಲ್ಪವಾಗಿ ಪ್ರಾರಂಭವಾದ ಸೇವಾ ತೆರಿಗೆಯು ಪ್ರಸ್ತುತವಾಗಿ ಶೇಕಡ ಹದಿನೈದಾಗಿದೆ.(?)

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2017-07-04. Retrieved 2016-08-20.