ಹಣಕಾಸು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಹಣಕಾಸು ಎಂದರೆ ಸಂಪತ್ತಿನ ನಿರ್ವಹಣೆಯ ವಿಜ್ಞಾನ.[೧] ಹಣಕಾಸಿನ ಸಾಮಾನ್ಯ ಕ್ಷೇತ್ರಗಳೆಂದರೆ ವಾಣಿಜ್ಯದ ಹಣಕಾಸು , ವೈಯಕ್ತಿಕ ಹಣಕಾಸು , ಮತ್ತು ಸಾರ್ವಜನಿಕ ಹಣಕಾಸು .[೨] ಹಣಕಾಸಿನಲ್ಲಿ ಹಣದ ಉಳಿತಾಯ ಮತ್ತು ಕೆಲವೊಮ್ಮೆ ಹಣದ ಸಾಲ ನೀಡುವಿಕೆಯೂ ಸೇರಿರುತ್ತವೆ. ಸಮಯ, ಹಣ ಮತ್ತು ಅಪಾಯಗಳ ಪರಿಕಲ್ಪನೆ ಮತ್ತು ಅವುಗಳ ಪರಸ್ಪರ ಸಂಬಂಧದ ಅಧ್ಯಯನವನ್ನು ಹಣಕಾಸು ಒಳಗೊಂಡಿದೆ. ಹಣವನ್ನು ಹೇಗೆ ಖರ್ಚು ಮಾಡುವುದು ಮತ್ತು ಬಜೆಟ್ ಮಾಡುವುದು ಎಂಬುದನ್ನು ಅದು ಒಳಗೊಂಡಿರುತ್ತದೆ.


ವ್ಯಕ್ತಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಬ್ಯಾಂಕಿನಲ್ಲಿ ಹಣವನ್ನು ಇರಿಸುವುದರೊಂದಿಗೆ ಹಣಕಾಸಿನ ಮೂಲಭೂತವಾದ ಕೆಲಸ ನಡೆಯುತ್ತದೆ. ಬ್ಯಾಂಕು ನಂತರ ಹಣವನ್ನು ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಬಳಕೆಗಾಗಿ ಇಲ್ಲವೇ ಹೂಡಿಕೆಗಾಗಿ ಸಾಲ ಕೊಡುತ್ತದೆ ಮತ್ತು ಸಾಲಗಳಿಗೆ ಬಡ್ಡಿ ಹಾಕುತ್ತದೆ.


ಸಾಲಗಳು ಮರುಮಾರಾಟಕ್ಕೆ ಹೆಚ್ಚಾಗಿ ಸಿದ್ಧಪಡಿಸಲ್ಪಡುತ್ತಿವೆ, ಅಂದರೆ ಬಂಡವಾಳದಾರರು ಸಾಲವನ್ನು (ಋಣವನ್ನು) ಬ್ಯಾಂಕಿನಿಂದ ಅಥವಾ ಸಂಸ್ಥೆಯಿಂದ ನೇರವಾಗಿ ಕೊಳ್ಳುತ್ತಾರೆ. ಬಾಂಡುಗಳು ಬಂಡವಾಳದಾರರಿಗೆ ಸಂಸ್ಥೆಗಳು ನೇರವಾಗಿ ಮಾರುವ ಸಾಲಗಳು, ಬಂಡವಾಳದಾರರು ಸಾಲವನ್ನು ತಡೆಹಿಡಿದು ಬಡ್ಡಿಯನ್ನು ಗಳಿಸಬಹುದು ಅಥವಾ ಸಾಲವನ್ನು ದ್ವಿತೀಯ ಮಾರುಕಟ್ಟೆಯಲ್ಲಿಮಾರಬಹುದು. ಸಾಲ ಕೊಡುವುದರ ಮೂಲಕ ಬ್ಯಾಂಕುಗಳು ಹೂಡಿಕೆಯ ಮುಖ್ಯ ಸಹಾಯಕರಾಗಿವೆ ಆದರೂ ಸಹ ಖಾಸಗಿ ಷೇರುಗಳು, ಮ್ಯುಚುಯಲ್ ಫಂಡುಗಳು, ಹೆಜ್ ಫಂಡುಗಳು ಮತ್ತಿತರ ವ್ಯವಸ್ಥೆಗಳು ಸಾಲದ ವಿಭಿನ್ನ ಪ್ರಕಾರಗಳಲ್ಲಿ ಬಂಡವಾಳ ಹಾಕುವುದರಿಂದ ಪ್ರಾಮುಖ್ಯತೆ ಪಡೆದಿವೆ. ಹೂಡಿಕೆಗಳು ಎಂದು ಕರೆಯಲ್ಪಡುವ ಆರ್ಥಿಕ ಆಸ್ತಿಗಳನ್ನು ಆರ್ಥಿಕ ಅಪಾಯಗಳನ್ನು ನಿಯಂತ್ರಿಸುವ ಸಲುವಾಗಿ ಆರ್ಥಿಕ ಅಪಾಯಗಳ ನಿರ್ವಹಣೆಗೆ ಎಚ್ಚರಿಕೆಯಿಂದ ಗಮನ ನೀಡಿ ಆರ್ಥಿಕವಾಗಿ ನಿರ್ವಹಿಸಲಾಗುತ್ತದೆ. ಬಾಂಡುಗಳಂತಹ ಸಾಲಗಳು ಮತ್ತು ಸಾರ್ವಜನಿಕವಾಗಿ ಮಾರಾಟವಾಗುವ ಸಂಸ್ಥೆಗಳಲ್ಲಿನ ಷೇರುಗಳು ಸೇರಿದಂತೆ ಆರ್ಥಿಕ ಸಾಧನಗಳು ಅನೇಕ ಬಗೆಯ ಸುರಕ್ಷಿತ ಆಸ್ತಿಗಳನ್ನು ಸ್ಟಾಕ್ ಎಕ್ಸ್ ಚೇಂಜ್ ನಂತಹ ಸೆಕ್ಯೂರಿಟಿ ವಿನಿಮಯಕೇಂದ್ರಗಳಲ್ಲಿ ಮಾರಾಟಮಾಡಲು ಸಹಾಯ ಮಾಡುತ್ತವೆ.[dubious ]


ಕೇಂದ್ರೀಯ ಬ್ಯಾಂಕುಗಳು ಅಂತಿಮ ಋಣದಾತರಾಗಿ ಕಾರ್ಯ ನಿರ್ವಹಿಸುವುದಲ್ಲದೆ, ಬಡ್ಡಿಯ ದರದ ಮೇಲೆ ಪ್ರಭಾವ ಬೀರುವ ಹಣದ ಪೂರೈಕೆಯನ್ನು ನಿಯಂತ್ರಿಸುತ್ತವೆ. ಹಣದ ಪೂರೈಕೆ ಹೆಚ್ಚಾದಂತೆ ಬಡ್ಡಿಯ ದರಗಳು ಕಡಿಮೆಯಾಗುತ್ತವೆ.[೩]


ಪರಿವಿಡಿ

ಹಣಕಾಸು ಉದ್ಯಮದ ಮುಖ್ಯ ತಂತ್ರಗಳು ಮತ್ತು ವಲಯಗಳು[ಬದಲಾಯಿಸಿ]

Main article: Financial services


ವೆಚ್ಚಕ್ಕಿಂತ ಆದಾಯ ಹೆಚ್ಚಾದ ಸಂಸ್ಥೆ ಹೆಚ್ಚುವರಿ ಆದಾಯವನ್ನು ಸಾಲ ಕೊಡಬಹುದು ಅಥವಾ ಹೂಡಬಹುದು. ಆದರೆ, ತನ್ನ ವೆಚ್ಚಕ್ಕಿಂತ ಆದಾಯ ಕಡಿಮೆ ಇರುವ ಸಂಸ್ಥೆ ಸಾಲ ಪಡೆದು ಇಲ್ಲವೆ ತನ್ನ ಷೇರುಗಳನ್ನು ಮಾರಿ, ವೆಚ್ಚ ಕಡಿಮೆ ಮಾಡಿ ಅಥವಾ ಆದಾಯವನ್ನು ಹೆಚ್ಚಿಸಿ ತನ್ನ ಬಂಡವಾಳವನ್ನು ಹೆಚ್ಚಿಸಬಹುದು. ಸಾಲ ಕೊಡುವವರು ಸಾಲ ಪಡೆಯುವವರನ್ನು, ಬ್ಯಾಂಕಿನಂತಹ ಮಧ್ಯಸ್ಥರನ್ನು ಹುಡುಕಬಹುದು ಅಥವಾ ಬಾಂಡು ಮಾರುಕಟ್ಟೆಯಲ್ಲಿ ನೋಟುಗಳು ಅಥವಾ ಬಾಂಡುಗಳನ್ನು ಖರೀದಿಸಬಹುದು. ಸಾಲ ಕೊಡುವವರು ಬಡ್ಡಿ ಪಡೆಯುತ್ತಾರೆ, ಅವರು ಪಡೆಯುವುದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಸಾಲ ಪಡೆಯುವವರು ಕೊಡುತ್ತಾರೆ ಮತ್ತು ಅರ್ಥಿಕ ಮಧ್ಯಸ್ಥರು ಅವುಗಳ ವ್ಯತ್ಯಾಸವನ್ನು ಪಡೆದುಕೊಳ್ಳುತ್ತಾರೆ.


ಬ್ಯಾಂಕು ಅನೇಕ ಜನ ಸಾಲ ಕೊಡುವವರು ಮತ್ತು ಸಾಲ ಪಡೆಯುವವರ ಚಟುವಟಿಕೆಗಳನ್ನು ಒಟ್ಟುಗೂಡಿಸುತ್ತದೆ. ಬ್ಯಾಂಕು ಸಾಲ ಕೊಡುವವರಿಂದ ಠೇವಣಿಗಳನ್ನು ಸ್ವೀಕರಿಸಿ ಅದಕ್ಕೆ ಬಡ್ಡಿ ಕೊಡುತ್ತದೆ. ನಂತರ ಬ್ಯಾಂಕು ಈ ಠೇವಣಿಗಳನ್ನು ಸಾಲ ಪಡೆಯುವವರಿಗೆ ಸಾಲ ನೀಡುತ್ತದೆ. ಬ್ಯಾಂಕುಗಳು ವಿಭಿನ್ನ ಗಾತ್ರದ ಸಾಲ ಕೊಡುವವರು ಮತ್ತು ಸಾಲ ಪಡೆಯುವವರಿಗೆ ತಮ್ಮ ಚಟುವಟಿಕೆಗಳನ್ನು ಸಂಯೋಜಿಸಲು ಅವಕಾಶ ಕೊಡುತ್ತವೆ. ಹೀಗಾಗಿ ಬ್ಯಾಂಕುಗಳು ಹಣದ ಪ್ರವಾಹವನ್ನು ಸಮದೂಗಿಸುತ್ತವೆ.


ಕಾರ್ಪೊರೇಟ್ ಹಣಕಾಸಿನ ವಿಶಿಷ್ಟ ಉದಾಹರಣೆ ಎಂದರೆ ತನ್ನ ಷೇರುಗಳನ್ನು ಕಂಪೆನಿಯು ಹೂಡಿಕೆ ಬ್ಯಾಂಕುಗಳಂತಹ ಸಾಂಘಿಕ ಬಂಡವಾಳದಾರರಿಗೆ ಮಾರುವುದು ಮತ್ತು ಅವರು ಅವುಗಳನ್ನು ಮತ್ತೆ ಸಾರ್ವಜ್ನಿಕರಿಗೆ ಮಾರುವುದು. ಷೇರು ಅದರ ಮಾಲೀಕರಿಗೆ ಕಂಪೆನಿಯ ಮಾಲೀಕತ್ವದಲ್ಲಿ ಭಾಗ ಕೊಡುತ್ತದೆ. ನೀವು ಯಾವುದೋ ಒಂದು ಕಂಪೆನಿಯ ಒಂದು ಷೇರನ್ನು ಕೊಂಡರೆ, ಮತ್ತು ಅವರಲ್ಲಿ 100 ಷೇರುಗಳು ಲಭ್ಯವಿದ್ದರೆ (ಹೂಡಿಕೆದಾರರ ಬಳಿ), ನೀವು ಆ ಕಂಪೆನಿಯ 1/100 ಮಾಲೀಕರಾಗುತ್ತೀರಿ. ನಿಜವಾಗಿಯೂ, ಷೇರಿಗೆ ಬದಲಾಗಿ ಕಂಪೆನಿಗೆ ನಗದು ಸಿಗುತ್ತದೆ ಮತ್ತು ಅದನ್ನು ಅದು ತನ್ನ ವ್ಯಾಪಾರವನ್ನು ವಿಸ್ತರಿಸಲು ಬಳಸುತ್ತದೆ; ಈ ಪ್ರಕ್ರಿಯೆಗೆ "ಷೇರು ಹಣಕಾಸು" ಎಂದು ಹೆಸರು ಷೇರು ಹಣಕಾಸು ಜತೆಗೆ ಕಲಸಿದ ಬಾಂಡುಗಳ ಮಾರಾಟಕ್ಕೆ (ಅಥವಾ ಇನ್ನಾವುದೇ ಸಾಲದ ಹಣಕಾಸು) ಕಂಪೆನಿಯ ಬಂಡವಾಳದ ರಚನೆ ಎಂದು ಹೆಸರು


ಹಣಕಾಸನ್ನು ವ್ಯಕ್ತಿಗಳು (ವೈಯಕ್ತಿಕ ಹಣಕಾಸು), ಸರ್ಕಾರಗಳು (ಸಾರ್ವಜನಿಕ ಹಣಕಾಸು), ವ್ಯಾಪಾರಗಳು (ಕಾರ್ಪೊರೇಟ್ ಹಣಕಾಸು), ಮತ್ತು ಶಾಲೆಗಳು ಹಾಗೂ ಲಾಭರಹಿತ ಸಂಸ್ಥೆಗಳೂ ಸೇರಿದಂತೆ ಬಹಳ ವಿಭಿನ್ನ ಬಗೆಯ ಸಂಸ್ಥೆಗಳು ಉಪಯೋಗಿಸುತ್ತವೆ. ಸಾಮಾನ್ಯವಾಗಿ, ಮೇಲ್ಕಂಡ ಚಟುವಟಿಕೆಗಳಲ್ಲಿ ಪ್ರತಿಯೊಂದರ ಗುರಿಯನ್ನು, ಸಂಸ್ಥೆಯ ಸ್ಥಿತಿಯನ್ನು ಪರಿಗಣಿಸಿ, ಸೂಕ್ತವಾದ ಆರ್ಥಿಕ ಸಾಧನಗಳು ಮತ್ತು ವಿಧಾನಗಳ ಮೂಲಕ ಸಾಧಿಸಲಾಗುತ್ತದೆ.


ಹಣಕಾಸು ವ್ಯಾಪಾರದ ನಿರ್ವಹಣೆಯ ಬಹುಮುಖ್ಯವಾದ ಆಯಾಮಗಳಲ್ಲಿ ಒಂದಾಗಿದೆ. ಸರಿಯಾದ ಹಣಕಾಸು ಯೋಜನೆಯಿಲ್ಲದೆ ಹೊಸ ಉದ್ಯಮವೊಂದು ಯಶಸ್ವಿಯಾಗುವುದು ಸಂಭಾವ್ಯವಲ್ಲ. ಹಣವನ್ನು (ಹರಿದುಹೋಗುವ ಆಸ್ತಿ) ನಿರ್ವಹಿಸುವುದು ವ್ಯಕ್ತಿಗಾಗಲಿ ಮತ್ತು ಸಂಸ್ಥೆಗಾಗಲಿ ಸುಭದ್ರವಾದ ಭವಿಷ್ಯವನ್ನು ಖಚಿತಪಡಿಸಲು ಆವಶ್ಯಕ.


ವೈಯಕ್ತಿಕ ಹಣಕಾಸು[ಬದಲಾಯಿಸಿ]

Main article: Personal finance

ವೈಯಕ್ತಿಕ ಹಣಕಾಸಿನ ಪ್ರಶ್ನೆಗಳು ಇವುಗಳ ಸುತ್ತ ತಿರುಗುತ್ತವೆ

 • ಒಬ್ಬ ವ್ಯಕ್ತಿ (ಅಥವಾ ಒಂದು ಸಂಸಾರಕ್ಕೆ) ಎಷ್ಟು ಹಣ ಆವಶ್ಯಕ ಮತ್ತು ಯಾವಾಗ?
 • ಈ ಹಣ ಎಲ್ಲಿಂದ ಬರುವುದು ಮತ್ತು ಹೇಗೆ?
 • ಮುಂಗಾಣದ ವೈಯಕ್ತಿಕ ಘಟನೆಗಳು ಮತ್ತು ಬಾಹ್ಯ ಅರ್ಥಿಕ ಪರಿಸ್ಥಿತಿಗಳಿಂದ ಜನರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಲ್ಲರು?
 • ಕುಟುಂಬದ ಆಸ್ತಿಗಳನ್ನು ತಲೆಮಾರುಗಳಿಗೆ ವರ್ಗಾಯಿಸುವ (ಉಯಿಲಿನಿಂದ ದೊರೆತ ಮತ್ತು ಪಿತ್ರಾರ್ಜಿತ ಅಸ್ತಿ) ಅತ್ಯುತ್ತಮ ವಿಧಾನ ಯಾವುದು?
 • ತೆರಿಗೆಯ ನೀತಿ (ತೆರಿಗೆಯ ಸಬ್ಸಿಡಿಗಳು ಅಥವಾ ದಂಡಗಳು) ವೈಯಕ್ತಿಕ ಹಣಕಾಸು ನಿರ್ಧಾರಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ?
 • ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಾನದ ಮೇಲೆ ಸಾಲದ ಪ್ರಭಾವವೇನು?
 • ಆರ್ಥಿಕ ಅಸ್ಥಿರತೆಯ ಪರಿಸರದಲ್ಲಿ ಸುಭದ್ರ ಆರ್ಥಿಕ ಭವಿಷ್ಯಕ್ಕಾಗಿ ಒಬ್ಬರು ಹೇಗೆ ಯೋಜಿಸಬಹುದು?


ವೈಯಕ್ತಿಕ ಆರ್ಥಿಕ ನಿರ್ಧಾರಗಳು ಶಿಕ್ಷಣಕ್ಕಾಗಿ ಪಾವತಿ ಮಾಡುವುದು, ಸ್ಥಿರಾಸ್ತಿ ಮತ್ತು ಕಾರುಗಳು ಮುಂತಾದ ವಸ್ತುಗಳಿಗಾಗಿ ಹಣಸಂದಾಯ, ವಿಮೆಯ ಖರೀದಿ ಉದಾ. ಆರೋಗ್ಯ ಮತ್ತು ಆಸ್ತಿ ವಿಮೆ, ನಿವೃತ್ತಿಗಾಗಿ ಹೂಡಿಕೆ ಮತ್ತು ಉಳಿತಾಯ ಇವುಗಳನ್ನು ಒಳಗೊಳ್ಳಬಹುದು.


ವೈಯಕ್ತಿಕ ಆರ್ಥಿಕ ನಿರ್ಧಾರಗಳು ಸಾಲಕ್ಕಾಗಿ ಅಥವಾ ಋಣಭಾರವನ್ನು ನೀಗಿಸಲು ಮಾಡುವ ಸಂದಾಯಗಳನ್ನು ಸಹ ಒಳಗೊಳ್ಳಬಹುದು.


ಕಾರ್ಪೊರೇಟ್ ಹಣಕಾಸು[ಬದಲಾಯಿಸಿ]

Main article: Corporate finance

ನಿರ್ವಾಹಕ ಅಥವಾ ಕಾರ್ಪೊರೇಟ್‌ಹಣಕಾಸೆಂದರೆ ಸಂಸ್ಥೆಯ ಚಟುವಟಿಕೆಗಳಿಗೆ ಹಣವನ್ನು ಒದಗಿಸುವ ಕೆಲಸ. ಸಣ್ಣ ವ್ಯಾಪಾರಕ್ಕೆ ಇದನ್ನು ಎಸ್ಸೆಮ್ಮಿ ಹಣಕಾಸು ಎನ್ನುತ್ತಾರೆ. ಸಂಸ್ಥೆಯ ಸಂಪತ್ತನ್ನು ಮತ್ತು ಅದರ ಷೇರುಗಳ ಮೌಲ್ಯವನ್ನು ಗರಿಷ್ಠಗೊಳಿಸಲು ಪ್ರಯತ್ನಿಸುವಾಗ ಅಪಾಯ ಮತ್ತು ಲಾಭಗಳನ್ನು ಸರಿದೂಗಿಸುವುದನ್ನು ಅದು ಸಾಮಾನ್ಯವಾಗಿ ಒಳಗೊಂಡಿರುತ್ತದೆ.


ಕೆಲವೊಮ್ಮೆ ಬಾಂಡುಗಳ ರೂಪದಲ್ಲಿರುವ ಮಾಲೀಕತ್ವದ ಷೇರುಗಳು ಮತ್ತು ದೀರ್ಘಾವಧಿ ಸಾಲದಿಂದ ದೀರ್ಘಾವಧಿ ಹಣಸಹಾಯವನ್ನು ಒದಗಿಸಲಾಗುತ್ತದೆ. ಇವುಗಳ ನಡುವಿನ ಸಮತೋಲನದಿಂದ ಕಂಪೆನಿಯ ಬಂಡವಾಳದ ರಚನೆಉಂಟಾಗಿರುತ್ತದೆ. ಬ್ಯಾಂಕುಗಳು ಋಣರೇಖೆಯನ್ನು ವಿಸ್ತರಿಸುವುದರಿಂದ ಅಲ್ಪಾವಧಿ ಹಣಸಹಾಯ ಅಥವಾ ಕಾರ್ಯವಾಹಿ ಬಂಡವಾಳವನ್ನು ಒದಗಿಸಲಾಗುತ್ತದೆ.


ಹಣಕಾಸಿಗೆ ಸಂಬಂಧಿಸಿದ ಇನ್ನೊಂದು ವ್ಯಾಪಾರ ನಿರ್ಧಾರವೆಂದರೆ ಹೂಡಿಕೆ ಅಥವಾ ಹಣದ ನಿರ್ವಹಣೆ. ಹೂಡಿಕೆ ಎಂದರೆ ಆಸ್ತಿಯನ್ನು ಅದರ ಮೌಲ್ಯ ಹಾಗೆಯೇ ಉಳಿಯುತ್ತದೆ ಅಥವಾ ಹೆಚ್ಚಾಗುತ್ತದೆ ಎಂಬ ಆಶೆಯೊಂದಿಗೆ ಖರೀದಿಸುವುದು. ಹೂಡಿಕೆಯ ನಿರ್ವಹಣೆಯಲ್ಲಿಪೋರ್ಟ್ಫೋಲಿಯೋವನ್ನು– ಆರಿಸುವಾಗ ನಾವು ಯಾವುದನ್ನು , ಎಷ್ಟು ಮತ್ತು ಯಾವಾಗ ಹೂಡಬೇಕೆಂದು ನಿರ್ಧರಿಸಬೇಕು. ಇದನ್ನು ಮಾಡಬೇಕಾದರೆ ಕಂಪೆನಿಯು ಇವುಗಳನ್ನು ಮಾಡತಕ್ಕದ್ದು:


 • ಸಂಬಂಧಿಸಿದ ಗುರಿಗಳನ್ನು ಮತ್ತು ಮಿತಿಗಳನ್ನು ಗುರುತಿಸುವುದು: ಸಂಸ್ಥೆಯ ಅಥವಾ ವ್ಯಕ್ತಿಗಳ ಗುರಿಗಳು, ಸಮಯಾವಕಾಶ, ಅಪಾಯ ನಿವಾರಣೆ ಮತ್ತು ತೆರಿಗೆಯ ಪರಿಗಣನೆ;
 • ಸೂಕ್ತವಾದ ನೀತಿಯನ್ನು ಗುರುತಿಸುವುದು: ಸಕ್ರಿಯ v ನಿಷ್ಕ್ರಿಯ– ಹೆಜಿಂಗ್ ನೀತಿ
 • ಪೋರ್ಟ್ಫೋಲಿಯೊ ಕಾರ್ಯವೈಖರಿಯನ್ನು ಅಳೆಯುವುದು


ಹಣಕಾಸು ನಿರ್ವಹಣೆಯು ಲೆಕ್ಕಿಸುವ ವೃತ್ತಿಯ ಹಣಕಾಸು ಕಾರ್ಯದ ಪ್ರತಿರೂಪವಾಗಿರುತ್ತದೆ. ಹೇಗಾದರೂ, ಹಣಕಾಸು ಲೆಕ್ಕಗಳು ಚಾರಿತ್ರಿಕ ಹಣಕಾಸು ವರದಿಯ ಬಗೆಗೆ ಹೆಚ್ಚು ಆಸಕ್ತವಾಗಿರುತ್ತವೆ, ಆದರೆ ಹಣಕಾಸು ನಿರ್ಧಾರ ಸಂಸ್ಥೆಯ ಭವಿಷ್ಯದ ಬಗೆಗೆ ನಿರ್ದಿಷ್ಟವಾಗಿರುತ್ತದೆ.


ಬಂಡವಾಳ[ಬದಲಾಯಿಸಿ]

Main article: Financial capital


ಬಂಡವಾಳ, ಹಣಕಾಸಿನ ಅರ್ಥದಲ್ಲಿ, ವ್ಯಾಪಾರಕ್ಕೆ ಇತರ ವಸ್ತುಗಳ ಉತ್ಪಾದನೆ ಅಥವಾ ಸೇವೆಯ ನೀಡುವಿಕೆಗೆ ಉಪಯುಕ್ತವಾದ ವಸ್ತುಗಳನ್ನು ಖರೀದಿಸುವ ಶಕ್ತಿಯನ್ನು ಒದಗಿಸುವ ಹಣವಾಗಿರುತ್ತದೆ.


ಬಜೆಟ್ ಮಾಡುವುದರ ಆವಶ್ಯಕತೆ[ಬದಲಾಯಿಸಿ]

ಬಜೆಟ್ ಎನ್ನುವುದು ವ್ಯಾಪಾರದ ಯೋಜನೆಯನ್ನು ದಾಖಲಿಸುವ ದಸ್ತಾವೇಜು. ಇದರಲ್ಲಿ ವ್ಯಾಪಾರದ ಗುರಿ, ನಿಗದಿಪಡಿಸಿದ ಗುರಿಗಳು, ಮತ್ತು ಆರ್ಥಿಕ ಶಬ್ದಗಳಲ್ಲಿ ಫಲಿತಾಂಶಗಳು ಉದಾ. ಮಾರಾಟಕ್ಕೆ ನಿಗದಿಪಡಿಸಿದ ಗುರಿ, ಫಲಿತಾಂಶವಾದ ವೆಚ್ಚ, ಬೆಳವಣಿಗೆ, ಯೋಜಿಸಿದ ಮಾರಾಟವನ್ನು ಸಾಧಿಸಲು ಅಗತ್ಯವಾದ ಹೂಡಿಕೆ, ಮತ್ತು ಹೂಡಿಕೆಗೆ ಹಣಕಾಸಿನ ಮೂಲ ಇವು ಸೇರಿರಬಹುದು. ಬಜೆಟ್ ದೀರ್ಘಾವಧಿ ಅಥವಾ ಅಲ್ಪಾವಧಿ ಸಹ ಆಗಿರಬಹುದು. ದೀರ್ಘಾವಧಿ ಬಜೆಟ್ ಗಳಿಗೆ ಕಂಪೆನಿಗೆ 5–10 ವರ್ಷಗಳ ದೃಷ್ಟಿಕೋನವನ್ನು ನೀಡುವ ಸಮಯಾವಕಾಶ ಇರುತ್ತದೆ; ಅಲ್ಪಾವಧಿ ಎಂದರೆ ಒಂದು ವರ್ಷದಲ್ಲಿ ನಿಯಂತ್ರಿಸಿ ಕಾರ್ಯ ನಿರ್ವಹಿಸಲು ತಯಾರಿಸುವ ವಾರ್ಷಿಕ ಬಜೆಟ್.


ಬಂಡವಾಳದ ಬಜೆಟ್[ಬದಲಾಯಿಸಿ]

ಇದು ಯೋಜಿಸಿದ ಸ್ಥಿರಾಸ್ತಿ ಅಗತ್ಯಗಳನ್ನು ಮತ್ತು ಅದಕ್ಕೆ ತಗುಲುವ ವೆಚ್ಚಕ್ಕೆ ಹಣ ಹೊಮ್ದುಸುವುದನ್ನು ಕುರಿತಾಗಿರುತ್ತದೆ. ಗಳನ್ನು ವಾರ್ಷಿಕವಾಗಿ ಸರಿಹೊಂದಿಸಲಾಗುತ್ತದೆ ಮತ್ತು ಅವುಗಳು ದೀರ್ಘಾವಧಿ ಬಂಡವಾಳ ಸುಧಾರಣಾ ಯೋಜನೆಯ ಭಾಗವಾಗಿರಬೇಕು


ನಗದು ಬಜೆಟ್[ಬದಲಾಯಿಸಿ]

ವ್ಯಾಪಾರದ ಕಾರ್ಯವಾಹಿ ಬಂಡವಾಳದ ಅಗತ್ಯಗಳನ್ನು ಎಲ್ಲ ಸಮಯದಲ್ಲೂ ಗಮನಿಸಿ ಅಲ್ಪಾವಧಿ ವೆಚ್ಚಗಳನ್ನು ಭರಿಸಲು ಸಾಕಷ್ಟು ಹಣ ಇದೆಯೆಂದು ಖಚಿತಪಡಿಸಿಕೊಳ್ಳಬೇಕು.


ಮೂಲಭೂತವಾಗಿ ನಗದು ಬಜೆಟ್ ನಗದಿನ ಎಲ್ಲ ನಿರೀಕ್ಷಿತ ಮೂಲಗಳು ಮತ್ತು ಉಪಯೋಗಗಳನ್ನು ತೋರಿಸುವ ವಿವರವಾದ ಯೋಜನೆಯಾಗಿರುತ್ತದೆ. ನಗದು ಬಜೆಟ್ ನಲ್ಲಿ ಈ ಕೆಳಗಿನ ಆರು ಮುಖ್ಯ ವಿಭಾಗಗಳಿರುತ್ತವೆ:


 1. ಆರಂಭದ ನಗದು ಉಳಿಕೆ - ಕಳೆದ ಅವಧಿಯ ಮುಚ್ಚುವ ನಗದು ಉಳಿಕೆಯನ್ನು ಹೊಂದಿರುತ್ತದೆ.
 2. ನಗದು ಸಂಗ್ರಹ - ಎಲ್ಲ ನಿರೀಕ್ಷಿತ ನಗದು ರಸೀದಿಗಳನ್ನು (ಪರಿಗಣಿಸಿದ ಅವಧಿಯ ಎಲ್ಲ ನಗದಿನ ಮೂಲಗಳು ಮೌಖ್ಯವಾಗಿ ಮಾರಾಟ) ಒಳಗೊಂಡಿರುತ್ತದೆ.
 3. ನಗದು ವಿತರಣೆ - ಹಣಕಾಸು ವಿಭಾಗದಲ್ಲಿ ಕಾಣಿಸುವ ಅಲ್ಪಾವಧಿ ಸಾಲಗಳ ಬಡ್ಡಿಯನ್ನು ಹೊರತು ಅವಧಿಯ ಎಲ್ಲ ನಗದು ಪಾವತಿಗಳನ್ನು ಪಟ್ಟಿ ಮಾಡುತ್ತದೆ. ನಗದು ಪ್ರವಾಹದ ಮೇಲೆ ಪ್ರಭಾವ ಬೀರದ ಎಲ್ಲ ವೆಚ್ಚಗಳನ್ನು ಈ ಪಟ್ಟಿಯಿಂದ ಹೊರತುಪಡಿಸಲಾಗುತ್ತದೆ (ಉದಾ. ಸವಕಳಿ, ಭೋಗ್ಯ ಮುಂತಾದವು)


 1. ನಗದು ಹೆಚ್ಚುವರಿ ಅಥವಾ ಕೊರತೆ - ನಗದು ಬೇಡಿಕೆ ಮತ್ತು ಲಭ್ಯತೆಗಳ ಪರಿಣಾಮ. ನಗದು ಬೇಡಿಕೆಯನ್ನು ಕಂಪೆನಿಯ ನೀತಿಗೆ ಅನುಸಾರವಾಗಿ ಒಟ್ಟಾರೆ ನಗದು ವಿತರಣೆ ಮತ್ತು ಕನಿಷ್ಠ ನಗದು ಉಳಿಕೆಯಿಂದ ನಿರ್ಧರಿಸಲಾಗುತ್ತದೆ. ಲಭ್ಯವಿರುವ ಒಟ್ಟಾರೆ ನಗದು ನಗದು ಬೇಡಿಕೆಗಿಂತ ಕಡಿಮೆಯಿದ್ದರೆ ಕೊರತೆ ಉಂಟಾಗುತ್ತದೆ.
 2. ಹಣಸಹಾಯ - ಯೋಜಿಸಲಾದ ಸಾಲಗಳು ಮತ್ತು ಬಡ್ಡಿ ಸೇರಿದಂತೆ ಮರುಪಾವತಿಗಳನ್ನು ತಿಳಿಸುತ್ತದೆ.
 3. ಮುಕ್ತಾಯದ ನಗದು ಉಳಿಕೆ - ಸುಮ್ಮನೆ ಯೋಜಿಸಿದ ಮುಚ್ಚುವ ನಗದು ಉಳಿಕೆಯನ್ನು ತಿಳಿಸುತ್ತದೆ.


ಪ್ರಸ್ತುತ ಆಸ್ತಿಗಳ ನಿರ್ವಹಣೆ[ಬದಲಾಯಿಸಿ]

ಸಾಲದ ಧೋರಣೆ[ಬದಲಾಯಿಸಿ]

ಸಾಲ ಗ್ರಾಹಕರಿಗೆ ವಸ್ತುಗಳು ಮತ್ತು ಸೇವೆಗಳನ್ನು ಕೊಳ್ಳಲು ಮತ್ತು ಅವಕ್ಕೆ ನಂತರದ ದಿನಾಂಕದಂದು ಪಾವತಿ ಮಾಡುವ ಅವಕಾಶ ನೀಡುತ್ತದೆ.


ಸಾಲದ ವ್ಯಾಪಾರದ ಲಾಭಗಳು[ಬದಲಾಯಿಸಿ]
 • ಸಾಮಾನ್ಯವಾಗಿ ನಗದು ವ್ಯಾಪಾರಕ್ಕಿಂತ ಹೆಚ್ಚು ಗ್ರಾಹಕರು ಬರುತ್ತಾರೆ.


 • ಕೆಟ್ಟ ಸಾಲದ ಅಪಾಯವನ್ನು ರಕ್ಷಿಸುವ ಸಲುವಾಗಿ ವಸ್ತುಗಳಿಗೆ ಹೆಚ್ಚಾಗಿ ಬೆಲೆ ಹಾಕಬಹುದು.
 • ಗ್ರಾಹಕರ ಅಭಿಮಾನ ಮತ್ತು ನಂಬಿಕೆ ಗಳಿಸಬಹುದು.
 • ಜನರು ವಸ್ತುಗಳನ್ನು ಕೊಳ್ಳಬಹುದು ಮತ್ತು ಅವಕ್ಕೆ ನಂತರದ ದಿನಾಂಕದಂದು ಪಾವತಿ ಮಾಡಬಹುದು.
 • ರೈತರು ಬೀಜಗಳನ್ನು ಮತ್ತು ಉಪಕರಣಗಳನ್ನು ಕೊಳ್ಳಬಹುದು ಮತ್ತು ಅವಕ್ಕೆ ಸುಗ್ಗಿಯ ನಂತರ ಮಾತ್ರ ಪಾವತಿ ಮಾಡಬಹುದು.
 • ಕೃಷಿ ಮತ್ತು ಔದ್ಯೋಗಿಕ ಉತ್ಪಾದನೆ ಮತ್ತು ವಾಣಿಜ್ಯಕ್ಕೆ ಪ್ರೋತ್ಸಾಹ ನೀಡುತ್ತದೆ.
 • ಪ್ರೋತ್ಸಾಹಕ ಸಾಧನವಾಗಿ ಬಳಸಬಹುದು.


 • ಮಾರಾಟವನ್ನು ಹೆಚ್ಚಿಸುತ್ತದೆ.
 • ಬೆಲೆಗಳು ಮಿತವಾಗಿರುತ್ತವೆ.


ಸಾಲದ ವ್ಯಾಪಾರದ ದೋಷಗಳು[ಬದಲಾಯಿಸಿ]
 • ಕೆಟ್ಟ ಸಾಲದ ಅಪಾಯ.
 • ಹೆಚ್ಚಾದ ಆಡಳಿತದ ವೆಚ್ಚ.
 • ಜನರು ತಮ್ಮ ಶಕ್ತಿ ಮೀರಿ ಕೊಳ್ಳಬಹುದು.
 • ಹೆಚ್ಚು ಕಾರ್ಯವಾಹಿ ಬಂಡವಾಳ ಅಗತ್ಯ.
 • ದಿವಾಳಿಯಾಗುವ ಅಪಾಯ.
 • ಮನಶ್ಶಾಂತಿ ಕಳೆಯಬಹುದು.


ಸಾಲದ ಪ್ರಕಾರಗಳು[ಬದಲಾಯಿಸಿ]
 • ಪೂರೈಕೆದಾರರ ಸಾಲ:Suppliers credit
 • ಸಾಮಾನ್ಯ ತೆರೆದ ಖಾತೆಯ ಮೇಲೆ ಸಾಲ
 • ಕಂತುಗಳಲ್ಲಿ ಮಾರಾಟ
 • ವಿನಿಮಯದ ಬಿಲ್ಲುಗಳು
 • ಕ್ರೆಡಿಟ್ ಕಾರ್ಡುಗಳು
 • ಗುತ್ತಿಗೆದಾರರ ಸಾಲ
 • ಸಾಲಗಾರರ ವಿಭಜನೆ
 • ನಗದು ಸಾಲ
 • ಸಿಪಿಎಫ್ ಸಾಲಗಳು
 • ಉತ್ಪನ್ನದ ವಿನಿಮಯ
ಸಾಲದ ಪರಿಸ್ಥಿತಿಗಳ ಮೇಲೆ ಪ್ರಭಾವ ಬೀರುವ ಅಂಶಗಳು[ಬದಲಾಯಿಸಿ]
 • ವ್ಯಾಪಾರಗಳ ಚಟುವಟಿಕೆಗಳ ಸ್ವಭಾವ
 • ಹಣಕಾಸು ಸ್ಥಿತಿ
 • ಉತ್ಪನ್ನದ ಬಾಳಿಕೆ
 • ಉತ್ಪಾದನೆಯ ಪ್ರಕ್ರಿಯೆಯ ದೀರ್ಘತೆ

ಸ್ಪರ್ಧೆ ಮತ್ತು ಸ್ಪರ್ಧಿಗಳ ಸಾಲದ ಪರಿಸ್ಥಿತಿಗಳು

 • ದೇಶದ ಆರ್ಥಿಕ ಸ್ಥಿತಿ
 • ಹಣಕಾಸು ಸಂಸ್ಥೆಗಳ ಪರಿಸ್ಥಿತಿ
 • ಮುಂಚಿತವಾದ ಪಾವತಿಗೆ ಸೋಡಿ
 • ಸಾಲಗಾರರ ಬಗೆಯ ವ್ಯಾಪಾರ ಮತ್ತು ಹಣಕಾಸು ಸ್ಥಿತಿ


ಸಾಲದ ವಸೂಲಿ[ಬದಲಾಯಿಸಿ]
ಬಾಕಿ ಮಿತಿಮೀರಿದ ಖಾತೆಗಳು[ಬದಲಾಯಿಸಿ]
 • ಹೇಳಿಕೆಗೆ ಮಿತಿಮೀರಿದ ಖಾತೆಯ ಸೂಚನೆಯನ್ನು ಲಗತ್ತಿಸಿ
 • ಸಾಲದ ಮರುಪಾವತಿಯನ್ನು ಕೋರುವ ಪತ್ರವನ್ನು ಕಳುಹಿಸಿ.
 • ಮೊದಲನೆಯದು ಪರಿಣಾಮಕಾರಿ ಆಗದಿದ್ದರೆ ಎರಡನೆಯ ಅಥವಾ ಮೂರನೆಯ ಪತ್ರವನ್ನು ಕಳುಹಿಸಿ.
 • ಕಾನೂನು ನಡವಳಿಕೆಯ ಎಚ್ಚರಿಕೆ ನೀಡಿ


ಪರಿಣಾಮಕಾರಿ ಸಾಲ ನಿಯಂತ್ರಣ[ಬದಲಾಯಿಸಿ]
 • ಮಾರಾಟ ಹೆಚ್ಚಿಸುತ್ತದೆ
 • ಕೆಟ್ಟ ಸಾಲಗಳನ್ನು ಕಡಿಮೆ ಮಾಡುತ್ತದೆ
 • ಲಾಭಗಳನ್ನು ಹೆಚ್ಚಿಸುತ್ತದೆ
 • ಗ್ರಾಹಕರ ನಂಬಿಕೆಯನ್ನು ಬೆಳೆಸುತ್ತದೆ
 • ಹಣಕಾಸು ಉದ್ಯಮದ ವಿಶ್ವಾಸವನ್ನು ಬೆಳೆಸುತ್ತದೆ
 • ಕಂಪೆನಿಯ ಬಂಡವಾಳವನ್ನು ಹೆಚ್ಚಿಸುತ್ತದೆ


ಋಣಾರ್ಹತೆಯ ಬಗೆಗಿನ ಮಾಹಿತಿಯ ಮೂಲಗಳು[ಬದಲಾಯಿಸಿ]
 • ವ್ಯಾಪಾರ ಉಲ್ಲೇಖಗಳು
 • ಬ್ಯಾಂಕ್ ಉಲ್ಲೇಖಗಳು
 • ಕ್ರೆಡಿಟ್ ಏಜೆನ್ಸಿಗಳು
 • ವಾಣಿಜ್ಯ ಛೇಂಬರ್ ಗಳು
 • ಉದ್ಯೋಗದಾತರು
 • ಸಾಲದ ಅರ್ಜಿ ಫಾರಂಗಳು


ಸಾಲದ ವಿಭಾಗದ ಕರ್ತವ್ಯಗಳು[ಬದಲಾಯಿಸಿ]
 • ಕಾನೂನು ನಡವಳಿಕೆ
 • ಖಾತೆಯ ತೀರ್ಮಾನವನ್ನು ಖಚಿತಪಡಿಸುವ ಕ್ರಮಗಳನ್ನು ಕೈಗೊಳ್ಳುವುದು
 • ಸಾಲದ ಧೋರಣೆ ಮತ್ತು ಸಾಲದ ನಿಯಂತ್ರಣದ ಕ್ರಮಗಳನ್ನು ತಿಳಿದಿರುವುದು
 • ಸಾಲದ ಮಿತಿಗಳನ್ನು ನಿಗದಿಪಡಿಸುವುದು
 • ಖಾತೆಯ ಹೇಳಿಕೆಗಳನ್ನು ಕಳುಹಿಸುವುದನ್ನು ಖಚಿತಪಡಿಸುವುದು
 • ಸಾಲದ ಗ್ರಾಹಕರ ಬಗ್ಗೆ ಪೂರ್ತಿ ತನಿಖೆ ನಡೆದಿದೆಯೆಂದು ಖಚಿತಪಡಿಸುವುದು


 • ಬಾಕಿ ಇರುವ ಎಲ್ಲ ಮೊಬಲಗಿನ ದಾಖಲೆ ಇರಿಸುವುದು
 • ಸಾಲಗಳನ್ನು ಸಮಯಕ್ಕೆ ತೀರಿಸಲಾಗುವುದೆಂದು ಖಚಿತಪಡಿಸುವುದು
 • ಉತ್ತಮ ನಿರ್ವಹಣೆಗಾಗಿ ಮೇಲಿನ ನಿರ್ವಾಹಕರಿಗೆ ಸಮಯಾನುಸಾರ ವರದಿ ನೀಡುವುದು


ಷೇರುಗಳು[ಬದಲಾಯಿಸಿ]

ಷೇರು ನಿಯಂತ್ರಣದ ಪ್ರಯೋಜನ


 • ಬೇಡಿಕೆಯನ್ನು ಪೂರೈಸಲು ಸಾಕಷ್ಟು ಷೇರುಗಳು ಇವೆಯೆಂದು ಖಚಿತಪಡಿಸುತ್ತದೆ
 • ರಕ್ಷಿಸುತ್ತದೆ ಮತ್ತು ಕಳ್ಳತನವನ್ನು ನಿಭಾಯಿಸುತ್ತದೆ.
 • ದಾಸ್ತಾನು ಮಾಡುವುದನ್ನು ನಿವಾರಿಸುತ್ತದೆ
 • ಕೊಳ್ಳುವ ಮತ್ತು ಮಾರುವ ಬೆಲೆಗಳ ನಿಯಂತ್ರಣಕ್ಕೆ ಅವಕಾಶ ಕೊಡುತ್ತದೆ.ಷೇರು ದಾಸ್ತಾನು
Main article: Cornering the market

ಇದರರ್ಥ ಸರಿಯಾದ ಸಮಯದಲ್ಲಿ ಸರಿಯಾದ ಬೆಲೆಗೆ ಸರಿಯಾದ ಪ್ರಮಾಣದ ಷೇರುಗಳನ್ನು ಖರೀದಿಸುವುದು.


ಷೇರು ದಾಸ್ತಾನಿನಿಂದ ಹಲವು ಲಾಭಗಳಿವೆ, ಈ ಕೆಳಗಿನವವು ಕೆಲವು ಉದಾಹರಣೆಗಳು:


 • ಬೆಲೆಯ ಏರುಪೇರುಗಳು ಮತ್ತು ಷೇರುಗಳಿಂದ ಆಗುವ ನಷ್ಟ ಕನಿಷ್ಠವಾಗಿರುತ್ತದೆ.
 • ವಸ್ತುಗಳು ಗ್ರಾಹಕರಿಗೆ ಸಮಯದಲ್ಲಿ ತಲುಪುತ್ತವೆಂದು ಖಚಿತಪಡಿಸುತ್ತದೆ; ಉತ್ತಮ ಸೇವೆ
 • ಜಾಗ ಮತ್ತು ದಾಸ್ತಾನಿನ ವೆಚ್ಚದ ಉಳಿತಾಯ
 • ಕಾರ್ಯವಾಹಿ ಬಂಡವಾಳದ ಮೇಲಿನ ಹೂಡಿಕೆ ಕನಿಷ್ಠ
 • ವಿಳಂಬಗಳಿಂದ ಉತ್ಪಾದನೆಯಲ್ಲಿ ನಷ್ಟವಿಲ್ಲ


ಷೇರು ದಾಸ್ತಾನಿನಿಂದ ಹಲವು ಹಾನಿಗಳಿವೆ, ಈ ಕೆಳಗಿನವು ಕೆಲವು ಉದಾಹರಣೆಗಳು:

 • ಹಳತಾಗುವಿಕೆ

ಬೆಂಕಿ ಮತ್ತು ಕಳ್ಳತನದ ಅಪಾಯ

 • ಪ್ರಾರಂಭದ ಕಾರ್ಯವಾಹಿ ಬಂಡವಾಳದ ಹೂಡಿಕೆ ಬಹಳ ದೊಡ್ಡದು
 • ಬೆಲೆಯ ಏರುಪೇರುಗಳಿಂದ ಆಗುವ ನಷ್ಟ


ಷೇರು ವ್ಯವಹಾರಪ್ರಮಾಣದ ದರ

ಇದು ಷೇರುಗಳ ಸರಾಸರಿ ಮಟ್ಟ ವರ್ಷಕ್ಕೆ ಎಷ್ಟು ಸಲ ಮಾರಾಟವಾಗಿದೆ ಎಂಬುದನ್ನು ಸೂಚಿಸುತ್ತದೆ. ಮಾರಿದ ವಸ್ತುಗಳ ಕೊಳ್ಳುವ ಬೆಲೆಯನ್ನು ಸರಾಸರಿ ಮಟ್ಟದ ಷೇರಿಗಳ ಕೊಳ್ಳುವ ಬೆಲೆಯಿಂದ ಭಾಗಿಸುವುದರಿಂದ ಇದನ್ನು ಲೆಕ್ಕಿಸಲಾಗುತ್ತದೆ.ಸೂಕ್ತವಾದ ಷೇರು ಮಟ್ಟಗಳನ್ನು ನಿರ್ಧರಿಸುವುದು


 • ಪರಿಣಾಮಕಾರಿ ವೆಚ್ಚವನ್ನು ಖಚಿತಪಡಿಸಿಕೊಳ್ಳಲು ಉಳಿಸಬಹುದಾದ ಷೇರುಗಳ ಗರಿಷ್ಠ ಮಟ್ಟಕ್ಕೆ ಷೇರುಗಳ ಗರಿಷ್ಠ ಮಟ್ಟ ವೆಂದು ಹೆಸರು.
 • ಷೇರುಗಳ ಮಟ್ಟ ಅದಕ್ಕಿಂತ ಕೆಳಗೆ ಹೋಗಬಾರದಾದ ಬಿಂದುವಿಗೆ ಷೇರುಗಳ ಕನಿಷ್ಠ ಮಟ್ಟ ವೆಂದು ಹೆಸರು.
 • ಮಾನಕ ಆರ್ಡರ್ ಎಂದರೆ ಸಾಮಾನ್ಯವಾಗಿ ಆರ್ಡರ್ ಮಾಡುವ ಷೇರುಗಳ ಪ್ರಮಾಣ.
 • ಆರ್ಡರ್ ಮಟ್ಟ ಎಂದರೆ ಆರ್ಡರ್ ಮಾಡಬೇಕಾದ ಷೇರುಗಳ ಮಟ್ಟನಗದು[ಬದಲಾಯಿಸಿ]

ನಗದು ಇರಿಸಿಕೊಳ್ಳಬೇಕಾದ ಕಾರಣಗಳು[ಬದಲಾಯಿಸಿ]
 • ನಗದನ್ನು ಹಣಕಾಸಿನಲ್ಲಿ ಸಾಮಾನ್ಯವಾಗಿ "ರಾಜ" ಎಂದು ಕರೆಯುತ್ತಾರೆ, ಏಕೆಂದರೆ ಅದು ಅತ್ಯಂತ ಗತಿಶೀಲವಾದ ಆಸ್ತಿ.ಸಾಕಷ್ಟು ನಗದಿನ ಲಾಭಗಳು[ಬದಲಾಯಿಸಿ]
 • ಸದ್ಯದ ಬಾಧ್ಯತೆಗಳನ್ನು ವಹಿಸಿಕೊಳ್ಳಬಹುದು.
 • ನಗದು ಪಾವತಿಗಳಿಗೆ ನಗದು ಸೋಡಿ ಕೊಡಲಾಗುವುದು.
 • ಉತ್ಪಾದನೆ ನಡೆಯುತ್ತಿರುತ್ತದೆ
 • ಹೆಚ್ಚುವರಿ ನಗದನ್ನು ಅಲ್ಪಾವಧಿಗೆ ಹೂಡಬಹುದು.
 • ವ್ಯಾಪಾರ ತನ್ನ ಖಾತೆಗಳಿಗೆ ಸಮಯದಲ್ಲಿ ಪಾವತಿ ಮಾಡುವುದರಿಂದ ಸುಲಭವಾಗಿ ಸಾಲ ಸಿಗುವ ಅವಕಾಶ ಉಂಟು.
 • ಗತಿಶೀಲತೆ


ಸ್ಥಿರಾಸ್ತಿಗಳ ನಿರ್ವಹಣೆ[ಬದಲಾಯಿಸಿ]

ಇಳಿತಾಯ[ಬದಲಾಯಿಸಿ]

ಇಳಿತಾಯ ಆಸ್ತಿಯ ಉಪಯುಕ್ತ ಆಯಸ್ಸಿನ ವೆಚ್ಚಕ್ಕೆ ಅದರ ಖರೀದಿಯ ಸಮಯದಲ್ಲಿ ನಿರ್ಧರಿಸಲ್ಪಟ್ಟು ಬದಿಗಿರಿಸುವ ಮೊತ್ತ. ಸರಿಹೊಂದುವ ತತ್ವವನ್ನು ಜಾರಿಗೊಳಿಸಲು ಅದನ್ನು ವಾರ್ಷಿಕವಾಗಿ ಲೆಕ್ಕಿಸಲಾಗುತ್ತದೆ.ವಿಮೆ[ಬದಲಾಯಿಸಿ]

Main article: Insurance

ವಿಮೆ ಎಂದರೆ ನಿರ್ದಿಷ್ಟ ಸಂಭವಗಳಲ್ಲಿ ಒಂದು ಪಕ್ಷವನ್ನು ಮತ್ತೊಂದು ಪಕ್ಷ, ಪ್ರೀಮಿಯಂಗೆ ಬದಲಾಗಿ ಸಂರಕ್ಷಿಸಲು ಮಾಡುವ ಕರಾರು. • ವಿಮೆಮಾಡದ ಅಪಾಯಗಳು


 • ಕೆಟ್ಟ ಸಾಲ
 • ಫ್ಯಾಷನ್ ನಲ್ಲಿ ಬದಲಾವಣೆ
 • ಆರ್ಡರ್ ಮತ್ತು ಡೆಲಿವರಿಯ ನಡುವಿನ ವಿಳಂಬಗಳು
 • ಹೊಸ ಯಂತ್ರ ಅಥವಾ ತಂತ್ರಜ್ಞಾನ
 • ವಿಭಿನ್ನ ಜಾಗಗಳಲ್ಲಿ ವಿಭಿನ್ನ ಬೆಲೆಗಳು
 • ವಿಮೆ ಕರಾರಿನ ಅಗತ್ಯತೆಗಳು
 • ವಿಮೆಮಾಡಬಹುದಾದ ಬಡ್ಡಿ
  • ವಿಮೆ ಮಾಡಿಸುವವರು ಅವರು ವಿಮೆ ಮಾಡಿಸುವುದರಿಂದ ನಿಜವಾದ ಆರ್ಥಿಕ ಲಾಭ ಪಡೆಯಬೇಕು ಅಥವಾ ಅದು ನಾಶವಾದರೆ ಇಲ್ಲವೆ ಕಳೆದುಹೋದರೆ ಅವರಿಗೆ ನಷ್ಟವಾಗುವ ಹಾಗಿರಬೇಕು.
  • ವಸ್ತು ವಿಮೆ ಮಾಡಿಸುವವರಿಗೆ ಸೇರಿರಬೇಕು.
  • ಒಬ್ಬ ವ್ಯಕ್ತಿಗೆ ಮತ್ತೊಬ್ಬರು ಹಣಕೊಡಬೇಕಾಗಿದ್ದರೆ ಮೊದಲನೆಯವರು ಎರಡನೆಯವರ ಜೀವದ ಮೇಲೆ ವಿಮೆ ಮಾಡಬಹುದು.
  • ಕಾನೂನಿನ ಪ್ರಕಾರ ವಿಮೆ ಮಾಡಬಹುದಾದ ವ್ಯಕ್ತಿ ಅಥವಾ ವಸ್ತುವಾಗಿರಬೇಕು.
  • ವಿಮೆ ಮಾಡಿಸುವವರಿಗೆ ಅವರು ವಿಮೆ ಮಾಡಿಸುವುದರ ಮೇಲೆ ನ್ಯಾಯಸಮ್ಮತವಾದ ಕ್ಲೈಮ್ ಇರಬೇಕು.
 • ವಿಶ್ವಾಸ
  • ಉಬೆರ್ರಿಮೆ ಫಿಡೆ ಎಂದರೆ ಸಂಪೂರ್ಣ ಪ್ರಾಮಾಣಿಕತೆ ಮತ್ತು ಇದು ವಿಮೆ ಮಾಡುವವರು ಮತ್ತು ಮಾಡಿಸುವವರ ವ್ಯವಹಾರದ ಲಕ್ಷಣವಾಗಿರಬೇಕು.ಹಂಚಿಕೊಂಡ ಸೇವೆಗಳು[ಬದಲಾಯಿಸಿ]

ಇತ್ತೀಚೆಗೆ ಹಣಕಾಸು ವಿಷಯಗಳನ್ನು ಒಂದುಗೂಡಿಸಿ ಸಂಯೋಜಿಸಿ ಸಂಸ್ಥೆಯಲ್ಲಿ ಹಂಚಿಕೊಂದ ಸೇವೆಗಳಾಗಿ ನಡೆಸುವ ಪ್ರವೃತ್ತಿ ಉಂಟಾಗಿದೆ. ಸಂಸ್ಥೆಯಲ್ಲಿ ಹಲವಾರು ಹಣಕಾಸು ವಿಭಾಗಗಳಿದ್ದು, ವಿಭಿನ್ನ ಸ್ಥಳಗಳಿಂದ ಒಂದೇ ಕೆಲಸವನ್ನು ಮಾಡುವುದರ ಬದಲಾಗಿ, ಕೇಂದ್ರೀಕೃತವಾದ ಪದ್ಧತಿಯನ್ನು ಸೃಷ್ಟಿಸಬಹುದಾಗಿದೆ.


ರಾಜ್ಯಗಳ ಹಣಕಾಸು[ಬದಲಾಯಿಸಿ]

Main article: Public finance

ದೇಶ, ರಾಜ್ಯ, ಜಿಲ್ಲೆ, ನಗರ ಅಥವಾ ನಗರಸಭೆಯ ಹಣಕಾಸಿಗೆ ಸಾರ್ವಜನಿಕ ಹಣಕಾಸೆಂದು ಹೆಸರು. ಅದರ ವಿಷಯಗಳೆಂದರೆ


 • ಸಾರ್ವಜನಿಕ ವಲಯದ ಸಂಸ್ಥೆಯ ಅಗತ್ಯವಾದ ವೆಚ್ಚವನ್ನು ಗುರುತಿಸುವುದು
 • ಆ ಸಂಸ್ಥೆಯ ಆದಾಯದ ಮೂಲ(ಗಳು)
 • ಬಜೆಟ್ ಮಾಡುವ ಪ್ರಕ್ರಿಯೆಹಣಕಾಸಿನ ಅರ್ಥಶಾಸ್ತ್ರ[ಬದಲಾಯಿಸಿ]

Main article: Financial economics


ಹಣಕಾಸಿನ ಅರ್ಥಶಾಸ್ತ್ರವೆಂದರೆ ನಿಜವಾದ ಅರ್ಥವ್ಯವಸ್ಥೆಯ ವಿಷಯಗಳಿಗೆ ವಿರುದ್ಧವಾಗಿ ಬೆಲೆಗಳು, ಬಡ್ಡಿದರಗಳು ಮತ್ತು ಷೇರುಗಳು ಮುಂತಾದ ಹಣಕಾಸಿನ ಚರಾಂಕಗಳ ಪರಸ್ಪರ ಸಂಬಂಧವನ್ನು ಅಧ್ಯಯನ ಮಾಡುವಂತಹ ಅರ್ಥಶಾಸ್ತ್ರದ ಶಾಖೆ. ಹಣಕಾಸಿನ ಅರ್ಥಶಾಸ್ತ್ರ ಶುದ್ಧ ಹಣಕಾಸಿಗಿಂತ ಭಿನ್ನವಾಗಿ ಹಣಕಾಸಿನ ಚರಾಂಕಗಳ ಮೇಲೆ ನಿಜವಾದ ಅರ್ಥಶಾಸ್ತ್ರೀಯ ಚರಾಂಕಗಳ ಪ್ರಭಾವಗಳ ಮೇಲೆ ಕೇಂದ್ರೀಕರಿಸುತ್ತದೆ.


ಅದು ಇವುಗಳನ್ನು ಅಧ್ಯಯನ ಮಾಡುತ್ತದೆ:


  • ಆಸ್ತಿ ಎಷ್ಟು ಅಪಾಯಕಾರಿ?

(ಆಸ್ತಿಗೆ ಸೂಕ್ತವಾದ ಸೋದಿ ದರವನ್ನು ಗುರುತಿಸಿವುದು)

(ಸಂಬಂಧಿಸಿದ ನಗದಿನ ಪ್ರವಾಹಗಳಿಗೆ ಸೋಡಿ ಕೊಡುವುದು)

  • ಅದೇ ಬಗೆಯ ಆಸ್ತಿಗಳಿಗೆ ಮಾರುಕಟ್ಟೆಯ ಬೆಲೆ ಹೇಗೆ ಹೋಲುತ್ತದೆ?

(ಸಾಪೇಕ್ಷ ಮೌಲ್ಯಾಂಕನ)

  • ನಗದು ಪ್ರವಾಹಗಳು ಇನ್ನೊಂದು ಆಸ್ತಿ ಅಥವಾ ಘಟನೆಗಳನ್ನು ಅವಲಂಬಿಸಿವೆಯೆ?

(ಡಿರೈವೇಟಿವ್ ಗಳು, ತತ್ಫಲವಾದ ಕ್ಲೈಮ್ ನ ಮೌಲ್ಯಾಂಕನ)


ಹಣಕಾಸಿನ ಅರ್ಥಗಣನಾಶಾಸ್ತ್ರಸಂಬಂಧಗಳ ಗಣನಾಂಶಗಳನ್ನು ಅಭ್ಯಸಿಸಲು ಅರ್ಥಗಣನಾಶಾಸ್ತ್ರದ ತಂತ್ರಗಳನ್ನು ಉಪಯೋಗಿಸುವ ಹಣಕಾಸು ಅರ್ಥಶಾಸ್ತ್ರದ ಶಾಖೆ.ಹಣಕಾಸಿನ ಗಣಿತಶಾಸ್ತ್ರ[ಬದಲಾಯಿಸಿ]

Main article: Financial mathematics


ಹಣಕಾಸಿನ ಗಣಿತಶಾಸ್ತ್ರ ಹಣಕಾಸು ಮಾರುಕಟ್ಟೆಗಳ ಅಧ್ಯಯನದ ಅನ್ವಯಿಕ ಗಣಿತಶಾಸ್ತ್ರದ ಒಂದು ಮುಖ್ಯವಾದ ಶಾಖೆ. ಹಣಕಾಸಿನ ಗಣಿತಶಾಸ್ತ್ರ ಎಂದರೆ ಗಣಿತಶಾಸ್ತ್ರದ ಸಾಧನಗಳನ್ನು, ಮುಖ್ಯವಾಗಿ ಸಂಖ್ಯಾಶಾಸ್ತ್ರವನ್ನು, ಬಳಸಿ ಹಣಕಾಸಿನ ದತ್ತಾಂಶಗಳ ಅಧ್ಯಯನ. ಅಂತಹ ದತ್ತಾಂಶಗಳು ಸೆಕ್ಯುರಿಟಿಗಳ - ಷೇರುಗಳು, ಬಾಂಡುಗಳು ಇತ್ಯಾದಿ ಚಲನೆ ಮತ್ತು ಅವುಗಳ ಸಂಬಂಧಗಳಾಗಿರಬಹುದು. ಮತ್ತೊಂದು ದೊಡ್ಡ ಉಪಕ್ಷೇತ್ರವೆಂದರೆ ವಿಮಾ ಗಣಿತಶಾಸ್ತ್ರ.ಪ್ರಾಯೋಗಿಕ ಹಣಕಾಸು[ಬದಲಾಯಿಸಿ]

Main article: Experimental finance


ಪ್ರಾಯೋಗಿಕ ಹಣಕಾಸಿನ ಗುರಿ ವಿಭಿನ್ನ ಮಾರುಕಟ್ಟೆ ಪರಿಸ್ಥಿತಿಗಳನ್ನು ಮತ್ತು ಪರಿಸರಗಳನ್ನು ಸ್ಥಾಪಿಸಿ ಪ್ರಾಯೋಗಿಕವಾಗಿ ವೀಕ್ಷಿಸುವುದು ಮತ್ತು ಪಾತ್ರಧಾರಿಗಳ ನಡವಳಿಕೆ ಮತ್ತು ಫಲರೂಪವಾದ ವ್ಯಾಪಾರಪ್ರವಾಹಗಳ ಲಕ್ಷಣಗಳು, ಮಾಹಿತಿ ಪ್ರಸಾರ ಮತ್ತು ಸಂಗ್ರಹ, ಬೆಲೆ ನಿರ್ಧರಿಸುವ ಕ್ರಿಯೆಗಳು, ಮತ್ತು ಆದಾಯ ಪ್ರಕ್ರಿಯೆಗಳ ವಿಶ್ಲೇಷಣೆ ಮಾಡಲು ವಿಜ್ಞಾನಕ್ಕೆ ಒಂದು ಮಸೂರವನ್ನು ಒದಗಿಸುವುದು. ಪ್ರಾಯೋಗಿಕ ಹಣಕಾಸಿನ ಸಂಶೋಧಕರು ಅಸ್ತಿತ್ವದಲ್ಲಿರುವ ಹಣಕಾಸಿನ ಅರ್ಥಶಾಸ್ತ್ರದ ತತ್ವಗಳು ಎಷ್ಟರ ಮಟ್ಟಿಗೆ ಸಿಂಧುವಾದ ಮುನ್ಸೂಚನೆ ನೀಡಬಲ್ಲವು ಎಂಬುದನ್ನು ಅಧ್ಯಯನ ಮಾಡಬಲ್ಲರು ಮತ್ತು ಅಂತಹ ತತ್ವಗಳನ್ನು ವಿಸ್ತರಿಸಲು ಹೊಸ ನಿಯಮಗಳನ್ನು ಪತ್ತೆಹಚ್ಚಲು ಪ್ರಯತ್ನಿಸಬಲ್ಲರು. ವ್ಯಾಪಾರದ ಅನುಕರಣೆಗಳನ್ನು ರೂಪಿಸುವುದು ಇಲ್ಲವೆ ಕೃತಕವಾದ ಸ್ಪರ್ಧಾತ್ಮಕ ಮಾರುಕಟ್ಟೆಯಂತಹ ಸನ್ನಿವೇಶಗಳನ್ನು ಸ್ಥಾಪಿಸಿ ಜನರ ವರ್ತನೆಗಳನ್ನು ಅಧ್ಯಯನ ಮಾಡುವುದರಿಂದ ಸಂಶೋಧನೆ ಮುಂದುವರಿಯಬಹುದು.ವರ್ತನಾತ್ಮಕ ಹಣಕಾಸು[ಬದಲಾಯಿಸಿ]

Main article: Behavioral finance


ವರ್ತನಾತ್ಮಕ ಹಣಕಾಸು ಹಣಕಾಸು ನಿರ್ಧಾರಗಳು ಮತ್ತು ಮಾರುಕಟ್ಟೆಗಳ ಮೇಲೆ ಹೂಡಿಕೆದಾರರು ಅಥವಾ ನಿರ್ವಾಹಕರ ಮನಶ್ಶಾಸ್ತ್ರ ಹೇಗೆ ಪ್ರಭಾವ ಬೀರುತ್ತದೆಂದು ಅಧ್ಯಯನ ಮಾಡುತ್ತದೆ. ಕಳೆದ ಹಲವು ದಶಕಗಳಲ್ಲಿ ವರ್ತನಾತ್ಮಕ ಹಣಕಾಸು ಬೆಳೆದು ಹಣಕಾಸಿನ ಕೇಂದ್ರವಾಗಿದೆ.


ವರ್ತನಾತ್ಮಕ ಹಣಕಾಸಿನಲ್ಲಿ ಈ ಕೆಳಗಿನಂತಹ ವಿಷಯಗಳು ಸೇರಿವೆ:


 1. ಶಾಸ್ತ್ರೀಯ ತತ್ವಗಳಿಂದ ಗಣನೀಯ ವ್ಯತ್ಯಾಸಗಳನ್ನು ಪ್ರದರ್ಶಿಸುವ ಪ್ರಾಯೋಗಿಕ ಅಧ್ಯಯನಗಳು
 1. ವ್ಯಾಪಾರ ಮತ್ತು ಬೆಲೆಗಳ ಮೇಲೆ ಮನಶ್ಶಾಸ್ತ್ರದ ಪ್ರಭಾವದ ಮಾದರಿಗಳು

ಈ ವಿಧಾನಗಳನ್ನು ಆಧರಿಸಿ ಮುನ್ಸೂಚನೆ.

 1. ಪ್ರಾಯೋಗಿಕ ಆಸ್ತಿ ಮಾರುಕಟ್ಟೆಗಳ ಅಧ್ಯಯನ ಮತ್ತು ಮುನ್ಸೂಚನೆಯ ಪ್ರಯೋಗಗಳ ಮಾದರಿಗಳು.


ವರ್ತನಾತ್ಮಕ ಹಣಕಾಸಿನ ಎಳೆಯೊಂದಕ್ಕೆ ಪರಿಮಾಣದ ವರ್ತನಾತ್ಮಕ ಹಣಕಾಸು ಎಂದು ಹೆಸರಿಡಲಾಗಿದ್ದು ಇದು ಮೌಲ್ಯಮಾಪನಕ್ಕೆ ಸಂಬಂಧಿಸಿದ ವರ್ತನೆಯ ಪೂರ್ವಗ್ರಹಗಳನ್ನು ಅರ್ಥಮಾಡಿಕೊಳ್ಳಲು ಗಣಿತಶಾಸ್ತ್ರೀಯ ಮತ್ತು ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ಉಪಯೋಗಿಸುತ್ತದೆ. ಈ ಪ್ರಯತ್ನದ ಸ್ವಲ್ಪ ಭಾಗಕ್ಕೆ ಗುಂಡುಸ್ ಕಾಗಿನಲ್ಪ್ (ಗಣಿತಶಾಸ್ತ್ರದ ಪ್ರಾಧ್ಯಾಪಕರು ಮತ್ತು 2001-2004ರಲ್ಲಿ ವರ್ತನಾತ್ಮಕ ಹಣಕಾಸು ಜರ್ನಲ್ ನ ಸಂಪಾದಕರು) ಮತ್ತು ಸಹಯೋಗಿಗಳಾದ ವರ್ನನ್ ಸ್ಮಿತ್ (ಅರ್ಥಶಾಸ್ತ್ರದಲ್ಲಿ 2002ರ ನೋಬೆಲ್ ಪ್ರಶಸ್ತಿದಾರರು), ಡೇವಿಡ್ ಪೋರ್ಟರ್, ಡಾನ್ ಬಲೆನೊವಿಚ್, ವ್ಲಾಡಿಮೀರಾ ಇಲಿಯೆವ, ಅಹಮದ್ ದುರನ್ ಅವರು ನೇತೃತ್ವ ವಹಿಸಿದ್ದಾರೆ. ಜೆಫ್ ಮದುರ, ರೇ ಸ್ಟರ್ಮ್ ಮತ್ತಿತರರ ಅಧ್ಯಯನಗಳು ಷೇರುಗಳು ಮತ್ತು ವಿನಿಮಯಗಳಲ್ಲಿ ವ್ಯಾಪಾರವಾಗುವ ನಿಧಿಗಳಲ್ಲಿ ಗಣನೀಯವಾದ ವರ್ತನಾತ್ಮಕ ಪ್ರಭಾವಗಳನ್ನು ಪ್ರದರ್ಶಿಸಿವೆ. ಇತರೆ ವಿಷಯಗಳಲ್ಲದೆ ಪರಿಮಾಣದ ವರ್ತನಾತ್ಮಕ ಹಣಕಾಸು ವರ್ತನೆಯ ಪ್ರಭಾವಗಳನ್ನು ಆಸ್ತಿಗಳ ನಿರ್ದಿಷ್ಟತೆಯ ಅಶಾಸ್ತ್ರೀಯ ಕಲ್ಪನೆಯೊಂದಿಗೆ ಅಧ್ಯಯನ ಮಾಡುತ್ತದೆ.ಭಾವುಕ ಆಸ್ತಿಗಳ ಹಣಕಾಸು[ಬದಲಾಯಿಸಿ]


ಪೇಟೆಂಟುಗಳು, ಟ್ರೇಡ್ ಮಾರ್ಕ್ ಗಳು, ಅಭಿಮಾನ, ಪ್ರಸಿದ್ಧಿ ಮುಂತಾದ ಭಾವುಕ ಆಸ್ತಿಗಳಿಗೆ ಸಂಬಂಧಿಸಿದ ಹಣಕಾಸಿನ ಕ್ಷೇತ್ರ ಭಾವುಕ ಆಸ್ತಿಗಳ ಹಣಕಾಸು.ಸಂಬಂಧಿಸಿದ ವೃತ್ತಿಪರ ವಿದ್ಯಾರ್ಹತೆಗಳು[ಬದಲಾಯಿಸಿ]

ಹಣಕಾಸಿನ ಕ್ಷೇತ್ರಕ್ಕೆ ಪ್ರವೇಶ ಪಡೆಯಲು ಹಲವಾರು ಸಂಬಂಧಿಸಿದ ವೃತ್ತಿಪರ ವಿದ್ಯಾರ್ಹತೆಗಳಿವೆ:


 • ಸಾಮಾನ್ಯವಾದ ಹಣಕಾಸು ವಿದ್ಯಾರ್ಹತೆಗಳು:


ಇದನ್ನೂ ನೋಡಿರಿ[ಬದಲಾಯಿಸಿ]

Main article: Outline of finance


ಉಲ್ಲೇಖಗಳು[ಬದಲಾಯಿಸಿ]

 1. ಗೋವ ಪಿ ಎಟ್. ಅಲ್. 1961. ಹಣಕಾಸು ವೆಬ್ಸ್ತರ್ಸ್ ಥರ್ಡ್ ನ್ಯೂ ಇಂತರ್ನೆಶನಲ್ ಡಿಕ್ಷನರಿ ಆಪ್ ದಿ ಇಂಗ್ಲಿಷ್ ಲಾಂಗ್ವೇಜ್ ಅನಬ್ರಿಜ್ದ್. ಸ್ಪ್ರಿಮ್ಗ್ಪಿಲ್ದ್, ಮಸಾಚುಸೆಟ್ಸ್: ಜಿ. ಮತ್ತು ಸಿ. ಮಿರಿಯಂ ಕಂಪೆನಿ.
 2. ಹಣಕಾಸು. (2009). ಎನ್ಸೈಕ್ಲೊಪಿಡಿಯ ಬ್ರಿಟಾನಿಕಾದಲ್ಲಿ. ಜೂನ್ 23, 2009, ಎನ್ಸೈಕ್ಲೊಪಿಡಿಯ ಬ್ರಿಟಾನಿಕಾ ಆನ್ಲೈನ್ ನಿಂದ ಪಡೆದದ್ದು: http://www.britannica.com/EBchecked/topic/207147/finance
 3. Microsoft. 2009. ಪೈನಾನ್ಸ್. uk.encarta.msn.com, http://www.webcitation.org/5hlUjB4mc


ಬಾಹ್ಯ ಲಿಂಕ್‌ಗಳು[ಬದಲಾಯಿಸಿ]


"https://kn.wikipedia.org/w/index.php?title=ಹಣಕಾಸು&oldid=596848" ಇಂದ ಪಡೆಯಲ್ಪಟ್ಟಿದೆ