ಚಿಕ್ಕಮಗಳೂರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಚಿಕ್ಕಮಗಳೂರು ಜಿಲ್ಲೆ
ಕಾಫಿ ನಾಡು
ಜಿಲ್ಲೆ
ಮುಳ್ಳಯ್ಯನ ಗಿರಿ ,ಚಿಕ್ಕಮಗಳೂರು
ಮುಳ್ಳಯ್ಯನ ಗಿರಿ ,ಚಿಕ್ಕಮಗಳೂರು
Nickname(s): ಕಾಫಿ ನಾಡು
ಕರ್ನಾಟಕದಲ್ಲಿ ಚಿಕ್ಕಮಗಳೂರು ಇರುವ ಸ್ಥಳ
ಕರ್ನಾಟಕದಲ್ಲಿ ಚಿಕ್ಕಮಗಳೂರು ಇರುವ ಸ್ಥಳ
ಚಿಕ್ಕಮಗಳೂರು ಜಿಲ್ಲೆ is located in India
ಚಿಕ್ಕಮಗಳೂರು ಜಿಲ್ಲೆ
ಚಿಕ್ಕಮಗಳೂರು ಜಿಲ್ಲೆ
ಭಾರತದಲ್ಲಿ ಜಿಲ್ಲೆ ಇರುವ ಸ್ಥಳ.
Coordinates: 13°19′N 75°46′E / 13.32°N 75.77°E / 13.32; 75.77Coordinates: 13°19′N 75°46′E / 13.32°N 75.77°E / 13.32; 75.77
ದೇಶ  ಭಾರತ
ರಾಜ್ಯ ಕರ್ನಾಟಕ
ಊಗಮ ೧೯೪೭
ನಿರ್ಮಾತೃ ರುಕ್ಮಾಂಗದ ರಾಜ
ಇದಕ್ಕೆ ಹೆಸರುವಾಸಿ ಕಾಫಿ, ಪರ್ವತ ಶ್ರೇಣಿ.
ಕೇಂದ್ರ ಕಛೇರಿ ಚಿಕ್ಕಮಗಳೂರು
ತಾಲ್ಲೂಕುಗಳು ಚಿಕ್ಕಮಗಳೂರು, ಕಡೂರು, ತರೀಕೆರೆ, ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ
ಸರ್ಕಾರ
 • ಶೈಲಿ ಜಿಲ್ಲಾಧಿಕಾರಿ ಕಚೇರಿ
 • ಅಂಗ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ
 • ಜಿಲ್ಲಾಧಿಕಾರಿ ಷಡಕ್ಷರಿ ಸ್ವಾಮಿ ಎಸ್ ಪಿ
ವಿಸ್ತೀರ್ಣ
 • ಒಟ್ಟು
 • ಕಾಡು ೨,೧೦೮
ಎತ್ತರ ೧,೯೨೬
ಜನ ಸಂಖ್ಯೆ (೨೦೧೧)[೧]
 • ಒಟ್ಟು ೧೧,೩೭,೯೬೧
 • ಸ್ಥಾನ ೪೦೮ ಭಾರತದಲ್ಲಿ
 • ಜನಸಾಂದ್ರತೆ ೧೫೮
Demonym(s) ಚಿಕ್ಕಮಗಳೂರಿಗರು
ಭಾಷೆ
 • ಅಧಿಕೃತ ಕನ್ನಡ
ಸಮಯ ವಲಯ ಐ. ಎಸ್. ಟಿ (ಯುಟಿಸಿ+೫:೩೦)
ಪಿನ್ ೫೭೭೧‌‌‍‍xx
ವಾಹನ ನೊಂದಣಿ ಕೆ.ಏ-೧೮, ಕೆ.ಏ-೬೬
ಜಾಲತಾಣ ಚಿಕ್ಕಮಗಳೂರು ಮಿಂಬಲೆ ತಾಣ

ಚಿಕ್ಕಮಗಳೂರು ಭಾರತ ದೇಶದ, ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಎಂದು ಸಹ ಕರೆಯಲ್ಪಡುತ್ತದೆ. ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ದತ್ತಗಿರಿ/ಬಾಬಾ ಬುಡನ್‌ಗಿರಿಯಲ್ಲಿ ಬೆಳೆಯಲಾಯಿತು. [೨] ಚಿಕ್ಕಮಗಳೂರಿನ ಗಿರಿಶ್ರೇಣಿಗಳು ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು, ತುಂಗಾ ಮತ್ತು ಭದ್ರಾ ನದಿಗಳ ಮೂಲಸ್ಥಾನವಾಗಿದೆ. ಕರ್ನಾಟಕದ ಅತ್ಯಂತ ಎತ್ತರ ಶಿಖರವಾದ ಮುಳ್ಳಯ್ಯನ ಗಿರಿ ಚಿಕ್ಕಮಗಳೂರಿನಲ್ಲಿದೆ. ಈ ಜಿಲ್ಲೆಯು ಮಲೆನಾಡು, ಅರೆಮಲೆನಾಡು, ಹಾಗೂ ಬಯಲುಸೀಮೆಗಳನ್ನೊಳಗೊಂಡಿದೆ, ಈ ಜಿಲ್ಲೆಯ ಹೆಚ್ಚು ಪ್ರದೇಶ ಮಲೆನಾಡು'. ವಿವಿಧ ಜಾತಿಯ ಪ್ರಾಣಿಗಳನ್ನೊಳಗೊಂಡ ಅಭಯಾರಣ್ಯಗಳು, ನಿತ್ಯಹರಿದ್ವರ್ಣಕಾಡುಗಳಿಂದ ಕೂಡಿದ ಪರ್ವತ ಶ್ರೇಣಿಗಳು ಹಾಗೂ ಅನೇಕ ಜಲಪಾತಗಳು ಮತ್ತು ಕಾಫಿ, ಟೀ, ಏಲಕ್ಕಿ, ಮೆಣಸು, ಅಡಿಕೆ,ಬಾಳೆ, ತೆಂಗುಗಳನ್ನು ಬೆಳೆಯುವ ನಾಡಾಗಿದೆ. ಜಲ ಮತ್ತು ಪ್ರಕೃತಿ ಸಂಪತ್ತಿನಿಂದ ಪ್ರಸಿದ್ಧಿ ಪಡೆದಿದೆ.

ಉಗಮ[ಬದಲಾಯಿಸಿ]

ಚಿಕ್ಕಮಗಳೂರು ಜಿಲ್ಲೆಯು ಅದರ ಜಿಲ್ಲಾಕೇಂದ್ರವಾದ ಚಿಕ್ಕಮಗಳೂರು ಪಟ್ಟಣದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಚಿಕ್ಕಮಗಳೂರು ಎಂದರೆ “ಚಿಕ್ಕ ಮಗಳ ಊರು” ಎಂದರ್ಥ. ಈ ಪಟ್ಟಣವನ್ನು ಪ್ರಸಿದ್ಧ ಸಖರಾಯ ಪಟ್ಟಣ ಮುಖ್ಯಸ್ಥನಾದ ರುಕ್ಮಾಂಗದ, ಚಿಕ್ಕ ಮಗಳಿಗಾಗಿ ವರದಕ್ಷಿಣೆಯಾಗಿ ನೀಡಿದ ಎಂದು ಹೇಳಲಾಗಿದೆ. ಅದ್ದರಿಂದ ಈ ನಗರಕ್ಕೆ ಚಿಕ್ಕಮಗಳೂರು ಎಂಬ ಹೆಸರು ಬಂದಿದೆ[೩]. ಹಾಗೆಯೇ “ಹಿರಿಯ ಮಗಳ ಊರು” ಹಿರೇಮಗಳೂರು ಎಂಬ ಊರು ಚಿಕ್ಕಮಗಳೂರಿನಿಂದ ೫ ಕೀ.ಮೀ.ದೂರದಲ್ಲಿದೆ. ಚಿಕ್ಕಮಗಳೂರು ಜಿಲ್ಲೆ ೧೯೪೭ ರ ತನಕ ಕಡೂರು ಎಂದು ಕರೆಯಲ್ಪಡುತ್ತಿತ್ತು[೪]. ಕೆಲವು ಹಳೆಯ ಶಾಸನಗಳ ಪ್ರಕಾರ ಚಿಕ್ಕಮಗಳೂರು ಮತ್ತು ಹಿರೇಮಗಳೂರುಗಳನ್ನು ಕ್ರಮವಾಗಿ ಕಿರಿಯ ಮುಗುಲಿ ಮತ್ತು ಪಿರಿಯ ಮುಗುಲಿ ಎಂದು ಕರೆಯಲಾಗುತ್ತಿತ್ತು.

ಇತಿಹಾಸ[ಬದಲಾಯಿಸಿ]

ಶ್ರೀ ಆದಿಶಕ್ತಿ ವಸಂತ ಪರಮೇಶ್ವರಿ ದೇವಸ್ಥಾನ, ಅಂಗಡಿ

ಹೊಯ್ಸಳರ ಸಾಮ್ರಾಜ್ಯ ಉಗಮವಾದ ಮತ್ತು ಹೊಯ್ಸಳರು ಸಾಮ್ರಾಜ್ಯದ ತಮ್ಮ ಆರಂಭದಲ್ಲಿ ದಿನಗಳನ್ನು ಕಳೆದ ಸೊಸೆಯೂರು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಸೊಸೆಯೂರು ಕಾಲನಂತರ ಹೊಯ್ಸಳರ ಪ್ರಥಮ ರಾಜಧಾನಿ ಶಶಕಪುರವಾಗಿ ನಿರ್ಮಾಣವಾಯಿತು. ಸೊಸೆಯೂರು ಈಗ ಅಂಗಾಡಿ ಗ್ರಾಮವೆಂದು ಗುರುತಿಸಲ್ಪಡುತ್ತದೆ.ಇದು ಮೂಡಿಗೆರೆ ತಾಲ್ಲೂಕಿನಲ್ಲಿದೆ. ಹಿಂದೊಮ್ಮೆ ದಟ್ಟವಾದ ಗೊಂಡಾರಣ್ಯದಲ್ಲಿ ಜೈನ ಮುನಿಗಳ ಜ್ಞಾನ ತಪಸ್ಸಿಗೆ ಯೋಗ್ಯವಾದ ಸ್ಥಳ ಇದಾಗಿತ್ತೆಂದು, ಚಾಳುಕ್ಯ ನಾಡಿನಿಂದ ಮಲ್ಲಚಂದ್ರದೇವ ಇಲ್ಲಿಗೆ ಬಂದನೆಂಬ ವಿಷಯ ೧೦ನೇ ಶತಮಾನದ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಒಂದು ದಂತಕಥೆಯ ಪ್ರಕಾರ, ಒಂದೊಮ್ಮೆ ಈಗಿನ ಅಂಗಡಿ ಗ್ರಾಮದ ವಾಸಂತಿಕಾದೇವಿಯ ಗುಡಿ ಮುಂದೆ ಸುದತ್ತಾಚಾರ್ಯರು ತಮ್ಮ ಶಿಷ್ಯರಿಗೆ ಪಾಠ-ಪ್ರವಚನ ಕಲಿಸುತ್ತಿದ್ದ ಸಂದರ್ಭದಲ್ಲಿ, ಹುಲಿಯೊಂದು ದಿಢೀರನೆ ಗುಡಿಯ ಬಳಿ ಇದ್ದ ಶಿಷ್ಯಾರ್ಥಿಗಳ ಮೇಲೆ ಎರಗಲು ಬಂದಾಗ ಸುದತ್ತಾಚಾರ್ಯರು ಕೂಡಲೇ ಅದನ್ನು ಹೊಡೆಯಲು, ತನ್ನ ಶಿಷ್ಯ ಸಳನಿಗೆ "ಹೊಯ್ ಸಳ" ಎಂದು ಆಜ್ನಾಪಿಸಿದರು. ಇದೆ ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ. ಕೂಡಲೇ ಸ್ಥಳದಲ್ಲಿದ್ದ ಸಳನು ತನ್ನ ಗುರುಗಳ ಆಜ್ಞೆಯಂತೆ ಹುಲಿಯೊಂದಿಗೆ ವೀರಾವೇಶದಿಂದ ಹೋರಾಡಿ ಹುಲಿಯನ್ನು ಕೊಂದನಂತೆ. ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ.ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಷಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದ್ದು, ಚೋಳರ ಲಾಂಛನವು ಹುಲಿಯಾಗಿತ್ತು ಎಂಬ ಅಂಶಗಳು ಈ ಊಹೆಗೆ ಕಾರಣ .ಕ್ರಿ.ಶ ೧೦೬೨ ರಲ್ಲಿ ವಿನಯಾದಿತ್ಯ ತನ್ನ ರಾಜಧಾನಿಯನ್ನು ಸೊಸೆಯೂರಿನಿಂದ (ಶಶಕಪುರ-ಅಂಗಡಿ) ಬೇಲೂರಿಗೆ ವರ್ಗಾಯಿಸಿದನಂತೆ. ಅಂಗಡಿ ಗ್ರಾಮದ ಹೊಯ್ಸಳರ ಕಾಲದ ವಾಸಂತಿಕ ದೇವಾಲಯ ಹಾಗೂ ಮಕರ ಜೀನಾಲಯ, ನೇಮೀನಾಥ ಬಸದಿ, ಶಾಂತಿನಾಥ ಬಸದಿ, ವೈಷ್ಣವ ಪಂಥದ ಕೇಶವ ದೇವಾಲಯ, ಶೈವ ಪಂಥದ ಪಾತಾಳ ರುದ್ರೇಶ್ವರ ದೇವಾಲಯ ಹಾಗೂ ಮಲ್ಲೇಶ್ವರ, ಮಲ್ಲಿಕಾರ್ಜುನ ದೇವಾಲಯಗಳು ಈ ಸ್ಥಳದ ಮಹಿಮೆಯನ್ನು ಸಾರುತ್ತವೆ. ತರೀಕೆರೆ ತಾಲ್ಲೂಕಿನ ಅಮೃತಪುರದಲ್ಲಿ ಹೊಯ್ಸಳ ಸಾಮ್ರಾಜ್ಯದ ದೊರೆ ಎರಡನೇ ವೀರ ಬಲ್ಲಾಳ (೧೧೭೩-೧೨೨೦ ಸಿ.ಇ.) ನಿರ್ಮಿಸಿದ ಅಮೃತೇಶ್ವರ ದೇವಸ್ಥಾನವಿದೆ. ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ಬಾಬಾ ಬುಡನ್‌ಗಿರಿಯಲ್ಲಿ ಬೆಳೆಯಲಾಯಿತು. ಬಾಬಾ ಬುಡನ್ ಅವರು ಮೆಕ್ಕಾ ತೀರ್ಥಯಾತ್ರೆ ಮಾಡುತ್ತಿರುವಾಗ ಯೆಮೆನ್ಮೋಕಾ ಬಂದರಿನಲ್ಲಿ ಕಾಫಿ ಬಗ್ಗೆ ಅವರಿಗೆ ತಿಳಿಯಿತು. ಅವರು ಏಳು ಕಾಫಿಯ ಬೀಜವನ್ನು ಹುಕ್ಕಳಿನ ಸುತ್ತ ಆಡಗಿಸಿಟ್ಟುಕೊಂಡು ಅರೇಬಿಯಾದಿಂದ ಹೊರಗೆ ತಂದರು. ಅವರು ಮನೆಗೆ ಮರಳುತ್ತಿರುವಾಗ ಬಾಬಾ ಬುಡನಗಿರಿ/ದತ್ತ ಪೀಠ ಬೆಟ್ಟದಲ್ಲಿ ಕೆಲವು ಬೀಜಗಳನ್ನು ನೆಟ್ಟರು ಎಂದು ಹೇಳುತ್ತಾರೆ. ಈ ಜಿಲ್ಲೆಯಲ್ಲಿ ಕೇಂದ್ರ ಕಾಫಿ ಸಂಶೋಧನ ಸಂಸ್ಥೆಯು ಇದ್ದು. ಇದನ್ನು ಹಿಂದೆ ೧೯೨೫ ರಲ್ಲಿ ಲೇ. ಡಾ. ಲೆಸ್ಲಿ. ಸಿ. ಕೊಲ್‌ಮನ್ ನೇತೃತ್ವದಲ್ಲಿ ಆರಂಭವಾದ ಕಾಫಿ ಎಕ್ಸ್‌ಪೆರಿಮೆಂಟಲ್ ಸ್ಟೇಷನ್ ಎಂದು ಕರೆಯಲಾಗಿತ್ತು. ಈ ಸಂಸ್ಥೆ ೧೧೯.೮೬ ಎಕರೆಗಳಷ್ಟು ಪ್ರದೇಶದಲ್ಲಿ ಹರಡಿಕೊಂಡಿದೆ ಮತ್ತು ಸಂಸ್ಥೆಯು ಕಾಫಿ ಗುಣಮಟ್ಟ ಸುಧಾರಿಸಲು ಸಂಶೋಧನೆಯನ್ನು ನಡೆಸುತ್ತದ.

ಭೌಗೋಳಿಕ[ಬದಲಾಯಿಸಿ]

ಚಿಕ್ಕಮಗಳೂರು ಕರ್ನಾಟಕದ ಮಧ್ಯಭಾಗದಲ್ಲಿ ಇದೆ, ಇದು ರಾಜ್ಯದ ರಾಜಧಾನಿಯಿಂದ ೨೫೧ ಕಿ.ಮೀ. ದೂರದಲ್ಲಿದೆ. ಚಿಕ್ಕಮಗಳೂರು ೧೨° ೫೪' ೪೨“-೧೩° ೫೩' ೫೩“ ಉತ್ತರ ಅಕ್ಷಾಂಶ ಹಾಗೂ ೭೫° ೦೪' ೪೫“'-೭೬° ೨೧' ೫೦'” ಪೂರ್ವ ರೇಖಾಂಶದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯು ಪೂರ್ವದಿಂದ ಪಶ್ಚಿಮಕ್ಕೆ ೧೩೮.೪ ಕಿ.ಮೀ. ಮತ್ತು ಉತ್ತರದಿಂದ ದಕ್ಷಿಣಕ್ಕೆ ೮೮.೫ ಕಿ.ಮೀ. ಉದ್ದವಿದೆ. ಜಿಲ್ಲೆಯಲ್ಲಿ ಸಮಾನ್ಯವಾಗಿ ವರ್ಷಕ್ಕೆ ಸರಾಸರಿ ೧೯೨೫ ಮಿ.ಮೀ. ಮಳೆಯಾಗುತ್ತದೆ. ಜಿಲ್ಲೆಯ ಅತ್ಯಂತ ಎತ್ತರವಾದ ಸ್ಥಳ ಮುಳ್ಳಯ್ಯನ ಗಿರಿ, ಸಮುದ್ರ ಮಟ್ಟಕ್ಕಿಂತ ೧೯೫೫ ಮೀಟರ್ ಎತ್ತರದಲ್ಲಿ ಇದೆ, ಇದು ಕರ್ನಾಟಕದ ಅತ್ಯಂತ ಎತ್ತರವಾದ ಸ್ಥಳ ಕೂಡ. ಜಿಲ್ಲೆಯ ಒಟ್ಟು ವಿಸ್ತೀರ್ಣ ೨೧೦೮.೬೨ ಕಿ.ಮೀ . ಅದರಲ್ಲಿ ಶೇಕಡ ೩೦ರಷ್ಟು ಕಾಡುಗಳಿಂದ ಆವರಿಸಲ್ಪಟ್ಟದೆ. ಚಿಕ್ಕಮಗಳೂರು ಜಿಲ್ಲೆಯ ಪೂರ್ವಕ್ಕೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆ, ದಕ್ಷಿಣಕ್ಕೆ ಹಾಸನ ಜಿಲ್ಲೆ, ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳು ಚಿಕ್ಕಮಗಳೂರನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ಬೇರ್ಪಡಿಸುತ್ತವೆ ಮತ್ತು ಉತ್ತರದಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.

ಹವಾಮಾನ[ಬದಲಾಯಿಸಿ]

ಜನಸಂಖ್ಯೆ[ಬದಲಾಯಿಸಿ]

೨೦೧೧ ರ ಜನಗಣತಿಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಜನಸಂಖ್ಯೆ ೧೧,೩೭,೯೬೧ ಸರಿಸುಮಾರಾಗಿ ಸೈಪ್ರಸ್ ರಾಷ್ಟ್ರಕ್ಕೆ ಸಮನಾಗಿದೆ ಅಥವಾ ಸಂಯುಕ್ತ ಅಮೆರಿಕದ ರೋಡ್ ಐಲೆಂಡ್ ರಾಜ್ಯಕ್ಕೆ ಸಮನಾಗಿದೆ. ಚಿಕ್ಕಮಗಳೂರು ಜನಸಂಖ್ಯೆಯಲ್ಲಿ ಭಾರತದಲ್ಲಿ ೪೦೮ನೇ ಸ್ಥಾನದಲ್ಲಿದೆ (ಒಟ್ಟು ೬೪೦ರಲ್ಲಿ). ಜಿಲ್ಲೆಯ ಪ್ರತಿ ಚದರ ಕಿಲೋ ಮೀಟರ್ ಗೆ(೪೧೦/ಚದರ ಮೈಲಿ) ೧೫೮.೧೯ ನಿವಾಸಿಗಳ ಸಾಂದ್ರತೆಯನ್ನು ಹೊಂದಿದೆ. ಇಲ್ಲಿನ ಜನಸಂಖ್ಯಾ ಬೆಳವಣಿಗೆ ದರವು ೨೦೦೧-೨೦೧೧ ದಶಕದಲ್ಲಿ ಶೇಕಡ 0.೨೮ ಆಗಿತ್ತು. ಚಿಕ್ಕಮಗಳೂರು ಪ್ರತಿ ೧೦೦೦ ಪುರುಷರಿಗೆ ೧೦೦೮ ಸ್ತ್ರೀ ಯ ಲಿಂಗ ಅನುಪಾತವನ್ನು ಹೊಂದಿದೆ ಮತ್ತು ಶೇಕಡ ೭೯.೨೪ ಸಾಕ್ಷರತಾ ದರವನ್ನು ಹೊಂದಿದೆ. ಒಟ್ಟು ಜನಸಂಖ್ಯೆಯ ಶೇಕಡ ೮೧ ಜನರು ಗ್ರಾಮೀಣ ಪ್ರದೇಶದಲ್ಲಿ ಮತ್ತು ಶೇಕಡ ೧೯ ಜನರು ನಗರದಲ್ಲಿ ವಾಸಿಸುತ್ತಾರೆ. ಶೃಂಗೇರಿ ತಾಲ್ಲೂಕು ಅತಿ ಕಡಿಮೆ ಜನಸಂಖ್ಯೆಯನ್ನು ಮತ್ತು ಚಿಕ್ಕಮಗಳೂರು ತಾಲ್ಲೂಕು ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ.

ಆಡಳಿತ[ಬದಲಾಯಿಸಿ]

ಚಿಕ್ಕಮಗಳೂರು ಜಿಲ್ಲೆಯೂ ಕರ್ನಾಟಕದ ಮೈಸೂರು ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ಚಿಕ್ಕಮಗಳೂರು ಉಪ ವಿಭಾಗ ಮತ್ತು ತರೀಕೆರೆ ಉಪ ವಿಭಾಗ. ತರೀಕೆರೆ ಉಪ ವಿಭಾಗ, ತರೀಕೆರೆ ಕಡೂರು ಮತ್ತು ನರಸಿಂಹರಾಜಪುರ ತಾಲ್ಲೂಕುಗಳನ್ನು ಒಳಗೊಂಡಿದೆ ಮತ್ತು ಚಿಕ್ಕಮಗಳೂರು ಉಪ ವಿಭಾಗ ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ ಮತ್ತು ಶೃಂಗೇರಿ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ( ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆಯ ಕಾರ್ಯಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರತಿ ಉಪ ವಿಭಾಗವು ಸಹಾಯಕ ಆಯುಕ್ತರನ್ನುಹೊಂದಿದೆ ಮತ್ತು ಪ್ರತಿ ತಾಲ್ಲೂಕು ಒಬ್ಬ ತಹಸೀಲ್ದಾರರನ್ನು ಹೊಂದಿದೆ. ಇವರು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ.

ಆರ್ಥಿಕತೆ[ಬದಲಾಯಿಸಿ]

ರೊಬಸ್ಟಾ ತಳಿ ಕಾಫಿ

ಕೃಷಿಯು ಚಿಕ್ಕಮಗಳೂರಿನ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬು ಮತ್ತು ಕಾಫಿ ಬೆಳೆಯು ಕೃಷಿಯ ಮುಖ್ಯ ಭಾಗವಾಗಿದೆ. ಜಿಲ್ಲೆಯ ಕೃಷಿ ಉತ್ಪಾದನೆಯು ಮೂರು ಋತುಗಳಲ್ಲಿ ಹರಡಿಗೊಂಡಿದೆ. ಅವುಗಳೆಂದರೆ ಮುಂಗಾರು, ಹಿಂಗಾರು ಮತ್ತು ಬೇಸಿಗೆ. ಇಲ್ಲಿನ ಪ್ರಮುಖ ಬೆಳೆಗಳು ಏಕದಳ ಧಾನ್ಯಗಳಾದ ಅಕ್ಕಿ, ರಾಗಿ , ಜೋಳ , ಮೆಕ್ಕೆಜೋಳ ಮತ್ತು ಚಿಕ್ಕ ಕಾಳುಗಳು, ದ್ವಿದಳ ಧಾನ್ಯಗಳಾದ, ತೊಗರಿ, ಹುರುಳಿಕಾಳು, ಹೆಸರು ಕಾಳು, ಅವರೆಕಾಯಿ (ಹಯಸಿಂತ್ ಬೀನ್ಸ್) ಮತ್ತು ಕಡಲೆ ಕಾಳು ಮತ್ತು ಕಡಲೆ. ತೈಲ ಬೀಜಗಳಾದ ಶೇಂಗಾ, ಎಳ್ಳು,, ಸೂರ್ಯಕಾಂತಿ ಮತ್ತು ಕ್ಯಾಸ್ಟರ್ ಮತ್ತು ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಮತ್ತು ತಂಬಾಕು ಇಲ್ಲಿ ಬೆಳೆಯಲಾಗುತ್ತದೆ. ಚಿಕ್ಕಮಗಳೂರು ಪಟ್ಟಣದಲ್ಲಿ ಸರ್ಕಾರದ ಅಧೀನದಲ್ಲಿರುವ ಕಾಫಿ ಬೋರ್ಡ್, ಜಿಲ್ಲೆಯ ಕಾಫಿ ಉತ್ಪಾದನೆ ಮತ್ತು ಮಾರಾಟದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ ಚಿಕ್ಕಮಗಳೂರಿನಲ್ಲಿ ಕಾಫಿಯನ್ನು ಸುಮಾರು ೮೫.೪೬೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಅದರಲ್ಲಿ ಪ್ರಧಾನವಾಗಿ ಅರೇಬಿಕಾ ಎಂಬ ತಳಿಯನ್ನು ಬೆಟ್ಟೆದ ಮೇಲ್ಭಾಗದಲ್ಲಿ ಮತ್ತು ರೊಬಸ್ಟಾ ಎಂಬ ತಳಿಯನ್ನು ಬೆಟ್ಟೆದ ತಳ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಜಿಲ್ಲೆಯಲ್ಲಿ ಸುಮಾರು ೧೫೦೦೦ ಕಾಫಿ ಬೆಳೆಗಾರರಿದ್ದು, ಅದರಲ್ಲಿ ಶೇಕಡ ೯೬ ಬೆಳೆಗಾರರು ೪ ಚದರ ಹೆಕ್ಟೇರ್ ಅಥವ ಅದಕ್ಕಿಂತಲು ಕಡಿಮೆ ಪ್ರಮಾಣದ ಉಳುಮೆ ಪ್ರದೇಶವನ್ನು ಹೊಂದಿರುವ ಸಣ್ಣ ಬೆಳೆಗಾರರಾಗಿದ್ದಾರೆ. ಜಿಲ್ಲೆಯ ಸರಾಸರಿ ಕಾಫಿ ಉತ್ಪಾದನೆ ಅರೇಬಿಕಾ ೫೫,೦೦೦:೩೫,೦೦೦ ಮೆಟ್ರಿಕ್ ಟನ್ ಮತ್ತು ರೊಬಸ್ಟಾ ೨೦,೦೦೦ ಮೆಟ್ರಿಕ್ ಟನ್ ಆಗಿದೆ. ಹೆಕ್ಟೇರಿಗೆ ಸರಾಸರಿ ಉತ್ಪಾದಕತೆ ಅರೇಬಿಕಾ ೮೧೦ ಕೆ.ಜಿ. ಮತ್ತು ರೊಬಸ್ಟಾ ಆಫ್ ೧೧೧೦ ಕೆ.ಜಿ. ಆಗಿದೆ, ಇದು ನಮ್ಮ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು.

ಕೈಗಾರಿಕೆಗಳು[ಬದಲಾಯಿಸಿ]

ಚಿಕ್ಕಮಗಳೂರು ಜಿಲ್ಲೆ ಕೈಗಾರಿಕೆಯಲ್ಲಿ ಹೆಚ್ಚು ಅಭಿವೃಧ್ಧಿ ಹೊಂದಿಲ್ಲ, ಮೂಲಭೂತ ಸೌಲಭ್ಯಗಳು ಕೊರತೆ, ಕಳಪೆ ರಸ್ತೆಗಳು, ಕಳಪೆ ರೈಲು ಸಂಪರ್ಕಜಾಲ ಮತ್ತು ಕೈಗಾರಿಕೆಗಳಿಗೆ ವಿರೋದ, ಜಿಲ್ಲೆಯ ಕೈಗಾರಿಕಾ ಅಭಿವೃಧ್ಧಿ ಕುಂಟಿತಕ್ಕೆ ಕಾರಣಗಳು. ಜಿಲ್ಲೆಯಲ್ಲಿ ಕೇವಲ ಒಂದು ಭಾರಿ ಕೈಗಾರಿಕಾ ಉದ್ಯಮವಿದೆ. ಅದೆ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ, ಇದು ಮೂಡಿಗೆರೆ ತಾಲೂಕಿನ ಕುದುರೆಮುಖ ಪ್ರದೇಶದಲ್ಲಿ ಇದೆ. ಕೆ.ಐ.ಒ.ಸಿ.ಎಲ್ ೧೯೭೬ ರಲ್ಲಿ ಕುದುರೆಮುಖ ಗಣಿ ಅಭಿವೃದ್ಧಿಪಡಿಸಲು ಮತ್ತು ವರ್ಷಕ್ಕೆ ಸಾರೀಕೃತ ೭.೫ ಮಿಲಿಯನ್ ಟನ್ ಉತ್ಪಾದಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಘಟಕವನ್ನು ೧೯೮೦ರಲ್ಲಿ ಕಾರ್ಯಾರಂಭ ಮಾಡಲಾಯಿತು ಮತ್ತು ಸಾರೀಕೃತ ಉತ್ಪನ್ನದ ಮೊದಲ ಸಾಗಣೆಗೆ ಅಕ್ಟೋಬರ್ ೧೯೮೧ ರಲ್ಲಿ ಮಾಡಲಾಯಿತು, ಉನ್ನದ ಗುಣಮಟ್ಟದ ಬ್ಲಾಸ್ಟ್ ಫರ್ನೇಸ್ ಮತ್ತು ನೇರ ಕಡಿಮೆಗೊಳಿಸುವ ಗ್ರೇಡ್ ಅದಿರು ಉಂಡೆಗಳ ಉತ್ಪಾದನೆಗೆ ಮೂರು ಮಿಲಿಯನ್ ಟನ್ ಸಾಮರ್ಥ್ಯದ ಅದಿರು ಉಂಡೆಗಳ ಘಟಕವನ್ನು ೧೯೮೭ರಲ್ಲಿ ಸ್ಥಾಪಿಸಲಾಯಿತು. ಕೆ.ಐ.ಒ.ಸಿ.ಎಲ್ ನ ಗಣಿಗಾರಿಕೆ ಪರವಾನಗಿ ಅವಧಿ ಮುಗಿದ ಮೇಲೆ ಅದರ ಕಾರ್ಯಾಚರಣೆಗಳನ್ನು ಸುಪ್ರೀಂ ಕೋರ್ಟ್ ೩೧ ಡಿಸೇಂಬರ್ ೨೦೦೫ ರಿಂದ ನಿಲ್ಲಿಸಿತ್ತು, ಇದರಿಂದ ಕೆ.ಐ.ಒ.ಸಿ.ಎಲ್ ಭಾರಿ ಹಿನ್ನಡೆ ಉಂಟಾಯಿತು. ಇದರಿಂದ ಅನೇಕ ನೌಕರರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು, ಈ ಪ್ರದೇಶದಲ್ಲಿ ಸಮಾಜಿಕ ಹಿಂಬಡಿತ ಆಗಬಾರದೆಂಬ ಕಾರಣಕ್ಕೆ , ಈ ಕಾರ್ಮಿಕರಿಗೆ ಬೇರೆ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸವ ಪ್ರಯತ್ನ ಮಾಡಲಾಯಿತು.

ಜಿಲ್ಲೆಯಲ್ಲಿ ಕೇವಲ ಒಂದೆ ಒಂದು ಮಧ್ಯಮ ಕೈಗಾರಿಕಾ ಉದ್ಯಮವಿದ್ದು ಇದು ತರೀಕೆರೆ ಪಟ್ಟಣದಲ್ಲಿ ಇದೆ. ತರೀಕೆರೆಯಲ್ಲಿರುವ ಬಿಇಎಂಎಲ್ ಅಂಗಸಂಸ್ಥೆಯಾದ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್ ಉಕ್ಕಿನ ಅಚ್ಚುಗಳಲ್ಲಿ ಉತ್ಪಾದಿಸುತ್ತದೆ. ಜಿಲ್ಲೆಯಲ್ಲಿ ಎರಡು ಕೈಗಾರಿಕಾ ಪ್ರದೇಶಗಳಿವೆ, ಒಂದು ಚಿಕ್ಕಮಗಳೂರು ನಗರದ ಹತ್ತಿರವಿದೆ, ಇನ್ನೊಂದು ಕಡೂರು ತಾಲ್ಲೂಕಿನ ಬೀರೂರು ನಗರದ ಬಳಿಯಿದೆ. ಚಿಕ್ಕಮಗಳೂರು ನಗರದ ಬಳಿಯಿರುವ ಕೈಗಾರಿಕಾ ಪ್ರದೇಶ ೧೩.೨೦ ಎಕರೆಯಲ್ಲಿ (೫೩.೪೦೦ ಮೀ.) ಮತ್ತು ಬೀರೂರು ಹತ್ತಿರವಿರುವ ಕೈಗಾರಿಕಾ ಪ್ರದೇಶ ೧೧.೧ ಎಕರೆಯಲ್ಲಿ (೪೫೦೦ ಮೀ) ಹರಡಿಕೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಚಿಕ್ಕಮಗಳೂರು ತಾಲ್ಲೂಕಿನ ಅಬ್ಳೆ ಹಳ್ಳಿಯ ಬಳಿ ೧೪೫ ಎಕರೆ (೦.೫೯ ಕಿ. ಮೀ) ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುತ್ತಿದೆ.

ಶಿಕ್ಷಣ[ಬದಲಾಯಿಸಿ]

೨೦೧೧ರ ಜನಗಣತಿಯ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯ ಶೇಕಡಾವಾರು ಸಾಕ್ಷರತೆಯು ಶೇಕಡ ೭೯.೨೫ ರಷ್ಟು ಆಗಿದೆ, ಇದರಲ್ಲಿ ಶೇಕಡ ೮೪.೪೧ಪುರಷರು ಮತ್ತು ಶೇಕಡ ೭೩.೧೬ ಮಹಿಳೆಯರು ಅಕ್ಷರಸ್ಥರಾಗಿದ್ದಾರೆ. ಚಿಕ್ಕಮಗಳೂರು ಸಾಕ್ಷರತೆ ಪ್ರಮಾಣ ಕರ್ನಾಟಕ ರಾಜ್ಯದ ಸರಾಸರಿ ಸಾಕ್ಷರತಾ ಪ್ರಮಾಣ ಶೇಕಡ ೭೫.೩೬ ಕ್ಕಿಂತ ಹೆಚ್ಚಾಗಿದೆ. ಶೃಂಗೇರಿ ತಾಲ್ಲೂಕು ಶೇಕಡ ೯೨.೬೮ ರೊಂದಿಗೆ ಅತಿ ಹೆಚ್ಚು ಸಾಕ್ಷರತೆ ಪ್ರಮಾಣವನ್ನು ಹೊಂದಿರು ತಾಲ್ಲೂಕು ಆಗಿದೆ ಮತ್ತು ಕಡೂರು ತಾಲ್ಲೂಕು ಶೇಕಡ ೭೪.೩೩ ರೊಂದಿಗೆ ಕನಿಷ್ಟ ಸಾಕ್ಷರತೆಯನ್ನು ಹೊಂದಿದರು ತಾಲ್ಲೂಕು ಆಗಿದೆ.

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ[ಬದಲಾಯಿಸಿ]

೨೦೦೧ರಂತೆ, ಚಿಕ್ಕಮಗಳೂರು ಜಿಲ್ಲೆಯು ೧೬೨೦ ಪ್ರಾಥಮಿಕ ಶಾಲೆಗಳನ್ನು(೧೫೧೯೨೩ ವಿದ್ಯಾರ್ಥಿಗಳೊಂದಿಗೆ) ಮತ್ತು ೨೩೫ ಮಾಧ್ಯಮಿಕ ಶಾಲೆಗಳನ್ನು(೩೪೬೦೭ ವಿದ್ಯಾರ್ಥಿಗಳೊಂದಿಗೆ) ಹೊಂದಿದೆ. ಚಿಕ್ಕಮಗಳೂರು ತಾಲ್ಲೂಕು ೪೧೪ ಪ್ರಾಥಮಿಕ ಶಾಲೆಗಳೊಂದಿಗೆ(೪೨೭೭೪ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೮೦ ಪ್ರಾಥಮಿಕ ಶಾಲೆಗಳೊಂದಿಗೆ (೫೮೨೨ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಕಡೂರು ೭೪ ಮಾಧ್ಯಮಿಕ ಶಾಲೆಗಳೊಂದಿಗೆ(೯೯೯೦ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೯ ಮಾಧ್ಯಮಿಕ ಶಾಲೆಗಳೊಂದಿಗೆ(೧೪೯೨ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ.

ಪ್ರೌಢ ಶಿಕ್ಷಣ[ಬದಲಾಯಿಸಿ]

೨೦೦೧ ರಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೪೬ ಪ್ರೌಢ ಶಾಲೆಗಳು (೪೭೧೧ ವಿದ್ಯಾರ್ಥಿಗಳೊಂದಿಗೆ) ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಿಣವನ್ನು ನೀಡುತ್ತೀವೆ. ಕಡೂರು ತಾಲ್ಲೂಕು ೧೨ ಪ್ರೌಢ ಶಾಲೆಗಳೊಂದಿಗೆ (೧೩೨೪ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪ್ರೌಢ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೨ ಪ್ರೌಢ ಶಾಲೆಗಳೊಂದಿಗೆ(೧೬೦ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಪ್ರೌಢ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ

ಪದವಿ ಶಿಕ್ಷಣ[ಬದಲಾಯಿಸಿ]

೨೦೦೧ ರಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೩ ಪದವಿ ಕಾಲೇಜುಗಳು (೪೬೧೫ ವಿದ್ಯಾರ್ಥಿಗಳೊಂದಿಗೆ) ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಿಣವನ್ನು ನೀಡುತ್ತೀವೆ. ಈ ಕಾಲೇಜುಗಳು ಕುವೆಂಪು ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿವೆ. ಚಿಕ್ಕಮಗಳೂರು ತಾಲ್ಲೂಕು ೪ ಪದವಿ ಕಾಲೇಜುಗಳೊಂದಿಗೆ (೧೬೪೮ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪದವಿ ಕಾಲೇಜುಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಕಡೂರು ತಾಲ್ಲೂಕು ೨ ಮತ್ತು ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲ್ಲೂಕುಗಳು ತಲ ೧ ಪದವಿ ಕಾಲೇಜುಗಳನ್ನು ಹೊಂದಿವೆ.

ತಾಂತ್ರಿಕ ಶಿಕ್ಷಣ[ಬದಲಾಯಿಸಿ]

 • ಇಂಜಿನಿಯರಿಂಗ್: ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಚಿಕ್ಕಮಗಳೂರು ಪಟ್ಟಣದಲ್ಲಿ ಇದೆ. ಇಲ್ಲಿ ಯಾಂತ್ರಿಕ (ಮೆಕ್ಯಾನಿಕಲ್), ಗಣಕ ಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್ ), ಎಲೆಕ್ಟ್ರಾನಿಕ್ಸ್ ಮತ್ತು ಸಂಪರ್ಕ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್), ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ಉತ್ಪಾದನೆಯ, ಪರಿಸರ (ಎನ್ವಿರಾನ್ಮೆಂಟಲ್ ) ಮತ್ತು ಸಿವಿಲ್ ವಿಭಾಗಗಳು ಇವೆ. ಈ ಕಾಲೇಜು ಬೆಳಗಾವಿ ನಲ್ಲಿ ಇರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದಿದೆ.
 • ಪಾಲಿಟೆಕ್ನಿಕ್‍ಗಳು: ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೆಳಗಿನ ಪಾಲಿಟೆಕ್ನಿಕ್‌ಗಳು ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ.
  • ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಪಾಲಿಟೆಕ್ನಿಕ್, ಚಿಕ್ಕಮಗಳೂರು: ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಮತ್ತು ಗಣಕ ಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್ ), ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ.
  • ಡಿ ಎ ಸಿ ಜಿ, ಚಿಕ್ಕಮಗಳೂರು: ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಆಟೋಮೊಬೈಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ.
  • ಎಸ್ ಜೆ ಎಮ್ ಎಮ್ ವಿದ್ಯಾಪೀಠ ಪಾಲಿಟೆಕ್ನಿಕ್, ಬೀರೂರು: ಸಿವಿಲ್ ಎಂಜಿನಿಯರಿಂಗ್ ಮತ್ತು ದೂರಸಂಪರ್ಕ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ.

ಪ್ರವಾಸಿ ತಾಣಗಳು[ಬದಲಾಯಿಸಿ]

ಚಿಕ್ಕಮಗಳೂರು;ಬಿಂಡಿಗ ದೀಪೋತ್ಸವ[ಬದಲಾಯಿಸಿ]

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ದೀಪೋತ್ಸವ ದೀಪಾವಳಿಯಂದು ನಡೆಯುವ ವಿಶೇಷ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿ ದಿನದಂದು ನಡೆಯುವ ಉತ್ಸವ, ಸಂಪ್ರದಾಯ, ದೀಪ ಹಚ್ಚುವುದು ಕಾಪಿsಯ ತವರಿನ ವಿಶೇಷಗಳಲ್ಲಿ ಒಂದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಅನೇಕ, ಆಚರಣೆ, ಸಂಪ್ರದಾಯ, ನಂಬಿಕೆಗಳು ಇವೆ. ಇದರಲ್ಲಿ ಒಂದು ಮಲ್ಲೇನಹಳ್ಳಿ ಸಮೀಪದಲ್ಲಿ ಇರುವ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿಯಂದು ನಡೆಯುವ ವಿಶೇಷ ಪೂಜೆ. ವರ್ಷಪೂರ್ತಿ ತಣ್ಣಗೆ ಇರುವ ಈ ಬೆಟ್ಟವನ್ನು ಏರಲು ಮಧ್ಯರಾತ್ರಿಯಿಂದಲೇ ಭಕ್ತರು ಹಾತೊರೆಯುತ್ತಾರೆ. ಕಡಿದಾದ ಅಂಕು ಡೊಂಕಿನ ಹಾದಿಯಲ್ಲಿ ಅಬಾಲವೃದ್ಧರಾಗಿ ಸಾಲು-ಸಾಲಾಗಿ ಜನ ಬೆಟ್ಟ ಹತ್ತುವುದೇ ಒಂದು ರೋಮಂಚನ ಅನುಭವ. ಮಳೆ, ಛಳಿ, ಗಾಳಿಯನ್ನು ಲೆಕ್ಕಿಸದೆ ಜನ ಬೆಟ್ಟವೇರಿ, ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ. ಬೆಟ್ಟದ ಕೆಳಭಾಗದಲ್ಲಿ ದೇವಿರಮ್ಮ ದೇವಾಲಯ ಇದ್ದು ಪ್ರತಿ ದೀಪಾವಳಿ ದಿನದಂದು ಉತ್ಸವ ಮೂರ್ತಿಯನ್ನು ಬೆಟ್ಟಕ್ಕೆ ತಂದು ಇಡುತ್ತಾರೆ. ಇಲ್ಲಿಗೆ ಆಗಮಿಸುವ ಭಕ್ತರು ದೇವಿ ಪೂಜೆಯಲ್ಲಿ ಭಾಗವಹಿಸಿ ಕೆಳಕ್ಕೆ ಇಳಿಯುತ್ತಾರೆ. ಬೆಟ್ಟ ಏರಿದಷ್ಟೇ ಇಳಿಯುವುದೂ ಸಾಹಸದ ಕೆಲಸ. ದಣಿವು, ಆಯಸವನ್ನು ಲೆಕ್ಕಿಸದೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಇಂದು ಭೇಟಿ ನೀಡಿ ತೆರಳುತ್ತಾರೆ. ಈ ದೃಶ್ಯ ಇರುವೆಗಳು ಸಾಲಾಗಿ ಹರಿದು ಹೋಗುತ್ತಿರುವಂತೆ ಭಾಸವಾಗುತ್ತದೆ. ಜಿಲ್ಲಾ ಕೇಂದ್ರದಿಂದ ವಿಶೇಷ ಬಸ್ಸಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಬೆಳಗ್ಗೆ ಪೂಜೆ ಬಳಿಕ ರಾತ್ರಿ ದೀಪವನ್ನು ಹಚ್ಚುತ್ತಾರೆ. ಇಲ್ಲಿನ ದೀಪ ನೋಡಿ ಮನೆ ಮನೆಗಳಲ್ಲಿ ದೀಪ ಬೆಳಗುವುದು ಅನೂಚಾನವಾಗಿ ನಡೆದು ಬಂದ ಪದ್ಧತಿ. ಮೈಸೂರು ಅರಸರೂ ಇದನ್ನು ಪಾಲಿಸುತ್ತಾರೆ ಎನ್ನಲಾಗುತ್ತದೆ. ಇದಾದ ೨ ದಿನಗಳಲ್ಲಿ ದೇವಿರಮ್ಮ ದೇವಾಲಯದಲ್ಲಿ ಉತ್ಸವ ಜರುಗಿ ತನ್ನಿಂದ ತಾನೇ ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವ ನಂಬಿಕೆಯೂ ಪ್ರಚಲಿತವಾಗಿದೆ. ಕೊನೆಯ ದಿನ ಕೆಂಡಾರ್ಚನೆ ನಡೆಯುವ ಮೂಲಕ ದೇವಿರಮ್ಮ ವಾರ್ಷಿಕ ಉತ್ಸವಕ್ಕೆ ತೆರೆ ಬೀಳುತ್ತದೆ.

ಕೆಮ್ಮಣ್ಣುಗುಂಡಿ[ಬದಲಾಯಿಸಿ]

ಮುಖ್ಯ ಲೇಖನ: ಕೆಮ್ಮಣ್ಣುಗುಂಡಿ

ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಒಂದು ಗಿರಿಧಾಮ. ಸಮುದ್ರ ಮಟ್ಟದಿಂದ ೧೪೩೪ ಮೀ ಎತ್ತರದಲ್ಲಿರುವ ಈ ಊರು, ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿ ಹಾಗು ಚಿಕ್ಕಮಗಳೂರಿನಿಂದ ೫೫ ಕಿಲೋ ಮೀಟರ್ ದೂರದಲ್ಲಿದೆ..

ಕಲ್ಹತ್ತಿಗಿರಿ[ಬದಲಾಯಿಸಿ]

ಮಾಣಿಕ್ಯಧಾರಾ ಜಲಪಾತ ದತ್ತಾತ್ರೇಯ ಪೀಠ ಅಥವಾ ಬಾಬಾಬುಡನ್‌ಗಿರಿಯಿಂದ ಸುಮಾರು ೩ ಕಿ.ಮೀ ದೂರದಲ್ಲಿದೆ. ಈ ಪರ್ವತ ಶ್ರೇಣಿಗಳಲ್ಲಿ ಹುಟ್ಟುವ ಒಂದು ಸಣ್ಣ ಹಳ್ಳವು ಸುಮಾರು ೧೦೦ ಅಡಿಗಳಿಗೂ ಮೀರಿದ ಜಲಪಾತವನ್ನು ನಿರ್ಮಿಸಿದೆ. ಇಲ್ಲಿ ನೀರು ಮಾಣಿಕ್ಯದ ಮಣಿಗಳಂತೆ ಬೀಳುವುದರಿಂದ ಈ ಹೆಸರು ಬಂದಿದೆ. ಇದು ಚಿಕ್ಕಮಗಳೂರು ನಗರದಿಂದ ಸುಮಾರು ೪೦ ಕಿಮಿ ದೂರದಲ್ಲಿದೆ.

ಮಾಣಿಕ್ಯಧಾರಾ[ಬದಲಾಯಿಸಿ]

ಮಾಣಿಕ್ಯಧಾರಾ ಜಲಪಾತ ದತ್ತಾತ್ರೇಯ ಪೀಠ ಅಥವಾ ಬಾಬಾಬುಡನ್‌ಗಿರಿಯಿಂದ ಸುಮಾರು ೩ ಕಿ.ಮೀ ದೂರದಲ್ಲಿದೆ. ಈ ಪರ್ವತ ಶ್ರೇಣಿಗಳಲ್ಲಿ ಹುಟ್ಟುವ ಒಂದು ಸಣ್ಣ ಹಳ್ಳವು ಸುಮಾರು ೧೦೦ ಅಡಿಗಳಿಗೂ ಮೀರಿದ ಜಲಪಾತವನ್ನು ನಿರ್ಮಿಸಿದೆ. ಇಲ್ಲಿ ನೀರು ಮಾಣಿಕ್ಯದ ಮಣಿಗಳಂತೆ ಬೀಳುವುದರಿಂದ ಈ ಹೆಸರು ಬಂದಿದೆ. ಇದು ಚಿಕ್ಕಮಗಳೂರು ನಗರದಿಂದ ಸುಮಾರು ೪೦ ಕಿಮಿ ದೂರದಲ್ಲಿದೆ.

ಮುಳ್ಳಯ್ಯನಗಿರಿ[ಬದಲಾಯಿಸಿ]

ಮುಖ್ಯ ಲೇಖನ: ಮುಳ್ಳಯ್ಯನಗಿರಿ

ಕರ್ನಾಟಕದ ಅತಿ ಎತ್ತರದ ಗಿರಿಶಿಖರ ಎಂದು ಖ್ಯಾತಿ ಪಡೆದಿರುವ ಮುಳ್ಳಯ್ಯನಗಿರಿಯು 6,330 ಆಡಿ ಎತ್ತರವಿದ್ದು ಪಶ್ಚಿಮ ಘಟ್ಟದ ಚಂದ್ರದ್ರೋಣ ಪರ್ವತ ಶ್ರೇಣಿ ಸಾಲಿಗೆ ಸೇರುತ್ತದೆ. ಬೆಟ್ಟದ ತುದಿಯಲ್ಲಿ ಮುಳ್ಳಯ್ಯನ ದೇವಸ್ಥಾನ ಹಾಗೂ ಮಠವಿದೆ. ಚಾರಣಿಗರಿಗೆ ಮುಳ್ಳಯ್ಯನಗಿರಿ ಪ್ರಶಸ್ತವಾದ ಸ್ಥಳ. ಚಿಕ್ಕಮಗಳೂರಿನಿಂದ ಬೆಟ್ಟದ ಬುಡಕ್ಕೆ ಬಸ್ ಸೌಕರ್ಯ ಇದ್ದು, ತದನಂತರ "ಸರ್ಪನ ದಾರಿ" ಎಂದು ಕರೆಯಲಾಗುವ ಕಡಿದಾದ ಕಾಲುಹಾದಿಯಲ್ಲಿ ನಡೆದು ಬೆಟ್ಟದ ತುದಿ ತಲುಪಬೇಕು. ಮುಳ್ಳಯ್ಯನ ಗಿರಿಯ ಮೇಲಿನಿಂದ ಸಿಗುವ ವಿಹಂಗಮ ನೋಟ ಅತ್ಯಂತ ಆಹ್ಲಾದಕರ

ಶೃಂಗೇರಿ[ಬದಲಾಯಿಸಿ]

ಮುಖ್ಯ ಲೇಖನ: ಶೃಂಗೇರಿ

ಶೃಂಗೇರಿ ಪಟ್ಟಣ ಬಹಳ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಅದ್ವೈತ ಮಠಗಳಲ್ಲಿ ಮೊದಲನೆಯದು ಇರುವುದು ಇಲ್ಲಿಯೇ. ಇಲ್ಲಿರುವ ವಿದ್ಯಾಶಂಕರ ದೇವಸ್ಥಾನ ಖ್ಯಾತವಾದದ್ದು. ಈ ದೇವಸ್ಥಾನದ ಸುತ್ತಲೂ ಇರುವ ಹನ್ನೆರಡು ಕಂಬಗಳಲ್ಲಿ ಪ್ರತಿಯೊಂದರ ಮೇಲೆಯೂ ಬೇರೆ ಬೇರೆ ತಿಂಗಳುಗಳಲ್ಲಿ ಸೂರ್ಯರಶ್ಮಿ ಬೀಳುತ್ತದೆ!

ಭದ್ರಾ ಅಭಯಾರಣ್ಯ[ಬದಲಾಯಿಸಿ]

ಲಕ್ಕವಳ್ಳಿಯ ಬಳಿ ಭದ್ರಾ ನದಿಗೆ ಕಟ್ಟಿರುವ ಅಣೆಕಟ್ಟಿನ ಸುತ್ತಲೂ ಇರುವ ಅಭಯಾರಣ್ಯ.ಲಕ್ಕವಳ್ಳಿಯ ಬಳಿ ಕುವೆಂಪು ವಿಶ್ವ ವಿಶ್ವವಿಧ್ಯಾಲಯವು ಇದೆ. ಚಿಕ್ಕಮಗಳೂರಿನ ಸವಿ ನೆನಪುಗಳನ್ನು ಸ್ವಲ್ಪ ದಿನ ಮೆಲುಕಹಾಕಲು ಚಿಕ್ಕಮಗಳೂರಿನ ಬಾಳೆಹೂನ್ನೂರು ವರೆಗೂ ಆವರಿಸಿದೆ.

ದೇವರಮನೆ[ಬದಲಾಯಿಸಿ]

ದೇವರ ಮನೆ ಮೂಡಿಗೆರೆ ಪ್ರವಾಸಿಗರನ್ನು ಆಕರ್ಶಿಸುತ್ತಿರುವ ದೇವಾಲಯ. ಇಲ್ಲಿಯ ಪರಿಸರ,ಬೆಟ್ಟ,ಗುಡ್ಡಗಳು ವರ್ಣನಾತೀತ.

ಹೊರನಾಡು[ಬದಲಾಯಿಸಿ]

ಮುಖ್ಯ ಲೇಖನ: ಹೊರನಾಡು

ಹೊರನಾಡು ಇದ್ ರಾಜ್ಯದ ಪ್ರಸಿದ್ದ ಯಾತ್ರ ಸ್ತಳ ವಾಗಿದೆ. ಇದು ಅಗಸ್ತ್ಯ ಕ್ಷೆತ್ರ ವೆಂದು ಪ್ರಸಿದ್ದಿ ಆಗಿದ್ದು ಇಲ್ಲಿ ಅಗಸ್ತ್ಯ ಮುನಿ ಗಳಿಂದ ಪ್ರತಿಸ್ಟಾಪನೆ ಯಾಗಿರುವ ಶ್ರೀ ಆದಿಶ್ಕತ್ಯ್ತತ್ಮಕ ಅನ್ನ್ಪೂಪೂಣ್೯ಶ್ವರಿ ಅಮ್ಮನವರ ವಿಗ್ರಹಾರದನೆ ನಡೆಯುತದೆ. ಶುಕ್ರವಾರ ವು ಅಮ್ಮನವರ ವಾರವೆಂದು .... ಅ ದಿನ ವು ಭಕ್ತಾದಿಗಳು ಅದಿಕ ಸಂಖ್ಯೆ ಯಲ್ಲಿ ಆಗಮಿಸುತ್ತ್ತಾರೆ, ಶ್ರಿಂಗೆರಿ ಹಾಗು ದರ್ಮಸ್ತಳ ಇಲ್ಲಿಗೆ ಅತಿ ಸಮೀಪದಲಿವೆ. ಮತ್ತು ಕಳಸ ಸಹ ಕೆವಲ ೯ ಕಿ ಮಿ ದೂರ ದಲ್ಲಿದೆ

ಇತರ ಪಟ್ಟಣಗಳು[ಬದಲಾಯಿಸಿ]

ಚಿಕ್ಕಮಗಳೂರು ಜಿಲ್ಲೆಯ ಕೆಲ ಇತರ ಮುಖ್ಯ ಪಟ್ಟಣಗಳೆಂದರೆ ಬೀರೂರು, ಕಡೂರು, ನರಸಿಂಹರಾಜಪುರ, ಕೊಪ್ಪ, ಮೂಡಿಗೆರೆ, ತರೀಕೆರೆ.

ತಾಲೂಕುಗಳು[ಬದಲಾಯಿಸಿ]

ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕುಗಳು.
 • ಚಿಕ್ಕಮಗಳೂರು

ಇವನ್ನೂ ನೋಡಿ[ಬದಲಾಯಿಸಿ]

ಕರ್ನಾಟಕ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಆಧಾರಗಳು[ಬದಲಾಯಿಸಿ]

 1. ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (December 8, 2015). "ಜನಸಂಖ್ಯೆ". ಜಿಲ್ಲಾಡಳಿತದ, ಚಿಕ್ಕಮಗಳೂರು. Retrieved December 8, 2015. 
 2. ಭಾರತದಲ್ಲಿ ಮೊಟ್ಟ ಮೊದಲ ಕಾಫಿ ಬೆಳೆದ ಬಗ್ಗೆ ಚಿಕ್ಕಮಗಳೂರಿನ ಅಧಿಕೃತ ಜಾಲತಾಣದ ಇತಿಹಾಸ ಪುಟದಲ್ಲಿ ವಿವರಿಸಲಾಗಿದೆ.
 3. ಚಿಕ್ಕಮಗಳೂರಿನ ಹೆಸರಿನ ಉಗಮದ ಬಗ್ಗೆ ಚಿಕ್ಕಮಗಳೂರಿನ ಅಧಿಕೃತ ಜಾಲತಾಣದ ಇತಿಹಾಸ ಪುಟದಲ್ಲಿ ವಿವರಿಸಲಾಗಿದೆ.
 4. ಚಿಕ್ಕಮಗಳೂರಿನ ಕಡೂರಿನಿಂದ ಬೇರ್ಪಟ್ಟ ಬಗ್ಗೆ ಚಿಕ್ಕಮಗಳೂರಿನ ಅಧಿಕೃತ ಜಾಲತಾಣದ ಪುಟದಲ್ಲಿ ವಿವರಿಸಲಾಗಿದೆ.