ವಿಜಯನಗರ ಜಿಲ್ಲೆ
ವಿಜಯನಗರ ಜಿಲ್ಲೆ | |
---|---|
ದೇಶ | India |
ರಾಜ್ಯ | ಕರ್ನಾಟಕ |
ವಿಭಾಗ | ಕಲಬುರಗಿ |
ಸ್ಥಾಪನೆ | 2 ಅಕ್ಟೋಬರ್ 2021 |
Named for | ವಿಜಯನಗರ ಸಾಮ್ರಾಜ್ಯ |
ಕೇಂದ್ರ | ಹೊಸಪೇಟೆ |
ತಾಲೂಕುಗಳು | |
Government | |
• Body | ವಿಜಯನಗರ ಜಿಲ್ಲಾ ಪಂಚಾಯತ್ |
• ಜಿಲ್ಲಾಧಿಕಾರಿ | ಎಮ್. ಎಸ್. ದಿವಾಕರ |
• ಪೊಲೀಸ್ ವರಿಷ್ಠಾಧಿಕಾರಿ | ಶ್ರೀಹರಿಬಾಬು ಬಿ ಎಲ್ |
• ಮುಖ್ಯ ಕಾರ್ಯನಿರ್ವಹಣಾಧಿಕಾರಿ | ಸದಾಶಿವ ಪ್ರಭು ಬಿ |
Area | |
• Total | ೪,೨೫೨ km೨ (೬೪೨ sq mi) |
Elevation | ೪೪೯ m (೧,೪೭೩ ft) |
Population (೨೦೧೧) | |
• Total | ೧೩೫೩೬೨೮ |
• Density | ೩೨೦/km೨ (೨,೧೦೦/sq mi) |
ಭಾಷೆ | |
• ಅಧೀಕೃತ | ಕನ್ನಡ |
Time zone | UTC+5:30 ((ಭಾರತೀಯ ಸಮಯ)) |
Telephone code | ಹೊಸಪೇಟೆ ೦೮೩೯೪ |
Vehicle registration | ಕೆಎ-೩೫ |
Website | vijayanagara |
ವಿಜಯನಗರ ಜಿಲ್ಲೆ ಭಾರತದ, ಕರ್ನಾಟಕ ರಾಜ್ಯದ ೩೧ನೇ ಜಿಲ್ಲೆ, ಇದು ಕಲ್ಯಾಣ -ಕರ್ನಾಟಕ ಪ್ರದೇಶದಲ್ಲಿದೆ. ಈ ಪ್ರದೇಶವನ್ನು ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕಿಸಿ ಹೊಸ ಜಿಲ್ಲೆಯಾಗಿಸಲಾಯಿತು. [೧] [೨] ೨ನೇ ಅಕ್ಟೋಬರ್ ೨೦೨೧ ರಂದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಹೊಸ ಜಿಲ್ಲೆಯನ್ನು ಘೋಷಿಸಿದರು [೩]
ಐತಿಹಾಸಿಕವಾಗಿ ಇದು ವಿಜಯನಗರ ಸಾಮ್ರಾಜ್ಯದ ಹಿಂದಿನ ರಾಜಧಾನಿಯಾಗಿತ್ತು ಹಂಪಿ ಮತ್ತು ವಿರೂಪಾಕ್ಷ ದೇವಸ್ಥಾನದ ಎಲ್ಲಾ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ . [೪] [೫]
ಇತಿಹಾಸ
[ಬದಲಾಯಿಸಿ]ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ವಿಜಯನಗರವು, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿತ್ತು. ಭಾರತದ ಸ್ವಾತಂತ್ರ್ಯದ ನಂತರ ರಾಜ್ಯಗಳ ರಚನೆಯ ಸಮಯದಲ್ಲಿ, ೧೯೫೩ರಲ್ಲಿ ಆಂಧ್ರಪ್ರದೇಶ ರಾಜ್ಯ ಅಸ್ತಿತ್ವಕ್ಕೆ ಬಂದಾಗ , ಈ ಪ್ರದೇಶವು ಮೈಸೂರು ರಾಜ್ಯದ ಬಳ್ಳಾರಿ ಜಿಲ್ಲೆಯ ಭಾಗವಾಗಿ ಸೇರ್ಪಡೆಗೊಂಡಿತು. ಪ್ರಸ್ತುತ ಈ ಜಿಲ್ಲೆಯು ಹೈದರಾಬಾದ್-ಕರ್ನಾಟಕ ಪ್ರದೇಶದ ಅಡಿಯಲ್ಲಿ ಬರುತ್ತದೆ,
೨೦೨೦ರಲ್ಲಿ ಬಳ್ಳಾರಿ ಜಿಲ್ಲೆಯಿಂದ ಆರು ತಾಲ್ಲೂಕುಗಳನ್ನು ಬೇರ್ಪಡಿಸಿ, ವಿಜಯನಗರ ಜಿಲ್ಲೆ ಎಂಬ ಹೆಸರಿನಲ್ಲಿ ಒಂದುಗೂಡಿಸಲಾಯಿತು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರವು ೧೮ನೇ ನವೆಂಬರ್ ೨೦೨೦ರಂದು ಈ ಜಿಲ್ಲೆಯ ರಚನೆಗೆ ಅನುಮೋದನೆ ನೀಡಿ ಅಧಿಸೂಚನೆ ಹೊರಡಿಸಿತು.
ಸಂಸತ್ತು ಮತ್ತು ವಿಧಾನಸಭೆ ಸ್ಥಾನಗಳು
[ಬದಲಾಯಿಸಿ]ವಿಜಯನಗರ ಜಿಲ್ಲೆಯು ಬಳ್ಳಾರಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ, (ಎಸ್‍ಟಿ ವರ್ಗಕ್ಕೆ ಮೀಸಲಾಗಿದೆ) ಮತ್ತು ೫ ವಿಧಾನಸಭಾ ಸ್ಥಾನಗಳನ್ನು ಹೊಂದಿದೆ:
- 88. ಹೂವಿನಹಡಗಲಿ (SC)
- 89. ಹಗರಿಬೊಮ್ಮನಹಳ್ಳಿ (SC)
- 90 ವಿಜಯನಗರ (ಸಾಮಾನ್ಯ)
- 96. ಕುಡ್ಲಿಗಿ (ಎಸ್ಟಿ)
- 104. ಹರಪನಹಳ್ಳಿ (ಸಾಮಾನ್ಯ)
ಹರಪನಹಳ್ಳಿಯ ವಿಧಾನಸಭಾ ಕ್ಷೇತ್ರವು ದಾವಣಗೆರೆಯ ಸಂಸದೀಯ ಕ್ಷೇತ್ರದ ಭಾಗವಾಗಿದೆ.
ಪ್ರವಾಸೋದ್ಯಮ
[ಬದಲಾಯಿಸಿ]- ಹಂಪಿ : ವಿಜಯನಗರದ ಅವಶೇಷಗಳಿಗೆ ಹೆಸರುವಾಸಿಯಾಗಿದೆ ವಿಶ್ವ ಪರಂಪರೆಯ ತಾಣವಾಗಿದ್ದು, ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ.
- ಮೈಲಾರ : ಮೈಲಾರಲಿಂಗೇಶ್ವರ ದೇವಸ್ಥಾನವು ಈಶ್ವರನಿಗೆ (ಮೈಲಾರ ರಾಜವಂಶ) ಮೀಸಲಾಗಿರುವ ಹಿಂದೂ ದೇವಾಲಯವಾಗಿದೆ.
- ಅಂಕ ಸಮುದ್ರ ಪಕ್ಷಿಧಾಮ : ಇದು ಹಗರಿಬೊಮ್ಮನಹಳ್ಳಿ ತಾಲೂಕಿಗೆ ಸಂಬಂಧಿಸಿದ್ದು, ಉಪನಾಯಕನಹಳ್ಳಿಯಿಂದ 2 ಕೀ.ಮಿ ದೂರದ ಅಂಕಸಮುದ್ರ ಎಂಬ ಹಳ್ಳಿಗೆ ಸೇರಿದೆ. ವಿದೇಶಗಳಿಂದ ಪಕ್ಷಿಗಳು ಇಲ್ಲಿ ವಲಸೆ ಬರುತ್ತವೆ.
ಶಿಕ್ಷಣ
[ಬದಲಾಯಿಸಿ]- ಹಂಪಿಯಲ್ಲಿರುವ ಸಂಶೋಧನಾ-ಆಧಾರಿತ ಸಾರ್ವಜನಿಕ ವಿಶ್ವವಿದ್ಯಾಲಯವಾದ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವ ಮತ್ತು ಅದರ ಸಾಹಿತ್ಯ ಮತ್ತು ಸಂಪ್ರದಾಯಗಳನ್ನು ಉತ್ತೇಜಿಸುವ ಗುರಿಯೊಂದಿಗೆ ಸ್ಥಾಪಿತವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Cabinet approves boundaries of Vijayanagara district". The Hindu (in Indian English). 28 November 2020. Retrieved 24 January 2021.
- ↑ "Vijayanagar to be Karnataka's 31st district, BSY Cabinet gives in-principle nod". The New Indian Express. 19 November 2020. Retrieved 24 January 2021.
- ↑ "Chief Minister Basavaraj Bommai officially announced the new district". Hospet.online. Hosapete, India. 2 October 2021.
- ↑ "Karnataka formalises creation of new Vijayanagara district". The Economic Times. 27 November 2020. Retrieved 24 January 2021.
- ↑ Buradikatti, Kumar (19 November 2020). "Ballari set to lose Hampi and more". The Hindu (in Indian English). Retrieved 24 January 2021.