ವಿಷಯಕ್ಕೆ ಹೋಗು

ತುಮಕೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ತುಮಕೂರು ಜಿಲ್ಲೆ ಇಂದ ಪುನರ್ನಿರ್ದೇಶಿತ)
ತುಮಕೂರು
ತುಮಕೂರು
ಜಿಲ್ಲೆ
Map
Map
Government
 • ಜಿಲ್ಲಾಧಿಕಾರಿವೈ ಎಸ್ ಪಾಟೀಲ್
Population
 (2011)
 • Total
೨೬೭೮೯೮೦
Websitehttp://www.tumkurcity.mrc.gov.in/
ತುಮಕುರು

ತುಮಕೂರು - ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ತುಮ್ಮೆಗೂರು. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಬೆಂಗಳೂರಿನಿಂದ ೭೦ ಕಿ.ಮಿ. ದೂರದಲ್ಲಿದೆ.ಈ ತುಮಕೂರು ಜಿಲ್ಲೆ ರಚನೆಯಾದ ವರ್ಷ ೧-೧೧-೧೯೫೬ ಇದರ ವಿಸ್ತೀರ್ಣ-೧೦೫೯೭ ಚ.ಕೀ.ಮೀ ತುಮಕೂರು ಜಿಲ್ಲೆ ೧೮೩೨ ರಲ್ಲಿ ಅಸ್ತಿತ್ವಕ್ಕೆ ಬಂದಿತು ದಕ್ಷಿಣ ಕರ್ನಾಟಕ ರಾಜ್ಯದಲ್ಲಿರುವ ಪ್ರಮುಖ ನಗರವಾಗಿದೆ ತುಮಕೂರು ಜಿಲ್ಲೆ ಅತೀ ಹೆಚ್ಚು ಕೆಂಪು ಮಣ್ಣುನ್ನು ಹೊಂದಿದೆ.ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಅತೀ ಹೆಚ್ಚು ತೆಂಗು, ರಾಗಿ ಬೆಳೆ ಬೆಳೆಯುವ ಜಿಲ್ಲೆಯಾಗಿದೆ. ಈ ಜಿಲ್ಲೆಯು ಕಲ್ಪತರು ನಾಡು ಎಂದು ಹೆಸರುವಾಸಿಯಾಗಿದೆ.ತುಮಕೂರು ಜಿಲ್ಲೆಯಲ್ಲಿ ಕಗ್ಗಲಡು ಪಕ್ಷಿಧಾಮವಿದೆ.

ತುಮಕೂರು-ಬೆಂಗಳೂರಿನ ಹೆದ್ದಾರಿಯಲ್ಲಿರುವ ಕ್ಯಾತಸಂದ್ರದ ಬಳಿ ಇರುವ ಪುಣ್ಯಕ್ಷೇತ್ರವಾದ ಶ್ರೀ ಸಿದ್ದಗಂಗಾ ಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ತುಮಕೂರನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಸಿದ್ಧಗಂಗಾ ಮಠಾಧೀಶರಾದ, ತ್ರಿವಿಧ ದಾಸೋಹಿ ೧೦೯ ವರ್ಷದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು, ನೆಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದಾರೆ.

ಸಿದ್ಧಗಂಗಾ ಮಠದ ಸಮೀಪ ಇರುವ ಕ್ಯಾತ್ಸಂದ್ರ, ತಟ್ಟೆಇಡ್ಲಿ ತಿನಿಸಿಗೆ ಖ್ಯಾತಿ ಪಡೆದಿದೆ. ಬೆಂಗಳೂರು - ಮಧುಗಿರಿ ಹೆದ್ದಾರಿಯಲ್ಲಿರುವ ಸಿದ್ದರ ಬೆಟ್ಟವು ಗಿಡಮೂಲಿಕೆಗಳಿಗೆ ಮತ್ತು ಅಲ್ಲಿ ಸಾಧನೆ ಮಾಡುತ್ತಿರುವ ಸಿದ್ಧರು ಮತ್ತು ಸಂತರಿಗಾಗಿ ಪ್ರಸಿದ್ಧವಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿರುವ ಯೆಡಿಯೂರು ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರ ಮತ್ತು ಕಗ್ಗೆರೆ ನಾಡಿನ ಪ್ರಮುಖ ವೀರಶೈವ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿವೆ. ತುಮಕೂರು ಜಿಲ್ಲೆಯಲ್ಲಿರುವ ತಿಪಟೂರು ತೆಂಗಿನ ಕೃಷಿಗೆ ಹೆಸರಾಗಿದ್ದು ಕಲ್ಪತರು ನಾಡು ಎಂದು ಖ್ಯಾತಿ ಪಡೆದಿದೆ. ತುಮಕುರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಲಕ್ಷ್ಮಿ ದೇವಸ್ಥಾನವು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. ಮಧುಗಿರಿ ಬೆಟ್ಟ ಏಷಿಯಾ ಖಂಡದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟ ಮತ್ತು ಈ ಬೆಟ್ಟದ ಮೇಲೆ ಬಹಳ ದೊಡ್ಡದಾದ ಕೋಟೆ ಇದೆ. ಮಧುಗಿರಿಯ ದಂಡಿನ ಮಾರಮ್ಮದೇವಿ ದೇವಸ್ಥಾನ ಪ್ರಖ್ಯಾತಿ ಹೊಂದಿದೆ. ದೇವರಾಯನ ದುರ್ಗ ನರಸಿಂಹ ಸ್ವಾಮಿ ದೇವಸ್ಥಾನವಿರುವ ಪುಣ್ಯಕ್ಷೇತ್ರವಾಗಿದೆ.

ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮ ನವರೂ ಸಾಕ್ಷಾತ್ ಪಾರ್ವತಮ್ಮನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ ಸ್ಥಳ ಕೋಡ್ಲಹಳ್ಳಿ, ಕ್ಯಾಮೆನಹಳ್ಳಿ ಗ್ರಾಮ ಪಂಚಾಯತಿ, ಹೋಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ, ಕರ್ನಾಟಕ.

ತುಮಕೂರು ಹಲವು ಕೈಗಾರಿಕೆಗಳಿಗೆ ಮನೆಯಾಗಿದೆ. ತುಮಕೂರಿನ ಪ್ರಮುಖ ಕೈಗಾರೆಕೆಗಳು ಹೆಚ್.ಎಂ.ಟಿ, ಗ್ರಾನೈಟ್ ಪರಿಷ್ಕರಣೆ, ಟಿ.ವಿ.ಎಸ್.ಇ, ಅಕ್ಕಿ ಮಿಲ್, ಎಣ್ಣೆ ಮಿಲ್ ಇತ್ಯಾದಿ.

ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ತುಮಕೂರು ಹೆಸರುವಾಸಿಯಾಗಿದೆ. ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ. ತುಮಕೂರು ವಿಶ್ವವಿದ್ಯಾಲಯ ಕಾರ್ಯಾರಂಭಿಸಿದೆ. ಪ್ರಖ್ಯಾತ ನಾಟಕ ಕಂಪನಿಯು, ಚಿತ್ರ ನಿರ್ಮಾಣ ಸಂಸ್ಥೆಯೂ ಆಗಿದ್ದ ಗುಬ್ಬಿ ನಾಟಕ ಕಂಪನಿಯ ಸಂಸ್ಥಾಪಕರಾದ ವೀರಣ್ಣನವರು ತುಮಕೂರು ಜಿಲ್ಲೆಯ ಗುಬ್ಬಿಯವರು.

ಮಾವತ್ತೂರು ಕೆರೆ ಜಿಲ್ಲೆಯ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಮಾವತ್ತೂರು ಗ್ರಾಮದಲ್ಲಿ ಜಯಚಾಮರಾಜ ಒಡೆಯರ್ ಕಾಲದಲ್ಲಿ ಕಟ್ಟಿದ ಬೃಹತ್ ಕೆರೆ. ಇದು ಜಿಲ್ಲೆಯ ಮೊದಲ ಮತ್ತು ಇಂದಿಗೂ ಸುಭದ್ರವಾದ ದೊಡ್ಡದಾದ ಕೆರೆ.

ತುಮಕೂರು ಜಿಲ್ಲೆಯ ತಾಲ್ಲೂಕುಗಳು

[ಬದಲಾಯಿಸಿ]

ತುಮಕೂರು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳು

[ಬದಲಾಯಿಸಿ]

ತುಮಕೂರು ಜಿಲ್ಲೆಯ ಪ್ರಸಿದ್ಧ ಸ್ಥಳಗಳು

[ಬದಲಾಯಿಸಿ]
  • ಮಧುಗಿರಿಯ ತಾಲ್ಲೂಕಿನ ಕೋಟೆಕಲ್ಲಪ್ಪ(ಕೋಟೆಕಲ್ಲರಂಗನಾಥ ಸ್ವಾಮಿ). ಬೆಟ್ಪ
  • ಹಾಗಲವಾಡಿ
  • ಕೊರಟಗೆರೆ ತಾಲ್ಲೂಕಿನ ಪ್ರಸಿದ್ಧವಾದ ವಡ್ಡಗೆರೆ ವೀರನಾಗಮ್ಮ ದೇವಿ (ಅಮ್ಮಾಜಿ ಕ್ಷೇತ್ರ).
  • ಸಿರಾ ತಾಲ್ಲೂಕಿನ ಪ್ರಸಿದ್ಧ ಕಗ್ಗಲಡು ಪಕ್ಷಿಧಾಮ.
  • ಸಿರಾ ತಾಲ್ಲೂಕಿನ ಪ್ರಸಿದ್ಧವಾದ ಹುಳಿಗೆರೆ ಶ್ರೀ ಕೊಡಿವೀರಪ್ಪ ಸ್ವಾಮಿ ಜಾತ್ರೆ...

ಹುತ್ರಿದುರ್ಗ

[ಬದಲಾಯಿಸಿ]

ಇಲ್ಲಿ ನಾಡಪ್ರಭುಕೇಂಪೇಗೌಡರು ಕಟ್ಟಿಸಿರುವ ಬೃಹತ್ ಕೋಟೆ ಮತ್ತು ಶ್ರೀ ಗಂಗಾಧರೇಶ್ವರ ದೇವಸ್ಥಾನ. ಪಾತಾಳ ಗಂಗೆ, ಸಂಕೋಲೆ ಬಸವಣ್ಣನ ದೇವರು, ಪ್ರಸಿದ್ಧ ಕಾಡಪ್ಪನವರ ಮಠ ಮುಂತಾದ ಪ್ರಸಿದ್ಧ ಸ್ಥಳಗಳನ್ನು ಈ ಬೃಹತ್ ಬೆಟ್ಟದಲ್ಲಿ ಕಾಣಬಹುದು. ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದ್ದು, ಇದು ಬೆಂಗಳೂರಿನಿಂದ ಸುಮಾರು ೮೦ ಕಿ.ಮಿ. ದೂರವಿದ್ದು, ಈ ಬೆಟ್ಟಕ್ಕೆ ಬರಲು ಬೆಂಗಳೂರಿನಿಂದ ಹಲವು ಖಾಸಗಿ ಮತ್ತು ಸರ್ಕಾರಿ ಬಸ್ ಗಳಿವೆ.ಬೆಂಗಳೂರಿನಿಂದ ಮಾಗಡಿ ಮುಖಾಂತರ ಬಂದು ಕಲ್ಯ, ಹೊಸಪಾಳ್ಯ ಕ್ಕೆ ಸೇರುವ ಮುನ್ನ ಎಡಕ್ಕೆ ತಿರುವುಪಡೆದರೆ, ಕತ್ತರಿಘಟ್ಟ, ಹಾಲುವಾಗಿಲು ನಂತರ ಸಂತೇಪೇಟೆಯಲ್ಲಿ ಇಳಿದು ನಂತರ ಬೆಟ್ಟಕ್ಕೆ ಹೋಗಬಹುದು.ಮೇಲಿನಂತೆಯೆ ಮಾಗಡಿಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಬಂದು ಅಗಲಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಬಲ್ಲಕ್ಕೆ ತಿರುವು ಪಡೆದು ಯಲಗಲವಾಡಿ ಸೇರುವ ಮುನ್ನ ಬಲ ತಿರುವು ಪಡೆದು ಹೊಢಾಘಟ್ಟ ಮಾರ್ಗವಾಗಿ ಬಂದು ನಂತರ ಚಿಕ್ಕ ಬೆಟ್ಟದರಸ್ತೆಯಲ್ಲಿ ಸಾಗಿದ ನಂತರ ಆದಿ ಹನುಮಂತರಾಯ ಸ್ವಾಮಿ ದೇವಸ್ಥಾನದ ನಂತರ ಬಲ ತಿರುವು ಪಡೆದರೆ ಹುತ್ರಿದುರ್ಗ ಬೆಟ್ಟಕ್ಕೆ ಹೋಗಬಹುದು.

ಗುಬ್ಬಿ, ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕುಗಳ ಗಡಿ ಬಾಗದಲ್ಲಿರುವ ಒಂದು ಸುಂದರ ಗ್ರಾಮ

ಸಲ್ಲಾಪುರದಮ್ಮ ಮತ್ತು ಕೊಲ್ಲಾಪುರದಮ್ಮ ಎಂಬ ದೇವಸ್ಥಾನವು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಗಿಡದ ಕೆಂಚನಹಳ್ಳಿಯಲ್ಲಿ ನೆಲೆಸಿದ್ದು ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ.ಅಲ್ಲದೇ ಹೆಸರಾಂತ ಅಂಜನೇಯ ಸ್ವಾಮಿಯು ಇದೇ ತಾಲ್ಲೂಕಿನ ಅಂದರೆ ಕುಣಿಗಲ್ ನ ಹುಲಿಯೂರುದುರ್ಗ ಹೋಬಳಿಯ ಕಲ್ಲುದೇವನಹಳ್ಳಿಯಲ್ಲಿ ನೆಲೆಸಿದ್ದು, ಇಲ್ಲಿಯೂ ಸಹ ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ.

ಬೆಟ್ಟಹಳ್ಳಿಮಠ

[ಬದಲಾಯಿಸಿ]

ಇದು ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಮಟ್ಟದಲ್ಲಿ ಬರುವ ಒಂದು ಪ್ರಮುಖ ವಿಧ್ಯಾಸಂಸ್ಥೆಯಾಗಿದ್ದು, ಇಲ್ಲಿ ಶ್ರೀ ಉರಿಗದ್ದಿಗೇಶ್ವರ ದೇವಸ್ಥಾನವಿದೆ. ರಾಮನಗರದಿಂದ - ಕುಣಿಗಲ್ ರಾಜ್ಯ ಹೆದ್ದಾರಿಯಲ್ಲಿರುವ ಬೆಟ್ಟಹಳ್ಳಿ ಬಳಿ ಇರುವ ವೀರಶೈವ ಪುಣ್ಯಕ್ಷೇತ್ರವಾದ ಶ್ರೀ ಬೆಟ್ಟಹಳ್ಳಿಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ಬೆಟ್ಟಹಳ್ಳಿಮಠವನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಬೆಟ್ಟಹಳ್ಳಿಮಠ ಮಠಾಧೀಶರಾದ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀನೀಲಕಂಠಶಿವಾಚಾರ್ಯ ಮಹಾ ಸ್ವಾಮಿಗಳು, ನೆಡೆದಾಡುವ ಶಿವನೆಂದೇ ಪ್ರಖ್ಯಾತರಾಗಿದ್ದಾರೆ. ಅಲ್ಲದೇ ಮಠದ ವತಿಯಿಂದ ಇಲ್ಲಿ ನರ್ಸರಿ ಯಿಂದ ಪದವಿ ಪೂರ್ವ ಕಾಲೇಜು ಮತ್ತು ಸಂಸ್ಕ್ರುತ ಶಿಕ್ಷಣವನ್ನು ನೀಡಲಾಗುವುದು. ಮತ್ತು ಈ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬದಂದು ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯುವುದರ ಜೊತೆಗೆ ಕಳೆದ ಐದಾರು ವರ್ಷಗಳಿಂದ ಬಾರಿ ದನಗಳ ಜಾತ್ರೆಯನ್ನು ಏರ್ಪಡಿಸುವುದರ ಜೊತೆಗೆ ಉತ್ತಮವಾದ ರಾಸುಗಳಿಗೆ ಬಹುಮಾನವನ್ನು ಸಹ ನೀಡುವ ವ್ಯ್ವವಸ್ಥೆಯನ್ನು ಮಾಡಲಾಗಿದೆ.

ಹೊನ್ನೇನಹಳ್ಳಿ

[ಬದಲಾಯಿಸಿ]

ಸಿರಾ ಗೇಟಿನಿಂದ 2.05 ಕಿ.ಮೀ ದೂರದಲ್ಲಿರುವ ಇತಿಹಾಸ ಪ್ರಸಿದ್ದ ಗ್ರಾಮ ಇದಾಗಿದ್ದು, ಇಲ್ಲಿ ವೇಣುಗೋಪಾಲಸ್ವಾಮಿ ದೇವಾಲಯವಿದೆ ಹಾಗೂ ಇದು ಚಿತ್ರನಟಿ ಮಂಜುಳ ಅವರ ಹುಟ್ಟುರಾಗಿದ್ದು ಅವರ ಸಮಾಧಿಯನ್ನು ಇಲ್ಲಿಯೇ ಇದೆ. ವಿಶೇಷವಾಗಿ ಹೊನ್ನೇನಹಳ್ಳಿಯು ಇಡೀ ಕರ್ನಾಟಕಕ್ಕೆ ಪರಿಚಯವಾಗಿರುವುದು ಇತ್ತೀಚೆಗೆ ಬೆಳಕಿಗೆ ಬಂದ ಒಂದು ಶಾಸನದಿಂದ. ಇಲ್ಲಿನ ವೇಣುಗೋಪಾಲಸ್ವಾಮಿ ಆವರಣದಲ್ಲಿರುವ ಶಾಸನವು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀಕೃಷ್ಣದೇವರಾಯರು ದಿನಾಂಕ 17-10-1529ರಂದು ಅಸ್ತಮಯವಾದರು ಎಂದು ಅಂದರೆ ಇಹಲೋಕ ತ್ಯಜಿಸಿದರು ಎಂಬ ಅಪರೂಪದ ಮಾಹಿತಿ ನೀಡುವ ಶಾಸನ ಇದಾಗಿದ್ದು. ಇಡೀ ಕರ್ನಾಟಕದಲ್ಲಿ ಹೊನ್ನೇನಹಳ್ಳಿಯು ಈ ಶಾಸನದ ಮೂಲಕ ಇತಿಹಾಸದ ಪುಟಕ್ಕೆ ಸೇರಿತು.

ವಿಜಯನಗರ ಶ್ರೀಕೃಷ್ಣದೇವರಾಯನ ಮರಣದ ನಿಖರ ದಿನಾಂಕ ತಿಳಿಸುವ ಹೊನ್ನೇನಹಳ್ಳಿಯ ಶಾಸನ
ಹೊನ್ನೇನಹಳ್ಳಿಯ ಶಾಸನ

ಇದನ್ನೂ ನೋಡಿ

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

[೧]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2021-04-10. Retrieved 2021-08-10.


"https://kn.wikipedia.org/w/index.php?title=ತುಮಕೂರು&oldid=1306152" ಇಂದ ಪಡೆಯಲ್ಪಟ್ಟಿದೆ