ಶಿರಾ
ಶಿರಾ (Sira)
ಸಿರಾ | |
---|---|
Historical City (ಐತಿಹಾಸಿಕ ನಗರ) | |
Country | ಭಾರತ |
State | Karnataka |
District | ತುಮಕೂರು |
ಸರ್ಕಾರ | |
• ಪಾಲಿಕೆ | city municipal council |
Area | |
• Total | ೧೭.೪೭ km೨ (೬.೭೫ sq mi) |
Elevation | ೬೬೧ m (೨,೧೬೯ ft) |
Population (2011) | |
• Total | ೧,೦೫,೦೧೨ |
• ಸಾಂದ್ರತೆ | ೨,೮೬೭.೦೯/km೨ (೭,೪೨೫.೭/sq mi) |
Languages | |
• Official | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
PIN | 572 137 |
Telephone code | 08135 |
ವಾಹನ ನೋಂದಣಿ | KA-64,KA-06 |
ಐತಿಹಾಸಿಕ ನಗರ ಶಿರಾ(ಸಿರಾ), ತುಮಕೂರು ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರ. ಬ್ರಿಟಿಷರು ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ಶಿರಾ ರಾಜಕೀಯವಾಗಿ ಹಾಗು ಸೈನಿಕವಾಗಿ ದಕ್ಷಿಣ ಭಾರತದ ಪ್ರಮುಖ ಪ್ರದೇಶವಾಗಿತ್ತು. ೧೬೩೮ ರಿಂದ ೧೬೮೭ ರವರೆಗೆ ಶಿರಾ ಪ್ರಾಂತ್ಯವನ್ನು ಗೊಲ್ಲಸಿರಿಮ ಬಿಜಾಪುರದ ಅರಸರು ಆಳಿದರು (ರತ್ನಗಿರಿಯ ರಂಗಪ್ಪ ನಾಯಕನಾಳಿದ ಸ್ಥಳ ೧೬೮೬ ರಲ್ಲಿ ಮುಘಲರ ವಶವಾಗಿ ಫೌಜುದಾರಿ ಕೇಂದ್ರವಾಯಿತು). ೧೬೮೭ ರಿಂದ ೧೭೫೭ ರವರೆಗೆ ಮೊಘಲರ ಆಳ್ವಿಕೆಗೊಳಪಟ್ಟಿತ್ತು. ನಂತರದ ದಿನಗಳಲ್ಲಿ ಹೈದರ್ ಆಲಿಯಿಂದ ಆಳಲ್ಪಟ್ಟಿತು. ತುಮಕೂರು ಜಿಲ್ಲೆಯಲ್ಲಿ ಎರಡನೇ ಅತಿದೊಡ್ಡ ನಗರ ಹಾಗೂ ಮುಂದುವರೆಯುತ್ತಿರುವ ನಗರ
ಗೊಲ್ಲಸಿರಿಮ ಆಳ್ವಿಕೆ ಮಾಡಿದ ಕಾರಣ ಶಿರಾ ಅಥವಾ ಸಿರಾ ಎಂದು ಹೆಸರು ಬರಲು ಕಾರಣವಾಗಿದೆ
ಶಿಕ್ಷಣ: *ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ *ಸರ್ಕಾರಿ ಐಟಿಐ ಕಾಲೇಜ್
- ಸರ್ಕಾರಿ ಪದವಿ ಪೂರ್ವ(ಕಲಾ ವಾಣಿಜ್ಯ ಹಾಗೂ ವಿಜ್ಞಾನ) ಕಾಲೇಜು *ಸರ್ಕಾರಿ ಮಹಿಳಾ ಕಾಲೇಜ್ *ಸರ್ಕಾರಿ ಪ್ರೌಢಶಾಲೆ *ಎಂ ಎ ವಿಶ್ವವಿದ್ಯಾಲಯ
- ಪ್ರೆಸಿಡೆನ್ಸಿ ಪಬ್ಲಿಕ್ ಸ್ಕೂಲ್(Icsc &Cbsc), *ಮಂಜುಶ್ರೀ ಆಂಗ್ಲ ಶಾಲೆ. *ಅರ್ ರೆಹನ್ ಆಂಗ್ಲ ಶಾಲೆ ಮತ್ತು ಕಾಲೇಜು, *ಸೇಂಟ್ ಆನ್ ನೆಸ್ ಆಂಗ್ಲ ಶಾಲೆ ಮತ್ತು ಕಾಲೇಜು *ನಾಟ್ಯ ಸರಸ್ವತಿ ಆಂಗ್ಲ ಶಾಲೆ. *ವಾಸವಿ ಆಂಗ್ಲ ಶಾಲೆ. *ಪಟಿಕ ಪುರಿ ವಿದ್ಯಾಲಯ,
ಪರಿಚಯ
[ಬದಲಾಯಿಸಿ]ಇಲ್ಲಿನ ಬಲಾಢ್ಯವಾದ ಕಲ್ಲಿನ ಕೋಟೆ ಸುತ್ತಲೂ ಕಂದಕವನ್ನು ಹೊಂದಿದೆ. ಕೆರೆಯ ಪಕ್ಕದಲ್ಲೇ ಇರುವುದರಿಂದ ರಾಜರ ಆಳ್ವಿಕೆಯಲ್ಲಿ ಮಳೆಗಾಲದಲ್ಲಿ ಕಂದಕಗಳಿಗೆ ನೀರನ್ನು ಹರಿದು ಬಿಟ್ಟು, ಅದರಲ್ಲಿ ಮೊಸಳೆಯಂತಹ ಜಲಚರಗಳನ್ನು ಸಾಕಿ ಶತ್ರುಗಳಿಂದ ರಕ್ಷಿಸಿಕೊಳ್ಳುತ್ತಿದ್ದರು. ಶಿರಾ ಕೋಟೆಯಲ್ಲಿ ಮುಘಲ್ ಅಧಿಕಾರಿ ದಿಲಾವರ್ ಖಾನ್ ಬೆಳೆಸಿದ ಸುಂದರ ಉದ್ಯಾನವನವೇ ಹೈದರಾಲಿ ಲಾಲ್ ಬಾಗ್ ನಿರ್ಮಿಸಲು ಸ್ಪೂರ್ತಿ ನೀಡಿತ್ತು. ಇದು ಜಿಲ್ಲಾ ಕೇಂದ್ರದಿಂದ ೫೦ ಕಿ.ಮೀ ದೂರವಿದೆ ಹಾಗು ರಾಜಧಾನಿ ಬೆಂಗಳೂರಿನಿಂದ ಸುಮಾರು ೧೨೫ ಕಿಮಿ ದೂರದಲ್ಲಿದ್ದು ರಾಷ್ಟ್ರೀಯ ಹೆದ್ದಾರಿ ೪ (ಪುಣೆ-ಬೆಂಗಳೂರು ರಸ್ತೆ) ಕ್ಕೆ ಹೊಂದಿಕೊಂಡಿದೆ.
ಶಿರಾ(ಸಿರಾ) ನಗರದ ಕೋಟೆಯ ಚರಿತ್ರೆ
[ಬದಲಾಯಿಸಿ]ಶಿರಾ(ಸಿರಾ) ನಗರವು ಬ್ರಿಟಿಷ್ ಆಡಳಿತಕ್ಕೂ ಮೊದಲು ದಕ್ಷಿಣ ಭಾರತದ ಒಂದು ಬಹುಮುಖ್ಯ ಯುದ್ಧತಾಂತ್ರಿಕ ನಗರವಾಗಿತ್ತು.
ಈ ನಗರದ ಹಾಗು ಕೋಟೆಯ ಸ್ಥಾಪನೆಯ ಹಿರಿಮೆ ರತ್ನಗಿರಿಯ ನಾಯಕ, ರಾಜಾಕಸ್ತೂರಿರಂಗಪ್ಪನಾಯಕರಿಗೆ ಸಲ್ಲುತ್ತದೆ. ಆದುದರಿಂದಲೇ ಈ ಅದ್ಭುತವಾದ ಕೋಟೆಯು ರಾಜಾಕಸ್ತೂರಿರಂಗಪ್ಪ ನಾಯಕನ ಕೋಟೆ ಎಂದೇ ಕರೆಯಲ್ಪಡುತ್ತದೆ. ಇದು ಒಂದು ಕಾಲದಲ್ಲಿ ಈ ಪ್ರಾಂತ್ಯದ ಮೇಲೆ ನಾಯಕ ಸಮುದಾಯದ ರಾಜರಾಗಿದ್ದನಾಯಕ ಸಮೂಧಾಯಕ್ಕೆ ನಿರೂಪಿಸುತ್ತದೆ. ರಾಜಾಕಸ್ತೂರಿರಂಗಪ್ಪನಾಯಕರ ಕೋಟೆಯು ಅದ್ಭುತವಾದ ಕಲ್ಲುಗಳ ರಚನೆಯೊಂದಿಗೆ ಸುತ್ತಲು ಕಂದಕಗಳನ್ನು ಒಳಗೊಂಡಿದೆ. ಈ ಐತಿಹಾಸಿಕ ಕೋಟೆಯು ಸಿರಾ ದೊಡ್ಡ ಕೆರೆಯ ಪಕ್ಕದಲ್ಲೇ ಸ್ಥಾಪಿತವಾಗಿರುವುದು ಮತ್ತೊಂದು ವಿಶೇಷ.
ಈ ಪ್ರಾಂತ್ಯವು ೧೬೩೮ ರಿಂದ ೧೬೮೭ ವರೆಗೆ ಬಿಜಾಪುರದ ರಾಜರ ಆಳ್ವಿಕೆಗೆ ಒಳಪಟ್ಟಿತು. ೧೬೮೭ ರಿಂದ ೧೭೫೭ ರ ವರೆಗೆ ಮೊಗಲರ ಸಿರಾ ಪ್ರಾಂತ್ಯದ ರಾಜಧಾನಿಯಾಗಿತ್ತು. ನಂತರದ ದಿನಗಳಲ್ಲಿ ಮರಾಠಿಗರು ಮೊಗಲರಿಂದ ಈ ಪ್ರಾಂತ್ಯವನ್ನು ವಶಪಡಿಸಿಕೊಂಡು ೧೭೫೭ ರಿಂದ ೧೭೫೯ ರವರೆಗೆ ಆಳ್ವಿಕೆ ನಡೆಸಿದರು. ೧೭೫೯ ರಲ್ಲಿ ಮೊಗಲರು ಈ ಪ್ರಾಂತ್ಯವನ್ನು ಮತ್ತೆ ತಮ್ಮ ವಶಕ್ಕೆ ಪಡೆದಾಗ ಹೈದರ್ ಅಲಿ ಯು ೧೭೬೧ ರಲ್ಲಿ ತನ್ನನ್ನು ಈ ಪ್ರಾಂತ್ಯದ ನವಾಬನೆಂದು ಘೋಷಿಸಿಕೊಂಡನ್ನು. ಆದರೆ ೧೭೬೬ ರಲ್ಲಿ ಮರಾಠಿಗರು ಮತ್ತೊಮ್ಮೆ ಈ ಪ್ರಾಂತ್ಯವನ್ನು ಗೆದ್ದು ತಮ್ಮ ವಶಕ್ಕೆ ಪಡೆದರು. ೧೭೭೪ ರಲ್ಲಿ ಟಿಪ್ಪು ಸುಲ್ತಾನನು ತನ್ನ ತಂದೆ ಹೈದರ್ ಅಲಿ ಗಾಗಿ ಮತ್ತೆ ಈ ಪ್ರಾಂತ್ಯವನ್ನು ತನ್ನ ವಶಕ್ಕೆ ಪಡೆದುಕೊಂಡನು.
ಇಂತಹ ಐತಿಹಾಸಿಕ ಹಿನ್ನಲೆ ಇರುವ ಕೋಟೆಯು ಶಿಥಿಲಾವಸ್ಥೆ ತಲುಪಿದ್ದು ವಿಪರ್ಯಾಸ. ಯಾವುದೆ ವಸ್ತುವಾಗಲಿ ಕಟ್ಟಡ, ಕೋಟೆಗಳಾಗಲಿ ಅದರ ಮೂಲ ರೂಪದೊಂದಿಗಿದ್ದರೆ ಚೆನ್ನ. ಇದೆಲ್ಲದರ ನಡುವೆ ತಡವಾಗಿಯಾದರು, ಕೋಟೆಯನ್ನು ಪುನಶ್ಚೇತನಗೊಳಿಸುವ ಕಾರ್ಯ ಶುರುವಾಗಿರುವುದು ಸಂತಸದ ವಿಚಾರ.ದರಣಿಕುಮಾರನಾಯಕ ಸಿರಾ
ಶಿರಾ ತಾಲೂಕಿನ ಪ್ರಮುಖ ಸ್ಥಳಗಳು
[ಬದಲಾಯಿಸಿ]- ಮಾಗೋಡು ಗೊಲ್ಲರಹಟ್ಟಿ : ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಒಂದು ಗ್ರಾಮ.ಇದು ಶಿರಾ ನಗರದಿಂದ ೧೦ ಕಿ ಮೀ ದೂರದಲ್ಲಿದೆ ಇಲ್ಲಿ ಪ್ರತಿ ವರ್ಷ ಪೆಬ್ರವರಿ ತಿಂಗಳಿನಲ್ಲಿ ಕಾಡು ಗೊಲ್ಲರಾದ (ಗೊಲ್ಲ) 'ದಾಸರಚನ್ನಪ್ಪನ ವಂಶಸ್ಥರಿಂದ' "ಶ್ರೀ ಕಂಬದ ರಂಗನಾಥ ಸ್ವಾಮಿಯ ಹೂವಿನ ರಥೋತ್ಸವ " ವೈಭವದಿಂದ ನಡೆಯುತ್ತದೆ. ಈ ಜಾತ್ರಾ ಮಹೋತ್ಸವಕ್ಕೆ ರಾಜಧಾನಿಯಿಂದಲೂ ಸಹ ಆಗಮಿಸುತ್ತಾರೆ. ಇದು 'ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ '
- ೭೦೦ ವರುಷ ದೇವಸ್ಥಾನವು ಇದೆ. ಸಾಕ್ಷಿಹಳ್ಳಿ ಶಿರಾ ತಾಲ್ಲೂಕಿನ ಒಂದು ಹಳ್ಳಿ ಇಲ್ಲಿ ಮಣ್ಣಮ್ಮ ದೇವಿಯ ದೇವಾಲಯವಿದೆ.
- ಕಳುವರಹಳ್ಳಿ ಶಿರಾ ತಾಲ್ಲೂಕಿನ ಒಂದು ಹಳ್ಳಿ ಇಲ್ಲಿ ಸಾಂಸ್ಕ್ರತಿಕ ವೀರನೆಂದೇ ಖ್ಯಾತನಾದ ಕಾಡುಗೊಲ್ಲರ ಕಲಿವೀರ ಜುಂಜಪ್ಪ ದೇವರು ನೆಲೆಸಿದ್ದಾನೆ. ಅಲ್ಲದೇ ಇಲ್ಲಿ ಕರ್ನಾಟಕದ ಹೆಸರಾಂತ ಜಾನಪದ ಕಲೆಯಾದ ಸೋಬಾನ ಪದಗಳು, ಸೋಮನ ಕುಣಿತ, ಮತ್ತು ಅರೆ ವಾದ್ಯ ಕಲಾವಿದರು ಹೆಚ್ಚಾಗಿ ಕಂಡುಬರುತ್ತಾರೆ.
- ಬರಗೂರು ಶಿರಾ ತಾಲೂಕಿನ ಪ್ರಮುಖ ಸ್ಥಳ. ಬರಗೂರು ರಾಮಚಂದ್ರಪ್ಪ ನವರು ಜನಿಸಿದ ಸ್ಥಳ.
- ಕಗ್ಗಲಡು: ಕರ್ನಾಟಕದ ದಕ್ಷಿಣ ಭಾಗದ ತುಮಕೂರು ಜಿಲ್ಲೆ ಯ ಶಿರಾ ತಾಲೂಕಿನಲ್ಲಿರುವ ಒಂದು ಹಳ್ಳಿ. ಸಿರಾ ಪಟ್ಟಣದಿಂದ ಸಿರಾ-ಚೆಂಗಾವರ ರಸ್ತೆಯಲ್ಲಿ ಸುಮಾರು ೯ ಕಿ.ಮಿ. ದೂರದಲ್ಲಿದೆ. ಈ ಹಳ್ಳಿಯಲ್ಲಿರುವ ಮರಗಳಲ್ಲಿ ಬಣ್ಣದ ಕೊಕ್ಕರೆ (painted storks) ಮತ್ತು ನಾರೇಕ್ಯಾತ ಅಥವಾ ಬೂದುಬಕ (grey herons) ಪಕ್ಷಿಗಳು ವಲಸೆ ಬಂದು ತಮ್ಮ ವಂಶಾಭಿವೃದ್ಧಿ ಮಾಡುವುದರಿಂದ ೧೯೯೯ರಿಂದ ಇದೊಂದು ಪಕ್ಷಿಧಾಮವೆಂದು ಗುರುತಿಸಲ್ಪಟ್ಟಿದೆ. ೧೯೯೯ರಲ್ಲಿ ಇಲ್ಲಿನ ಪಕ್ಷಿಧಾಮ ತುಮಕೂರಿನ ವೈಲ್ಡ್ ಲೈಫ್ ಅವೇರ್ ನೇಚರ್ ಕ್ಲಬ್ (WANC) ಎಂಬ ಸರ್ಕಾರೇತರ ಸಂಸ್ಥೆಯಿಂದ ಹೊರಜಗತ್ತಿಗೆ ಪರಿಚಯಿಸಲ್ಪಟ್ಟಿತು
- ಚಿಕ್ಕಹುಲಿಕುಂಟೆ : ಶಿರಾ ತಾಲ್ಲೂಕಿನ ಒಂದು ಚಿಕ್ಕ ಹಾಗು ಸುಂದರ ಹಳ್ಳಿ ಇಲ್ಲಿ ಪ್ರತಿ ವರ್ಷ ಚಿತ್ತಾನಕ್ಷತ್ರದ ದಿನ ಶ್ರಿ ತೊರೆ ರಂಗನಾಥಸ್ವಾಮಿಯ ಜಾತ್ರೆ ನೆಡೆಯುತ್ತದೆ
- "ಪಟ್ಟನಾಯಕನಹಳ್ಳಿ" : ಗುರುಗುಂಡ ಬ್ರಹ್ಮೇಶ್ವರ ಮಠ 8"" ತಾವರೆಕೆರೆಯಶ್ರೀಲಷ್ಮೀಬಂಡಿರಂಗನಾಥಸ್ವಾಮಿಯ ದೇವಾಲಯ ಐತಿಹಾಸಿಕ ಕಲ್ಲುಗಾಲಿರಥ ಪ್ರತಿವರ್ಷ ರಥಸಪ್ತಮಿಯಂದು ನೇಡೆಯುತ್ತದೇ
ದೊಡ್ಡಗುಲ: ಸಿರಾ ತಾಲೂಕಿನ ಪ್ರಮುಖ ಪ್ರೇಕ್ಷಣೀಯ ಸ್ಥಳ ಎಂದು ಕರೆಸಿಕೊಳ್ಳುವ ದೊಡ್ಡಗುಲದಲ್ಲಿ ಬನಶಂಕರಿ ಅಮ್ಮನವರ ದೇವಸ್ಥಾನ ಇದೆ ಇದು ತುಂಬಾ ಪ್ರಸದ್ಧವಾಗಿದೆ
- ಹುಳಿಗೆರೆ ಶ್ರೀ ಕೋಡಿ ವೀರಪ್ಪ ಸ್ವಾಮಿ. ಶ್ರೀ ಸ್ವಾಮಿಯ ಜಾತ್ರೆಯು ದಸರಾ ಅಥವಾ ದೀಪಾವಳಿಯ ಸಂದರ್ಭದಲ್ಲಿ ಬಹಳ ಅದ್ಧೂರಿಯಾಗಿ ನಡೆಯುತ್ತದೆ.
೮. ಕ್ಯಾದಿಗುಂಟೆ ಗ್ರಾಮದಲ್ಲಿ ಐತಿಹಾಸಿಕವಾಗಿ ಇರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನವಿದೆ...ಪ್ರತಿ ವರ್ಷ ಶಿವರಾತ್ರಿ ಆಗಿ ೬ ದಿನದಿಂದ ನೆಡೆಯುತ್ತದೆ ...ತುಂಬಾ ಸೊಗಸಾದ ಹಳೆಯ ದೇವಸ್ಥಾನವಿದೆ....
ಶಿರಾ ತಾಲೂಕಿನ ಪ್ರಮುಖ ಬೆಳೆಗಳು
[ಬದಲಾಯಿಸಿ]ಶೇಂಗಾ (ಕಡಲೇಕಾಯಿ) ಬೆಳೆ ತಾಲೂಕಿನ ರೈತರ ಬೆನ್ನೆಲುಬು ಬೆಳೆಯಾಗಿದೆ.
ಹಾಗು ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ರೇಷ್ಮೆ ಹಾಗು ಹತ್ತಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ೨೦೦೫ ರಿಂದೀಚೆಗೆ ರಾಜ್ಯದ ಹೇಮಾವತಿ ನದಿಯಿಂದ ಶಿರಾ ತಾಲೂಕಿನ ಪ್ರಮುಖ ಕೆರೆಗಳಿಗೆ ನೀರು ಬಿಡಲಾಗಿದೆಯಾದರು, ಯಥೇಚ್ಛವಾಗಿ ಕುಡಿಯುವ ನೀರಿಗಾಗಿ ಬಳಸಲಾಗುತ್ತಿದೆ. ಪ್ರಮುಖವಾಗಿ ಇಲ್ಲಿನ ರೈತರು ಮಳೆನೀರನ್ನೇ ಅವಲಂಬಿಸಿದ್ದಾರೆ.
ಶಿರಾ ತಾಲೂಕಿನ ಹೋಬಳಿಗಳು
[ಬದಲಾಯಿಸಿ]- ಕಳ್ಳಂಬೆಳ್ಳ
- ಕಸಬಾ
- ಗೌಡಗೆರೆ
- ಬುಕ್ಕಾಪಟ್ಟಣ
- ಹುಲಿಕುಂಟೆ
ಚಿತ್ರಗಳು
[ಬದಲಾಯಿಸಿ]-
ಶಿರಾ ನಗರಕ್ಕೆ ಸುಸ್ವಾಗತ
-
ಮಾಗೋಡು ಶ್ರೀ ಕಂಬದ ರಂಗನಾಥ ಸ್ವಾಮಿ
-
ಐತಿಹಾಸಿಕ ನಗರ, ಶಿರಾದ ಕೋಟೆ
-
ಕಂಬದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ
-
ಕಗ್ಗಲಡು ಪಕ್ಷಿಧಾಮ
-
ಕಂಬದ ರಂಗನಾಥ ಸ್ವಾಮಿ ತೇರು
-
ಶಿರಾ ನಗರಕ್ಕೆ ಸುಸ್ವಾಗತ
-
ಮಾಗೋಡು ಶ್ರೀ ಕಂಬದ ರಂಗನಾಥ ಸ್ವಾಮಿ
-
ಐತಿಹಾಸಿಕ ನಗರ, ಶಿರಾದ ಕೋಟೆ
-
ಕಂಬದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ
-
ಕಗ್ಗಲಡು ಪಕ್ಷಿಧಾಮ
-
ಕಗ್ಗಲಡು ಪಕ್ಷಿಧಾಮ.
ತಾವರೆಕೆರೆಯ ಶ್ರೀಲಷ್ಮೀಬಂಡಿರಂಗನಾಥಸ್ವಾಮಿದೇವಾಲಯ ಶಿರಾದೂರೆ ರಾಜಾಕಸ್ತೂರಿರಂಗಪ್ಪನಾಯಕರ ಕಾಲದಲ್ಲಿ ನಿರ್ಮಿಸಲಾಗಿದೆ
ಸಾರಿಗೆ: ಶಿರಾ ನಗರದಲ್ಲಿ ಉತ್ತಮವಾದ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಿವೆ ಹಾಗೂ ಕೆಎಸ್ಆರ್ಟಿಸಿ ಬಸ್ ಡಿಪೋ ಸಹ ಇದೆ ಶಿರಾ ನಗರದ ಹೊರವಲಯದಲ್ಲಿ ರೈಲುಮಾರ್ಗ ಸಂಪರ್ಕವು ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ರೈಲು ನಿಲ್ದಾಣ ಸ್ಥಾಪನೆಯಾಗಲಿದೆ ಕರ್ನಾಟಕ ಹಾಗೂ ಇನ್ನೂ ಬೇರೆ ಹೊರರಾಜ್ಯಗಳಿಗೆ ಬಸ್ಸು ಸಂಪರ್ಕ ಇದೆ ಸಿರ ಬಸ್ ನಿಲ್ದಾಣದಿಂದ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಕನಿಷ್ಠ ಅರ್ಧಗಂಟೆಗೊಮ್ಮೆ ವಾಹನ ಸೌಲಭ್ಯವಿದೆ