ಚಿಕ್ಕಹುಲಿಕುಂಟೆ

ವಿಕಿಪೀಡಿಯ ಇಂದ
Jump to navigation Jump to search

ಗ್ರಾಮವು ಶಿರಾ ತಾಲ್ಲೂಕು ಕೇಂದ್ರದಿಂದ ಉತ್ತರಕ್ಕೆ ಕಿ.ಮಿ ದೂರದಲ್ಲಿದ್ದು ಭೌಗೋಳಿಕವಾಗಿ 632 ಹೆಕ್ಟೇರ್ ವಿಸ್ತೀರ್ಣದೆ ಈ ಗ್ರಾಮದ ಎರಡೂ ಬದಿಗೆ ಚಿಕ್ಕಕೆರೆ ಹಾಗು ದೊಡ್ಡಕೆರೆಗಳಿದ್ದು  ಈ ಉರಿಗೆ ಪ್ರವೇಶ ಮಾಡಲು ಎರಡೂ ಕಡೆ ಕೆರೆಯ ಏರಿಯ ಪಕ್ಕದ ರಸ್ತೆಯಿದೆ. ಉರಿನ ಮದ್ಯಭಾಗದಲ್ಲಿ ಹಳೆ ಊರಿನ ಎದುರು ಶ್ರೀ ತೊರೆರಂಗನಾಥ ಸ್ವಾಮಿ ದೇವಸ್ಥಾನವಿದ್ದು . ಪೂರ್ವದ ಅಂಚಿಗೆ ಸಮಾದಪ್ಪ ಹಾಗು ಶ್ರೀ ಲಕ್ಷ್ಮೀ ದೇವಾಲಯ ಪಶ್ಚಿಮಕ್ಕೆ ನೊಣಂಬರ ಕಾಲದ ಐತಿಹಾಸಿಕ ಕಲ್ಲೇಶ್ವರ ದೇವಾಲಯ. ಉತ್ತರಕ್ಕೆ ಗ್ರಾಮದೇವತೆ ಕೊಲ್ಲಾಪುರದಮ್ಮ ದೇವಾಲಯ.  ದಕ್ಷಿಣಕ್ಕೆ ಶನೀಶ್ವರ ದೇವಾಲಯ ಹಾಗು ಚಿಕ್ಕ ಕೆರೆ ಕೊಡಿ ಹತ್ತಿರ ಬೀರಲಿಂಗೇಶ್ವರ ದೇವಾಲಯವಿದೆ. ಗ್ರಾಮದಲ್ಲಿ ಹಲವು ಯುವಕ ಸಂಘಗಳಿದ್ದು ಪ್ರಮುಖವಾಗಿ ಶ್ರೀ ದಿರೋದ್ದಾರ ವಿನಾಯಕ ಗೆಳೆಯರ ಬಳಗ ಹೊಸದಾಗಿ ಶ್ರೀ ವರಸಿದ್ದಿ ವಿನಾಯಕ ಗೆಳೆಯರ ಬಳಗ, ವಿಷ್ಣುವರ್ಧನ್ ಅಭಿಮಾನಿ ಬಳಗ,  ಭಗತ್ ಸಿಂಗ್ ಯುವಸೇನೆ ಇದೆ.

ಕಲೆ ಸಾಹಿತ್ಯ
ಗ್ರಾಮವು ಅನಾದಿ ಕಾಲದಿಂದಲೂ ಜಾನಪದ ಕಲೆಗಳಿಗೆ ಉತ್ತೇಜನ ನೀಡುತ್ತಿದ್ದು  ಕೋಲಾಟ ಹಾಗು ಪಂಢರಪುರಿ ಬಜನೆ ಇಲ್ಲಿಯ ಪ್ರಮುಖ ಕಲೆಗಳು, ದೂರದರ್ಶನ ಬರುವ ಮೊದಲು ಸಂಜೆಯ ವೇಳೆ ದೇವಸ್ಥಾನದ ಹತ್ತಿರ ಹೊಸಬರಿಗೆ ತರಬೇತಿ ಹಾಗು ಎಲ್ಲರಿಗೂ ಮನರಂಜನೆಯನ್ನು ಕೊಡಲಾಗುತ್ತಿತ್ತು ಆದರೆ ಈಗ ಜಾತ್ರೆ ಹಾಗು ಹಬ್ಬ ಹರಿದಿನಗಳಲ್ಲಿ ನೆಡೆಸಲಾಗುತ್ತದೆ. ಇಲ್ಲಿನ ಯುವಕರು ಜಿಲ್ಲಾಮಟ್ಟದ ವರೆಗೂ ಪ್ರದರ್ಶನ ನೀಡಿದ್ದಾರೆ.

ಹಬ್ಬಗಳು ಹಾಗು ದೇವಾಲಯಗಳು

  1. .ಶ್ರೀ ತೊರೆರಂಗನಾಥ ಸ್ವಾಮಿ:

ಶ್ರೀ ರಂಗನಾಥ ಸ್ವಾಮಿ ದೇವಾಲಯವು ಚಿಕ್ಕಹುಲಿಕುಂಟೆ ಯ ಮದ್ಯ ಬಾಗದಲ್ಲಿದ್ದು ವಿಶಾಲವಾದ ಆವರಣ ಹಾಗು ಸುಂದರವಾಗಿದೆ ಇದರ ಒಳಗಡೆ ಮುಕ್ಯವಾಗಿ ಶ್ರೀ ರಂಗನಾಥ ಸ್ವಾಮಿ ಹಾಗು ಅಂಜನೇಯ ಸ್ವಾಮಿ ದೇವರುಗಳನ್ನು ಪ್ರತಿಸ್ತಾಪಿಸಿದ್ದು ಇದರ ಜೊತೆಗೆ ಕದ್ರಿ ನರಸಿಂಹಸ್ವಾಮಿ , ಶ್ರೀರಾಮ ಸೀತೆ ಲಕ್ಷ್ಮಣ , ಬಲಮುರಿ ಗಣಪ ಹಾಗು ಬೃಂದಾವನ ವಿದೆ ಪ್ರತಿ ವರ್ಷ ಚಿತ್ತಾನಕ್ಷತ್ರ ದ ದಿನ ಶ್ರೀ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವ ವು ನಾಲ್ಕು ದಿನಗಳ ಕಾಲ ಬಹಳ ವೈಬವದಿಂದ ಮೊದನೆ ದಿನ ಗಂಗಾ ಪೊಜೆಗೆ ಅಳುವನವರ ಬಂಡಿಯಲ್ಲಿ ಸ್ವಾಮಿಯ ಮೆರವಣಿಗೆ. ಹಾಗೂ ಮಧ್ಯಾಹ್ನ ಶಿರಸಾಷ್ಟಾಂಗ ನಮಸ್ಕಾರಗಳು ಎರಡನೇ ದಿನ ಹುಟ್ಟು ಕೂದಲು ಮೂರನೇ ದಿನ ಗುಗ್ಗರಿ ಬಂಡಿಯನ್ನು ಗೋಂಚಿಕಾರ್ ರವರ ನೇತೃತ್ವದಲ್ಲಿ ಏಲ್ಲಾ ದೇವಾಲಯ ಗಳಿಗೆ ಮೆರವಣಿಗೆ ಹಾಗೂ ಅನ್ನಸಂತರ್ಪಣೆ ಸಂಜೆ ಅದ್ದೂರಿ ಮೆರವಣಿಗೆಯಲ್ಲಿ ಹೂವಿನ ತೇರು ನಾಲ್ಕನೇ ದಿನ ವಸಂತೋತ್ಸವ
ಇತಿಹಾಸ :-

ರಂಗನಾಥಸ್ವಾಮಿಯು ಕುಂಚಿಟಿಗರ ಜಾನಕಲ್ಲು ಕುಲದವರಿಗೆ ಮನೆದೇವರಾಗಿದೆ. ಈ ದೇವರ ಸ್ಥಾಪನೆಯ ಇತಿಹಾಸ ಹೀಗಿದೆ, ಯಾವುದೋ ಊರಿನವರು ತೊರೆಯಲ್ಲಿದ್ದ ಕಂಬವನ್ನು ಕೆರೆಯ ತೂಬಿಗೆ ಹೇರಿಕೊಂಡು ಹೋಗುತ್ತಿದ್ದರು, ಸಾಯಂಕಾಲವಾಗಿ ಇಲ್ಲೇ ಗಾಡಿ ಬಿಟ್ಟುಕೊಂಡು ಉಳಿದುಕೊಂಡರು, ಬೆಳಗಿನ ಜಾವ ಗಾಡಿ ಹೂಡಿದರೂ ಎತ್ತುಗಳು ನೊಗ ಎಳೆಯಲಿಲ್ಲ. ಮೂರು ಜೊತೆ ವರ್ಜಿ ಹಾಕಿದರೂ ಗಾಡಿಯನ್ನು ಎಳೆಯಲಾಗಲಿಲ್ಲ, ಅಲ್ಲಿರುವ ಚಿಕ್ಕ ಬಾಲಕನ ಮೇಲೆ ರಂಗನಾಥ ಸ್ವಾಮಿ ಮಹಿಮೆಯಾಗಿ ನನ್ನನ್ನು ಕೆರೆ ತೂಬಿಗೆ ಹಾಕಲು ತೆಗೆದುಕೊಂಡು ಹೋಗುತ್ತಿರುವಿರಿ, ಆದರೆ ನಾನು ದೈವಿಪಿಂಡ ನಾನು ಎಲ್ಲಿಗೂ ಬರುವನಲ್ಲ, ನಾನು ಇಲ್ಲಿಯೇ ನೆಲೆಗೊಳ್ಳಬೇಕು ಎಂದಿರುವೇನು ನಾನು ಬೇರೇ ಕಡೆ ಬರುವುದಿಲ್ಲ ಎಂದಿತು. ಆಗ ಅವರು ನಾವು ಮೂರು ದಿನ ಕಷ್ಟಪಟ್ಟು ತಂದಿರುವೆವು, ನಾವು ತೆಗೆದುಕೊಂಡು ಹೋಗಲೇ ಬೇಕು ಎಂದು ಇನ್ನು ಹಲವಾರು ಜೊತೆ ವರ್ಜಿ ಹಾಕಿ ಗಾಡಿ ಎಳೆಯಲು ಪ್ರತ್ನಿಸಿದರು ಆದರೆ ಅದು ಸಾದ್ಯವಾಗಲಿಲ್ಲ ಅದ್ದರಿಂದ ಆ ಕಂಬವನ್ನು ಅಲ್ಲೇ ಬಿಟ್ಟು ಹೊರಟರು. ಊರಿನವರು ಇದನ್ನು ನಿರ್ಲಕ್ಷ ಮಾಡಿದರು. ಉರಿನಲ್ಲಿ ನಾನಾ ರೀತಿಯ ಕಷ್ಟಗಳು ಬಂದವು, ಕೊನೆಗೆ ಊರಿನ ಜನ ಶಸ್ತ್ರ ಕೇಳಿದರೆ ಎಲ್ಲರೂ ರಂಗನಾಥನ ಪ್ರತಿಷ್ಠೆಯ ಬಗ್ಗೆ ತಿಳಿಸಿದರು. ಕೊನೆಗೆ ಊರಿನ ಜನ ಗರುಡ ಗಂಬವನ್ನು ಕೆತ್ತಿಸಿ ಸ್ವಾಮಿಯ ದೇವಾಲಯ ನಿರ್ಮಿಸಿದರು.
ಶಿತಿಲವಾಗಿದ್ದ ಈ ದೇವಾಲಯ ವನ್ನು 12-6-2005 ರಲ್ಲಿ ಜೀರ್ಣೋದ್ದಾರ ಮಾಡಲಾಯಿತು.