ಶ್ರೀ ತೊರೆರಂಗನಾಥ ಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ರಂಗನಾಥ ಸ್ವಾಮಿ ದೇವಾಲಯವು ಚಿಕ್ಕಹುಲಿಕುಂಟೆ ಯ ಮದ್ಯ ಬಾಗದಲ್ಲಿದ್ದು ವಿಶಾಲವಾದ ಆವರಣ ಹಾಗು ಸುಂದರವಾಗಿದೆ ಇದರ ಒಳಗಡೆ ಮುಕ್ಯವಾಗಿ ಶ್ರೀ ರಂಗನಾಥ ಸ್ವಾಮಿ ಹಾಗು ಅಂಜನೇಯ ಸ್ವಾಮಿ ದೇವರುಗಳನ್ನು ಪ್ರತಿಸ್ತಾಪಿಸಿದ್ದು ಇದರ ಜೊತೆಗೆ ಕದ್ರಿ ನರಸಿಂಹಸ್ವಾಮಿ , ಶ್ರೀರಾಮ ಸೀತೆ ಲಕ್ಷ್ಮಣ , ಬಲಮುರಿ ಗಣಪ ಹಾಗು ಬೃಂದಾವನ ವಿದೆ ಪ್ರತಿ ವರ್ಷ ಚಿತ್ತಾನಕ್ಷತ್ರ ದ ದಿನ ಶ್ರೀ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವ ವು ನಾಲ್ಕು ದಿನಗಳ ಕಾಲ ಬಹಳ ವೈಬವದಿಂದ ಆಚರಿಸಲಾಗುತ್ತದೆ.

ಇತಿಹಾಸ :-

ರಂಗನಾಥಸ್ವಾಮಿಯು ಕುಂಚಿಟಿಗರ ಜಾನಕಲ್ಲು ಕುಲದವರಿಗೆ ಮನೆದೇವರಾಗಿದೆ. ಈ ದೇವರ ಸ್ಥಾಪನೆಯ ಇತಿಹಾಸ ಹೀಗಿದೆ, ಯಾವುದೋ ಊರಿನವರು ತೊರೆಯಲ್ಲಿದ್ದ ಕಂಬವನ್ನು ಕೆರೆಯ ತೂಬಿಗೆ ಹೇರಿಕೊಂಡು ಹೋಗುತ್ತಿದ್ದರು, ಸಾಯಂಕಾಲವಾಗಿ ಇಲ್ಲೇ ಗಾಡಿ ಬಿಟ್ಟುಕೊಂಡು ಉಳಿದುಕೊಂಡರು, ಬೆಳಗಿನ ಜಾವ ಗಾಡಿ ಹೂಡಿದರೂ ಎತ್ತುಗಳು ನೊಗ ಎಳೆಯಲಿಲ್ಲ. ಮೂರು ಜೊತೆ ವರ್ಜಿ ಹಾಕಿದರೂ ಗಾಡಿಯನ್ನು ಎಳೆಯಲಾಗಲಿಲ್ಲ, ಅಲ್ಲಿರುವ ಚಿಕ್ಕ ಬಾಲಕನ ಮೇಲೆ ರಂಗನಾಥ ಸ್ವಾಮಿ ಮಹಿಮೆಯಾಗಿ ನನ್ನನ್ನು ಕೆರೆ ತೂಬಿಗೆ ಹಾಕಲು ತೆಗೆದುಕೊಂಡು ಹೋಗುತ್ತಿರುವಿರಿ, ಆದರೆ ನಾನು ದೈವಿಪಿಂಡ ನಾನು ಎಲ್ಲಿಗೂ ಬರುವನಲ್ಲ, ನಾನು ಇಲ್ಲಿಯೇ ನೆಲೆಗೊಳ್ಳಬೇಕು ಎಂದಿರುವೇನು ನಾನು ಬೇರೇ ಕಡೆ ಬರುವುದಿಲ್ಲ ಎಂದಿತು. ಆಗ ಅವರು ನಾವು ಮೂರು ದಿನ ಕಷ್ಟಪಟ್ಟು ತಂದಿರುವೆವು, ನಾವು ತೆಗೆದುಕೊಂಡು ಹೋಗಲೇ ಬೇಕು ಎಂದು ಇನ್ನು ಹಲವಾರು ಜೊತೆ ವರ್ಜಿ ಹಾಕಿ ಗಾಡಿ ಎಳೆಯಲು ಪ್ರತ್ನಿಸಿದರು ಆದರೆ ಅದು ಸಾದ್ಯವಾಗಲಿಲ್ಲ ಅದ್ದರಿಂದ ಆ ಕಂಬವನ್ನು ಅಲ್ಲೇ ಬಿಟ್ಟು ಹೊರಟರು. ಊರಿನವರು ಇದನ್ನು ನಿರ್ಲಕ್ಷ ಮಾಡಿದರು. ಉರಿನಲ್ಲಿ ನಾನಾ ರೀತಿಯ ಕಷ್ಟಗಳು ಬಂದವು, ಕೊನೆಗೆ ಊರಿನ ಜನ ಶಸ್ತ್ರ ಕೇಳಿದರೆ ಎಲ್ಲರೂ ರಂಗನಾಥನ ಪ್ರತಿಷ್ಠೆಯ ಬಗ್ಗೆ ತಿಳಿಸಿದರು. ಕೊನೆಗೆ ಊರಿನ ಜನ ಗರುಡ ಗಂಬವನ್ನು ಕೆತ್ತಿಸಿ ಸ್ವಾಮಿಯ ದೇವಾಲಯ ನಿರ್ಮಿಸಿದರು.
ಶಿತಿಲವಾಗಿದ್ದ ಈ ದೇವಾಲಯ ವನ್ನು 12-6-2005 ರಲ್ಲಿ ಜೀರ್ಣೋದ್ದಾರ ಮಾಡಲಾಯಿತು.