ಹೇಮಾವತಿ
ಹೇಮಾವತಿ ನದಿ ಕಾವೇರಿ ನದಿಯ ಮುಖ್ಯ ಉಪನದಿಗಳಲ್ಲೊಂದು. ಚಿಕ್ಕಮಗಳೂರು ಜಿಲ್ಲೆಯ ಜಾವಳಿಯ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಉಗಮಿಸುವ ಈ ನದಿ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಕೃಷ್ಣರಾಜಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಬಳಿಯ ಸಂಗಮದಲ್ಲಿ ಕಾವೇರಿ ನದಿಯಲ್ಲಿ ಸೇರ್ಪಡೆಗೊಳ್ಳುತ್ತದೆ. ಹಾಸನ ಜಿಲ್ಲೆಯ ಗೊರೂರಿನಲ್ಲಿ ಹೇಮಾವತಿ ನದಿಗೆ ಅಡ್ಡವಾಗಿ ಅಣೆಕಟ್ಟೆಯನ್ನು ಕಟ್ಟಲಾಗಿದೆ. ಯಗಚಿ ಹೇಮಾವತಿ ನದಿಯ ಮುಖ್ಯ ಉಪನದಿ. ಈ ನದಿಯು ಸುಮಾರು ೨೪೫ ಕಿ.ಮೀ ಉದ್ದ ಹಾಗು ೫೪೧೦ ಕಿ.ಮೀ ಕಾಲುವೆ ಪ್ರದೇಶವನ್ನು ಒಳಗೊಡಿದೆ.
ಹೇಮಾವತಿ ಅಣೆಕಟ್ಟು ಮತ್ತು ಜಲಾಶಯ[ಬದಲಾಯಿಸಿ]
ಹೇಮಾವತಿ ಅಣೆಕಟ್ಟನ್ನು ೧೯೭೯ ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಕಟ್ಟಲು ಶುರುಮಾಡಿದರು.ಶೆಟ್ಟಿಹಳ್ಳಿಯ ರೋಸರಿ ಚರ್ಚ್ ಅಣೆಕಟ್ಟಿನ್ನು ನಿರ್ಮಿಸುವ ಸಂಧರ್ಭದಲ್ಲಿ ಅದು ಪೂರ್ತಿಯಾಗಿ ಮುಚ್ಚಿಹೋಗಿತ್ತು.ಚರ್ಚ್ ನ್ನು ನಾವು ಬೇಸಿಗೆಯ ಸಂಧರ್ಭದಲ್ಲಿ ಕಾಣಬಹುದು.ok
ಚಿತ್ರಶಾಲೆ[ಬದಲಾಯಿಸಿ]
-
Hemavathi Dam,Arakalagud. Hassan
-
Hemavathi water suppy canal
-
Hemavathi water suppy canal (2)
External links[ಬದಲಾಯಿಸಿ]
