ಮಂಡ್ಯ

ವಿಕಿಪೀಡಿಯ ಇಂದ
Jump to navigation Jump to search
ಮಂಡ್ಯ
India-locator-map-blank.svg
Red pog.svg
ಮಂಡ್ಯ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಮಂಡ್ಯ
ನಿರ್ದೇಶಾಂಕಗಳು 12.52° N 76.9° E
ವಿಸ್ತಾರ
 - ಎತ್ತರ
17.03 km²
 - 678 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೧೩೧೨೧೧
 - /ಚದರ ಕಿ.ಮಿ.
Deputy Commissioner B N Krishnaiah IAS [೧]
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 571401
 - +08232
 - KA 11
ಅಂತರ್ಜಾಲ ತಾಣ: www.mandya.nic.in/

ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯ ಎಂಬ ಹೆಸರು 'ಮಾಂಡವ್ಯ ಋಷಿ'ಯಿಂದ ಬಂದದ್ದೆಂದು ಹೇಳಲಾಗುತ್ತದೆ. ಮಂಡ್ಯವು ಮೈಸೂರು ಮತ್ತು ಬೆಂಗಳೂರುನಗರಗಳ ಮಧ್ಯದಲ್ಲಿದ್ದು ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ. ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೧೧ ರ ಜನಗಣತಿಯಂತೆ ಇಲ್ಲಿನ ಜನಸಂಖ್ಯೆ ೧೭,೬೧,೭೧೮(೮೮೭೩೦೭ ಪುರುಷರು, ೮೭೪೪೧೧ ಮಹಿಳೆಯರು). ಇಲ್ಲಿಯ ಜನರ ಪ್ರಮುಖ ಕಸುಬು ಕೃಷಿ. ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ. ಇಲ್ಲಿನ ಜನರು ನೇರ ನುಡಿಗೆ, ಹೃದಯವಂತಿಕೆಗೆ ಹೆಸರಾದವರು. ಮಂಡ್ಯ ನಗರವು ೭೬° ೧೯' ಮತ್ತು ೭೭° ೨೦' ಪೂರ್ವ ರೇಖಾಂಶ ಮತ್ತು ೧೨° ೧೩' ಮತ್ತು ೧೩° ೦೪' ಉತ್ತರ ಅಕ್ಷಾಂಶಗಳಲ್ಲಿನಿರ್ದೇಶಿತವಾಗಿದೆ ಬಿ ಹೊಸೂರು ಮಂಡ್ಯ ೫೭೧೪೦೨
ಟೀ ಮಲ್ಲಿಗೆರೆ ಗ್ರಾಮ ತಗ್ಗಹಳ್ಳಿ ಪೋಸ್ಟ್ ಮಂಡ್ಯ ತಾಲೂಕು ಮಂಡ್ಯ ಡಿಸ್ಟಿಕ್ಟ್ ೫೭೨೪೦೫

ಮಂಡ್ಯದ ಜನತೆ[ಬದಲಾಯಿಸಿ]

ನಿಷ್ಕಲ್ಮಶ ಮನಸ್ಸು, ಪ್ರೀತಿ, ಸ್ನೇಹ, ಬಾಂಧವ್ಯ, ಸಂಸ್ಕಾರ ಸಂಪ್ರದಾಯಕ್ಕೆ ಮತ್ತೊಂದು ಹೆಸರು ಮಂಡ್ಯದ ಜನತೆ.

ಮಂಡ್ಯದ ಜನರು ದಾನ ಧರ್ಮಕ್ಕೆ ಹೆಸರುವಾಸಿ ,ಹಾಗೂ ದೇಹಿ ಎಂದು ಬಂದವರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಾರೆ,ಮಾನವೇ ತಮ್ಮ ಪ್ರಾಣ ಎಂದುಕೊಂಡು ಬದುಕುತ್ತಿದ್ದಾರೆ

ಇಲ್ಲಿ ಒಕ್ಕಲಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ

ಎಂ. ಶ್ರೀನಿವಾಸ್[ಬದಲಾಯಿಸಿ]

ಮಂಡ್ಯ ತಾಲ್ಲೂಕು ಹನಕೆರೆ ಗ್ರಾಮದಲ್ಲಿ 02.02.1951ರಲ್ಲಿ ಜನನ. ತಂದೆ ಮೆಣಸೇಗೌಡ ಹಾಗೂ ತಾಯಿ ಅರಸಮ್ಮ. ರೈತಾಪಿ ಕುಟುಂಬ. ಹನಕೆರೆಯಲ್ಲಿಯೇ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ. ಪ್ರೌಢಶಾಲಾ ಶಿಕ್ಷಣವನ್ನು ಮಂಡ್ಯದ ಸರ್ಕಾರಿ ಪ್ರೌಢಶಾಲೆಯಲ್ಲೂ (ಕಲ್ಲುಕಟ್ಟಡ), ಬಿಎಸ್ಸಿ ಪದವಿಯನ್ನು ಮೈಸೂರಿನ ಎಂಡಿಟಿಡಿಬಿ ಕಾಲೇಜಿನಲ್ಲಿ ಮುಗಿಸಿದ ಶ್ರೀಯುತರು ಕಾನೂನು ಪದವಿಯನ್ನು ಮಂಡ್ಯದ ಹೊಂಬೇಗೌಡ ಕಾನೂನು ಕಾಲೇಜಿನಲ್ಲಿ ಪಡೆದು ವಕೀಲಿ ವೃತ್ತಿಯನ್ನು ಮಂಡ್ಯದಲ್ಲಿಯೇ ಪ್ರಾರಂಭಿಸಿದರು. ಪ್ರಸಿದ್ಧ ವಕೀಲರಾಗಿದ್ದ ಶ್ರೀಯುತ ಹನುಮೇಗೌಡರ ಬಳಿಯಲ್ಲಿ ಕಿರಿಯ ವಕೀಲರಾಗಿ ವಕೀಲಿ ವೃತ್ತಿಯಲ್ಲಿ ಪ್ರಾವೀಣ್ಯತೆಯನ್ನು ಪಡೆದ ಶ್ರೀಯುತರು ಜೊತೆಜೊತೆಗೆ ಸಮಾಜಿಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅದರ ಫಲವಾಗಿ ಮಂಡ್ಯ ಜಿಲ್ಲಾ ರೈತಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಂದಿನ ಕಾಲದಲ್ಲಿ ಪ್ರಬಲವಾಗಿದ್ದ ರೈತಚಳುವಳಿಯ ಸಕ್ರಿಯ ಕಾರ್ಯಕರ್ತರು ಹಾಗೂ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದರು. ಈ ರೈತ ಚಳುವಳಿಯಿಂದ ರೈತಾಪಿ ವರ್ಗದ ಕಷ್ಟನಿಷ್ಠುರಗಳು ಅರಿವಾದವು. ಜೊತೆಗೆ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಅನೇಕ ನಾಯಕರ, ಕಾರ್ಯಕರ್ತರ ಸಂಪರ್ಕ ಒದಗಿಬಂತು. ಓದುತ್ತಿದ್ದಾಗಲೇ ಅಂದಿನ ಮಹಾನಾಯಕರಾಗಿದ್ದ ದಿವಂಗತ ಕೆ.ವಿ. ಶಂಕರಗೌಡರ ರಚನಾತ್ಮಕ ಚಟುವಟಿಕೆಗಳಿಂದ ಪ್ರಭಾವಿತರಾಗಿದ್ದ ಶ್ರೀಯುತರು ಮುಂದೆ ಶಂಕರಗೌಡರಂತೆ ಜನಮುಖಿ ಕೆಲಸಗಳನ್ನು ಮಾಡಬೇಕೆಂಬ ಆದರ್ಶವನ್ನಿಟ್ಟು ಮುನ್ನಡೆದರು. ಸಕ್ರಿಯ ರಾಜಕಾರಣವನ್ನು ಕುರಿತು ಯೋಚಿಸುತ್ತಿರುವಾಗಲೇ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಯುತ್ತದೆ. ಆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶಾಲಿಯಾಗುತ್ತಾರೆ. ಅಲ್ಲಿಂದ ಮುಂದೆ ಆರು ಸಲ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಆಯ್ಕೆಗೊಂಡು ಆ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಒಕ್ಕಲಿಗರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಿನ ಅವರ ಸೇವೆಯನ್ನು ಇಂದಿಗೂ ಅಲ್ಲಿಯ ಉದ್ಯೋಗಿಗಳು ನೆನಪಿಸಿಕೊಳ್ಳುತ್ತಾರೆ. ತನ್ನ ಜಿಲ್ಲೆಯ ಹಲವಾರು ಮಂದಿ ಯುವಕರಿಗೆ ಆ ಸಂಸ್ಥೆಯಲ್ಲಿ ಕೆಲಸ ಕೊಡಿಸಿ ಜೀವನ ನಿರ್ವಹಣೆಗೆ ಅವಕಾಶಮಾಡಿಕೊಡುತ್ತಾರೆ. ಅಲ್ಲೆಲ್ಲಿಯೂ ಅವರಿಗೆ ಕಪ್ಪುಚುಕ್ಕೆ ಅಂಟಿಕೊಳ್ಳದಿರುವುದು ನಿಜಕ್ಕೂ ಶ್ಲಾಘನೀಯ ವಿಚಾರವೇ. ವಕೀಲಿ ವೃತ್ತಿಯಲ್ಲಿ ಸಾಕಷ್ಟು ಸಂಪಾದನೆ ಮಾಡುತ್ತಿದ್ದರೂ ಅವರ ಮನಸ್ಸು ಆ ವೃತ್ತಿಯಲ್ಲಿಯೇ ನೆಲೆಗೊಳ್ಳಲಿಲ್ಲ. ಚುನಾವಣೆಯಲ್ಲಿ ನಿಂತು ಶಾಸಕನಾಗಿ ಜನಸೇವೆಯನ್ನು ಮಾಡಬೇಕೆಂಬ ಹೆಬ್ಬಯಕೆಗೆ ಅವಕಾಶವೊಂದು ಒದಗಿಬಂತು. ದಿವಂಗತ ರಾಮಕೃಷ್ಣ ಹೆಗ್ಗಡೆಯವರ ಕರ್ನಾಟಕ ಜನಶಕ್ತಿಯ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಹದಿನೆಂಟು ಸಾವಿರ ಮತಗಳನ್ನು ಪಡೆಯುತ್ತಾರೆ. ಇದು ಅವರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ. ನಂತರ ನಡೆದ ಚುನಾವಣೆಯಲ್ಲಿ ಜೆಡಿಯು ಪಕ್ಷದಿಂದ ಸ್ಪರ್ಧಿಸಿ ಪರಾಭವ ಹೊಂದುತ್ತಾರೆ. ಇದಕ್ಕೂ ಎದೆಗುಂದದೆ ಆಶಾಭಾವವಿರಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಮೊತ್ತಮೊದಲಿಗೆ ಗೆಲುವು ಸಾಧಿಸುತ್ತಾರೆ. 2009ರಲ್ಲಿ ಮಂಡ್ಯ ಮತ್ತು ಕೆರಗೋಡು ವಿಲೀನಗೊಂಡ ಕ್ಷೇತ್ರದÀ ಶಾಸಕರಾಗಿ ಆಯ್ಕೆಗೊಂಡು ದಾಖಲೆ ನಿರ್ಮಿಸುತ್ತಾರೆ. 2013ರಲ್ಲಿ ಸೋತು 2018ರಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಗೊಳ್ಳುತ್ತಾರೆ. ಶ್ರೀಯುತ ಎಂ. ಶ್ರೀನಿವಾಸ್ ಅವರು ತನ್ನ ಅಧಿಕಾರವನ್ನು ಸ್ವಹಿತಾಸಕ್ತಿಗೆ ಬಳಸಿಕೊಂಡವರಲ್ಲ. ಆಸ್ತಿಪಾಸ್ತಿ ಮಾಡಿಕೊಳ್ಳಲು ಮುಂದಾಗಲಿಲ್ಲ. ಪ್ರತಿನಿತ್ಯ, ಪ್ರತಿಕ್ಷಣ ಬಡವರ, ದಲಿತರ, ರೈತರ, ದಮನಿತರ ಶ್ರೇಯೋಭಿವೃದ್ಧಿಯನ್ನೇ ಜಪಿಸಿದವರು. ಸರಳವಾದ ಬದುಕಿಗೆ, ಹಿತಮಿತವಾದ ಮಾತುಗಾರಿಕೆಗೆ ಹೆಸರಾದ ಶ್ರೀಯುತರು ಯಾವತ್ತೂ ಶ್ರೀಮಂತರನ್ನು ಓಲೈಸಿದವರಲ್ಲ. ಮುಂಚೂಣಿ ನಾಯಕರ ಬೆನ್ನು ಬಿದ್ದು ಅಧಿಕಾರದ ಅವಕಾಶಗಳಿಗಾಗಿ ಹಪಹಪಿಸಿದವರಲ್ಲ. ಸದ್ದುಗದ್ದಲವಿಲ್ಲದೆ ಸರ್ಕಾರದ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತಲೇ ಸಾಗಿರುವ ಶ್ರೀಯುತರು ನಿಗರ್ವಿಗಳು. ಸದಾ ಜನರ ಮಧ್ಯದಲ್ಲೇ ಇರಬಯಸುವ ಶ್ರೀಯುತರ ಬಳಿ ಅಧಿಕಾರದ ದಲ್ಲಾಳಿಗಳಾಗಲೀ, ದೊಡ್ಡ ದೊಡ್ಡ ಕಂಟ್ರಾಕ್ಟರ್‍ಗಳಾಗಲಿ ಯಾವಾಗಲೂ ಸುತ್ತುವರಿದಿರುವುದಿಲ್ಲ. ಒಬ್ಬ ಸಾಮಾನ್ಯ ಮನುಷ್ಯನಿಗೂ ಮಾತಾಡಲು ಅವಕಾಶಮಾಡಿಕೊಡುವ ಶ್ರೀಯುತರು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವಾದಿಗಳು. ಜನನಾಯಕರಾದವರಿಗೆ ಸಾಹಿತ್ಯ, ಕಲೆ, ಸಂಸ್ಕøತಿ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ ಅವರ ವ್ಯಕ್ತಿತ್ವಕ್ಕೊಂದು ಘನತೆ ಬಂದು ಸಹೃದಯತೆ ತಾನೇ ತಾನಾಗಿಯೇ ಅವರನ್ನು ಆವರಿಸಿಕೊಳ್ಳುತ್ತದೆ. ಶ್ರೀಯುತ ಎಂ. ಶ್ರೀನಿವಾಸ್‍ರವರು ಸಾಹಿತ್ಯ ಸಂಸ್ಕøತಿಯ ಬಗ್ಗೆ ಅಪಾರವಾದ ಪ್ರೀತಿಯನ್ನರಿಸಿಕೊಂಡಿದ್ದಾರೆ. ಮಂಡ್ಯದ ಬಹುತೇಕ ಸಾಹಿತ್ಯ ಸಂಘಟನೆಗಳ ಜೊತೆ ನಿಕಟ ಒಡನಾಟವನ್ನಿರಿಸಿಕೊಂಡು ಇಲ್ಲಿಯ ಕಲೆ ಮತ್ತು ಸಂಸÀ್ಕøತಿಗೆ ಒತ್ತು ನೀಡುತ್ತಲೇ ಬಂದಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾಗಿಯೂ ಕೆಲಸ ಮಾಡಿರುವ ಶ್ರೀಯುತರು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿ ರಾಜ್ಯಮಟ್ಟದ ಸಮ್ಮೇಳನದಂತೆ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಮಂಡ್ಯದ ಕರ್ನಾಟಕ ಸಂಘ ಸಂಸ್ಥೆಯ ಪ್ರಧಾನ ಪೋಷಕರಾಗಿ ಅದನ್ನು ರಾಜ್ಯಮಟ್ಟದ ಸಂಸ್ಥೆಯಾಗಿ ರೂಪಿಸುವಲ್ಲಿ ಅವರು ಮಾಡಿರುವ ಪ್ರಯತ್ನ ಬಹುದೊಡ್ಡದು. ಈ ಜಿಲ್ಲೆಯ ಹಿರಿಯ ನಾಯಕರಾಗಿದ್ದ ದಿವಂಗತ ಕೆ.ವಿ. ಶಂಕರಗೌಡರ ಶತಮಾನೋತ್ಸವವನ್ನು 2014-15ರವರೆಗೆ ಆಚರಿಸಿ ಅವರ ನೆನಪಿನಲ್ಲಿ ಅಂದಾಜು ಎರಡೂವರೆ ಕೋಟಿ ವೆಚ್ಚದಲ್ಲಿ ಶಂಕರಗೌಡ ಶತಮಾನೋತ್ಸವ ಭವನ ನಿರ್ಮಾಣಗೊಳ್ಳಲು ಶ್ರಮವಹಿಸಿದ್ದಾರೆ. ವಕೀಲರ ಸಂಘಕ್ಕೊಂದು ಕಟ್ಟಡವನ್ನು ದೊರಕಿಸಿಕೊಡುವುದರಲ್ಲಿ ಅವರ ಪರಿಶ್ರಮವಿದೆ. ಶ್ರೀಯುತ ಎಂ. ಶ್ರೀನಿವಾಸ್ ಅವರು ಶಿಕ್ಷಣ ಪ್ರೇಮಿಯೂ ಹೌದು. ಸುಮಾರು 30 ವರ್ಷಗಳ ಹಿಂದೆಯೇ ತನ್ನ ಹುಟ್ಟೂರು ಹನಕೆರೆಯಲ್ಲಿ ವಿವೇಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ತನ್ನ ಗ್ರಾಮದ ಸುತ್ತಲಿನ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಲು ಮುಂದಾದದ್ದು ಗ್ರಾಮೀಣ ಜನತೆಯ ಬಗ್ಗೆ ಅವರಿಗಿರುವ ತುಡಿತಕ್ಕೆ ಸಾಕ್ಷಿ. ಇಂದು ಆ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕದಿಂದ ಹಿಡಿದು ಹತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಐಟಿಐ ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದಾರೆ. ನೂರು ಜನ ಮಕ್ಕಳಿಗೆ ಉಚಿತವಾಗಿ ಹಾಸ್ಟೆಲ್‍ನ ಸೌಲಭ್ಯವನ್ನು ಒದಗಿಸಿದ್ದಾರೆ. ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಖರ್ಚಿನಿಂದಲೇ ಆಗುಮಾಡುತ್ತಿರುವ ಶ್ರೀಯುತರು ಜನನಾಯಕರಿಗೊಂದು ಆದರ್ಶ. ಆ ಶಿಕ್ಷಣ ಸಂಸ್ಥೆಗೊಂದು ಭವ್ಯವಾದ ಕಟ್ಟಡವನ್ನು ಕಟ್ಟಿ ವಿಶಾಲ ಜಾಗವನ್ನು ಒಳಗೊಳ್ಳುವಂತೆ ಮಾಡಿ ಗ್ರಾಮೀಣ ಪ್ರದೇಶದಲ್ಲೊಂದು ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪಿಸುತ್ತಿರುವುದು ಶ್ರೀಯುತರ ಹೆಗ್ಗಳಿಕೆಗೆ ಸಾಕ್ಷಿ. ಸನ್ಮಾನ್ಯರು ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಇತ್ತೀಚೆಗೆ ಮಂಡ್ಯದ ಕರ್ನಾಟಕ ಸಂಘದ ನೇತೃತ್ವದಲ್ಲಿ ಅನೇಕ ಸಂಘ ಸಂಸ್ಥೆಗಳು ಶ್ರೀಯುತರನ್ನು ಸನ್ಮಾನಿಸಿ ‘ಮೌನಸಾಧಕ’ನೆಂಬ ಬಿರುದನ್ನಿತ್ತು ಗೌರವಿಸಿವೆ.

ಸ್ನಾತಕೋತ್ತರ ಕೇಂದ್ರಗಳು[ಬದಲಾಯಿಸಿ]

  • ಸರ್ ಎಂ ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ .ತೂಬಿನಕೆರೆ . ಈ ಕಾಲೇಜು ಮಂಡ್ಯ ನಗರದಿಂದ ಎಂಟು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ವ್ಯಾಸಂಗ ಮಾಡಲು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುತ್ತಾರೆ. ಈ ಕಾಲೇಜಿನ ಸುತ್ತಮುತ್ತ ಉತ್ತಮ ಪರಿಸರ ಹೊಂದಿದೆ


  • ಪಿಇಎಸ್ ಸ್ನಾತಕೋತ್ತರ ಕೇಂದ್ರ ಮಂಡ್ಯ. ಈ ಕಾಲೇಜು ಮಂಡ್ಯದ ನಗರದ ಒಳಗೆ ಇದೆ. ಇದು ಒಂದು ಖಾಸಗಿ ಶಿಕ್ಷಣ ಸಂಸ್ಥೆ ಯಾಗಿದ್ದು, ಇಲ್ಲಿ ವ್ಯಾಸಂಗ ಮಾಡಲು ಉತ್ತಮ ಸೌಕರ್ಯಗಳನ್ನು ಒದಗಿಸುತ್ತಾರೆ
  • ಮೆಡಿಕಲ್ ಕಾಲೇಜು

ಕೊತ್ತನಹಳ್ಳಿಯ ಶ್ರೀ ತಾಯಿ ಚೌಡೇಶ್ವರಿ ದೇವಸ್ಥಾನತಾಣಗಳು==

  • ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ 'ಮಗೋಪು' ಬರ್ತ್ ಪ್ಲೇಸ್ ತುಂಬಾ ಪ್ರಸಿದ್ಧವಾದ ಜಾಗ ಮದ್ದೇನಹಟ್ಟಿ

[ಫ್ಯಾಕ್ಟರಿ ವೃತ್ತ ]][ಸಕ್ಕರೆ ನಾಡು] ವಾಡೆ ಮಲ್ಲೇಶ್ವರ ಸ್ವಾಮಿ ದೇವಾಲಯ, ಕುಂತೂರು ಅಭಯ ಆಂಜನೇಯ ದೇವಾಲಯ ಕುಂತೂರು(ಹಲಗೂರು ಚನ್ನಪಟ್ಟಣ ರಸ್ತೆ) ಸೋಮೇಶ್ವರ ದೇವಾಸ್ಥಾನ ಕೀಲಾರ (ಮಂಡ್ಯ ದಿಂದ ೧೨ ಕಿಮೀ} ಬಸವನ ಬೆಟ್ಟ

ತಾಲ್ಲೂಕುಗಳು[ಬದಲಾಯಿಸಿ]

ಮಂಡ್ಯ ತಾಲ್ಲೂಕಿನ ಪ್ರಮುಖ ಗ್ರಾಮಗಳು‍[ಬದಲಾಯಿಸಿ]

ಚಿಕ್ಕಮಂಡ್ಯ, ಮಾರಗೌಡನಹಳ್ಳಿ.ಈಚಗೆರೆ, ಚೋಕನಹಳ್ಳಿ, kommerahalli ಕೀಲಾರ (ಕಲೆಯ ತವರೂರು & ನಿತ್ಯ ಸಚಿವ ಕೆ.ವಿ. ಶಂಕರೇಗೌಡರ ಹುಟ್ಟೂರು), ಎಚ್.ಮಲ್ಲಿಗೆರೆ, ಹುಲಿವಾನ, ಹನಕೆರೆ,ಹೊನಗಳ್ಳಿಮಠ, ಕಚ್ಚಿಗೆರೆ,ಚನ್ನಕ್ಕೇಗೌಡನ ದೊಡ್ಡಿ,,ಬಿ.ಗೌಡಗೆರೆ, ಗೆಜ್ಜಲಗೆರೆ, ಶ್ರೀನಿವಾಸಪುರ, ಸಂತೆಕಸಲಗೆರೆ,ಕೊತ್ತತ್ತಿ,ಭೂತನಹೊಸೂರು,ತಗ್ಗಹಳ್ಳಿ, ಶಿವಳ್ಳಿ, ವಿ ಸಿ ಫಾರ್ಮ್, ಹುಳ್ಳೇನಹಳ್ಳಿ, ಗಾಣದಾಳು, ಹೊಳಲು, ಕನ್ನಲಿ, ಗೋಪಾಲಪುರ, ಸಾತನೂರು, ಉಮ್ಮಡಹಳ್ಳಿ, ಬೂದನೂರು, ಚಂದಗಾಲು, ದುದ್ದ, ತೂಬಿನಕೆರೆ, ಯಲಿಯೂರು, ಇಂಡವಾಳು, ಸೂನಗಹಳ್ಳಿ ಮಂಗಲ, ಶಿವಪುರ, ಬಸರಾಳು, ಜಿ.ಮಲ್ಲಿಗೆರೆ, ಮುತ್ತೇಗೆರೆ,ಎಮ್.ಹ‍‍ಟ್ಣ, ಹಲ್ಲೇಗೆರೆ, ದೊಡ್ಡಗರುಡನಹಳ್ಳಿ, ಕೆರಗೋಡು, ಆಲಕೆರೆ, ಡಣಾಯ೦ಕನಪುರ , ಉಪ್ಪುರುಕನಹಳ್ಳಿ, ಮುದಗಂದೂರು, ಬೇವುಕಲ್ಲು, ಬಿ.ಹೊಸೂರು, ಹೊಡಾಘಟ್ಟ,, ಪಣಕನಹಳ್ಳಿ, ಕಬ್ಬನಹಳ್ಳಿ, ಹೆಮ್ಮಿಗೆ, ಹಳೆಬೂದನೂರು, ಬೇಲೂರು, ಎರಹಳ್ಳಿ, ಕಾಗೇಹಳ್ಳದ ದೊಡ್ಡಿ, ಗುತ್ತಲು, ಯತ್ತಗದಹಳ್ಳಿ, ಕುರುಬರದೊಡ್ಡಿ, ಮುದು೦ಗೆರೆ,ಬೇವುಕಲ್ ಹ‍‍ಟ್ಣ. ಎಂ.ಮಲ್ಲೇನಹಳ್ಳಿ ಹುಲಿಕೆರೆ ಹನಗನಹಳ್ಳಿ, ಮೊತ್ತಹಳ್ಳಿ

ಕೃಷ್ಣರಾಜಪೇಟೆ ತಾಲ್ಲೂಕಿನ ಪ್ರಮುಖ ಗ್ರಾಮಗಳು‍[ಬದಲಾಯಿಸಿ]

ಹೊಸಹೊಳಲು, ಬೂಕನಕೆರೆ (ಬಿ ಎಸ್ ಯಡಿಯೂರಪ್ಪ ಅವರು ಹುಟ್ಟೂರು), ಕಿಕ್ಕೇರಿ, ಹರಿಹರಪುರ, ರಾಜೇನಹಳ್ಳಿ, ಬಲ್ಲೇನಹಳ್ಳಿ, ದೊಡ್ಡಗಾಡಿಗನಹಳ್ಳಿ,(ಮಂಜುಮಂಡ್ಯ ಊರು) ಜಿಗೆರೆ, ಮುದುಗೆರೆ, ಮಾವಿನಕೆರೆ, ಸೋಮನಹಳ್ಳಿ, ಸಿಂಧಘಟ್ಟ, ವಿಠಲಾಪುರ, ಐಚನಹಳ್ಳಿ, ಮುರುಕನಹಳ್ಳಿ, ಗೋವಿಂದನ ಹಳ್ಳಿ, ಭೂವರಹನಾಥ ಕಲ್ಲಹಳ್ಳಿ, ಬೆಟ್ಟದ ಹೊಸೂರು,

=== ಮದ್ದೂರು ತಾಲ್ಲೂಕಿನ ಪ್ರಮುಖ ಗ್ರಾಮಗಳು‍ === ಬಿದರಕೋಟೇ ಮಾರಸಿ೦ಗನಹಳ್ಳಿ , ಬೆಸಗರಹಳ್ಳಿ, ಬೆಸಗರಹಳ್ಳಿ ಅಡ್ಡರಸ್ತೆ , ಮಾದರಹಳ್ಳಿ,ವಳಗೆರೆಹಳ್ಳಿ,ಚನ್ನೆಗೌಡನದೋಡ್ಡಿ(ಹೆಚ್.ಕೆ.ವಿ.ನಗರ)' ಎಸ್.ಐ.ಹೊನ್ನಲಗೆರೆ,ವಳಗೆರೆಹಳ್ಳಿ, ಕೊಕ್ಕರೆಬೆಳ್ಳೂರು, ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ, ಮೆಣಸಗೆರೆ, ಕೆ.ಎಂ.ದೊಡ್ಡಿ, ಆತಗೂರು, ನಿಢಗಟ್ಟ, ಹೆಮ್ಮನಹಳ್ಳಿ , ಕೊಪ್ಪ, ರಾ೦ಪುರ , ಹೊ೦ಬಾಳೆಗೌಡನ ದೊಡ್ಡಿ , ಮುಡೀನಹಳ್ಳಿ,ವಳಗೆರೆಹಳ್ಳಿ, ಗೊರವನಹಳ್ಳಿ, ವೈದ್ಯನಾಥಪುರ, ನೀಲಕಂಠನ ಹಳ್ಳಿ, ಆಲೂರು, ಕೆ.ಹೊನ್ನಲಗೆರೆ,ಚುಂಚಗಹಳ್ಳಿ, ಕಬ್ಬಾರೆ,ಕೊಕ್ಕರೆ ಬೆಳ್ಳೂರು, ಹುಲಿಕೆರೆ,ಹಳ್ಳಿಕೆರೆ, ನಂಬಿನಾಯಕನಹಳ್ಳಿ , ಸಾದೊಳಲು, ನಗರಕೆರೆ, ಅರಳಕುಪ್ಪೆ, ಕೂಳಗೆರೆ, ತೊರೆ ಬೊಮ್ಮನಹಳ್ಳಿ, ಅಣ್ಣೂರು, ಕೌಡ್ಲೆ, ಬೆಕ್ಕಳಲೆ, ಕಿರಂಗೂರು, ಹೊಸಗಾವಿ, ಧರಮನ ಕಟ್ಟೆ, ಕಾಡುಕೊತ್ತನಹಳ್ಳಿ, ಆಬಲವಾಡಿ, ದೇಶಹಳ್ಳಿ, ಶ೦ಕರಪುರ , ಚಾಪುರದೊಡ್ಡಿ , ಚಾಮನಹಳ್ಳಿ, ಮರಳಿಗ, ಗೆಜ್ಜಲಗೆರೆ, ಕದಲೂರು, ಸೋಮನಹಳ್ಳಿ, ಅರುವನಹಳ್ಳಿ, ಹುಳಗನಹಳ್ಳಿ,ಹೊನ್ನಾಯಕ್ಕನಹಳ್ಳಿ, ಅಂಬರಹಳ್ಳಿ ,ಕೆ.ಕೊಡಿಹಳ್ಳಿ , ಶಿವಪುರ. ತೋರೆಶೆಟ್ಟಹಳ್ಳಿ, ಮಲ್ಲನಕುಪ್ಪೆ, ಹನುಮಂತನಗರ, ನಾಗನದೊಡ್ಡಿ ,ಕಣಿಕೆಂಪನ ದೊಡ್ಡಿ, ಮುಳ್ಳಹಳ್ಳಿ ,ನಿಲುವಾಗಿಲು ,ಕೋಡಿಹಳ್ಳಿ ,ದೇವೇಗೌಡನದೊಡ್ಡಿ,ಬನ್ನಹಳ್ಳಿ ಕೂಳಗೆರೆ

ಪಾಂಡವಪುರ ತಾಲ್ಲೂಕಿನ ಪ್ರಮುಖ ಗ್ರಾಮಗಳು[ಬದಲಾಯಿಸಿ]

ಮೇಲುಕೋಟೆ (ಚಲುವನಾರಯಣಸ್ವಾಮಿ ಸನ್ನಿಧಿ), ಹರವು(ಶ್ರೀ ರಾಮ ದೇವರ ಪ್ರಾಚೀನ ಸ್ಮಾರಕ, ಕ್ರಿ.ಶ ೧೩೬೯ ರಲ್ಲಿ, ವಿಜಯನಗರದ ಮೊದಲನೆ ದೊರೆ, ವೀರ ಬುಕ್ಕಣ್ಣ ಒಡೆಯರ್​ ನಿರ್ಮಿಸಿದರು) , ನರಹಳ್ಳಿ, ಡಿಂಕಾ, ಬೇಬಿಗ್ರಾಮ, ಕಟ್ಟೇರಿ, ಅರಳಕುಪ್ಪೆ, ಮಾಣಿಕ್ಯನಹಳ್ಳಿ, ನಾರಾಯಣಪುರ, ಹೊನಗಾನಹಳ್ಳಿ, ಹಿರಿಮರಳಿ, ಗುಮ್ಮನಹಳ್ಳಿ, ಕೆನ್ನಾಳು, ಬೊಳೆನಹಳ್ಳಿ, ಮೆನಾಗ್ರ, ಮೂಡಲಕೊಪ್ಪಲು, ಶಂಬೂನಹಳ್ಳಿ, ಕೆ.ಬೆಟ್ಟಹಳ್ಳಿ, ಚಿನಕುರುಳಿ (ಸಿ.ಎಸ್. ಪುಟ್ಟರಾಜು) , ಜಕ್ಕನಹಳ್ಳಿ, ಕ್ಯಾತನಹಳ್ಳಿ (ಕೆ.ಎಸ್. ಪುಟ್ಟಣ್ಣಯ್ಯ), ಚೀಕನಹಳ್ಳಿ, ಸುಂಕಾತೊಣ್ಣೂರು, ಚಿಕ್ಕಾಡೆ, ಹಳೇಬೀಡು, ಟಿ.ಎಸ್.ಛತ್ರ, ಇಂಗಲಗುಪ್ಪೆ(ಇ.ಎಸ್. ವೆಂಕಟರಾಮಯ್ಯ), ಕನಗನಮರಡಿ, ಲಕ್ಷ್ಮೀಸಾಗರ(ಸೋಬಾನೆ ಕೃಷ್ಣೇಗೌಡರು - ಕಲಾವಿದ ಪ್ರತಾಪ್.ಲವೆಂಪ್ರ), ಹೊಸಕನ್ನಂಬಾಡಿ, ಬಸ್ತಿಹಳ್ಳಿ , ಬನ್ನಂಗಾಡಿ, ಬೇವಿನಕುಪ್ಪೆ, ಬಳ್ಳೆಹತ್ತಿಗುಪೆ, ಬಳಘಟ್ಟ, ಹೆಗ್ಗಡಹಳ್ಳಿ, ರಾಗಿಮುದ್ದನನಹಳ್ಳಿ, ಪಟ್ಟಸೋಮನಹಳ್ಳಿ, ನರಹಳ್ಳಿ, ಮಹದೇಶ್ವರಪುರ, ತೊಣ್ಣೂರು ಕೆರೆ (ನಂಬಿ ನಾರಾಯಣ ಸ್ವಾಮಿ ಐತಿಹಾಸಿಕ ದೇವಾಲಯ).ಅರಕನಕೆರೆ ದೊಡ್ಡಬ್ಯಾಡರಹಳ್ಳಿ.

ಮಳವಳ್ಳಿ ತಾಲ್ಲೂಕಿನ ಪ್ರಮುಖ ಗ್ರಾಮಗಳು ಬೆಂಡರವಾಡಿ,ಕರಲಕಟ್ಟೆ,ಹೊಸಹಳ್ಳಿ,ಮುತ್ತತ್ತಿ, ಕಿರುಗಾವಲು,ಶಿವನಸಮುದ್ರ,ತೊರೆಕಾಡನಹಳ್ಳಿ,ಸಾವ೦ದಿಪುರ,ಹಾಡ್ಲಿ,ಹುಸ್ಕೂರು,ತಲಗವಾದಿ,ಹೊನ್ನಲಗೆರೆ,ಅಂಚೆದೊಡ್ಡಿ,ಮಿಕ್ಕೇರೆ,ಮಂಚನಹಳ್ಳಿ,ಅಂತರವಳ್ಳಿ,ಯತ್ತಂಬಾಡಿ,ಅಂಕನಹಳ್ಳಿ,ಬುಯ್ಯನದೊಡ್ಡಿ,ಬಸಪುರ,ನಿಟ್ಟೂರು,ಕೋಡಿಹಳ್ಳಿ,ಸಾಗ್ಯ,ಪಂಡಿತಹಳ್ಳಿ.ಕುಲುಮೆದೊಡ್ಡಿ,ಸಿದ್ದಾಪುರ,ಕುಂತೂರು,ದೊಡ್ಡಚನ್ನೀಪುರ,ಪುರುದೊಡ್ಡಿ,ಬಸವನಹಳ್ಳಿ,ಕುಂದುರು,ಹುಲ್ಲೆಗಾಲ,ಹುಲ್ಲಹಳ್ಳಿ,ಅಗಸನಪುರ,ಕೋಡಿಪುರ,ನಿಡಘಟ್ಟ,ಸುಣ್ಣದದೊಡ್ಡಿ,ಹೊಸುರು,ಹೊಸಪುರ,ಬ್ಯಾಡರಹಳ್ಳಿ,ಹಲಗೂರು,ರಾಮಂದೂರ,ಮೇಗಳಪುರ,ಕಂಸಾಗರ.

=ಕೃಷ್ಣರಾಜಪೇಟೆ ತಾಲ್ಲೂಕಿನ ಪ್ರಮುಖ ಗ್ರಾಮಗಳು=ಸಾರಂಗಿ ಅಗ್ರಹಾರಬಾಚಹಳ್ಳಿ, ಆನೆಗೊಳೆ,ಅಘಲಯ, ಬಳ್ಳೇಕೆರೆ, ಅಣ್ಣೇಚಾಕನಹಳ್ಳಿ, ತೆರ್ನೇನಹಳ್ಳಿ, ಕಾಮನಹಳ್ಳಿ,ತೆಂಡೇಕೆರೆ, ಅಕ್ಕಿಹೆಬ್ಬಾಳು, ಬೂಕನಕೆರೆ, ಕಿಕ್ಕೇರಿ, ಸಂತೇಬಾಚಹಳ್ಳಿ, ಶೀಳನೆರೆ, ವಸಂತಪುರ, ರಾಯಸಮುದ್ರ,ಬಲ್ಲೇನಹಳ್ಳಿ, ಬಳ್ಳೇಕೆರೆ, ಬೀರುವಳ್ಳಿ, ಬೂಕನಕೆರೆ, ಬಂಡಿಹೊಳೆ, ಭಾರತಿಪುರ, ಚೌಡೇನಹಳ್ಳಿ, ದಬ್ಬೇಘಟ್ಟ, ಗಂಜಿಗೆರೆ, ಹರಳಹಳ್ಳಿ, ಹರಿಹರಪುರ, ಹಿರಿಕಳಲೆ, ಐಕನಹಳ್ಳಿ, ಐಚನಹಳ್ಳಿ, ಲಕ್ಷ್ಮಿಪುರ, ಮಡುವಿನಕೋಡಿ, ಮಾಕವಳ್ಳಿ, ಮಾದಾಪುರ, ಮುರುಕನಹಳ್ಳಿ, ಮಂದಗೆರೆ, ರಂಗನಾಥಪುರ, ಸಾರಂಗಿ, ಸಿಂಧಘಟ್ಟ, ವಿಠಲಾಪುರ,ಮುದುಗೆರೆ, ಗದ್ದೆಹೊಸೂರು,ಆಲಂಬಾಡಿ,ಇತರೆ

ನಾಗಮಂಗಲ ತಾಲ್ಲೂಕಿನ ಪ್ರಮುಖ ಗ್ರಾಮಗಳು[ಬದಲಾಯಿಸಿ]

ಮಸಗೋನಹಳ್ಳಿ, ತುಪ್ಪದಮಡು, ಕಾಡುಅಂಕನಹಳ್ಳಿ,ಚುಂಚನಗಿರಿ, ನೆಲ್ಲಿಗೆರೆ, ಬೆಳ್ಳೂರು, ಮುತ್ತಲಮ್ಮನ ಶೆಟ್ಟಹಳ್ಳಿ, ಬಸರಾಳು, ದೇವಲಾಪುರ, ಆರಣಿ, ಕರಡಹಳ್ಳಿ, ಮಾಯಿಗೋನಹಳ್ಳಿ, ಹರದನಹಳ್ಳಿ, ಬ್ರಹ್ಮದೇವರಹಳ್ಳಿ, ಲಾಳನಕೆರೆ, ಭೀಮನಹಳ್ಳಿ, ಕದಬಹಳ್ಳಿ, ದೇವಲಾಪುರ, ದೇವರ ಮಲ್ಲನಾಯಕನಹಳ್ಳಿ, ಚುಂಚನಹಳ್ಳಿ, ಚೀಣ್ಯ, ಗುಡೇನಹಳ್ಳಿ, ಕಾಂತಾಪುರ, ಜವರನಹಳ್ಳಿ, ಅಂಚೆಚಿಟ್ಟನಹಳ್ಳಿ, ಹೊನಕೆರೆ, ಬೋಗಾದಿ, ನೆಲ್ಲಿಗೆರೆ, ಹೊನ್ನಾವರ ಗುಡೆಹೊಸಹಳ್ಳಿ, ಚೌಡಗೋನಹಳ್ಳಿ, ಖರಡ್ಯ ಮಾಚಲಘಟ್ಟ, ಕವಡಳ್ಳೀ

ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಮುಖ ಗ್ರಾಮಗಳು[ಬದಲಾಯಿಸಿ]

ಕೊಡಿಯಾಲ, ಹುಣಸನಹಳ್ಳಿ, ರಸಗುಪ್ಪೆ , ಬಲ್ಲೇನಹಳ್ಳಿ, ಮಹದೇವಪುರ, ಸಬ್ಬನಕುಪ್ಪೆ, ಮ೦ಡ್ಯ ಕೊಪ್ಪಲು, ಅರಕೆರೆ, ನೆರಾಲಕೆರೆ, ಗಾಮನಹಳ್ಳಿ, ಪಾಲಹಳ್ಳಿ, ಬೆಳಗೊಳ, ಹುಲಿಕೆರೆ, ಕಪರನಕೊಪ್ಪಲು ಕಿರಂಗೂರು ಬಿ.ಅರ್ ಕೊಪ್ಪಲ್. ಅಚ್ಚಪ್ಪನಕೊಪ್ಪಲು ರಾಂಪುರ, ನಗುವನಹಳ್ಳಿ, ಟಿ.ಎಂ.ಹೊಸೂರು, ಕೃಷ್ಣರಾಜಸಾಗರ, ತಡಗವಾಡಿ, ಅಲಾಗುಡು, ನೀಲನ ಕೊಪ್ಪಲು.

ಪ್ರಸಿದ್ಧ ವ್ಯಕ್ತಿಗಳು[ಬದಲಾಯಿಸಿ]

ಇವರ 'ನಾಂದಿ' ಚಿತ್ರಕ್ಕೆ ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ ದೊರೆಯಿತಲ್ಲದೆ ಕನ್ನಡದಲ್ಲಿ ಹೊಸ ಅಲೆಯ ಚಿತ್ರಕ್ಕೆ ನಾಂದಿ ಹಾಡಿತ್ತು. ಇವರ ಜನ್ಮ ಸ್ಥಳ ಮಳವಳ್ಳಿ

ಹೊಳೆ/ನದಿಗಳು[ಬದಲಾಯಿಸಿ]

ಕೃಷಿ[ಬದಲಾಯಿಸಿ]

ಮಂಡ್ಯ ಜಿಲ್ಲೆಗೆ ಪ್ರಮುಖ ನೀರು ಸರಬರಾಜಿನ ಆಗರ. ಕಾವೇರಿ ನದಿ, ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ. ಇಲ್ಲಿನ ಇತರ ಮುಖ್ಯ ನದಿಗಳೆಂದರೆ ಹೇಮಾವತಿ, ಲೋಕಪಾವನಿ, ಲಕ್ಷ್ಮಣ ತೀರ್ಥ ಮತ್ತು ಶಿಂಷಾ. ಇಲ್ಲಿ ಬೆಳೆಯಲ್ಪಡುವ ಬೆಳೆಗಳಲ್ಲಿ ಮುಖ್ಯವಾದವು ಕಬ್ಬು, ಬತ್ತ, ರಾಗಿ, ತೆಂಗು, ಅವರೆ, ಅಲಸಂದೆ, ಹುಚ್ಚೆಳ್ಳು, ವಾಣಿಜ್ಯ ಬೆಳೆ ರೇಷ್ಮೆ, ಮುಂತಾದವು. ಕಬ್ಬು ಮತ್ತು ಸಕ್ಕರೆ ಉತ್ಪಾದನೆಯ ಕಾರಣ ಮಂಡ್ಯ "ಸಕ್ಕರೆಯ ಜಿಲ್ಲೆ ", "ಮಧುರ ಮಂಡ್ಯ" ಎನಿಸಿಕೊಂಡಿದೆ.


ಜಾತ್ರೆಗಳು[ಬದಲಾಯಿಸಿ]

ಮಂಡ್ಯ ಜಿಲ್ಲಾ ಕೇಂದ್ರದಿಂದ ಹದಿನೈದು ಕಿಲೋಮೀಟರ್ ದೂರವಿರುವ ಆಲಕೆರೆ ಗ್ರಾಮದಲ್ಲಿ 20 ವರ್ಷಗಳಿಗೆ ಒಮ್ಮೆ ಶ್ರೀಶ್ರೀಶ್ರೀ ವೀರಭದ್ರ ಸ್ವಾಮಿ ಕೊಂಡೋತ್ಸವ ವನ್ನು ಆಚರಿಸುತ್ತಾರೆ ಕೊಂಡೋತ್ಸವ ಇಡೀ ಕರ್ನಾಟಕದಲ್ಲಿ ಅತಿ ದೊಡ್ಡ ಕೊಂಡೋತ್ಸವ ವಾಗಿದೆ ಹಾಗೂ ಇಲ್ಲಿ ನಡೆಯುವ ಕೊಂಡೋತ್ಸವ ಕಾರ್ಯಕ್ರಮಕ್ಕೆ ಕನಿಷ್ಟ 5ರಿಂದ6ಲಕ್ಷ ಜನ ಸೇರುತ್ತಾರೆ ಮಂಡ್ಯ ದರ್ಶನ

ಬಾಹ್ಯ ಅಂತರಜಾಲ ತಾಣಗಳು[ಬದಲಾಯಿಸಿ]

  1. http://www.thehindu.com/news/national/karnataka/New-DC-for-Mandya-takes-charge/article14566329.ece
"https://kn.wikipedia.org/w/index.php?title=ಮಂಡ್ಯ&oldid=1001922" ಇಂದ ಪಡೆಯಲ್ಪಟ್ಟಿದೆ