ಚಂದಗಾಲು ಬೋರಪ್ಪ
ಚಂದಗಾಲು ಬೋರಪ್ಪ | |
---|---|
ಹಿನ್ನೆಲೆ ಮಾಹಿತಿ | |
ಜನನ | ೧೫ ಜೂನ್, ೧೯೫೪ ಚಂದಗಾಲು, ಮಂಡ್ಯ, ಕರ್ನಾಟಕ |
ಸಂಗೀತ ಶೈಲಿ | ತತ್ತ್ವಪದ, ಜನಪದ, ರಂಗಗೀತೆ |
ವೃತ್ತಿ | ತತ್ತ್ವಪದ ಗಾಯಕ |
ಚಂದಗಾಲು ಬೋರಪ್ಪ (೧೯೫೪–೨೦೨೦), ನಾಡಿನ ತತ್ತ್ವಪದ ಗಾಯಕರಲ್ಲಿ ಪ್ರಮುಖರು. ತತ್ತ್ವಪದದ ಜೊತೆಜೊತೆಗೆ ಜನಪದ ಗೀತೆಗಳು, ಭಾವಗೀತೆ, ಭಕ್ತಿಗೀತೆ ಮತ್ತು ರಂಗಗೀತೆಗಳ ಹಾಡುವಿಕೆಯಲ್ಲಿ ಹೆಸರಾದವರು. ಮಂಡ್ಯ ತಾಲೂಕಿನ ಚಂದಗಾಲು ಗ್ರಾಮ ಹುಟ್ಟೂರಾದ್ದರಿಂದ ‘ಚಂದಗಾಲು ಬೋರಪ್ಪ’ ಎಂದೇ ಪರಿಚಿತರು.
ತತ್ತ್ವಪದ ಗಾಯಕರಾಗಿ
[ಬದಲಾಯಿಸಿ]ತಮ್ಮದೇ ಒಂದು ತಂಡ ಕಟ್ಟಿ, ಊರೂರು ತಿರುಗಿ, ತತ್ತ್ವಪದಗಳನ್ನು ಜನರಿಗೆ ತಲುಪಿಸಲು ಅಹರ್ನಿಶಿ ದುಡಿದವರು ಬೋರಪ್ಪ. ಸಂತ ಶಿಶುನಾಳ ಶರೀಫ, ಗುರು ಮಹಾಂತೇಶ, ಕನಕದಾಸ ಮೊದಲಾದವರ ಹಾಡುಗಳನ್ನು ದಕ್ಷಿಣ ಕರ್ನಾಟಕದಲ್ಲಿ, ಅದರಲ್ಲೂ ಮಂಡ್ಯ, ಮೈಸೂರು ಭಾಗದಲ್ಲಿ ಜನಪ್ರಿಯವಾಗಿಸಿದವರಲ್ಲಿ ಬೋರಪ್ಪನವರು ಪ್ರಮುಖರು. ಅವರು ಕೊಟ್ಟ ವೇದಿಕೆ ಕಾರ್ಯಕ್ರಮಗಳು ಅಸಂಖ್ಯ[೧][೨]. ಬೋರಪ್ಪನವರು ತಾವು ಕಲಿತ ತತ್ತ್ವಪದಗಳನ್ನು ಸಂರಕ್ಷಿಸುವ ಸಲುವಾಗಿ, "ಶರಣ ತತ್ತ್ವಪದ ಸಾರ" ಎಂಬ ಪುಸ್ತಕವನ್ನು ಸಂಪಾದಿಸಿ, 2012ರಲ್ಲಿ ಪ್ರಕಟಿಸಿದರು[೩]. ಅದಕ್ಕೂ ಮೊದಲು "ಅಕ್ಕ ನೋಡಕ್ಕ" ಮತ್ತು "ಗಂಡಗಂಜಿ ಬದುಕು ಮಾಡಮ್ಮ" ಎಂಬ ತತ್ತ್ವಪದಗಳ ಧ್ವನಿಸುರುಳಿಗಳನ್ನು ಹೊರತಂದರು.
ಪ್ರಶಸ್ತಿಗಳು
[ಬದಲಾಯಿಸಿ]ಹಲವಾರು ಪುರಸ್ಕಾರಗಳಿಗೆ ಬೋರಪ್ಪ ಪಾತ್ರರಾಗಿದ್ದಾರೆ. ಕೆಲವು ಇಲ್ಲಿವೆ.
ಇತ್ಯಾದಿ.
ಉಲ್ಲೇಖಗಳು
[ಬದಲಾಯಿಸಿ]- ↑ "ಕಲಾಪ್ರದರ್ಶನ:ಚಂದಗಾಲು ಬೋರಪ್ಪ ಮತ್ತು ಇತರರು". Vijayakarnataka.com.
- ↑ "ಕನ್ನಡ ಮತ್ತು ಸಂಸ್ಕೃತಿ ಇಲಾಖೆ:ಜನಪದ ಕಲಾಪ್ರದರ್ಶನ". Udayavani.com.
- ↑ Chandrashekar S. (28 Jun 2012). "ತತ್ತ್ವಪದಕಾರರ ಸಮಾವೇಶದಲ್ಲಿ 'ಶರಣ ತತ್ತ್ವಪದ ಸಾರ' ಪುಸ್ತಕ ಬಿಡುಗಡೆ". Vijayakarnataka.com. Retrieved 2 Dec 2020.
- ↑ "ಜಾನಪದ ಲೋಕ ಪ್ರಶಸ್ತಿ ಪ್ರಕಟ". Prajavani.com. 9 Feb 2014. Retrieved 2 Dec 2020.[ಶಾಶ್ವತವಾಗಿ ಮಡಿದ ಕೊಂಡಿ]
- ↑ Prathibha Nandakumar (14 Feb 2014). "Jaanapada loka awards announced". Bangalore Mirror.com. Retrieved 2 Dec 2020.
ಬಾಹ್ಯಕೊಂಡಿಗಳು
[ಬದಲಾಯಿಸಿ]- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಏಪ್ರಿಲ್ 2023
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Short description matches Wikidata
- Articles with hCards
- Infobox musical artist with missing or invalid Background field
- 1954
- ಜನಪದ ಕಲಾವಿದರು
- ೨೦೨೦ ನಿಧನ
- ೧೯೫೪ ಜನನ
- ತತ್ವ್ತಪದಕಾರರು
- ಜನಪದ ಗಾಯಕರು
- ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು