ವಿಷಯಕ್ಕೆ ಹೋಗು

ಸಕ್ಕರೆ ಕಾರ್ಖಾನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಸಕ್ಕರೆ ಕಾರ್ಖಾನೆ

ಸಕ್ಕರೆ ಕಾರ್ಖಾನೆ ಪದವು ಕಚ್ಚಾ ಅಥವಾ ಬಿಳಿ ಸಕ್ಕರೆಯನ್ನು ಉತ್ಪಾದಿಸಲು ಕಬ್ಬನ್ನು ಸಂಸ್ಕರಿಸುವ ಕಾರ್ಖಾನೆಯನ್ನು ಸೂಚಿಸಬಹುದು. ಆಲೆ ಎಂದರೆ ರಸ ತೆಗೆಯಲು ಕಬ್ಬಿನ ಕೋಲುಗಳನ್ನು ಜಜ್ಜುವ ಉಪಕರಣ/ಯಂತ್ರ.[೧]

ಕಬ್ಬಿನಿಂದ ಕಚ್ಚಾ ಸಕ್ಕರೆಯನ್ನು ಉತ್ಪಾದಿಸುವಲ್ಲಿ ಅನೇಕ ಹಂತಗಳಿವೆ:

ಕಬ್ಬನ್ನು ಸ್ವೀಕರಿಸಿ ಕೆಳಗಿಳಿಸುವುದು (ಕಾರ್ಖಾನೆಯಲ್ಲಿ ಕಬ್ಬನ್ನು ಸ್ವೀಕರಿಸುವುದು ಮತ್ತು ಸಾಗಣೆ ವಾಹನಗಳಿಂದ ಅದನ್ನು ಇಳಿಸುವುದು); ಕಬ್ಬಿನ ಸಿದ್ಧತೆ (ರಸ ತೆಗೆಯುವ ಸಲುವಾಗಿ ಸಿದ್ಧಪಡಿಸಲು ಕಬ್ಬನ್ನು ಕತ್ತರಿಸಿ ತುಂಡುಮಾಡುವುದು); ರಸವನ್ನು ತೆಗೆಯುವುದು (ಎರಡು ತಂತ್ರಜ್ಞಾನಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ - ಜಜ್ಜುವುದು ಅಥವಾ ವಿಸರಣ); ರಸವನ್ನು ತಿಳಿಗೊಳಿಸುವುದು (ರಸದಿಂದ ತೇಲುತ್ತಿರುವ ಘನ ಪದಾರ್ಥಗಳನ್ನು ತೆಗೆಯುವುದು, ಸಾಮಾನ್ಯವಾಗಿ ಮಣ್ಣು, ಮೇಣಗಳು, ನಾರುಗಳು); ರಸವನ್ನು ಆವಿಯಾಗಿಸುವುದು (ರಸವನ್ನು ಸುಮಾರು 65 ° ಬ್ರಿಕ್ಸ್‌ನಷ್ಟು ದಟ್ಟ ಪಾಕವಾಗಿ ಸಾರೀಕರಿಸುವುದು); ಪಾಕವನ್ನು ತಿಳಿಗೊಳಿಸುವುದು (ಪಾಕದಿಂದ ತೇಲುವ ಘನ ಪದಾರ್ಥಗಳನ್ನು ತೆಗೆಯುವುದು, ಸಾಮಾನ್ಯವಾಗಿ ಕಲಿಲ ಗಾತ್ರದ ಮಣ್ಣು, ಮೇಣಗಳು, ನಾರುಗಳು ಇತ್ಯಾದಿ); ಹರಳಾಗಿಸುವುದು; ಅಪಕೇಂದ್ರ ಯಂತ್ರದಿಂದ ಬೇರ್ಪಡಿಸುವಿಕೆ (ಸಕ್ಕರೆಯ ಹರಳುಗಳನ್ನು ಅಪಕೇಂದ್ರ ಯಂತ್ರಗಳನ್ನು ಬಳಸಿ ಹರಳಾಗಿಸುವಿಕೆ ನಂತರ ಉಳಿಯುವ ದ್ರಾವಣದಿಂದ ಬೇರ್ಪಡಿಸುವುದು); ಸಕ್ಕರೆಯನ್ನು ಒಣಗಿಸುವುದು; ಪ್ಯಾಕ್ ಮಾಡಿ ಬಟವಾಡೆ ಮಾಡುವುದು.[೨][೩]

ಸಂಸ್ಕರಣದ ಈ ಹಂತಗಳು ಕಂದು ಅಥವಾ ಕಚ್ಚಾ ಸಕ್ಕರೆಯನ್ನು ಉತ್ಪಾದಿಸುತ್ತವೆ. ಮೇಲೆ ತಿಳಿಸಲಾದ ರಸ ತಿಳಿಗೊಳಿಸುವಿಕೆ ಮತ್ತು ರಸದ ಆವಿಯಾಗಿಸುವಿಕೆ ಹಂತಗಳ ನಡುವೆ ಯಾವುದೋ ರೂಪದ ಬಣ್ಣ ತೆಗೆಯುವಿಕೆ ಪ್ರಕ್ರಿಯೆಯನ್ನು (ಹಲವುವೇಳೆ ಸಲ್ಫಿಟೇಶನ್) ಪ್ರವೇಶ ಮಾಡಿಸುವುದರಿಂದ ಬಿಳಿ ಸಕ್ಕರೆಯನ್ನು ತಯಾರಿಸಬಹುದು. ಬಿಳಿ ಸಕ್ಕರೆಯನ್ನು ತಯಾರಿಸಲು ಉತ್ಪಾದಿಸಲಾದ ಕಚ್ಚಾ ಸಕ್ಕರೆಯನ್ನು ಹಲವುವೇಳೆ ಶುದ್ಧೀಕರಿಸಲಾಗುತ್ತದೆ. ಈ ಸಕ್ಕರೆ ಶುದ್ಧೀಕರಣವನ್ನು ಸಂಪೂರ್ಣವಾಗಿ ಬೇರೆ ಕಾರ್ಖಾನೆಯಲ್ಲಿ ಅಥವಾ ಕಚ್ಚಾ ಸಕ್ಕರೆ ಕಾರ್ಖಾನೆಗೆ ಅಡಕವಾದ ಅಧೀನ ಶೋಧನಾಗಾರದಲ್ಲಿ ಮಾಡಬಹುದು.

ಜಜ್ಜುವ ಯಂತ್ರದಿಂದ ರಸ ತೆಗೆಯಬಹುದು. ಭಾರದ ಕಬ್ಬಿಣದ ಉರುಳು ಯಂತ್ರಗಳ ನಡುವೆ ಅಧಿಕ ಒತ್ತಡವನ್ನು ಬಳಸಿ ಕಬ್ಬಿನಿಂದ ರಸವನ್ನು ಹಿಂಡಲಾಗುತ್ತದೆ. ಒಂದು ಯಂತ್ರದಲ್ಲಿ ೩ ರಿಂದ ೬ ಉರುಳುಗಳು  ಇರಬಹುದು. ಯಂತ್ರದಿಂದ ರಸ ಪಡೆಯುವ ದಕ್ಷತೆಯನ್ನು ಸುಧಾರಿಸಲು, ಪ್ರತಿ ಮಿಲ್ಲಿನಲ್ಲಿ ನೀರನ್ನು ಸೇರಿಸಲಾಗುತ್ತದೆ: ಅದು ಕೊನೆಯ ಮಿಲ್ಲನ್ನು ಪ್ರವೇಶಿಸುವ ಸ್ವಲ್ಪ ಮೊದಲು ಕಬ್ಬಿನ ಮೇಲೆ ಬಿಸಿ ನೀರನ್ನು ಸುರಿಯಲಾಗುತ್ತದೆ ಮತ್ತು ಮೊದಲಿನ ಮಿಲ್ಲಿಗೆ ಮುಟ್ಟುವಂತೆ ಪುನಃ ಸುತ್ತಿಸಲಾಗುತ್ತದೆ. ಈ ಕಬ್ಬಿನಿಂದ ಹಿಂಡಲಾದ ರಸದಲ್ಲಿ ಸಕ್ಕರೆಯ ಸಾರ ಕಡಿಮೆ ಇರುತ್ತದೆ ಮತ್ತು ಇದನ್ನು ಇದರ ಹಿಂದಿನ ಮಿಲ್ಲಿಗೆ ಪಂಪ್ ಮಾಡಿ ಕಬ್ಬು ಉರುಳು ಯಂತ್ರಗಳನ್ನು ಪ್ರವೇಶಿಸುವ ಸ್ವಲ್ಪ ಮೊದಲು ಕಬ್ಬಿನ ಮೇಲೆ ಸುರಿಯಲಾಗುತ್ತದೆ, ಈ ಮಿಲ್ಲಿನಿಂದ ಪಡೆದ ರಸವನ್ನು ಇದೇ ರೀತಿ ಹಿಂದೆ ಹಿಂದೆ ಪಂಪ್ ಮಾಡಲಾಗುತ್ತದೆ.[೪]

ಉಲ್ಲೇಖಗಳು[ಬದಲಾಯಿಸಿ]

  1. Steindl, Roderick (2005), Hogarth, DM, ed., "Syrup Clarification for Plantation White Sugar to meet New Quality Standards." Archived 2013-08-10 ವೇಬ್ಯಾಕ್ ಮೆಷಿನ್ ನಲ್ಲಿ. (PDF), Proceedings of the XXV Congress of International Society of Sugar Cane Technologists, Guatemala, Guatemala City, pp. 106–116 
  2. Rein 1995.
  3. Kelly & Porter 1978.
  4. Oates 2008, p. 347.