ಕಬ್ಬು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ತುಂಡರಿಸಲಾದ ಕಬ್ಬು

ಕಬ್ಬು[ಬದಲಾಯಿಸಿ]

ಕಬ್ಬು, (ವರ್ಗೀಕರಣ ಪದ್ಧತಿಯನ್ನು ಆಧರಿಸಿ) ಸ್ಯಾಕರಮ್ ಪಂಗಡದ (ಪೋಯೇಸೀ ಕುಟುಂಬ. ಆಂಡ್ರೊಪೋಗಾನೀ ಬುಡಕಟ್ಟು) ಎತ್ತರದ ಬಹುವಾರ್ಷಿಕ ಹುಲ್ಲುಗಳ ಆರರಿಂದ ಮೂವತ್ತೇಳು ಜಾತಿಗಳ ಪೈಕಿ ಯಾವುದಾದರೂ ಒಂದು. ಏಷ್ಯಾದ ಬೆಚ್ಚಗಿನ ಸಮಶೀತೋಷ್ಣ ಹಾಗೂ ಉಷ್ಣವಲಯದ ಪ್ರದೇಶಗಳಿಗೆ ಸ್ಥಳೀಯವಾದ ಇವು, ಸಕ್ಕರೆಭರಿತ, ಸ್ಥೂಲವಾದ, ಸಂಧಿಗಳಿರುವ, ನಾರುಳ್ಳ ಕಾಂಡಗಳನ್ನು ಹೊಂದಿರುತ್ತವೆ ಮತ್ತು ಎರಡರಿಂದ ಆರು ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯು ತ್ತವೆ. ಎಲ್ಲ ಕಬ್ಬುಜಲ್ಲೆ ಜಾತಿಗಳು ಸಂಕರಿಸಬಲ್ಲವಾಗಿವೆ ಮತ್ತು ಪ್ರಮುಖ ವಾಣಿಜ್ಯ ಕೃಷಿ ಪ್ರಭೇದಗಳು ಸಂಕೀರ್ಣವಾದ ಮಿಶ್ರತಳಿಗಳಾಗಿವೆ.

ಜಗತ್ತಿನಲ್ಲಿ ಕಬ್ಬು[ಬದಲಾಯಿಸಿ]

೨೦೧೨ ರ ಅಂದಾಜಿನ ಪ್ರಕಾರ ಜಗತ್ತಿನಲ್ಲಿ ಹೆಚ್ಚು ಕೃಷಿ ಮಾಡುವ ಬೆಳೆ- ಕಬ್ಬು. ಜಗತ್ತಿನಲ್ಲಿ ೨೦೧೨ ರ ಅಂಕಿ ಅಂಶಗಳಂತೆ ೯೦ ದೇಶಗಳಲ್ಲಿ ಸುಮಾರು ೨೬ ದಶಲಕ್ಷ ಹೆಕ್ಟೇರುಗಳಲ್ಲಿ ಕಬ್ಬನ್ನು ಬೆಳಯಲಾಗುವುದು ಮತ್ತು ಸುಮಾರು ೧.೮೩ ಬಿಲಿಯನ್ ಟನ್ ಸಕ್ಕರೆ ಉತ್ಪಾದನೆ ಆಗುವುದು. ಬ್ರೆಜಿಲ್ ಸಕ್ಕರೆ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೆಯ ಸ್ಥಾನದಲ್ಲಿದೆ. ನಂತರದ ದೇಶಗಳು , ಚೀನಾ, ಥಾಯ್ ಲೆಂಡ್, ಪಾಕಿಸ್ಥಾನ, ಮೆಕ್ಷಿಕೊಗಳಾಗಿವೆ. ಬ್ರೆಜಿಲ್ ಸಕ್ಕರೆ ಉತ್ಪಾದನೆ ಜೊತೆಗೆ ಸಕ್ಕರೆ ಉತ್ಪಾದನೆ ಮಾಡುವಾಗ ಸಿಗುವ ಕಬ್ಬಿನ ಕಾಕಂಬಿಯಿಂದ ಹೇರಳವಾಗಿ ಎಥನಾಲ್ ಗ್ಯಾಸ್‘ನ್ನುಎಥನಾಲ್ ಗ್ಯಾಸ್‘ನ್ನು ಉತ್ಪಾದಿಸುತ್ತದೆ. ಅದನ್ನು ಪೆಟ್ರೋಲ್ ಬದಲಿಗೆ ಉಪಯೋಗಿಸಬಹುದು. ಪೆಟ್ರೋಲಿಗಿಂತ ಅಗ್ಗವಾಗಿರುತ್ತದೆ. ವಿದೇಶಿ ವಿನಿಮಯವೂ ಉಳಿಯುವುದು.

ಭಾರತದಲ್ಲಿ ಕಬ್ಬು[ಬದಲಾಯಿಸಿ]

  • ಭಾರತದಲ್ಲಿ ಇತ್ತೀಚೆಗೆ ಈ ಎಥೆನಾಲ್ ಉತ್ಪಾದನೆಗೆ ಗಮನ ಹರಿಸಲಾಗುತ್ತಿದೆ. ಭಾರತದಲ್ಲಿ ಸಕ್ಕರೆ ಉತ್ಪಾದನೆ ಮತು ಕಬ್ಬಿನ ಕೃಷಿಯ ವಿಸ್ತೀರ್ಣ ಈ ಕೆಳಕಂಡಂತೆ ಇದೆ.
  • 2013-14 ಉತ್ಪಾದನೆ ;;
ಕ್ರಮ ಸಂಖ್ಯೆ- ರಾಜ್ಯ - ಉತ್ಪಾದನೆ ಸಾವಿರ ಟನ್ ಗಳಲ್ಲಿ-- ಕೃಷಿ ಪ್ರದೇಶ ಸಾವಿರ ಹೆಕ್ಟೇರ್ ನಲ್ಲಿ
1) ಉತ್ತರಪ್ರದೇಶ- 136129-ಸಾವಿರಟನ್; 2172 ಸಾವಿರ ಹೆಕ್ಟೇರ್
* 2) ಮಹಾರಾಷ್ಟ್ರ -- 72404 ----; 936; ಸಾವಿರ ಹೆಕ್ಟೇರ್
* 3) ಕರ್ಣಾಟಕ -- 34,666--; 410; ಸಾವಿರ ಹೆಕ್ಟೇರ್
* 4) ತಮಿಙಳುನಾಡು -- 24,792 ; 231.7; ಸಾವಿರ ಹೆಕ್ಟೇರ್
* 5) ಬಿಹಾರ -- 15,065 -; 266.6"
* 6) ಆಂಧ್ರ ಪ್ರದೇಶ -- 14,898 ; 191"
* 7) ಗುಜರಾತ್ -- 11,700-; 180 -"
* 8) ಹರಿಯಾಣ -- 9490 -; 130-"
* 9) ಉತ್ತರಾಖಂಡ್-- 7466 -; 122-"
* 10) ಪಂಜಾಬ್ -- 6720 -; 96 -"
* 11) ಮಧ್ಯ ಪ್ರದೇಶ - 3250 -; 77-"
* 12) ಪಶ್ಚಿಮ ಬಂಗಾಳ - 2100-; 77-"
* 13) ಅಸ್ಸಾಂ- 1060- ; 29 -"
* 14) ಒರಿಸ್ಸಾ - 818 - ; 73.1-"
* 15) ಜಾರ್ಕಂಡ್ - 499 - ; 7.1-"
* 16) ರಾಜಸ್ಥಾನ 343 ; 5.1-"
* 17) ಕೇರಳ - 51 - ; 0.5-"
* 18) ಛತ್ತೀಸ್ Uಡ - 31 ; 11. .2-"
* 19) ಹಿಮಾಚಲ ಪ್ರದೇಶ - 26 - ; 1. 8-"
* 20) ಇತರೆ ಪ್ರದೇಶ - 926- ; 21.7-"
೦೦ ಒಟ್ಟು 3,41,773 ಸಾವಿರ ಟನ್‌ಗಳು ; 4921 ಸಾವಿರ ಹೆಕ್ಟೇರುಗಳು

2014-15ರಲ್ಲಿ ಸಕ್ಕರೆ ಉತ್ಪಾದನೆ[ಬದಲಾಯಿಸಿ]

೧೯೦೫ ರಲ್ಲಿ ಭಾರತದಲ್ಲಿ ಕಬ್ಬು ಅರೆಯುವ ಗಾಣ-ಬೆಲ್ಲ ತಯಾರಕೆ; ಎತ್ತಿ ನ ಬದಲಿಗೆ ಕೋಣನನ್ನು ಕಟ್ಟುತ್ತಾರೆ
  • ದೇಶದಲ್ಲಿ ಸಕ್ಕರೆ ಉತ್ಪಾದನೆಯು ಅಕ್ಟೋಬರ್‌–ಫೆಬ್ರುವರಿ ಅವಧಿಯಲ್ಲಿ ಶೇ 14ರಷ್ಟು ಹೆಚ್ಚಾಗಿದ್ದು, 194 ಲಕ್ಷ ಟನ್‌­ಗಳಷ್ಟಾಗಿದೆ. 2014–15ನೇ ಮಾರುಕಟ್ಟೆ ವರ್ಷದಲ್ಲಿ ಮೊದಲ ಐದು ತಿಂಗಳ (ಅಕ್ಟೋಬರ್‌–ಫೆಬ್ರುವರಿ) ಸಕ್ಕರೆ ಉತ್ಪಾದನೆ ಅಂಕಿ–ಅಂಶವನ್ನು ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಐಎಸ್‌ಎಂಐ) ಮಂಗಳವಾರ ಬಿಡುಗಡೆ ಮಾಡಿದೆ.480px55232
  • ಫೆಬ್ರುವರಿ 28ರವರೆಗೆ ದೇಶದಲ್ಲಿ 511 ಸಕ್ಕರೆ ಕಾರ್ಖಾನೆಗಳು ಒಟ್ಟಾರೆ 194 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಮಾಡಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 455 ಸಕ್ಕರೆ ಕಾರ್ಖಾನೆ­ಗಳು ಒಟ್ಟು 170 ಲಕ್ಷ ಟನ್‌ ಸಕ್ಕರೆ ಉತ್ಪಾದಿಸಿದ್ದವು ಎಂದು ತಿಳಿಸಿದೆ. 2014–15ರಲ್ಲಿ ಒಟ್ಟಾರೆ 260 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಲಿದೆ ಎಂದು ಐಎಸ್‌ಎಂಐ ಅಂದಾಜು ಮಾಡಿದೆ. ಕಳೆದ ಮಾರುಕಟ್ಟೆ ವರ್ಷ­ದಲ್ಲಿ 243 ಲಕ್ಷ ಟನ್‌ ಉತ್ಪಾದಿಸ­ಲಾಗಿತ್ತು. ದೇಶಿ ಬೇಡಿಕೆ ವರ್ಷಕ್ಕೆ 248 ಲಕ್ಷ ಟನ್‌ಗಳಷ್ಟಿದೆ.
  • ದೇಶದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯವಾದ ಮಹಾ­ರಾಷ್ಟ್ರ ಐದು ತಿಂಗಳಿನಲ್ಲಿ 74 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಮಾಡಿದೆ.
  • ಕರ್ನಾಟಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ಪಾದನೆ 30 ಲಕ್ಷ ಟನ್‌ಗಳಿಂದ 32.80 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ.
  • ಕಬ್ಬು ಬಾಕಿ ಏರಿಕೆ: ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರರಿಗೆ ನೀಡಬೇಕಿರುವ ಬಾಕಿ ₨14,500 ಕೋಟಿಗಳಷ್ಟಿದೆ. ಸಕ್ಕರೆ ಬೆಲೆ ಕಳೆದ ವರ್ಷಕ್ಕಿಂತಲೂ ಕಡಿಮೆ ಇದ್ದು, ಕಬ್ಬಿನ ದರ ಹೆಚ್ಚಿದೆ. ಇದರಿಂದಾಗಿ ಬಾಕಿ ಪಾವತಿ ಮೊತ್ತ ಇನ್ನಷ್ಟು ಏರಿಕೆ­ಯಾಗುವ ಸಾಧ್ಯತೆ ಇದೆ ಎಂದು ಐಎಸ್‌ಎಂಐ ಹೇಳಿದೆ. 14 ಲಕ್ಷ ಟನ್‌ಗಳಷ್ಟು ಕೆಂಪು ಸಕ್ಕರೆ ರಫ್ತು ಮಾಡಲು ಸರ್ಕಾರ ಒಂದು ಟನ್‌ಗೆ ₨4 ಸಾವರಿ ಸಬ್ಸಿಡಿ ನೀಡಬೇಕಿದೆ ಎಂದು ತಿಳಿಸಿದೆ.[೨]

ಆಧಾರ[ಬದಲಾಯಿಸಿ]

  • ಮಾಹಿತಿ ಕೇಂದ್ರ ಕೃಷಿಸಚಿವಾಲಯ - ಕಬ್ಬು ; ಪ್ರಜಾವಾಣಿ ವರದಿ ೧೫-೧೨-೨೦೧೩
  • ಇಂಗೀಷ್ ತಾಣ -ಕಬ್ಬು

ನೋಡಿ[ಬದಲಾಯಿಸಿ]

"https://kn.wikipedia.org/w/index.php?title=ಕಬ್ಬು&oldid=544881" ಇಂದ ಪಡೆಯಲ್ಪಟ್ಟಿದೆ