ನರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Foxes
Red fox (Vulpes vulpes)
Scientific classification
Kingdom:
Animalia
Phylum:
Class:
Order:
Family:
Genera

ನರಿ (Fox) ವೈಜ್ಞಾನಿಕ ಹೆಸರು: Canis aureus. ಆಫ್ರಿಕಾ,ಯುರೋಪ್ ಹಾಗೂ ಎಷಿಯಾ ಖಂಡಗಳಲ್ಲಿ ವ್ಯಾಪಕವಾದ ಒಂದು ಪ್ರಾಣಿ. ಅರಣ್ಯಗಳು, ಕುರುಚಲು ಪೊದೆಗಳು ಹಾಗೂ ಬಯಲು ಪ್ರದೇಶಗಳಲ್ಲಿಯೂ ಕಂಡು ಬರುವುದು. ೮ ರಿಂದ ೧೦ ಕೆ.ಜಿ.ಗಳಷ್ಟು ತೂಕವಿರುವ ಇವುಗಳು ಬಿಳಿ, ಕಪ್ಪು, ಕಂದು ಬಣ್ಣಗಳನ್ನು ಹೊಂದಿರುತ್ತವೆ. ಇವುಗಳು ಬೆಳಗಿನ ಜಾವ ಮತ್ತು ಸಂಜೆಗತ್ತಲಿನ ಸಮಯ ಆಹಾರಕ್ಕಾಗಿ ಹೊರಡುವುದು. ಕೋಳಿ, ಕುರಿಮರಿ, ಮೇಕೆ ಹಾಗೂ ದೊಡ್ಡ ಪ್ರಾಣಿಗಳು ತಿಂದು ಉಳಿದ ಮಾಂಸ ಇದರ ಆಹಾರ. ಕಲ್ಲಂಗಡಿ ಹಣ್ಣು, ಎಲಚಿ ಹಣ್ಣು, ಕಬ್ಬು ಮುಂತಾದವುಗಳನ್ನು ತಿನ್ನುತ್ತವೆ. ಇದರ ಆಯಸ್ಸು ಸುಮಾರು ೧೨ ವರ್ಷಗಳು.

"https://kn.wikipedia.org/w/index.php?title=ನರಿ&oldid=1015004" ಇಂದ ಪಡೆಯಲ್ಪಟ್ಟಿದೆ