ಕೋಳಿ
Jump to navigation
Jump to search
ಕೋಳಿಯು (ಗಾಲುಸ್ ಗಾಲುಸ್ ಡೊಮೆಸ್ಟಿಕೂಸ್) ಒಂದು ಪಳಗಿಸಿದ ಹಕ್ಕಿ, ಕೆಂಪು ಕಾಡುಕೋಳಿಯ ಒಂದು ಉಪಪ್ರಜಾತಿ. ದೇಶೀಯ ಪ್ರಾಣಿಗಳ ಪೈಕಿ ಅತಿ ಸಾಮಾನ್ಯ ಹಾಗು ವ್ಯಾಪಕ ಹಾಗು ೨೦೦೩ರಲ್ಲಿ ೨೪ ಬಿಲಿಯಕ್ಕಿಂತ ಹೆಚ್ಚಿನ ಸಂಖ್ಯೆಯಿತ್ತೆಂದು ಅಂದಾಜಿಸಲಾಗಿರುವ ಕೋಳಿ ಇತರ ಯಾವುದೇ ಪಕ್ಷಿ ಪ್ರಜಾತಿಗಳಿಗಿಂತ ಹೆಚ್ಚಿವೆ. ಮಾನವರು ಕೋಳಿಗಳನ್ನು ಪ್ರಮುಖವಾಗಿ ಒಂದು ಆಹಾರ ಮೂಲವಾಗಿ ಇಟ್ಟುಕೊಳ್ಳುತ್ತಾರೆ, ಮತ್ತು ಮಾಂಸ ಹಾಗು ಮೊಟ್ಟೆ ಎರಡನ್ನೂ ಸೇವಿಸುತ್ತಾರೆ.