ಬೆಲ್ಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭಾರತದ ಬೆಲ್ಲದ ಒಂದು ಪೆಂಟೆ

ಬೆಲ್ಲವು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಬಳಸಲಾಗುವ ಒಂದು ಸಾಂಪ್ರದಾಯಿಕ, ಶುದ್ಧೀಕರಿಸದ, ಅಪಕೇಂದ್ರಕವನ್ನು ಉಪಯೋಗಿಸದೆ ತಯಾರಿಸಲಾಗುವ ಸಕ್ಕರೆ. ಅದನ್ನು ನೇರ ಬಳಕೆಗಾಗಿ ತಯಾರಿಸಲಾಗುತ್ತದೆ. ಈ ಬಗೆಯ ಸಕ್ಕರೆಯು ಕಾಕಂಬಿ ಮತ್ತು ಹಳುಕುಗಳ ಬೇರ್ಪಡಿಸುವಿಕೆಯಿಲ್ಲದ ಕಬ್ಬಿನ ರಸದ ಸಾಂದ್ರಿತ ಉತ್ಪನ್ನ, ಮತ್ತು ಇದರ ಬಣ್ಣವು ಬಂಗಾರ ಕಂದು ಅಥವಾ ಗಾಢ ಕಂದು ಇರಬಹುದು. ಇದು ೫೦ ಪ್ರತಿಶತದವರೆಗೆ ಸೂಕ್ರೋಸ್, ೨೦ ಪ್ರತಿಶತದವರೆಗೆ ವಿಲೋಮ ಸಕ್ಕರೆಗಳು, ೨೦ ಪ್ರತಿಶತದವರೆಗೆ ತೇವಾಂಶ, ಮತ್ತು ಉಳಿದಂತೆ ಬೂದಿ, ಪ್ರೋಟೀನ್‌ಗಳು ಹಾಗೂ ಕಬ್ಬಿನ ಸಿಪ್ಪೆಯ ನಾರುಗಳಂತಹ ಇತರ ಕರಗದ ವಸ್ತುವನ್ನು ಹೊಂದಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]


"https://kn.wikipedia.org/w/index.php?title=ಬೆಲ್ಲ&oldid=406267" ಇಂದ ಪಡೆಯಲ್ಪಟ್ಟಿದೆ