ವಿಷಯಕ್ಕೆ ಹೋಗು

ಭಾರತದಲ್ಲಿ ಸಕ್ಕರೆ ಉತ್ಪಾದನೆ ಮತ್ತು ಬಳಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತ ಮತ್ತು ವಿಶ್ವದ ಸಕ್ಕರೆ ಬಳಕೆ

[ಬದಲಾಯಿಸಿ]
ವೇಗವಾಗಿ ನಡೆಯುತ್ತಿರುವ ನಗರೀಕರಣ ಮತ್ತು ಬದಲಾಗು¬ತ್ತಿರುವ ಜನರ ಆಹಾರ ಪದ್ಧತಿಯನ್ನು ಗಮನಿಸಿದರೆ ದೇಶದಲ್ಲಿ ಸಕ್ಕರೆ ಬಳಕೆ ಪ್ರಮಾಣ ಮುಂದಿನ ಐದು ವರ್ಷ¬ಗಳಲ್ಲಿ 290 ಲಕ್ಷ ಟನ್‌ಗಳಿಗಿಂತಲೂ ಅಧಿಕವಾಗಿರಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಂದಾಜು ಮಾಡಿದೆ.
  • ವಿಶ್ವದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ 1687.30 ಲಕ್ಷ ಟನ್‌ಗಳಷ್ಟಿದೆ. ಇದರಲ್ಲಿ ಶೇ 15ರಷ್ಟು ದೊಡ್ಡ ಪಾಲನ್ನು ಹೊಂದುವ ಮೂಲಕ ಅತಿ ಹೆಚ್ಚು ಸಕ್ಕರೆ ಬಳಕೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಿದೆ ಎಂದು ಅಸೋಚಾಂ ಅಧ್ಯಯನದಿಂದ ತಿಳಿದು¬ಬಂದಿದೆ.
  • ದೇಶದ ಸಕ್ಕರೆ ಬಳಕೆ ಪ್ರತಿವರ್ಷ ಸರಾಸರಿ ಶೇ 2ರಷ್ಟು ಪ್ರಮಾಣ¬ದಲ್ಲಿ ಏರಿಕೆ ಕಾಣುತ್ತಲೇ ಇದೆ. ಸದ್ಯ ವರ್ಷಕ್ಕೆ 260 ಲಕ್ಷ ಟನ್‌ ಸಕ್ಕರೆ ಬಳಕೆಯಾಗುತ್ತಿದ್ದು, 2019–20ರ ವೇಳೆಗೆ 293.50 ಲಕ್ಷ ಟನ್‌ಗಳಿಗೆ ತಲುಪಲಿದೆ ಎಂದು ವರದಿ ತಿಳಿಸಿದೆ.ಮೇರೆ ಮೀರಿರುವ ನಗರೀಕರಣ ಮತ್ತು ಆಹಾರ ಸಂಸ್ಕರಣಾ ವಲಯದಲ್ಲಿ ವಿಪರೀತ ಸಿಹಿ ಬಳಕೆಯಿಂದಾಗಿ ದೇಶದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ ಹೆಚ್ಚುತ್ತಿದೆ ಎಂದು ವರದಿ ವಿವರಿಸಿದೆ.
  • ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕೃಷಿ ಪ್ರದೇಶದಲ್ಲಿ ಕಬ್ಬು ಬೆಳೆಯಬೇಕಿದೆ. ಜತೆಗೆ, ಅಧಿಕ ಇಳುವರಿಯ ಕಬ್ಬು ಬೆಳೆಯುವ ಮೂಲಕ ಸಕ್ಕರೆ ಉತ್ಪಾದನೆಯನ್ನು ಹೆಚ್ಚಿಸಬೇಕಾದ ಅಗತ್ಯವೂ ಇದೆ ಎಂದು ಅಸೋಚಾಂ ಅಧ್ಯಯನ ಸಲಹೆ ನೀಡಿದೆ.

-(ವರದಿ : ಪ್ರಜಾವಾಣಿ :11-11-2014)

  • ಭಾರತ ಮತ್ತು ವಿಶ್ವದ ಸಕ್ಕರೆ ಬಳಕೆ
ವರ್ಷ ಭಾರತದ ಬಳಕೆ .
  • ಲಕ್ಷ ಟನ್`ಗಳಲ್ಲಿ
!ವಿಶ್ವದ ಬಳಕೆ
  • ಲಕ್ಷ ಟನ್`ಗಳಲ್ಲ
2008-09 235.00, 1546.27
2009-10 225.00. 155160
2010=11 230.50 56182
2011-12 241.80 159899
2012-13 250.00 165664
2013-14 260.00 168734
2019-20 (293.50)? ?
  • 2014-15-ಭಾರತದಲ್ಲಿ ಸಕ್ಕರೆ ಉತ್ಪಾದನೆ ಅಕ್ಟೋಬರ್‌–ಡಿಸೆಂಬರ್‌ ಅವಧಿಯಲ್ಲಿ ಶೇ 27.3ರಷ್ಟು ಹೆಚ್ಚಳವಾಗಿದ್ದು, 74.60 ಲಕ್ಷ ಟನ್‌ಗಳಿಗೆ ಮುಟ್ಟಿದೆ. 2013–14ರ ಅಕ್ಟೋಬರ್‌–ಡಿಸೆಂಬರ್‌ನಲ್ಲಿ ಸಕ್ಕರೆ ಉತ್ಪಾದನೆ 58.60 ಲಕ್ಷ ಟನ್‌ಗಳಷ್ಟಿತ್ತು,ಎಂದು ಭಾರತೀಯ ಸಕ್ಕರೆ ಕಾರ್ಖಾನೆ­ಗಳ ಒಕ್ಕೂಟ (ಐಎಸ್‌ಎಂಎ) ಹೇಳಿದೆ.(ಪ್ರಜಾವಾಣಿವರದಿ ೬-೧-೨೦೧೫)

ಉತ್ಪಾದನೆ

[ಬದಲಾಯಿಸಿ]
  • ವಿಶ್ವದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ 1687.30 ಲಕ್ಷ ಟನ್‌ಗಳಷ್ಟಿದೆ. ಇದರಲ್ಲಿ ಶೇ 15ರಷ್ಟು ದೊಡ್ಡ ಪಾಲನ್ನು ಹೊಂದುವ ಮೂಲಕ ಅತಿ ಹೆಚ್ಚು ಸಕ್ಕರೆ ಬಳಕೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಿದೆ ಎಂದು ಅಸೋಚಾಂ ಅಧ್ಯಯನದಿಂದ ತಿಳಿದು­ಬಂದಿದೆ.ದೇಶದ ಸಕ್ಕರೆ ಬಳಕೆ ಪ್ರತಿವರ್ಷ ಸರಾಸರಿ ಶೇ 2ರಷ್ಟು ಪ್ರಮಾಣ­ದಲ್ಲಿ ಏರಿಕೆ ಕಾಣುತ್ತಲೇ ಇದೆ. ಸದ್ಯ ವರ್ಷಕ್ಕೆ 260 ಲಕ್ಷ ಟನ್‌ ಸಕ್ಕರೆ ಬಳಕೆಯಾಗುತ್ತಿದ್ದು, 2019–20ರ ವೇಳೆಗೆ 293.50 ಲಕ್ಷ ಟನ್‌ಗಳಿಗೆ ತಲುಪಲಿದೆ.[]

ಕರ್ನಾಟಕದಲ್ಲಿ ಸಕ್ಕರೆ ಉದ್ಯಮ

[ಬದಲಾಯಿಸಿ]
  • ಕರ್ನಾಟಕ ರಾಜ್ಯದಲ್ಲಿ ಒಟ್ಟು 30 ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕಟ್ಟಲಾಗಿದೆ. ಇವುಗಳಲ್ಲಿ 17 ಕಾರ್ಖಾನೆಗಳು ಹಾನಿ ಅನುಭವಿಸಿ ಸ್ಥಗಿತಗೊಂಡಿವೆ. ಈ ಪೈಕಿ, ದೀರ್ಘಕಾಲ ಸ್ಥಗಿತಗೊಂಡ 8 ಕಾರ್ಖಾನೆಗಳನ್ನು 40 ವರ್ಷಗಳ ಲೀಸ್‌ ಮೇಲೆ ನಡೆಸಲು ಖಾಸಗಿ ಉದ್ದಿಮೆಗಳಿಗೆ ಒಪ್ಪಿಸಲಾಗಿದೆ. ಮತ್ತೆ ಐದು ಕಾರ್ಖಾನೆಗಳನ್ನು ಗುತ್ತಿಗೆ ಕೊಡುವ ಬಗ್ಗೆ ಪರಿಶೀಲನೆ ನಡೆದಿದೆ. ನಾಲ್ಕು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕಾಯಂ ಆಗಿ ಸಮಾಪನೆ ಮಾಡಲಾಗಿದೆ. ರಾಜ್ಯದ 30 ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಕೇವಲ 13 ಸಹಕಾರಿ ರಂಗದಲ್ಲಿ ಉಳಿದು ಉತ್ಪಾದನೆಯಲ್ಲಿ ತೊಡಗಿವೆ’.
  • ರಾಜ್ಯದಲ್ಲಿ ಒಂದೇ ಕುಟುಂಬದ ಹಿಡಿತದಲ್ಲಿ ಸಹಕಾರಿ ಮತ್ತು ಖಾಸಗಿ ಕಾರ್ಖಾನೆಗಳಿರುವ ಬಹಳಷ್ಟು ಉದಾಹರಣೆಗಳಿವೆ. ಹೆಚ್ಚು ಸಕ್ಕರೆ ಇಳುವರಿಯ ಉತ್ತಮ ಗುಣಮಟ್ಟದ ಕಬ್ಬನ್ನು ತಮ್ಮ ಖಾಸಗಿ ಕಾರ್ಖಾನೆಗೆ ಕಳುಹಿಸಿ, ಕಳಪೆ ಗುಣಮಟ್ಟದ ಕಬ್ಬನ್ನು ಸಹಕಾರಿ ಕಾರ್ಖಾನೆಗಳಿಗೆ ಹಂಚಿಕೆ ಮಾಡುವ ಸಹಕಾರಿ ಮುಖಂಡರಿದ್ದಾರೆ.
  • ಸಹಕಾರಿ ಸಕ್ಕರೆ ಕಾರ್ಖಾನೆಗಳ ನಿರ್ವಹಣೆಯಲ್ಲಿ ದೇಶಕ್ಕೆ ಗುಜರಾತ್ ರಾಜ್ಯ ಮಾದರಿಯಾಗಿದೆ. ಅಲ್ಲಿ 18 ಸಕ್ಕರೆ ಕಾರ್ಖಾನೆಗಳಿವೆ. ಇವೆಲ್ಲವೂ ಸಹಕಾರಿ ರಂಗಕ್ಕೆ ಸೇರಿವೆ. ಇಲ್ಲಿ ಒಂದೂ ಖಾಸಗಿ ಸಕ್ಕರೆ ಕಾರ್ಖಾನೆ ಇಲ್ಲವೆಂಬುದು ಗಮನಾರ್ಹ. ಈ ಕಾರ್ಖಾನೆಗಳು ಕಬ್ಬಿಗೆ ಅತೀ ಹೆಚ್ಚು ಬೆಲೆ ನೀಡುತ್ತಿರುವುದು ಬಹುದೊಡ್ಡ ಸಾಧನೆ. ಕಾರ್ಖಾನೆ ವಿಷಯದಲ್ಲಿ ಗುಜರಾತಿನಲ್ಲಿ ರಾಜಕೀಯ ಮೇಲಾಟ ನಡೆಯುವುದಿಲ್ಲ. ಆಡಳಿತವು ಪೂರ್ಣ ಪಾರದರ್ಶಕವಾಗಿ ನಡೆಯುತ್ತಿದೆ.
  • ಕರ್ನಾಟಕದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸಹಕಾರಿ ಇಲಾಖೆ ಉಪನಿಬಂಧಕರನ್ನು ಮ್ಯಾನೇಜಿಂಗ್ ಡೈರೆಕ್ಟರ್‌ ಎಂದು ನೇಮಕ ಮಾಡಲಾಗುತ್ತದೆ. ಆದರೆ ಗುಜರಾತಿನಲ್ಲಿ ಸಕ್ಕರೆ ಕೈಗಾರಿಕೆಯಲ್ಲಿ ಪರಿಣತಿ ಪಡೆದ ಹಿರಿಯ ತಜ್ಞರನ್ನು ಎಂ.ಡಿ. ಆಗಿ ನೇಮಿಸಲಾಗುತ್ತದೆ. ತಜ್ಞರೇ ಎಂ.ಡಿ. ಆಗುವುದರಿಂದ ಕಾರ್ಖಾನೆ ವ್ಯವಸ್ಥಿತ ವಾಗಿ ನಡೆಯಲು ಅನುಕೂಲವಾಗುತ್ತದೆ. ಆಡಳಿತ ಮಂಡಳಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಇನ್ನೊಂದು ವಿಶೇಷ. (ಸಕ್ಕರೆ ಸಚಿವ ಎಂ.ಟಿ.ಬಿ. ನಾಗರಾಜ್ ಈಚೆಗೆ ವಿಧಾನಮಂಡಲ ಅಧಿವೇಶನದಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ರಾಜ್ಯದ ಸಹಕಾರಿ ಸಕ್ಕರೆ ಕಾರ್ಖಾನೆಗಳ ಸ್ಥಿತಿಗತಿ ಕುರಿತು ನೀಡಿದ ಉತ್ತರ; ಮತ್ತು ಸಕ್ಕರೆ ಕಾರ್ಖಾನೆಗಳ ಶೋಚನೀಯ ಸ್ಥಿತಿ.)[]

ಉಲ್ಲೇಖ

[ಬದಲಾಯಿಸಿ]