ಭಾರತದಲ್ಲಿ ಚಹಾ ಅಥವಾ ಟೀ ಉತ್ಪಾದನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಭಾರತದಲ್ಲಿ ಚಹಾ ಅಥವಾ ಟೀ ಉತ್ಪಾದನೆ

ಭಾರತದಲ್ಲಿ ಚಹಾ ಇತಿಹಾಸ[ಬದಲಾಯಿಸಿ]

 • History of tea in India
 • ಇತಿಹಾಸಕಾರರ ಪ್ರಕಾರ,ಕ್ರಿ.ಪೂ 200 ರಲ್ಲಿ, ಹ್ಯಾನ್ ಮನೆತನದ ರಾಜ ಜಿಂಗ್ ಹ್ಯಾನ್ ಎನ್ನುವವನು ಚಹಾ ಉಪಯೋಗಿಸುತ್ತಿದ್ದ ದಾಖಲೆಗಳು ಅವನ ಸಮಾಧಿಯಲ್ಲಿ ಸಿಕ್ಕಿವೆ.ಇದರ ಪ್ರಕಾರ ಚಹಾ ಕ್ಕೆ ಕನಿಷ್ಠ 2200 ವರ್ಷಗಳ ಇತಿಹಾಸವಿರುವುದಂತೂ ಸತ್ಯ. ಅಷ್ಟೊಂದು ಹಳೆಯ ಇತಿಹಾಸದ ಚಹಾದ ಮೂಲ ನಾಮಾಂಕಿತದ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಇಂದಿನ ಚಹಾ ಎನ್ನುವ ಹೆಸರು ಬಂದದ್ದು ಕ್ರಿ.ಶ ಎಂಟನೇ ಶತಮಾನದೀಚೆಗೆ.
 • ಇಷ್ಟೊಂದು ಪ್ರಾಚೀನ ಇತಿಹಾಸವಿರುವ ಚಹಾ ಹದಿಮೂರನೇ ಶತಮಾನದವರೆಗೂ ಕೇವಲ ಎಲೆಗಳನ್ನ ಕುದಿಸಿಕೊಂಡು ಕುಡಿಯುವಲ್ಲಿಗೆ ಮಾತ್ರ ಸೀಮಿತವಾಗಿತ್ತು. ಹದಿಮೂರನೇ ಶತಮಾದೀಚೆ ಚಹಾದ ಬೇರೆ ಬೇರೆ ವಿಧಾನಗಳು ಅಭಿವೃದ್ಧಿ ಯಾದದ್ದು.
 • ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಅವತಾರ ಪುರುಷ ಗೌತಮ ಬುದ್ಧ ಮೊಟ್ಟ ಮೊದಲ ಬಾರಿ ಚಹಾ ಸೇವಿಸಿದನೆಂಬ ಒಂದು ಉಲ್ಲೇಖ ಇದೆ.
 • ಕೆಮಿಲಿಯಾ ಸಿನೆನ್ಸಿಸ್ ಎನ್ನುವ ಕಾಡು ಗಿಡದ ಪೇಯವನ್ನ ಶಕ್ತಿವರ್ಧನೆಗಾಗಿ ಔಷಧ ರೂಪವಾಗಿ ನಮ್ಮ ಆಯುರ್ವೇದದಲ್ಲಿ ಕೊಡುತ್ತಿದ್ದರು ಎನ್ನುವ ಉಲ್ಲೆಖ ಕೂಡಾ ಇದೆ.
 • ಆದರೆ ಇತಿಹಾಸದ ಉಲ್ಲೇಖದ ಪ್ರಕಾರ ಹದಿನೆಂಟನೇ ಶತಮಾನದಲ್ಲಿ ಚೈನಾದ ಚಹಾ ಬೆಳೆಯ ಪ್ರಾಬಲ್ಯವನ್ನ ಮೆಟ್ಟಿ ನಿಲ್ಲಲು ಈಸ್ಟ್ ಇಂಡಿಯಾ ಕಂಪನಿಯು ಭಾರತದ ಆಸ್ಸಾಂ ಕಣಿವೆಗಳಲ್ಲಿ ಚಹಾದ ಕೃಷಿಯನ್ನ ವಾಣಿಜ್ಯದ ದೃಷ್ಟಿಯಿಂದ ಆರಂಭಿಸಿದ್ದು ಅಧಿಕೃತವಾಗಿ ಚಹಾ ಭಾರತ ಪ್ರವೇಶಿಸಿದೆ.[೧]

ಚಹಾ ಉತ್ಪಾದನೆ[ಬದಲಾಯಿಸಿ]

೨೦೧೪ರಲ್ಲಿ ಚಹಾಉತ್ಫಾದನೆಯಲ್ಲಿ ಕುಸಿತ -ಒಟ್ಟಾರೆ ಚಹಾ ಉತ್ಪಾದನೆ ಶೇ 6ರಷ್ಟು ಕುಸಿತ ಕಂಡಿದೆ
೨೦೧೪ ರಲ್ಲಿ ಜನವರಿ ಯವರೆಗೆ ಉತ್ಪಾದನೆ -೨೦೬.೩೦ ಲಕ್ಷ ಕಿಲೋಗ್ರಾಂ(206.30 ಲಕ್ಷ ಕೆ.ಜಿ)
೨೦೧೩ ರಲ್ಲಿ ಜನವರಿ ಯವರೆಗೆ ಉತ್ಪಾದನೆ -೨೧೯.೨೦ ಲಕ್ಷ ಕಿಲೋಗ್ರಾಂ(219.20 ಲಕ್ಷ ಕೆ.ಜಿ )
ದಕ್ಷಿಣ ಭಾರತ
೨೦೧೩ ರಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ದಲ್ಲಿ ಜನವರಿಯಲ್ಲಿ ಒಟ್ಟು 192.10 ಲಕ್ಷ ಕೆ.ಜಿ ಲಕ್ಷ ಉತ್ಪಾದನೆ
೨೦೧೪ ರಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ದಲ್ಲಿ ಜನವರಿಯಲ್ಲಿ ಒಟ್ಟು 167.90 ಲಕ್ಷ ಉತ್ಪಾದನೆ[೨]

ಭಾರತದ ಚಹಾ ರಫ್ತು[ಬದಲಾಯಿಸಿ]

೨೦೧೪ ಏಪ್ರಿಲ್‌, ಫೆಬ್ರುವರಿ ಅವಧಿಯಲ್ಲಿ ಚಹಾ ರಫ್ತು ಶೇ 13.24 ರಷ್ಟು ಕುಸಿತ ಕಂಡಿದೆ. ಕೇವಲ 69.56 ಕೋಟಿ ಡಾಲರ್ (ರೂ.4313 ಕೋಟಿ)
೨೦೧೩( 2013) -ಹಿಂದಿನ ವರ್ಷದ ಇದೇ ಅವಧಿಯಲ್ಲಿ 80.18 ಕೋಟಿ ಡಾಲರ್‌ (₨5212 ಕೋಟಿ) ಬೆಲೆಯ ಚಹಾಪುಡಿ ವಿವಿಧ ದೇಶಗಳಿಗೆ ರವಾನೆ ಆಗಿತ್ತು.
ಯುನೈಟೆಡ್‌ ಕಿಂಗ್ಡಂ, ಇರಾಕ್‌ ಮತ್ತು ಯುನೈಟೆಡ್‌ ಅರಬ್‌ ಎಮಿ ರೇಟ್ಸ್‌ ದೇಶಗಳು ಭಾರತದ ಚಹಾಕ್ಕೆ ಮುಖ್ಯ ಮಾರುಕಟ್ಟೆಗಳಾಗಿವೆ. ಈ ಮಧ್ಯೆ, ಪಾಕಿಸ್ತಾನ, ಇರಾನ್‌ ಮತ್ತು ರಷ್ಯಾದಿಂದಲೂ ಭಾರತದ ಚಹಾಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪಾಕಿಸ್ತಾನದಲ್ಲಿ ವಾರ್ಷಿಕ 22 ಕೋಟಿ ಕೆ.ಜಿ ಚಹಾಪುಡಿ ಬಳಕೆಯಾಗುತ್ತಿದ್ದು, ಭಾರತದಿಂದ 2013ರಲ್ಲಿ 2.50 ಕೋಟಿ ಕೆ.ಜಿ ಆಮದು ಮಾಡಿಕೊಂಡಿದೆ. ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ

ಚಹಾ ಉತ್ಪಾದನೆ[ಬದಲಾಯಿಸಿ]

 • ೨೦೧೧-೧೨/2011-12 --೧೦೯೯.೪೬/1099.46 ದಶಲಕ್ಷ-ಕೆ.ಜಿ.
 • ೨೦೧೨-೧೩/2012-13--೧೦೭೩.೯೩/1073.93 ದಶಲಕ್ಷ-ಕೆ.ಜಿ.
 • ೨೦೧೩-೧೪/2013-14--೧೨,೨೪೪/12,244 ದಶಲಕ್ಷ-ಕೆ.ಜಿ
2013-14-ರಲ್ಲಿ
 • ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ನಲ್ಲಿ ಶೇ.೬.೫೨ ರಷ್ಟು ಏರಿಕೆ ಕಂಡಿದೆ.
 • ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಶೇ. ೧೩ ರಷ್ಟು ಹೆಚ್ಚದೆ.[೩][೪]

ನೋಡಿ[ಬದಲಾಯಿಸಿ]

ಚಹಾ

ಉಲ್ಲೇಖ[ಬದಲಾಯಿಸಿ]

 1. ಭಾರತದಲ್ಲಿ ಚಹಾದ ಇತಿಹಾಸವೇನು? ಚಹಾ ಯಾವುದಾದರೂ ಬೇರೆ ದೇಶದಿಂದ ಭಾರತಕ್ಕೆ ಬಂತೇ?
 2. ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳು (ಪ್ರಜಾವಾಣಿ ೨೦-೩-೨೦೧೪)
 3. ಆಧಾರ ಚಹಾ ಮಂಡಳಿ--ವರದಿ(ಪ್ರಚಾರ ಪುಟ) ಪ್ರಜಾವಾಣಿ ೨೨-೫-೨೦೧೪
 4. IBEF