ವಿಷಯಕ್ಕೆ ಹೋಗು

ಚಹಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಹಾ
ಚೈನೀಸ್ ಗೈವಾನ್‍ನಲ್ಲಿ ಹಸಿರು ಚಹಾ ಎಲೆಗಳು.
ಪ್ರಕಾರಬಿಸಿ ಅಥವಾ ತಂಪು ಪಾನೀಯ
ಮೂಲ ದೇಶಚೀನ
ಪರಿಚಯಿಸಿದ್ದುಸುಮಾರು ಕ್ರಿ.ಶ. ೧೦ನೇ ಶತಮಾನ.[]
ಚಹಾದ ಒಂದು ಪೊದೆ.
ನೆಡುತೋಪಿನ ಕೆಲಸಗಾರರು ಟಾಂಝಾನಿಯಾದಲ್ಲಿ ಚಹಾವನ್ನು ಕೊಯ್ಯುತ್ತಿರುವುದು.
ಕೊಹ್ಲರ್‌ನ ಔಷಧೀಯ ಸಸ್ಯಗಳಿಂದ ಪಡೆಯಲಾದ ಚಹಾ ಸಸ್ಯ (ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌).
ಬಿಡಿಬಿಡಿಯಾದ ಶುಷ್ಕ ಚಹಾ ಎಲೆಗಳು

ಚಹಾ ವು ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌ ಸಸ್ಯದ ಎಲೆಗಳು, ಎಲೆಯ ಮೊಗ್ಗುಗಳು, ಹಾಗೂ ಅಂತರಗೆಣ್ಣುಗಳ ವ್ಯಾವಸಾಯಿಕ ಉತ್ಪನ್ನವಾಗಿದ್ದು ಹಲವಾರು ವಿಧಾನಗಳಿಂದ ಇದು ತಯಾರಿಸಲ್ಪಡುತ್ತದೆ ಮತ್ತು ಹದಗೊಳಿಸಲ್ಪಡುತ್ತದೆ. ಬಿಸಿಯಾಗಿರುವ ಅಥವಾ ಕುದಿಯುತ್ತಿರುವ ನೀರಿಗೆ ಹದಗೊಳಿಸಲಾದ ಅಥವಾ ಸಂಸ್ಕರಿಸಲಾದ ಎಲೆಗಳನ್ನು ಮಿಶ್ರಗೊಳಿಸಿ ತಯಾರಿಸಲಾಗುವ ಪರಿಮಳದ ಪಾನೀಯಕ್ಕೂ "ಚಹಾ" ಎಂದೇ ಕರೆಯಲಾಗುತ್ತದೆ ಹಾಗೂ ಇದು ಸ್ವತಃ ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌ ಸಸ್ಯಕ್ಕಿರುವ ಸಾಮಾನ್ಯ ಹೆಸರಾಗಿದೆ.

ನೀರಿನ ನಂತರ, ಚಹಾವು ವಿಶ್ವದಲ್ಲಿ ಅತ್ಯಂತ ವ್ಯಾಪಕವಾಗಿ-ಬಳಸಲಾಗುತ್ತಿರುವ ಪಾನೀಯವಾಗಿದೆ.[] ಇದು ಒಂದು ರೀತಿಯ ತಂಪುಕಾರಕ, ಕೊಂಚವೇ ಕಹಿಯಾದ, ಒಗರು ಪರಿಮಳವನ್ನು ಹೊಂದಿದ್ದು, ಅನೇಕರು ಅದರ ಆನಂದವನ್ನು ಪಡೆಯುತ್ತಾರೆ.[]

ಕಪ್ಪು ಚಹಾ, ಊಲಾಂಗ್‌ ಚಹಾ, ಹಸಿರು ಚಹಾ ಮತ್ತು ಬಿಳಿ ಚಹಾ[]- ಇವು ಮಾರುಕಟ್ಟೆಯಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಚಹಾದ ನಾಲ್ಕು ವಿಧಗಳಾಗಿವೆ. ಅವೆಲ್ಲವನ್ನೂ ಒಂದೇ ಪೊದೆಸಸ್ಯದಿಂದ ತಯಾರಿಸಬಹುದಾಗಿದ್ದರೂ, ಅವುಗಳ ಸಂಸ್ಕರಣೆಯ ಅಥವಾ ಹದಗೊಳಿಸುವ ವಿಧಾನವು ಬೇರೆ ಬೇರೆಯಾಗಿರುತ್ತದೆ. ಬಿಳಿ ಚಹಾಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅದನ್ನು ವಿಭಿನ್ನವಾದ ರೀತಿಯಲ್ಲಿ ಬೆಳೆಯಲಾಗಿರುತ್ತದೆ. ಪು-ಎರ್ಹ್‌ ಚಹಾ ಎಂಬುದು, ಹುದುಗಿಸುವಿಕೆಯ ನಂತರದ ಒಂದು ಚಹಾ ಆಗಿದ್ದು, ಇದನ್ನು ಔಷಧೀಯ ಉದ್ದೇಶಗಳಿಗಾಗಿಯೂ ಅನೇಕ ವೇಳೆ ಬಳಸಲಾಗುತ್ತದೆ.[]

ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌ ನ್ನು ಒಳಗೊಳ್ಳದ ಎಲೆಗಳು, ಹೂವುಗಳು, ಹಣ್ಣು, ಮೂಲಿಕೆ ಸಸ್ಯಗಳು, ಅಥವಾ ಇತರ ಸಸ್ಯ ಸಾಮಗ್ರಿಗಳ ಒಂದು ಮಿಶ್ರಣ ಅಥವಾ ಕಷಾಯಕ್ಕೆ ಸಾಮಾನ್ಯವಾಗಿ "ಮೂಲಿಕಾ ಚಹಾ" ಎಂಬ ಪದವು ಉಲ್ಲೇಖಿಸಲ್ಪಡುತ್ತದೆ.[] "ಕೆಂಪು ಚಹಾ" ಎಂಬ ಪದವು, ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌ ನ್ನು ಒಳಗೊಳ್ಳದ ದಕ್ಷಿಣ ಆಫ್ರಿಕಾರಾಯಿಬಾಸ್‌ ಸಸ್ಯದಿಂದ ತಯಾರಿಸಲಾದ ಒಂದು ಮಿಶ್ರಣಕ್ಕೆ ಉಲ್ಲೇಖಿಸಲ್ಪಡುತ್ತದೆ, ಅಥವಾ ಚೀನಾದ, ಕೊರಿಯಾದ, ಜಪಾನಿನ ಮತ್ತು ಪೂರ್ವ ಏಷ್ಯಾದ ಇತರ ಭಾಷೆಗಳಲ್ಲಿ ಕಪ್ಪು ಚಹಾಕ್ಕೆ ಉಲ್ಲೇಖಿಸಲ್ಪಡುತ್ತದೆ.

ಚೀನಾದ ಸಾಂಪ್ರದಾಯಿಕ ಚಹಾ ಬೇಸಾಯ ಮತ್ತು ತಂತ್ರಜ್ಞಾನಗಳು

[ಬದಲಾಯಿಸಿ]

ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌‌ ಎಂಬುದು ಒಂದು ನಿತ್ಯಹರಿದ್ವರ್ಣ ಸಸ್ಯವಾಗಿದ್ದು ಉಷ್ಣವಲಯದ ಮತ್ತು ಉಪ-ಉಷ್ಣವಲಯದ ಹವಾಮಾನಗಳಲ್ಲಿ ಪ್ರಮುಖವಾಗಿ ಇದು ಬೆಳೆಯುತ್ತದೆ. ಅದೇನೇ ಇದ್ದರೂ, ಕೆಲವೊಂದು ಪ್ರಭೇದಗಳು ಸಮುದ್ರದ ಹವಾಮಾನಗಳನ್ನು ಕೂಡಾ ಸಹಿಸಿಕೊಳ್ಳಬಲ್ಲವು ಮತ್ತು ಬ್ರಿಟಿಷ್‌ ಪ್ರಧಾನ ಭೂಭಾಗ[] ದಲ್ಲಿನ ಪೆಂಬ್ರೋಕ್‌ಷೈರ್‌ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ವಾಷಿಂಗ್ಟನ್‌ನಂಥ ಅತಿದೂರದ ಉತ್ತರ ಭಾಗದ ಪ್ರದೇಶಗಳಲ್ಲಿ ಅವನ್ನು ಬೆಳೆಯಲಾಗುತ್ತದೆ.[]

ಚಹಾ ಸಸ್ಯವಾದ ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌ನ ಎಲೆಗಳು.

ವಲಯ 8ರ ಹವಾಮಾನ ಅಥವಾ ಬೆಚ್ಚಗಿನ ಹವಾಮಾನದ ಜೊತೆಗೆ, ಚಹಾ ಸಸ್ಯಗಳಿಗೆ ಕನಿಷ್ಟಪಕ್ಷ ವಾರ್ಷಿಕವಾಗಿ 50 ಇಂಚುಗಳಷ್ಟು ಮಳೆಯ ಅಗತ್ಯವಿರುತ್ತದೆ ಮತ್ತು ಆಮ್ಲೀಯ ಮಣ್ಣುಗಳ ಕಡೆಗೆ ಅವು ಹೆಚ್ಚಿನ ಒಲವು ತೋರುತ್ತವೆ.[] ....1,500 metres (4,900 feet)ರವರೆಗಿನ ಎತ್ತರವಾದ ಸ್ಥಳಗಳಲ್ಲಿ ಉನ್ನತ-ಗುಣಮಟ್ಟದ ಚಹಾ ಸಸ್ಯಗಳನ್ನು ಬೆಳೆಯಲಾಗುತ್ತದೆ ಎಂದು ಚೀನಾದ ಸಾಂಪ್ರದಾಯಿಕ ಚಹಾ ಬೇಸಾಯ ಮತ್ತು ಅಧ್ಯಯನಗಳು ನಂಬುತ್ತವೆ. ಈ ಎತ್ತರಗಳಲ್ಲಿ, ಸಸ್ಯಗಳು ಅತ್ಯಂತ ನಿಧಾನಗತಿಯಲ್ಲಿ ಬೆಳೆಯುತ್ತವೆ ಮತ್ತು ಉತ್ತಮವಾದ ಪರಿಮಳವನ್ನು ವಶಮಾಡಿಕೊಳ್ಳುತ್ತವೆ ಎಂಬುದು ಇದರ ಹಿಂದಿರುವ ಅಭಿಪ್ರಾಯ.[೧೦]

ಚೆನ್ನಾಗಿ ಬೆಳೆದಿರುವ ಸಸ್ಯದ ತುದಿಯಲ್ಲಿನ 1-2 ಇಂಚುಗಳನ್ನಷ್ಟೇ ಕೊಯ್ಯಲಾಗುತ್ತದೆ. ಈ ಮೊಗ್ಗುಗಳು ಮತ್ತು ಎಲೆಗಳನ್ನು ಹೊಸ ಚಿಗುರುಗಳು ಎಂದು ಕರೆಯಲಾಗುತ್ತದೆ.[೧೧] ಬೆಳೆಯುವ ಅವಧಿಯಲ್ಲಿ ಚಹಾ ಸಸ್ಯವೊಂದು ಪ್ರತಿ ಏಳರಿಂದ ಹತ್ತು ದಿನಗಳ ಅವಧಿಗೊಮ್ಮೆ ಒಂದು ಹೊಸ ಚಿಗುರನ್ನು ಬೆಳೆಸುತ್ತದೆ.

ಚಹಾ ಸಸ್ಯವೊಂದಕ್ಕೆ ಯಾವುದೇ ರೀತಿಯ ಅಡೆತಡೆಗಳಿಲ್ಲದಿದ್ದರೆ ಅದು ಒಂದು ಮರವಾಗಿ ಬೆಳೆಯುತ್ತದೆ. ಆದರೆ, ಕೊಯ್ಯುವಿಕೆಯ ಕೆಲಸವು ಸುಗಮವಾಗಲೆಂದು, ಸೊಂಟದಷ್ಟು ಎತ್ತರದಲ್ಲಿರುವಾಗಲೇ ಅವುಗಳನ್ನು ಸಮರಲಾಗುತ್ತದೆ.[೧೨]

ಎರಡು ಪ್ರಮುಖ ಪ್ರಭೇದಗಳನ್ನು ಬಳಸಲಾಗುತ್ತದೆ: ಚಿಕ್ಕ-ಎಲೆಗಳನ್ನುಳ್ಳ ಚೀನಾ ಸಸ್ಯ (C. ಸೈನೆನ್ಸಿಸ್‌ ಸೈನೆನ್ಸಿಸ್‌ ), ಇದನ್ನು ಚೀನಾದ, ಫಾರ್ಮೋಸಾದ ಮತ್ತು ಜಪಾನಿನ ಬಹುತೇಕ ಚಹಾಗಳಿಗಾಗಿ ಬಳಸಲಾಗುತ್ತದೆ (ಆದರೆ ಪು-ಎರ್ಹ್‌ ಚಹಾ ಅಲ್ಲ); ಮತ್ತು ದೊಡ್ಡ-ಎಲೆಗಳನ್ನುಳ್ಳ ಅಸ್ಸಾಂ ಸಸ್ಯ (C. ಸೈನೆನ್ಸಿಸ್‌ ಅಸ್ಸಾಮಿಕಾ ), ಭಾರತದ ಮತ್ತು ಇತರ ಚಹಾಗಳಲ್ಲಿ ಬಹುತೇಕವಾಗಿ ಬಳಸಲಾಗುತ್ತದೆ (ಆದರೆ ಡಾರ್ಜಿಲಿಂಗ್‌ ಚಹಾ ಅಲ್ಲ). ಸಸ್ಯಗಳ ಈ ಪ್ರಭೇದಗಳೊಳಗೆ, ಅನೇಕ ತಳಿಗಳು ಹಾಗೂ ಆಧುನಿಕ ಭಾರತದ ಅಬೀಜ ಸಂತಾನದ ಪ್ರಭೇದಗಳು ಸೇರಿಕೊಂಡಿವೆ. ಚಹಾ ಸಸ್ಯಗಳ ವರ್ಗೀಕರಣದಲ್ಲಿ ಎಲೆಯ ಗಾತ್ರವು ಒಂದು ಪ್ರಮುಖ ಮಾನದಂಡವಾಗಿ ಪರಿಗಣಿಸಲ್ಪಡುತ್ತದೆ:[೧೩] ಈ ನಿಟ್ಟಿನಲ್ಲಿ ಚಹಾದ ವರ್ಗೀಕರಣವು ಹೀಗೆ ಸಾಗುತ್ತದೆ: (1) ಅಸ್ಸಾಂ ಮಾದರಿ: ದೊಡ್ಡದಾದ ಎಲೆಗಳನ್ನು ಹೊಂದಿರುವುದು ಇದರ ವಿಶಿಷ್ಟ ಗುಣಲಕ್ಷಣ; (2) ಚೀನಾ ಮಾದರಿ: ಅತ್ಯಂತ ಚಿಕ್ಕದಾದ ಎಲೆಗಳನ್ನು ಹೊಂದಿರುವುದು ಇದರ ವಿಶಿಷ್ಟ ಗುಣಲಕ್ಷಣ; ಮತ್ತು (3) ಕಾಂಬೋಡ್‌: ಎರಡರ ನಡುವಿನ ಗಾತ್ರದ ಎಲೆಗಳನ್ನು ಹೊಂದಿರುವುದು ಇದರ ವಿಶಿಷ್ಟ ಗುಣಲಕ್ಷಣ[೧೩]

ಚಹಾ

ಸಂಸ್ಕರಣೆ ಮತ್ತು ವರ್ಗೀಕರಣ

[ಬದಲಾಯಿಸಿ]
ಚಹಾ ಎಲೆ ಸಂಸ್ಕರಣಾ ವಿಧಾನಗಳು

ಚಹಾವೊಂದರ ಬಗೆ ಅಥವಾ ಮಾದರಿಯು, ಅದು ಒಳಗಾಗುವ ಸಂಸ್ಕರಣೆಯಿಂದ ನಿರ್ಧರಿಸಲ್ಪಡುತ್ತದೆ. ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌ ನ ಎಲೆಗಳನ್ನು ಕೊಯ್ದ ನಂತರ ತಕ್ಷಣವೇ ಒಣಗಿಸದಿದ್ದರೆ, ಅವು ಬೇಗನೇ ಬಾಡಲು ಮತ್ತು ಉತ್ಕರ್ಷಗೊಳ್ಳಲು ಪ್ರಾರಂಭಿಸುತ್ತವೆ. ಎಲೆಗಳ ಸಸ್ಯಹರಿತ್ತು ನಾಶವಾಗುವುದರಿಂದ ಮತ್ತು ಟ್ಯಾನಿನ್‌ಗಳು ಬಿಡುಗಡೆಯಾಗುವುದರಿಂದ, ಅವು ಕ್ರಮೇಣವಾಗಿ ಕಪ್ಪುಛಾಯೆಗೆ ತಿರುಗುತ್ತವೆ. ಕಿಣ್ವಕ ಉತ್ಕರ್ಷಣ (ಎನ್‌ಜೈಮ್ಯಾಟಿಕ್‌ ಆಕ್ಸಿಡೇಷನ್‌) ಎಂಬ ಈ ಪ್ರಕ್ರಿಯೆಯು ನಿಜವಾದ ಅರ್ಥದಲ್ಲಿ ಹುದುಗಿಸುವಿಕೆಯಲ್ಲದಿದ್ದರೂ, ಇದನ್ನು ಚಹಾ ಉದ್ಯಮದಲ್ಲಿ ಹುದುಗಿಸುವಿಕೆ ಎಂದು ಕರೆಯಲಾಗುತ್ತದೆ. ಇದು ಸೂಕ್ಷ್ಮ-ಜೀವಿಗಳಿಂದ ಉಂಟಾಗುವುದಿಲ್ಲವಾದ್ದರಿಂದ, ಇದೊಂದು ಆಮ್ಲಜನಕ ರಹಿತ ಪ್ರಕ್ರಿಯೆಯಲ್ಲ. ಪೂರ್ವನಿರ್ಧಾರಿತ ಹಂತವೊಂದರಲ್ಲಿ ಅದನ್ನು ಬಿಸಿಮಾಡುವ ಮೂಲಕ ಉತ್ಕರ್ಷಣವನ್ನು ನಿಲ್ಲಿಸುವುದು ಸಂಸ್ಕರಣೆಯಲ್ಲಿನ ಮುಂದಿನ ಕ್ರಮ ಎನಿಸಿಕೊಳ್ಳುತ್ತದೆ. ಹೀಗೆ ಮಾಡುವುದರಿಂದ ಉತ್ಕರ್ಷಣಕ್ಕೆ ಕಾರಣವಾಗುವ ಕಿಣ್ವಗಳನ್ನು ನಿಷ್ಕ್ರಿಯಗೊಳಿಸಿದಂತಾಗುತ್ತದೆ. ಕಪ್ಪು ಚಹಾಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಈ ಹಂತವನ್ನು ಒಣಗಿಸುವ ಪ್ರಕ್ರಿಯೆಯೊಂದಿಗೆ ಏಕಕಾಲಿಕವಾಗಿ ನಡೆಸಲಾಗುತ್ತದೆ.

ಚಹಾದ ತಯಾರಿಕೆ ಹಾಗೂ ಪೆಟ್ಟಿಗೆಗೆ ತುಂಬುವ ಹಂತಗಳಲ್ಲಿ ತೇವ ಮತ್ತು ತಾಪಮಾನವನ್ನು ಅತ್ಯಂತ ಎಚ್ಚರಿಕೆಯಿಂದ ನಿಯಂತ್ರಿಸದಿದ್ದರೆ, ಚಹಾದಲ್ಲಿ ಶಿಲೀಂಧ್ರಗಳು ಬೆಳೆಯುತ್ತವೆ. ಶಿಲೀಂಧ್ರವು ನಿಜವಾದ ಅರ್ಥದಲ್ಲಿ ಹುದುಗಿಸುವಿಕೆಯನ್ನು ಉಂಟುಮಾಡುವುದರಿಂದ, ಅದು ಚಹಾದಲ್ಲಿ ವಿಷಕಾರಿ ಮತ್ತು ಕೆಲವೊಮ್ಮೆ ಕ್ಯಾನ್ಸರು ಜನಕ ವಸ್ತುಗಳು ಸೇರುವಲ್ಲಿ ಕಾರಣವಾಗಿ ಚಹಾವನ್ನು ಮಲಿನಗೊಳಿಸುತ್ತದೆ. ಅಷ್ಟೇ ಅಲ್ಲ, ಅದರ ಪರಿಮಳವನ್ನು ಹಾಳುಗೆಡವಿ, ಚಹಾವನ್ನು ಸೇವನೆಗೆ ಯೋಗ್ಯವಲ್ಲದ್ದಾಗಿ ಮಾರ್ಪಡಿಸಿಬಿಡುತ್ತದೆ.

ಚಹಾವು ತಯಾರಾಗಿರುವ ಮತ್ತು ಸಂಸ್ಕರಣೆಗೆ ಒಳಗಾಗಿರುವುದರ ವಿಧಾನಗಳ ಆಧಾರದ ಮೇಲೆ, ಅದನ್ನು ಸಾಂಪ್ರದಾಯಿಕವಾಗಿ ವರ್ಗೀಕರಿಸಲಾಗಿದೆ.[೧೪]

  • ಬಿಳಿ ಚಹಾ: ಬಾಡಿಸಿರುವ ಮತ್ತು ಉತ್ಕರ್ಷಣೆಗೆ ಒಳಗಾಗದೇ ಇರುವ ಚಹಾ
  • ಹಳದಿ ಚಹಾ: ಬಾಡಿಸದ ಮತ್ತು ಉತ್ಕರ್ಷಣೆಗೆ ಒಳಗಾಗದ, ಆದರೆ ಹಳದಿಯಾಗಲು ಅವಕಾಶ ಪಡೆದಿರುವ ಚಹಾ
  • ಹಸಿರು ಚಹಾ: ಬಾಡಿಸದ ಮತ್ತು ಉತ್ಕರ್ಷಣೆಗೆ ಒಳಗಾಗದ ಚಹಾ
  • ಊಲಾಂಗ್‌: ಬಾಡಿಸಿದ, ಮೂಗೇಟಿಗೊಳಗಾದ, ಮತ್ತು ಆಂಶಿಕವಾಗಿ ಉತ್ಕರ್ಷಣೆಗೆ ಒಳಗಾದ ಚಹಾ
  • ಕಪ್ಪು ಚಹಾ: ಬಾಡಿಸಿದ, ಕೆಲವೊಮ್ಮೆ ಮುದುರಿಸಿದ ಅಥವಾ ಸುಕ್ಕುಗಟ್ಟಿಸಿದ, ಮತ್ತು ಸಂಪೂರ್ಣವಾಗಿ ಉತ್ಕರ್ಷಿಸಲ್ಪಟ್ಟ ಚಹಾ
  • ಹುದುಗಿಸುವಿಕೆಯ ನಂತರದ ಚಹಾ: ಹುದುಗುವಿಕೆಗೆ/ಮಿಶ್ರಣಕ್ಕೆ ಅವಕಾಶ ಮಾಡಿಕೊಟ್ಟ ಹಸಿರು ಚಹಾ

ಹದವಾಗಿ ಬೆರೆಸುವಿಕೆ ಮತ್ತು ಸಂಯೋಜನೀಯ ಪದಾರ್ಥಗಳು

[ಬದಲಾಯಿಸಿ]
1915ಕ್ಕೂ ಮುಂಚಿನ ರಷ್ಯಾ ಸಾಮ್ರಾಜ್ಯವಾದ ಬಟೂಮಿಯ ಉತ್ತರದಲ್ಲಿರುವ ಚಹಾ ತೂಗುವ ಕೇಂದ್ರ

ಚೀಲಗಳಲ್ಲಿ ಬರುವ ಬಹುತೇಕ ಎಲ್ಲಾ ಚಹಾಗಳು ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಮಾರಾಟವಾಗುವ ಇತರ ಬಹುತೇಕ ಚಹಾಗಳು ಹದವಾಗಿ ಬೆರೆಸಲ್ಪಟ್ಟಿರುತ್ತವೆ. ಹದವಾಗಿ ಬೆರೆಸುವಿಕೆಯು ಚಹಾ-ಬೆಳೆಯುವ ಪ್ರದೇಶದಲ್ಲಿ ಕಂಡುಬರಬಹುದು (ಅಸ್ಸಾಂ ಚಹಾದಲ್ಲಿರುವಂತೆ), ಅಥವಾ ಅನೇಕ ಪ್ರದೇಶಗಳಿಂದ ಪಡೆದ ಚಹಾಗಳನ್ನು ಹದವಾಗಿ ಬೆರೆಸಬಹುದು. ಅತ್ಯಂತ ದುಬಾರಿಯಾಗಿರುವ, ಉತ್ತಮ-ರುಚಿಯನ್ನು ನೀಡುವ ಚಹಾವು ಕೆಳಮಟ್ಟದ ರುಚಿಯ ಅಗ್ಗದ ಪ್ರಭೇದಗಳನ್ನು ಒಳಗೊಳ್ಳಬಹುದಾದ್ದರಿಂದ, ಅತ್ಯುತ್ತಮವಾದ ರುಚಿ, ಹೆಚ್ಚಿನ ಬೆಲೆ, ಅಥವಾ ಎರಡನ್ನೂ ಪಡೆಯುವುದು ಈ ಪ್ರಕ್ರಿಯೆಯ ಹಿಂದಿರುವ ಮುಖ್ಯ ಗುರಿ.

ಕೆಲವೊಂದು ಚಹಾಗಳು ಪರಿಶುದ್ಧ ಪ್ರಭೇದಗಳಿಗೆ ಸೇರಿರುವುದಿಲ್ಲವಾದರೂ, ಸಂಯೋಜನೀಯ ಪದಾರ್ಥಗಳು ಅಥವಾ ವಿಶೇಷ ಸಂಸ್ಕರಣೆಯ ನೆರವಿನೊಂದಿಗೆ ಅವುಗಳ ಗುಣಮಟ್ಟವನ್ನು ಹೆಚ್ಚಿಸಲಾಗಿರುತ್ತದೆ. ಹಲವು ಬಗೆಯ ಪರಿಮಳಗಳ ಒಳಸೇರಿಸುವಿಕೆಯನ್ನು ಚಹಾವು ಹೆಚ್ಚಿನ ರೀತಿಯಲ್ಲಿ ಗ್ರಹಿಸಿಟ್ಟುಕೊಳ್ಳುತ್ತದೆ; ಇದರಿಂದಾಗಿ ಸಂಸ್ಕರಣೆ, ಸಾಗಾಣಿಕೆ ಮತ್ತು ಶೇಖರಣೆಯಲ್ಲಿ ಸಮಸ್ಯೆಗಳು ತಲೆದೋರಬಹುದು. ಆದರೆ, ಈ ರೀತಿಯ ಒಳಸೇರಿಸುವಿಕೆಯಿಂದಾಗಿ ಬರ್ಗಮಾಟ್‌ (ಅರ್ಲ್‌ ಬೂದು), ವೆನಿಲ, ಕ್ಯಾರಮೆಲ್‌, ಮತ್ತು ಇನ್ನೂ ಅನೇಕ ಸುವಾಸಿತ ಮತ್ತು ಸ್ವಾದಿಷ್ಟ ರೂಪಾಂತರಗಳ ಹೆಚ್ಚೂಕಮ್ಮಿ ಒಂದು ಅಂತ್ಯವಿಲ್ಲದ ಸರಣಿಯ ವಿನ್ಯಾಸಕ್ಕೂ ಇದು ಅವಕಾಶಮಾಡಿಕೊಡುತ್ತದೆ.

ಹುರುಳು

[ಬದಲಾಯಿಸಿ]

ಕ್ಯಾಟ್‌ಚಿನ್ಸ್‌ ಎಂಬ, ಒಂದು ರೀತಿಯ ಉತ್ಕರ್ಷಣಕಾರಿ-ವಿರೋಧಿ ಅಂಶವನ್ನು ಚಹಾ ಒಳಗೊಂಡಿರುತ್ತದೆ. ಆಗಷ್ಟೇ ಕೊಯ್ದ ಚಹಾ ಎಲೆಯೊಂದರಲ್ಲಿ, ಅದರ ಶುಷ್ಕ ತೂಕದ 30%ನಷ್ಟು ಪ್ರಮಾಣದವರೆಗೆ ಕ್ಯಾಟ್‌ಚಿನ್ಸ್‌ ಇರುತ್ತದೆ. ಕ್ಯಾಟ್‌ಚಿನ್ಸ್‌ ಸಾಂದ್ರತೆಯು ಬಿಳಿ ಮತ್ತು ಹಸಿರು ಚಹಾಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರೆ, ಕಪ್ಪು ಚಹಾದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಿರುತ್ತದೆ. ಕಪ್ಪು ಚಹಾದ ಉತ್ಕರ್ಷಣಶೀಲ ತಯಾರಿಯೇ ಇದಕ್ಕೆ ಕಾರಣ.[೧೫][೧೬] U.S. ಕೃಷಿ ಇಲಾಖೆಯು ನಡೆಸಿರುವ ಸಂಶೋಧನೆಯು ಸೂಚಿಸಿರುವ ಪ್ರಕಾರ, ಹಸಿರು ಮತ್ತು ಕಪ್ಪು ಚಹಾದಲ್ಲಿನ ಉತ್ಕರ್ಷಣಕಾರಿ-ವಿರೋಧಿ ಅಂಶಗಳ ಮಟ್ಟದಲ್ಲಿ ಅಂಥಾ ವ್ಯತ್ಯಾಸವೇನೂ ಇರುವುದಿಲ್ಲ. ಹಸಿರು ಚಹಾದಲ್ಲಿ 1253ರಷ್ಟು ಆಕ್ಸಿಜನ್ ರ್ಯಾಡಿಕಲ್‌ ಅಬ್ಸಾರ್ಬೆನ್ಸ್‌ ಕೆಪಾಸಿಟಿ (ORAC) ಇದ್ದರೆ, ಕಪ್ಪು ಚಹಾದಲ್ಲಿ 1128ರಷ್ಟು ORAC ಇರುತ್ತದೆ (ಈ ಪ್ರಮಾಣವನ್ನು μmolTE/100ಗ್ರಾಂನಂತೆ ಅಳೆಯಲಾಗುತ್ತದೆ).[೧೭] ಚಹಾವು ತನ್ನ ಶುಷ್ಕ ತೂಕದ ಸುಮಾರು 3%ನಷ್ಟು ಭಾಗದಷ್ಟು ಥಿಯಾನೈನ್‌ ಮತ್ತು ಕೆಫೀನ್‌ ಎಂಬ ಉತ್ತೇಜಕಗಳನ್ನು ಹೊಂದಿರುತ್ತದೆ. ಅಂದರೆ, ಚಹಾದ ಮಾದರಿ, ಬ್ರಾಂಡ್‌[೧೮] ಹಾಗೂ ಹುದುಗಿಸುವ ವಿಧಾನವನ್ನು ಅವಲಂಬಿಸಿ, 8 ಔನ್ಸಿನ (250 ಮಿಲೀ) ಪ್ರಮಾಣದ ಪ್ರತಿ ಬಟ್ಟಲಿನಲ್ಲಿ 30 ಮಿಗ್ರಾಂ ಮತ್ತು 90 ಮಿಗ್ರಾಂ ನಡುವೆ ಇದರ ಪ್ರಮಾಣವಿರುತ್ತದೆ.[೧೯] ಚಹಾದಲ್ಲಿ ಥಿಯೋಬ್ರೋಮೀನ್‌ ಮತ್ತು ಥಿಯೋಫಿಲ್ಲೀನ್‌[೨೦] ಅಂಶಗಳು ಸಣ್ಣ ಪ್ರಮಾಣದಲ್ಲಿರುತ್ತವೆ. ಅಷ್ಟೇ ಅಲ್ಲ, ಉನ್ನತ ಮಟ್ಟವನ್ನು ಹೊಂದಿರುವ ಹಳೆಯ ಎಲೆಗಳು ಮತ್ತು ಕಾಂಡಗಳಿಂದ ತಯಾರಿಸಲ್ಪಟ್ಟ ಇಟ್ಟಿಗೆಗೆಂಪಿನ ಚಹಾದ ನಿರ್ದಿಷ್ಟ ವಿಧಗಳಲ್ಲಿ ಫ್ಲೋರೈಡ್‌[ಸೂಕ್ತ ಉಲ್ಲೇಖನ ಬೇಕು] ಕೂಡಾ ಇರುತ್ತದೆ.[೨೧]

ಕಾಫಿಗೆ ಹೋಲಿಸಿದಾಗ ಶುಷ್ಕ ಚಹಾವು ತೂಕದಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್‌ನ್ನು ಹೊಂದಿರುತ್ತದೆ; ಅದೇನೇ ಇದ್ದರೂ, ಪಾನೀಯವನ್ನು ತಯಾರಿಸುವಾಗ[೨೨] ಶುಷ್ಕ ಚಹಾಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಒಣಗಿಸಿದ ಕಾಫಿಯನ್ನು ಬಳಸಲಾಗುತ್ತದೆ. ಅಂದರೆ, ಒಂದು ಬಟ್ಟಲಿನಷ್ಟು ಕುದಿಸಿದ ಚಹಾವು ಅದರಷ್ಟೇ ಪ್ರಮಾಣದ ಬಟ್ಟಲಿನಲ್ಲಿರುವ ಕಾಫಿಗಿಂತ ಗಣನೀಯವಾಗಿ ಕಡಿಮೆ ಪ್ರಮಾಣದಲ್ಲಿ ಕೆಫೀನ್‌ನ್ನು ಹೊಂದಿರುತ್ತದೆ.

ಚಹಾದಲ್ಲಿ ಶರ್ಕರಪಿಷ್ಟಗಳು, ಕೊಬ್ಬು, ಅಥವಾ ಪ್ರೋಟೀನು ಇರುವುದಿಲ್ಲ.

ಹುಟ್ಟು ಮತ್ತು ಇತಿಹಾಸ

[ಬದಲಾಯಿಸಿ]

.....Mondal (2007, p. 519) ಪ್ರಕಾರ: "ಆಗ್ನೇಯ ಏಷ್ಯಾದಲ್ಲಿ ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌‌‌ ಹುಟ್ಟಿಕೊಂಡಿತು. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸರಿಸುಮಾರು ಅಕ್ಷಾಂಶ 29°N ಮತ್ತು ರೇಖಾಂಶ 98°E ಇವುಗಳ ಅಡ್ಡಹಾಯ್ಕೆಯ ಛೇದಕ ಬಿಂದುವಿನಲ್ಲಿ, ಈಶಾನ್ಯ ಭಾರತ, ಉತ್ತರ ಬರ್ಮಾ, ನೈಋತ್ಯ ಚೀನಾ ಮತ್ತು ಟಿಬೆಟ್‌ನ ಭೂಭಾಗಗಳ ಸಂಗಮಸ್ಥಾನದ ಬಿಂದುವಿನಲ್ಲಿ ಇದು ಮೈದಳೆಯಿತು. ಈ ‘ಉಗಮದ ಕೇಂದ್ರ’ದಿಂದ 52ಕ್ಕೂ ಹೆಚ್ಚಿನ ದೇಶಗಳಿಗೆ ಈ ಸಸ್ಯವು ಪರಿಚಯಿಸಲ್ಪಟ್ಟಿತು."

ಅಸ್ಸಾಮಿ ಚಹಾ ಪ್ರಭೇದಗಳು ಮತ್ತು ಚೀನಾದ ಚಹಾ ಪ್ರಭೇದಗಳ ನಡುವಿನ ರೂಪವಿಜ್ಞಾನದ ವ್ಯತ್ಯಾಸಗಳ ಆಧಾರದ ಮೇಲೆ, ಚಹಾವು ಎರಡು ಬಗೆಯ ಸಸ್ಯಶಾಸ್ತ್ರೀಯ ಮೂಲವನ್ನು ಹೊಂದಿದೆ ಎಂದು ಸಸ್ಯಶಾಸ್ತ್ರಜ್ಞರು ಬಹಳ ಹಿಂದೆಯೇ ಪ್ರತಿಪಾದಿಸಿದ್ದಾರೆ; ಆದಾಗ್ಯೂ, ಅಂಕಿ-ಅಂಶ ಸ್ವರೂಪದಲ್ಲಿನ ಗುಚ್ಛದ ವಿಶ್ಲೇಷಣೆ, ಒಂದೇ ರೀತಿಯಲ್ಲಿರುವ ವರ್ಣತಂತುವಿನ ಸಂಖ್ಯೆ (2n=30), ಸುಲಭಸಾಧ್ಯ ಸಂಕರೀಕರಣ, ಮತ್ತು ಮಧ್ಯವರ್ತಿ ಮಿಶ್ರತಳಿಗಳು ಹಾಗೂ ಅಸಂಕಲ್ಪಿತ ಬಹುಗುಣಿತಗಳ ವೈವಿಧ್ಯಮಯ ಬಗೆಗಳು- ಇವೆಲ್ಲವೂ ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌ ಗೆ ಉಗಮದ ಒಂದು ಏಕತಾಣವಿರುವುದನ್ನು ಪ್ರಮಾಣೀಕರಿಸುತ್ತವೆ. ಬರ್ಮಾದ ಉತ್ತರದ ಭಾಗ, ಮತ್ತು ಚೀನಾದ ಯುನ್ನಾನ್‌ ಹಾಗೂ ಸಿಚುವಾನ್‌ ಪ್ರಾಂತ್ಯಗಳು ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ.[೨೩] ಈ ಸಿದ್ಧಾಂತದ ಪ್ರಕಾರ, ಆಗ್ನೇಯ ಏಷ್ಯಾದಲ್ಲಿನ ಚಹಾ ಸಸ್ಯಗಳು 19ನೇ ಶತಮಾನ ಮತ್ತು 20ನೇ ಶತಮಾನದ ಸಂಕರೀಕರಣದ ಪ್ರಯೋಗಗಳಿಂದ ಹೊರಬಂದ ಉತ್ಪನ್ನಗಳಾಗಿರಬಹುದು ಎನಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಯುನ್ನಾನ್‌ ಪ್ರಾಂತ್ಯವು, "ಚಹಾದ ಜನ್ಮಸ್ಥಳ ಎಂದೂ ಗುರುತಿಸಲ್ಪಟ್ಟಿದೆ... ಇದು, ಚಹಾದ ಎಲೆಗಳನ್ನು ತಿನ್ನುವುದರಿಂದ ಅಥವಾ ಒಂದು ಬಟ್ಟಲಿನಷ್ಟು ಕುದಿಸಿದ ಚಹಾವನ್ನು ಕುಡಿಯುವುದರಿಂದ ಆಹ್ಲಾದಕತೆ ಉಂಟಾಗಬಲ್ಲದು ಎಂಬುದನ್ನು ಮಾನವರು ಗ್ರಹಿಸಿದ ಮೊಟ್ಟಮೊದಲ ಪ್ರದೇಶವಾಗಿದೆ".[೨೪] ಚೀನಾದಲ್ಲಿನ ಯುನ್ನಾನ್‌ ಪ್ರಾಂತ್ಯದ ಆಡಳಿತ ಪ್ರಾಂತವಾದ, ಲಿಂಕಾಂಗ್‌ ನಗರದಲ್ಲಿನ ಫೆಂಗ್‌ಕ್ವಿಂಗ್‌ ಆಡಳಿತ ವಿಭಾಗವು ಸುಮಾರು 3,200 ವರ್ಷಗಳಷ್ಟು ಹಳೆಯದಾದ ವಿಶ್ವದ ಅತ್ಯಂತ ಹಳೆಯ ಬೆಳೆಸಿದ ಚಹಾ ಮರಕ್ಕೆ ನೆಲೆಯಾಗಿತ್ತು ಎಂದು ಹೇಳಲಾಗಿದೆ.[೨೫]

ಮೂಲದ ಕುರಿತಾದ ಪುರಾಣಗಳು

[ಬದಲಾಯಿಸಿ]

ಷೆನ್ನಾಂಗ್‌ ಎಂಬ ಒಂದು ಜನಪ್ರಿಯ, ಚೀನಾದ ದಂತಕಥೆಯಲ್ಲಿರುವಂತೆ, ಐತಿಹ್ಯವನ್ನು ಹೊಂದಿರುವ ಚೀನಾದ ಚಕ್ರವರ್ತಿ ಮತ್ತು ಕೃಷಿ ಹಾಗೂ ಚೀನಾದ ಔಷಧಿಯ ಸಂಶೋಧಕನು, ಸರಿಸುಮಾರು 2737 BCಯ ಕಾಲದಲ್ಲಿ ಒಂದು ಬೋಗುಣಿಯಷ್ಟು ಕುದಿಯುವ ನೀರನ್ನು ಕುಡಿಯುತ್ತಿದ್ದ. ಅದೇ ಸಮಯಕ್ಕೆ ಹತ್ತಿರದ ಮರವೊಂದರಿಂದ ಒಂದಷ್ಟು ಎಲೆಗಳು ಹಾರಿಬಂದು, ಆತನ ಬೋಗುಣಿಯ ನೀರಿಗೆ ಬಿದ್ದು, ಅದರ ಬಣ್ಣವನ್ನು ಬದಲಾಯಿಸಿದವು. ಕುದಿಸಿದ ನೀರಿನಲ್ಲಿನ ಈ ಮಿಶ್ರಣವನ್ನು ಒಂದು ಬಾರಿ ರುಚಿ ನೋಡಿದ ಚಕ್ರವರ್ತಿಯು, ಅದರ ಪರಿಮಳ ಹಾಗೂ ಪುನಶ್ಚೈತನ್ಯಕಾರಿ ಗುಣಲಕ್ಷಣಗಳಿಂದಾಗಿ ಆಹ್ಲಾದಕರವಾದ ರೀತಿಯಲ್ಲಿ ಅಚ್ಚರಿಗೊಂಡ. ಈ ದಂತಕಥೆಯ ಮತ್ತೊಂದು ರೂಪಾಂತರವು ಹೇಳುವ ಪ್ರಕಾರ, ಸದರಿ ಚಕ್ರವರ್ತಿಯು ಹಲವಾರು ಮೂಲಿಕೆ ಸಸ್ಯಗಳ ಔಷಧೀಯ ಗುಣಗಳನ್ನು ಸ್ವತಃ ತನ್ನ ಮೇಲೆಯೇ ಪ್ರಯೋಗಿಸಿಕೊಳ್ಳುತ್ತಿದ್ದ. ಅವುಗಳಲ್ಲಿ ಕೆಲವೊಂದು ವಿಷಪೂರಿತವಾಗಿದ್ದು, ಚಹಾವು ಈ ಸಂದರ್ಭದಲ್ಲಿ ಒಂದು ವಿಷಹಾರಿ ವಸ್ತುವಾಗಿ ಅವನಿಗೆ ಕಂಡುಬಂತು.[೨೬] ಈ ವಿಷಯದ ಕುರಿತಾಗಿ ಬಂದಿರುವ ಲು ಯು ಎಂಬಾತನ ಚಾ ಜಿಂಗ್‌ ಎಂಬ ಸುಪ್ರಸಿದ್ಧ ಆರಂಭಿಕ ಕೃತಿಯಲ್ಲೂ ಷೆನ್ನಾಂಗ್‌ನ ಕುರಿತಾಗಿ ನಮೂದಿಸಲಾಗಿದೆ.[೨೭] ಇದೇ ರೀತಿಯಲ್ಲಿರುವ ಚೀನಾದ ಮತ್ತೊಂದು ದಂತಕಥೆಯು ತಿಳಿಸುವ ಪ್ರಕಾರ, ಔಷಧೀಯ ಮೂಲಿಕೆ ಸಸ್ಯಗಳನ್ನು ಪತ್ತೆಹಚ್ಚುವುದಕ್ಕಾಗಿ ಕೃಷಿಯ ದೇವರು ಹಲವಾರು ಸಸ್ಯಗಳ ಎಲೆಗಳು, ಕಾಂಡಗಳು, ಮತ್ತು ಬೇರುಗಳನ್ನು ಅಗಿಯುತ್ತಾನೆ. ಒಂದು ವೇಳೆ ಆತ ವಿಷಪೂರಿತ ಸಸ್ಯವೊಂದನ್ನು ತಿಂದರೆ, ಅದರ ವಿಷದ ಪರಿಣಾಮಗಳನ್ನು ಪ್ರತಿರೋಧಿಸಲು ಆತ ಚಹಾದ ಎಲೆಗಳನ್ನು ಅಗಿಯುತ್ತಾನೆ.[೨೮]

ಕೊಂಚಮಟ್ಟಿಗೆ ಭಯಂಕರವೆನಿಸಬಹುದಾದ ದಂತಕಥೆಯೊಂದು ತಾಂಗ್‌ ರಾಜವಂಶಕ್ಕೆ ಸಂಬಂಧಿಸಿದೆ. ಸದರಿ ದಂತಕಥೆಯಲ್ಲಿ, ಚಾನ್‌ ಬೌದ್ಧಮತದ ಸ್ಥಾಪಕನಾದ ಬೋಧಿಧರ್ಮನು, ಗೋಡೆಯೊಂದರ ಮುಂದೆ ಕುಳಿತು ಒಂಬತ್ತು ವರ್ಷಗಳವರೆಗೆ ಧ್ಯಾನ ಮಾಡಿದ ನಂತರ ಅಕಸ್ಮಾತ್ತಾಗಿ ನಿದ್ರೆಗೆ ಜಾರುತ್ತಾನೆ. ತನ್ನ ದೌರ್ಬಲ್ಯದ ಕುರಿತು ಆತನಿಗೇ ಜುಗುಪ್ಸೆ ಬಂದು, ತನ್ನ ಕಣ್ಣರೆಪ್ಪೆಗಳನ್ನು ಕತ್ತರಿಸಿಕೊಳ್ಳುತ್ತಾನೆ. ನೆಲದ ಮೇಲೆ ಬೀಳುವ ಈ ರೆಪ್ಪೆಗಳು, ಬೇರನ್ನು ಬೆಳೆಸಿಕೊಂಡು, ಚಹಾದ ಪೊದೆಗಳಾಗಿ ಬೆಳೆಯುತ್ತವೆ.[೨೯] ಕೆಲವೊಮ್ಮೆ, ಕಥೆಯ ಮತ್ತೊಂದು ರೂಪಾಂತರವು ಬೋಧಿಧರ್ಮ ನ ಜಾಗದಲ್ಲಿ ಗೌತಮ ಬುದ್ಧನನ್ನು ಸೇರಿಸಿ ಹೇಳಲ್ಪಡುತ್ತದೆ.[೩೦]

ಈ ದಂತಕಥೆಗಳು ವಾಸ್ತವವಾಗಿ ಯಾವುದಾದರೂ ಆಧಾರವನ್ನು ಹೊಂದಿದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ಶತಮಾನಗಳವರೆಗೆ ಏಷ್ಯಾದ ಸಂಸ್ಕೃತಿಯಲ್ಲಿ ಚಹಾವು ಒಂದು ಮುಖ್ಯ ಪಾನೀಯವಾಗಿ, ಒಂದು ರೋಗ ಪರಿಹಾರಕವಾಗಿ, ಮತ್ತು ಒಂದು ಹಿರಿಮೆಯ ಕುರುಹಾಗಿ ಒಂದು ಗಮನಾರ್ಹವಾದ ಪಾತ್ರವನ್ನು ವಹಿಸಿದೆ. ಆದ್ದರಿಂದ, ಇದರ ಹುಟ್ಟುವಿಕೆಯ ಕುರಿತಾದ ಸಿದ್ಧಾಂತಗಳು ಅನೇಕ ವೇಳೆ ಧಾರ್ಮಿಕ ಅಥವಾ ಭವ್ಯವಾದ ಸ್ವರೂಪದಿಂದ ಕೂಡಿರುವುದು ಅಚ್ಚರಿಯ ವಿಷಯವೇನೂ ಅಲ್ಲ.

ಚಹಾ ಉತ್ಸವಾಚರಣೆಯೊಂದರಲ್ಲಿ ವಿದ್ವಾಂಸರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವುದನ್ನು ಚಿತ್ರಿಸಿರುವ ಕಲಾವಿದ ವೆನ್‌ ಝೆಂಗ್‌ಮಿಂಗ್‌ನಿಂದ ರಚಿಸಲ್ಪಟ್ಟಿರುವ ಮಿಂಗ್‌ ರಾಜವಂಶದ ಒಂದು ಚಿತ್ರ ಕಲಾಕೃತಿ.
ಕ್ಸಿ'ಯಾನ್‌ನಲ್ಲಿನ ಲು ಯುನ ಪ್ರತಿಮೆ

ಚೀನಿಯರು ಸಾವಿರಾರು ವರ್ಷಗಳಿಂದ ಚಹಾ ಸೇವಿಸುತ್ತಾ ಬಂದಿದ್ದಾರೆ. ಹಾನ್‌ ರಾಜವಂಶದ ಜನರು ಚಹಾವನ್ನು ಔಷಧಿಯ ರೂಪದಲ್ಲಿ ಬಳಸುತ್ತಿದ್ದರು (ಆದರೂ ಸಹ, ಒಂದು ಉತ್ತೇಜಕವಾಗಿ ಚಹಾದ ಮೊದಲ ಬಳಕೆಯ ಕುರಿತು ಇನ್ನೂ ತಿಳಿದುಬಂದಿಲ್ಲ). ಚಹಾದ ಸೇವನೆಯ ಅತ್ಯಂತ ಮುಂಚಿನ ದಾಖಲೆಗಳನ್ನು ಚೀನಾ ಹೊಂದಿದೆ ಎಂದು ಪರಿಗಣಿಸಲಾಗಿದ್ದು,[][೩೧] ಸದರಿ ದಾಖಲೆಗಳು 10ನೇ ಶತಮಾನದ BCಯವರೆಗೆ ಕೊಂಡೊಯ್ಯುತ್ತವೆ.[]

ಲವೋಝಿ (ಸುಮಾರು 600-517 BC), ಎಂಬ ಚೀನಾದ ಶ್ರೇಷ್ಠ ದಾರ್ಶನಿಕನು ಚಹಾವನ್ನು, "ದ್ರವ ಜೇಡ್‌ ರತ್ನದ ನೊರೆ" ಎಂದು ವಿವರಿಸುವುದರ ಜೊತೆಗೆ, ಇದನ್ನು ಸಿದ್ಧರಸದ (ಅಮೃತದ) ಒಂದು ಅನಿವಾರ್ಯ ಘಟಕಾಂಶವಾಗಿ ಹೆಸರಿಸಿದ್ದಾನೆ. ಈ ಕುರಿತಾದ ದಂತಕಥೆಯು ಹೇಳುವ ಪ್ರಕಾರ,

ಸಮಾಜದ ನೈತಿಕ ಮೌಲ್ಯಗಳ ಕುಸಿತವನ್ನು ಕಂಡು ಮಾಸ್ಟರ್‌ ಲವೋ ತುಂಬಾ ದುಃಖಿತನಾಗಿದ್ದ ಮತ್ತು ರಾಜವಂಶದ ಅಂತ್ಯವು ತೀರಾ ಸನಿಹದಲ್ಲಿದೆ ಎಂದು ಸೂಕ್ಷ್ಮವನ್ನು ಗ್ರಹಿಸಿದ ಆತ, ಮತ್ತೆಂದೂ ತಾನು ಕಾಣದಂತಿರಲು ಪಶ್ಚಿಮಾಭಿಮುಖವಾಗಿ ಸ್ಥಿರವಾಗಿರದ ಪ್ರಾಂತ್ಯಗಳೆಡೆಗೆ ಪ್ರಯಾಣಬೆಳೆಸಿದ. ರಾಷ್ಟ್ರದ ಗಡಿಪ್ರದೇಶದುದ್ದಕ್ಕೂ ಹಾದುಹೋಗುತ್ತಿರುವಾಗ, ಅವನಿಗೆ ಎದುರಾದ ಯಿನ್‌ ಹ್ಸಿ ಎಂಬ ಓರ್ವ ಸುಂಕದಕಟ್ಟೆಯ ಪರಿಶೀಲನಾಧಿಕಾರಿಯು ಆತನಿಗೆ ಚಹಾವನ್ನು ನೀಡಿದ.    ಲವೋನ ಬೋಧನೆಗಳಿಗೆ ಒಂದು ಪುಸ್ತಕದ ರೂಪವನ್ನು ಕೊಡಲು ಲವೋನನ್ನು ಪ್ರೋತ್ಸಾಹಿಸಿದ ಯಿನ್‌ ಹ್ಸಿ, ಆತನ ಜ್ಞಾನದಿಂದ ಮುಂಬರುವ ಪೀಳಿಗೆಗಳು ಪ್ರಯೋಜನ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದ. ಅದೇ ನಂತರದಲ್ಲಿ ದಾವೋ ದಿ ಜಿಂಗ್‌  ಎಂಬ ಹೆಸರಿನ, ಲವೋಝಿಯ ಲೋಕೋಕ್ತಿಗಳ ಒಂದು ಸಂಗ್ರಹವಾಯಿತು.

59 BCಯಲ್ಲಿ, ವಾಂಗ್‌ ಬಾವೋ ಎಂಬಾತ ಚಹಾವನ್ನು ಕೊಳ್ಳುವ ಮತ್ತು ತಯಾರಿಸುವುದರ ಕುರಿತಾದ ಸೂಚನೆಗಳನ್ನು ಹೊಂದಿರುವ ಮೊಟ್ಟಮೊದಲ ಪುಸ್ತಕವನ್ನು ಬರೆದ.

220ರಲ್ಲಿ, ಹುವಾ ಟುವೋ ಎಂಬ ಹೆಸರಿನ ಓರ್ವ ಸುಪ್ರಸಿದ್ಧ ವೈದ್ಯ ಹಾಗೂ ಶಸ್ತ್ರಚಿಕಿತ್ಸಾ ತಜ್ಞ ಷಿನ್‌ ಲುನ್‌ ಎಂಬ ಕೃತಿಯೊಂದನ್ನು ರಚಿಸಿದ. ಮಾನಸಿಕ ಕಾರ್ಯಚಟುವಟಿಕೆಗಳನ್ನು ಸುಧಾರಿಸುವಲ್ಲಿನ ಚಹಾದ ಸಾಮರ್ಥ್ಯವನ್ನು ಕುರಿತು ಆತ ಈ ಪುಸ್ತಕದಲ್ಲಿ ವಿವರಿಸಿದ್ದಾನೆ.

ಸೂಯಿ ರಾಜವಂಶದ (589-618 AD) ಅವಧಿಯಲ್ಲಿ, ಬೌದ್ಧ ಧರ್ಮದ ಸನ್ಯಾಸಿಗಳಿಂದ ಚಹಾವು ಜಪಾನ್‌ಗೆ ಪರಿಚಯಿಸಲ್ಪಟ್ಟಿತು.

ತಾಂಗ್‌ ರಾಜವಂಶದ ಲೇಖಕನಾದ ಲು ಯು ಎಂಬಾತನ (simplified Chinese: 陆羽; traditional Chinese: 陸羽; pinyin: lùyǔ) ಚಾ ಜಿಂಗ್‌ (ದಿ ಕ್ಲಾಸಿಕ್ ಆಫ್ ಟೀ ) (simplified Chinese: 茶经; traditional Chinese: 茶經; pinyin: chá jīng) ಕೃತಿಯು ಈ ವಿಷಯದ ಕುರಿತಾದ ಆರಂಭಿಕ ಕೃತಿಯಾಗಿದೆ. (ಇದನ್ನೂ ನೋಡಿ ಚಹಾ ಮೇರುಕೃತಿಗಳು) ಚಾ ಜಿಂಗ್‌ ಕೃತಿಯ ಅನುಸಾರ, ಚಹಾದ ಸೇವನೆಯು ವ್ಯಾಪಕವಾಗಿ ಹಬ್ಬಿತ್ತು. ಚಹಾ ಸಸ್ಯಗಳನ್ನು ಹೇಗೆ ಬೆಳೆಯಲಾಯಿತು, ಎಲೆಗಳು ಸಂಸ್ಕರಣಗೊಂಡಿದ್ದು ಹೇಗೆ ಮತ್ತು ಚಹಾವನ್ನು ಒಂದು ಪಾನೀಯವಾಗಿ ಹೇಗೆ ತಯಾರಿಸಲಾಗುತ್ತದೆ ಎಂಬುದನ್ನೆಲ್ಲಾ ಈ ಪುಸ್ತಕವು ವಿವರಿಸುತ್ತದೆ. ಚಹಾದ ಮೌಲ್ಯವನ್ನು ಹೇಗೆ ನಿರ್ಣಯಿಸಲಾಯಿತು ಎಂಬುದನ್ನೂ ಇದು ವಿವರಿಸುತ್ತದೆ. ಅತ್ಯುತ್ತಮವಾದ ಚಹಾ ಎಲೆಗಳನ್ನು ಎಲ್ಲಿ ತಯಾರಿಸಲಾಗುತ್ತಿತ್ತು ಎಂಬುದರ ಕುರಿತೂ ಈ ಪುಸ್ತಕವು ಚರ್ಚಿಸುತ್ತದೆ. ಈ ಅವಧಿಯಲ್ಲಿ ತಯಾರಾದ ಚಹಾಗಳು ಮುಖ್ಯವಾಗಿ ಇಟ್ಟಿಗೆಗೆಂಪಿನ ಚಹಾಗಳಾಗಿದ್ದು, ಅವುಗಳನ್ನು ಅನೇಕ ವೇಳೆ ಚಲಾವಣೆಯ ಹಣದ ಸ್ವರೂಪದಲ್ಲಿ ಬಳಸಲಾಗುತ್ತಿತ್ತು. ಈ ಮೂಲಕ, ನಾಣ್ಯಗಳು ತಮ್ಮ ಮೌಲ್ಯವನ್ನು ಕಳೆದುಕೊಂಡಿದ್ದ ಸಾಮ್ರಾಜ್ಯದ ಕೇಂದ್ರದಿಂದ ಇದು ಮತ್ತಷ್ಟು ಮುಂದಕ್ಕೆ ಸಾಗಿದಂತಾಗಿತ್ತು.

ಸೊಂಗ್‌ ರಾಜವಂಶದ (960-1279) ಅವಧಿಯಲ್ಲಿ, ಎಲ್ಲಾ ಚಹಾದ ಉತ್ಪಾದನೆ ಮತ್ತು ತಯಾರಿಕೆಯು ಬದಲಾಯಿತು. ಸೊಂಗ್‌ ಅವಧಿಯ ಚಹಾವು ವಿರಳವಾದ-ಎಲೆಯ ಅನೇಕ ಶೈಲಿಗಳನ್ನು (ರಾಜರ ಆಸ್ಥಾನದ ಬಳಗದಿಂದ ಬೆಂಬಲಿಸಲ್ಪಟ್ಟ ಉತ್ಕೃಷ್ಟ ಗುಣವನ್ನು ಕಾಯ್ದಿಟ್ಟುಕೊಳ್ಳಲು) ಒಳಗೊಂಡಿತ್ತು, ಆದರೆ ಪುಡಿಮಾಡಲಾದ ಚಹಾದ ಒಂದು ಹೊಸ ಸ್ವರೂಪವು ಹೊರಹೊಮ್ಮಿತು. ಚಹಾವನ್ನು ತಯಾರಿಸುವಾಗ ಚಹಾ ಎಲೆಗಳನ್ನು ಆವಿಯಲ್ಲಿ ಬೇಯಿಸುವುದು ಶತಮಾನಗಳಿಂದಲೂ ಬಳಕೆಯಲ್ಲಿದ್ದ ಒಂದು ಪ್ರಮುಖ ಪ್ರಕ್ರಿಯೆಯಾಗಿತ್ತು. ಸಂಕ್ಷೇಪಿಸಿದ ಚಹಾ ಸ್ವರೂಪದಿಂದ ಪುಡಿಮಾಡಿದ ಸ್ವರೂಪಕ್ಕೆ ರೂಪಾಂತರವಾದ ನಂತರ, ವ್ಯಾಪಾರ ಮತ್ತು ವಿತರಣಾ ಉದ್ದೇಶಗಳಿಗೆ ಮೀಸಲಾಗಿದ್ದ ಚಹಾದ ತಯಾರಿಕೆಯು ಮತ್ತೊಮ್ಮೆ ಬದಲಾಯಿತು. ಚಹಾವನ್ನು ಬೇರೆಯದೇ ಆದ ವಿಧಾನವೊಂದರಲ್ಲಿ ಸಂಸ್ಕರಿಸುವುದನ್ನು 13ನೇ ಶತಮಾನದ ಮಧ್ಯಭಾಗದಲ್ಲಿ ಚೀನಿಯರು ಕಲಿತರು. ಚಹಾ ಎಲೆಗಳನ್ನು ಹುರಿಯಲಾಗುತ್ತಿತ್ತು ಮತ್ತು ನಂತರ ಅವುಗಳನ್ನು ಆವಿಯಲ್ಲಿ ಬೇಯಿಸುವ ಬದಲು ಪುಡಿಪುಡಿ ಮಾಡಲಾಗುತ್ತಿತ್ತು. ಇಂದು ನಾವು ಕಾಣುತ್ತಿರುವ ಬಿಡಿಬಿಡಿಯಾದ ಚಹಾಗಳು ಮತ್ತು ಕುದಿಸಿದ ಚಹಾವು ಹುಟ್ಟಿದ್ದು ಹೀಗೆ.

ಐತಿಹಾಸಿಕವಾಗಿ ಚೀನಾದಲ್ಲಿನ ಚಹಾ ಉತ್ಪಾದನೆಯು, ಒಂದು ಪ್ರಯಾಸದ ಪ್ರಕ್ರಿಯೆಯಾಗಿತ್ತು. ತೀರಾ ದೂರದ ಮತ್ತು ತಲುಪುವುದಕ್ಕೆ ಕಷ್ಟಸಾಧ್ಯವಾದ ಪ್ರದೇಶಗಳಲ್ಲಿ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿತ್ತು. ಕಟಾವು ಪ್ರಕ್ರಿಯೆಯನ್ನು ಸುತ್ತುವರೆದಿರುವ ಅನೇಕ ಅವಿಶ್ವಸನೀಯ ಕಥೆಗಳು ಹಾಗೂ ದಂತಕಥೆಗಳು ಹುಟ್ಟಿಕೊಳ್ಳಲು ಇದು ಕಾರಣವಾಯಿತು. ಉದಾಹರಣೆಗೆ, ಅನೇಕ ವರ್ಷಗಳವರೆಗೆ ಹೇಳಲ್ಪಡುತ್ತಾ ಬಂದಿರುವ ಕಥೆಯೊಂದು, ಚಹಾವನ್ನು ಕೊಯ್ಯುವ ಮಂಗಗಳು ಇರುವ ಹಳ್ಳಿಯೊಂದರ ಕುರಿತದ್ದಾಗಿದೆ. ಈ ದಂತಕಥೆಯ ಅನುಸಾರ, ಮಂಗಗಳ ಕೆಳಗೆ ನಿಲ್ಲುವ ಹಳ್ಳಿಗರು ಅವುಗಳನ್ನು ಕೆಣಕುತ್ತಾರೆ. ಇದಕ್ಕೆ ಪ್ರತಿಯಾಗಿ ಮಂಗಗಳು, ಕೋಪಗೊಳ್ಳುತ್ತವೆ ಮತ್ತು ಕೈತುಂಬುವಷ್ಟು ಚಹಾ ಎಲೆಗಳನ್ನು ಕಿತ್ತುಕೊಂಡು, ಹಳ್ಳಿಗರ ಕಡೆಗೆ ಅವನ್ನು ಎಸೆಯುತ್ತವೆ.[೩೨] ಈ ರೀತಿಯಲ್ಲಿಯೇ ಕಟಾವು ಮಾಡಲಾಯಿತು ಎಂದು ಸಮರ್ಥಿಸುವ ಅನೇಕ ಉತ್ಪನ್ನಗಳು ಇಂದು ಮಾರಾಟವಾಗುತ್ತಿವೆ, ಆದರೆ ಯಾವುದೇ ವಿಶ್ವಾಸಾರ್ಹ ವಿವರಣೆಕಾರರು ಇದನ್ನು ಸಾಕ್ಷಾತ್‌ ರೂಪದಲ್ಲಿ ನೋಡಿಲ್ಲ, ಮತ್ತು ಇದು ಈ ರೀತಿಯಲ್ಲಿ ನಡೆದಿರುವುದರ ಕುರಿತು ಅನೇಕರು ಸಂದೇಹಿಸುತ್ತಾರೆ.[೩೩] ನೂರಾರು ವರ್ಷಗಳವರೆಗೆ ವಾಣಿಜ್ಯೋದ್ದೇಶದ ರೂಪದಲ್ಲಿ ಬಳಕೆಯಾಗುತ್ತಿರುವ ಚಹಾ ಮರವು, ಒಂದು ಮರಕ್ಕಿಂತ ಹೆಚ್ಚಾಗಿ ಒಂದು ಪೊದೆಯ ಆಕಾರದಲ್ಲಿದೆ.[೩೪] "ಮಂಗ ಕೊಯ್ದ ಚಹಾ" ಎಂಬುದು, ಅದನ್ನು ಹೇಗೆ ಪಡೆಯಲಾಯಿತು ಎಂಬುದಕ್ಕಿಂತ, ಕೆಲವೊಂದು ಪ್ರಭೇದಗಳ ಹೆಸರಾಗಿರುವ ಸಂಭವವೇ ಹೆಚ್ಚು.[೩೫]

1391ರಲ್ಲಿ, ಮಿಂಗ್‌ ನ್ಯಾಯಾಲಯವು ಒಂದು ನಿರ್ಣಯವನ್ನು ಜಾರಿಗೊಳಿಸಿ, ಕೇವಲ ಬಿಡಿಯಾಗಿರುವ ಚಹಾವನ್ನು ಮಾತ್ರವೇ ಒಂದು "ಗೌರವ ಕಾಣಿಕೆ"ಯಂತೆ ಪುರಸ್ಕರಿಸಲಾಗುತ್ತದೆ ಎಂದು ತಿಳಿಸಿತು. ಇದರ ಪರಿಣಾಮವಾಗಿ, ಬಿಡಿಯಾಗಿರುವ ಚಹಾ ಉತ್ಪಾದನೆಯು ಹೆಚ್ಚಿತು ಮತ್ತು ಸಂಸ್ಕರಣೆಯ ಕೌಶಲಗಳು ಅಭಿವೃದ್ಧಿಗೊಂಡವು. ಕೆಲವೇ ದಿನಗಳಲ್ಲಿ, ಬಹುತೇಕ ಚಹಾವು ಸಂಪೂರ್ಣ-ಎಲೆ, ಬಿಡಿಯಾಗಿರುವ ಸ್ವರೂಪದಲ್ಲಿ ವಿತರಿಸಲ್ಪಟ್ಟಿತು ಮತ್ತು ಅದನ್ನು ಸುಟ್ಟ ಜೇಡಿಮಣ್ಣಿನಿಂದ ಮಾಡಿದ ಪಾತ್ರೆಗಳಲ್ಲಿ ನೆನೆಸಿಡಲಾಗುತ್ತಿತ್ತು.

ಜಪಾನ್‌

[ಬದಲಾಯಿಸಿ]
ಚಹಾವನ್ನು ಶೇಖರಿಸಿಡಲು ವ್ಯಾಪಾರಿಗಳಿಂದ ಬಳಸಲ್ಪಡುತ್ತಿದ್ದ ಪ್ರಾಚೀನ ಚಹಾ ಗಡಿಗೆಗಳು.
ಜಪಾನಿನ ಚಹಾ ಉತ್ಸವಾಚರಣೆ

ಆರನೇ ಶತಮಾನದ ವೇಳೆಗೆ ಚಹಾದ ಬಳಕೆಯು ಜಪಾನ್‌ ದೇಶಕ್ಕೆ ಹಬ್ಬಿತು.[೩೬] ಚಹಾ ಸಂಸ್ಕೃತಿಯ ಕುರಿತು ಕಲಿತುಕೊಂಡು ಬರಲು ಜಪಾನಿನ ಪಾದ್ರಿಗಳು ಹಾಗೂ ಹರಿಕಾರರನ್ನು ಚೀನಾಕ್ಕೆ ಕಳಿಸಿ, ಅವರು ಚಹಾವನ್ನು ಜಪಾನ್‌ಗೆ ತಂದಾಗ, ಚಹಾವು ಜಪಾನಿನಲ್ಲಿನ ಧಾರ್ಮಿಕ ವರ್ಗಗಳ ಒಂದು ಪೇಯವಾಗಿ ಮಾರ್ಪಟ್ಟಿತು. ಚಹಾದ ಬೀಜಗಳ ಮೊದಲ ತಂಡವು 805ರಲ್ಲಿ ....Saichō (最澄?, 767-822) ಎಂಬ ಹೆಸರಿನ ಪಾದ್ರಿಯೋರ್ವನಿಂದ ಮತ್ತು ನಂತರ 806ರಲ್ಲಿ ....Kūkai (空海?, 774-835) ಎಂಬ ಹೆಸರಿನ ಮತ್ತೋರ್ವನಿಂದ ತರಲ್ಪಟ್ಟಿತು ಎಂದು ಪ್ರಾಚೀನ ದಾಖಲೆಗಳು ಸೂಚಿಸುತ್ತವೆ. .....Emperor Saga (嵯峨天皇?) ಎಂಬ ಜಪಾನೀ ಚಕ್ರವರ್ತಿಯು ಚಹಾ ಸಸ್ಯಗಳನ್ನು ಬೆಳೆಯುವುದಕ್ಕೆ ಪ್ರೋತ್ಸಾಹಿಸಿದಾಗ, ಇದು ರಾಜವಂಶದ ಒಂದು ಪಾನೀಯವಾಗಿ ಮಾರ್ಪಟ್ಟಿತು. ಚೀನಾದಿಂದ ಬೀಜಗಳನ್ನು ಆಮದುಮಾಡಿಕೊಳ್ಳಲಾಯಿತು, ಮತ್ತು ಜಪಾನ್‌ನಲ್ಲಿ ವ್ಯವಸಾಯವು ಪ್ರಾರಂಭವಾಯಿತು.

...Eisai (栄西?, 1141-1215) ಎಂಬ ಪ್ರಖ್ಯಾತ ಝೆನ್‌ ಪಾದ್ರಿಯು 1191ರಲ್ಲಿ ಕ್ಯೋಟೋಗೆ ಚಹಾದ ಬೀಜಗಳನ್ನು ವಾಪಸು ತಂದ. ಚಹಾ ಬೀಜಗಳಲ್ಲಿ ಕೆಲವೊಂದನ್ನು ಮೈಯೋ ಷೋನಿನ್ ಎಂಬ ಪಾದ್ರಿಗೆ ಕೊಡಲಾಯಿತು. ಇದೇ ಉಜಿ ಚಹಾದ ಹೊರಹೊಮ್ಮುವಿಕೆಗೆ ಮೂಲಕಾರಣವಾಯಿತು. ಜಪಾನ್‌ನಲ್ಲಿನ, ....Kissa Yōjōki (喫茶養生記?, How to Stay Healthy by Drinking Tea) ಎಂಬ ಹೆಸರಿನ ಚಹಾ ವಿಶೇಷತೆಯ ಕುರಿತಾದ ಅತ್ಯಂತ ಹಳೆಯ ಪುಸ್ತಕವು ಐಸಾಯ್‌ ಎಂಬಾತನಿಂದ ಬರೆಯಲ್ಪಟ್ಟಿತು. ಚೀನಾಕ್ಕೆ ಆತ ನೀಡಿದ ಎರಡನೇ ಮತ್ತು ಕೊನೆಯ ಭೇಟಿಯ ನಂತರ, ಎರಡು-ಸಂಪುಟಗಳ ಈ ಪುಸ್ತಕವು 1211ರಲ್ಲಿ ಬರೆಯಲ್ಪಟ್ಟಿತು. ಅದರ ಮೊದಲ ವಾಕ್ಯವು ಈ ರೀತಿ ಹೇಳುತ್ತದೆ: "ಚಹಾ ಎಂಬುದು ಒಂದು ಪರಮಾವಧಿಯ ಮಾನಸಿಕ ಹಾಗೂ ಔಷಧ ರೂಪದ ಪರಿಹಾರೋಪಾಯವಾಗಿದ್ದು, ಓರ್ವರ ಜೀವನವನ್ನು ತುಂಬುಜೀವನವನ್ನಾಗಿಸುವ ಹಾಗೂ ಪರಿಪೂರ್ಣತೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ."

ಯೋಧರ ವರ್ಗಕ್ಕೆ ಚಹಾ ಸೇವನೆಯನ್ನು ಪರಿಚಯಿಸುವಲ್ಲಿ ಐಸಾಯ್‌ ಪ್ರಮುಖ ಪಾತ್ರವನ್ನು ವಹಿಸಿದ. ಇದರಿಂದಾಗಿ ಹೀಯನ್‌ ಅವಧಿಯ ನಂತರ ಚಹಾವು ರಾಜಕೀಯ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು.

ಜಪಾನ್‌ನಲ್ಲಿನ ಸುಸಂಸ್ಕೃತ ಜನಗಳ ಮಧ್ಯೆ ಹಸಿರು ಚಹಾವು ಒಂದು ಮುಖ್ಯ ವಸ್ತುವಾಗಿ ಮಾರ್ಪಟ್ಟು, ಕುಲೀನವರ್ಗ ಮತ್ತು ಬೌದ್ಧ ಧರ್ಮದ ಪಾದ್ರಿವರ್ಗಗಳಿಗಾಗಿರುವ ಒಂದು ಕಷಾಯಪೇಯವಾಯಿತು. ಉತ್ಪಾದನೆಯು ಬೆಳೆದು ಚಹಾವು ಹೆಚ್ಚೆಚ್ಚು ದೊರೆಯಲಾರಂಭಿಸಿತಾದರೂ, ಅದು ಈಗಲೂ ಬಹುತೇಕವಾಗಿ ಉನ್ನತ ವರ್ಗದವರು ಅನುಭವಿಸುತ್ತಿರುವ ಒಂದು ಸುಯೋಗವಾಗಿಯೇ ಮುಂದುವರೆದುಕೊಂಡುಬಂದಿದೆ. 15ನೇ ಶತಮಾನದಲ್ಲಿ ಜಪಾನಿನ ಚಹಾ ಉತ್ಸವಾಚರಣೆಯು ಚೀನಾದಿಂದ ಪರಿಚಯಿಸಲ್ಪಟ್ಟಿತು. ಬೌದ್ಧಧರ್ಮೀಯರಿಂದ ಪರಿಚಯಿಸಲ್ಪಟ್ಟ ಈ ಆಚರಣೆಯು ಒಂದು ಅರೆ-ಧಾರ್ಮಿಕ ಸಾಮಾಜಿಕ ಪದ್ಧತಿಯಾಗಿ ಮೈದಳೆಯಿತು. ...Sen no Rikyū (千 利休?, 1522-1591) ಎಂಬ ಸನ್ಯಾಸಿಯ ಮೂಲ ಮಾರ್ಗದರ್ಶನದ ಅಡಿಯಲ್ಲಿ ಝೆನ್‌ ಬೌದ್ಧ ಧರ್ಮೀಯ ಸನ್ಯಾಸಿಗಳಿಂದ ಹಲವಾರು ಶತಮಾನಗಳವರೆಗೆ ಆಧುನಿಕ ಚಹಾ ಉತ್ಸವಾಚರಣೆಯು ಬೆಳವಣಿಗೆಯನ್ನು ಕಂಡಿತು. ವಾಸ್ತವವಾಗಿ, ಚಹಾ ಪಾನೀಯ ಮತ್ತು ಅದನ್ನು ಸುತ್ತುವರೆದಿದ್ದ ಉತ್ಸವಾಚರಣೆಗಳೆರಡೂ ಊಳಿಗಮಾನ್ಯ ರಾಜತಂತ್ರದಲ್ಲಿ ಒಂದು ಪ್ರಮುಖಪಾತ್ರವನ್ನು ವಹಿಸಿದವು.

1738ರಲ್ಲಿ, ಸೋಯೆನ್‌ ನಾಗತಾನಿಯು ಜಪಾನಿನ sencha (煎茶?)... ಎಂಬ, ಅಕ್ಷರಶಃ ಹುರಿದ ಚಹಾ ವನ್ನು (ರೋಸ್ಟೆಡ್‌ ಟೀ) ಅಭಿವೃದ್ಧಿಪಡಿಸಿದ. ಇದು ಹಸಿರು ಚಹಾದ ಒಂದು ಹುದುಗಿಸದ ಸ್ವರೂಪವಾಗಿದೆ. ಇದು ಜಪಾನ್‌ನಲ್ಲಿನ ಇಂದಿನ ಅತ್ಯಂತ ಜನಪ್ರಿಯ ಚಹಾದ ಸ್ವರೂಪವಾಗಿದೆ. 1835ರಲ್ಲಿ, ಕಾಹೀ ಯಮಮೊಟೊ ಎಂಬಾತ gyokuro (玉露?) ಎಂಬ ಹೆಸರಿನ, ಅಕ್ಷರಶಃ ಅಮೂಲ್ಯರತ್ನದ ಇಬ್ಬನಿ (ಜ್ಯೂಯೆಲ್ ಡ್ಯೂ) ಎಂಬ ಅರ್ಥವನ್ನು ಕೊಡುವ ಚಹಾವನ್ನು ಅಭಿವೃದ್ಧಿಪಡಿಸಿದ. ಕಟಾವಿನವರೆಗಿನ ವಾರಗಳ ಅವಧಿಯಲ್ಲಿ ಚಹಾಮರಗಳಿಗೆ ನೆರಳನ್ನು ಒದಗಿಸುವ ಮೂಲಕ ಆತ ಇದನ್ನು ಕೈಗೊಂಡ. ಮೀಜಿ ಅವಧಿಯ ಅಂತ್ಯದ ಹೊತ್ತಿಗೆ (1868-1912), ಯಂತ್ರಗಳ ಮೂಲಕದ ಹಸಿರು ಚಹಾ ತಯಾರಿಕೆಯು ಪರಿಚಯಿಸಲ್ಪಟ್ಟಿತು ಮತ್ತು ಅದು ಕೈನಿಂದ ಮಾಡಿದ ಚಹಾವನ್ನು ಪಲ್ಲಟಗೊಳಿಸಲು ಶುರುಮಾಡಿತು.

ಕೊರಿಯಾ

[ಬದಲಾಯಿಸಿ]
ಕೊರಿಯಾದ ಚಹಾ ಉತ್ಸವಾಚರಣೆಯಾದ ದಾರ್ಯೆ

ಚಹಾವನ್ನು ಮೂಲರೂಪದ ದೇವರೊಂದಕ್ಕೆ ಭಕ್ತಿಯಿಂದ ಅರ್ಪಿಸುವುದನ್ನು ದಾಖಲಿಸುವ ಮೊಟ್ಟಮೊದಲ ಐತಿಹಾಸಿಕ ದಾಖಲೆಯು 661ರ ವರ್ಷದಲ್ಲಿನ ಒಂದು ಧಾರ್ಮಿಕವಿಧಿಯನ್ನು ವಿವರಿಸುತ್ತದೆ. ಈ ಧಾರ್ಮಿಕವಿಧಿಯಲ್ಲಿ, ಗ್ಯುಂಗ್ವಾನ್‌ ಗಯಾ ರಾಜ್ಯದ (42-562) ಸಂಸ್ಥಾಪಕನಾದ ಸುರೊ ರಾಜನ ಚೇತನಕ್ಕೆ ಚಹಾದ ಅರ್ಪಣೆಯನ್ನು ಮಾಡಲಾಗುತ್ತಿತ್ತು. ಗೊರಿಯೊ ರಾಜವಂಶದ (918-1392) ದಾಖಲೆಗಳು ತೋರಿಸುವಂತೆ, ಚಹಾದ ಅರ್ಪಣೆಗಳನ್ನು ಬೌದ್ಧ ಧರ್ಮದ ದೇವಾಲಯಗಳಲ್ಲಿ ಪೂಜ್ಯ ಸನ್ಯಾಸಿಗಳ ಚೇತನಗಳಿಗೆ ಸಲ್ಲಿಸಲಾಗುತ್ತಿತ್ತು.

ಜೋಸಿಯಾನ್‌ ರಾಜವಂಶದ (1392-1910) ಅವಧಿಯಲ್ಲಿ, ರಾಜವೈಭವದ ಯಿ ಕುಟುಂಬ ಮತ್ತು ಶ್ರೀಮಂತ ವರ್ಗವು ಸರಳವಾದ ಧಾರ್ಮಿಕ ವಿಧಿಗಳಲ್ಲಿ ಚಹಾವನ್ನು ಬಳಸಿದವು. "ದಿನದ ಚಹಾ ಧಾರ್ಮಿಕವಿಧಿ" ಎಂಬುದು ಹಗಲುವೇಳೆಯ ಒಂದು ಸಾಮಾನ್ಯ ಉತ್ಸವಾಚರಣೆಯಾಗಿದ್ದರೆ, "ವಿಶೇಷ ಚಹಾ ಧಾರ್ಮಿಕವಿಧಿ"ಯನ್ನು ನಿರ್ದಿಷ್ಟ ವಿಶೇಷ-ಸಂದರ್ಭಗಳಿಗಾಗಿ ಮೀಸಲಿರಿಸಲಾಗಿತ್ತು. ಜೋಸಿಯಾನ್‌ ರಾಜವಂಶದ ಅಂತ್ಯದ ವೇಳೆಗೆ, ಶ್ರೀಸಾಮಾನ್ಯರು ಈ ಪ್ರವೃತ್ತಿಯ ಕಡೆಗೆ ಒಲವು ತೋರಿಸಿದರು ಮತ್ತು ಚಹಾವನ್ನು ಮೂಲರೂಪದ ಧಾರ್ಮಿಕವಿಧಿಗಳಿಗಾಗಿ ಬಳಸಿದರು. ಝು ಕ್ಸಿಯ ಕುಟುಂಬದ ಲಿಖಿತ ಶಿಷ್ಟಾಚಾರಗಳನ್ನು ಆಧರಿಸಿದ ಚೀನಿಯರ ಉದಾಹರಣೆಯನ್ನು ಅವರು ಈ ಸಂದರ್ಭದಲ್ಲಿ ಅನುಸರಿಸಿದರು.

ಜೇಡಿಪಾತ್ರೆಯು ಸಾಮಾನ್ಯವಾಗಿತ್ತು, ಬಹುಪಾಲು ಪ್ರಾಂತೀಯ ಒಲೆಗಳಲ್ಲಿ ತಯಾರಿಸಲಾದ ಕುಂಬಾರಿಕೆಯ ಮಣ್ಣಿನ ಪಾತ್ರೆಯು ಹೆಚ್ಚು ಬಳಕೆಯಲ್ಲಿತ್ತು. ಪಿಂಗಾಣಿಯ ಪಾತ್ರೆಗಳು ಅಪರೂಪದ್ದಾಗಿದ್ದರೆ, ಡ್ರ್ಯಾಗನ್‌ ಚಿತ್ರವನ್ನೊಳಗೊಂಡ ಅತ್ಯಂತ ವೈಭವದ ಪಿಂಗಾಣಿಯಂತೂ ದುರ್ಲಭವಾಗಿತ್ತು. ಚಹಾದ ಉತ್ಸವಾಚರಣೆಗಳಲ್ಲಿ ಬಳಸಲಾಗಿದ್ದ ಚಹಾದ ಆರಂಭಿಕ ವಿಧಗಳು ಕಪ್ಪು ಚಹಾವನ್ನು ಚೆನ್ನಾಗಿ ಒತ್ತಿ ಮಾಡಿದ ದಪ್ಪಬಿಲ್ಲೆಗಳಾಗಿದ್ದು, ಚೀನಾದಲ್ಲಿ ಇನ್ನೂ ಜನಪ್ರಿಯವಾಗಿರುವ ಹಳೆಯ ಪು-ಎರ್ಹ್‌ ಚಹಾಕ್ಕೆ ಅವು ಸರಿಸಮಾನವಾಗಿದ್ದವು. ಆದಾಗ್ಯೂ, ಬೌದ್ಧ ಧರ್ಮೀಯ ಸನ್ಯಾಸಿಗಳ ಕಡೆಯಿಂದ ನಡೆದ ಚಹಾದ ಆಮದುಕಾರ್ಯವು ಕೊರಿಯಾದೊಳಗಡೆಗೆ, ಮತ್ತು ಚಹಾ ಉತ್ಸವಾಚರಣೆಗೆ ಒಂದು ಅತ್ಯಂತ ಉತ್ಕೃಷ್ಟವಾದ ಚಹಾಗಳ ಶ್ರೇಣಿಯನ್ನೇ ತಂದುಕೊಟ್ಟವು ಎಂದು ಹೇಳಬಹುದು. "ಚಕ್ಸೋಲ್‌" ಅಥವಾ "ಚುಂಗೋ" ಎಂದು ಕರೆಯಲಾಗುವ ಹಸಿರು ಚಹಾವನ್ನು ಅತ್ಯಂತ ಹೆಚ್ಚುಬಾರಿ ವಿತರಿಸಲಾಗುತ್ತದೆ. ಆದಾಗ್ಯೂ, "ಬೈಯೋಕ್ಸೊರ್ಯಂಗ್‌" ಚುನ್ಹಾಚೂನ್‌, ವೂಜೆಯಾನ್‌, ಜಾಕ್ಸಿಯೋಲ್‌, ಜೂಕ್ರೋ, ಒಕೆಚೆಯಾನ್‌ನಂಥ ಚಹಾಗಳಷ್ಟೇ ಅಲ್ಲದೇ, ಸೇವಂತಿಗೆ ಚಹಾ, ಪರ್ಸಿಮನ್‌ ಎಲೆ ಚಹಾ, ಅಥವಾ ಮಗ್‌ವರ್ಟ್‌ ಚಹಾದಂಥ ಇತರ ಚಹಾಗಳೂ ವರ್ಷದ ವಿವಿಧ ಕಾಲಗಳಲ್ಲಿ ವಿತರಿಸಲ್ಪಡಬಹುದು.

ತೈವಾನ್‌

[ಬದಲಾಯಿಸಿ]

ಊಲಾಂಗ್‌ ಚಹಾ ಮತ್ತು ಹಸಿರು ಚಹಾಗಳಷ್ಟೇ ಅಲ್ಲದೇ, ಪಾಶ್ಚಿಮಾತ್ಯ-ಶೈಲಿಯ ಅನೇಕ ಚಹಾಗಳ ತಯಾರಿಕೆಗೂ ತೈವಾನ್‌ ಪ್ರಖ್ಯಾತವಾಗಿದೆ. ಗುಳ್ಳೆ ಚಹಾ ಅಥವಾ "ಝೆನ್‌ ಝು ನಾಯ್‌ ಚಾ" (ಮ್ಯಾಂಡ್ರಿನ್‌: 珍珠奶茶) ಎಂಬುದು ಸಿಹೀಕರಿಸಿದ ಮಂದಗೊಳಿಸಿದ ಹಾಲು ಮತ್ತು ಮರಗೆಣಸಿನ ಪುಡಿಯೊಂದಿಗೆ ಬೆರೆಸಲಾದ ಕಪ್ಪು ಚಹಾ ಆಗಿದೆ.

ಅನೇಕ ಶತಮಾನಗಳಿಂದ ಪಾಶ್ಚಾತ್ಯರಿಗೆ ಸದರಿ ದ್ವೀಪವು,  ಪೋರ್ಚುಗೀಸ್‌ ಭಾಷೆಯ ಇಲ್ಹಾ ಫಾರ್ಮೋಸಾ  ಅಥವಾ "ಸುಂದರ ದ್ವೀಪ" ಎಂಬುದರ ಸಂಕ್ಷಿಪ್ತ ರೂಪವಾದ ಫಾರ್ಮೋಸಾ  ಎಂಬ ಹೆಸರಿನಿಂದಲೇ ಸುಪರಿಚಿತವಾಗಿದ್ದರಿಂದ, ತೈವಾನ್‌ನಲ್ಲಿ ಬೆಳೆಯಲಾದ ಚಹಾವು ಹೆಚ್ಚು ಬಾರಿ ಅದೇ ಫಾರ್ಮೋಸಾ ಹೆಸರಿನಿಂದಲೇ ಗುರುತಿಸಲ್ಪಡುತ್ತದೆ.

ಥೈಲೆಂಡ್‌

[ಬದಲಾಯಿಸಿ]

ಥೈಲೆಂಡ್‌‌ನಲ್ಲಿನ ಥಾಯ್‌ ಚಹಾ ಅಥವಾ "ಚಾ-ಯೆನ್‌" (ಥಾಯ್:ชาเย็น) ಎಂಬುದು ಹೆಚ್ಚಿನ ಪ್ರಮಾಣದಲ್ಲಿ ಕುದಿಸಿದ ಕಪ್ಪು ಚಹಾದಿಂದ (ಪೂರ್ವ ಏಷ್ಯಾದಲ್ಲಿ ಇದು "ಕೆಂಪು ಚಹಾ") ತಯಾರಿಸಲ್ಪಟ್ಟ ಒಂದು ಪಾನೀಯ. ಇದರಲ್ಲಿನ ಇತರ ಘಟಕಾಂಶಗಳಲ್ಲಿ, ಸೇರ್ಪಡೆಯಾದ ಕಿತ್ತಳೆ ಹೂವುಗಳ ನೀರು, ಮರಾಟಿ ಮೊಗ್ಗು, ಜಜ್ಜಿದ ಹುಣಿಸೆ ಹಣ್ಣಿನ ಬೀಜ ಅಥವಾ ಕೆಂಪು ಮತ್ತು ಹಳದಿ ಆಹಾರ ವರ್ಣದ್ರವ್ಯ, ಹಾಗೂ ಕೆಲವೊಮ್ಮೆ ಇತರ ಮಸಾಲೆಗಳೂ ಸೇರಿರಬಹುದು. ಸಕ್ಕರೆ ಮತ್ತು ಮಂದಗೊಳಿಸಿದ ಹಾಲಿನ ಜೊತೆಗೆ ಸೇರಿ ಈ ಚಹಾವು ಸಿಹೀಕರಿಸಲ್ಪಡುತ್ತದೆ .

ಸಾಮಾನ್ಯವಾಗಿ, ಥಾಯ್‌ ಜನರು ಮುಂಜಾನೆಯಲ್ಲಿ ಬಿಸಿಯಾದ ಥಾಯ್‌ ಚಹಾವನ್ನು ಕುಡಿಯುತ್ತಾರೆ. ಬಹುತೇಕ ಥಾಯ್‌ ಜನರಿಂದ ಕರೆಯಲ್ಪಡುವ, ಯೌ ಜಾ ಗ್ವಾಯ್‌ ಅಥವಾ ಪಾ-ಟೊಂಗ್‌-ಕೊ (ಥಾಯ್‌: ปาท่องโก๋) ಎಂಬುದು ಅನೇಕ ವೇಳೆ ಇದರ ಜೊತೆಗಿರುತ್ತದೆ.

- *ಬಿಸಿ ಥಾಯ್‌ ಚಹಾ (ಥಾಯ್‌: ชาร้อน, ಚಾ-ರೋನ್‌) ಬಿಸಿಯಾಗಿರುವಂತೆ ವಿತರಿಸಲಾಗುವ ಥಾಯ್‌ ಚಹಾ.

- *ಕಡು ಬಿಸಿ ಥಾಯ್‌ ಚಹಾ (ಥಾಯ್‌: ชาดำร้อน, ಚಾ-ದಮ್‌-ರೋನ್‌) ಕೇವಲ ಸಕ್ಕರೆಯೊಂದಿಗೆ ಸಿಹೀಕರಿಸಿದ, ಹಾಲಿನ ಅಂಶವಿಲ್ಲದ, ಬಿಸಿಯಾಗಿರುವಂತೆ ವಿತರಿಸಲಾಗುವ ಥಾಯ್‌ ಚಹಾ.

ವಿಯೆಟ್ನಾಂ

[ಬದಲಾಯಿಸಿ]

ಟೆಂಪ್ಲೇಟು:Infobox Tea

ಪ್ರಸಕ್ತ ದಿನದವರೆಗೂ ಏಷ್ಯಾದ ಪ್ರಮುಖ ಭೂಭಾಗದ ಆಚೆಗೆ ವಿಯೆಟ್ನಾಮಿನ ಹಸಿರು ಚಹಾಗಳ ಕುರಿತು ಹೆಚ್ಚಿನ ಮಾಹಿತಿಯು ತಿಳಿದಿರಲಿಲ್ಲ. ಇತ್ತೀಚಿನ ಮುಕ್ತ-ಉದ್ಯಮದ ಉಪಕ್ರಮ ಶಕ್ತಿಗಳು ಹೊಸ ರಫ್ತು ಚಟುವಟಿಕೆಗಳ ಮೂಲಕ ಈ ಹಸಿರು ಚಹಾಗಳನ್ನು ಹೊರಗಿನ ದೇಶಗಳಿಗೂ ಪರಿಚಯಿಸುತ್ತಿವೆ.

ವಿಧಗಳು

  • ತಾವರೆ ಚಹಾವು ವಿಯೆಟ್ನಾಮಿನ ಚಹಾ ಉದ್ಯಮದ ಒಂದು ವಿಶಿಷ್ಟ ಉತ್ಪನ್ನವಾಗಿದೆ. ಸಾಮಾನ್ಯವಾಗಿ, ಉನ್ನತ-ಗುಣಮಟ್ಟದ ಹಸಿರು ಚಹಾ ಎಲೆಗಳನ್ನು ತಾವರೆ ಹೂವುಗಳೊಂದಿಗೆ ಇರಿಸಿ ಪರಿಮಳವನ್ನು ತನ್ನದಾಗಿಸಿಕೊಳ್ಳಲು ಅನುವುಮಾಡಿಕೊಡಲಾಗುತ್ತದೆ. ನಂತರ ಅವನ್ನು ಹೊರತೆಗೆದು, ಡಬ್ಬದಲ್ಲಿ ತುಂಬಿಸಲಾಗುತ್ತದೆ. ಉನ್ನತ ಗುಣಮಟ್ಟದ ಹಸಿರು ಚಹಾ ಎಲೆಗಳೊಂದಿಗೆ ತಾವರೆಯ ದಳಗಳನ್ನು ಬೆರೆಸುವ ಮೂಲಕ, ಉನ್ನತ ದರ್ಜೆಯ ತಾವರೆ ಚಹಾವೊಂದನ್ನು ತಯಾರಿಸಲಾಗುತ್ತದೆ. ಅರ್ಧಚಂದ್ರಾಕಾರಗಳಿಗೆ ಚಹಾ ಎಲೆಗಳನ್ನು ನವಿರಾಗಿ ಸುರುಳಿ ಸುತ್ತುವ, ಮತ್ತು ಅದರಲ್ಲಿ ಕೈಯಾಡಿಸುವಿಕೆಯನ್ನು ಕಡಿಮೆ ಮಾಡುವ ಕ್ರಮವು ವಿಯೆಟ್ನಾಂನ ಹಸಿರು ಚಹಾ ಶೈಲಿಯಲ್ಲಿ ಸೇರಿದೆ. ವಿಯೆಟ್ನಾಮಿನ ಹಸಿರು ಚಹಾಗಳು ವಿಶಿಷ್ಟವಾಗಿ ಅತ್ಯಂತ ತೀಕ್ಷ್ಣವಾಗಿರುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ರುಚಿಯನ್ನು ಉಳಿಸಿಕೊಳ್ಳಲು 160 °Fನಷ್ಟು ತಾಪಮಾನದಲ್ಲಿ 2 ನಿಮಿಷಗಳಿಗಿಂತಲೂ ಕಡಿಮೆ ಅವಧಿಗೆ ಅವನ್ನು ಚೆನ್ನಾಗಿ ಕುದಿಸಲಾಗುತ್ತದೆ. ಈ ಅವಧಿಯನ್ನು ಮೀರಿದರೆ ಚಹಾಕ್ಕೆ ಒಂದು ರೀತಿಯ ಕಹಿರುಚಿ ಬರುತ್ತದೆ ಹಾಗೂ ಇದು ಚಹಾದ ಎಲೆಗಳ ತೀಕ್ಷ್ಣತೆಯನ್ನು ಪ್ರತಿಬಿಂಬಿಸುತ್ತದೆಯಾದ್ದರಿಂದ, ಅದೇನೇ ಹೇಳಿದರೂ ಅದನ್ನು ಅನೇಕ ಚಹಾಪ್ರೇಮಿಗಳು ಊಹಿಸಲೂ ಬಯಸುವುದಿಲ್ಲ.

ಕೆಲವು ಹವ್ಯಾಸಿಗಳು ಒಂದು ರಾಶಿ ಎಲೆಗಳನ್ನು 3-4 ಬಾರಿ ಕುದಿಸುತ್ತಾರೆ. ನಂತರದ ತಯಾರಿಕೆಯ ಅಲ್ಪ ಪ್ರಮಾಣದ ಪರಿಮಳ ಶ್ರೇಣಿಯನ್ನು ಬಯಸಿ ಅವರು ಹೀಗೆ ಮಾಡುತ್ತಾರೆ ಎನ್ನಬಹುದು.

  • ಮಲ್ಲಿಗೆ ಚಹಾವನ್ನು ತಾವರೆ ಚಹಾದ ರೀತಿಯಲ್ಲೇ ಎರಡು ದರ್ಜೆಗಳಲ್ಲಿ ತಯಾರಿಸಲಾಗುತ್ತದೆ. ತಾವರೆ ಚಹಾವು ಒಂದು ವಿಶಿಷ್ಟ ಚಹಾ ಎಂದು ಪರಿಗಣಿಸಲ್ಪಟ್ಟಿದ್ದು, ವಿಶೇಷ ಕಾರ್ಯಕ್ರಮಗಳು ಅಥವಾ ಔತಣಗಳಿಗಾಗಿ ಇದನ್ನು ಮೀಸಲಿರಿಸಲಾಗುತ್ತದೆ. ವಿಯೆಟ್ನಾಮಿಯರ ತಂಪಾಗಿಸಿದ ಕಾಫಿಗೆ ಸಂಬಂಧಿಸಿದಂತಿರುವ ಒಂದು "ಚೇಸರು ಬಿಯರ್‌"ನಂತೆ ಮಲ್ಲಿಗೆ ಚಹಾವು ಜನಪ್ರಿಯವಾಗಿದೆ. ಕಾಫಿ ಕುಡಿದ ನಂತರ ಇದನ್ನು ಲೋಟಕ್ಕೆ ಸುರಿದು, ತಣ್ಣಗಾಗಲು ಬಿಡಲಾಗುತ್ತದೆ. ನಂತರ ಕಾಫಿ ಷಾಪ್‌ ಕೆಫೆಗಳಲ್ಲಿ ತಂಪಾಗಿಸಿದ ಕಾಫಿಯ ನಂತರದ ಒಂದು ಮುಂಬರಿಕೆಯಾಗಿ ಇದನ್ನು ಸವಿಯಲಾಗುತ್ತದೆ. ಬಿಸಿಯೇರಿದ ಸಂಜೆಗಳಲ್ಲಿ ಕಾಫಿ ಷಾಪ್‌ಗಳು ಒಂದು ಜನಪ್ರಿಯ ಸಾಮಾಜಿಕ ಜಮಾವಣೆ ಜಾಗವಾಗಿರುವ ಪ್ರಮುಖ ನಗರಗಳ ರಾತ್ರಿಯ ಜೀವನದಲ್ಲಿ ಈ ಪ್ರವೃತ್ತಿಯು ನಿರ್ದಿಷ್ಟವಾಗಿ ಹೆಚ್ಚು ಕಂಡುಬರುತ್ತದೆ.
  • ಪಲ್ಲೆಹೂವು ಚಹಾ

ಚಹಾ-ನೆಲೆಯ "ಆಶ್ರಯಧಾಮ"ಗಳಿಗೆ ಪ್ರಖ್ಯಾತವಾಗಿರುವ ಅನೇಕ ಪ್ರದೇಶಗಳಲ್ಲಿ ವಿಯೆಟ್ನಾಮಿಯರ ಚಹಾಗಳನ್ನು ತಯಾರಿಸಲಾಗುತ್ತದೆ. ಉದಾಹರಣೆಗೆ, ಕೆಲವೊಂದು ಪ್ರದೇಶಗಳು ಲ್ಯಾಮ್‌ಡೊಂಗ್‌ ಪ್ರಸ್ಥಭೂಮಿಗಳ ಅಗಾಧವಾದ ಚಹಾ ಕಾಡುಗಳ ಮಧ್ಯೆ ನೆಲೆಗೊಂಡಿದ್ದು, ಅಲ್ಲಿ 18ನೇ ಶತಮಾನದ ಅಂತ್ಯದ ವೇಳೆಗೆ ಕಟ್ಟಲಾದ ಪ್ರಾಚೀನ ರುವಾಂಗ್‌ ಮನೆಗಳ ಒಂದು ಸಮುದಾಯವೇ ಅಸ್ತಿತ್ವದಲ್ಲಿದೆ.

ಮಧ್ಯಪ್ರಾಚ್ಯ ವಲಯದ ಚಹಾ

ಚಹಾವು ಪ್ರಪಂಚಕ್ಕೆ ವ್ಯಾಪಿಸುತ್ತದೆ

[ಬದಲಾಯಿಸಿ]
ರಷ್ಯಾ ಹಾಗೂ ಕೆಲವೊಂದು ಮಧ್ಯಪ್ರಾಚ್ಯ ವಲಯದ ದೇಶಗಳಲ್ಲಿ ಚಹಾಕ್ಕಾಗಿ ನೀರು ಕುದಿಸಲು ಬಳಸಲಾದ ಒಂದು ಶಂಕುವಿನಂಥ ಗಡಿಗೆಯಾಕಾರದ ಬೆಳ್ಳಿ-ಲೇಪಿತ ಚಹಾ ಡಬರಿ

ಒಂದು ಅತ್ಯಂತ ಪಾಶ್ಚಾತ್ಯ ಶೈಲಿಯ ಬರಹದಲ್ಲಿರುವ ಚಹಾದ ಕುರಿತಾದ ಪುರಾತನ ಕಾಲದ ದಾಖಲೆಯು ಅರೇಬಿಯಾದ ಓರ್ವ ಪ್ರವಾಸಿಗನ ಹೇಳಿಕೆಯಲ್ಲಿ ಕಂಡುಬಂದಿದೆ ಎಂದು ಹೇಳಲಾಗುತ್ತದೆ. 879ರ ವರ್ಷದ ನಂತರ, ಉಪ್ಪು ಮತ್ತು ಚಹಾದ ಮೇಲೆ ವಿಧಿಸಲಾಗುತ್ತಿದ್ದ ಸುಂಕಗಳೇ ಕ್ಯಾಂಟನ್‌ ಪ್ರದೇಶದಲ್ಲಿನ ಆದಾಯದ ಪ್ರಮುಖ ಮೂಲಗಳಾಗಿದ್ದವು ಎಂದು ಈ ಹೇಳಿಕೆಯು ತಿಳಿಸುತ್ತದೆ. ಸ್ವೇಚ್ಛಾನುಸಾರವಾಗಿ ಅಥವಾ ಅನಿರ್ಬಂಧಿತವಾಗಿ ಚಹಾದ ತೆರಿಗೆಗಳನ್ನು ಹೆಚ್ಚಿಸಿದ್ದಕ್ಕಾಗಿ ಚೀನಾದ ಹಣಕಾಸು ಮಂತ್ರಿಯೊಬ್ಬನು 1285ರಲ್ಲಿ ಪದಚ್ಯುತಿಗೊಳ್ಳಬೇಕಾಯಿತು ಎಂಬುದನ್ನು ಮಾರ್ಕೊ ಪೋಲೊ ದಾಖಲಿಸಿದ್ದಾನೆ. ಜಿಯೋವನ್ನಿ ಬ್ಯಾಟ್ಸಿಕಾ ರ್ಯಾಮುಸಿಯೋ (1559), L. ಅಲ್ಮೇಡಾ (1576), ಮ್ಯಾಫಿ (1588), ಮತ್ತು ಟೀಕ್ಸೀರಾ (1610) ಎಂಬ ಪ್ರವಾಸಿಗಳು ಕೂಡಾ ಚಹಾದ ಕುರಿತು ನಮೂದುಗಳನ್ನು ಮಾಡಿದ್ದಾರೆ. 1557ರಲ್ಲಿ, ಮಕಾವ್‌ನಲ್ಲಿ ಒಂದು ವ್ಯಾಪಾರದ ನೆಲೆಯನ್ನು ಪೋರ್ಚುಗಲ್‌ ಸ್ಥಾಪಿಸಿತು ಮತ್ತು ಚೀನಿಯರ ಪೇಯವಾದ "ಚಾ" ಎಂಬ ಪದವು ಕ್ಷಿಪ್ರವಾಗಿ ವ್ಯಾಪಿಸಿತು. ಆದರೆ ಅವರು ತಮ್ಮ ನೆಲೆಗಳಿಗೆ ಯಾವುದೇ ಚಹಾ ಮಾದರಿಗಳನ್ನು ತಂದ ಕುರಿತು ಯಾವುದೇ ನಮೂದುಗಳಿಲ್ಲ. 17ನೇ ಶತಮಾನದ ಆರಂಭದಲ್ಲಿ, ಡಚ್‌ ಈಸ್ಟ್‌ ಇಂಡಿಯಾ ಕಂಪನಿಯ ಒಂದು ಹಡಗು ಚೀನಾದಿಂದ ಆಮ್ಸ್‌ಟರ್‌ಡ್ಯಾಂಗೆ ಮೊಟ್ಟಮೊದಲ ಹಸಿರು ಚಹಾ ಎಲೆಗಳನ್ನು ತಂದಿತು. 1636ರ ಹೊತ್ತಿಗೆ ಫ್ರಾನ್ಸ್‌ನಲ್ಲಿ ಚಹಾದ ಕುರಿತು ಅರಿವು ಮೂಡಿತು. ಸರಿಸುಮಾರು 1648ರ ಹೊತ್ತಿಗೆ ಇದು ಪ್ಯಾರಿಸ್‌ನಲ್ಲಿ ಅಲ್ಪಾವಧಿಯ ಜನಪ್ರಿಯತೆಯನ್ನು ಅನುಭವಿಸಿತು. ರಷ್ಯಾದಲ್ಲಿನ ಚಹಾ ಇತಿಹಾಸವೂ ಕೂಡ ಹದಿನೇಳನೇ ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. 1618ರಲ್ಲಿ Iನೇ ಮೈಕೇಲ್‌ ಎಂಬ ರಷ್ಯಾದ ದೊರೆಗೆ ಮೊಟ್ಟಮೊದಲಿಗೆ ಚೀನಾವು ಚಹಾವನ್ನು ಒಂದು ಬಳುವಳಿಯಾಗಿ ನೀಡಿತು. ರಷ್ಯಾದ ರಾಯಭಾರಿಯು ಪಾನೀಯವನ್ನು ಪರೀಕ್ಷಿಸಿದ; ಅವನಿಗೆ ಅದು ಇಷ್ಟವಾಗಲಿಲ್ಲವಾದ್ದರಿಂದ ಆತ ಸದರಿ ಪ್ರಸ್ತಾವವನ್ನು ತಿರಸ್ಕರಿಸಿದ. ಹೀಗಾಗಿ ಐವತ್ತು ವರ್ಷಗಳಷ್ಟು ತಡವಾಗಿ ರಷ್ಯಾದಲ್ಲಿ ಚಹಾವು ಪರಿಚಯಗೊಂಡಿತು. 1689ರಲ್ಲಿ, ಚೀನಾದಿಂದ ರಷ್ಯಾಕ್ಕೆ ಚಹಾವು ನಿರಂತರವಾಗಿ ಆಮದಾಗುತ್ತಿತ್ತು.

ವರ್ಷಗಟ್ಟಲೆಯ ಪ್ರಯಾಣದಲ್ಲಿ ಪಯಣಿಸುವ ನೂರಾರು ಒಂಟೆಗಳ ಒಂದು ತಂಡದ ಮೂಲಕ ಈ ಆಮದು ಕಾರ್ಯವು ನಡೆಯುತ್ತಿತ್ತಾದ್ದರಿಂದ, ಅದು ಒಂದು ರೀತಿಯಲ್ಲಿ ಚಹಾವನ್ನು ಆ ಕಾಲದ ಒಂದು ಅತ್ಯಮೂಲ್ಯ ಸರಕನ್ನಾಗಿಸಿತ್ತು. 1657ರ ಹೊತ್ತಿಗಾಗಲೇ ಚಹಾವು ಜರ್ಮನ್‌ ಔಷಧ ವ್ಯಾಪಾರಿಗಳ ಬಳಿಯಲ್ಲಿ ಕಾಣಿಸಿಕೊಳ್ಳುತ್ತಿತ್ತಾದರೂ, ಆಸ್ಟ್‌ಫ್ರೀಸ್ಲೆಂಡ್‌ನಂಥ ತೀರ ಪ್ರದೇಶಗಳನ್ನು ಹೊರತುಪಡಿಸಿ ಬೇರೆಲ್ಲೂ ಹೇಳಿಕೊಳ್ಳುವಂಥ ಮನ್ನಣೆಯನ್ನು ಗಳಿಸಲಿಲ್ಲ.[೩೭] 1650ರ ದಶಕದ ಅವಧಿಯಲ್ಲಿ ಇಂಗ್ಲಂಡ್‌ನಲ್ಲಿ ಚಹಾವು ಮೊಟ್ಟಮೊದಲಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು, ಕಾಫಿ ಗೃಹಗಳ ಮೂಲಕ ಪರಿಚಯಿಸಲ್ಪಟ್ಟಿತು.  ಅಲ್ಲಿಂದ ಅದು ಅಮೆರಿಕಾದಲ್ಲಿನ ಬ್ರಿಟಿಷ್‌ ವಸಾಹತುಗಳಿಗೆ ಮತ್ತು ಎಲ್ಲೆಡೆಗೆ ಪರಿಚಯಿಸಲ್ಪಟ್ಟಿತು.

ಯುನೈಟೆಡ್ ಕಿಂಗ್‍ಡಮ್

[ಬದಲಾಯಿಸಿ]
ಮಲೇಷಿಯಾದ ಕ್ಯಾಮೆರಾನ್‌ ಪ್ರಸ್ಥಭೂಮಿಗಳಲ್ಲಿನ ಚಹಾ ನೆಡುತೋಪು.

IIನೇ ಚಾರ್ಲ್ಸ್‌ ದೊರೆಯ ವಿವಾಹವು ಪೋರ್ಚುಗೀಸ್‌ ರಾಜಕುಮಾರಿಯಾದ ಬ್ರಗಾಂಝಾದ ಕ್ಯಾಥರೀನ್‌ ಜೊತೆಗೆ ನಡೆಯುವುದರೊಂದಿಗೆ, 1660ರ ದಶಕದಲ್ಲಿ ಚಹಾವು ಬ್ರಿಟನ್‌ಗೆ ಆಮದಾಗಲು ಶುರುವಾಯಿತು. ಹೀಗಾಗಿ, ರಾಜಪರಿವಾರಕ್ಕೆ ಚಹಾ ಕುಡಿಯುವ ಅಭ್ಯಾಸವನ್ನು ಹೊತ್ತುತಂದಿದ್ದು ಕ್ಯಾಥರೀನ್‌ ಎನ್ನಬಹುದು.[೩೮] ಅದೇ ವರ್ಷದ ಸೆಪ್ಟೆಂಬರ್ 25ರಂದು ಸ್ಯಾಮ್ಯುಯೆಲ್‌ ಪೆಪಿಸ್‌ ಎಂಬಾತ ತನ್ನ ದಿನಚರಿಯಲ್ಲಿ ಈ ರೀತಿ ದಾಖಲಿಸಿದ: "ನಾನು ಹಿಂದೆಂದೂ ಕುಡಿದಿರದ ಒಂದು ಬಟ್ಟಲು ಚಹಾವನ್ನು (ಚೀನಾದ ಒಂದು ಪಾನೀಯ) ತರಲು ನಾನು ಹೇಳಿಕಳಿಸಿದೆ."[೩೯] ಆರಂಭಿಕ ಆಮದುಗಳು ಆಮ್‌ಸ್ಟರ್‌ಡ್ಯಾಂ ಮೂಲಕ ಅಥವಾ ಪೂರ್ವಭಾಗದ ದೋಣಿಗಳಲ್ಲಿದ್ದ ನಾವಿಕರ ಮೂಲಕ ಬಂದಿರುವ ಸಂಭವವಿದೆ.[೩೮]

ನಿಯತವಾದ ವ್ಯಾಪಾರವು ಗುವಾಂಗ್‌ಝೊವ್‌‌ನಲ್ಲಿ (ಕ್ಯಾಂಟನ್‌) ಪ್ರಾರಂಭವಾಯಿತು.[೩೮] ಎರಡು ಏಕಸ್ವಾಮ್ಯಗಳಿಂದ ವ್ಯಾಪಾರವು ನಿಯಂತ್ರಿಸಲ್ಪಡುತ್ತಿತ್ತು, ಅವೆಂದರೆ: ಚೀನಾದ ಹಾಂಗ್ಸ್‌ (ವ್ಯಾಪಾರ ಕಂಪನಿಗಳು) ಮತ್ತು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿ.[೩೮] ಚಹಾವನ್ನು ಬೆಳೆಯಲಾಗುತ್ತಿದ್ದ ಪರ್ವತಗಳು ಹಾಗೂ ಪ್ರಾಂತ್ಯಗಳೊಳಗೆ ಒಂದು ವ್ಯಾಪಕವಾದ ಸರಬರಾಜು ಸರಪಣಿಯನ್ನು ಹೊಂದಿದ್ದ 'ಚಹಾ ಜನರಿಂದ' ಹಾಂಗ್ಸ್‌ ಕಂಪನಿಯು ಚಹಾವನ್ನು ಪಡೆದುಕೊಂಡಿತು.[೩೮]

ಈಸ್ಟ್‌ ಇಂಡಿಯಾ ಕಂಪನಿಯು ಹೊತ್ತುತಂದಿದ್ದ ಅನೇಕ ಉತ್ಪನ್ನಗಳ ಪೈಕಿ, ಚಹಾವು ಕೇವಲ ಒಂದು ಉತ್ಪನ್ನ ಮಾತ್ರವೇ ಆಗಿತ್ತು. ಆದರೆ ಅತ್ಯಂತ ಯಶಸ್ವಿಯಾದವುಗಳ ಪೈಕಿ ಒಂದು ಎಂಬುದನ್ನು ಸಾಬೀತು ಮಾಡಲು ಇದು ಅಗತ್ಯವಾಗಿತ್ತು.[೩೮] ಆರಂಭದಲ್ಲಿ ಇದನ್ನೊಂದು ಔಷಧೀಯ ಪಾನೀಯ ಅಥವಾ ಬಲವರ್ಧಕವಾಗಿ ಪ್ರವರ್ತಿಸಲಾಯಿತು.[೩೮] ಹದಿನೇಳನೇ ಶತಮಾನದ ಅಂತ್ಯದ ವೇಳೆಗೆ, ಚಹಾವು ಕುಲೀನವರ್ಗದಿಂದ ಒಂದು ಪಾನೀಯವಾಗಿ ಪರಿಗಣಿಸಲ್ಪಟ್ಟಿತ್ತು.[೩೮] 1750ರ ಹೊತ್ತಿಗೆ ಚಹಾ ರಾಷ್ಟ್ರೀಯ ಪಾನೀಯವಾಗಿ ಹೊರಹೊಮ್ಮಲಿದೆ ಎಂಬುದನ್ನು 1690ರಲ್ಲಿ ಊಹಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ.[೩೮] ಈಸ್ಟ್‌ ಇಂಡೀಸ್‌ನಿಂದ (ಭಾರತದ ಪೂರ್ವಕ್ಕಿರುವ ಪ್ರದೇಶಗಳಿಂದ) ಒಂದು ವಾಪಸಾತಿಯ ಸರಕನ್ನು ಕಳಿಸಬೇಕಿದ್ದರಿಂದ ಚಹಾದಲ್ಲಿನ ಒಂದು ಬೃಹತ್‌ ವ್ಯಾಪಾರ ವ್ಯವಸ್ಥೆಯು ಹುಟ್ಟಿಕೊಳ್ಳುವುದು ಅತ್ಯಗತ್ಯವಾಗಿತ್ತು. ಬ್ರಿಟನ್‌ನಲ್ಲಿ ತಯಾರಾದ ನೆಯ್ದ ಬಟ್ಟೆಗಳನ್ನು ಭಾರತ ಮತ್ತು ಚೀನಾಕ್ಕೆ ವಾಣಿಜ್ಯ ನೌಕೆಗಳು ವಿತರಿಸಿದರೂ, ಖಾಲಿಯಾಗಿ ಇಲ್ಲವೇ ಭಾಗಶಃ ತುಂಬಿಕೊಂಡು ಅವು ಮರಳಬೇಕಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಈಸ್ಟ್‌ ಇಂಡಿಯಾ ಕಂಪನಿಯು ಇಂಗ್ಲಂಡ್‌ನಲ್ಲಿ ಹುರುಪಿನಿಂದ ಕೂಡಿದ ಒಂದು ಸಾರ್ವಜನಿಕ ಸಂಪರ್ಕಗಳ ಅಭಿಯಾನವನ್ನು ಶುರುಮಾಡಿತು. ಬ್ರಿಟನ್‌ನಲ್ಲಿ ಸಾಮಾನ್ಯ ಜನರ ನಡುವೆ ಚಹಾವನ್ನು ಜನಪ್ರಿಯಗೊಳಿಸಿ, ತನ್ಮೂಲಕ ಇದನ್ನು ಒಂದು ಕಾರ್ಯಸಾಧ್ಯವಾದ ವಾಪಸಾತಿ ಸರಕನ್ನಾಗಿ ಬೆಳೆಸುವುದು ಈ ಅಭಿಯಾನದ ಹಿಂದಿನ ಉದ್ದೇಶವಾಗಿತ್ತು.

1690ರಿಂದ 1750ರವರೆಗಿನ ಅವಧಿಯಲ್ಲಿನ ಚಹಾ ಆಮದುಗಾರಿಕೆ ಮತ್ತು ಮಾರಾಟಗಳ ಹೆಚ್ಚಳವು, ಕಬ್ಬಿನ ಸಕ್ಕರೆಯ ಆಮದುಗಾರಿಕೆ ಮತ್ತು ಮಾರಾಟಗಳಿಂದ ನಿಕಟವಾಗಿ ಪ್ರತಿಬಿಂಬಿಸಲ್ಪಟ್ಟಿದೆ: ಬ್ರಿಟಿಷರು ಬರೀ ಚಹಾವನ್ನಷ್ಟೇ ಕುಡಿಯುತ್ತಿರಲಿಲ್ಲ, ಸಿಹಿ ಚಹಾವನ್ನು ಕುಡಿಯುತ್ತಿದ್ದರು.[೩೮]

ಈ ರೀತಿಯಾಗಿ, ಬ್ರಿಟನ್‌ನ ವ್ಯಾಪಾರ ತ್ರಿಕೋನಗಳ ಪೈಕಿ ಎರಡು ತಮ್ಮ ಮಿತಿಯೊಳಗೇ ಸಂಧಿಸಬೇಕಾಗಿ ಬರುತ್ತಿತ್ತು: ಬ್ರಿಟನ್‌, ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ಗಳನ್ನು ಒಳಗೊಂಡಿರುವ ಬ್ರಿಟನ್‌ನ ವ್ಯಾಪಾರ ತ್ರಿಕೋನದಿಂದ ಸಕ್ಕರೆಯನ್ನು ಪಡೆಯಲಾಗುತ್ತಿತ್ತು ಮತ್ತು ಬ್ರಿಟನ್‌, ಭಾರತ ಮತ್ತು ಚೀನಾಗಳನ್ನು ಒಳಗೊಂಡ ತ್ರಿಕೋನದಿಂದ ಚಹಾವನ್ನು ಪಡೆಯಲಾಗುತ್ತಿತ್ತು.[೩೮]

ಚೀನಾದಿಂದ ಪಡೆದ ಚಹಕ್ಕಾಗಿ ಅದಕ್ಕೆ ಬ್ರಿಟನ್‌ ಪಾವತಿಸಬೇಕಿತ್ತು, ಆದರೆ ಚೀನಾಕ್ಕೆ ಬ್ರಿಟಿಷ್‌ ಸರಕುಗಳ ಅಂಥಾ ಅಗತ್ಯವೇನೂ ಇರಲಿಲ್ಲ. ಆದ್ದರಿಂದ ಪಾವತಿಯ ಬಹುಪಾಲನ್ನು ಬೆಳ್ಳಿಗಟ್ಟಿಗಳ ರೂಪದಲ್ಲಿ ಮಾಡಲಾಯಿತು.

ಚೀನಿಯರಿಗೆ ಬೆಳ್ಳಿಯ ಅಗತ್ಯವಿರದಿದ್ದರೂ, ಹಡಗಿಗೆ ಚಹಾ ಸರಕನ್ನು ತುಂಬಲಾದ ಚೀನಿಯರ ಮೊದಲ ಕೆಲವು ಉತ್ತಮ ನಿದರ್ಶನಗಳಿಗೆ ಪಾವತಿಯನ್ನು ಮಾಡಲು ಚೀನಾದ ಸರ್ಕಾರವು ಅಂತಿಮವಾಗಿ ಬೆಳ್ಳಿಗಟ್ಟಿಗಳನ್ನು ಪುರಸ್ಕರಿಸಿತು.[ಸೂಕ್ತ ಉಲ್ಲೇಖನ ಬೇಕು]ಬೆಳ್ಳಿ ಗಟ್ಟಿಗಳನ್ನು ಹೀಗೆ ನೀಡುವುದರಿಂದ ಬ್ರಿಟನ್‌ನ ಸಂಪತ್ತಿಗೆ ಉಂಟಾದ ಹಾನಿಯ ಕುರಿತು ಚಹಾ ಉದ್ಯಮಕ್ಕೆ ಸಂಬಂಧಿಸಿದ ಈ ಅವಧಿಯ ಒಂದಷ್ಟು ಟೀಕಾಕಾರರು ಗಮನಸೆಳೆದರು.[೩೮] ಇದಕ್ಕೆ ಪರ್ಯಾಯವಾಗಿ, ಸಾಂಪ್ರದಾಯಿಕವಾಗಿ ಹತ್ತಿ-ಬೆಳೆಯುವ ಭಾರತದ ವಲಯಗಳಲ್ಲಿ ಅಫೀಮು ಉತ್ಪಾದಿಸಲು ಬ್ರಿಟನ್‌ ಶುರುಮಾಡಿತು.  ಚೀನಾದಲ್ಲಿ ಕಾನೂನುಬಾಹಿರವಾಗಿದ್ದರೂ ಸಹ, ಬ್ರಿಟಿಷರು ಕೈಗೊಂಡ ಬೃಹತ್‌ ಪ್ರಮಾಣದಲ್ಲಿನ ಅಫೀಮಿನ ಆಮದುಗಾರಿಕೆಯು 1781ರಲ್ಲಿ ಪ್ರಾರಂಭವಾಯಿತು ಹಾಗೂ 1821 ಮತ್ತು 1837ರ ನಡುವೆ ಆಮದು ಪ್ರಮಾಣವು ಐದುಪಟ್ಟು ಹೆಚ್ಚಾಯಿತು. ಚೀನಾದ ಸಮಾಜದಲ್ಲಿ ಸದರಿ ಮಾದಕವಸ್ತುವು ವ್ಯಾಪಕವಾಗಿ ಹರಡುವವರೆಗೂ, ಈ ಸಮಸ್ಯೆಯನ್ನು ಕ್ವಿಂಗ್‌ ಸರ್ಕಾರವು ಬಹುಮಟ್ಟಿಗೆ ನಿರ್ಲಕ್ಷಿಸಿತ್ತು.

ಚೀನಿಯರ ನಡುವೆ ಸದರಿ ಮಾದಕವಸ್ತುವಿಗೆ ಬೇಡಿಕೆಯು ಹೆಚ್ಚುತ್ತಾ ಹೋದಂತೆ, ಅಫೀಮು ಯುದ್ಧಗಳ ನಂತರದ ಹಲವಾರು ಒಡಂಬಡಿಕೆಗಳ ಅಂಗವಾಗಿ ಅಫೀಮಿಗೆ ಬದಲಿಗೆ ಚಹಾವನ್ನು ಮಾರಲು ಬ್ರಿಟಿಷ್‌ ಸರ್ಕಾರವು ಚೀನಾವನ್ನು ಒತ್ತಾಯಿಸಿತು. ಚೀನಾದ ಚಹಾದ ಮೇಲಿನ ತನ್ನ ಅವಲಂಬನೆಯನ್ನು ಉಪಾಯವಾಗಿ ತಪ್ಪಿಸಿಕೊಳ್ಳುವ ಮತ್ತೊಂದು ಪ್ರಯತ್ನದಲ್ಲಿ, ಚಹಾ ಸಸ್ಯಗಳನ್ನು ಕಳವುಮಾಡಿ, ಚೀನಾದಿಂದ ಹೊರಕ್ಕೆ ಕಳ್ಳಸಾಗಣೆ ಮಾಡಲೆಂದು ಈಸ್ಟ್‌ ಇಂಡಿಯಾ ಕಂಪನಿಯು ರಾಬರ್ಟ್‌ ಫಾರ್ಚೂನ್‌‌ ಎಂಬ ಸ್ಕಾಟಿಷ್‌ ಸಸ್ಯಶಾಸ್ತ್ರಜ್ಞನನ್ನು ಚೀನಾಕ್ಕೆ ಕಳಿಸಿತು. ಸದರಿ ಚಹಾ ಸಸ್ಯಗಳನ್ನು ನಂತರ ಭಾರತಕ್ಕೆ ಕೊಂಡೊಯ್ಯಲಾಯಿತು ಮತ್ತು ಅಲ್ಲಿ 19ನೇ ಶತಮಾನದ ಅಂತ್ಯದ ವೇಳೆಗೆ ಅವು ಚೆನ್ನಾಗಿ ಬೆಳೆದು, ಭಾರತದ ಚಹಾವನ್ನು ಉತ್ಪಾದಿಸಿದವು.

ಬ್ರಿಟನ್‌ನ ಜಾಗತಿಕ ವ್ಯಾಪಾರದಲ್ಲಿ ಚಹಾ ಒಂದು ಅತ್ಯಂತ ಪ್ರಮುಖ ವಸ್ತುವಾಗಿ ಮಾರ್ಪಟ್ಟು, ಹದಿನೆಂಟನೇ ಶತಮಾನದ ಅಂತ್ಯದ ವೇಳೆಗೆ ಬ್ರಿಟನ್‌ನ ಜಾಗತಿಕ ಪ್ರಾಬಲ್ಯಕ್ಕೆ ತನ್ನದೇ ಆದ ಕಾಣಿಕೆಯನ್ನು ನೀಡಿತು.

ಇಂದಿನವರೆಗೂ ಚಹಾವನ್ನು ವಿಶ್ವಾದ್ಯಂತ 'ಬ್ರಿಟಿಷ್‌ತನದ" ಒಂದು ಸಂಕೇತವಾಗಿ ನೋಡಲಾಗುತ್ತಿದೆಯಾದರೂ, ಕೆಲವೊಬ್ಬರಿಗೆ ಇದು ಹಳೆಯ ಬ್ರಿಟಿಷ್‌ ವಸಾಹತು ನೀತಿಯ ಒಂದು ಸಂಕೇತವಾಗಿ ಕಾಣಿಸುತ್ತಿದೆ.[೩೮]

ಬೀಜಿಂಗ್‌ನಲ್ಲಿ ನಡೆದ ವಿಕಲಚೇತನರ ಕ್ರೀಡೆಗಳ ವರ್ಗಾಯಿಸುವಿಕೆಯ ಲಂಡನ್‌ 2012 ವಿಭಾಗವು, ವಾಡಿಕೆಯ ಅನುಕ್ರಮದ ಅಂಗವಾಗಿ ಚಹಾವನ್ನು ಒಳಗೊಂಡಿತ್ತು.[೪೦] ಬ್ರಿಟನ್‌ನಲ್ಲಿನ ಚಹಾವನ್ನು ಚೀನಾ ಮತ್ತು ಪೂರ್ವದ ಇತರ ದೇಶಗಳಲ್ಲಿ ವಿಭಿನ್ನವಾಗಿ ಸ್ವೀಕರಿಸಲಾಗಿದೆ. ಸೇವಿಸಲ್ಪಡುತ್ತಿರುವ 90%ಗಿಂತಲೂ ಹೆಚ್ಚಿನ ಚಹಾವು ಕಪ್ಪು ಚಹಾ ಆಗಿದ್ದು, ಅನೇಕ ವೇಳೆ ಹಾಲಿನೊಂದಿಗೆ ಸೇವಿಸಲಾಗುತ್ತದೆ, ಮತ್ತು ಪೌರಸ್ತ್ಯ ದೇಶಗಳಲ್ಲಿರುವುದಕ್ಕಿಂತ ವಿಭಿನ್ನವಾಗಿ ಚಹಾಚೀಲಗಳನ್ನು ಬಳಸಿಕೊಂಡು ಒಂದು ಕಪ್‌ ಚಹಾವನ್ನು ತಯಾರಿಸುವ ವಿಧಾನವು ಈಗ ಅಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗುತ್ತಿದೆ.

2009ರವರೆಗಿನ ಅಂಕಿ-ಅಂಶಗಳ ಪ್ರಕಾರ ವಾಣಿಜ್ಯೋದ್ದೇಶದ ಎರಡು ಚಹಾ ತೋಟಗಳನ್ನು ಹೊಂದಿರುವುದರ ಹೆಮ್ಮೆಯನ್ನು UK ಹೊಂದಿದೆ. ಅವುಗಳ ಪೈಕಿ ಒಂದು ತೋಟವು ಕಾರ್ನ್‌ವಾಲ್‌‌ನಲ್ಲಿದ್ದು ಅದರ ಮಾಲೀಕತ್ವವನ್ನು ಟ್ರೆಗೊಥ್ನಾನ್‌ ಎಸ್ಟೇಟ್‌ ಹೊಂದ್ದಿದ್ದರೆ, ವೇಲ್ಸ್‌‌ಪೆಂಬ್ರೋಕ್‌ಷೈರ್‌ನಲ್ಲಿ ಕೊಂಚವೇ ಹೆಚ್ಚು ಉತ್ತರ ಭಾಗದಲ್ಲಿರುವ ಮತ್ತೊಂದು ತೋಟದ ಮಾಲೀಕತ್ವವನ್ನು ಪೆಂಬ್ರೋಕ್‌ಷೈರ್ ಚಹಾ ಕಂಪನಿಯು ಹೊಂದಿದೆ.

ಅಮೆರಿಕಾ ಸಂಯುಕ್ತ ಸಂಸ್ಥಾನಗಳು

[ಬದಲಾಯಿಸಿ]

ಕಾಫಿಯು ಅತ್ಯಂತ ಜನಪ್ರಿಯವಾಗಿದ್ದರೂ ಸಹ, ಬಿಸಿಯಾಗಿ ತಯಾರಿಸಿದ ಕಪ್ಪು ಚಹಾವನ್ನು ಊಟದೊಂದಿಗಷ್ಟೇ ಅಲ್ಲದೇ ಒಂದು ಚೇತಾಹಾರಿ ಪಾನೀಯದಂತೆಯೂ ಸೇವಿಸಿ ಬಹುತೇಕ ಜನರು ಆನಂದಿಸುತ್ತಾರೆ. ಅದೇ ರೀತಿಯಲ್ಲಿ, ತಂಪಾಗಿಸಿದ ಚಹಾವನ್ನೂ ಸಹ ಎಲ್ಲೆಡೆ ಸೇವಿಸಲಾಗುತ್ತದೆ. ಹೆಚ್ಚು ಪ್ರಮಾಣದ ಸಕ್ಕರೆಯನ್ನಾಗಲೀ ಅಥವಾ ಒಂದು ಕೃತಕ ಸಿಹಿಕಾರಕವನ್ನಾಗಲೀ ಬಳಸಿ ಸಿಹೀಕರಿಸಿದ ಮತ್ತು ಶೀತಲವಾಗಿಸಿದ ಸಿಹಿ ಚಹಾದ ಬಳಕೆಯು, ದಕ್ಷಿಣದ ಸಂಸ್ಥಾನಗಳಲ್ಲಿ ಕಂಡುಬರುವ ಒಂದು ಶೈಲಿಯಾಗಿದೆ. ದಕ್ಷಿಣದಿಂದ ಆಚೆಗೆ, ಸಿಹಿ ಚಹಾವು ಅಲ್ಲಲ್ಲಿ ಕಾಣಿಸುತ್ತಾದರೂ, ಅದಕ್ಕೆ ಪ್ರಮುಖ ಕಾರಣ ಸಾಂಸ್ಕೃತಿಕ ವಲಸೆ ಮತ್ತು ವ್ಯಾಪಾರೀಕರಣ ಎನ್ನಬಹುದು.[ಸೂಕ್ತ ಉಲ್ಲೇಖನ ಬೇಕು]

ಅಮೆರಿಕಾದ ವಿಶಿಷ್ಟತೆಯ ಚಹಾ ಮಾರುಕಟ್ಟೆಯು 1993ರಿಂದ 2008ರವರೆಗಿನ ವರ್ಷಗಳಲ್ಲಿ ನಾಲ್ಕುಪಟ್ಟು ಹೆಚ್ಚಾಗಿದ್ದು, ವರ್ಷವೊಂದಕ್ಕೆ ಸುಮಾರು 6.8 ಶತಕೋಟಿ $ನಷ್ಟು ಮೌಲ್ಯವನ್ನು ಹೊಂದಿದೆ.[೪೧] ಈ ಅತ್ಯಮೋಘ ಹೆಚ್ಚಳವು ಉತ್ತಮವಾದ ಕಾಫಿ ಮತ್ತು ಉತ್ತಮವಾದ ಮದ್ಯದ ಪ್ರವೃತ್ತಿಗೆ ಹೋಲುವಂತಿದ್ದು, ಗ್ರಾಹಕರ ಪ್ರೋತ್ಸಾಹ ಮತ್ತು ಆಯ್ಕೆಯೇ ಇದಕ್ಕೆ ಭಾಗಶಃ ಕಾರಣವಾಗಿದೆ. ವಿಶಿಷ್ಟ ಗುಣದ ಚಹಾದ ತಯಾರಿಕಾ ನೆಲೆಗಳು ಹಾಗೂ ಚಿಲ್ಲರೆ ಮಾರಾಟ ಸರಣಿಗಳು ಈ ಅವಧಿಯಲ್ಲಿ ಬೇಗನೇ ಉನ್ನತಿಗೆ ಬರಲು ಪ್ರಾರಂಭಿಸಿದವು.[೪೨]

ಬಾಸ್ಟನ್‌ ಚಹಾ ಕೂಟವು ಬ್ರಿಟಿಷ್‌ ಸರ್ಕಾರದ ವಿರುದ್ಧ ಪ್ರತಿಭಟಿಸಲು ಅಮೆರಿಕಾದ ವಸಾಹತುಗಾರರು ಆಯ್ದುಕೊಂಡ ಒಂದು ಪ್ರತಿಭಟನಾ ವಿಧಾನವಾಗಿತ್ತು. ಈ ಪ್ರತಿಭಟನೆಯಲ್ಲಿ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿ ಹಡಗುಗಳಿಂದ ಬಂದ ಅನೇಕ ಹೆಡಿಗೆಗಟ್ಟಲೆ ಚಹಾವನ್ನು ಅವರು ಬಾಸ್ಟನ್‌ ಬಂದರಿನಲ್ಲಿ ನಾಶಪಡಿಸಿದರು. 1773ರ ಡಿಸೆಂಬರ್ 16ರ ಗುರುವಾರದಂದು ನಡೆದ ಈ ಘಟನೆಯು, ಬ್ರಿಟಿಷರನ್ನು ಒಪ್ಪದಿರುವುದರ ಮತ್ತು ಅಮೆರಿಕಾದ ಕ್ರಾಂತಿಗೆ ಕಿಡಿಯನ್ನು ಹಚ್ಚುವಲ್ಲಿನ ಒಂದು ಒಡೆತದ ಬಿಂದುವಾಗಿ ಪರಿಗಣಿಸಲ್ಪಟ್ಟಿದೆ.[೪೩]

ಭಾರತದ ಅಸ್ಸಾಂನಲ್ಲಿನ ಚಹಾ ತೋಟ
ದಕ್ಷಿಣ ಭಾರತದ ಕೇರಳ-ತಮಿಳುನಾಡು ಗಡಿಯಲ್ಲಿನ ಮನ್ನಾರ್ ಚಹಾ ತೋಟದ ಪರಿದೃಶ್ಯದ ನೋಟ
ಮನ್ನಾರ್‌ನ ಚಹಾ ತೋಟಗಳು

ಸಹಸ್ರಾರು ವರ್ಷಗಳಿಂದಲೂ ಚಹಾವು ಭಾರತದಲ್ಲಿ ಒಂದು ಔಷಧೀಯ ಸಸ್ಯವಾಗಿಯೇ ಸುಪರಿಚಿತವಾಗಿತ್ತು. ಆದರೆ ಬ್ರಿಟಿಷರು 19ನೇ ಶತಮಾನದಲ್ಲಿ ಚಹಾ ತೋಟಗಳನ್ನು ಸ್ಥಾಪಿಸುವವರೆಗೂ, ಆಹ್ಲಾದತೆಗೆ-ಆನಂದಕ್ಕೆ ಚಹಾವನ್ನು ಸೇವಿಸುತ್ತಿರಲಿಲ್ಲ ಎನ್ನಬಹುದು. ಚೀನಾದ ಪ್ರಭೇದವನ್ನು ಡಾರ್ಜಿಲಿಂಗ್‌ ಚಹಾಕ್ಕಾಗಿ ಬಳಸಲಾಗಿದ್ದರೆ, ಭಾರತದ ರಾಜ್ಯವಾದ ಅಸ್ಸಾಮಿಗೆ ಸೇರಿದ ಅಸ್ಸಾಮಿ ಪ್ರಭೇದವನ್ನು ಉಳಿದೆಲ್ಲ ಕಡೆ ಬಳಸಲಾಗಿದೆ. ಭಾರತ ಮತ್ತು ಸಿಲೋನ್‌ನಲ್ಲಿ ವಾಣಿಜ್ಯೋದ್ದೇಶದ ಚಹಾ ತೋಟಗಳನ್ನು ಬ್ರಿಟಿಷರು ಪ್ರಾರಂಭಿಸಿದರು‌: "1824ರಲ್ಲಿ, ಬರ್ಮಾ ಹಾಗೂ ಭಾರತದ ರಾಜ್ಯವಾದ ಅಸ್ಸಾಂನ ನಡುವಿನ ಗಡಿಭಾಗದಾದ್ಯಂತದ ಬೆಟ್ಟಗುಡ್ಡಗಳಲ್ಲಿ ಚಹಾ ಸಸ್ಯಗಳು ಪತ್ತೆಯಾದವು. ಬ್ರಿಟಿಷರು ಚಹಾ ಸಂಸ್ಕೃತಿ ಯನ್ನು ಭಾರತದಲ್ಲಿ 1836ರಲ್ಲೂ, ಸಿಲೋನ್‌ನಲ್ಲಿ (ಶ್ರೀಲಂಕಾದಲ್ಲಿ) 1867ರಲ್ಲೂ ಪರಿಚಯಿಸಿದರು. ಮೊಟ್ಟಮೊದಲಿಗೆ ಚೀನಾದಿಂದ ತಂದ ಬೀಜಗಳನ್ನು ಅವರು ಬಳಸಿದರು, ಆದರೆ ನಂತರದಲ್ಲಿ ಅಸ್ಸಾಂನಿಂದ ತಂದ ಬೀಜಗಳನ್ನು ಬಳಸಲಾಯಿತು."[೪೪] ಇತ್ತೀಚಿನ ದಶಕಗಳವರೆಗೂ ಕೇವಲ ಕಪ್ಪು ಚಹಾವನ್ನು ಮಾತ್ರವೇ ಉತ್ಪಾದಿಸಲಾಯಿತು.

ಸರಿಸುಮಾರು ಒಂದು ಶತಮಾನದವರೆಗೂ ಭಾರತವು ಚಹಾದ ಉತ್ಪಾದನೆಯಲ್ಲಿ ಅಗ್ರಗಣ್ಯತೆಯನ್ನು ಸಾಧಿಸಿತ್ತು. ಆದರೆ 21ನೇ ಶತಮಾನದಲ್ಲಿ ಈ ಸ್ಥಾನವನ್ನು ಚೀನಾ ಆಕ್ರಮಿಸಿಕೊಂಡಿತು.[೪೫] ಬ್ರಿಟಿಷ್‌ ಬ್ರಾಂಡ್‌ಗಳಾದ ಟೆಟ್ಲಿ ಮತ್ತು ಟೈಫೂ ಸೇರಿದಂತೆ ಅನೇಕ ಮಾದರಿ ವಿದೇಶಿ ಚಹಾ ಉದ್ಯಮಗಳನ್ನು ಭಾರತದ ಚಹಾ ಕಂಪನಿಗಳು ತಮ್ಮದಾಗಿಸಿಕೊಂಡಿವೆ.[೪೫] ವಿಶ್ವಾದ್ಯಂತದ ಚಹಾ ಬಳಕೆದಾರರ ಪೈಕಿ ಭಾರತವು ಅತಿದೊಡ್ಡ ಬಳಕೆದಾರನಾಗಿದ್ದು, ಭಾರತದಲ್ಲಿನ ತಲಾ ಚಹಾ ಬಳಕೆಯು, ಪ್ರತಿ ವರ್ಷವೂ ಪ್ರತಿ ವ್ಯಕ್ತಿಗೆ ಸಾಧಾರಣ ಪ್ರಮಾಣ ಎನ್ನಬಹುದಾದ 750 ಗ್ರಾಂಗಳಷ್ಟಿದೆ.[೪೫] 'ಗೋಲ್ಡನ್‌ ಟಿಪ್ಸ್‌ ಟೀ ಕಂ' ಕಂಪನಿಯೂ ಸೇರಿದಂತೆ ಬಹಳಷ್ಟು ದೊಡ್ಡ ಕಂಪನಿಗಳು, ಮತ್ತು ಡಾರ್ಜಿಲಿಂಗ್‌ ಚಹಾಕ್ಕೆ ಹಾಗೂ ಚಹಾಕ್ಕೆ ಪ್ರಸಿದ್ಧವಾಗಿರುವ ಅತ್ಯಂತ ಸುಂದರ ತಾಣಗಳಲ್ಲಿ ಒಂದೆನಿಸಿದ ಡಾರ್ಜಿಲಿಂಗ್‌ನಲ್ಲಿನ ಪ್ರವಾಸೋದ್ಯಮವನ್ನು ಕುರಿತು ಪರಿಣತಿ ಪಡೆದಿದ್ದು, ಅದರ ಕುರಿತು ಒತ್ತು ನೀಡುವ ಇತರ ಅನೇಕ ಪ್ರಮುಖ ಬ್ರಾಂಡ್‌ಗಳು ಇಲ್ಲಿ ಹೊರಹೊಮ್ಮಿವೆ.

ದಕ್ಷಿಣ ಭಾರತದಲ್ಲಿನ ಚಹಾ ತೋಟಗಳು

[ಬದಲಾಯಿಸಿ]

ಮನ್ನಾರ್‌

ಮನ್ನಾರ್‌‌ನಿಂದ 41 ಕಿಮೀಗಳಷ್ಟು ದೂರವಿರುವ (1 ಗಂಟೆ), ಟಾಪ್‌ ಸ್ಟೇಷನ್‌ ಎಂಬ ತಾಣವು ತನ್ನ ಹೆಸರಿಗೆ ತಕ್ಕಂತೆಯೇ ಇದೆ. ಏಕೆಂದರೆ, ಭಾರತದಲ್ಲಿನ ಅತ್ಯಂತ ಎತ್ತರದ ಕೆಲವೊಂದು ಚಹಾ ತೋಟಗಳಿಗೆ ಇದು ನೆಲೆಯಾಗಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ರಾಜ್ಯಗಡಿಯ ಮೇಲೆ ಇದು ಸ್ಥಿತವಾಗಿದ್ದು, ಹಬ್ಬಿರುವ ಹಸಿರು ಬೆಟ್ಟಗಳ ಒಂದು ಪರಿದೃಶ್ಯದ ದೃಶ್ಯವನ್ನು ಇದು ತನ್ನದಾಗಿಸಿಕೊಂಡಿದೆ.ಭಾರತದಲ್ಲಿ ಚಹಾ ಅಥವಾ ಟೀ ಉತ್ಪಾದನೆ

ಶ್ರೀಲಂಕಾ/ಸಿಲೋನ್‌

[ಬದಲಾಯಿಸಿ]
ಶ್ರೀಲಂಕಾದಲ್ಲಿನ ಚಹಾ ತೋಟ

ಶ್ರೀಲಂಕಾವು ತನ್ನ ಉತ್ತಮ ಗುಣಮಟ್ಟದ ಚಹಾಕ್ಕೆ ಪ್ರಸಿದ್ಧಿ ಪಡೆದಿದೆ.

ಚಹಾ ಉತ್ಪಾದನೆಗೆ ಸಂಬಂಧಿಸಿ ಜಾಗತಿಕ ಮಟ್ಟದಲ್ಲಿ ಇದು ನಾಲ್ಕನೇ ಅತ್ಯಂತ ದೊಡ್ಡ ಸ್ಥಾನವನ್ನು ಹೊಂದಿದ್ದು, ಇದಕ್ಕೂ ಮುಂಚಿನ ಸ್ಥಾನಗಳನ್ನು ಅನುಕ್ರಮವಾಗಿ ಚೀನಾ, ಭಾರತ ಮತ್ತು ಕೀನ್ಯಾ ಹೊಂದಿವೆ (ಕೆಳಗೆ ನೀಡಲಾಗಿರುವ ಕೋಷ್ಟಕವನ್ನು ನೋಡಿ) ಮತ್ತು ಅಂತರರಾಷ್ಟ್ರೀಯ ವಲಯದಲ್ಲಿ 9%ನಷ್ಟು ಪ್ರಮಾಣದ ಒಂದು ಉತ್ಪಾದನಾ ಪಾಲನ್ನು ಹೊಂದಿದೆ. ಚಹಾ ಬೇಸಾಯಕ್ಕೆಂದು ಬಳಸಲಾಗಿರುವ ಒಟ್ಟು ಜಮೀನಿನ ಪ್ರಮಾಣವು ಸುಮಾರು 187,309 ಹೆಕ್ಟೇರುಗಳೆಂದು ನಿರ್ಣಯಿಲಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಬ್ರಿಟಿಷರಿಂದ ಪ್ರಾರಂಭಿಸಲ್ಪಟ್ಟ ಈ ನೆಡುತೋಪುಗಳನ್ನು 1960ರ ದಶಕದಲ್ಲಿ ಸರ್ಕಾರವು ಆರಂಭದಲ್ಲಿ ಸ್ವಾಧೀನಕ್ಕೆ ತೆಗೆದುಕೊಂಡಿತಾದರೂ, ನಂತರ ಅವು ಖಾಸಗೀಕರಣಕ್ಕೊಳಗಾದವು. ಈಗ ಅವು 'ಪ್ಲಾಂಟೇಷನ್‌ ಕಂಪನಿಗಳಿಂದ' ನಡೆಸಲ್ಪಡುತ್ತಿದ್ದು, ಸದರಿ ಕಂಪನಿಗಳು ತಲಾ ಒಂದಷ್ಟು 'ಎಸ್ಟೇಟುಗಳು' ಅಥವಾ ಚಹಾ ನೆಡುತೋಪುಗಳನ್ನು ಹೊಂದಿವೆ.

ಸಿಲೋನ್‌ ಚಹಾವು ಬೆಳೆಯಲ್ಪಡುವ ಪ್ರದೇಶದ ಪ್ರಾಕೃತಿಕ ಲಕ್ಷಣಗಳನ್ನು ಆಧರಿಸಿ ಅದನ್ನು 3 ಗುಂಪುಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ: ಒಳನಾಡಿನ ಚಹಾ, ನಡುನಾಡಿನ ಚಹಾ ಹಾಗೂ ಕೆಳನಾಡಿನ ಚಹಾ.[೪೬]

ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ

[ಬದಲಾಯಿಸಿ]

ಇತ್ತೀಚಿನ ದಶಕಗಳಲ್ಲಿ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡಗಳಲ್ಲಿ ಚಹಾದ ಉತ್ಪಾದನೆಯು ಬಹಳಮಟ್ಟಿಗೆ ಹೆಚ್ಚಾಗಿದ್ದು, ಅದರಲ್ಲಿ ಬಹುಪಾಲು ಯುರೋಪ್‌ ಹಾಗೂ ಉತ್ತರ ಅಮೆರಿಕಾಕ್ಕೆ ನಡೆಯುವ ರಫ್ತಿಗೆ ಕ್ರಮವಾಗಿ ಬಳಕೆಯಾಗುತ್ತದೆ. ಬಹುಪಾಲು ರಫ್ತು ಮಾರುಕಟ್ಟೆಗಳಿಗೆ ಸೇರಿದ ಚಹಾ ಕಂಪನಿಗಳ ಸ್ವಾಮ್ಯದಲ್ಲಿರುವ ಬೃಹತ್‌ ಚಹಾ ಎಸ್ಟೇಟುಗಳಲ್ಲಿ ಇವು ಉತ್ಪಾದನೆಯಾಗುತ್ತವೆ. ಬಹುತೇಕ ಈ ಎಲ್ಲಾ ಉತ್ಪಾದನೆಯು ಮೂಲಭೂತ ಸಮೂಹ-ಮಾರುಕಟ್ಟೆಯ ಚಹಾಗಳಿಂದ ಕೂಡಿದ್ದು, ಅವುಗಳನ್ನು ಮುದುರಿಸುವ, ಹರಿದು ಛಿದ್ರಮಾಡುವ, ಸುರುಳಿ ಮಾಡುವ (Crush, Tear, Curl) ವಿಧಾನದ ಮೂಲಕ ಸಂಸ್ಕರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿನ ಚಹಾ ಉತ್ಪಾದನೆಯಲ್ಲಿ ಚೀನಾ ಮತ್ತು ಭಾರತ ದೇಶಗಳ ನಂತರ ಕೀನ್ಯಾ ದೇಶವು ಈಗ ಮೂರನೆಯ ಸ್ಥಾನದಲ್ಲಿದೆ (ಅಂಕಿ-ಅಂಶಗಳನ್ನು ಕೆಳಗೆ ನೀಡಲಾಗಿದೆ), ಮತ್ತು ಯುನೈಟೆಡ್‌ ಕಿಂಗ್‌ಡಂಗೆ ಸಂಬಂಧಿಸಿದಂತೆ ಇದು ಚಹಾದ ಅತಿದೊಡ್ಡ ರಫ್ತುದಾರನಾಗಿದೆ. ಚಿಲಿಯಲ್ಲಿಯೂ ಸಹ ಚಹಾದ ಬಳಕೆ ಹೆಚ್ಚಿನ ಪ್ರಮಾಣದಲ್ಲಿದೆ[ಸೂಕ್ತ ಉಲ್ಲೇಖನ ಬೇಕು]. ದಕ್ಷಿಣ ಆಫ್ರಿಕಾದಲ್ಲಿ, ಕೆಮೆಲಿಯಾ ಸೈನೆನ್ಸಿಸ್‌‌‌‌‌‌‌‌‌‌‌ ಪ್ರಭೇದಕ್ಕೆ ಸೇರದ ರಾಯಿಬಾಸ್‌ ಎಂಬ ಪಾನೀಯವು ಜನಪ್ರಿಯವಾಗಿದೆ. ದಕ್ಷಿಣ ಅಮೆರಿಕಾದಲ್ಲಿ, ಯೆರ್ಬಾ ಮೇಟ್‌ ಎಂಬ ಒಂದು ಕಷಾಯವು ಜನಪ್ರಿಯವಾಗಿದೆ.

ಯುರೋಪ್‌

[ಬದಲಾಯಿಸಿ]

ಅಝೋರ್ಸ್‌ಸಾವೋ ಮಿಗುಯೆಲ್‌ನ ರಿಬೈರಾ ಗ್ರಾಂಡೆ‌ಯಲ್ಲಿನ ಚಾ ಗೊರ್ರಿಯಾನಾವು ಏಕೈಕ ಐರೋಪ್ಯ ನೆಡುತೋಪು ಆಗಿದೆ.

ಆರೋಗ್ಯ ಪರಿಣಾಮಗಳು

[ಬದಲಾಯಿಸಿ]

ಚಹಾದ ಆರೋಗ್ಯ ಸಂಬಂಧಿ ಪ್ರಯೋಜನಗಳು ಒಂದು ವಿವಾದಾತ್ಮಕ ವಿಷಯವಾಗಿದ್ದು, ಅನೇಕ ಪ್ರತಿಪಾದಕರು ಹಾಗೂ ಲಾಘವಕಾರಿಗಳು ಇದರೊಂದಿಗೆ ಗುರುತಿಸಿಕೊಂಡಿದ್ದಾರೆ. PubMed ಗೆ ಸಂಬಂಧಿಸಿದ Nutrition (1999, pp. 946–949).... ನಿಯತಕಾಲಿಕದಿಂದ ಪಡೆದ ಒಂದು ಲೇಖನವು ಹೀಗೆ ಹೇಳುತ್ತದೆ:

ಕ್ಯಾನ್ಸರ್‌ ಮತ್ತು ಹೃದಯ-ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಗಳ ತಡೆಗಟ್ಟುವಿಕೆಯಲ್ಲಿ ಚಹಾದ ಸೇವನೆಯು ಮಾಡುವ ಸಂಭವನೀಯ ಪ್ರಯೋಜನಕಾರಿ ಪರಿಣಾಮಗಳು ಪ್ರಾಣಿ ಮಾದರಿಗಳಲ್ಲಿ ನಿರೂಪಿಸಲ್ಪಟ್ಟಿವೆ ಮತ್ತು ಪ್ರನಾಳೀಯ ಅಧ್ಯಯನಗಳಿಂದ ಸೂಚಿಸಲ್ಪಟ್ಟಿವೆ. ಆದಾಗ್ಯೂ, ಇದೇ ರೀತಿಯ ಪ್ರಯೋಜನಕಾರಿ ಪರಿಣಾಮಗಳು ಮಾನವರಲ್ಲಿ ಮನವೊಪ್ಪುವ ರೀತಿಯಲ್ಲಿ ನಿರೂಪಿಸಲ್ಪಟ್ಟಿಲ್ಲ: ಕೆಲವೊಂದು ಅಧ್ಯಯನಗಳಲ್ಲಿ ಪ್ರಯೋಜನಕಾರಿ ಪರಿಣಾಮಗಳು ನಿರೂಪಿಸಲ್ಪಟ್ಟಿವೆ, ಆದರೆ ಬೇರೆಯದರಲ್ಲಿ ಇಲ್ಲ. ಒಂದು ವೇಳೆ ಇಂಥ ಪ್ರಯೋಜನಕಾರಿ ಪರಿಣಾಮಗಳು ಮಾನವರಲ್ಲಿ ಇರುವುದೇ ಆದಲ್ಲಿ, ಜೀವನಶೈಲಿ-ಸಂಬಂಧಿತ ಇತರ ಅನೇಕ ಅಂಶಗಳನ್ನು ಆಧರಿಸಿ ಅವು ಸೌಮ್ಯವಾಗಿರುತ್ತವೆ ಮತ್ತು ಕೆಲವೊಂದು ನಿರ್ದಿಷ್ಟ ವರ್ಗಗಳಲ್ಲಿ ಅವುಗಳನ್ನು ಹಾಳುಮಾಡುವ ಅಂಶಗಳಿಂದ ಮುಚ್ಚಿಬಿಡಬಹುದಾಗಿದೆ. ಮತ್ತೊಂದು ಸಂಬಂಧಿತ ವಿಷಯವೆಂದರೆ, ಮಾನವರಿಂದ ಸೇವಿಸಲ್ಪಡುವ ಚಹಾ ಪ್ರಮಾಣಗಳು, ಪ್ರಾಣಿ ಮಾದರಿಗಳಲ್ಲಿನ ರೋಗ-ತಡೆಗಟ್ಟುವಿಕೆಯ ಪರಿಣಾಮಗಳನ್ನು ನಿರೂಪಿಸಲು ಬೇಕಾಗಿರುವ ಪ್ರಮಾಣಗಳಿಗಿಂತ ಕಡಿಮೆಯಿರುತ್ತವೆ. ಆದಾಗ್ಯೂ, ರೋಗ ತಡೆಗಟ್ಟುವಿಕೆಗಾಗಿರುವ ಉನ್ನತ ಸಾರತೆಯ ಚಹಾದ ಬಳಕೆಯ ಸಂದರ್ಭದಲ್ಲಿ ಎಚ್ಚರಿಕೆಯನ್ನು ವಹಿಸಬೇಕಾದುದು ಅಗತ್ಯ. ಚಹಾವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಪೌಷ್ಟಿಕತೆಗೆ ಸಂಬಂಧಿಸಿದ ಮತ್ತು ಇತರ ಸಮಸ್ಯೆಗಳು ಉಂಟಾಗಬಹುದು. ಚಹಾ ಸೇವನೆಯಿಂದಾಗುವ ಹಾನಿಕಾರಕ ಪರಿಣಾಮಗಳ ಕುರಿತಾದ ಯಾವುದೇ ಪ್ರಬಲ ಮಾಹಿತಿಯು ಲಭ್ಯವಿಲ್ಲವಾದರೂ, ಚಹಾದಲ್ಲಿರುವ ಕೆಫೀನ್‌ ಅಂಶ ಹಾಗೂ ಚಹಾ ಪಾಲಿಫೀನಾಲ್‌ಗಳ ಸಶಕ್ತ ಬಂಧಕ ಚಟುವಟಿಕೆಗಳು ಕೆಲವೊಂದು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಾರಣವೆನ್ನಬಹುದು.

ಹಸಿರು ಚಹಾ ಮತ್ತು ಕಪ್ಪು ಚಹಾದ ಜೈವಿಕ ಚಟುವಟಿಕೆಗಳನ್ನು ಸ್ಪಷ್ಟಪಡಿಸಲು ಹಾಗೂ ಸಂಭವನೀಯ ಆರೋಗ್ಯ-ಪ್ರಯೋಜನಕಾರಿ ಪರಿಣಾಮಗಳನ್ನು ಹೊಂದಲು ಬೇಕಾಗಿರುವ ಪ್ರಶಸ್ತ ಚಹಾ ಸೇವನಾ ಪ್ರಮಾಣವನ್ನು ನಿರ್ಣಯಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಸಂಗ್ರಹ ರೂಪದಲ್ಲಿ ಹೇಳುವುದಾದರೆ, ಚಹಾದ ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಪ್ರಾಣಿ ಅಧ್ಯಯನದಲ್ಲಿ ತೋರಿಸಲಾಗಿದೆಯಾದರೂ, ಮಾನವರು ನಿಯತವಾಗಿ ಸೇವಿಸುವ ಪ್ರಮಾಣಗಳಿಗಿಂತ ತುಂಬಾ ಹೆಚ್ಚಿನ ಪ್ರಮಾಣಗಳ ಆಧಾರದಲ್ಲಿ ಈ ಅಧ್ಯಯನಗಳು ನಡೆಸಲ್ಪಟ್ಟಿವೆ. ಈ ಮಟ್ಟಿಗಿನ ಹೆಚ್ಚಿನ ಸೇವನಾ ಪ್ರಮಾಣವು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು.

ಚಹಾಕ್ಕೆ ಸಂಬಂಧಿಸಿದಂತೆ ಪ್ರಸ್ತಾವಿಸಲಾಗಿರುವ ಸಂಭವನೀಯ ಆರೋಗ್ಯ ಸಂಬಂಧಿ ಪ್ರಯೋಜನಗಳ ಪೈಕಿ ಹಲವನ್ನು Mondal (2007, pp. 519–520).... ನಿಂದ ಪಡೆಯಲಾದ ಉದ್ಧೃತ ಭಾಗಗಳಲ್ಲಿ ಚಿತ್ರಿಸಲಾಗಿದ್ದು, ಅವು ಈ ಕೆಳಕಂಡಂತಿವೆ:

700ಕ್ಕೂ ಹೆಚ್ಚಿನ ರಾಸಾಯನಿಕ ವಸ್ತುಗಳನ್ನು ಚಹಾ ಎಲೆಗಳು ಒಳಗೊಂಡಿದ್ದು, ಅವುಗಳ ಪೈಕಿ ಮಾನವನ ಆರೋಗ್ಯಕ್ಕೆ ತೀರಾ ಸನಿಹವಾಗಿ ಸಂಬಂಧಿಸಿರುವ ಸಂಯುಕ್ತಗಳೆಂದರೆ, ಫ್ಲೇವನಾಯ್ಡ್‌‌ಗಳು, ಅಮೈನೋ ಆಮ್ಲಗಳು, ವಿಟಮಿನ್‌ಗಳು (C, E ಮತ್ತು K), ಕೆಫೀನ್‌ ಮತ್ತು ಪಾಲಿಸ್ಯಾಕರೈಡ್‌ಗಳು. ಎಲ್ಲಕ್ಕಿಂತ ಮಿಗಿಲಾಗಿ, ಮಾನವ ಶರೀರದ ಜೀವಕೋಶದ-ಮಧ್ಯಸ್ಥಿಕೆಯ ಪ್ರತಿರಕ್ಷಣಾ ಕಾರ್ಯದೊಂದಿಗೆ ಚಹಾ ಸೇವನೆಯು ಸಂಬಂಧ ಹೊಂದಿದೆ ಎಂದು ಇತ್ತೀಚೆಗೆ ಸಾಬೀತುಮಾಡಲ್ಪಟ್ಟಿದೆ. ಕರುಳಿಗೆ ಸಂಬಂಧಿಸಿದ ಪ್ರಯೋಜನಕಾರಿ ಸೂಕ್ಷ್ಮಸಸ್ಯವರ್ಗವನ್ನು ಸುಧಾರಿಸುವಲ್ಲಿ ಚಹಾವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲ, ಕರುಳಿನ ಅಸಮರ್ಪಕತೆಗಳಿಗೆ ಪ್ರತಿಯಾಗಿ ಪ್ರತಿರಕ್ಷಕ ಗುಣವನ್ನು ಒದಗಿಸುವಲ್ಲಿ ಹಾಗೂ ಉತ್ಕರ್ಷಣಶೀಲ ಹಾನಿಯಿಂದ ಜೀವಕೋಶದ ಒಳಪೊರೆಗಳನ್ನು ರಕ್ಷಿಸುವಲ್ಲಿಯೂ ಸಹ ಚಹಾವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚಹಾದಲ್ಲಿ ಫ್ಲೂರೀನ್‌ ಅಂಶವು ಇರುತ್ತದೆಯಾದ್ದರಿಂದ, ಇದು ಹಲ್ಲಿನ ಸವೆತವನ್ನೂ ತಡೆಗಟ್ಟುತ್ತದೆ. ರಕ್ತದೊತ್ತಡವನ್ನು, ಮೇಧಸ್ಸನ್ನು ಕುಗ್ಗಿಸುವ ಚಟುವಟಿಕೆಯನ್ನು ಸಾಮಾನ್ಯ ಸ್ಥಿತಿಗೆ ತರುವಲ್ಲಿ, ರಕ್ತದ-ಗ್ಲೂಕೋಸ್‌ನ ಚಟುವಟಿಕೆಯನ್ನು ತಗ್ಗಿಸುವ ಮೂಲಕ ಪರಿಧಮನಿಯ ಹೃದ್ರೋಗ ಹಾಗೂ ಮಧುಮೇಹವನ್ನು ತಡೆಗಟ್ಟುವಲ್ಲಿ ಚಹಾದ ಪಾತ್ರವು ಉತ್ತಮ ರೀತಿಯಲ್ಲಿ ಪ್ರಮಾಣೀಕರಿಸಲ್ಪಟ್ಟಿದೆ. ಮಾನವರಲ್ಲಿ ರೋಗವನ್ನುಂಟುಮಾಡುವ ಹಲವಾರು ಗ್ರಾಮ್-ಪಾಸಿಟಿವ್‌ ಮತ್ತು ಗ್ರಾಮ್-ನೆಗಟಿವ್‌ ಬ್ಯಾಕ್ಟೀರಿಯಾಗಳಿಗೆ ಪ್ರತಿಯಾಗಿರುವ ರೋಗಾಣುಹಾರಕ ಮತ್ತು ರೋಗಾಣುಸ್ತಂಭಕ ಚಟುವಟಿಕೆಗಳನ್ನು ಕೂಡ ಚಹಾವು ಹೊಂದಿದೆ. ಹಸಿರು ಮತ್ತು ಕಪ್ಪು ಚಹಾ ಮಿಶ್ರಣಗಳೆರಡೂ ಅನೇಕ ಉತ್ಕರ್ಷಣಕಾರಿ-ನಿರೋಧಕಗಳನ್ನು, ಮುಖ್ಯವಾಗಿ ಕ್ಯಾಟ್‌ಚಿನ್‌ಗಳನ್ನು ಒಳಗೊಂಡಿದ್ದು, ಅವು ಕ್ಯಾನ್ಸರು ಜನಕ-ನಿರೋಧಕ, ವಿಕೃತಿ ಜನಕ-ನಿರೋಧಕ ಮತ್ತು ಗಡ್ಡೆಗಳ-ನಿರೋಧಕ ಗುಣಲಕ್ಷಣಗಳನ್ನು ಹೊಂದಿರುತ್ತವೆ.

1993ರಲ್ಲಿ ಸಂಪೂರ್ಣಗೊಂಡು 1999ರಲ್ಲಿ ಪ್ರಕಟಿಸಲ್ಪಟ್ಟJournal of Epidemiology and Community Health (1999, pp. 481–487), 11,000ಕ್ಕೂ ಹೆಚ್ಚಿನ ಸ್ಕಾಟಿಷ್‌ ಪುರುಷರು ಮತ್ತು ಮಹಿಳೆಯರ ಒಂದು ಬೃಹತ್ ಅಧ್ಯಯನದಲ್ಲಿ, ಚಹಾವನ್ನು ನಿಯತವಾಗಿ ಸೇವಿಸುತ್ತಿದ್ದವರಲ್ಲಿ ಪರಿಧಮನಿಯ ಕಾಯಿಲೆಯ ಅಪಾಯದಲ್ಲಿ ಹೆಚ್ಚಳವಾಗಿದ್ದುದು ಕಂಡುಬಂತಾದರೂ, ಹಾಳುಮಾಡುವ ಅಂಶಗಳಿಗಾಗಿ (ವಯಸ್ಸು ಮತ್ತೂ ಔದ್ಯೋಗಿಕ ಸ್ಥಿತಿ) ಹೊಂದಾಣಿಕೆಯನ್ನು ಮಾಡಿದ ನಂತರ ಅದು ಕಣ್ಮರೆಯಾಯಿತು.

IARC ಸಂಸ್ಥೆಯು ಚಹಾಗಳನ್ನು ಗುಂಪು 3ರ ಕ್ಯಾನ್ಸರು ಜನಕಗಳ ಅಡಿಯಲ್ಲಿ ಪಟ್ಟಿಮಾಡುತ್ತದೆ. ಇಲಿಗಳ ಚರ್ಮದಡಿಯಲ್ಲಿ ಕಪ್ಪು ಚಹಾದ ಸಾರವನ್ನು ಒಳಹೊಗಿಸಿದಾಗ ಒಂದಷ್ಟು ಕ್ಯಾನ್ಸರ್‌ಯುಕ್ತ ಬೆಳೆತಗಳು ಅಲ್ಲಿ ಕಂಡುಬಂದಿದ್ದರಿಂದ ಸಂಸ್ಥೆಯು ಈ ಕ್ರಮ ತೆಗೆದುಕೊಂಡಿದೆ. ಆದಾಗ್ಯೂ, ಮಾನವರು ಚಹಾವನ್ನು ಸೇವಿಸುವುದರಿಂದ ಇದೇ ರೀತಿಯ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆಯೇ ಎಂಬುದನ್ನು ಇದೇ ಬಗೆಯ ವಿಧಾನಗಳ ಮೂಲಕ ಸಾಬೀತು ಮಾಡಲು ಇನ್ನೂ ಸಾಧ್ಯವಾಗಿಲ್ಲ.[೪೭]

ಇತರ ಭಾಷೆಗಳಲ್ಲಿನ ವ್ಯುತ್ಪತ್ತಿ ಮತ್ತು ಸಜಾತೀಯ ಪದಗಳು

[ಬದಲಾಯಿಸಿ]

ಎಂಬುದು ಚಹಾಕ್ಕೆ ಮೀಸಲಾಗಿರುವ ಚೀನಿಯರ ಲಿಪಿಸಂಕೇತವಾಗಿದ್ದರೂ, ಚೀನಿಯರ ಬಗೆಬಗೆಯ ಉಪಭಾಷೆಗಳಲ್ಲಿ ಇದನ್ನು ಭಿನ್ನವಾಗಿ ಉಚ್ಚರಿಸಲಾಗುತ್ತದೆ. ಎರಡು ಉಚ್ಚರಣೆಗಳು ವಿಶ್ವಾದ್ಯಂತದ ಇತರ ಭಾಷೆಗಳಿಗೂ ಎಡೆಮಾಡಿಕೊಟ್ಟಿವೆ.[೪೮] ಎಂಬುದು ಅದರಲ್ಲೊಂದಾಗಿದ್ದು, ಇದು ಕ್ಸಿಯಾಮೆನ್‌ನ (ಅಮೊಯ್‌) ರೇವು ಪಟ್ಟಣದ ಸುತ್ತಮುತ್ತ ಆಡಲಾಗುವ ಅಮೊಯ್ ಮಿನ್‌ ನಾನ್‌ ಉಪಭಾಷೆಯಿಂದ ಬಂದಿದೆ. ಚಹಾಗೆ ಸಂಬಂಧಿಸಿದ ಹಳೆಯ ಪದಗಳಾದ (tú) ಅಥವಾ (tú) ಎಂಬುದರಿಂದ ಈ ಉಚ್ಚರಣೆಯು ಬಂದಿದೆ ಎಂದು ನಂಬಲಾಗಿದೆ. chá ಎಂಬುದು ಇದರ ಪೈಕಿಯ ಮತ್ತೊಂದು ಉಚ್ಚರಣೆಯಾಗಿದ್ದು, ಗುವಾಂಗ್‌ಝೊವ್‌ (ಕ್ಯಾಂಟನ್‌), ಹಾಂಗ್‌ ಕಾಂಗ್‌, ಮಕಾವ್‌ಗಳ ರೇವುಪಟ್ಟಣಗಳ ಸುತ್ತ ಹಾಗೂ ಚೀನಾದ ಸಾಗರೋತ್ತರ ಸಮುದಾಯಗಳಲ್ಲಿ ಆಡಲಾಗುವ ಕ್ಯಾಂಟನೀಸ್‌ ಉಪಭಾಷೆಯಿಂದಷ್ಟೇ ಅಲ್ಲದೇ, ಉತ್ತದ ಚೀನಾದ ಮ್ಯಾಂಡ್ರಿನ್‌ ಉಪಭಾಷೆಯಲ್ಲಿ ಇದು ಬಳಸಲ್ಪಟ್ಟಿದೆ.

ಚಹಾದ ಮೊದಲ ಹೊಸ ಚಿಗುರಿನ ಕಟಾವನ್ನು ವಿವರಿಸಲು ಪ್ರಾಚೀನ ಕಾಲದಲ್ಲಿ ಈ ಪದವನ್ನು ಬಳಸಲಾಗಿತ್ತು. zu ಎಂಬುದು ಇನ್ನೂ ವಿಭಿನ್ನವಾಗಿರುವ ಮತ್ತೊಂದು ಉಚ್ಚರಣೆಯಾಗಿದ್ದು, ಷಾಂಘೈ ಸುತ್ತಮುತ್ತ ಆಡಲಾಗುವ ವು ಉಪಭಾಷೆಯಲ್ಲಿ ಇದನ್ನು ಬಳಸಲಾಗುತ್ತದೆ. ಮತ್ತು (ちゃ) ಎಂಬ ಪದಗಳು ಕ್ರಮವಾಗಿ ಕೊರಿಯಾ ಮತ್ತು ಜಪಾನ್‌ನಲ್ಲಿ ಚಹಾಕ್ಕಾಗಿ ಮೀಸಲಾಗಿರುವ ಪದಗಳಾಗಿವೆ. ಇವೆರಡನ್ನೂ ಲಿಪ್ಯಂತರ ಮಾಡಿದಾಗ cha ಎಂಬ ಪದ ಹೊರಹೊಮ್ಮುತ್ತದೆ. (ಜಪಾನೀ ಭಾಷೆಯಲ್ಲಿ, ಇದು ಕೆಲವೊಮ್ಮೆ 御茶 (おちゃ) ಅಥವಾ ocha ಆಗಿದ್ದು, ಅದು ಹೆಚ್ಚು ಸುಸಂಸ್ಕೃತವಾದುದಾಗಿದೆ.)

ಎಂಬುದರಿಂದ ಬಂದ ವ್ಯುತ್ಪನ್ನಗಳು

[ಬದಲಾಯಿಸಿ]
ಭಾಷೆ ಹೆಸರು ಭಾಷೆ ಹೆಸರು ಭಾಷೆ ಹೆಸರು ಭಾಷೆ ಹೆಸರು ಭಾಷೆ ಹೆಸರು
ಆಫ್ರಿಕಾನ್ಸ್‌ tee ಆರ್ಮೀನಿಯನ್‌, ಕ್ಯಾಟಲನ್ ಪ್ರಾಂತ ಭಾಷೆ te ಝೆಕ್‌ ಅಥವಾ thé (1) ಡೇನಿಷ್‌ te ಡಚ್‌ thee
ಇಂಗ್ಲಿಷ್‌ tea ಎಸ್ಪರಾಂಟೋ teo ಎಸ್ಟೋನಿಯನ್‌ tee ಫರೋಸೆ te ಫಿನ್ನಿಷ್‌ tee
ಫ್ರೆಂಚ್‌ thé ಪಶ್ಚಿಮ ಫ್ರಿಸಿಯನ್‌ tee ಗ್ಯಾಲಿಷಿಯನ್‌ ಜರ್ಮನ್‌ Tee ಹೀಬ್ರೂ תה, te
ಹಂಗರಿಯನ್‌ tea ಐಸ್ಲಾಂಡಿಕ್‌ te ಇಂಡೋನೀಷಿಯನ್‌ teh ಐರಿಷ್‌ tae ಇಟಾಲಿಯನ್‌ ಅಥವಾ thè
ಜಾವಾನೀಸ್‌ tèh ಕೊರಿಯನ್‌ 茶,다 da [ta](2) ವೈಜ್ಞಾನಿಕ ಲ್ಯಾಟಿನ್‌ thea ಲ್ಯಾಟ್ವಿಯನ್‌ tēja ಲಿಯೋನೀಸ್‌
ಲಿಂಬರ್ಗಿಷ್‌ tiè ಲೋ ಸ್ಯಾಕ್ಸನ್‌ Tee [tʰɛˑɪ] ಅಥವಾ Tei [tʰaˑɪ] ಮಲಯ teh ನಾರ್ವೆಜಿಯನ್‌ te ಆಕ್ಸಿಟನ್‌
ಸೆಸೊಥೊ tea ,chá ಸ್ಕಾಟ್ಸ್‌ ಗೇಲಿಕ್‌ , teatha ಸಿಂಹಳೀಯ thé ಸ್ಪ್ಯಾನಿಷ್‌ ಸ್ಕಾಟ್ಸ್‌ tea [tiː] ~ [teː]
ಸೂಡಾನೀಸ್‌ entèh ಸ್ವೀಡಿಷ್‌ te ತಮಿಳು தேநீர் ಥೆನೀರ್‌ (ನೀರ್‌ = ನೀರು) "ಥೆಯಿಲಾಯ್‌" ಅಂದರೆ ಅರ್ಥ "ಚಹಾ ಎಲೆ" (ಇಲಾಯ್‌=ಎಲೆ) ತೆಲುಗು తేనీళ్ళు ತೇನೀರು ಟರ್ಕಿಷ್‌ çay
ವೆಲ್ಷ್‌ te
  • ಟಿಪ್ಪಣಿ: (1) ಅಥವಾ thé , ಈ ಪದವು ಅಪ್ರಸ್ತುತ ಮತ್ತು ಗ್ರಾಂಥಿಕ ಅಭಿವ್ಯಕ್ತಿಯೆಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ, ಸರಿಸುಮಾರಾಗಿ 20ನೇ ಶತಮಾನದ ದ್ವಿತೀಯಾರ್ಧದಿಂದ, ಝೆಕ್‌ ಭಾಷೆಯಲ್ಲಿ "ಚಹಾ"ಗೆ čaj ಎಂಬ ಪದವನ್ನು ಬಳಸಲಾಗುತ್ತಿದೆ. ಈ ಕೆಳಗಿನ ಕೋಷ್ಟಕವನ್ನು ನೋಡಿ (3).

(2) 차 (cha ) ಎಂಬುದು ಕೊರಿಯಾ ಭಾಷೆಯಲ್ಲಿನ "ಚಹಾ" ಪದಕ್ಕೆ ಪರ್ಯಾಯ ಪದವಾಗಿದೆ; ನೋಡಿ (4)

cha ಅಥವಾ chai ನಿಂದ ಬಂದಿರುವ ವ್ಯುತ್ಪನ್ನಗಳು

[ಬದಲಾಯಿಸಿ]
ಭಾಷೆ ಹೆಸರು ಭಾಷೆ ಹೆಸರು ಭಾಷೆ ಹೆಸರು ಭಾಷೆ ಹೆಸರು ಭಾಷೆ ಹೆಸರು
ಆಲ್ಬೇನಿಯನ್‌ çaj ಆಂಹ್ಯಾರಿಕ್‌ ሻይ shai ಅರೇಬಿಕ್ شاي shāy ಆರಮೇಯಿಕ್‌ chai ಎಂದು ಉಚ್ಚರಿತ ಅಸ್ಸಾಮೀ saah
ಅಝರ್‌ಬೈಜಾನೀ çay ಬಾಂಗ್ಲಾ চা cha ಬೋಸ್ನಿಯನ್‌ čaj ಬಲ್ಗೇರಿಯನ್ чай chai ಚಂಪಾಂಗ್ನಾನ್‌ cha
ಸೆಬ್ಯುವಾನೊ tsa ಕ್ರೊಯೇಷಿಯನ್‌ čaj ಝೆಕ್‌ čaj (2) ಇಂಗ್ಲಿಷ್‌ chai ಪಾರಸಿ chaaee
ಟಗಾಲಾಗ್‌ tsaa ಜಾರ್ಜಿಯನ್‌ ჩაი, chai ಗ್ರೀಕ್ τσάι tsái ಗುಜರಾತಿ ચા cha ಹಿಂದಿ चाय chai
ಜಪಾನೀಸ್‌ , チャ, cha ಕನ್ನಡ ಚಹಾ Chaha ಕಝಕ್‌ шай shai ಕಿರ್ಗಿಝ್‌ чай, chai ಖಾಸಿ sha
ಕೊಂಕಣಿ चा cha ಕೊರಿಯನ್‌ 茶,, cha ಲಾವೋ ชา, saa ಮೆಕೆಡೋನಿಯನ್‌ чај, čaj ಮಲಯಾಳಂ ചായ, "chaaya"
ಮರಾಠಿ चहा chahaa ಮಂಗೋಲಿಯನ್‌ цай, tsai ನೇಪಾಳಿ chiya चिया ಒರಿಯಾ cha ಪಷ್ಟೋ چای chai
ಪರ್ಷಿಯನ್‌ چای chai ಪಂಜಾಬಿ ਚਾਹ chah ಪೋರ್ಚುಗೀಸ್‌ chá ರೊಮೇನಿಯನ್ ceai ರಷ್ಯನ್‌ чай, chai
ಸರ್ಬಿಯನ್ чај, čaj ಸ್ಲೋವಾಕ್ čaj ಸ್ಲೋವೀನ್‌ čaj ಸೊಮಾಲಿ shaah ಸ್ವಾಹೀಲಿ chai
ಸಿಲ್ಹೆಟಿ saah ಟಗಾಲಾಗ್‌ tsaa ಥಾಯ್ ชา, chaa ಟಿಬೆಟನ್‌ ཇ་ ja ಟ್ಲಿನ್‌ಗಿಟ್‌ cháayu
ಟರ್ಕಿಷ್‌ çay ತುರ್ಕ್‌ಮೆನ್‌ çay ಉಕ್ರೇನಿಯನ್ чай chai ಉರ್ದು چا ٔےchai ಉಜ್ಬೆಕ್‌ choy
ವಿಯೆಟ್ನಾಮೀಸ್‌ *trà ಮತ್ತು chè ತಮಿಳು *ಥೆಯ್ನೀರ್‌ ಮತ್ತು tee cai kikuyu, (ಕೀನ್ಯಾದ ಭಾಷೆ)
  • (5) ಅವೆರಡೂ ಚೀನಾದ 茶ನ ನೇರ ವ್ಯುತ್ಪನ್ನಗಳಾಗಿವೆ; ಎರಡನೇ ಪದವನ್ನು ಉತ್ತರ ಭಾಗದಲ್ಲಿ ಮುಖ್ಯವಾಗಿ ಬಳಸಲಾಗುತ್ತದೆ ಹಾಗೂ ತಾಜಾ ಆಗಿ ಕೊಯ್ದ ಎಲೆಗಳಿಂದ ತಯಾರಿಸಿದ ಒಂದು ಚಹಾವನ್ನು ಇದು ವಿವರಿಸುತ್ತದೆ.

czajnik ಎಂಬುದು ಚಹಾ-ಕೆಟಲಿಗಿರುವ ಪೋಲಿಷ್‌ ಪದವಾಗಿದ್ದು, ಇದನ್ನು cha ಪದದಿಂದ ನೇರವಾಗಿ ಪಡೆಯಬಹುದಾಗಿದೆ ಅಥವಾ ರಷ್ಯನ್‌ ಭಾಷೆಯ ಸಜಾತೀಯ ಪದದಿಂದ ಪಡೆಯಬಹುದಾಗಿದೆ. ಆದಾಗ್ಯೂ, ಪೋಲಿಷ್‌ ಭಾಷೆಯಲ್ಲಿ ಚಹಾಕ್ಕೆ herbata ಎಂಬ ಹೆಸರಿದ್ದು, ಇದು ಹಾಗೂ ಲಿಥುವೇನಿಯಾ ಭಾಷೆಯಲ್ಲಿನ arbata ಎಂಬ ಪದಗಳು, "ಚಹಾ ಮೂಲಿಕೆ" ಎಂಬ ಅರ್ಥವನ್ನು ಕೊಡುವ ಲ್ಯಾಟಿನ್‌ನ herba thea ಎಂಬುದರಿಂದ ಜನ್ಯವಾಗಿವೆ.

ಈ ರೀತಿಯ ಹೆಸರುಗಳೊಂದಿಗಿನ ಸಂಬಂಧವು ಕೆಲವೊಮ್ಮೆ ಸರಳತೆಯಿಂದ ಆಚೆ ನಿಲ್ಲುತ್ತದಾದರೂ, ಈ ಸಂಸ್ಕೃತಿಗಳಿಗೆ ಚಹಾವನ್ನು ತಲುಪಿಸಲು ಬಳಸಿದ ಮಾರ್ಗದೊಂದಿಗೆ ಈ ಹೆಸರುಗಳನ್ನು ಪರಸ್ಪರ ಸಂಬಂಧ ಕಲ್ಪಿಸುವುದು ಒಂದು ರೀತಿಯಲ್ಲಿ ಮನಸೆಳೆಯುವಂತಿದೆ. ಇದಕ್ಕೊಂದು ಉದಾಹರಣೆ ನೀಡುವುದಾದರೆ, ಬ್ರಿಟನ್‌‌ನ್ನು ಮೊದಲು ತಲುಪಿದ ಚಹಾವು ಫ್ಯೂಜಿಯನ್‌‌ನಿಂದ ಡಚ್ಚರಿಂದ ಮಾರಲ್ಪಟ್ಟಿತು. ಈ ಚಹಾವು te ಎಂಬ ಪದವನ್ನು ಬಳಸುತ್ತದೆ. ನಂತರ ಬಂದ ಬ್ರಿಟಿಷ್‌ ವ್ಯಾಪಾರವು cha ಎಂಬ ಪದವನ್ನು ಬಳಸುವ ಕ್ಯಾಂಟನ್ ಮೂಲಕ‌ ನಡೆಯಿತಾದರೂ, ಫ್ಯೂಜಿಯನ್ನರ ಉಚ್ಚರಣೆಯು ಮುಂದುವರಿದು ಅತ್ಯಂತ ಜನಪ್ರಿಯವಾಯಿತು.

ಐರ್ಲೆಂಡ್‌ನಲ್ಲಿ , ಅಥವಾ ಕಡೇಪಕ್ಷ ಡಬ್ಲಿನ್‌ನಲ್ಲಿ, cha ಎಂಬ ಪದವನ್ನು ಕೆಲವೊಮ್ಮೆ "tea" ಎಂಬುದಕ್ಕಾಗಿ ಬಳಸಲಾಗುತ್ತದೆ. "tay" ಎಂಬ ಸ್ವರ-ಪೂರ್ವ-ವರ್ಗಾವಣಾ ಉಚ್ಚಾರಣೆಯ ರೀತಿಯಲ್ಲೇ ಇದು ಇರುತ್ತದೆ (ಇದರಿಂದಲೇ ಐರಿಷ್‌ ಗೇಲಿಕ್‌ ಪದವಾದ "tae" ಎಂಬುದು ಜನ್ಯವಾಗಿದೆ). Char ಎಂಬುದು, 19ನೇ ಮತ್ತು 20ನೇ ಶತಮಾನದಲ್ಲಿ ಬ್ರಿಟಿಷ್‌ ಸಾಮ್ರಾಜ್ಯ ಮತ್ತು ಕಾಮನ್‌ವೆಲ್ತ್‌ ಸೇನಾಪಡೆಗಳಾದ್ಯಂತ ಚಾಲ್ತಿಯಲ್ಲಿದ್ದ, ಚಹಾಕ್ಕಾಗಿದ್ದ ಒಂದು ಸಾಮಾನ್ಯ ಆಡುಭಾಷೆಯ ಪದವಾಗಿತ್ತು. ನಂತರದ ಇದು ನಾಗರಿಕ ಬಳಕೆಯೆಡೆಗೆ ಸಾಗಿಬಂತು.

"ಚಹಾ"ಕ್ಕೆ ಸಂಬಂಧಿಸಿದಂತಿರುವ ಬ್ರಿಟಿಷ್‌ ಇಂಗ್ಲಿಷ್‌ ಆಡುಮಾತಿನ ಪದವಾಗಿರುವ "ಚಾರ್‌" ಎಂಬುದು ಅದರ ಮ್ಯಾಂಡ್ರಿನ್‌ ಚೀನೀ ಉಚ್ಚರಣೆಯಾದ "cha " ಎಂಬುದರಿಂದ ಹುಟ್ಟಿಕೊಂಡಿದೆ. ar ಎಂಬುದು ಬ್ರಿಟಿಷ್‌ ಇಂಗ್ಲಿಷ್‌ನಲ್ಲಿನ /ɑː/ ಕನಿಷ್ಟ ಧ್ವನಿರೂಪವನ್ನು ಪ್ರತಿನಿಧಿಸುವ ಒಂದು ಹೆಚ್ಚು ಸಾಮಾನ್ಯ ಮಾರ್ಗವಾಗಿರುವುದರಿಂದ ಇದರ ಕಾಗುಣಿತದ ಮೇಲೆ ಪರಿಣಾಮವುಂಟಾಗಿದೆ.

ಉತ್ತರ ಅಮೆರಿಕಾದಲ್ಲಿ, chai ಎಂಬ ಪದವನ್ನು ಭಾರತದ ಮಸಾಲಾ ಚಾಯ್‌ (masala chai-ಮಸಾಲೆ ಬೆರೆಸಿದ ಚಹಾ) ಪಾನೀಯವನ್ನು ಪ್ರತ್ಯೇಕವಾಗಿ ಉಲ್ಲೇಖಿಸಲು ಹೆಚ್ಚೂಕಡಿಮೆ ಬಳಸಲಾಗುತ್ತದೆ.

ಕ್ಯಾಂಟನೀಸ್‌ ಮತ್ತು ಮ್ಯಾಂಡ್ರಿನ್‌ ಭಾಷೆಗಳಲ್ಲಿನ "ಚಾ" ಎಂಬ ಮೂಲ ಉಚ್ಚರಣೆಯು ಯಾವುದೇ [j] ಅಂತ್ಯ ಪ್ರತ್ಯಯವನ್ನು ಹೊಂದಿಲ್ಲ. ಈ ತೆರನಾದ ಅಂತ್ಯ ಪ್ರತ್ಯಯವನ್ನು ಹೊಂದಿರುವ ಯುರೇಷಿಯಾದ ಅನೇಕ ಭಾಷೆಗಳಲ್ಲಿನ ಸ್ವರೂಪಗಳು, "ಚಹಾ ಎಲೆಗಳು" ಎಂಬುದನ್ನು ಸೂಚಿಸುವ ಚೀನೀ ಭಾಷೆಯ ಸಂಯುಕ್ತ ಪದದಿಂದ ಬಂದಿವೆ (ಮ್ಯಾಂಡ್ರಿನ್‌ 茶叶 chá yè)[ಸೂಕ್ತ ಉಲ್ಲೇಖನ ಬೇಕು] ಚಹಾ ಪದಕ್ಕೆ ಸಂಬಂಧಿಸಿದ ವಿಭಿನ್ನ ಸ್ಪಷ್ಟೋಚ್ಚಾರಗಳು ಎರಡು ಮುಖ್ಯ ಗುಂಪುಗಳಾಗಿ ವಿಭಜಿಸಲ್ಪಟ್ಟಿವೆ: "ಟೆಹ್‌-ಎಂಬುದರಿಂದ ಜನ್ಯವಾದದ್ದು" (ಚೀನಾದ ಮಿನ್‌ ಪ್ರಾಂತಭಾಷೆಗಳು) ಮತ್ತು "ಚಾ-ಎಂಬುದರಿಂದ ಜನ್ಯವಾದದ್ದು" (ಮ್ಯಾಂಡ್ರಿನ್‌, ಕ್ಯಾಂಟನೀಸ್‌ ಮತ್ತು ಮಿನ್‌-ಪ್ರಾಂತಕ್ಕೆ ಸೇರದ ಇತರ ಪ್ರಾಂತಭಾಷೆಗಳು). ಚೀನಾಕ್ಕೆ ಸಂಬಂಧಪಡದ ರಾಷ್ಟ್ರಗಳು ತಮ್ಮ ಚಹಾ ಮತ್ತು "ಚಹಾ ಸಂಸ್ಕೃತಿಗಳನ್ನು" ತಮ್ಮದಾಗಿಸಿಕೊಂಡಿರುವ ಚೀನಾದ ನಿರ್ದಿಷ್ಟ ಸ್ಥಳೀಯ ಸಂಸ್ಕೃತಿಗಳನ್ನು ಇದು ಹೊರಗೆಡಹುತ್ತದೆಯಾದ್ದರಿಂದ, ಈ ಕ್ರಮವು ಆಸಕ್ತಿದಾಯಕವಾಗಿದೆ. ಆಶ್ಚರ್ಯವಾಗದ ರೀತಿಯಲ್ಲಿ, ಭಾರತ ಮತ್ತು ಅರಬ್‌ ಪ್ರಪಂಚವು ತಮ್ಮ ಚಹಾ ಸಂಸ್ಕೃತಿಗಳನ್ನು ಕ್ಯಾಂಟನೀಸ್‌ ಅಥವಾ ನೈಋತ್ಯ ದಿಕ್ಕಿನಿಂದ ಬಂದ ಮ್ಯಾಂಡ್ರಿನ್‌ ಭಾಷೆ ಮಾತನಾಡುವವರಿಂದ ಹಾಗೂ ರಷ್ಯಾದವರು ತಮ್ಮ ಚಹಾ ಸಂಸ್ಕೃತಿಗಳನ್ನು ಉತ್ತರ ಭಾಗದಲ್ಲಿನ ಮ್ಯಾಂಡ್ರಿನ್‌ ಭಾಷೆ ಮಾತನಾಡುವವರಿಂದ ಪಡೆದಿರುವ ಸಾಧ್ಯತೆಗಳಿವೆ.

ಸದರಿ ಸಸ್ಯವನ್ನು ಬೃಹತ್‌ ಪ್ರಮಾಣಗಳಲ್ಲಿ ಆಮದುಕೊಳ್ಳುವಲ್ಲಿನ ಮೊದಲ ಯುರೋಪಿಯನ್ನರಾದ ಪೋರ್ಚುಗೀಸರು, ಕ್ಯಾಂಟನ್‌ ಭಾಷೆಯಲ್ಲಿನ "ಚಾ" ಎಂಬ ಸ್ವರೂಪವನ್ನು ತೆಗೆದುಕೊಂಡರು. ಇದು ಚೀನಾದ ದಕ್ಷಿಣ ಭಾಗದಲ್ಲಿನ ವ್ಯಾಪಾರದ ತಾಣಗಳಲ್ಲಿ, ವಿಶೇಷವಾಗಿ ಮಕಾವ್‌‌ನಲ್ಲಿ ಈ ರೂಪವು ಬಳಕೆಯಾಯಿತು. ಇದಕ್ಕೆ ವ್ಯತಿರೇಕವಾಗಿ, "ಟೆಹ್‌" ಎಂಬ ಮಿನ್‌ ಪ್ರಾಂತದ ಉಪಭಾಷೆಯನ್ನು ನಕಲುಮಾಡಿದ ಇತರ ಪಶ್ಚಿಮ ಯುರೋಪಿಯನ್ನರು, ಆಗ್ನೇಯ ಏಷ್ಯಾದಲ್ಲಿನ ಹಾಕ್ಕಿನೀಸ್‌ನೊಂದಿಗೆ ಪ್ರಾಯಶಃ ಮಾರಾಟ ಮಾಡಿದರೆನಿಸುತ್ತದೆ.

ತೀರಾ ಇತ್ತೀಚೆಗೆ, ಅಂದರೆ ಸುಮಾರು 1980ರ ಅವಧಿಯಲ್ಲಿ, "ಚಾಯ್‌" ಎಂಬ ಪದವು ಉತ್ತರ ಅಮೆರಿಕಾದ ಇಂಗ್ಲಿಷ್‌ನ್ನು ಪ್ರವೇಶಿಸಿತು: ಭಾರತದ ಮಸಾಲಾ ಕಪ್ಪು ಚಹಾ ಎಂಬ ನಿರ್ದಿಷ್ಟ ಅರ್ಥವನ್ನು ಅದಕ್ಕೆ ನೀಡಲಾಗಿತ್ತು. ಅವಶ್ಯವಾಗಿ ಇದು ಇತರ ಭಾಷೆಗಳಲ್ಲಿನ ಸನ್ನಿವೇಶವಲ್ಲ. ಏಕೆಂದರೆ ಇತರ ಭಾಷೆಗಳಲ್ಲಿ "ಚಾಯ್‌" ಎಂದರೆ ಕೇವಲ ಕಪ್ಪು ಚಹಾ ಎಂದೇ ಅರ್ಥೈಸಲಾಗುತ್ತದೆ. (ಪೂರ್ವ ಏಷ್ಯಾದ ಆಚೆಯಿರುವ ಜನರು ಹಸಿರು ಚಹಾಕ್ಕಿಂತ ಕಪ್ಪು ಚಹಾವನ್ನೇ ಸಾಂಪ್ರದಾಯಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಇದಕ್ಕೆ ಕಾರಣ). "ಟೆಹ್‌-ಎಂಬುದರಿಂದ ಜನ್ಯವಾದ" ಒಂದು ಪದ ಹಾಗೂ "ಚಾ-ಎಂಬುದರಿಂದ ಜನ್ಯವಾದ" ಒಂದು ಪದವಾಗಿ "ಚಹಾ"ದ ಇಬ್ಬಗೆಯ ಸ್ಪಷ್ಟೋಚ್ಚಾರಗಳಿಗೆ ಅವಕಾಶ ನೀಡುವ ಕೆಲವೇ ಭಾಷೆಗಳಲ್ಲಿ ಇಂಗ್ಲಿಷ್‌ ಈ ಮೂಲಕ ಒಂದೆನಿಸಿಕೊಂಡಿದೆ. ಮೊರಾಕನ್ ದೇಶದ ಆಡುಮಾತಿನ ಅರೇಬಿಕ್‌ (ದರೀಜ) ಇಂಥದೇ ಒಂದು ಉದಾಹರಣೆಯಾಗಿದೆ: ಮೊರಾಕನ್‌ನ ಅರೇಬಿಕ್‌ ಭಾಷೆಯಲ್ಲಿ, "ಆಷ್‌-ಶಾಯ್‌" (ash-shay) ಎಂದರೆ, "ಸಾರ್ವತ್ರಿಕ, ಅಥವಾ ಮಧ್ಯಪ್ರಾಚ್ಯದ ಕಪ್ಪು ಚಹಾ" ಎಂದರ್ಥ. ಅದೇ ರೀತಿಯಲ್ಲಿ "ಅಟಾಯ್‌" (atay) ಎಂದರೆ ಒಂದು ಉತ್ಕೃಷ್ಟತೆಯ ಚಹಾ: ತಾಜಾ ಪುದೀನಾ ಎಲೆಗಳೊಂದಿಗಿನ ಝೆಜಿಯಾಂಗ್‌ ಅಥವಾ ಫ್ಯೂಜಿಯಾದ ಹಸಿರು ಚಹಾ.

ಮುಲಯ್‌ ಹಸನ್‌ ಎಂಬ ರಾಜನು ಬಾರ್ಬರಿ ಕಡಲ್ಗಳ್ಳರಿಂದ ಸೆರೆಹಿಡಿಯಲ್ಪಟ್ಟ ಯುರೋಪಿನ ಕೆಲವೊಂದು ಒತ್ತೆಯಾಳುಗಳನ್ನು ಒಂದು ಸಂಪೂರ್ಣ ಹಡಗಿನಷ್ಟು ಪ್ರಮಾಣದ ಚೀನಾದ ಚಹಾಕ್ಕೆ ಪ್ರತಿಯಾಗಿ ವಿನಿಮಯ ಮಾಡಿಕೊಂಡ ನಂತರ, ಅರಬ್‌ ಪ್ರಪಂಚದಲ್ಲಿ ಪೂರ್ವ ಚೀನಿಯರ ಹಸಿರು ಚಹಾಗೆ ಸಂಬಂಧಿಸಿದಂತೆ ಮೊರಾಕನ್‌ ಜನರು ಒಂದು ಅನನ್ಯ ಅಭಿರುಚಿಯನ್ನು ತಮ್ಮದಾಗಿಸಿಕೊಂಡರು ಎಂದು ಹೇಳಲಾಗುತ್ತದೆ. ಈ ರೀತಿಯಲ್ಲಿ ಅವರು ಸಾರ್ವತ್ರಿಕವಾದ "ಆಶ್‌-ಶಾಯ್‌" ಎಂಬ ಪದಕ್ಕಿಂತ ಭಿನ್ನವಾದ ಪದವನ್ನು ಈ ವಿಶೇಷ ಚಹಾಕ್ಕಾಗಿ ತಮ್ಮದಾಗಿಸಿಕೊಂಡರು. ನೋಡಿ: ಮೊರಾಕನ್ನರ ಚಹಾ ಸಂಸ್ಕೃತಿ

ಪಾನೀಯವನ್ನು ವಿವರಿಸಲು ಚಹಾಕ್ಕೆ ಸಂಬಂಧವಿಲ್ಲದ ಪದವೊಂದನ್ನು ಬಳಸಿರುವ ಏಕೈಕ ಪ್ರದೇಶವೆಂದರೆ ಪ್ರಾಯಶಃ ಅದು ದಕ್ಷಿಣ ಅಮೆರಿಕಾ (ಅದರಲ್ಲೂ ನಿರ್ದಿಷ್ಟವಾಗಿ ಆಂಡೀಸ್‌ ಪರ್ವತ ಪ್ರದೇಶದ ದೇಶಗಳು) ಎನ್ನಬಹುದು. ಏಕೆಂದರೆ, yerba mate ಎಂಬ ಹೆಸರಿನ ಇದೇ ರೀತಿಯ ಒಂದು ಉತ್ತೇಜಕ ಪಾನೀಯವನ್ನು ಚಹಾದ ಆಗಮನವಾಗುವುದಕ್ಕಿಂತಲೂ ಬಹಳ ಕಾಲ ಮುಂಚೆಯೇ ಅಲ್ಲಿ ಸೇವಿಸಲಾಗುತ್ತಿತ್ತು.

ಚಹಾ ಸಂಸ್ಕೃತಿ

[ಬದಲಾಯಿಸಿ]

ಅನೇಕ ಸಂಸ್ಕೃತಿಗಳಲ್ಲಿ, ಅಪರಾಹ್ನದ ಚಹಾ ಮತ್ತು ಚಹಾ ಕೂಟದಂಥ ಉನ್ನತ ವರ್ಗದ ಸಾಮಾಜಿಕ ಸಂದರ್ಭಗಳಲ್ಲಿ ಚಹಾವು ಅನೇಕ ಬಾರಿ ಸೇವಿಸಲ್ಪಟ್ಟಿದೆ. ಜಾಗರೂಕತೆಯನ್ನು ತೀವ್ರಗೊಳಿಸಲು ದಿನದ ಅರಂಭದಲ್ಲಿ ಇದನ್ನು ಸೇವಿಸಬಹುದು; ಇದು ಥಿಯೋಫಿಲ್ಲೀನ್‌ ಮತ್ತು ಬಂಧಿಸಲ್ಪಟ್ಟಿರುವ ಕೆಫೀನ್‌ನ್ನು[] (ಕೆಲವೊಮ್ಮೆ ಇದನ್ನು "ಥಿಯೈನ್‌" ಎಂದು ಕರೆಯಲಾಗುತ್ತದೆ) ಒಳಗೊಂಡಿರುತ್ತದೆ. ಕೆಫೀನನ್ನು ತೆಗೆದಿರುವ ಚಹಾಗಳೂ ಸಹ ಲಭ್ಯವಿವೆ. ಅರಬ್‌ ಸಂಸ್ಕೃತಿಯಂಥ ಅನೇಕ ಸಂಸ್ಕೃತಿಗಳಲ್ಲಿ ಚಹಾವು ಸಾಮಾಜಿಕ ಕೂಟಗಳ ಒಂದು ಕೇಂದ್ರೀಕರಿಸುವ ಬಿಂದುವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಪರ್ಷಿಯಾದ ಸಂಸ್ಕೃತಿಯಲ್ಲಿನ - ಇರಾನ್‌ನಲ್ಲಿನ ಚಹಾದ ಇತಿಹಾಸವು - ಒಳಹೊಕ್ಕು ವಿಚಾರ ಮಾಡಬಹುದಾದ ಮತ್ತೊಂದು ವಿಷಯವಾಗಿದೆ. ಮೂಲವೊಂದು ಹೀಗೆ ಹೇಳುತ್ತದೆ: "ನೀವು ಇರಾನೀ ಕುಟುಂಬದ ಅತಿಥಿಯಾಗಿ ಹೋದಲ್ಲಿ ನಿಮಗೆ ಮೊಟ್ಟಮೊದಲು ನೀಡಲಾಗುವ ವಸ್ತುವೆಂದರೆ ಚಹಾ".[೪೯]

ಭಿನ್ನ ಭಿನ್ನ ಸಂಸ್ಕೃತಿಗಳಲ್ಲಿ ಚಹಾ ಉತ್ಸವಾಚರಣೆಗಳು ಹುಟ್ಟಿಕೊಂಡಿರುವುದನ್ನು ಕಾಣಬಹುದು. ಇವುಗಳ ಪೈಕಿ ಜಪಾನಿನ ಸಂಕೀರ್ಣ, ಔಪಚಾರಿಕ ಮತ್ತು ಪ್ರಶಾಂತ ಸಂಸ್ಕೃತಿಯು ಅತ್ಯಂತ ಸುಪರಿಚಿತವಾದುದಾಗಿದೆ. ಚೀನಾದ ಚಹಾ ಉತ್ಸವಾಚರಣೆಯು ಇದಕ್ಕಿರುವ ಮತ್ತೊಂದು ಉದಾಹರಣೆಯೆನ್ನಬಹುದು. ಚಹಾವನ್ನು ತಯಾರಿಸುವುದಕ್ಕಾಗಿರುವ ಕೆಲವೊಂದು ಸಾಂಪ್ರದಾಯಿಕ ವಿಧಾನಗಳನ್ನು ಈ ಆಚರಣೆಯು ಬಳಸುತ್ತದೆ. ಗೊಂಗ್ಫು ಟೀ ಸೆರಿಮನಿ ಯು ಚೀನಾದ ಚಹಾ ಉತ್ಸವಾಚರಣೆಯ ಒಂದು ಸ್ವರೂಪವಾಗಿದ್ದು, ಅದು ಪುಟ್ಟದಾದ ಯಿಕ್ಸಿಂಗ್ ಮಣ್ಣಿನ ಚಹಾಕುಡಿಕೆಗಳು ಮತ್ತು ಊಲಾಂಗ್‌ ಚಹಾವನ್ನು ವಿಶಿಷ್ಟ ರೀತಿಯಲ್ಲಿ ಬಳಸುತ್ತದೆ.

"ಚಹಾ ಕುಡಿಯುವಿಕೆಯ ನಾಜೂಕಾಗಿ ಅಂತರ್ಗತವಾಗಿರುವ ಅಲಂಕಾರವು, ಓದುವಿಕೆಗೆ ಒಂದು ರೂಪಕಾಲಂಕಾರವಾಗಿದೆ (ಎಲೆಗಳಿಂದ ಪಡೆದ ಒಂದು ಪಾನೀಯವನ್ನು ಸೇವಿಸುವುದು)" ಎಂದು ಹೇಳುವ ಮೂಲಕ ಓರ್ವ ಚಹಾ ಅಭಿಮಾನಿಯಾಗಿದ್ದ ಅಮೆರಿಕಾದ ಕವಿ ವ್ಯಾಲೇಸ್‌ ಸ್ಟೀವನ್ಸ್‌ನನ್ನು ಎಲಿಯನಾರ್ ಕುಕ್‌ ಎಂಬಾತ ಪ್ರಶಂಸಿಸಿದ್ದಾನೆ.[೫೦] ಇದರ ದೃಷ್ಟಾಂತವಾಗಿ ಆತ ಬರೆದ "ಟೀ" ಕೃತಿಯನ್ನು ನೋಡಿ.

ತಯಾರಿಕೆ

[ಬದಲಾಯಿಸಿ]
ಬಿಸಿ ಕಲ್ಲಿದ್ದಲ ಮೇಲಿಟ್ಟಿರುವ ಕೊರಿಯಾದ ಚಹಾ ಕೆಟಲು

ಒಂದು ಕಪ್‌ ಚಹಾವನ್ನು ತಯಾರಿಸಲು ಇರುವ ಸಾಂಪ್ರದಾಯಿಕ ವಿಧಾನವು ಹೀಗಿದೆ: ಬಿಡಿಬಿಡಿಯಾದ ಚಹಾ ಎಲೆಗಳನ್ನು ನೇರವಾಗಿ, ಇಲ್ಲವೇ ಒಂದು ಚಹಾ ಊರಿಗದಲ್ಲಿ (ಟೀ ಇನ್‌ಫ್ಯೂಸರ್‌) ಹಾಕಿ, ಒಂದು ಚಹಾ ಕುಡಿಕೆ ಅಥವಾ ಚಹಾಬಟ್ಟಲಿನ ಒಳಗಿಡಬೇಕು ಮತ್ತು ಎಲೆಗಳ ಮೇಲೆ ಬಿಸಿನೀರು ಸುರಿಯಬೇಕು. ಒಂದೆರಡು ನಿಮಿಷಗಳ ನಂತರ, ಊರಿಗವನ್ನು ತೆಗೆಯುವ ಮೂಲಕ, ಇಲ್ಲವೇ ಚಹಾವನ್ನು ವಿತರಿಸುವಾಗ ಅದನ್ನು ಸೋಸುವ ಮೂಲಕ ಎಲೆಗಳನ್ನು ಸಾಮಾನ್ಯವಾಗಿ ತೆಗೆದುಹಾಕಲಾಗುತ್ತದೆ.

ಹೆಚ್ಚಿನ ಹಸಿರು ಚಹಾಗಳಿಗೆ ಸುಮಾರು ಮೂರು ನಿಮಿಷಗಳವರೆಗೆ ಮುಳುಗಿರಲು ಅವಕಾಶ ಕೊಡಬೇಕಾಗುತ್ತದೆ. ಕೆಲವೊಂದು ಬಗೆಯ ಚಹಾಗಳಿಗೆ ಹತ್ತು ನಿಮಿಷಗಳಷ್ಟು ಅವಧಿ ಬೇಕಾಗುತ್ತದೆ. ಎಲೆಗಳ ಮುಳುಗಿರುವಿಕೆಯ ಅವಧಿಯನ್ನು ಬದಲಾಯಿಸುವುದರ ಬದಲಿಗೆ ಬಳಸಲ್ಪಡುವ ಚಹಾದ ಪ್ರಮಾಣವನ್ನು ಬದಲಿಸುವ ಮೂಲಕ ಚಹಾದ ಬಲವನ್ನು ವೈವಿಧ್ಯಮಯಗೊಳಿಸುವುದು ಅಗತ್ಯವಿರುತ್ತದೆ. ಒಂದು ನಿರ್ದಿಷ್ಟ ಪ್ರಮಾಣದ ನೀರಿಗೆ ಬಳಸಬೇಕಾದ ಚಹಾದ ಪ್ರಮಾಣವು ಚಹಾದಿಂದ ಚಹಾಕ್ಕೆ ಬದಲಾಗುತ್ತದೆಯಾದರೂ, ಒಂದು ಮೂಲಭೂತ ತಯಾರಿಕಾ ಸೂತ್ರವು ಹೀಗಿರುತ್ತದೆ: ನೀರನ್ನು ಒಳಗೊಂಡ (200 ಮಿಲೀ) (8 ಔನ್ಸು) ಪ್ರತಿ ಚಹಾ ಬಟ್ಟಲಿಗೆ ಚಹಾಚಮಚದಲ್ಲಿ ಕೊಂಚವೇ ಗೋಪುರದಂತೆ ತುಂಬಿಸಲಾದ ಚಹಾವನ್ನು (ಸುಮಾರು 5 ಮಿಲೀ) ಸೇರಿಸಿ ಮೇಲೆ ತಿಳಿಸಿರುವಂತೆ ಚಹಾ ತಯಾರಿಸುವುದು. ಅಸ್ಸಾಂ ಚಹಾದಂಥ, ಹಾಲಿನೊಂದಿಗೆ ಕುಡಿಯಬೇಕಾದ ಕಡು ಚಹಾಗಳನ್ನು ಹೆಚ್ಚು ಪ್ರಮಾಣದ ಎಲೆಗಳನ್ನು ಬಳಸಿ ಹೆಚ್ಚಿನ ವೇಳೆ ತಯಾರಿಸಲಾಗುತ್ತದೆ, ಮತ್ತು ಡಾರ್ಜಿಲಿಂಗ್‌ ಚಹಾದಂಥ ಹೆಚ್ಚು ಉತ್ಕೃಷ್ಟವಾದ, ಉನ್ನತ ಪ್ರದೇಶದಲ್ಲಿ ಬೆಳೆದ ಚಹಾಗಳನ್ನು ಕೊಂಚವೇ ಕಡಿಮೆ ಪ್ರಮಾಣದ ಎಲೆಗಳನ್ನು ಬಳಸಿ ತಯಾರಿಸಲಾಗುತ್ತದೆ (ಏಕೆಂದರೆ, ಕಡುವಾದ ಮಧ್ಯಮ-ಪರಿಮಳಗಳು ಷಾಂಪೇನ್‌ ಪರಿಮಳವನ್ನೂ ಮೀರಿಸಬಲ್ಲವು).

ಚಹಾವನ್ನು ಕುದಿಸಲು ಅಗತ್ಯವಿರುವ ಯೋಗ್ಯವಾದ ಉಷ್ಣತೆಯು ಚಹಾದ ಬಗೆಯ ಮೇಲೆ ಅವಲಂಬಿತವಾಗಿದೆ. ಹಸಿರು ಚಹಾ ಅಥವಾ ಬಿಳಿ ಚಹಾದಂಥ ಕಡಿಮೆ ಉತ್ಕರ್ಷಣ ಅವಧಿ ಹೊಂದಿರುವ ಅಥವಾ ಉತ್ಕರ್ಷಣ ಅವಧಿಯನ್ನೇ ಹೊಂದಿರದ ಚಹಾಗಳು 60 and 85 °C (140 and 185 °F) ನಡುವಿನ ಕಡಿಮೆ ತಾಪಮಾನದಲ್ಲಿ ಉತ್ತಮವಾಗಿ ತಯಾರಾಗುತ್ತವೆ. ಆದರೆ ದೀರ್ಘವಾದ ಉತ್ಕರ್ಷಣ ಅವಧಿಗಳನ್ನು ಹೊಂದಿರುವ ಚಹಾಗಳನ್ನು ಸುಮಾರು 100 °C (212 °F).......ರವರೆಗಿನ ತಾಪಮಾನದವರೆಗೆ ಕುದಿಸಬೇಕಾಗುತ್ತದೆ.[೫೧]

ನೀರನ್ನು ತುಂಬಾ ಕುದಿಸುವುದರಿಂದ ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣವು ತಗ್ಗುತ್ತದೆಯಾದರೂ, ಹುದುಗಿಸಲಾದ ಚಹಾದಲ್ಲಿ ಕಂಡುಬರುವ ದೊಡ್ಡ, ಸಂಕೀರ್ಣ, ಸ್ವಾದಿಷ್ಟ ಕಣಗಳಿಂದ ಸಾರವನ್ನು ತೆಗೆಯಲು ಹೆಚ್ಚಿನ ತಾಪಮಾನದ ಅಗತ್ಯವಿರುತ್ತದೆ.
ವಿಧ ನೀರಿನ ಉಷ್ಣತೆ. ನೆನೆಸಿಡುವ ಅವಧಿ ಮಿಶ್ರಣಗಳು
ಬಿಳಿ ಚಹಾ 150 °F (66 °C) – 160 °F (71 °C) 1–2 ನಿಮಿಷಗಳು 3
ಹಳದಿ ಚಹಾ 160 °F (71 °C) – 170 °F (77 °C) 1–2 ನಿಮಿಷಗಳು 3
ಹಸಿರು ಚಹಾ 170 °F (77 °C) – 180 °F (82 °C) 1–2 ನಿಮಿಷಗಳು 4-6
ಊಲಾಂಗ್‌ ಚಹಾ 180 °F (82 °C) – 190 °F (88 °C) 2–3 ನಿಮಿಷಗಳು 4-6
ಕಪ್ಪು ಚಹಾ 210 °F (99 °C) 2–3 ನಿಮಿಷಗಳು 2-3
ಪು-ಎರ್ಹ್‌ ಚಹಾ 200 °F (93 °C) – 210 °F (99 °C) ಮಿತಿಯಿಲ್ಲದ್ದು ಹಲವಾರು
ಮೂಲಿಕಾ ಚಹಾ 210 °F (99 °C) 3–6 ನಿಮಿಷಗಳು ವೈವಿಧ್ಯಮಯ

ಕೆಲವೊಂದು ಚಹಾ ಬಗೆಗಳನ್ನು ಅದೇ ಚಹಾ ಎಲೆಗಳನ್ನು ಬಳಸಿಕೊಂಡು ಹಲವಾರು ಬಾರಿ ಕುದಿಸಲಾಗುತ್ತದೆ. ಐತಿಹಾಸಿಕವಾಗಿ, ಚೀನಾದಲ್ಲಿ, ಚಹಾವನ್ನು ಅನೇಕ ಮಿಶ್ರಣಗಳಾಗಿ ವಿಂಗಡಿಸಲಾಗಿದೆ. ಚಹಾವನ್ನು ತೋಯಿಸಲು ಮೊದಲ ಮಿಶ್ರಣವನ್ನು ದೀರ್ಘವಾಗಿ ಸುರಿಯಲಾಗುತ್ತದೆ, ಮತ್ತು ಎರಡನೇ ಹಾಗೂ ನಂತರದ ಮಿಶ್ರಣಗಳನ್ನು ಕುಡಿಯಲಾಗುತ್ತದೆ. ವಿಭಿನ್ನ ಚಹಾಗಳು ವಿಭಿನ್ನ ರೀತಿಯಲ್ಲಿ ತಮ್ಮ ಗುಣವನ್ನು ಹೊರಗೆಡಹುವ ಸ್ವಭಾವವನ್ನು ಹೊಂದಿದ್ದು ಅವಕ್ಕೆ ಮತ್ತೆ ಜೀವವನ್ನು ತುಂಬಲು ಹೆಚ್ಚು ಪ್ರಮಾಣದಲ್ಲಿ ಬಿಸಿನೀರನ್ನು ಬೆರೆಸಬೇಕಾಗಿ ಬರುತ್ತದೆಯಾದರೂ, ಐದನೆಯದೂ ಸೇರಿದಂತೆ ಮೂರರವರೆಗಿನ ಮಿಶ್ರಣಗಳು ಚಹಾದ ಅತ್ಯುತ್ತಮ ಮಿಶ್ರಣಗಳೆಂದು ಯಾವಾಗಲೂ ಹೆಚ್ಚೂಕಡಿಮೆ ಪರಿಗಣಿಸಲ್ಪಡುತ್ತವೆ.[೫೨]

ಚಹಾ ಎಲೆಗಳನ್ನು ಹೊಂದಿರುವ ಒಂದು ಬಟ್ಟಲಿಗೆ ಬಿಸಿ ನೀರನ್ನು ಸೇರಿಸಿ, ಸುಮಾರು 30 ಸೆಕೆಂಡುಗಳ ನಂತರ ಚಹಾದ ರುಚಿ ನೋಡುವುದು ಚಹಾದ ಸಮಗ್ರ ತಯಾರಿಕಾ ವಿಧಾನದಾದ್ಯಂತ ಅದರ ರುಚಿ ನೋಡಲು ಇರುವ ಒಂದು ಮಾರ್ಗವಾಗಿದೆ. ಚಹಾ ಎಲೆಗಳು ಸುರುಳಿಗಳನ್ನು ಬಿಚ್ಚುತ್ತಾ ಹೋದಂತೆ (ಇದನ್ನು "ಎಲೆಗಳ ಸ್ಫೋಟನೆ" ಎಂದು ಕರೆಯಲಾಗುತ್ತದೆ) ನೀರಿನೊಳಗೆ ತಮ್ಮ ಹಲವಾರು ಭಾಗಗಳನ್ನು ಅವು ಬಿಟ್ಟುಬಿಡುತ್ತಾ ಹೋಗುತ್ತವೆ ಮತ್ತು ತನ್ಮೂಲಕ ರುಚಿಯು ಹೊರಹೊಮ್ಮುತ್ತದೆ. ಚಹಾದ ಮೊಟ್ಟಮೊದಲ ಪರಿಮಳಗಳಿಂದ ಮೊದಲ್ಗೊಂಡು ಚಹಾವನ್ನು ಸಂಪೂರ್ಣವಾಗಿ ಕುದಿಸಿ ತೀಕ್ಷಣಗೊಳಿಸಿದ ಅವಧಿಯಿಂದ ಆಚೆಯವರೆಗೆ ಮುಂದುವರಿಯುವ ಈ ರುಚಿಯು, ಚಹಾದ ಸಂಪೂರ್ಣ ಕಾಲಾವಧಿಯಾದ್ಯಂತ ಅದರ ಕುರಿತು ಮೆಚ್ಚಿಕೆ ಸೂಚಿಸಲು ಅನುವುಮಾಡಿಕೊಡುತ್ತದೆ.[೫೩]

ಕಪ್ಪು ಚಹಾ ಮಿಶ್ರಣ.

ಕಪ್ಪು ಚಹಾ

[ಬದಲಾಯಿಸಿ]

ಕುದಿಯುವ ಬಿಂದುವಿಗೆ ಸಮೀಪವಿರುವ ನೀರನ್ನು ಕಪ್ಪು ಚಹಾಕ್ಕೆ ಬೆರೆಸಬೇಕಾಗುತ್ತದೆ 210 °F (99 °C). ಕಪ್ಪು ಚಹಾದಲ್ಲಿನ ಬಹುತೇಕ ಕ್ರಿಯಾಶೀಲ ವಸ್ತುಗಳು 194 °F (90 °C)ಗಿಂತ ಕಡಿಮೆಯ ಉಷ್ಣತೆಯಲ್ಲಿ ತಮ್ಮ ಶಕ್ತಿಯನ್ನು ಹೊರಹೊಮ್ಮಿಸುವುದಿಲ್ಲ. ಕೆಲವೊಂದು ಹೆಚ್ಚು ಉತ್ಕೃಷ್ಟ ಚಹಾಗಳಿಗೆ ಕಡಿಮೆ ತಾಪಮಾನಗಳನ್ನು ಶಿಫಾರಸು ಮಾಡಲಾಗಿದೆ. ಚಹಾ ತಯಾರಿಕೆಯಲ್ಲಿ ಬಳಸಲಾಗಿರುವ ಚಹಾ ಎಲೆಗಳಿಗೆ ಅನುಸಾರವಾಗಿ, ಚಹಾದ ಅಂತಿಮ ಪರಿಮಳದ ಮೇಲೆ ತಾಪಮಾನವು ಪ್ರಭಾವವನ್ನು ಹೊಂದಿರುತ್ತದೆ. ಕಪ್ಪು ಚಹಾವನ್ನು ತಯಾರಿಸುವಾಗ ಅಗತ್ಯಕ್ಕಿಂತ ತುಂಬಾ ಕಡಿಮೆಯ ತಾಪಮಾನವನ್ನು ಬಳಸುವುದು ಅತ್ಯಂತ ಸಾಮಾನ್ಯವಾದ ದೋಷವಾಗಿದೆ. ಹೆಚ್ಚುತ್ತಿರುವ ಎತ್ತರದ ಜೊತೆಗೆ ಕುದಿಯುವ ಬಿಂದುವು ಕುಸಿಯುತ್ತದೆಯಾದ್ದರಿಂದ, ಪರ್ವತ ಪ್ರದೇಶಗಳಲ್ಲಿ ಕಪ್ಪು ಚಹಾವನ್ನು ಸೂಕ್ತ ರೀತಿಯಲ್ಲಿ ಕುದಿಸುವುದು ತುಂಬಾ ಕಷ್ಟಕರವಾಗಿ ಪರಿಣಮಿಸುತ್ತದೆ. ಚಹಾವನ್ನು ತಯಾರಿಸುವುದಕ್ಕೆ ಮುಂಚಿತವಾಗಿ ಚಹಾಕುಡಿಕೆಯನ್ನು ಬಿಸಿಮಾಡಬೇಕು ಎಂದು ಕೂಡಾ ಶಿಫಾರಸು ಮಾಡಲಾಗಿದೆ. ಸ್ವಲ್ಪವೇ ಪ್ರಮಾಣದ ಕುದಿಯುವ ನೀರನ್ನು ಆ ಕುಡಿಕೆಗೆ ಬೆರೆಸಿ, ಹೃಸ್ವವಾಗಿ ಸುಳಿ ಸುತ್ತಿಸಿ ನಂತರ ಅದನ್ನು ಹೊರಚೆಲ್ಲುವ ಮೂಲಕ ಈ ಕ್ರಮವನ್ನು ಸುಲಭವಾಗಿ ಅನುಸರಿಸಬಹುದಾಗಿದೆ. ಕಪ್ಪು ಚಹಾಗಳನ್ನು ಸಾಮಾನ್ಯವಾಗಿ ಸುಮಾರು 4 ನಿಮಿಷಗಳವರೆಗೆ ಕುದಿಸಲಾಗುತ್ತದೆ. ಕಪ್ಪು ಚಹಾಗಳನ್ನು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯವರೆಗೆ ಅಥವಾ ಐದು ನಿಮಿಷಗಳಿಗಿಂತ ಹೆಚ್ಚಿನ ಅವಧಿಯವರೆಗೆ ನೆನೆಯಿಸಿಡಬಾರದು (ಬ್ರಿಟನ್‌ನಲ್ಲಿ ಈ ಪ್ರಕ್ರಿಯೆಯನ್ನು ಹುಳಿಸುವುದು (brewing) ಅಥವಾ ದ್ರವಪಿಷ್ಟ ಮಾಡುವಿಕೆ (mashing‌) ಎಂದು ಕರೆಯುತ್ತಾರೆ). ಐದು ನಿಮಿಷಗಳಿಗಿಂತ ಹೆಚ್ಚಿನ ಅವಧಿಗೆ ಚಹಾವನ್ನು ತೋಯಿಸಿಡುವುದರಿಂದ ಚಹಾವು ಕಹಿಯಾಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆಯಾದರೂ (ಈ ಘಟ್ಟದಲ್ಲಿ ಅದನ್ನು ಹುಳಿಯುವಿಕೆಯ ಹಂತದಲ್ಲಿರುವ ಚಹಾ ಎಂದು ಬ್ರಿಟನ್‌ನಲ್ಲಿ ಉಲ್ಲೇಖಿಸಲಾಗುತ್ತದೆ‌), ವಾಸ್ತವದಲ್ಲಿ ಚಹಾದ ಬಗೆ, ನೀರಿನ ಗುಣಮಟ್ಟ ಇವೇ ಮೊದಲಾದ ಹಲವಾರು ಅಂಶಗಳನ್ನು ಕರಾರುವಾಕ್ಕಾದ ಅವಧಿಯು ಅವಲಂಬಿಸಿರುತ್ತದೆ, ಮತ್ತು ಕಹಿಯು ಮೂರು ನಿಮಿಷಗಳಲ್ಲೇ ಕಾಣಿಸಿಕೊಳ್ಳಬಹುದು, ಅಥವಾ ಸುದೀರ್ಘ ಅವಧಿಗೆ ತೋಯಿಸಿಟ್ಟ ನಂತರವೂ ಅದು ಕಾಣಿಸಿಕೊಳ್ಳದೆಯೇ ಇರಬಹುದು. ಚಹಾವನ್ನು ಸೇವಿಸುವಾತನ ರುಚಿಗೆ ಹೋಲುವ ಮಟ್ಟಿಗಿನ ಅವಧಿಯವರೆಗೆ ಚಹಾವು ಕುದಿಸಲ್ಪಟ್ಟಾಗ, ಅದನ್ನು ವಿತರಿಸುವಾಗ ಸೋಸುವುದು ಅಗತ್ಯವಾಗಿರುತ್ತದೆ. ಅಸ್ಸಾಂ ಚಹಾ, ಡಾರ್ಜಿಲಿಂಗ್‌ ಚಹಾ ಮತ್ತು ಕಪ್ಪು ಸಿಲೋನ್‌ ಚಹಾ ಇವುಗಳು ಕಪ್ಪು ಚಹಾದ ಜನಪ್ರಿಯ ಪ್ರಭೇದಗಳಲ್ಲಿ ಸೇರಿವೆ.

ಹಸಿರು ಚಹಾ

[ಬದಲಾಯಿಸಿ]

ಬಹುತೇಕರ ಪರಿಗಣನೆಯ ಅನುಸಾರ, ಹಸಿರು ಚಹಾಕ್ಕಾಗಿ ಬಳಸಲಾಗುವ ನೀರು ಸುಮಾರು 80 to 85 °C (176 to 185 °F)....ನಷ್ಟು ಪ್ರಮಾಣದಲ್ಲಿರಬೇಕು; ಎಲೆಗಳ ಗುಣಮಟ್ಟವು ಹೆಚ್ಚಾದಂತೆ, ಅಗತ್ಯವಿರುವ ತಾಪಮಾನವು ಕಡಿಮೆಯಿರುತ್ತದೆ. ತೀರಾ ಬಿಸಿಯಾಗಿರುವ ನೀರು ಹಸಿರು-ಚಹಾ ಎಲೆಗಳನ್ನು ಸುಡುವುದರ ಜೊತೆಗೆ, ಒಂದು ರೀತಿಯ ಕಹಿರುಚಿಯನ್ನು ಉತ್ಪಾದಿಸುತ್ತದೆ. ಚಹಾವನ್ನು ತೋಯಿಸಲಾಗುವ ಮಗ್ಗು, ಅಥವಾ ಚಹಾಕುಡಿಕೆಯಂಥ ಪಾತ್ರೆಯನ್ನೂ ಸಹ ಮುಂಚಿತವಾಗಿಯೇ ಬೆಚ್ಚಗಾಗಿಸುವುದು ಅಗತ್ಯವಾಗಿರುತ್ತದೆ. ಹೀಗೆ ಮಾಡುವುದರಿಂದ ಚಹಾವು ಕೂಡಲೇ ತಣ್ಣಗಾಗುವುದಿಲ್ಲ. ಪ್ರಭೇದವನ್ನವಲಂಬಿಸಿ, ಹೆಚ್ಚುತ್ತಲೇ ಇರುವ ಉನ್ನತ ತಾಪಮಾನದಲ್ಲಿ ಉನ್ನತ-ಗುಣಮಟ್ಟದ ಹಸಿರು ಮತ್ತು ಬಿಳಿ ಚಹಾಗಳು ಐದು ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದ ನೀರಿನ ಹೊಸ ಸೇರ್ಪಡೆಯನ್ನು ತಾಳಿಕೊಳ್ಳಬಲ್ಲವು.

ಊಲಾಂಗ್‌ ಚಹಾ

[ಬದಲಾಯಿಸಿ]

ಊಲಾಂಗ್‌ ಚಹಾಗಳನ್ನು ಸುಮಾರು ...90 to 100 °C (194 to 212 °F)ರಷ್ಟರಲ್ಲಿ ಕುದಿಸುವುದು, ಮತ್ತು ಕುದಿಸುವ ಪಾತ್ರೆಗೆ ನೀರು ಸುರಿಯುವುದಕ್ಕೆ ಮುಂಚೆ ಅದನ್ನು ಮತ್ತೊಮ್ಮೆ ಬೆಚ್ಚಗಾಗಿಸುವುದು ಅಗತ್ಯ. ಯಿಕ್ಸಿಂಗ್ ನೇರಳೆ ಬಣ್ಣದ ಮಣ್ಣಿನ ಚಹಾಕುಡಿಕೆಗಳು ಊಲಾಂಗ್‌ ಚಹಾವನ್ನು ಕುದಿಸಲು ಮೀಸಲಾಗಿರುವ ಕುದಿಸುವಿಕೆಯ ಸಾಂಪ್ರದಾಯಿಕ ಪಾತ್ರೆಗಳಾಗಿವೆ. ಚಿಲುಮೆಯ ನೀರಿನಲ್ಲಿನ ಖನಿಜಗಳು ಚಹಾದಲ್ಲಿನ ಪರಿಮಳವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರತರುವ ಪ್ರವೃತ್ತಿಯನ್ನು ಹೊಂದಿರುತ್ತವೆಯಾದ್ದರಿಂದ, ಉತ್ತಮ ಫಲಿತಾಂಶಗಳನ್ನು ಪಡೆಯಲು ಚಿಲುಮೆಯ ನೀರನ್ನು ಬಳಸಲಾಗುತ್ತದೆ. ಉನ್ನತ ಗುಣಮಟ್ಟದ ಊಲಾಂಗ್‌ ಚಹಾವನ್ನು ಒಮ್ಮೆ ಬಳಸಿದ ಅದರದೇ ಎಲೆಗಳಿಂದ ಅನೇಕ ಬಾರಿ ತಯಾರಿಸಲು ಸಾಧ್ಯವಿದ್ದು, ಹಸಿರು ಚಹಾಕ್ಕಿಂತ ಭಿನ್ನವಾಗಿರುವ ಇದು ಮರುಬಳಕೆಯೊಂದಿಗೆ ತನ್ನ ಸ್ವಾದವನ್ನು ಹೆಚ್ಚಿಸಿಕೊಳ್ಳುತ್ತದೆ. ಬಳಸಿದ ಎಲೆಗಳನ್ನೇ ಮೂರರಿಂದ ಐದು ಬಾರಿ ಕುದಿಸುವುದು ಒಂದು ಸಾಮಾನ್ಯ ಅಭ್ಯಾಸವಾಗಿದ್ದು, ಅವುಗಳ ಪೈಕಿ ಮೂರನೆಯ ಬಾರಿಯ ತೋಯಿಸುವಿಕೆಯು ಸಾಮಾನ್ಯವಾಗಿ ಉತ್ತಮ ಮಟ್ಟದ್ದಾಗಿರುತ್ತದೆ.

ಅಧಿಕ ಮೌಲ್ಯದ ಅಥವಾ ಉತ್ಕೃಷ್ಟ ಚಹಾ

[ಬದಲಾಯಿಸಿ]

ಕೆಲವೊಂದು ಚಹಾಗಳು, ಅದರಲ್ಲೂ ವಿಶೇಷವಾಗಿ ಹಸಿರು ಚಹಾಗಳು ಮತ್ತು ಉತ್ಕೃಷ್ಟವಾದ ಊಲಾಂಗ್‌ ಚಹಾಗಳು, ಕಡಿಮೆ ಅವಧಿಯವರೆಗೆ ತೋಯಿಸಲ್ಪಡುತ್ತವೆ, ಕೆಲವೊಮ್ಮೆ ಈ ಅವಧಿಯು 30 ಸೆಕೆಂಡುಗಳಿಗಿಂತಲೂ ಕಮ್ಮಿಯಿರುತ್ತದೆ. ಒಂದು ವೇಳೆ ಒಂದು ಚಹಾ ಚೀಲವು (ಟೀ ಬ್ಯಾಗ್‌) ಚಹಾ ತಯಾರಿಕೆಯಲ್ಲಿ ಬಳಸಲ್ಪಡದಿದ್ದಲ್ಲಿ, ಚಹಾ ಕುದಿಸುವಿಕೆಯ ಅಂತ್ಯದ ವೇಳೆಯಲ್ಲಿ ಚಹಾ ಜರಡಿಯೊಂದನ್ನು ಬಳಸುವುದರಿಂದ ನೀರಿನಿಂದ ಎಲೆಗಳನ್ನು ಬೇರ್ಪಡಿಸಬಹುದು. ಆದಾಗ್ಯೂ, ಭಾರತದ ಉತ್ಕೃಷ್ಟ ಚಹಾ ಆಗಿರುವ ಕಪ್ಪು ಡಾರ್ಜಿಲಿಂಗ್‌ ಚಹಾಕ್ಕೆ ಸರಾಸರಿ ತೋಯಿಸುವಿಕೆಯ ಅವಧಿಗಿಂತ ಹೆಚ್ಚಿನ ಅವಧಿಯು ಬೇಕಾಗುತ್ತದೆ. ಚಹಾ ತೋಟವಿರುವ ಪ್ರದೇಶದ ಎತ್ತರ ಮತ್ತು ಕಟಾವಿನ ಸಮಯವು ರುಚಿಯ ವೈವಿಧ್ಯತೆಗಳಿಗೆ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತವೆ. ಸೂಕ್ತ ರೀತಿಯಲ್ಲಿನ ಶೇಖರಣೆ ಮತ್ತು ನೀರಿನ ಗುಣಮಟ್ಟಗಳೂ ಸಹ ರುಚಿಯ ಮೇಲೆ ಅತೀವವಾದ ಪ್ರಭಾವವನ್ನು ಹೊಂದಿರುತ್ತವೆ.

ಪು-ಎರ್ಹ್‌ ಚಹಾ (ಅಥವಾ ಪು'ಎರ್‌‌ )

[ಬದಲಾಯಿಸಿ]

ಮಿಶ್ರಣವನ್ನು ತಯಾರಿಸಲು ಪು-ಎರ್ಹ್‌ ಚಹಾಗಳಿಗೆ ಕುದಿಯುವ ನೀರಿನ ಅಗತ್ಯ ಬರುತ್ತದೆ. ಬಲವರ್ಧನೆಯ ಪ್ರಕ್ರಿಯೆಯ ಕಾರಣದಿಂದಾಗಿ ಸಂಗ್ರಹವಾಗುವ ಚಹಾ ಧೂಳನ್ನು ತೆಗೆದುಹಾಕಲು ಪು-ಎರ್ಹ್‌ ಚಹಾವನ್ನು ಕುದಿಯುವ ನೀರಿನೊಂದಿಗೆ ಹಲವಾರು ಸೆಕೆಂಡುಗಳವರೆಗೆ ಕ್ಷಿಪ್ರವಾಗಿ ನೆನೆಸುವುದರ ಕಡೆಗೆ ಕೆಲವರು ಆದ್ಯತೆ ನೀಡುತ್ತಾರೆ. ಪು-ಎರ್ಹ್‌ ಚಹಾವನ್ನು ಕುದಿಯುವ ಬಿಂದುವಿನಲ್ಲಿ ಮಿಶ್ರಮಾಡಿ (100 °C ಅಥವಾ 212 °F), 30 ಸೆಕೆಂಡುಗಳವರೆಗೆ ಅಥವಾ ಐದು ನಿಮಿಷಗಳವರೆಗೆ ನೆನೆಯಲು ಅನುವು ಮಾಡಿಕೊಡಬೇಕು.

ವಿತರಿಸುವುದು

[ಬದಲಾಯಿಸಿ]

ಟ್ಯಾನಿನ್‌-ಪೂರ್ವ ಚಹಾದ ಎಲ್ಲ ಪ್ರಮಾಣವನ್ನೂ ಸುರಿಯುವ ಅವಶ್ಯಕತೆ ಕಂಡುಬರದಿದ್ದಾಗ, ಅದನ್ನು ಕಾಯ್ದಿಟ್ಟುಕೊಳ್ಳಲು ಎರಡನೇ ಚಹಾಕುಡಿಕೆಯೊಂದನ್ನು ಬಳಸಬಹುದು. ಹೊಳಪಿಲ್ಲದ ಸುಟ್ಟ ಜೇಡಿಮಣ್ಣಿನ ಪಾತ್ರೆಗಳು ಇದಕ್ಕೆ ಸೂಕ್ತವಾಗಿದ್ದು, ಅವುಗಳ ಪೈಕಿ ಯಿಕ್ಸಿಂಗ್ ಮಣ್ಣಿನ ಕುಡಿಕೆಗಳು ಅತ್ಯುತ್ತಮವಾಗಿವೆ. ಉತ್ತಮ ಗುಣಮಟ್ಟದ ಜೇಡಿಮಣ್ಣಿನಿಂದ ಮಾಡಲ್ಪಟ್ಟಿರುವುದು ಅವಕ್ಕೆ ಖ್ಯಾತಿಯನ್ನು ತಂದುಕೊಟ್ಟಿವೆ. ಚಹಾವನ್ನು ವಿತರಿಸಲು ಬಳಸಲಾಗುವ ಕುಡಿಕೆಗಳು ಸಾಮಾನ್ಯವಾಗಿ ಪಿಂಗಾಣಿಯದ್ದಾಗಿದ್ದು, ಬಿಸಿಯನ್ನು ಅದು ಚೆನ್ನಾಗಿ ಹಿಡಿದಿಟ್ಟುಕೊಳ್ಳುತ್ತದೆ. ದೊಡ್ಡ ಗಾತ್ರದ ಚಹಾಕುಡಿಕೆಗಳು 19ನೇ ಶತಮಾನದ ನಂತರದ ನೂತನಸೃಷ್ಟಿಯಾಗಿವೆ. ಏಕೆಂದರೆ ಈ ಅವಧಿಗೂ ಮುಂಚೆ ಚಹಾವು ತುಂಬಾ ಅಪರೂಪದ್ದು ಹಾಗೂ ದುಬಾರಿಯದು ಆಗಿತ್ತು. ಅನುಭವಿ ಚಹಾ-ಸೇವನೆಗಾರರು ಅನೇಕ ವೇಳೆ ಒತ್ತಿ ಹೇಳುವ ಪ್ರಕಾರ, ಚಹಾವನ್ನು ನೆನೆಸಿಡುವ ಅವಧಿಯಲ್ಲಿ ಅದನ್ನು ಕಲಕಬಾರದು (UKಯಲ್ಲಿ ಇದನ್ನು ಕೆಲವೊಮ್ಮೆ ವೈಂಡಿಂಗ್‌ ಎನ್ನುತ್ತಾರೆ).

ಅವರು ಹೇಳುವ ಪ್ರಕಾರ, ಇದು ಚಹಾವನ್ನೇನೂ ಬಲಗೊಳಿಸುವುದಿಲ್ಲ. ಆದರೆ, ಬಹಳ ಕಾಲದವರೆಗೆ ಕುದಿಸುವುದರಿಂದ ಟ್ಯಾನಿನ್‌ಗಳು ಪ್ರಕಟಗೊಳ್ಳುವಂತೆಯೇ, ಕಲಕುವುದರಿಂದಲೂ ಟ್ಯಾನಿನ್‌ಗಳು ಪ್ರಕಟಗೊಳ್ಳುವ ಸಂಭವವಿರುತ್ತದೆ. ಈ ಕಾರಣಕ್ಕಾಗಿಯೇ ಚಹಾಚೀಲವೊಂದರಿಂದ ಕೊನೆಯ ಹನಿಗಳನ್ನು ಹಿಸುಕಿ ತೆಗೆಯಬಾರದು; ಕಡುವಾಗಿರುವ ಚಹಾ ಬೇಕೆಂದಲ್ಲಿ ಹೆಚ್ಚು ಚಹಾ ಎಲೆಗಳನ್ನು ಬಳಸುವುದು ಅಗತ್ಯ.

ಚಹಾಕ್ಕೆ ಹಾಲು ಬೆರೆಸುವುದು

[ಬದಲಾಯಿಸಿ]
ಚಹಾವನ್ನು ಕೆಲವೊಮ್ಮೆ ಹಾಲಿನೊಂದಿಗೆ ಸೇವಿಸಲಾಗುತ್ತದೆ

ಚಹಾಕ್ಕೆ ಹಾಲನ್ನು ಬೆರೆಸುವ ಅಭ್ಯಾಸವು ಮ್ಯಾಡಮ್‌ ಡಿ ಸೆವಿಗ್ನೆ ಎಂಬ ಪತ್ರವಾಚಕನಿಂದ 1680ರಲ್ಲಿ ಮೊಟ್ಟಮೊದಲಬಾರಿಗೆ ನಮೂದಿಸಲ್ಪಟ್ಟಿತು.[೫೪] ಅನೇಕ ಬಗೆಯ ಚಹಾಗಳನ್ನು ಪರಂಪರಾನುಗತವಾಗಿ ಹಾಲಿನೊಂದಿಗೆ ಸೇವಿಸುತ್ತಾ ಬರಲಾಗಿದೆ. ಭಾರತದ ಮಸಾಲಾ ಚಾಯ್‌, ಮತ್ತು ಬ್ರಿಟಿಷ್‌ ಚಹಾದ ಹದವಾದ ಮಿಶ್ರಣಗಳು ಇವುಗಳಲ್ಲಿ ಸೇರಿವೆ. ಈ ಚಹಾಗಳು ಅತ್ಯಂತ ಸಮೃದ್ಧವಾದ ಪ್ರಭೇದಗಳಾಗಿದ್ದು ಹಾಲಿನೊಂದಿಗೆ ಬೆರೆಸಿ ಇವನ್ನು ಸೇವಿಸಬಹುದಾಗಿದೆ. ಅಸ್ಸಾಂ ಚಹಾಗಳು, ಅಥವಾ ಪೂರ್ವ ಫ್ರಿಸಿಯಾದ ಹದವಾದ ಮಿಶ್ರಣಗಳು ಈ ವರ್ಗಕ್ಕೆ ಸೇರುತ್ತವೆ. ಉಳಿದಿರುವ ಟ್ಯಾನಿನ್‌ಗಳನ್ನು ಹಾಲು ತಟಸ್ಥೀಕರಿಸುತ್ತದೆ ಮತ್ತು ಆಮ್ಲೀಯತೆಯನ್ನು ತಗ್ಗಿಸುತ್ತದೆ ಎಂಬುದೊಂದು ಅಭಿಪ್ರಾಯವೂ ಚಾಲ್ತಿಯಲ್ಲಿದೆ.[೫೫][೫೬] ಚೀನಿಯರು ಚಹಾದೊಂದಿಗೆ ಹಾಲನ್ನು ಸಾಮಾನ್ಯವಾಗಿ ಬೆರೆಸುವುದಿಲ್ಲ (ಅಥವಾ ಹಾಲನ್ನು ಬಳಸುವುದೇ ಇಲ್ಲ), ಆದರೆ ಮಂಚೂರಿಯಾದ ಜನರು ಬಳಸುತ್ತಾರೆ, ಮತ್ತು ಮಂಚು ರಾಜವಂಶದ ಗಣ್ಯರು ಈ ಅಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹಾಂಗ್‌ ಕಾಂಗ್‌-ಶೈಲಿಯ ಹಾಲು ಚಹಾವು ಬ್ರಿಟಿಷ್‌ ವಸಾಹತು ಶೈಲಿಯ ಅಭ್ಯಾಸಗಳನ್ನು ಆಧರಿಸಿದೆ.

ಒಂದು ಬಟ್ಟಲು ಚಹಾವನ್ನು ತಯಾರಿಸುವಾಗ ಅನುಸರಿಸಬೇಕಾದ ಹಂತಗಳ ಅನುಕ್ರಮಗಳೇನು ಎಂಬುದು ಹೆಚ್ಚಿನ ಚರ್ಚೆಗೊಳಗಾದ ವಿಷಯವಾಗಿದೆ. UHT ಹಾಲಿನ ರುಚಿಯಲ್ಲಿ ಕಂಡುಬರುವ ಬದಲಾವಣೆಯ ರೀತಿಯಲ್ಲಿಯೇ, ತಾಜಾ ಆಗಿ ತಯಾರಿಸಿದ ಚಹಾದ ಅತಿ ಉಷ್ಣತೆಯು ತಾಜಾ ಹಾಲಿನಲ್ಲಿ ಕಂಡುಬರುವ ಪ್ರೋಟೀನುಗಳ ಮೂಲಗುಣವನ್ನು ಕಳೆದು ಪಾನೀಯದ ರುಚಿಯು ಕೆಳಮಟ್ಟಕ್ಕೆ ಇಳಿಯುವುದಕ್ಕೆ ಕಾರಣವಾಗುವುದರಿಂದ, ಚಹಾಕ್ಕೆ ಮುಂಚೆಯೇ ಹಾಲನ್ನು ಬೆರೆಸುವುದು ಸೂಕ್ತ ಎಂದು ಕೆಲವೊಬ್ಬರು ಅಭಿಪ್ರಾಯಪಡುತ್ತಾರೆ.[೫೭] ಬಹುತೇಕ ಚಹಾಗಳನ್ನು ಕುದಿಯುವಿಕೆಯ ಸನಿಹದವರೆಗೂ ಎಷ್ಟು ಸಾಧ್ಯವೋ ಅಷ್ಟು ಕಾಯಿಸಬೇಕಾಗಿ ಬರುವುದರಿಂದ, ಚಹಾವನ್ನು ಕುದಿಸಿದ ನಂತರವೇ ಅದಕ್ಕೆ ಹಾಲನ್ನು ಬೆರೆಸುವುದು ಸೂಕ್ತ ಎಂದು ಇತರರು ಸಮರ್ಥಿಸುತ್ತಾರೆ. ನಿರ್ಣಾಯಕವೆನ್ನಬಹುದಾದ ಚಹಾದ ಕುದಿಯುವಿಕೆಯ ಹಂತದಲ್ಲಿ ಹಾಲನ್ನು ಬೆರೆಸುವುದರಿಂದ ಅದು ಪಾನೀಯವನ್ನು ತಣ್ಣಗಾಗಿಸುತ್ತದೆ; ಇದರರ್ಥ, ಒಂದು ಉತ್ತಮ ಚಹಾದ ಉತ್ಕೃಷ್ಟ ಪರಿಮಳವನ್ನು ಸಂಪೂರ್ಣವಾಗಿ ಆಸ್ವಾದಿಸಲು ಆಗುವುದಿಲ್ಲ. ಹಾಲನ್ನು ನಂತರದಲ್ಲಿ ಬೆರೆಸುವುದರಿಂದ, ಚಹಾದಲ್ಲಿ ಸಕ್ಕರೆಯನ್ನು ಕರಗಿಸುವುದು ಸುಲಭವಾಗುತ್ತದೆ ಮತ್ತು ಚಹಾದ ಬಣ್ಣವನ್ನು ವೀಕ್ಷಿಸಲು ಸಾಧ್ಯವಾಗುವುದರಿಂದಾಗಿ, ಅಗತ್ಯವಿದ್ದಷ್ಟು ಹಾಲನ್ನು ಮಾತ್ರವೇ ಬೆರೆಸುವುದನ್ನು ಖಾತ್ರಿಪಡಿಸಿಕೊಂಡಂತಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಯುರೋಪಿಯನ್‌ ಹಾರ್ಟ್‌ ಜರ್ನಲ್‌‌ ನಲ್ಲಿ ಪ್ರಕಟಿಸಲ್ಪಟ್ಟ 2007ರ ಅಧ್ಯಯನವೊಂದು ಕಂಡುಕೊಂಡ ಪ್ರಕಾರ, ಹಾಲನ್ನು ಬೆರೆಸುವುದರ ಮೂಲಕ ಚಹಾದ ಕೆಲವೊಂದು ನಿರ್ದಿಷ್ಟ ಪ್ರಯೋಜನಕಾರಿ ಪ್ರಭಾವಗಳು ಕಳೆದುಹೋಗಬಹುದು.[೫೮]

ಇತರ ಸಂಯೋಜನೀಯ ಪದಾರ್ಥಗಳು

[ಬದಲಾಯಿಸಿ]

ಸುವಾಸನೆ ಮತ್ತು ರುಚಿಯನ್ನು ಕೊಡುವ ಅನೇಕ ರುಚಿಕಾರಕಗಳನ್ನು ಚಹಾದ ಪ್ರಭೇದಗಳಿಗೆ ಅವುಗಳ ಸಂಸ್ಕರಣೆಯ ಅವಧಿಯಲ್ಲಿ ಸೇರಿಸಲಾಗುತ್ತದೆ. ಅವುಗಳ ಪೈಕಿ ಸುಪರಿಚಿತವಾಗಿರುವ ಪ್ರಭೇದಗಳೆಂದರೆ, ಮಲ್ಲಿಗೆ ತೈಲ ಅಥವಾ ಹೂವುಗಳೊಂದಿಗಿನ ಚೀನಾದ ಮಲ್ಲಿಗೆ ಚಹಾ, ಭಾರತದ ಮಸಾಲಾ ಚಾಯ್‌ನಲ್ಲಿನ ಮಸಾಲೆಗಳು ಹಾಗೂ ಬರ್ಗಮಾಟ್‌‌ನ ತೈಲವನ್ನು ಒಳಗೊಂಡಿರುವ ಅರ್ಲ್‌ ಬೂದು ಚಹಾ. ಈ ಸಾಂಪ್ರದಾಯಿಕ ವರ್ಗಗಳಿಗೆ ಆಧುನಿಕ ಪರಿಮಳಗಳ ಒಂದು ಶ್ರೇಣಿಯನ್ನು ಸೇರಿಸಲಾಗಿದೆ.ಪೂರ್ವ ಭಾರತದ ಜನರು ನಿಂಬೆ ಚಹಾ ಅಥವಾ ನಿಂಬೆ ಮಸಾಲಾ ಚಹಾವನ್ನೂ ಕುಡಿಯುತ್ತಾರೆ. ನಿಂಬೆ ರಸ ಮತ್ತು ಸಕ್ಕರೆಯೊಂದಿಗಿನ ಬಿಸಿ ಚಹಾವೇ ನಿಂಬೆ ಚಹಾ ಎನಿಸಿಕೊಳ್ಳುತ್ತದೆ. ಮಸಾಲಾ ನಿಂಬೆ ಚಹಾವು ಹುರಿದ ಜೀರಿಗೆ ಬೀಜದ ಪುಡಿ, ನಿಂಬೆ ರಸ, ಕಪ್ಪು ಕಲ್ಲುಪ್ಪು ಮತ್ತು ಸಕ್ಕರೆಯೊಂದಿಗಿನ ಬಿಸಿ ಚಹಾ ಆಗಿದ್ದು, ಈ ಎಲ್ಲಾ ಘಟಕಗಳೂ ಚಹಾಕ್ಕೆ ಒಂದು ರೀತಿಯ ಕಟುವಾಸನೆಯ, ತೀಕ್ಷ್ಣವಾದ ರುಚಿಯನ್ನು ನೀಡುತ್ತವೆ.

ಚಹಾ-ಕಷಾಯವನ್ನು ಬಟ್ಟಿ ಇಳಿಸುವವರು ಅಥವಾ ಚಹಾ-ಸೇವಿಸುವವರು ಚಹಾಕ್ಕೆ ಸೇರಿಸಬಹುದಾದ ಇತರ ಜನಪ್ರಿಯ ಸಂಯೋಜನೀಯ ಪದಾರ್ಥಗಳಲ್ಲಿ ಇವು ಸೇರಿವೆ: ಸಕ್ಕರೆ, ದ್ರವರೂಪದ ಜೇನುತುಪ್ಪ ಅಥವಾ ಒಂದು ಘನರೂಪದ ಜೇನುತುಪ್ಪದ ಹನಿ, ನಿಂಬೆ (ರಷ್ಯಾ ಮತ್ತು ಇಟಲಿಯಲ್ಲಿ ಇದು ಪರಂಪರೆಯಿಂದ ಬಂದುದಾಗಿದೆ), ಹಣ್ಣಿನ ಮುರಬ್ಬಗಳು, ಮತ್ತು ಪುದೀನ. ಚೀನಾದಲ್ಲಿ ಚಹಾವನ್ನು ಸಿಹಿಗೊಳಿಸುವ ಪ್ರಕ್ರಿಯೆಯನ್ನು ಸಾಂಪ್ರದಾಯಿಕವಾಗಿ ಒಂದು ಸ್ತ್ರೀಸಹಜ ಪರಿಪಾಠವಾಗಿ ಪರಿಗಣಿಸಲಾಗಿತ್ತು. ಮಂಗೋಲಿಯಾ,ಟಿಬೆಟ್‌ ಮತ್ತು ನೇಪಾಳದಂಥ ಶೀತ ವಲಯಗಳಲ್ಲಿ, ಅಗತ್ಯವಿರುವ ಕ್ಯಾಲೊರಿಗಳನ್ನು ಒದಗಿಸಲು ಚಹಾಕ್ಕೆ ಬೆಣ್ಣೆಯನ್ನು ಸೇರಿಸಲಾಗುತ್ತದೆ. ಟಿಬೆಟನ್‌ ಬೆಣ್ಣೆ ಚಹಾವು ಕಲ್ಲುಪ್ಪು ಡ್ರೇ (ಚಮರೀಮೃಗ) ಬೆಣ್ಣೆಯನ್ನು ಒಳಗೊಂಡಿರುತ್ತದೆ. ಬೆಣ್ಣೆ ಮಂಥಕ ಯಂತ್ರವೊಂದನ್ನು ಹೋಲುವ ಕೊಳವೆಯಾಕಾರದ ಪಾತ್ರೆಯೊಂದರಲ್ಲಿ ನಂತರ ಇವನ್ನು ರಭಸದಿಂದ ಮಥಿಸಲಾಗುತ್ತದೆ. ಉಪ್ಪಿನ ಚಹಾಕ್ಕೆ ಸಂಬಂಧಿಸಿದಂತೆಯೂ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ. ಉತ್ತರ ಪಾಕಿಸ್ತಾನಹಿಂದೂ ಕುಶ್‌ ವಲಯದಲ್ಲಿನ ಕೆಲವೊಂದು ಸಂಸ್ಕೃತಿಗಳಲ್ಲಿ ಈ ಚಹಾವನ್ನು ಸೇವಿಸಲಾಗುತ್ತದೆ.

ವ್ಹಿಸ್ಕಿ ಅಥವಾ ಬ್ರಾಂದಿಯಂಥ ಮದ್ಯಸಾರ ಪದಾರ್ಥಗಳನ್ನೂ ಸಹ ಚಹಾಕ್ಕೆ ಬೆರೆಸಬಹುದು.

ಚಹಾವನ್ನು ಬಗೆಬಗೆಯ ಎತ್ತರಗಳಿಂದ ಸುರಿಯುವ ಮೂಲಕವೂ ಚಹಾದ ಪರಿಮಳವನ್ನು ಮಾರ್ಪಡಿಸಬಹುದು. ಇದರಿಂದ ವೈವಿಧ್ಯಮಯ ಮಟ್ಟಗಳಲ್ಲಿನ ಉತ್ಕರ್ಷಣವು ಕಂಡುಬರುತ್ತದೆ. ತುಂಬ ಎತ್ತರದಿಂದ ಚಹಾವನ್ನು ಸುರಿಯುವ ನೈಪುಣ್ಯವನ್ನು ಉತ್ತರದ ಆಫ್ರಿಕಾದ ಜನರು ಮಾತ್ರವೇ ಅಲ್ಲದೇ (ಉದಾಹರಣೆಗೆ ಮೊರೊಕೊ), ಪಶ್ಚಿಮ ಆಫ್ರಿಕಾದಲ್ಲಿನ (ಉದಾಹರಣೆಗೆ ಗಿನಿಯಾ, ಮಾಲಿ, ಸೆನೆಗಲ್‌) ಜನರೂ ರೂಢಿಸಿಕೊಂಡಿದ್ದಾರೆ. ಈ ಪರಿಪಾಠವು ಚಹಾದ ಪರಿಮಳವನ್ನು ಧನಾತ್ಮಕವಾಗಿ ಮಾರ್ಪಡಿಸಬಲ್ಲುದಾಗಿದ್ದರೂ, ತಕ್ಷಣಕ್ಕೆ ಸೇವಿಸಬೇಕೆಂದು ಉದ್ದೇಶಿಸಲಾದ ಪಾನೀಯವು ಈ ಕೌಶಲದಿಂದಾಗಿ ತಂಪಾಗುವ ಸಾಧ್ಯತೆ ಹೆಚ್ಚು. ಕೆಲವೊಂದು ಸಂಸ್ಕೃತಿಗಳಲ್ಲಿ, ಚಹಾವನ್ನು ಸುರಿಯಲಾಗುವ ಎತ್ತರವನ್ನು ಅವಲಂಬಿಸಿ ಅದಕ್ಕೆ ಬೇರೆ ಬೇರೆ ಹೆಸರುಗಳನ್ನು ನೀಡಲಾಗಿದೆ. ಮಾಲಿಯಲ್ಲಿ, ಸಣ್ಣ ಕಣಗಳ ಚಹಾವನ್ನು ಮೂರರ ಶ್ರೇಣಿಯಲ್ಲಿ ವಿತರಿಸಲಾಗುತ್ತದೆ. ಅಂದರೆ ಅತ್ಯುನ್ನತ ಉತ್ಕರ್ಷಣದ ಅಥವಾ ಕಡುವಾದ ಸಿಹೀಕರಿಸದ ಚಹಾದೊಂದಿಗೆ (ತಾಜಾ ಎಲೆಗಳಿಂದ ಬೇಯಿಸಲಾದದ್ದು) ಇದು ಪ್ರಾರಂಭವಾಗುತ್ತದೆ. ಸ್ಥಳೀಯವಾಗಿ ಈ ಚಹಾಕ್ಕೆ "ಸಾವಿನಷ್ಟು ಕಹಿ"ಯಾಗಿರುವಂಥದ್ದು ಎಂದು ಉಲ್ಲೇಖಿಸಲಾಗುತ್ತದೆ. ಇದಾದ ನಂತರ ಎರಡನೇ ಶ್ರೇಣಿಯ ವಿತರಣೆ ಬರುತ್ತದೆ. ಇದರಲ್ಲಿ ಅದೇ ಚಹಾ ಎಲೆಗಳಿಗೆ ಒಂದಷ್ಟು ಸಕ್ಕರೆಯನ್ನು ಬೆರೆಸಿ ("ಜೀವನದಷ್ಟೇ ಆಹ್ಲಾದಕರವಾಗಿರುವಂಥದು") ಮತ್ತೆ ಕುದಿಸಲಾಗುತ್ತದೆ. ಮೂರನೆಯ ಶ್ರೇಣಿಯಲ್ಲಿ ಅದೇ ಚಹಾ ಎಲೆಗಳಿಗೆ ಮತ್ತಷ್ಟು ಸಕ್ಕರೆಯನ್ನು ಬೆರೆಸುವುದರ ಮೂಲಕ ("ಪ್ರೀತಿಯಷ್ಟೇ ಸಿಹಿಯಾಗಿರುವಂಥದು") ಮೂರನೇ ಬಾರಿಗೆ ಕುದಿಸಲಾಗುತ್ತದೆ. ಹಸಿರು ಚಹಾವು ಮಾಲಿ ದೇಶದ ಜನರ "ಗ್ರಿನ್‌" ಎಂಬ ಒಂದು ಸ್ಪಷ್ಟ ಸಂಪ್ರದಾಯದ ಪ್ರಮುಖ ಅಂಶವಾಗಿದ್ದು, ಈ ಸಂಪ್ರದಾಯವು ಸಾಮಾಜಿಕ ಮತ್ತು ಆರ್ಥಿಕ ಸೀಮಾರೇಖೆಗಳನ್ನು ದಾಟಿಹೋಗುವ ಒಂದು ಅನೌಪಚಾರಿಕ ಸಾಮಾಜಿಕ ಕೂಟವಾಗಿದೆ. ಕುಟುಂಬದ ಆವರಣದ ಬಾಗಿಲುಗಳ ಮುಂದೆ ಅಪರಾಹ್ನದಲ್ಲಿ ಪ್ರಾರಂಭವಾಗಿ ತಡರಾತ್ರಿಯವರೆಗೆ ವಿಸ್ತರಿಸುವ ಈ ಕೂಟವು ಬಾಮ್ಕೋ ಹಾಗೂ ಬೃಹತ್ ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ.

ಆಗ್ನೇಯ ಏಷ್ಯಾದಲ್ಲಿ, ನಿರ್ದಿಷ್ಟವಾಗಿ ಹೇಳುವುದಾದರೆ ಮಲೇಷಿಯಾದಲ್ಲಿ, ಚಹಾವನ್ನು ಎತ್ತರದಿಂದ ಸುರಿಯುವ ಪರಿಪಾಠವು ಮತ್ತಷ್ಟು ಪರಿಷ್ಕರಿಸಲ್ಪಟ್ಟಿದೆ. ಕಪ್ಪು ಚಹಾಕ್ಕೆ ಮಂದಗೊಳಿಸಿದ ಹಾಲನ್ನು ಬೆರೆಸಿ, ಒಂದು ನಿರ್ದಿಷ್ಟ ಎತ್ತರದಿಂದ ಒಂದು ಬಟ್ಟಲಿನಿಂದ ಮತ್ತೊಂದು ಬಟ್ಟಲಿಗೆ ಪರ್ಯಾಯ ಶೈಲಿಯಲ್ಲಿ ಮತ್ತು ಕ್ಷಿಪ್ರ ಅನುಕ್ರಮದಲ್ಲಿ ಹಲವಾರು ಬಾರಿ ಸುರಿಯುವುದು ಈ ಪರಿಪಾಠದಲ್ಲಿ ಸೇರಿದೆ. ಹೀಗೆ ಮಾಡುವುದರಿಂದ ಸೃಷ್ಟಿಯಾಗುವ ಚಹಾವು ಬಟ್ಟಲಿನ ಮೇಲ್ಭಾಗದಲ್ಲಿ ಗಾಳಿಯ ಗುಳ್ಳೆಗಳನ್ನು ಉಂಟುಮಾಡಿ, ಅದು ಬಟ್ಟಲಿನಲ್ಲಿನ ಒಂದು ನೊರೆಯುಕ್ತ "ಶಿರ"ದಂತೆ ಕಂಗೊಳಿಸುತ್ತದೆ. ತೆಹ್‌ ತರಿಕ್‌ ಎಂದು ಕರೆಯಲಾಗುವ ಈ ಪಾನಿಯವು ಅಕ್ಷರಶಃ "ಎಳೆಯಲ್ಪಟ್ಟ ಚಹಾ" ಆಗಿದ್ದು, ಸಾಧಾರಣವಾದ ಹಾಲಿನ ಚಹಾಕ್ಕಿಂತ ಹೆಚ್ಚು ಕೆನೆಯಂಥ ರುಚಿಯನ್ನು ಹೊಂದಿರುತ್ತದೆ ಹಾಗೂ ಆ ವಲಯದಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ. ಮಲೇಷಿಯಾದಲ್ಲಿನ ಚಹಾ ಸುರಿಯುವ ಪ್ರಕ್ರಿಯೆಯು ಒಂದು ಕಲಾಪ್ರಕಾರವಾಗಿ ಮತ್ತಷ್ಟು ಸುಧಾರಿಸಲ್ಪಟ್ಟಿದೆ. ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಚಹಾವನ್ನು ಸುರಿಯುವಾಗ ಜನರು ನೃತ್ಯ ಮಾಡುವುದನ್ನು ಇದು ಒಳಗೊಂಡಿದ್ದು, ಇದಕ್ಕೆ ಯಾವುದೇ ಸಂದರ್ಭದಲ್ಲಿ ಕುಶಲತೆ ಹಾಗೂ ಕರಾರುವಾಕ್ಕಾಗಿರುವಿಕೆ ಅಗತ್ಯವಾಗಿರುತ್ತದೆ. ಚಹಾ ತುಂಬಿರುವ ಒಂದು ಪಾತ್ರೆ ಸೇರಿದಂತೆ ತಲಾ ಎರಡು ಪಾತ್ರೆಗಳನ್ನು ಹಿಡಿದುಕೊಂಡಿರುವ ಪ್ರತಿಯೊಬ್ಬ ಸಹಭಾಗಿಗಳೂ, ಅದನ್ನು ಒಂದರಿಂದ ಮತ್ತೊಂದಕ್ಕೆ ಸುರಿಯುತ್ತಾರೆ. ಸಾಲುಗಳಲ್ಲಿ ಮತ್ತು ಚೌಕಾಕಾರದಲ್ಲಿ ನಿಲ್ಲುವ ಅವರು, ಮತ್ತೊಬ್ಬರ ಚಹಾ ಕುಡಿಕೆಗಳೊಳಗೆ ಚಹಾವನ್ನು ಸುರಿಯುತ್ತಾರೆ. ಎರಡೂ ಕುಡಿಕೆಗಳಲ್ಲಿ ಚಹಾವನ್ನು ತುಂಬಿಸಿಕೊಂಡಿದ್ದು ಅದನ್ನು ಖಾಲಿ ಮಾಡಬೇಕಿರುವ ಮತ್ತು ಯಾವುದೇ ಒಂದು ಘಟ್ಟದಲ್ಲಿ ಯಾರಾದರೂ ಚಹಾವನ್ನು ಹೊಂದಿಲ್ಲದಿದ್ದರೆ ಅದನ್ನು ಮರುಭರ್ತಿ ಮಾಡುವವನಿಗೆ ಅವಕಾಶ ಮಾಡಿಕೊಡಲು ನೃತ್ಯ ಸಂಯೋಜನೆಯನ್ನು ಮಾಡುವುದು ಈ ಸಂದರ್ಭದಲ್ಲಿ ಅಗತ್ಯವಾಗಿರುತ್ತದೆ.

ಚಹಾದ ಆರ್ಥಿಕತೆ

[ಬದಲಾಯಿಸಿ]

ಸೇವನೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಚಹಾವು ಪ್ರಪಂಚದಲ್ಲಿನ ಅತ್ಯಂತ ಜನಪ್ರಿಯ ಪಾನೀಯವಾಗಿದೆ. ಕಾಫಿ, ಚಾಕೊಲೇಟ್‌, ಸೌಮ್ಯ ಪಾನೀಯಗಳು, ಮತ್ತು ಮದ್ಯಸಾರದಂಥ ಪ್ರಪಂಚದ ಇತರ ಎಲ್ಲಾ ತಯಾರಾದ ಪಾನೀಯಗಳ ಸೇವನೆಯ ಪ್ರಮಾಣವನ್ನು ಒಟ್ಟುಗೂಡಿಸಿದರೆ ಬರುವ ಮೊತ್ತಕ್ಕೆ ಚಹಾದ ಸೇವನಾ ಪ್ರಮಾಣವು ಸಮನಾಗುತ್ತದೆ.[] ಪೂರ್ವ ಏಷ್ಯಾದ ಹೊರಗಡೆ ಬಳಕೆಯಾಗುವ ಚಹಾದ ಬಹುಭಾಗವು ಭಾರತ ಅಥವಾ ಶ್ರೀಲಂಕಾದಲ್ಲಿರುವ ಬೃಹತ್‌ ನೆಡುತೋಪುಗಳಲ್ಲಿ ಉತ್ಪಾದನೆಯಾಗುತ್ತದೆ, ಮತ್ತು ಬೃಹತ್ ವ್ಯಾಪಾರೋದ್ಯಮಗಳಿಗೆ ಮಾರಾಟಮಾಡುವ ಉದ್ದೇಶದಿಂದ ಇದನ್ನು ಅಲ್ಲಿ ಬೆಳೆಯಲಾಗುತ್ತದೆ. ಬೃಹತ್-ಪ್ರಮಾಣದ ಈ ಔದ್ಯಮಿಕ ಉತ್ಪಾದನೆಗೆ ಪ್ರತಿಯಾಗಿ ಕೆಲವೊಂದು ಚಿಕ್ಕ "ತೋಟಗಳೂ" ಸಹ ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಕೆಲವು ಪುಟ್ಟಗಾತ್ರದ ನೆಡುತೋಪುಗಳಾಗಿದ್ದು, ರುಚಿಯನ್ನು ಆಸ್ವಾದಿಸುವವರ ಮೆಚ್ಚುಗೆಯನ್ನು ಪಡೆಯುವಂಥ ಉನ್ನತ ಗುಣಮಟ್ಟದ ಚಹಾವನ್ನು ಅವು ಉತ್ಪಾದಿಸುತ್ತವೆ. ಈ ಚಹಾಗಳು ಅಪರೂಪದ್ದಷ್ಟೇ ಅಲ್ಲ, ದುಬಾರಿಯಾದವು ಕೂಡಾ. ಹೋಲಿಕೆಯ ದೃಷ್ಟಿಯಲ್ಲಿ ಹೇಳುವುದಾದರೆ ಕೆಲವೊಂದು ದುಬಾರಿ ಮದ್ಯ ಪಾನೀಯಗಳಿಗೆ ಅವು ಸಮನಾಗಿ ನಿಲ್ಲುತ್ತವೆ.

ಭಾರತದಲ್ಲಿನ ತಲಾ ಚಹಾ ಸೇವನಾ ಪ್ರಮಾಣವು ವಾರ್ಷಿಕವಾಗಿ ಸಾಧಾರಣ ಮಟ್ಟದ್ದು ಎನ್ನಬಹುದಾದ ಪ್ರತಿ ವ್ಯಕ್ತಿಗೆ 750 ಗ್ರಾಂಗಳಷ್ಟಿದ್ದರೂ ಸಹ, ಭಾರತವು ವಿಶ್ವದ ಅತ್ಯಂತ ದೊಡ್ಡ ಚಹಾ-ಸೇವನಾ ರಾಷ್ಟ್ರವಾಗಿದೆ[೪೫]. ಪ್ರತಿ ವ್ಯಕ್ತಿಗೆ ಪ್ರತಿ ವರ್ಷಕ್ಕೆ 2.5 ಕಿಗ್ರಾಂಗಳಷ್ಟು ಚಹಾ ಬಳಕೆಯಾಗುವ ಮೂಲಕ ಐರ್ಲೆಂಡ್‌ ವಿಶ್ವದ ಅತಿದೊಡ್ಡ ತಲಾವ್ಯಕ್ತಿಯ ಬಳಕೆಯ ದೇಶವೆನಿಸಿದೆ.

ಅಂಕಿ-ಅಂಶಗಳು

[ಬದಲಾಯಿಸಿ]

ಉತ್ಪಾದನೆ

[ಬದಲಾಯಿಸಿ]

2003ರಲ್ಲಿ, ವಿಶ್ವದ ಚಹಾ ಉತ್ಪಾದನೆಯು ವಾರ್ಷಿಕ ...೩.೧೫ ದಶಲಕ್ಷ ಟನ್ನುಗಳಷ್ಟಿತ್ತು. ಈ ಅವಧಿಯಲ್ಲಿ ಭಾರತವು ಅತ್ಯಂತ ದೊಡ್ಡ ಉತ್ಪಾದಕನಾಗಿದ್ದು, ನಂತರದ ಸ್ಥಾನವನ್ನು ಚೀನಾ ಅಲಂಕರಿಸಿದ್ದರೆ, ಕೀನ್ಯಾ ಮತ್ತು ಶ್ರೀಲಂಕಾ ದೇಶಗಳು ಅದರ ನಂತರದ ಸ್ಥಾನವಾಗಿತ್ತು.

2017ರಲ್ಲಿನ ಒಟ್ಟು ಚಹಾ ಉತ್ಪಾದನೆಯ ಶೇಕಡಾವಾರು ಪ್ರಮಾಣ [186] [187] [188] [189]
ದೇಶದ ಆಧಾರದ ಮೇಲೆ 2007ರಲ್ಲಿ ಉತ್ಪಾದನೆಯಾದ ಒಟ್ಟು ಜಾಗತಿಕ ಚಹಾದ ಶೇಕಡಾವಾರು ಪ್ರಮಾಣ
colspan="4" align="center" bgcolor=#DDFFDD ಟನ್ನುಗಳಲ್ಲಿ ಉತ್ಪಾದನೆ 2006 - 2007ರ ವರ್ಷದ ಅವಧಿಯ ಅಂಕಿ-ಅಂಶಗಳು
de FAOSTAT (FAO) FAO ದತ್ತಾಂಶ ಸಂಗ್ರಹದಿಂದ ಪಡೆದ ಮಾಹಿತಿ; 2009ರ ಸೆಪ್ಟೆಂಬರ್‌ 17ರಂದು ಇದನ್ನು ಸಂಪರ್ಕಿಸಲಾಯಿತು Archived 2011-11-15 ವೇಬ್ಯಾಕ್ ಮೆಷಿನ್ ನಲ್ಲಿ.
ದೇಶ 2006 2007
 ಭಾರತ ೧೦,೪೭,೩೪೫ ೧೧,೮೩,೫೦೨
 ಚೀನಾ ೯,೨೮,೦೦೦ ೯,೪೯,೨೨೦
 ಕೀನ್ಯಾ ೩,೧೦,೫೮೦ ೩,೬೯,೬೦೦
 ಶ್ರೀಲಂಕಾ ೩,೧೦,೮೦೦ ೩,೦೫,೨೨೦
 ಟರ್ಕಿ ೨,೦೧,೮೬೬ ೨,೦೬,೧೬೦
 ವಿಯೆಟ್ನಾಮ್ ೧,೫೧,೦೦೦ ೧,೬೪,೦೦೦
 ಇಂಡೋನೇಷ್ಯಾ ೧,೪೬,೮೫೮ ೧,೫೦,೨೨೪
 ಜಪಾನ್ ೯೧,೮೦೦ ೯೪,೧೦೦
 ಅರ್ಜೆಂಟೀನ ೭೨,೧೨೯ ೭೨,೦೦೦
 ಇರಾನ್ ೫೯,೧೮೦ ೬೦,೦೦೦
 ಬಾಂಗ್ಲಾದೇಶ ೫೮,೦೦೦ ೫೮,೫೦೦
 ಮಲಾವಿ ೪೫,೦೦೯ ೪೬,೦೦೦
 ಉಗಾಂಡ ೩೪,೩೩೪ ೩೫,೦೦೦
ಇತರ ದೇಶಗಳು ೧,೮೯,೫೫೧ ೧,೯೩,೭೮೨
ಒಟ್ಟು ೩೬,೪೬,೪೫೨ ೩೮,೮೭,೩೦೮

ಚಹಾ ಉತ್ಪಾದನೆಯ ಪ್ರಮಾಣೀಕರಣ

[ಬದಲಾಯಿಸಿ]

ಚಹಾದ ಉತ್ಪಾದನೆಯನ್ನು ಸ್ವತಂತ್ರವಾಗಿ ಪ್ರಮಾಣೀಕರಿಸುವ ಅನೇಕ ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಪ್ರಮಾಣೀಕೃತ ಎಸ್ಟೇಟುಗಳಿಂದ ಪಡೆಯಲಾದ ಚಹಾವನ್ನು, ಅದರ ಪೊಟ್ಟಣದ ಮೇಲೆ ಒಂದು ಪ್ರಮಾಣೀಕರಣದ ಹಣೆಪಟ್ಟಿಯನ್ನು ಲಗತ್ತಿಸುವುದರ ಮೂಲಕ ಮಾರಬಹುದಾಗಿದೆ. ರೇನ್‌ಫಾರೆಸ್ಟ್‌ ಅಲೈಯನ್ಸ್‌, ಫೇರ್‌ಟ್ರೇಡ್‌, UTZ ಸರ್ಟಿಫೈಡ್‌, ಮತ್ತು ಆರ್ಗ್ಯಾನಿಕ್‌ ಇವೇ ಮೊದಲಾದವು ಅತ್ಯಂತ ಪ್ರಮುಖವಾದ ಪ್ರಮಾಣೀಕರಣದ ಯೋಜನೆಗಳಾಗಿವೆ. ಈ ಎಲ್ಲಾ ಯೋಜನೆಗಳು ಇತರ ಬೆಳೆಗಳನ್ನೂ (ಕಾಫಿ, ಕೋಕೋ ಮತ್ತು ಹಣ್ಣು ಇವೇ ಮೊದಲಾದವನ್ನು) ಸಹ ಪ್ರಮಾಣೀಕರಿಸುತ್ತವೆ. ರೇನ್‌ಫಾರೆಸ್ಟ್‌ ಅಲೈಯನ್ಸ್‌ನಿಂದ ಪ್ರಮಾಣಿತಗೊಂಡ ಚಹಾವು ಯೂನಿಲಿವರ್‌ ಬ್ರಾಂಡ್‌ಗಳಾದ ಲಿಪ್ಟನ್‌ ಮತ್ತು PG ಟಿಪ್ಸ್‌‌ನಿಂದ ಪಶ್ಚಿಮ ಯುರೋಪ್‌, ಆಸ್ಟ್ರೇಲಿಯಾ ಮತ್ತು USನಲ್ಲಿ ಮಾರಲ್ಪಡುತ್ತದೆ. ಫೇರ್‌ಟ್ರೇಡ್‌ ಪ್ರಮಾಣಿತ ಚಹಾವು ವಿಶ್ವಾದ್ಯಂತವಿರುವ ಬೃಹತ್‌ ಸಂಖ್ಯೆಯ ಸರಬರಾಜುದಾರರಿಂದ ಮಾರಲ್ಪಡುತ್ತದೆ. UTZ ಸರ್ಟಿಫೈಡ್‌ ಸಂಸ್ಥೆಯು 2008ರಲ್ಲಿ ಸಾರಾ ಲೀ ಕಂಪನಿಯ ಬ್ರಾಂಡ್‌ ಆಗಿರುವ ಪಿಕ್‌ವಿಕ್‌ ಚಹಾದೊಂದಿಗೆ ಒಂದು ಪಾಲುದಾರಿಕೆಯನ್ನು ಪ್ರಕಟಿಸಿತು.

ಜೈವಿಕ ಚಹಾದ ಉತ್ಪಾದನೆಯು ಹೆಚ್ಚುತ್ತಲೇ ಇದ್ದು, ....೩,೫೦೦ ಟನ್ನುಗಳಷ್ಟು ಜೈವಿಕ ಚಹಾವು 2003ರಲ್ಲಿ ಉತ್ಪಾದನೆಯಾಗಿದೆ. ಈ ಚಹಾದ ಪೈಕಿ ಬಹುಪಾಲು (ಸುಮಾರು 75%) ಫ್ರಾನ್ಸ್‌, ಜರ್ಮನಿ, ಜಪಾನ್‌, ಯುನೈಟೆಡ್‌ ಕಿಂಗ್‌ಡಂಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಮಾರಾಟವಾಗುತ್ತದೆ.

ವ್ಯಾಪಾರ

[ಬದಲಾಯಿಸಿ]
ERROR: {{Expand}} is a disambiguation entry; please do not transclude it. Instead, use a more specific template, such as {{Incomplete}}, {{Expand list}}, {{Missing}}, or {{Expand section}}.
1989ರಿಂದೀಚೆಗೆ ಚಹಾದ ಸರಾಸರಿ ಬೆಲೆಯ ವಿಕಸನ

ರಫ್ತು

[ಬದಲಾಯಿಸಿ]

ಕೀನ್ಯಾ ದೇಶವು ಕಪ್ಪು ಚಹಾದ ಅತಿದೊಡ್ಡ ರಫ್ತುದಾರನಾಗಿದೆ.[೫೯]

ಪ್ರಧಾನ ಆಮದುದಾರರೆಂದರೆ, CIS, EU, ಪಾಕಿಸ್ತಾನ, ಅಮೆರಿಕಾ ಸಂಯುಕ್ತ ಸಂಸ್ಥಾನಗಳು, ಈಜಿಪ್ಟ್‌, ಮತ್ತು ಜಪಾನ್‌. 2003ರಲ್ಲಿ, 1.39 ದಶಲಕ್ಷ ಟನ್ನುಗಳಷ್ಟು ಚಹಾವನ್ನು ಆಮದು ಮಾಡಿಕೊಳ್ಳಲಾಗಿದ್ದು, 2002ಕ್ಕೆ ಹೋಲಿಸಿದಾಗ 1%ನಷ್ಟು ಹೆಚ್ಚಳವು ದಾಖಲಾಗಿದೆ. [ಸೂಕ್ತ ಉಲ್ಲೇಖನ ಬೇಕು]

ಬೆಲೆಗಳು

[ಬದಲಾಯಿಸಿ]

2003ರಲ್ಲಿ ಉತ್ಪಾದನೆಯಾದ ಬೃಹತ್‌ ಪ್ರಮಾಣಗಳು ಬೆಲೆಗಳ ಮೇಲೆ ಅಂಥಾ ಮಹಾನ್‌ ಪ್ರಭಾವವನ್ನೇನೂ ಬೀರಲಿಲ್ಲ. ಹೀಗಾಗಿ ಬೆಲೆಗಳು ಆ ವರ್ಷದಲ್ಲಿ ಸಾಕಷ್ಟು ಸ್ಥಿರವಾಗಿಯೇ ಇದ್ದವು.[ಸೂಕ್ತ ಉಲ್ಲೇಖನ ಬೇಕು]

2009ರ ಆಗಸ್ಟ್‌ನಲ್ಲಿ, ಚಹಾ ಬೆಲೆಯಲ್ಲಿ ಹೆಚ್ಚಳವಾಗುವುದರ ಕುರಿತು ದುಬೈ ಎಚ್ಚರಿಸಿತು.[೬೦]

ಪೊಟ್ಟಣದಲ್ಲಿ ಭರ್ತಿಮಾಡುವಿಕೆ

[ಬದಲಾಯಿಸಿ]

ಚಹಾ ಚೀಲಗಳು

[ಬದಲಾಯಿಸಿ]
ಚಹಾ ಚೀಲಗಳು

1907ರಲ್ಲಿ, ಅಮೆರಿಕಾದ ಚಹಾ ವ್ಯಾಪಾರಿಯಾದ ಥಾಮಸ್‌ ಸಲ್ಲಿವಾನ್‌ ಎಂಬಾತ ತನ್ನ ಚಹಾದ ನಮೂನೆಗಳನ್ನು ವಿತರಿಸಲು ಆರಂಭಿಸಿದ. ತುದಿಯಲ್ಲಿ ಎಳೆದಾರವನ್ನು ಹೊಂದಿರುವ, ಚೀನಾದ ರೇಷ್ಮೆಯಿಂದ ಮಾಡಲಾದ ಪುಟ್ಟ ಚೀಲಗಳಲ್ಲಿ ಈ ಚಹಾ ನಮೂನೆಗಳನ್ನು ಆತ ವಿತರಿಸಿದ. ಚಹಾವನ್ನು ಸದರಿ ಚೀಲದಲ್ಲಿ ಹಾಗೆಯೇ ಉಳಿಸಿ, ತಾಜಾ ಚಹಾದೊಂದಿಗೆ ಮರುಬಳಕೆ ಮಾಡಬಹುದು ಎಂಬುದನ್ನು ಬಳಕೆದಾರರು ಕಂಡುಕೊಂಡರು. ಆದಾಗ್ಯೂ, ಈ ವಿತರಣಾ/ಭರ್ತಿ ಮಾಡುವ ವಿಧಾನದ ಸಾಮರ್ಥ್ಯದ ಕುರಿತು ಕೆಲವೊಂದು ಕಾಲದವರೆಗೆ ಅರಿವು ಮೂಡಲಿಲ್ಲ. IIನೇ ಜಾಗತಿಕ ಸಮರದ ಅವಧಿಯಲ್ಲಿ ಚಹಾದ ವಿತರಣಾ ಪ್ರಮಾಣವನ್ನು ಮಿತಿಗೊಳಪಡಿಸಲಾಯಿತು. 1953ರಲ್ಲಿ (UKಯಲ್ಲಿನ ನಿಯಂತ್ರಣವು ಅಂತ್ಯಗೊಂಡ ನಂತರ), ಟೆಟ್ಲಿ ಚಹಾ ಚೀಲ ವನ್ನು UKಯಲ್ಲಿ ಬಿಡುಗಡೆಮಾಡಿತು ಮತ್ತು ಅದೊಂದು ಕ್ಷಿಪ್ರ ಯಶಸ್ಸಾಗಿ ದಾಖಲಿಸಲ್ಪಟ್ಟಿತು.

ಚಹಾ ಚೀಲ ಎಂದು ಕರೆಯಲಾಗುವ ಒಂದು ಪುಟ್ಟ ಲಕೋಟೆಯಂಥ ಕೋಶದಲ್ಲಿ (ಸಾಮಾನ್ಯವಾಗಿ ಇದು ಕಾಗದದಿಂದ ಮಾಡಲ್ಪಟ್ಟಿರುತ್ತದೆ) ಚಹಾ ಎಲೆಗಳನ್ನು ತುಂಬಿಸಲಾಗುತ್ತದೆ. ಚಹಾ ಚೀಲಗಳ ಬಳಕೆಯು ಸುಲಭ ಹಾಗೂ ಅನುಕೂಲಕರವಾಗಿದ್ದು, ಇಂದು ಅನೇಕ ಜನರ ಮಧ್ಯದಲ್ಲಿ ಚಹಾ ಚೀಲಗಳು ಜನಪ್ರಿಯವಾಗುವಲ್ಲಿ ಅನುವುಮಾಡಿಕೊಟ್ಟಿದೆ. ಆದಾಗ್ಯೂ, ಚಹಾ ಚೀಲಗಳಲ್ಲಿ ಬಳಸಲಾಗುವ ಚಹಾವು ತೂರುವಿಕೆಗಳು ಅಥವಾ "ಹುಡಿ" ಎಂದು ಕರೆಯಲಾಗುವ ಉದ್ಯಮನಾಮವನ್ನು ಹೊಂದಿದ್ದು, ಇದು ಉನ್ನತ ಗುಣಮಟ್ಟದ ಬಿಡಿ ಎಲೆ ಚಹಾವನ್ನು ವಿಂಗಡಿಸುವಾಗ ಉತ್ಪತ್ತಿಯಾಗುವ ಒಂದು ತ್ಯಾಜ್ಯ ಉತ್ಪನ್ನವಾಗಿದೆ.[ಸೂಕ್ತ ಉಲ್ಲೇಖನ ಬೇಕು] ಈ ವಿಧಾನದಿಂದಾಗಿ ಚಹಾದ ರುಚಿ ಹಾಗೂ ಅನುಭೂತಿ ಎರಡೂ ಕುಸಿಯುತ್ತವೆ ಎಂಬುದು ಚಹಾದ ಅಭಿಮಾನಿಗಳು ವ್ಯಕ್ತಪಡಿಸುವ ಒಂದು ಸಾಮಾನ್ಯ ಅಭಿಪ್ರಾಯ. ಈ ಪುಟ್ಟಚೀಲಕ್ಕಾಗಿ ಬಳಸಲಾದ ಕಾಗದವನ್ನೂ ಸಹ ಅನೇಕರು ರುಚಿನೋಡುವಂತಾಗಿ, ಚಹಾ ಪರಿಮಳವನ್ನು ತಗ್ಗಿಸಲು ಅದು ಕಾರಣವಾಗುವ ಸಾಧ್ಯತೆಯಿರುತ್ತದೆ. ಏಕೆಂದರೆ ತೂರುವಿಕೆಗಳು ಹಾಗೂ ಹುಡಿಯ ಸ್ವರೂಪವು ಮೊದಲನೆಯದಾಗಿ ಚಹಾದ ಕೆಳಗಿನ ಗುಣಮಟ್ಟವನ್ನು ಪ್ರತಿನಿಧಿಸುತ್ತವೆ. ಚಹಾ ಚೀಲಗಳಲ್ಲಿ ಕಂಡುಬರುವ ಚಹಾವು ಕುದಿಸುವ ಅವಧಿ ಹಾಗೂ ತಾಪಮಾನಕ್ಕೆ ಸಂಬಂಧಿಸಿದಂತೆ ಅಷ್ಟೊಂದು ನಾಜೂಕುತನವನ್ನು ತೋರಿಸುವುದಿಲ್ಲ.

ಪುಟ್ಟ ಚೀಲದಲ್ಲಿನ ಚಹಾದಲ್ಲಿನ ಪರಿಮಳದ ಗುಣಮಟ್ಟವು ಏಕೆ ಕಡಿಮೆಯಿರುತ್ತದೆ ಎಂಬುದನ್ನು ತಿಳಿಸುವ ಹೆಚ್ಚುವರಿ ಕಾರಣಗಳಲ್ಲಿ ಇವು ಸೇರಿವೆ:

  • ಶುಷ್ಕವಾಗಿಸಿದ ಚಹಾವು ಗಾಳಿಗೆ ಒಡ್ಡಲ್ಪಟ್ಟಾಗ ತನ್ನ ಪರಿಮಳವನ್ನು ಕ್ಷಿಪ್ರವಾಗಿ ಕಳೆದುಕೊಳ್ಳುತ್ತದೆ. ಬಹುಪಾಲು ಪುಟ್ಟಚೀಲದ ಚಹಾಗಳು (ಅಲ್ಲವೂ ಅಲ್ಲದಿದ್ದರೂ) ಸಣ್ಣ ತುಣುಕುಗಳಾಗಿ ಮುರಿಯಲ್ಪಟ್ಟ ಎಲೆಗಳನ್ನು ಒಳಗೊಂಡಿರುತ್ತವೆ; ಚಹಾ ಚೀಲಗಳಲ್ಲಿನ ಎಲೆಗಳ ವ್ಯಾಪಕ ಮೇಲ್ಮೈ ವಿಸ್ತೀರ್ಣದಿಂದ ಪ್ರಮಾಣದವರೆಗಿನ ಅನುಪಾತವು ಅವುಗಳನ್ನು ಹೆಚ್ಚಿನ ಗಾಳಿಗೆ ಒಡ್ಡುತ್ತವೆ, ಮತ್ತು ಇದರಿಂದಾಗಿ ಅತ್ಯಂತ ವೇಗವಾಗಿ ಅವು ನೀರಸ ಅಥವಾ ಹಳಸಲಾಗುವಂತಾಗುತ್ತದೆ. ಬಿಡಿಬಿಡಿಯಾದ ಚಹಾ ಎಲೆಗಳು ದೊಡ್ಡ ದೊಡ್ಡ ತುಣುಕುಗಳಾಗಿ, ಇಲ್ಲವೇ ಸಂಪೂರ್ಣವಾಗಿ ಅಖಂಡವಾಗಿರುವ ಸಾಧ್ಯತೆಗಳಿರುತ್ತವೆ..
  • ಚೀಲಗಳಿಗಾಗಿ ಎಲೆಗಳನ್ನು ಒಡೆಯುವುದರಿಂದ ಸುವಾಸಿತ ತೈಲಗಳು ಹೊರತೆಗೆಯಲ್ಪಡುತ್ತವೆ.
  • ಚಹಾ ಚೀಲಗಳ ಚಿಕ್ಕ ಗಾತ್ರದ ಕಾರಣದಿಂದಾಗಿ ಎಲೆಗಳು ಸೂಕ್ತವಾಗಿ ಪ್ರಸರಿಸಲು ಹಾಗೂ ನೆನೆಯಲು ಸಾಧ್ಯವಾಗುವುದಿಲ್ಲ.
  • ಒಂದು ಕ್ಯಾನ್ಸರು ಜನಕ ಎಂದು ಹೇಳಲಾಗಿರುವ ಎಪಿಕ್ಲೋರೋಹೈಡ್ರಿನ್‌ನ್ನು ಬಳಸಿ, ಒದ್ದೆಯಾದ ಕಾಗದದ ಬಲವನ್ನು ಬಲಪಡಿಸುವ ಲೇಪವನ್ನು ಬಳಸಿಕೊಂಡು ಕೆಲವೊಂದು ಚಹಾ ಚೀಲಗಳನ್ನು ತಯಾರಿಸಲಾಗುತ್ತದೆ.[೬೧][೬೨]

ಪಿರಮಿಡ್‌ ಚಹಾ ಚೀಲಗಳು

[ಬದಲಾಯಿಸಿ]

1996ರಲ್ಲಿ[೬೩] ಲಿಪ್ಟನ್‌[೬೪] ಮತ್ತು PG ಟಿಪ್ಸ್‌‌ನಿಂದ ಪರಿಚಯಿಸಲ್ಪಟ್ಟ "ಪಿರಮಿಡ್‌ ಚಹಾ ಚೀಲ"ವು ಒಂದು ಅನನ್ಯ ವಿನ್ಯಾಸವನ್ನು ಹೊಂದಿದ್ದು, ಕಾಗದದ ಚಹಾ ಚೀಲಗಳಿಗೆ ವಿರುದ್ಧವಾಗಿರುವ ಸೂಕ್ಷ್ಮ ವಿಮರ್ಶಕರ ವಾದಗಳ ಪೈಕಿ ಒಂದನ್ನು ಅದು ನಿಭಾಯಿಸುತ್ತದೆ. ಏಕೆಂದರೆ, ತೋಯಿಸುವಿಕೆಯ ಅವಧಿಯಲ್ಲಿನ ಹರಡಿಕೊಳ್ಳುವಲ್ಲಿ ಇದರ ಮೂರು-ಆಯಾಮದ ನಾಲ್ಕು ಪಾರ್ಶ್ವದ ಘನದ ಆಕಾರವು ಚಹಾದ ಎಲೆಗಳಿಗೆ ಅನುವುಮಾಡಿಕೊಡುತ್ತದೆ. ಆದಾಗ್ಯೂ, ಪರಿಸರೀಯವಾಗಿ ಪ್ರತಿಕೂಲವಾಗಿರುವ ಕಾರಣದಿಂದಾಗಿ ಪಿರಮಿಡ್‌ ಚಹಾ ಚೀಲಗಳ ಕೆಲವೊಂದು ಬಗೆಗಳು ಟೀಕೆಗೆ ಒಳಗಾಗಿವೆ. ಏಕೆಂದರೆ ಬಿಡಿಬಿಡಿ ಚಹಾ ಎಲೆಗಳು ಹಾಗೂ ಕಾಗದದ ಚಹಾ ಚೀಲಗಳು ಮಾಡುವಂತೆ ಪಿರಮಿಡ್‌ ಚಹಾಚೀಲಗಳ ಸಂಶ್ಲೇಷಿತ (ಕೃತಕ) ಸಾಮಗ್ರಿಯು ನೆಲದಲ್ಲಿ ಹೂತುಹಾಕಲ್ಪಟ್ಟಾಗ ವಿಘಟಿಸಲ್ಪಡುವುದಿಲ್ಲ ಅಥವಾ ಭಾಗಗಳಾಗಿ ಒಡೆದು ಮಣ್ಣಿನಲ್ಲಿ ಸೇರಿಕೊಳ್ಳುವುದಿಲ್ಲ.[೬೫]

ಬಿಡಿಯಾಗಿರುವ ಚಹಾ

[ಬದಲಾಯಿಸಿ]
ಬಿಡಿಬಿಡಿ-ಎಲೆಯ ಚಹಾ

ಒಂದು ಲೋಹದ ಕಿರುಡಬ್ಬಿ ಅಥವಾ ಇತರ ಧಾರಕ ಡಬ್ಬಿಗಳಲ್ಲಿ ಚಹಾದ ಎಲೆಗಳನ್ನು ಬಿಡಿಬಿಡಿಯಾಗಿ ಭರ್ತಿಮಾಡಲಾಗುತ್ತದೆ. ಪುಡಿಪುಡಿಯಾಗುವಿಕೆಯನ್ನು ತಡೆದು ನಿಲ್ಲಿಸುವ ಸುರುಳಿಮಾಡಿದ ಸಣ್ಣ ಕಣಗಳ ಚಹಾ ಎಲೆಗಳನ್ನು ಅವುಗಳ ತಾಜಾತನವನ್ನು ಉಳಿಸಿಕೊಳ್ಳುವ ಸಲುವಾಗಿ ಸಾಮಾನ್ಯವಾಗಿ ನಿರ್ವಾತ ಸ್ವರೂಪದಲ್ಲಿ ಡಬ್ಬಿಗೆ ತುಂಬಲಾಗುತ್ತದೆ. ಹೀಗೆ ಅಲ್ಯುಮೀನಿಯಂ ಲೇಪಿಸಿದ ಪ್ಯಾಕ್‌ಮಾಡುವ ವ್ಯವಸ್ಥೆಯಲ್ಲಿ ತುಂಬಿಸಲ್ಪಟ್ಟ ಚಹಾಗಳು ಶೇಖರಣೆ ಹಾಗೂ ಚಿಲ್ಲರೆ ಮಾರಾಟಕ್ಕಾಗಿ ಬಳಕೆಯಾಗುತ್ತವೆ. ಒಂದು ಬಟ್ಟಲು, ಮಗ್ಗು, ಅಥವಾ ಚಹಾಕುಡಿಕೆಯಲ್ಲಿನ ಬಳಕೆಗಾಗಿ ಗ್ರಾಹಕರು ಭಾಗಗಳನ್ನು ಪ್ರತ್ಯೇಕವಾಗಿ ಅಳೆದುಕೊಳ್ಳಬೇಕಾಗುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದ ಹೊಂದಿಕೊಳ್ಳುವಿಕೆಗೆ ಅವಕಾಶವಾಗುವುದಲ್ಲದೆ, ತನಗಿಷ್ಟ ಬಂದಂತೆ ತೆಳುವಾದ ಅಥವಾ ಕಡುವಾದ ಚಹಾವನ್ನು ಮಾಡಿಕೊಳ್ಳಲು ಗ್ರಾಹಕನಿಗೆ ಅನುವುಮಾಡಿಕೊಟ್ಟಂತಾಗುತ್ತದೆ. ಆದರೆ ಈ ವಿಧಾನವು ಅಷ್ಟೊಂದು ಸೌಕರ್ಯದಾಯಕವಲ್ಲ. ಚಹಾವನ್ನು ಸೇವಿಸುವಾಗ ಅದರಲ್ಲಿ ಬಿಡಿಬಿಡಿಯಾದ ಎಲೆಗಳು ತೇಲದಂತಿರಲು ಹಾಗೂ ಹೆಚ್ಚು-ಕುದಿಯುವುದನ್ನು ತಪ್ಪಿಸುವ ದೃಷ್ಟಿಯಿಂದ ಜರಡಿಗಳು, "ಚಹಾದ ಒತ್ತು ಯಂತ್ರಗಳು", ಸೋಸುಗವನ್ನು ಅಳವಡಿಸಿದ ಚಹಾಕುಡಿಕೆಗಳು, ಹಾಗೂ ಮಿಶ್ರಣದ ಚೀಲಗಳು ವಾಣಿಜ್ಯ ಸ್ವರೂಪದಲ್ಲಿ ಲಭ್ಯವಿವೆ. ಈ ಸಮಸ್ಯೆಯನ್ನು ಎದುರಿಸಲು ಇರುವ ಒಂದು ಹೆಚ್ಚು ಸಾಂಪ್ರದಾಯಿಕವಾದ, ಆದರೂ ಹೆಚ್ಚು ಪರಿಣಾಮಕಾರಿಯಾದ ಮಾರ್ಗವೆಂದರೆ, ಗೈವಾನ್‌ ಎಂದು ಕರೆಯಲಾಗುವ ಮೂರು-ತುಣುಕು ಮುಚ್ಚಳಗಳ ಚಹಾಬಟ್ಟಲನ್ನು ಬಳಸುವುದು. ಸೇವನೆಯ ಉದ್ದೇಶಕ್ಕಾಗಿ ಚಹಾವನ್ನು ಬೇರೊಂದು ಬಟ್ಟಲಿಗೆ ಸುರಿಯುವಾಗ ಎಲೆಗಳನ್ನು ಬಸಿಯಲು ಗೈವಾನ್‌ನ ಮುಚ್ಚಳವನ್ನು ಓರೆ ಮಾಡಬಹುದಾಗಿದೆ.

ಸಂಕ್ಷೇಪಿಸಿದ ಚಹಾ

[ಬದಲಾಯಿಸಿ]

ಕೆಲವೊಂದು ಚಹಾಗಳನ್ನು (ನಿರ್ದಿಷ್ಟವಾಗಿ ಹೇಳುವುದಾದರೆ ಪು-ಎರ್ಹ್‌ ಚಹಾ) ಸಾಗಾಣಿಕೆ, ಶೇಖರಣೆ, ಮತ್ತು ಬಲವರ್ಧನೆಯ ಅನುಕೂಲಗಳಿಗಾಗಿ ಮತ್ತಷ್ಟು ಸಂಕ್ಷೇಪಿಸಲಾಗುತ್ತದೆ. ಇಟ್ಟಿಗೆಗೆಂಪಿನ ಚಹಾವು ಹಿಮಾಲಯದ ದೇಶಗಳಲ್ಲಿ ಇನ್ನೂ ಬಳಕೆಯಲ್ಲಿದೆ. ಒಂದು ಚಿಕ್ಕ ಚಾಕುವನ್ನು ಬಳಸಿ ಸಂಕ್ಷೇಪಿಸಲಾದ ಚಹಾದ ಬಿಲ್ಲೆಯಿಂದ ಎಲೆಗಳನ್ನು ಮೊದಲು ಬಿಡಿಬಿಡಿಯಾಗಿಸಿ ಚಹಾವನ್ನು ತಯಾರಿಸಲಾಗುತ್ತದೆ ಮತ್ತು ನೆನೆಸಿಡಲಾಗುತ್ತದೆ. ಬಿಡಿಬಿಡಿ ಎಲೆಯ ಚಹಾಕ್ಕೆ ಹೋಲಿಸಿದಾಗ, ಸಂಕ್ಷೇಪಿಸಿದ ಚಹಾಗಳನ್ನು ಸುದೀರ್ಘ ಅವಧಿಯವರೆಗೆ ಹಾಳಾಗದಂತೆ ಶೇಖರಿಸಿಡಬಹುದು.

ದಿಢೀರ್‌ ಚಹಾ

[ಬದಲಾಯಿಸಿ]

ಶೈತ್ಯೀಕರಿಸಿ ಒಣಗಿಸಿದ ದಿಢೀರ್‌ ಕಾಫಿಯಂತೆ ಇತ್ತೀಚಿನ ದಿನಗಳಲ್ಲಿ, "ದಿಢೀರ್‌ ಚಹಾಗಳು" ಜನಪ್ರಿಯವಾಗುತ್ತಿವೆ. ದಿಢೀರ್‌ ಚಹಾವನ್ನು 1930ರ ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತಾದರೂ, 1950ರ ದಶಕದ ಅಂತ್ಯದವರೆಗೂ ಅದಕ್ಕೆ ವಾಣಿಜ್ಯ ಸ್ವರೂಪವು ಸಿಕ್ಕಿರಲಿಲ್ಲ, ಮತ್ತು ಇತ್ತೀಚೆಗಷ್ಟೇ ಅದು ಜನಪ್ರಿಯವಾಗುತ್ತಿದೆ. ಸೇರ್ಪಡೆ ಮಾಡಲಾದ ಕೆಲವೊಂದು ಪರಿಮಳಗಳೊಂದಿಗೆ ಈ ಉತ್ಪನ್ನಗಳು ಅನೇಕ ವೇಳೆ ದೊರೆಯುತ್ತವೆ. ವೆನಿಲ, ಜೇನುತುಪ್ಪ ಅಥವಾ ಹಣ್ಣು ಇಂಥ ಕೆಲವು ಪರಿಮಳಗಳಾಗಿದ್ದು, ಪುಡಿಮಾಡಲಾದ ಹಾಲು ಸಹ ಈ ಶ್ರೇಣಿಯಲ್ಲಿ ಸೇರಬಹುದಾಗಿದೆ. ಕುದಿಯುವ ನೀರಿನ ಅವಶ್ಯಕತೆ ಇಲ್ಲದ ಅನುಕೂಲತೆಯ ಕಾರಣದಿಂದಾಗಿ, ದಿಢೀರ್‌ ತಂಪಾಗಿಸಿದ ಚಹಾಕ್ಕೆ ಸಂಬಂಧಿಸಿದಂತೆಯೂ ಇದೇ ರೀತಿಯ ಉತ್ಪನ್ನಗಳು ಅಸ್ತಿತ್ವದಲ್ಲಿವೆ. ಅನುಕೂಲತೆಯ ಕಾರಣಕ್ಕಾಗಿ ಚಹಾದ ಪರಿಮಳದ ಸವಿರುಚಿಯನ್ನು ತ್ಯಾಗಮಾಡಬೇಕಾಗಿ ಬರುವ ಕಾರಣದಿಂದ, ಚಹಾದ ಸೂಕ್ಷ್ಮ ವಿಮರ್ಶಕರು ಈ ಉತ್ಪನ್ನಗಳನ್ನು ಟೀಕಿಸುತ್ತಾರೆ.

ಡಬ್ಬಿಯಲ್ಲಿ ತುಂಬಿದ ಚಹಾ

[ಬದಲಾಯಿಸಿ]

ಡಬ್ಬಿಯಲ್ಲಿ ತುಂಬಿದ ಚಹಾವು ಜಪಾನ್‌ನಲ್ಲಿ 1981ರಲ್ಲಿ ಮೊಟ್ಟಮೊದಲ ಬಾರಿಗೆ ಬಿಡುಗಡೆಯಾಯಿತು. ಹಿಂದೆ ಸೂಚಿಸಲಾಗಿರುವಂತೆ, ಇದೊಂದು ಸಂಪೂರ್ಣವಾಗಿ ಇತ್ತೀಚಿನ ನಾವೀನ್ಯತೆಯಾಗಿದ್ದು, ಮಾರಾಟಗಾರಿಕೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ.

ಶೇಖರಣೆ

[ಬದಲಾಯಿಸಿ]

ಶೇಖರಣೆಯ ಸ್ಥಿತಿಗತಿಗಳು ಹಾಗೂ ಚಹಾದ ಬಗೆಯೊಂದಿಗೆ ಬದಲಾಗುವ ಬಡು ಅವಧಿಯೊಂದನ್ನು (ಷೆಲ್ಫ್‌ ಲೈಫ್‌) ಚಹಾ ಹೊಂದಿದೆ.

ಕಪ್ಪು ಚಹಾವು ಹಸಿರು ಚಹಾಕ್ಕಿಂತ ದೀರ್ಘವಾದ ಒಂದು ಬಡು ಅವಧಿಯನ್ನು ಹೊಂದಿದೆ. ಹೂವಿನ ಚಹಾಗಳಂಥ ಕೆಲವೊಂದು ಚಹಾಗಳು ಸುಮಾರು ಒಂದು ತಿಂಗಳಲ್ಲೇ ಹಾಳಾಗಬಹುದು. ಇದಕ್ಕೆ ಅಪವಾದವಾಗಿ, ಪು-ಎರ್ಹ್‌ ಚಹಾವು ಕಾಲ ಕಳೆದಂತೆ ಸುಧಾರಣೆಗೊಳ್ಳುತ್ತದೆ. ಶುಷ್ಕವಾದ, ತಂಪಾದ, ಮಬ್ಬಾಗಿರುವ ಜಾಗದಲ್ಲಿ, ಗಾಳಿಯಾಡದ ಡಬ್ಬಿಯಲ್ಲಿ ಚಹಾವನ್ನು ಶೇಖರಿಸಿಟ್ಟರೆ ಅದು ಹೆಚ್ಚು ತಾಜಾ ಆಗಿ ಉಳಿಯುತ್ತದೆ. ಭದ್ರವಾಗಿ ಮುಚ್ಚಿಡಲಾಗುವ ಒಂದು ಅಪಾರದರ್ಶಕ ಲೋಹದ ಕಿರುಡಬ್ಬಿಯೊಳಗೆ ಇರಿಸಲಾದ ಚೀಲವೊಂದರಲ್ಲಿ ಶೇಖರಿಸಲ್ಪಟ್ಟ ಕಪ್ಪು ಚಹಾವು ಎರಡು ವರ್ಷಗಳವರೆಗೆ ಹಾಳಾಗದೆ ಇರಬಲ್ಲದು. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಹಸಿರು ಚಹಾವು ಸಾಮಾನ್ಯವಾಗಿ ತನ್ನ ತಾಜಾತನವನ್ನು ಕಳೆದುಕೊಳ್ಳುತ್ತದೆ. ಸಣ್ಣ ಕಣಗಳ ಚಹಾದ ಎಲೆಗಳು ಬಿಗಿಯಾಗಿ ಸುತ್ತಲ್ಪಟ್ಟಿರುತ್ತವೆಯಾದ್ದರಿಂದ, ಹೆಚ್ಚು ತೆರೆದುಕೊಂಡಿರುವ ಎಲೆಯ ಚುನ್‌ ಮೀ ಚಹಾಕ್ಕಿಂತ ಹೆಚ್ಚು ಬಾಳಿಕೆ ಬರುತ್ತವೆ. ಶುಷ್ಕಕಾರಿ ಪೊಟ್ಟಣಗಳು ಅಥವಾ ಆಮ್ಲಜನಕ ಹೀರುವ ಪೊಟ್ಟಣಗಳನ್ನು ಬಳಸುವ ಮೂಲಕ, ಮತ್ತು ನಿರ್ವಾತ ಸ್ವರೂಪದ ಮೊಹರುಮಾಡುವಿಕೆಯ ವಿಧಾನದಿಂದ ಎಲ್ಲಾ ಚಹಾಗಳ ಶೇಖರಣಾ ಅವಧಿಯನ್ನು ವಿಸ್ತರಿಸಬಹುದು.

ಹಸಿರು ಚಹಾವನ್ನು ಶೇಖರಿಸಿಡುವಾಗ, ಶೈತ್ಯೀಕರಣ ಅಥವಾ ಘನೀಕರಣದ ವಿವೇಚನಾಯುಕ್ತ ಬಳಕೆಯು ಶಿಫಾರಸು ಮಾಡಲ್ಪಟ್ಟಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚಹಾ ಸೇವಿಸುವವರು ತಾಪಮಾನದಲ್ಲಾಗುವ ವ್ಯತ್ಯಯಕ್ಕೆ ಪ್ರತಿಯಾಗಿ ಮುಂಜಾಗರೂಕತೆಯನ್ನು ವಹಿಸಬೇಕಾಗುತ್ತದೆ.[೬೬]

ಅಸಮರ್ಪಕ ರೀತಿಯಲ್ಲಿ ಶೇಖರಿಸಲ್ಪಟ್ಟ ಚಹಾವು ಪರಿಮಳವನ್ನು ಕಳೆದುಕೊಳ್ಳಬಹುದು, ಇತರ ಆಹಾರ ವಸ್ತುಗಳಿಂದ ಅಹಿತವಾದ ಪರಿಮಳಗಳು ಅಥವಾ ವಾಸನೆಗಳನ್ನು ಪಡೆಯಬಹುದು, ಅಥವಾ ಅದಕ್ಕೆ ಬೂಷ್ಟು ಹಿಡಿಯಬಹುದು.

ಇದನ್ನೂ ಗಮನಿಸಿ

[ಬದಲಾಯಿಸಿ]
3
The unnamed parameter 2= is no longer supported. Please see the documentation for {{Columns-list}}.

ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ ೧.೨ "Tea". Encarta. Archived from the original on 2008-03-08. Retrieved 2008-07-23. {{cite web}}: Italic or bold markup not allowed in: |publisher= (help)
  2. ೨.೦ ೨.೧ Alan Macfarlane (2004). The Empire of Tea. The Overlook Press. p. 32. ISBN 1-58567-493-1. {{cite book}}: Unknown parameter |coauthors= ignored (|author= suggested) (help)
  3. ೩.೦ ೩.೧ Penelope Ody, (2000). Complete Guide to Medicinal Herbs. New York, NY: Dorling Kindersley Publishing. p. 48. ISBN 0-7894-6785-2.{{cite book}}: CS1 maint: extra punctuation (link)
  4. Posted by Teamaster on November 16, 2005 04:21 PM (2005-11-16). "Four Types of Tea". About-tea.com. Archived from the original on 2009-04-16. Retrieved 2009-07-15.{{cite web}}: CS1 maint: numeric names: authors list (link)
  5. "Tea types and tea varieties". Starchefs.com. Retrieved 2009-07-15.
  6. Dictionary.com search Herbal tea. 2007ರ ಫೆಬ್ರುವರಿ 15ರಂದು ಮರುಸಂಪಾದಿಸಲಾಯಿತು.
  7. Western Mail Online, 10 October 2009. http://www.walesonline.co.uk/news/wales-news/2009/10/03/duo-plant-tea-in-wales-91466-24840816/
  8. Compendium of Washington Agriculture, tea Archived 2010-01-19 ವೇಬ್ಯಾಕ್ ಮೆಷಿನ್ ನಲ್ಲಿ. 16/
  9. Rolfe, Jim (2003). Camellias: A Practical Gardening Guide. Timber Press. ISBN 0881925772. {{cite book}}: Unknown parameter |coauthors= ignored (|author= suggested) (help)
  10. Pruess, Joanna (2006). Tea Cuisine: A New Approach to Flavoring Contemporary and Traditional Dishes. Globe Pequot. ISBN 1592287417.
  11. Elizabeth S. Hayes (1980). Spices and Herbs: Lore and Cookery. Courier Dover Publications. p. 74. ISBN 0486240266. Retrieved 2008-09-20.
  12. ಬ್ರಿಟಾನಿಕಾ ಟೀ ಕಲ್ಟಿವೇಷನ್‌ 2007ರ ಜೂನ್‌ನಲ್ಲಿ ಮರುಸಂಪಾದಿಸಲಾಯಿತು.
  13. ೧೩.೦ ೧೩.೧ Mondal 2007, p. 519
  14. Liu Tong (2005). Chinese tea. Beijing: China Intercontinental Press. p. 137. ISBN 7-5085-0835-1.
  15. Hamza Nassrallah (2009-01-02). "Which Tea is Healthiest?". Wonders of Tea. Archived from the original on 2009-06-14. Retrieved 2009-07-15.
  16. "Journal of Nutrition - Antioxidant Activity of Black Tea vs. Green Tea". Jn.nutrition.org. Retrieved 2009-07-15.
  17. "Oxygen Radical Absorbance Capacity (ORAC) of Selected Foods – 2007" (PDF). Webcitation.org. 2009-05-23. Archived from the original (PDF) on 2009-03-06. Retrieved 2009-07-15.
  18. Bennett Alan Weinberg and Bonnie K. Bealer (2001). The World of Caffeine: The Science and Culture of the World's Most Popular Drug. Routledge. p. 228. ISBN 0415927226. Retrieved 2008-09-20.
  19. M. B. ಹಿಕ್ಸ್‌, Y-H. P. ಸೀಯಾ, L. N. ಬೆಲ್‌, ಟೀ ಪ್ರಿಪರೇಷನ್‌ ಅಂಡ್‌ ಇಟ್ಸ್‌ ಇನ್‌ಫ್ಲುಯೆನ್ಸ್‌ ಆನ್ ಮೀಥೈಲ್‌ಕ್ಸಾಂಥೀನ್‌ ಕಾನ್ಸೆಂಟ್ರೇಷನ್‌‌ , ಫುಡ್‌ ರಿಸರ್ಚ್‌ ಇಂಟರ್‌ನ್ಯಾಷನಲ್‌ 29(3-4) 325-330 (1996)
  20. ಗ್ರಹಾಂ H. N.; ಗ್ರೀನ್‌ ಟೀ ಕಂಪೊಸಿಷನ್‌, ಕನ್ಸಂಪ್ಷನ್‌, ಅಂಡ್‌ ಪಾಲಿಫೀನಾಲ್‌ ಕೆಮಿಸ್ಟ್ರಿ; ಪ್ರಿವೆಂಟಿವ್‌ ಮೆಡಿಸಿನ್‌ 21 (3):334-50 (1992)
  21. "Environmental Pollution: Fluoride contents in tea and soil from tea plantations and the release of fluoride into tea liquor during infusion". ScienceDirect. Archived from the original on 2009-09-22. Retrieved 2009-07-15.
  22. "Caffeine and Tea Information". Stash Tea. Archived from the original on 2010-01-17. Retrieved 2009-07-15.
  23. Yamamoto, Kim & Juneja 1997:4 "ಬಹಳ ಕಾಲದಿಂದಲೂ, ಸಸ್ಯಶಾಸ್ತ್ರಜ್ಞರು ತಮ್ಮ ವೀಕ್ಷಣೆಗಳ ಆಧಾರದ ಮೇಲೆ ಚಹಾ ಮೂಲದ ಇಬ್ಬಗೆತನವನ್ನು ಕುರಿತು ಸಮರ್ಥನೆಗಳನ್ನು ಮಂಡಿಸುತ್ತಾ ಬಂದಿದ್ದಾರೆ. ಅಸ್ಸಾಮೀ ಪ್ರಭೇದಗಳು ಹಾಗೂ ಚೀನಾದ ಪ್ರಭೇದಗಳ ನಡುವಿನ ರೂಪಶಾಸ್ತ್ರೀಯ ಗುಣಲಕ್ಷಣಗಳಲ್ಲಿ ಸ್ಪಷ್ಟವಾಗಿ ಗೋಚರಿಸುವ ವ್ಯತ್ಯಾಸಗಳಿವೆ ಎಂಬುದೇ ಅವರ ವಾದ. ಹಾಷಿಮೊಟೊ ಮಾಗೂ ಷಿಮುರಾ ಎಂಬಿಬ್ಬರು ತಿಳಿಸಿರುವ ಪ್ರಕಾರ, ಚಹಾ ಸಸ್ಯಗಳಲ್ಲಿನ ರೂಪಶಾಸ್ತ್ರೀಯ ಗುಣಲಕ್ಷಣಗಳಲ್ಲಿನ ವ್ಯತ್ಯಾಸಗಳು, ಗುಚ್ಛದ ವಿಶ್ಲೇಷಣೆಯ ಸಂಖ್ಯಾಶಾಸ್ತ್ರೀಯ ವಿಧಾನವನ್ನು ಬಳಸಿಕೊಂಡು ಮಾಡಲಾದ ಸಂಶೋಧನೆಳಿಂದ ಪಡೆಯಲಾದ ಇಬ್ಬಗೆತನದ ಊಹಾಸಿದ್ಧಾಂತದ ಸಾಕ್ಷ್ಯಗಳಾಗಿರಬೇಕೆಂದೇನೂ ಇಲ್ಲ. ಎರಡೂ ಪ್ರಭೇದಗಳು ಒಂದೇ ತೆರನಾದ ವರ್ಣತಂತುವಿನ ಸಂಖ್ಯೆಯನ್ನು (2n=30) ಹೊಂದಿವೆ ಮತ್ತು ಅವುಗಳನ್ನು ಪರಸ್ಪರರೊಂದಿಗೆ ಸುಲಭವಾಗಿ ಸಂಕರೀಕರಿಸಬಹುದು ಎಂಬುದನ್ನು ಇತ್ತೀಚಿನ ಶೋಧನೆಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಇದರ ಜೊತೆಗೆ, ಚಹಾ ಸಸ್ಯಗಳ ಮಧ್ಯವರ್ತಿ ಮಿಶ್ರತಳಿಗಳು ಅಥವಾ ಏಕಕಾಲಿಕ ಬಹುಗುಣಿತಗಳ ಹಲವಾರು ಬಗೆಗಳು, ಮೇಲೆ ನಮೂದಿಸಲಾದ ವಲಯಗಳಾದ್ಯಂತ ಹಬ್ಬಿರುವ ಒಂದು ವ್ಯಾಪಕದ ಪ್ರದೇಶದಲ್ಲಿ ಕಂಡುಬಂದಿವೆ. ಕೆಮೆಲಿಯಾ ಸೈನೆನ್ಸಿಸ್‌‌ ನ ಹುಟ್ಟಿನ ಸ್ಥಳವು ಬರ್ಮಾದ ಉತ್ತರದ ಭಾಗ, ಯುನ್ನಾನ್‌, ಹಾಗೂ ಚೀನಾದ ಸಿಚುವಾನ್‌ ಜಿಲ್ಲೆಗಳನ್ನು ಒಳಗೊಂಡಂತಿರುವ ಪ್ರದೇಶದಲ್ಲಿದೆ ಎಂಬುದನ್ನು ಈ ಅಂಶಗಳು ಸಾಬೀತುಮಾಡಬಹುದು."
  24. Fuller, Thomas (2008-04-21). "A Tea From the Jungle Enriches a Placid Village". The New York Times. New York: The New York Times Company. p. A8.
  25. ದಿ ಓಲ್ಡೆಸ್ಟ್‌ ಟೀ ಟ್ರೀ ಆನ್‌ ದಿ ಅರ್ತ್‌ , (ಕನ್ಮಿಂಗ್‌‌, 2006).
  26. ಚೌ ಪುಟ 19-20 (ಝೆಕ್‌ ಆವೃತ್ತಿ); ಜೊತೆಗೆ ಆರ್ಸಿಮೊವಿಕೋವಾ ಪುಟ 9, ಎವಾನ್ಸ್‌ ಪುಟ 2 ಮತ್ತು ಇತರರು
  27. ಲು ಜು ಪುಟ 29-30 (ಝೆಕ್‌ ಆವೃತ್ತಿ)
  28. Greentealovers.com. "Chinese green tea health benefits". Greentealover.com. Archived from the original on 2009-09-22. Retrieved 2009-07-15.
  29. ಚೌ ಪುಟ 20-21
  30. ಎವಾನ್ಸ್‌ ಪುಟ 3
  31. "Tea". The Columbia Encyclopedia Sixth Edition. 2001-07. Retrieved 2008-07-23. {{cite web}}: Italic or bold markup not allowed in: |publisher= (help)
  32. George Staunton (1797). An Historical Account of the Embassy to the Emperor of China, Undertaken By Order of the King of Great Britain; Including the Manners and Customs of the Inhabitants; and Preceded By an Account of the Causes of the embassy and Voyage to China. J. Stockdale. p. 452. The Chinese perceiving these dispositions in the monkey took advantage of the propensities of the animal and converted them to life in a domestic state which in that of nature were exerted to their annoyance.
  33. Robert Fortune (1852). A Journey to the Tea Countries of China; including Sung-Lo and the Bohea Hills. J. Murray. p. 237. I should not like to assert that no tea is gathered on these hills by the agency of chains and monkeys but I think it may be safely affirmed that the quantity in such is small.
  34. Constance Frederica Gordon Cumming. Wanderings in China. W. Blackwood and Sons. p. 318.
  35. Laura C. Martin (2007). Tea: The Drink that Changed the World. Tuttle Publishing. p. 133. ISBN 0804837244.
  36. Kiple & Ornelas 2000:4
  37. ಕಕುಝೊ ಒಕಕುರಾ ಬರೆದಿರುವ ಬುಕ್‌ ಆಫ್‌ ಟೀ (ಪುಟಗಳು 5 - 6). 1964ರಲ್ಲಿ ಪ್ರಕಟಿಸಲ್ಪಟ್ಟಿತು. ಕೊರಿಯರ್ ಡೋವರ್ ಪಬ್ಲಿಕೇಷನ್ಸ್‌. ಸಮಾಜಶಾಸ್ತ್ರ. 94 ಪುಟಗಳು. ISBN 0-486-20070-1
  38. ೩೮.೦೦ ೩೮.೦೧ ೩೮.೦೨ ೩೮.೦೩ ೩೮.೦೪ ೩೮.೦೫ ೩೮.೦೬ ೩೮.೦೭ ೩೮.೦೮ ೩೮.೦೯ ೩೮.೧೦ ೩೮.೧೧ ೩೮.೧೨ (ಇನ್‌ ಅವರ್ ಟೈಮ್‌, BBC ರೇಡಿಯೋ 4, 29 ಏಪ್ರಿಲ್‌ 2004)
  39. "The Diary of Samuel Pepys". Retrieved 2009-05-11.
  40. "www.london2012.com" (PDF). Archived from the original (PDF) on 2011-06-08. Retrieved 30 October, 2009. {{cite web}}: Check date values in: |accessdate= (help)
  41. 'ಟೀ ಫೈನಲಿ ಮೇಕಿಂಗ್ ಎ ಸ್ಟಿರ್‌ ಇನ್‌ ಅಮೆರಿಕಾ' Archived 2011-06-11 ವೇಬ್ಯಾಕ್ ಮೆಷಿನ್ ನಲ್ಲಿ. ಟೈಮ್ಸ್‌ ಆನ್‌ಲೈನ್‌. 2008ರ ಫೆಬ್ರವರಿ 17ರಂದು ಮರುಸಂಪಾದಿಸಿದ್ದು
  42. ಕ್ಯಾಂಪ್‌ಬೆಲ್‌, ಪಾಲಿ (ಏಪ್ರಿಲ್‌ 26, 2006). "ಸೂಟೆಡ್‌ ಡು ಬಿ ಎ ಟೀ". ಸಿನ್‌ಸಿನ್ನಾಟಿ ಇನ್‌ಕ್ವೈರರ್‌.
  43. ಟೈಲರ್‌, ಜಾನ್‌ W., ಸ್ಮಗ್ಲರ್ಸ್‌ & ಪೇಟ್ರಿಯಾಟ್ಸ್‌: ಬಾಸ್ಟನ್‌ ಮರ್ಚೆಂಟ್ಸ್‌‌ ಅಂಡ್‌ ದಿ ಅಡ್ವೆಂಟ್‌ ಆಫ್‌ ದಿ ಅಮೆರಿಕನ್‌ ರೆವಲ್ಯೂಷನ್‌ (ಬಾಸ್ಟನ್‌, 1986).
  44. ಚಹಾ. 2008. ಬ್ರಿಟಾನಿಕಾ ವಿಶ್ವಕೋಶ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ 2008 ಅಲ್ಟಿಮೇಟ್‌ ರೆಫರೆನ್ಸ್‌ ಸ್ಯೂಟ್‌. ಚಿಕಾಗೊ: ಎನ್‌ಸೈಕ್ಲೋಪಿಡಿಯಾ ಬ್ರಿಟಾನಿಕಾ.
  45. ೪೫.೦ ೪೫.೧ ೪೫.೨ ೪೫.೩ Sanyal (2008)
  46. "Sri Lanka Tea Board". Pureceylontea.com. Archived from the original on 2010-06-27. Retrieved 2009-07-15.
  47. IARC Monographs on the Evaluation of Carcinogeni Risks to Humans Volume 51 (1991)
  48. Dahl, Östen. "The World Atlas of Language Structures Online". Max Planck Digital Library. Retrieved 2008-06-04. {{cite web}}: |contribution= ignored (help)
  49. Andrew Burke (2004). Iran. Lonely Planet. pp. 75–76. ISBN 1740594258. {{cite book}}: Unknown parameter |coauthors= ignored (|author= suggested) (help)
  50. ಕುಕ್‌, ಪುಟ 85
  51. In Pursuit of Tea (2005). "Brewing Guide". Archived from the original on 2007-01-12. Retrieved 2006-12-16.
  52. "Infusion Guide". Zhong Guo Cha. 2007. Archived from the original on 2007-10-09. Retrieved 2007-05-09.
  53. "Agony of the Leaves". Margaret Chittenden. 1999. Archived from the original on 2007-03-24. Retrieved 2007-05-09.
  54. "Brief Guide to Tea". BriefGuides. 2006. Archived from the original on 2006-08-22. Retrieved 2006-11-07.
  55. "ಕೆಲವೊಂದು ಚಹಾ ಮತ್ತು ಮದ್ಯವು ಕ್ಯಾನ್ಸರ್‌ನ್ನು ಉಂಟುಮಾಡಬಹುದು - ಚಹಾ ಮತ್ತು ಮದ್ಯದಲ್ಲಿ ಕಂಡುಬಂದಿರುವ ಟ್ಯಾನಿನ್‌ ಅಂಶವು, ಅನ್ನನಾಳದ ಕ್ಯಾನ್ಸರ್‌ನೊಂದಿಗೆ ಸಂಬಂಧವನ್ನು ಹೊಂದಿದೆ" Archived 2009-11-30 ವೇಬ್ಯಾಕ್ ಮೆಷಿನ್ ನಲ್ಲಿ. ನ್ಯೂಟ್ರಿಷನ್‌ ಹೆಲ್ತ್‌ ರಿವ್ಯೂ , 1990ರ ಶರತ್ಕಾಲದ ಸಂಚಿಕೆ
  56. Tierra, Michael (1990). The Way of Herbs. Pocket Books. ISBN 0671724037.
  57. "How to make a perfect cuppa". BBC News. 2003-06-25. Retrieved 2006-07-28.
  58. Mario Lorenz, Nicoline Jochmann, Amélie von Krosigk, Peter Martus, Gert Baumann, Karl Stangl and Verena Stangl (2007). "Addition of milk prevents vascular protective effects of tea". European Heart Journal. 28 (2): 219–223. doi:10.1093/eurheartj/ehl442. PMID 17213230.{{cite journal}}: CS1 maint: multiple names: authors list (link)
  59. Thompkins, Gwen. "In Kenya, Tea Auction Steeped In Tradition, Gentility: NPR". Retrieved 18 September 2009.
  60. ಚಹಾ ಬೆಲೆಯ ಹೆಚ್ಚಳದ ಕುರಿತು ದುಬೈ ಎಚ್ಚರಿಸುತ್ತದೆ[ಶಾಶ್ವತವಾಗಿ ಮಡಿದ ಕೊಂಡಿ]
  61. "Oxirane, (chloromethyl)- (Epichlorohydrin) CAS No. 106-89-8". Archived from the original on 2009-04-19. Retrieved 2009-10-11.
  62. "EPA Consumer Factsheet on: EPICHLOROHYDRIN". Retrieved 2009-10-11.
  63. "PG Tips - About Us". Archived from the original on 2007-01-20. Retrieved 2009-02-17.
  64. "Lipton Institute of Tea - Interview of Steve, Tea technology manager, Chapter: A Culture of Innovation". Lipton. 2008. Archived from the original on 2011-04-30. Retrieved 2008-06-26.
  65. "The New Shape of Teabags". Tea & Coffee Trade Journal. 2005. Archived from the original on 2007-06-16. Retrieved 2007-05-09. {{cite web}}: line feed character in |title= at position 14 (help)
  66. "Green Tea Storage" (PDF). Retrieved 2009-07-15.

ಆಕರಗಳು

[ಬದಲಾಯಿಸಿ]
  • ಜಾನಾ ಆರ್ಸಿಮೋವಿಕೋವ, ಪಾವೆಲ್‌ ವ್ಯಾಲಿಸೆಕ್‌ (1998): ವುನೆ ಕಾಜೆ , ಸ್ಟಾರ್ಟ್‌ ಬೆನೆಸೊವ್‌. ISBN 80-902005-9-1 (ಝೆಕ್‌ ಭಾಷೆಯಲ್ಲಿರುವುದು)
  • ಕ್ಲಾಡ್‌ ಬಾಲ್ಡ್‌: ಇಂಡಿಯನ್‌ ಟೀ. ಚಹಾದ ಸಂಸ್ಕೃತಿ ಹಾಗೂ ತಯಾರಿಕೆಯ ಕುರಿತಾದ ಒಂದು ಪಠ್ಯಪುಸ್ತಕ. ಐದನೇ ಆವೃತ್ತಿ. C.J. ಹ್ಯಾರಿಸನ್‌ನಿಂದ ಅಮೂಲಾಗ್ರವಾಗಿ ಪರಿಷ್ಕರಿಸಲ್ಪಟ್ಟಿದ್ದು ಮತ್ತು ಭಾಗಶಃ ಮರುಬರೆಯಲ್ಪಟ್ಟಿದ್ದು. ಥಾಕರ್‌, ಸ್ಪಿಂಕ್‌ & ಕಂ., ಕಲ್ಕತ್ತಾ 1940 (ಮೊದಲ ಆವೃತ್ತಿ, 1933).
  • ಕಿಟ್‌ ಚೌ, ಇಯೋನ್‌ ಕ್ರಾಮರ್‌ (1990): ಆಲ್‌ ದಿ ಟೀ ಇನ್‌ ಚೈನಾ , ಚೈನಾ ಬುಕ್ಸ್‌ & ಪೀರಿಯಾಡಿಕಲ್ಸ್‌ ಇಂಕ್‌. ISBN 0-8351-2194-1 ಝೆಕ್‌ ಭಾಷಾಂತರಕ್ಕೆ ಉಲ್ಲೇಖಗಳನ್ನು ನೀಡಿರುವುದು- ಮೈಕಲ್‌ ಸೈನೆಕ್‌ (1998): ವ್ಸೆಕ್ನಿ ಕಾಜೆ ಸಿನಿ , ಧಾರ್ಮಗೈಯ ಪ್ರಹಾ. ISBN 80-85905-48-5
  • ಕೂಕ್‌, ಎಲಿಯನಾರ್‌. ಎ ರೀಡರ್‌'ಸ್‌ ಗೈಡ್‌ ಟು ವ್ಯಾಲೇಸ್‌ ಸ್ಟೀವನ್ಸ್‌ . 2007: ಪ್ರಿನ್ಸ್‌ಟನ್‌ ಯೂನಿವರ್ಸಿಟಿ ಪ್ರೆಸ್‌.
  • ಜಾನ್‌ C. ಎವಾನ್ಸ್‌ (1992): ಟೀ ಇನ್‌ ಚೈನಾ: ದಿ ಹಿಸ್ಟರಿ ಆಫ್ ಚೈನಾಸ್‌ ನ್ಯಾಷನಲ್‌ ಡ್ರಿಂಕ್‌ , ಗ್ರೀನ್‌ವುಡ್‌ ಪ್ರೆಸ್‌. ISBN 0-313-28049-5
  • C.R. ಹಾರ್ಲರ್‌, C.R.: ದಿ ಕಲ್ಚರ್‌ ಅಂಡ್‌ ಮಾರ್ಕೆಟಿಂಗ್ ಆಫ್ ಟೀ. ಎರಡನೇ ಆವೃತ್ತಿ. ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌, ನ್ಯೂಯಾರ್ಕ್‌ ಮತ್ತು ಬಾಂಬೆ, ಮರುಮುದ್ರಣ 1958 (ಮೊದಲ ಆವೃತ್ತಿ 1933, ಎರಡನೇ ಆವೃತ್ತಿ 1956).
  • ಎಲ್ಕೊ ಹೆಸ್ಸೆ (1982), ಟೀ: ದಿ ಐಲಿಡ್ಸ್‌ ಆಫ್‌ ಬೋಧಿಧರ್ಮ , ಪ್ರಿಸಂ ಪ್ರೆಸ್‌. ISBN 0-907061-05-0
  • Hobhouse, Henry (2005). "Seeds of Change: Six Plants that Transformed Mankind". Shoemaker & Hoard. ISBN 1-59376-049-3. {{cite journal}}: Cite journal requires |journal= (help)
  • ಲು ಯು (陆羽): ಚಾ ಜಿಂಗ್‌ (茶经) (ಚಹಾದ ಕುರಿತಾದ ಒಂದು ಉತ್ಕೃಷ್ಟ ಕೃತಿ). ಆಧುನಿಕ-ದಿನದ ಆವೃತ್ತಿಯ ಝೆಕ್‌ ಭಾಷಾಂತರಕ್ಕೆ ಉಲ್ಲೇಖಗಳನ್ನು ನೀಡಿದವರು (1987)- ಓಲ್ಗಾ ಲೊಮೊವಾ (ಭಾಷಾಂತರಕಾರ): ಕ್ನಿಹಾ ಒ ಕಾಜಿ . ಸ್ಪೋಲೆಕ್‌ ಮಿಲ್ಕ್ಯು ಕಾಜೆ, ಪ್ರಹಾ, 2002. (ಝೆಕ್‌ ಭಾಷೆಯಲ್ಲಿ)
  • ರಾಯ್‌ ಮೋಕ್ಷಂ (2003), ಟೀ: ಅಡಿಕ್ಷನ್‌, ಎಕ್ಸ್‌ಪ್ಲಾಯ್ಟೇಷನ್‌, ಅಂಡ್‌ ಎಂಪೈರ್‌
  • ಜೇನ್‌ ಪೆಟ್ಟಿಗ್ರ್ಯೂ (2002), ಎ ಸೋಷಿಯಲ್‌ ಹಿಸ್ಟರಿ ಆಫ್‌ ಟೀ
  • Stephan Reimertz (1998): Vom Genuß des Tees: Eine heitere Reise durch alte Landschaften, ehrwürdige Traditionen und ಆಧುನಿಕe Verhältnisse, inklusive einer kleinen Teeschule (In German)
  • Yamamoto, T; Kim, M; Juneja, L R (1997). "Chemistry and Applications of Green Tea". CRC Press. {{cite journal}}: Cite journal requires |journal= (help).
  • ಜೇಮ್ಸ್‌ ನೋರ್ವುಡ್‌ ಪ್ರಾಟ್‌ (2005), ಟೀ ಡಿಕ್ಷ್‌ನರಿ
  • Kiple, Kenneth F.; Ornelas, Kriemhild Coneè, eds. (2000). The Cambridge World History of Food. Vol. 1. Cambridge: Cambridge University Press. ISBN 0521402166..
  • Mondal, T.K. (2007). "Tea". In Pua, E.C.; Davey, M.R. (eds.). Biotechnology in Agriculture and Forestry. Vol. 60: Transgenic Crops V. Berlin: Springer. pp. 519–535. ISBN 3540491600..
  • Sanyal, Amitava (April 13, 2008). "How India came to be the largest tea drinking nation" ([ಮಡಿದ ಕೊಂಡಿ]). Hindustan Times. New Delhi. p. 12..
  • Karmakar, Rahul (April 13, 2008). "The Singpho: The cup that jeers". Hindustan Times. New Delhi. p. 12. Archived from the original on ಡಿಸೆಂಬರ್ 23, 2008. Retrieved ಫೆಬ್ರವರಿ 9, 2010..
  • ಲೆಸ್ಟರ್‌ ಪ್ಯಾಕರ್‌, ಚೂನ್‌ ನ್ಯಾಂ ಓಂಗ್‌, ಬ್ಯಾರಿ ಹ್ಯಾಲಿವೆಲ್‌ (2004): ಹರ್ಬಲ್‌ ಅಂಡ್‌ ಟ್ರೆಡಿಷನಲ್‌ ಮೆಡಿಸಿನ್‌: ಮಾಲ್ಕ್ಯುಲರ್ ಆಸ್ಪೆಕ್ಟ್ಸ್‌ ಆಫ್‌ ಹೆಲ್ತ್‌ , CRC ಪ್ರೆಸ್‌, ISBN 0-8247-5436-0
  • Nutrition (1999). "Tea and Health.". 15: 946–949. PMID 10575676. {{cite journal}}: Cite journal requires |journal= (help); External link in |title= (help); Unknown parameter |month= ignored (help)
  • Journal of Epidemiology and Community Health (1999). "Coffee and tea consumption in the Scottish Heart Health Study follow up: conflicting relations with coronary risk factors, coronary disease, and all cause mortality". 53: 481–487. PMID 10562866. {{cite journal}}: Cite journal requires |journal= (help); External link in |title= (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಚಹಾ&oldid=1246086" ಇಂದ ಪಡೆಯಲ್ಪಟ್ಟಿದೆ