ವಿಷಯಕ್ಕೆ ಹೋಗು

ಕಷಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಷಾಯವು ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾದ ಔಷಧ ಪ್ರಮಾಣದ ರೂಪ ಮತ್ತು ಯಾವುದೇ ಒಂದು ನಿರ್ದಿಷ್ಟ ಆಯುರ್ವೇದಿಕ ಔಷಧಿಯನ್ನು ಸೂಚಿಸುವುದಿಲ್ಲ, ಬದಲಾಗಿ ಆಯುರ್ವೇದದಲ್ಲಿ ಇದು ವಿವಿಧ ಪ್ರಕಾರಗಳ ಔಷಧೀಯ ಪೇಯಕ್ಕೆ ಬಳಸಲಾದ ಜಾತಿವಾಚಕ ಶಬ್ದವಾಗಿದೆ. ಕಷಾಯವು ಒಂದೇ ಮೂಲಿಕೆ ಅಥವಾ ಮೂಲಿಕೆಗಳ ಗುಂಪಿನ ನೀರಿನ ಕಾಢೆ ಅಥವಾ ನೀರಿನ ಸಾರವನ್ನು ಸೂಚಿಸುತ್ತದೆ. ಇದನ್ನು ಅಜೀರ್ಣ, ಕೆಮ್ಮು, ನೆಗಡಿ ಇತ್ಯಾದಿಗಳಂತಹ ಕಾಯಿಲೆಗಳಿಗೆ ಬಳಸಬಹುದು. ಇದು ದೀರ್ಘಕಾಲದಿಂದ ಬಳಸಲಾಗುತ್ತಿರುವ ಔಷಧಿಯ ಒಂದು ಪ್ರಾಚೀನ ರೂಪವಾಗಿದೆ.[] ಅನೇಕ ಕಷಾಯಗಳು ಬಹಳ ಕಹಿ ರುಚಿಯನ್ನು ಹೊಂದಿರುತ್ತವೆ ಮತ್ತು ದ್ರವವು ಗಾಢ ಬಣ್ಣದ್ದಾಗಿರುತ್ತದೆ. ಇದನ್ನು ಮುಖ್ಯವಾಗಿ ದಕ್ಷಿಣ ಭಾರತದ ಮತ್ತು ಬಂಗಾಳಿ ಕುಟುಂಬಗಳು ಬಳಸುತ್ತವೆ. ಭಾರತದ ಇತರ ಸಂಸ್ಕೃತಿಗಳಲ್ಲಿ ಇದನ್ನು ಕ್ವಾಥ್ ಅಥವಾ ಕಾಢಾ ಎಂದೂ ಕರೆಯಲಾಗುತ್ತದೆ.

ಕಷಾಯವನ್ನು ತಯಾರಿಸಲು ಅನೇಕ ಸರಾಗವಾಗಿ ಬಳಸಲಾಗುವ ಅಡುಗೆ ಸಂಬಾರ ಪದಾರ್ಥಗಳು ಮತ್ತು ಮೂಲಿಕೆಗಳನ್ನು ಬಳಸಲಾಗುತ್ತದೆ, ಉದಾಹರಣೆಗೆ ಬೇವಿನ ಎಲೆಗಳು, ಶುಂಠಿ, ಬೆಳ್ಳುಳ್ಳಿ, ದಾಲ್ಚಿನ್ನಿ, ಲವಂಗ, ಹಿಪ್ಪಲಿ, ತುಳಸಿ, ಕರಿಮೆಣಸು ಇತ್ಯಾದಿ. ಕಷಾಯವನ್ನು ತಯಾರಿಸುವಲ್ಲಿ ಈ ಸಾಮಾನ್ಯ ಹಂತಗಳು ಇರುತ್ತವೆ: ಸರಿಯಾದ ಸೂತ್ರದ ಪ್ರಕಾರ ಸರಿಯಾದ ಮೂಲಿಕೆಗಳನ್ನು ಗುರುತಿಸಬೇಕು ಮತ್ತು ಅವನ್ನು ಸಂಗ್ರಹಿಸಬೇಕು; ಕಚ್ಚಾ ಮೂಲಿಕೆಗಳನ್ನು ಶುದ್ಧ ನೀರಿನಿಂದ ಆಮೂಲಾಗ್ರವಾಗಿ ತೊಳೆಯಬೇಕು; ಕ್ರಿಮಿರಹಿತವಾದ ಪರಿಸರದಲ್ಲಿ ಮೂಲಿಕೆಗಳನ್ನು ಸರಿಯಾಗಿ ಒಣಗಿಸಬೇಕು; ಸೂತ್ರದ ಪ್ರಕಾರ ಪದಾರ್ಥಗಳನ್ನು ನಿಖರವಾಗಿ ತೂಕ ಮಾಡಬೇಕು; ಪದಾರ್ಥಗಳನ್ನು ಒರಟಾದ ಪುಡಿಯಾಗಿ ಅರೆಯಬೇಕು; ಸೂತ್ರದ ಪ್ರಕಾರ ಕಟ್ಟುನಿಟ್ಟಾಗಿ ಪುಡಿಯನ್ನು ಸೂಕ್ತವಾದ ನೀರಿನ ಪ್ರಮಾಣದಲ್ಲಿ ಮಿಶ್ರಣಮಾಡಿ; ಸೂತ್ರದಲ್ಲಿ ಸೂಚಿಸಲಾದಂತೆ ನಿಖರವಾದ ಸಾರತೆಗೆ ಕಡಿಮೆಯಾಗುವವರೆಗೆ ದ್ರಾವಣವನ್ನು ಕುದಿಸಿ; ಮಿಶ್ರಣದ ಗುಣಗಳನ್ನು ಪರೀಕ್ಷಿಸಿ ಮತ್ತು ಅಪೇಕ್ಷಿತ ನಿರ್ದಿಷ್ಟತೆಗಳನ್ನು ಸಾಧಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ; ಸೂಕ್ತವಾದ ಸುತ್ತಲಿನ ಸ್ಥಿತಿಗಳಲ್ಲಿ ಸಂರಕ್ಷಿಸಿಡಿ.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಕಷಾಯ&oldid=884677" ಇಂದ ಪಡೆಯಲ್ಪಟ್ಟಿದೆ