ಕೆಮ್ಮು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Pertussis.jpg

ವೈದ್ಯಶಾಸ್ತ್ರದಲ್ಲಿ, ಕೆಮ್ಮು ಉಸಿರಾಟದ ದೊಡ್ಡ ಸಾಗುನಾಳಗಳನ್ನು ಹೆಚ್ಚುವರಿ ರಸಗಳು, ಉದ್ರೇಕಕಾರಿಗಳು, ಬಾಹ್ಯ ಕಣಗಳು ಮತ್ತು ಸೂಕ್ಷ್ಮಜೀವಿಗಳಿಂದ ಮುಕ್ತವಾಗಿಸಲು ನೆರವಾಗುವ ಒಂದು ಹಠಾತ್ ಮತ್ತು ಹಲವುವೇಳೆ ಪುನರಾವರ್ತಿಸುವ ರಕ್ಷಣಾ ನಿರಿಚ್ಛಾ ಪ್ರತಿಕ್ರಿಯೆ. ಕೆಮ್ಮಿನ ನಿರಿಚ್ಛಾ ಪ್ರತಿಕ್ರಿಯೆಯು ಮೂರು ಹಂತಗಳನ್ನು ಒಳಗೊಳ್ಳುತ್ತದೆ: ಉಚ್ಛ್ವಾಸ, ಮುಚ್ಚಿದ ಕಂಠದ್ವಾರದ ವಿರುದ್ಧ ಬಲವಂತದ ನಿಶ್ವಾಸ, ಮತ್ತು ಕಂಠದ್ವಾರದ ತೆರೆಯುವಿಕೆಯ ತರುವಾಯ ಶ್ವಾಸಕೋಶಗಳಿಂದ ಗಾಳಿಯ ರಭಸದ ಬಿಡುಗಡೆ, ಸಾಮಾನ್ಯವಾಗಿ ವಿಶಿಷ್ಟವಾದ ಶಬ್ದದ ಸಹಿತ. ಕೆಮ್ಮು ಸ್ವಯಂಪ್ರೇರಿತವಾಗಿ ಅಥವಾ ಅನೈಚ್ಛಿಕವಾಗಿ ಆಗಬಹುದು, ಆದರೆ ಹಲವುವೇಳೆ ಅದು ಅನೈಚ್ಛಿಕವಾಗಿರುತ್ತದೆ.


"https://kn.wikipedia.org/w/index.php?title=ಕೆಮ್ಮು&oldid=407307" ಇಂದ ಪಡೆಯಲ್ಪಟ್ಟಿದೆ