ತುಳಸಿ
It has been suggested that Ocimum basilicum be merged into this article. (Discuss) Proposed since April 2010. |
Basil | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | O. basilicum
|
Binomial name | |
Ocimum basilicum |
ತುಳಸಿ (ಒಸಿಮಮ್ ಬೆಸಿಲಿಕಂ )(pronounced /ˈbæzəl/ಅಥವಾ/ˈbeɪzəl/), ಲಾಮಿಯಾಸಿಯೆ(ಪುದೀನ ಸಸ್ಯಗಳು) ಸಸ್ಯ ಜಾತಿಯ, ಎಳೆಯದಾದ, ಬಹಳ ಕಡಿಮೆ ಎತ್ತರದಲ್ಲಿ ಬೆಳೆಯುವ ಸಸ್ಯವಾಗಿದೆ. ತುಳಸಿ ನಳಪಾಕಕ್ಕೆ ಯೋಗ್ಯ ಸಸ್ಯವಾಗಿದ್ದು ಇಟಾಲಿಯನ್ ಪಾಕದಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತದೆ. ಜೊತೆಗೆ ಇದು ತೈವಾನ್ ನಂತಹ ಈಶಾನ್ಯ ಏಷಿಯಾ ಹಾಗು ಥೈಲ್ಯಾಂಡ್, ವಿಯೆಟ್ನಾಂ, ಕಾಂಬೋಡಿಯ, ಹಾಗು ಲಾವೋಸ್ ನಂತಹ ಆಗ್ನೇಯ ಏಷಿಯಾದ ಪಾಕಪದ್ದತಿಗಳಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಸಸ್ಯದ ಜಾತಿ ಹಾಗೂ ತಳಿಯನ್ನು ಅವಲಂಬಿಸಿ, ಎಲೆಗಳು ಸ್ವಲ್ಪಮಟ್ಟಿಗೆ ಆನಿಸ್(ವಾಯುಹರ ಔಷಧಿಗೆ ಉಪಯೋಗಿಸುವ ಸೋಪು ಬೀಜ) ನ ಮಾದರಿಯ ರುಚಿ ಹೊಂದಿರುತ್ತವೆ. ಜೊತೆಗೆ ಗಾಢ, ತೀಕ್ಷ್ಣವಾಗಿರುವುದರ ಜೊತೆಗೆ ಸಾಮಾನ್ಯವಾಗಿ ಮೋಹಕ ಪರಿಮಳವನ್ನು ಹೊಂದಿರುತ್ತವೆ.
ಒಸಿಮಮ್ ಬಸಿಲಿಕಂ ನ ಹಲವು ಜಾತಿಗಳಿವೆ, ಜೊತೆಗೆ ಇದಕ್ಕೆ ಸಂಬಂಧಿಸಿದ ಹಲವಾರು ಜಾತಿಗಳು ಹಾಗು ಮಿಶ್ರ ತಳಿಗಳನ್ನು ತುಳಸಿ ಎಂದು ಕರೆಯಲಾಗುತ್ತದೆ. ಇಟಾಲಿಯನ್ ಆಹಾರಗಳಲ್ಲಿ ಬಳಸಲಾಗುವ ಮಾದರಿಯನ್ನು ಸಿಹಿ ತುಳಸಿ ಎಂದು ಕರೆಯಲಾಗುತ್ತದೆ, ಇದು ಏಷಿಯಾದಲ್ಲಿ ಬಳಸಲಾಗುವ ಥಾಯ್ ತುಳಸಿ(O.ಬಸಿಲಿಕಂ ವರ್. ಥೈರ್ಸಿಫ್ಲೋರ ) ನಿಂಬೆ ತುಳಸಿ(O ×) ಸಿಟ್ರಿಯೋಡೋರಮ್ ) ಹಾಗು ಪವಿತ್ರ ತುಳಸಿ(ಒಸಿಮಮ್ ತೆನುಯಿಫ್ಲೋರಂ )ಗಿಂತ ಭಿನ್ನವಾಗಿದೆ. ಬಹಳ ಸಾಮಾನ್ಯವಾದ ತುಳಸಿ ಜಾತಿಗಳು ವರ್ಷದಲ್ಲಿ ಒಂದೇ ಬಾರಿ ಬೆಳೆದರೆ, ಕೆಲವು ಜಾತಿಗಳು ಸುಖೋಷ್ಣ, ಉಷ್ಣವಲಯದ ವಾತಾವರಣಗಳಲ್ಲಿ ವರ್ಷವಿಡೀ ಬೆಳೆಯುತ್ತವೆ, ಇದರಲ್ಲಿ ಪವಿತ್ರ ತುಳಸಿ ಹಾಗು 'ಆಫ್ರಿಕನ್ ಬ್ಲೂ' ಎಂದು ಕರೆಯಲ್ಪಡುವ ತಳಿಗಳೂ ಸೇರಿವೆ.
ತುಳಸಿ ಸಸ್ಯವು ಮೂಲತಃ ಇರಾನ್, ಭಾರತ ಹಾಗು ಏಷಿಯಾದ ಉಷ್ಣವಲಯದ ಪ್ರದೇಶಗಳ ಸ್ಥಳೀಯ ಸಸ್ಯವಾಗಿದೆ. ಇದನ್ನು ಈ ಪ್ರದೇಶಗಳಲ್ಲಿ ೫,೦೦೦ಕ್ಕೂ ಹೆಚ್ಚಿನ ವರ್ಷಗಳಿಂದ ಬೆಳೆಯಲಾಗುತ್ತಿದೆ.[ಸೂಕ್ತ ಉಲ್ಲೇಖನ ಬೇಕು]
ವ್ಯುತ್ಪತ್ತಿ
[ಬದಲಾಯಿಸಿ]ಬ್ಯಾಸಿಲ್ (ತುಳಸಿ) ಎಂಬ ಪದವು ಗ್ರೀಕ್ ನ βασιλεύς(ಬೆಸಿಲಿಯಸ್ )ನಿಂದ ವ್ಯುತ್ಪತ್ತಿ ಹೊಂದಿದೆ, ಇದು "ರಾಜ" ಎಂಬ ಅರ್ಥವನ್ನು ನೀಡುತ್ತದೆ, ಏಕೆಂದರೆ ಇದು St. ಕಾಂಸ್ಟ್ಯಾಟಿನ್ ಹಾಗು ಹೆಲೆನ್, ಅವರು ಪತ್ತೆ ಮಾಡಿದಾಗ ಪವಿತ್ರ ಶಿಲುಬೆಯ ಮೇಲ್ಭಾಗದಲ್ಲಿ ಕಂಡುಬಂದಿತೆಂದು ಪರಿಗಣಿಸಲಾಗುತ್ತದೆ. ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು , ತುಳಸಿಯು "ಕೆಲವು ಉತ್ತಮ ದರ್ಜೆಯ ಮುಲಾಮ, ಸ್ನಾನಕ್ಕಾಗಿ ಅಥವಾ ಔಷಧವನ್ನಾಗಿ" ಬಳಸಲಾಗುತ್ತಿತ್ತೆಂದು ತನ್ನ ಊಹೆಯನ್ನು ಉಲ್ಲೇಖಿಸಿದೆ. ಹಲವು ಪಾಕಶಾಸ್ತ್ರ ಲೇಖಕರು ಇಂದಿಗೂ ತುಳಸಿಯನ್ನು "ಸಸ್ಯಗಳ ರಾಜನೆಂದು" ಪರಿಗಣಿಸುತ್ತಾರೆ.[who?]
ಪರಿಭಾಷೆ ಹಾಗು ಜೀವಿವರ್ಗೀಕರಣಶಾಸ್ತ್ರ
[ಬದಲಾಯಿಸಿ]This section needs expansion. You can help by adding to it. (June 2009) |
ಜಾತಿಗಳು
[ಬದಲಾಯಿಸಿ]ತುಳಸಿ ಜಾತಿಗಳನ್ನು ಹೆಸರಿಸುವುದು ಸಾಮಾನ್ಯವಾಗಿ ಅನೌಪಚಾರಿಕವಾಗಿರುತ್ತದೆ. ಸಾಮಾನ್ಯ ಹೆಸರಿನಿಂದ ಕರೆಯಲ್ಪಡುವ ಹಲವು ವಿವಿಧ ಜಾತಿಗಳನ್ನು ಹರ್ಬ್ ಕಾಟೇಜ್ ಬ್ಯಾಸಿಲ್ ಪುಟ Archived 19 March 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ದಲ್ಲಿ ಪಟ್ಟಿ ಮಾಡಲಾಗಿದೆ.
ಅಡುಗೆಯಲ್ಲಿ ಬಳಕೆ
[ಬದಲಾಯಿಸಿ]ತಯಾರಾದ ಅಡುಗೆಯಲ್ಲಿ ತುಳಸಿಯನ್ನು ಸಾಮಾನ್ಯವಾಗಿ ತಾಜಾ ಆಗಿ ಬಳಸಲಾಗುತ್ತದೆ. ಇದನ್ನು ಸಾಧಾರಣವಾಗಿ ಕೊನೆಯ ಕ್ಷಣದಲ್ಲಿ ಸೇರಿಸಲಾಗುತ್ತದೆ, ಏಕೆಂದರೆ ಬೇಯುವಾಗ ಇದನ್ನು ಹಾಕಿದರೆ ಇದು ತಕ್ಷಣವೇ ತನ್ನ ಸ್ವಾದ ಕಳೆದುಕೊಳ್ಳುತ್ತದೆ. ತಾಜಾ ಸಸ್ಯವನ್ನು ಕುಡಿಯುವ ನೀರಿನಲ್ಲಿ ತಕ್ಷಣವೇ ಶುದ್ದೀಕರಣದ, ಬಿಳಿಚಿಸಿದ ನಂತರ ಒಂದು ಪ್ಲ್ಯಾಸ್ಟಿಕ್ ಚೀಲದಲ್ಲಿರಿಸಿ ಕೆಲ ದಿನಗಳ ಮಟ್ಟಿಗೆ ರೆಫ್ರಿಜರೇಟರ್ ನಲ್ಲಿ ಸಂಗ್ರಹಿಸಬಹುದು, ಅಥವಾ ಫ್ರೀಜರ್ ನಲ್ಲಿ ದೀರ್ಘಾವಧಿಯವರೆಗೆ ಸಂಗ್ರಹಿಸಬಹುದು. ಒಣಗಿದ ಸಸ್ಯವೂ ಸಹ ತನ್ನ ಹೆಚ್ಚಿನ ಕಂಪನ್ನು ಕಳೆದುಕೊಳ್ಳುತ್ತದೆ. ಅಲ್ಲದೇ ಉಳಿದ ಸ್ವಲ್ಪಮಟ್ಟಿಗಿನ ಕಂಪು ಬೇರೆ ರೀತಿಯ ಸ್ವಾದ ನೀಡುತ್ತದೆ, ಇದು ಒಣಹುಲ್ಲಿನ ಮಾದರಿಯ ಸತ್ತ್ವಹೀನ ಕೂಮರಿನ್('ಟಾನ್ಕ' ಬೀಜದಲ್ಲಿರುವ ಸುಗಂಧ ದ್ರವ್ಯಗಳ ಮತ್ತು ಸಾಬೂನಿನ ತಯಾರಿಕೆಯಲ್ಲಿ ಬಳಸುವ, ೧,೨ ಬೆಂಸೋಪೈರೋನ್ ಎಂಬ ಸಾವಯವ ಸಂಯುಕ್ತ)ಪರಿಮಳ ನೀಡುತ್ತದೆ.
ತುಳಸಿ-ಒಂದು ಹಸಿರು ಇಟಾಲಿಯನ್ ತೈಲ-ಹಾಗು ಸಸ್ಯದ ಸಾಸ್ ಪೆಸ್ಟೋನ ಪ್ರಮುಖ ಪದಾರ್ಥವಾಗಿದೆ. ಇದನ್ನು ಒಳಗೊಂಡಿರುವ ಇತರ ಎರಡು ಪ್ರಮುಖ ಪದಾರ್ಥಗಳೆಂದರೆ ಆಲಿವ್ ಎಣ್ಣೆ ಹಾಗು ಪೈನ್ ಬೀಜಕೋಶಗಳು.
ಸಾಮಾನ್ಯವಾಗಿ ಬಳಕೆಯಾಗುವ ಮೆಡಿಟರೇನಿಯನ್ ತುಳಸಿ ತಳಿಗಳಲ್ಲಿ "ಜೆನೊವೆಸೆ", "ಪರ್ಪಲ್ ರಫಲ್ಸ್", "ಮ್ಯಾಮೊಥ್", "ಸಿನಾಮನ್", "ಲೆಮನ್" "ಗ್ಲೋಬ್", ಹಾಗು "ಆಫ್ರಿಕನ್ ಬ್ಲೂ"ಗಳು ಸೇರಿವೆ. ಚೈನೀಸರೂ ಸಹ ಸೂಪುಗಳು ಹಾಗೂ ಇತರ ಪದಾರ್ಥಗಳಲ್ಲಿ ತಾಜಾ ಅಥವಾ ಒಣಗಿದ ತುಳಸಿಯನ್ನು ಬಳಸುತ್ತಾರೆ. ತೈವಾನಿನಲ್ಲಿ, ಗಟ್ಟಿಯಾದ ಸೂಪುಗಳಿಗೆ ಜನರು ತುಳಸಿಯ ತಾಜಾ ಎಲೆಗಳನ್ನು ಸೇರಿಸುತ್ತಾರೆ (Chinese: 羹湯; pinyin: gēngtāng). ಇವರು ಫ್ರೈಡ್ ಚಿಕನ್ ನನ್ನು ಕರಿದ ತುಳಸಿ ಎಲೆಗಳೊಂದಿಗೆ ಸೇವಿಸುತ್ತಾರೆ. ತುಳಸಿಯನ್ನು(ಸಾಮಾನ್ಯವಾಗಿ ಥೈ ತುಳಸಿ)ಸಾಮಾನ್ಯವಾಗಿ ಕೆನೆ ಅಥವಾ ಹಾಲಿನಲ್ಲಿ ನೆನೆಸುತ್ತಾರೆ. ಇದು ಐಸ್ ಕ್ರೀಮ್ ಅಥವಾ ಚಾಕೊಲೆಟ್ ಗಳಿಗೆ ವಿಶಿಷ್ಟ ಸುವಾಸನೆ ನೀಡುತ್ತದೆ. (ಉದಾಹರಣೆಗೆ ಟ್ರಫಲ್ ಗಳು)
ಥೈ ತುಳಸಿಯು, ವಿಯೆಟ್ನಾಮಿನ ನೂಡಲ್ ಸೂಪ್, ಫೋ ನ ಒಂದು ಜನಪ್ರಿಯ ವ್ಯಂಜನವಾಗಿದೆ.
ತುಳಸಿ ಬೀಜಗಳು
[ಬದಲಾಯಿಸಿ]ನೀರಿನಲ್ಲಿ ನೆನೆಸಿಟ್ಟಾಗ, ತುಳಸಿ ಜಾತಿಯ ಹಲವಾರು ಬೀಜಗಳು ಜೆಲಟಿನ್ ಪೂರಿತವಾಗುತ್ತವೆ, ಹಾಗೂ ಇವುಗಳನ್ನು ಫಾಲೂಡ ಅಥವಾ ಶರಬತ್ ನಂತಹ ಏಶಿಯನ್ ಪೇಯಗಳಲ್ಲಿ ಹಾಗು ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ. ಇಂತಹ ಬೀಜಗಳನ್ನು ವಿವಿಧವಾಗಿ ಸಬ್ಜ , ಸುಬ್ಜ , ಟಕ್ಮರಿಯಾ , ಟುಕ್ಮರಿಯಾ , ತುಖಮರಿಯಾ , ಫಾಲೂಡ , ಸೆಲಸಿಹ್ (ಮಲಯ್/ಇಂಡೋನೆಶಿಯನ್) ಅಥವಾ ಹಾಟ್ ಎ (ವಿಯೆಟ್ನಾಮೀಸ್) ಎಂದು ಕರೆಯಲಾಗುತ್ತದೆ. ಇವುಗಳಲ್ಲಿರುವ ಔಷಧೀಯ ಗುಣಗಳಿಂದಾಗಿ ಇವುಗಳನ್ನು ಭಾರತದ ಸಾಂಪ್ರದಾಯಿಕ ಔಷಧ ಪ್ರಕಾರವಾದ ಆಯುರ್ವೇದದಲ್ಲಿ ಹಾಗು ತಮಿಳಿನ ಸಾಂಪ್ರದಾಯಿಕ ಔಷಧ ಪ್ರಕಾರವಾದ ಸಿದ್ದ ಔಷಧದಲ್ಲಿ ಬಳಸಲಾಗುತ್ತದೆ. ಈಶಾನ್ಯ ಏಷಿಯಾದಲ್ಲಿ ಇದನ್ನು ಜನಪ್ರಿಯ ಪೇಯವಾಗಿಯೂ ಸಹ ಬಳಸುತ್ತಾರೆ.
ಇತರ ತುಳಸಿ ಪ್ರಬೇಧಗಳು
[ಬದಲಾಯಿಸಿ]ಕೆಲವು ಇತರ ಒಸಿಮಮ್ ಜಾತಿಗಳನ್ನು ಒಳಗೊಂಡಂತೆ ಹಲವಾರು ಇತರ ತುಳಸಿ ಜಾತಿಗಳನ್ನು ಏಷಿಯಾದ ಹಲವು ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಹಲವು ಏಶಿಯನ್ ತುಳಸಿಗಳು ಲವಂಗದ ಮಾದರಿಯ ಸುಗಂಧವನ್ನು ಹೊಂದಿರುತ್ತವೆ, ಈ ಜಾತಿ ಸಸ್ಯವು ಸಾಮಾನ್ಯವಾಗಿ ಮೆಡಿಟರೇನಿಯನ್ ತುಳಸಿಗಿಂತ ಗಾಢ ಸುಗಂಧ ಹೊಂದಿರುತ್ತದೆ. ಇದರಲ್ಲಿ ಗಮನಾರ್ಹವಾದುದೆಂದರೆ ಪವಿತ್ರ ತುಳಸಿ ಅಥವಾ ತುಳಸಿ, ಭಾರತ ಹಾಗು ನೇಪಾಳದಲ್ಲಿ ಮನೆ ಮನೆಗಳಲ್ಲಿ ಬೆಳೆಯಲಾಗುವ ಪವಿತ್ರ ಸಸ್ಯ. ಚೀನಾದಲ್ಲಿ, ಸ್ಥಳೀಯ ತಳಿಯನ್ನು (Chinese: 九層塔; pinyin: jiǔ-céng-tǎ; literally "nine-level pagoda") ಎಂದು ಕರೆಯಲಾಗುತ್ತದೆ, ಆಮದು ಮಾಡಿಕೊಂಡ ಜಾತಿಗಳನ್ನು (Chinese: 羅勒; pinyin: luó-lè) ಅಥವಾ(Chinese: 巴西里; pinyin: bā-xī-lǐ) ಎಂದು ಕರೆಯಲಾಗುತ್ತದೆ; ಆದಾಗ್ಯೂ [巴西里] ಸಾಮಾನ್ಯವಾಗಿ ವಿವಿಧ ಸಸ್ಯವಾದ ಪಾರ್ಸ್ಲಿ ಜರಿಗಿಡಕ್ಕೆ ಸೂಚಿತವಾಗುತ್ತದೆ.
ನಿಂಬೆ ತುಳಸಿಯು ಇತರ ಜಾತಿಗಳಿಗಿಂತ ಭಿನ್ನವಾಗಿ ಗಾಢವಾದ ನಿಂಬೆಯ ಸುವಾಸನೆ ಹಾಗೂ ರುಚಿಯನ್ನು ಹೊಂದಿರುತ್ತದೆ. ಏಕೆಂದರೆ ಇದು ಸಿಟ್ರಲ್ ಎಂಬ ರಾಸಾಯನಿಕ ಹೊಂದಿರುತ್ತದೆ. ಇದನ್ನು ಇಂಡೋನೇಶಿಯಾದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಲ್ಲಿ ಇದನ್ನು ಕೆಮಂಗಿ ಎಂದು ಕರೆಯಲಾಗುತ್ತದೆ. ಅಲ್ಲದೇ ಕರಿದ ಮೀನು ಹಾಗು ಬಾತುಕೋಳಿಯ ಬೇಯಿಸಿದ ಮಾಂಸದ ಜೊತೆಯಲ್ಲಿ ಇದನ್ನು ಹಸಿಯಾದ ಕೋಸು, ಹಸಿರು ಬಟಾಣಿ ಹಾಗು ಸೌತೆಕಾಯಿಯೊಂದಿಗೆ ಹಸಿಯಾಗಿ ಬಡಿಸಲಾಗುತ್ತದೆ.
ರಾಸಾಯನಿಕ ಅಂಶಗಳು
[ಬದಲಾಯಿಸಿ]ತುಳಸಿಯ ವಿವಿಧ ಜಾತಿಗಳು ವಿವಿಧ ಪರಿಮಳ ಹೊಂದಿರುತ್ತವೆ, ಏಕೆಂದರೆ ಸಸ್ಯವು ವಿವಿಧ ಸಾರ ತೈಲಗಳನ್ನು ಒಳಗೊಂಡಿರುತ್ತದೆ, ಇದು ವಿವಿಧ ತಳಿಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿರುತ್ತದೆ. ಸಿಹಿ ತುಳಸಿಯಲ್ಲಿರುವ ಗಾಢವಾದ ಲವಂಗದ ಪರಿಮಳವು ಯುಜೆನೋಲ್ ನಿಂದ ಬರುತ್ತದೆ. ಇದು ಲವಂಗಕ್ಕಿರುವ ಅದೇ ತರಹದ ರಾಸಾಯನಿಕದ ಪರಿಮಳವಾಗಿದೆ[ಸೂಕ್ತ ಉಲ್ಲೇಖನ ಬೇಕು]. ನಿಂಬೆ ತುಳಸಿಯ ಸಿಟ್ರಸ್ ಪರಿಮಳ ಹಾಗು ನಿಂಬೆ ತುಳಸಿಗೆ ಕಾರಣ ಅಧಿಕ ಪ್ರಮಾಣದ ಸಿಟ್ರಲ್, ಈ ಪ್ರಭಾವವು ಹಲವಾರು ಸಸ್ಯಗಳನ್ನು ಒಳಗೊಂಡಂತೆ ನಿಂಬೆ ಪುದೀನಾ, ಹಾಗು ಲಿಮೊನೆನೆಯಲ್ಲಿ ಕಂಡುಬರುತ್ತದೆ, ಇದು ವಾಸ್ತವವಾಗಿ ನಿಂಬೆಯ ಸಿಪ್ಪೆಗೆ ತನ್ನ ಪರಿಮಳವನ್ನು ನೀಡುತ್ತದೆ. ಆಫ್ರಿಕನ್ ಬ್ಲೂ ತುಳಸಿಯು ಗಾಢವಾದ ಕರ್ಪೂರದ ಪರಿಮಳ ಹೊಂದಿರುತ್ತದೆ, ಏಕೆಂದರೆ ಇದು ಕರ್ಪೂರ ಹಾಗು ಕ್ಯಾಮ್ಫೆನೆ ಪರಿಮಳವನ್ನು ಅಧಿಕ ಪ್ರಮಾಣಗಳಲ್ಲಿ ಒಳಗೊಂಡಿರುತ್ತದೆ. ಲಿಕರಿಸ್(ಅತಿಮಧುರ)ತುಳಸಿಯು ಅನೆತೋಲ್ ಅನ್ನು ಒಳಗೊಂಡಿರುತ್ತದೆ, ಈ ರಾಸಾಯನಿಕವು ಆನಿಸ್ ಅತಿಮಧುರದ ಮಾದರಿಯ ಪರಿಮಳ ಬೀರುವಂತೆ ಮಾಡುತ್ತದೆ, ಅಲ್ಲದೇ ವಾಸ್ತವವಾಗಿ ಇದನ್ನು ಕೆಲವೊಂದು ಬಾರಿ "ಆನಿಸ್ ತುಳಸಿ" ಎಂದು ಕರೆಯಲಾಗುತ್ತದೆ.
ಪ್ರತಿಯೊಂದು ನಿರ್ದಿಷ್ಟ ತಳಿಗಳಲ್ಲಿರುವ ಪ್ರಮಾಣವನ್ನು ಅವಲಂಬಿಸಿ, ಹಲವು ತುಳಸಿ ಪ್ರಬೇಧಗಳಿಗೆ ವಿಶಿಷ್ಟ ಪರಿಮಳವನ್ನು ಉಂಟುಮಾಡುವಲ್ಲಿ ಸಹಾಯಕವಾಗಿರುವ ಇತರ ರಾಸಾಯನಿಕಗಳಲ್ಲಿ,[ಸೂಕ್ತ ಉಲ್ಲೇಖನ ಬೇಕು]:
- ಸಿಟ್ರೋನೆಲ್ಲೋಲ್(ಪರಿಮಳಯುಕ್ತ ಜರೇನಿಯಂಗಳು(ಕೊಕ್ಕರೆಯ ಕೊಕ್ಕಿನಂತಹ ಹಣ್ಣು ಬಿಡುವ ಕಾಡು ಸಸ್ಯಗಳ ಒಂದು ಸಸ್ಯಕುಲ)), ಗುಲಾಬಿಗಳು, ಹಾಗು ಸಿಟ್ರೋನೆಲ್ಲ). [ಸೂಕ್ತ ಉಲ್ಲೇಖನ ಬೇಕು]
- ಲಿನಲೂಲ್[೧](ಕೊತ್ತಂಬರಿಯಲ್ಲಿಯೂ ಕಂಡುಬರುವ ಒಂದು ಬಗೆಯ ಹೂವಿನ ಪರಿಮಳ)
- ಮೈರ್ಸೇನೆ(ಬೇ ಎಲೆ, ಮೈರ್ಸಿಯ)[ಸೂಕ್ತ ಉಲ್ಲೇಖನ ಬೇಕು]
- ಪಿನೆನೆ(ಹೆಸರೇ ಸೂಚಿಸುವಂತೆ, ಪೈನ್ ತೈಲಕ್ಕೆ ಪರಿಮಳವನ್ನು ನೀಡುವ ರಾಸಾಯನಿಕ)
- ಒಸಿಮೆನೆ
- ಟರ್ಪಿನೋಲ್
- ಲಿನಲಿಲ್ ಆಸಿಟೇಟ್
- ಫೆಂಚಿಲ್ ಆಸಿಟೇಟ್
- ಟ್ರ್ಯಾನ್ಸ್-ಒಸಿಮೆನೆ
- ೧,೮-ಸಿನೆಯೋಲ್
- ಕ್ಯಾಮ್ಫರ್ ಆಕ್ಟನಾನೆ
- ಮೀಥೈಲ್ ಯುಜೆನೋಲ್
- ಯುಜೆನೋಲ್
- ಬೀಟಾ-ಕಾರ್ಯೋಫಿಲ್ಲೇನೆ
ರಾಸಾಯನಿಕ ಅಂಶವನ್ನು ಆಧರಿಸಿ, ತುಳಸಿಯನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು: ೧) ಫ್ರೆಂಚ್, ೨) ವಿಲಕ್ಷಣ ಸಸ್ಯ, ೩) ಮೀಥೈಲ್ ಸಿನ್ನಮೇಟ್ ಹಾಗು ೪) ಯುಜೆನೋಲ್ ತುಳಸಿ. ಮಾಲಿಗಳು ವಿಂಗಡಿಸುವ ಮಾದರಿಗೆ ಇದು ಸೇರ್ಪಡೆಯಾಗುವುದಿಲ್ಲ. ೧) ಫ್ರೆಂಚ್ ತುಳಸಿ; ಆಸಿಮಂ ಬೆಸಿಲಿಕಂ , ಇದು ಫೆನೋಲ್ ಗಳನ್ನೂ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತದೆ. ೨) ಇದು ಮೀಥೈಲ್ ಚವಿಕೋಲ್ ಅನ್ನು ಒಳಗೊಂಡಿರುತ್ತದೆ. (೪೦-೮೦%) ೩) ಮೀಥೈಲ್ ಸಿನ್ನಮೇಟ್ - ಈಥರ್ ೯೦% ಅನ್ನು ಒಳಗೊಂಡಿರುತ್ತದೆ. ೪) ಯುಜೆನೋಲ್ ಅನ್ನು ಒಳಗೊಂಡಿರುತ್ತದೆ.
ತುಳಸಿ ಹಾಗು ಆರಿಗಾನೋ(ಅಡುಗೆಗೆ ಬಳಸುವ, ಕಾಡು ಮಾರ್ಜರಂ ಸೊಪ್ಪು) ದೊಡ್ಡ ಪ್ರಮಾಣದಲ್ಲಿ (E)-ಬೀಟಾ-ಕಾರ್ಯೋಫಿಲ್ಲೇನೆ(BCP)ಯನ್ನು ಹೊಂದಿರುತ್ತವೆ. ಇದು ಪ್ರಚೋದಕ ಕರುಳಿನ ಕಾಯಿಲೆಗಳು ಹಾಗು ಸಂಧಿವಾತ ಗುಣಪಡಿಸುವಲ್ಲಿ ಸಹಾಯಕವಾಗಿದೆ. BCP, ನೈಸರ್ಗಿಕವಾಗಿ CB೨ವನ್ನು ಆಯ್ದುಕೊಳ್ಳುವ ಏಕೈಕ ಉತ್ಪನ್ನವೆಂದು ಗುರುತಿಸಲಾಗಿದೆ; ಇದು ಒಂದು ಅಥವಾ ಎರಡು ಕ್ಯಾನಬಿನಾಯ್ಡ್ ಗ್ರಾಹಕಗಳೊಂದಿಗೆ(CB೨) ಪರಸ್ಪರ ಪ್ರಭಾವ ಬೀರಿ, ಪ್ರಚೋದನೆಯನ್ನು ಉಂಟುಮಾಡುವ ರಾಸಾಯನಿಕ ಸಂಕೇತಗಳಿಗೆ ತಡೆಯೊಡ್ಡುತ್ತದೆ. ಇದು ಭಂಗಿ ಸೊಪ್ಪಿನಂತೆ ಚಿತ್ತ-ಚಂಚಲತೆಯ ಪರಿಣಾಮದ ಪ್ರಭಾವ ಬೀರುವುದಿಲ್ಲ.[೨]
ಸಾಗುವಳಿ (ಕೃಷಿ)
[ಬದಲಾಯಿಸಿ]ತುಳಸಿಯು 30–130 cmರಷ್ಟು ನಡುವಿನ ಎತ್ತರದಲ್ಲಿ ಬೆಳೆಯುವುದರ ಜೊತೆಗೆ, ಪರಸ್ಪರ ವಿರುದ್ಧವಾದ, ತೆಳು ಹಸಿರು, ರೇಷ್ಮೆಯಂತಹ ಎಲೆಗಳನ್ನು ಹೊಂದಿರುತ್ತದೆ. ಇದು 3–11 cmರಷ್ಟು ಉದ್ದ ಹಾಗು 1–6 cmರಷ್ಟು ಅಗಲವಿರುತ್ತದೆ. ಹೂಗಳು ಬಹಳ ಸಣ್ಣದಾಗಿದ್ದು, ಬಿಳಿ ಬಣ್ಣ ಹೊಂದಿರುತ್ತವೆ. ಅಲ್ಲದೇ ಅಗ್ರಸ್ಥ ಪುಷ್ಪಗುಚ್ಚದ ಮಾದರಿಯಲ್ಲಿ ಜೋಡಣೆಯಾಗಿರುತ್ತವೆ. ಲಾಮಿಯಾಸಿಯೆನಲ್ಲಿ ಅಸಾಧಾರಣವಾಗಿ, ನಾಲ್ಕು ಕೇಸರಗಳು ಹಾಗು ಶಲಾಕೆಯನ್ನು ದಳವೃತ್ತದ ಮೇಲ್ಭಾಗದಲ್ಲಿ ಚಾಚಿಕೊಂಡಿರುವುದಿಲ್ಲ, ಆದರೆ ಇವುಗಳು ಒಳಭಾಗದಲ್ಲಿ ಸುರುಟಿಕೊಂಡಿರುತ್ತವೆ. ಕೀಟಫಲಿತ ಪರಾಗಸ್ಪರ್ಶದ ನಂತರ, ದಳವೃತ್ತವು ಉದುರಿಹೊಗುತ್ತದೆ. ಅದಲ್ಲದೇ ನಾಲ್ಕು ಸುತ್ತಿನ ಅಕೀನ್ ಗಳು(ಒಂದೇ ಬೀಜವಿರುವ, ಗಟ್ಟಿಯಾದ ಒಣಹಣ್ಣು) ಎರಡು ತುಟಿಯ ಪುಷ್ಪಪಾತ್ರದ ಒಳಗೆ ಬೆಳವಣಿಗೆಯಾಗಿರುತ್ತವೆ.
ತುಳಸಿಯು ಸೂಕ್ಷ್ಮವಾಗಿರುವ ಕಾರಣ ತಂಪಾದ ವಾತಾವರಣಕ್ಕಿಂತ ಉಷ್ಣದ, ನಿರಾರ್ದ್ರ ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಹಿಮ ಬೀಳುವ ಸಂಭವವಿದ್ದರೆ ಇದು ವರ್ಷಕ್ಕೊಮ್ಮೆ ಬೆಳೆಯುತ್ತದೆ. ಉತ್ತರ ಯುರೋಪ್, ಕೆನಡಾ, ಯು.ಎಸ್.ನ ಉತ್ತರದ ರಾಜ್ಯಗಳಲ್ಲಿ, ಹಾಗು ನ್ಯೂಜಿಲ್ಯಾಂಡ್ ನ ಸೌತ್ ಐಲ್ಯಾಂಡ್ ನಲ್ಲಿ, ಗಾಜಿನಡಿಯ ಸಸ್ಯಾಂಗಾರದಲ್ಲಿ ಇದು ಉತ್ತಮವಾಗಿ ಬೆಳೆಯುತ್ತದೆ. ನಂತರ ಇದನ್ನು ವಸಂತ ಋತುವಿನ ಅಂತಿಮ ಅವಧಿಯಲ್ಲಿ/ಬೇಸಿಗೆ ಕಾಲದ ಆರಂಭದಲ್ಲಿ ಹೊರಗಡೆ ನೆಡಲಾಗುತ್ತದೆ.(ಕಡಿಮೆ ಹಿಮ ಬೀಳುವ ಸಂದರ್ಭದಲ್ಲಿ)[೩] ಇದರ ಜೊತೆಯಲ್ಲಿ, ಒಂದೊಮ್ಮೆ ಹಿಮ ಬೀಳುವುದು ನಿಂತ ನಂತರ ಇದನ್ನು ಮಣ್ಣಿನಲ್ಲಿ ನೆಡಬಹುದು. ಸೂರ್ಯನ ಬೆಳಕು ಬೀಳುವ ಒಣಗಿದ ಜಾಗದಲ್ಲಿ ಇದು ಉತ್ತಮವಾಗಿ ಬೆಳೆಯುತ್ತದೆ.
ತುಳಸಿಯು ಮನೆಯ ಹೊರಭಾಗದಲ್ಲಿ ಉತ್ತಮವಾಗಿ ಬೆಳೆದರೂ, ಇದನ್ನು ಮನೆಯ ಒಳಭಾಗದಲ್ಲಿ ಕುಂಡದಲ್ಲಿ ಬೆಳೆಸಬಹುದು, ಇದು ಸಮಭಾಜಕವೃತ್ತಕ್ಕೆ ನೇರವಾಗಿರುವ ಕಿಟಕಿಯ ಬಳಿ ಇರಿಸಿದರೆ ಉತ್ತಮವಾಗಿ ಬೆಳೆಯುತ್ತದೆ. ಇದನ್ನು ತೀವ್ರತರವಾದ ತಂಪನೆಯ ವಾತಾವರಣದಿಂದ ದೂರವಿರಿಸಬೇಕು, ಹಾಗು ಇದು ಸೂರ್ಯನ ತೀಕ್ಷ್ಣ ಬೆಳಕಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ, ಈ ರೀತಿಯಾಗಿ ಲಭ್ಯವಿದ್ದರೆ ಒಂದು ಹಸಿರುಮನೆ ಅಥವಾ ರೋ-ಕವರ್(ಸಾಲಾಗಿ ಜೋಡಿಸಿ ಮೇಲಿನಿಂದ ಮುಚ್ಚಲ್ಪಟ್ಟಿರುವುದು)ನಲ್ಲಿ ಬೆಳೆಸುವುದು ಉತ್ತಮ. ಆದಾಗ್ಯೂ, ಇವುಗಳನ್ನು ಫ್ಲೋರೋಸೆಂಟ್(ಪ್ರತಿದೀಪಕ) ಬೆಳಕಿನಡಿಯಲ್ಲಿ ನೆಲಮಾಳಿಗೆಯಲ್ಲೂ ಬೆಳೆಯಬಹುದಾಗಿದೆ.
ಇದರ ಎಲೆಗಳು ನೀರಿನ ಕೊರತೆಯಿಂದ ಬಾಡಿಹೋಗಿದ್ದರೆ, ಇದಕ್ಕೆ ಸಾಕಷ್ಟು ನೀರು ಹಾಯಿಸಿ ಸೂರ್ಯನ ಬೆಳಕಿನಲ್ಲಿರಿಸಿದರೆ ಇದು ಚೇತರಿಸಿಕೊಳ್ಳುತ್ತದೆ. ಸಸ್ಯದ ಕೆಳಭಾಗದಲ್ಲಿ ಕಂಡುಬರುವ ಹಳದಿ ಎಲೆಗಳು, ಸಸ್ಯವು ಒತ್ತಡಕ್ಕೊಳಪತ್ತಿರುವುದನ್ನು ಸೂಚಿಸುತ್ತದೆ; ಸಾಮಾನ್ಯವಾಗಿ ಇದು ಸಸ್ಯಕ್ಕೆ ನೀರಿನ ಅಗತ್ಯವು ಕಡಿಮೆಯಾಗಬೇಕೆಂಬುದನ್ನು, ಅಥವಾ ಹೆಚ್ಚು ಅಥವಾ ಕಡಿಮೆ ಗೊಬ್ಬರದ ಅವಶ್ಯಕತೆಯಿರುತ್ತದೆಂಬುದಕ್ಕೆ ಸೂಚಿತವಾಗಿದೆ.
ದಕ್ಷಿಣ ಯುರೋಪ್, ಯು.ಎಸ್.ನ ದಕ್ಷಿಣ ರಾಜ್ಯಗಳು, ನ್ಯೂಜಿಲ್ಯಾಂಡ್ ನ ನಾರ್ತ್ ಐಲ್ಯಾಂಡ್, ಹಾಗು ಆಸ್ಟ್ರೇಲಿಯಾದಂತಹ ಸೂರ್ಯನ ಬೆಳಕು ಹೆಚ್ಚಾಗಿರುವ ಪ್ರದೇಶದಲ್ಲಿ, ತುಳಸಿಯನ್ನು ಮನೆಯ ಹೊರಭಾಗದಲ್ಲಿ ನೆಟ್ಟರೆ ಹುಲುಸಾಗಿ ಬೆಳೆಯುತ್ತದೆ. ಮಧ್ಯ ಹಾಗು ಉತ್ತರ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿಯೂ ಸಹ ಇದು ಬೇಸಿಗೆಯಲ್ಲಿ ಹುಲುಸಾಗಿ ಬೆಳೆಯುತ್ತದೆ, ಆದರೆ ತಾಪಮಾನವು ಘನೀಕರಣ ಬಿಂದುವನ್ನು ಮುಟ್ಟಿದಾಗ ಗಿಡವು ಸಾಯುತ್ತದೆ. ಬೀಜವನ್ನು ಹಾಗೆಯೇ ಬಿಟ್ಟರೆ ಅದು ಮರುವರ್ಷ ಮತ್ತೆ ಬೆಳೆಯುತ್ತದೆ. ಇದಕ್ಕೆ ನಿಯಮಿತವಾಗಿ ನೀರುಣಿಸುವುದು ಅಗತ್ಯವಾಗಿದೆ, ಆದರೆ ಇತರ ವಾತಾವರಣದಲ್ಲಿ ಹರಿಸಬೇಕಾದಂತಹ ಗಮನ ಇಲ್ಲಿ ಅಗತ್ಯವಿರುವುದಿಲ್ಲ.
'ಬಿಜಿ ಲಿಜ್ಜಿ'ಯ(ಇಮ್ಪೆಟಿನ್ಸ್) ಮಾದರಿಯಂತೆ ನಿರ್ದಿಷ್ಟವಾಗಿ ಅದೇ ರೀತಿಯಲ್ಲಿ ತುಳಸಿಯನ್ನು ಕತ್ತರಿಸಿ ಸ್ವಾಭಾವಿಕವಾಗಿ ಮತ್ತೆ ಬೆಳೆಸಬಹುದು, ಕಾಂಡವನ್ನು ಸಣ್ಣದಾಗಿ ಕತ್ತರಿಸಿ ಎರಡು ವಾರಗಳ ಕಾಲ ಹಾಗೇ ಬಿಡಬಹುದು ಅಥವಾ ಬೇರುಗಳು ಅಭಿವೃದ್ಧಿಯಾಗುವವರೆಗೂ ನೀರು ಉಣಿಸಬಹುದು.
ಒಂದೊಮ್ಮೆ ಕಾಂಡದಿಂದ ಹೂ ಬಿಡಲು ಆರಂಭಗೊಂಡಾಗ, ಕಾಂಡದಲ್ಲಿ ಬಿಡುವ ಪರ್ಣಸಮೂಹದ ಉತ್ಪಾದನೆಯು ನಿಂತುಹೋಗುತ್ತದೆ; ಕಾಂಡವು ದಟ್ಟವಾಗುತ್ತದೆ, ಹಾಗು ಸಾರ ತೈಲದ ಉತ್ಪಾದನೆಯು ನಶಿಸಿಹೋಗುತ್ತದೆ. ಇದನ್ನು ತಡೆಗಟ್ಟುವ ಸಲುವಾಗಿ, ತುಳಸಿಯನ್ನು ಬೆಳೆಯುವ ಒಬ್ಬ ಕೃಷಿಕನು ಹೂವಿನ ಕಾಂಡವನ್ನು ಅದು ಪೂರ್ಣವಾಗಿ ಬೆಳೆಯುವ ಮುಂಚೆಯೇ ಚಿವುಟಿ ಹಾಕುತ್ತಾನೆ. ಏಕೆಂದರೆ ಕೇವಲ ಅರಳುತ್ತಿರುವ ಕಾಂಡಕ್ಕೆ ಮಾತ್ರ ಇದರಿಂದ ಪರಿಣಾಮ ಉಂಟಾಗುತ್ತದೆ, ಕೆಲವು ಕಾಂಡಗಳನ್ನು ಎಲೆಯ ಬೆಳವಣಿಗೆಗಾಗಿ ಚಿವುಟಿ ಹಾಕಲಾಗುತ್ತದೆ, ಆದರೆ ಇತರವುಗಳನ್ನು ಅಲಂಕಾರಕ್ಕಾಗಿ ಅಥವಾ ಬೀಜಗಳಿಗಾಗಿ ಅರಳಲು ಹಾಗೇ ಬಿಡಲಾಗುತ್ತದೆ.
ಒಂದೊಮ್ಮೆ ಸಸ್ಯಕ್ಕೆ ಹೂ ಬಿಡಲು ಅವಕಾಶ ನೀಡಿದಾಗ, ಇದು ಕಪ್ಪು ಬೀಜಗಳನ್ನೊಳಗೊಂಡ ಬೀಜ ಕೋಶಗಳನ್ನು ಉತ್ಪಾದಿಸಬಹುದು, ಇದನ್ನು ಹಾಗೇ ಸಂರಕ್ಷಿಸಿ ಮತ್ತೆ ಮುಂದಿನ ವರ್ಷ ನೆಡಬಹುದು. ಗಿಡದಿಂದ ಎಲೆಗಳನ್ನು ಕೀಳುವುದರಿಂದ ಅದರ "ಬೆಳವಣಿಗೆಗೆ ಸಹಾಯ" ಮಾಡಿದಂತಾಗುತ್ತದೆ, ಇದಕ್ಕೆ ಮುಖ್ಯ ಕಾರಣ, ಮೇಲ್ಭಾಗದ ಎಲೆಗಳ ಪಕ್ಕದಲ್ಲಿರುವ ಪರ್ಣಕಗಳ ಜೋಡಿಯನ್ನು ಹೊಸ ಕಾಂಡಗಳಾಗಿ ಮಾರ್ಪಡಿಸುವ ಮೂಲಕ ಸಸ್ಯವು ಪ್ರತಿಕ್ರಿಯೆ ನೀಡುತ್ತದೆ.
ಒಡನಾಡಿ ಸಸ್ಯ ನೆಡುವಿಕೆ
[ಬದಲಾಯಿಸಿ]ತುಳಸಿಯನ್ನು ಟೋಮೋಟೋ ಗಿಡದ ಪಕ್ಕದಲ್ಲಿ ನೆಟ್ಟರೆ, ಅದು ಟೋಮೋಟೋಗಳ ಸ್ವಾದವನ್ನು ಬದಲಾಯಿಸುತ್ತದೆಂದು ಪತ್ತೆ ಮಾಡಲಾಗಿದೆ.[೪]
ರೋಗಗಳು
[ಬದಲಾಯಿಸಿ]ತುಳಸಿಯು ಹಲವಾರು ಸಸ್ಯ ರೋಗಕಾರಕಗಳಿಂದ ನರಳುತ್ತದೆ; ಕೆಲವು ರೋಗಕಾರಕ ಕೀಟಗಳು ಸಸ್ಯವನ್ನು ಹಾಳುಮಾಡುವುದರ ಜೊತೆಗೆ ಇಳುವರಿಯನ್ನು ಕಡಿಮೆ ಮಾಡುತ್ತವೆ. ಫುಸರಿಯಂ ವಿಲ್ಟ್ ಎಂಬುದು ಮಣ್ಣಿನಿಂದ ಉಂಟಾಗುವ ಒಂದು ಶಿಲೀಂಧ್ರ ರೋಗವಾಗಿದೆ, ಇದು ಎಳೆ ತುಳಸಿ ಸಸಿಗಳನ್ನು ಶೀಘ್ರವೇ ನಾಶಮಾಡುತ್ತದೆ. ಎಳೆ ಸಸಿಗಳು ಪೈಥಿಯಂ ನ ನಿರಾರ್ದ್ರತೆಯಿಂದಲೂ ಸಾಯಬಹುದು.
ತುಳಸಿಗೆ ತಗಲುವ ಒಂದು ಸಾಮಾನ್ಯವಾದ ಪರ್ಣೀಯ ರೋಗವೆಂದರೆ ಗ್ರೇ-ಮೋಲ್ಡ್, ಇದು ಬೋಟ್ರೈಟಿಸ್ ಸಿನೇರಿಯ ದಿಂದ ಉಂಟಾಗುತ್ತದೆ; ಇದು ಫಸಲು ಸಂಗ್ರಹದ ನಂತರವೂ ಸಹ ಸೋಂಕನ್ನು ಉಂಟುಮಾಡಬಹುದು, ಹಾಗು ಇದು ಸಂಪೂರ್ಣ ಗಿಡವನ್ನು ನಾಶಮಾಡುವ ಸಾಮರ್ಥ್ಯ ಹೊಂದಿರುತ್ತದೆ. ತುಳಸಿಯ ಪರ್ಣಸಮೂಹದ ಮೇಲೆ ಕಪ್ಪು ಕಲೆಗಳೂ ಸಹ ಕಂಡುಬರುತ್ತವೆ. ಅಲ್ಲದೇ ಇದು ಶಿಲೀಂಧ್ರ ವರ್ಗದ ಕಾಲೇಟೋಟ್ರಿಚುಮ್ ನಿಂದ ಉಂಟಾಗುತ್ತದೆ.
ಆರೋಗ್ಯದ ಮೇಲಾಗುವ ಪರಿಣಾಮ
[ಬದಲಾಯಿಸಿ]ಇತ್ತೀಚಿಗೆ, ತುಳಸಿಯಲ್ಲಿ ಪತ್ತೆಯಾಗುವ ಸಾರ ತೈಲಗಳು ಉಂಟುಮಾಡುವ ಆರೋಗ್ಯದ ಅನುಕೂಲಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ವೈಜ್ಞಾನಿಕ ಅಧ್ಯಯನಗಳು ತುಳಸಿ ಎಣ್ಣೆಯಲ್ಲಿರುವ ಸಂಯುಕ್ತಗಳು ತೀಕ್ಷ್ಣವಾದ ವಿಷಕಾರಕಗಳ ವಿರುದ್ದ ಆಕ್ಸಿಡೀಕರಣ ಪ್ರತಿರೋಧಕ, ಕ್ಯಾನ್ಸರ್ ಪ್ರತಿರೋಧಕ, ರೋಗಕಾರಕ ಸೂಕ್ಷ್ಮಜೀವಿ ಪ್ರತಿರೋಧಕ ಹಾಗು ಸೂಕ್ಷ್ಮಜೀವಿ ಪ್ರತಿರೋಧಕ ಅಂಶಗಳನ್ನು ಹೊಂದಿವೆಯೆಂದು ದೃಢಪಡಿಸಿವೆ.[೫][೬][೭][೮] ಇದರ ಜೊತೆಯಲ್ಲಿ, ತುಳಸಿಯು ಕಿರುಬಿಲ್ಲೆ ಜೀವಿಗಳು ಒಗ್ಗೂಡುವುದನ್ನು ಹಾಗು ಇಲಿಗಳಲ್ಲಿ ಗರಣೆಯನ್ನು ತಗ್ಗಿಸುತ್ತದೆಂದು ಪ್ರಾಯೋಗಿಕವಾಗಿ ದೃಢಪಟ್ಟಿದೆ.[೯] ಇದನ್ನು ಸಾಂಪ್ರದಾಯಿಕವಾಗಿ ಒತ್ತಡ, ಆಸ್ತಮಾ ಹಾಗು ಮಧುಮೇಹಕ್ಕೆ ಪೂರಕ ಚಿಕಿತ್ಸೆಯಾಗಿ ಭಾರತದಲ್ಲಿ ನೀಡಲಾಗುತ್ತದೆ.[೧೦] ಸಿದ್ಧೌಷಧದಲ್ಲಿ, ಇದನ್ನು ಮುಖದಲ್ಲಿ ಉಂಟಾಗುವ ಮೊಡವೆಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಆದರೆ ಇದರ ಬೀಜಗಳನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಇದು ಮಿದುಳಿಗೆ ಹಾನಿಕರವೆಂದು ಗಮನಿಸಲಾಗಿದೆ[ಸೂಕ್ತ ಉಲ್ಲೇಖನ ಬೇಕು].
ತುಳಸಿ, ಫೆನಲ್(ಹಳದಿ ಹೂಬಿಡುವ, ಸುವಾಸನಾಯುಕ್ತ ಸೊಂಪಿನ ಗಿಡ) ಹಾಗು ಟ್ಯಾರಗನ್(ಒಂದು ಪೊದೆ ಸಸ್ಯ) ನಂತಹ ಇತರ ಸುವಾಸನಾಯುಕ್ತ ಸಸ್ಯದ ಮಾದರಿಯಲ್ಲಿ, ಎಸ್ಟ್ರಗೋಲ್ ನ್ನು ಒಳಗೊಂಡಿರುತ್ತದೆ, ಇದು ಮೂಷಕ ಹಾಗು ಇಲಿಗಳಲ್ಲಿ ಕಂಡುಬರುವ ಒಂದು ಪರಿಚಿತ ಕ್ಯಾನ್ಸರ್ ಜನಕ ಹಾಗು ವಿರೂಪಜನಕವಾಗಿದೆ. ಮಾನವನ ಮೇಲೆ ಇದು ಬೀರುವ ಪರಿಣಾಮದ ಬಗ್ಗೆ ಪ್ರಸಕ್ತದಲ್ಲಿ ಅಧ್ಯಯನ ಮಾಡಿರದಿದ್ದರೂ, ದಂಶಕಗಳ ದೇಹದ ತೂಕವನ್ನು ಅವಲಂಬಿಸಿ ನಡೆಸಲಾದ ಪ್ರಯೋಗದ ಅಂದಾಜು, ಸಾಧಾರಣವಾಗಿ ಮುಂಗಾಣಲಾದ ಒಡ್ಡಿಕೆಯಿಂದ ಇದು ಬಹುಶಃ ಕ್ಯಾನ್ಸರ್ ನ ಅಪಾಯವನ್ನು ೧೦೦–೧೦೦೦ ಬಾರಿ ತಗ್ಗಿಸುತ್ತದೆಂದು ಸೂಚಿಸುತ್ತದೆ.[೧೧]
ಸಾಂಸ್ಕೃತಿಕ ಅಂಶಗಳು
[ಬದಲಾಯಿಸಿ]ತುಳಸಿಯೊಂದಿಗೆ ತಳಕು ಹಾಕಿಕೊಂಡಿರುವ ಹಲವಾರು ಆಚರಣೆಗಳು ಹಾಗು ನಂಬಿಕೆಗಳಿವೆ. ಫ್ರೆಂಚರು ಕೆಲವೊಂದು ಬಾರಿ ತುಳಸಿಯನ್ನು "ಲ'ಹರ್ಬೆ ರೊಯಾಲ್ " ಎಂದು ಕರೆಯುತ್ತಿದ್ದರು, ವೆಲ್ಷ್ ಭಾಷೆಯಲ್ಲಿ ಇದು "ಬ್ರೆನ್ ಹಿನ್ಲ್ಲ್ಯಸ್ " ಎಂಬ ಸಮಾನಾರ್ಥಕ ಪದವನ್ನು ಹೊಂದಿದೆ[ಸೂಕ್ತ ಉಲ್ಲೇಖನ ಬೇಕು]. ಜೂಯಿಶ್ ಜನಪದ ಕಥೆಗಳು, ಉಪವಾಸವಿರುವಾಗ ಇದನ್ನು ಸೇವಿಸಿದರೆ ಇದು ಬಲವನ್ನು ನೀಡುತ್ತದೆಂದು ಸೂಚಿಸುತ್ತವೆ [ಸೂಕ್ತ ಉಲ್ಲೇಖನ ಬೇಕು]. ಇಂದಿನ ಇಟಲಿಯಲ್ಲಿ ಇದು ಪ್ರೀತಿಯ ಸಂಕೇತವಾಗಿದೆ, ಪೋರ್ಚುಗಲ್ ನಲ್ಲಿ ತುಳಸಿಯ ಕುಬ್ಜ ಪೊದೆಯನ್ನು ಸಾಂಪ್ರದಾಯಿಕವಾಗಿ ಕುಂಡದಲ್ಲಿ ಒಂದು ಕವನ ಹಾಗು ಪಾಂಪಾನ್(ಚಿಕ್ಕ ಒತ್ತುದಳಗಳ ಸೇವಂತಿಗೆ ಅಥವಾ ಡಾಲಿಯ)ನೊಂದಿಗೆ, ಸಂತ ಜಾನ್ ಹಾಗು ಸಂತ ಅಂತೋನಿಯವರ ಧಾರ್ಮಿಕ ಜಯಂತಿಯ ದಿನಗಳಲ್ಲಿ ಪ್ರೀತಿಪಾತ್ರರಿಗೆ ಕಾಣಿಕೆ ನೀಡಲಾಗುತ್ತದೆ. ಆದಾಗ್ಯೂ, ತುಳಸಿಯು ಪ್ರಾಚೀನ ಗ್ರೀಸ್ ನಲ್ಲಿ ದ್ವೇಷವನ್ನು ಪ್ರತಿನಿಧಿಸುತ್ತದೆ, ಹಾಗು ಯುರೋಪಿಯನ್ ಸಂಪ್ರದಾಯಗಳು ಕೆಲವೊಂದು ಬಾರಿ ತುಳಸಿಯು ದೈವವೈರಿ,ಸೇಟನ್ ನ ಸಂಕೇತವೆಂದು ವಾದಿಸುತ್ತದೆ. ಆಫ್ರಿಕನ್ ಪುರಾಣವು, ತುಳಸಿಯು ಚೇಳುಗಳಿಂದ ರಕ್ಷಣೆ ನೀಡುತ್ತದೆಂದು ವಾದಿಸುತ್ತದೆ, ಇಂಗ್ಲಿಷ್ ಸಸ್ಯವಿಜ್ಞಾನಿ ಕಲ್ಪೆಪರ್,"ಹಿಲರಿಯಸ್, ಒಬ್ಬ ಫ್ರೆಂಚ್ ವೈದ್ಯ" ತುಳಸಿಯನ್ನು ಹೆಚ್ಚಾಗಿ ಆಘ್ರಾಣಿಸುವುದರಿಂದ ಮಿದುಳಿನಲ್ಲಿ ಚೇಳುಗಳು ಹುಟ್ಟಿಕೊಳ್ಳುತ್ತವೆಂಬ ಸಾಮಾನ್ಯ ಜ್ಞಾನವನ್ನು ದೃಢಪಡಿಸಿದ್ದರ ಬಗ್ಗೆ ಉಲ್ಲೇಖಿಸುತ್ತಾನೆ.
ಪವಿತ್ರ ತುಳಸಿಯನ್ನು, ತುಳಸಿ ಎಂದೂ ಸಹ ಕರೆಯಲಾಗುತ್ತದೆ, ಇದು ಹಿಂದೂಧರ್ಮದಲ್ಲಿ ಹೆಚ್ಚು ಪವಿತ್ರವೆಂದು ಪರಿಗಣಿಸಲಾಗಿದೆ. ಅಲ್ಲದೇ ಗ್ರೀಕ್ ಆರ್ತೋಡಾಕ್ಸ್ ಚರ್ಚ್ ನಲ್ಲಿ ಧಾರ್ಮಿಕ ಮಹತ್ವವನ್ನು ಪಡೆದಿದೆ, ಅಲ್ಲಿ ಇದನ್ನು ಪವಿತ್ರ ತೀರ್ಥವನ್ನು ಸಿದ್ಧಪಡಿಸಲು ಬಳಸಲಾಗುತ್ತದೆ. ಇದು ಕ್ರಿಸ್ತರ ಪುನರುತ್ಥಾನದ ನಂತರ ಅವರ ಸಮಾಧಿಯ ಸುತ್ತ ಪತ್ತೆಯಾಯಿತೆಂದು ಹೇಳಲಾಗುತ್ತದೆ. ಬಲ್ಗೇರಿಯನ್ ಆರ್ತೋಡಾಕ್ಸ್ ಚರ್ಚ್, ಸರ್ಬಿಯನ್ ಆರ್ತೋಡಾಕ್ಸ್ ಚರ್ಚ್, ಮ್ಯಾಸಿಡೋನಿಯನ್ ಆರ್ತೊಡಾಕ್ಸ್ ಚರ್ಚ್ ಹಾಗು ರೊಮೇನಿಯನ್ ಆರ್ತೋಡಾಕ್ಸ್ ಚರ್ಚ್ ತುಳಸಿಯನ್ನು (ಬಲ್ಗೇರಿಯನ್ ಹಾಗು ಮ್ಯಾಸೆಡೋನಿಯನ್: босилек ; ರೊಮೇನಿಯನ್: ಬುಸುಯಿಯೋಕ್ , ಸರ್ಬಿಯನ್:босиљак ) ಪವಿತ್ರ ತೀರ್ಥವನ್ನು ತಯಾರಿಸಲು ಬಳಸುತ್ತವೆ. ಅಲ್ಲದೇ ತುಳಸಿಯ ಕುಂಡಗಳನ್ನು ಸಾಮಾನ್ಯವಾಗಿ ಚರ್ಚಿನ ನಿವೇದನಾಪೀಠದ ಕೆಳಗೆ ಇರಿಸಲಾಗುತ್ತದೆ.
ಯುರೋಪಿನಲ್ಲಿ, ತುಳಸಿಯನ್ನು ಸತ್ತವರ ಕೈಯಲ್ಲಿರಿಸಿ ಮುಂದಿನ ಲೋಕಕ್ಕೆ ಅವರ ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸಲಾಗುತ್ತದೆ. ಭಾರತದಲ್ಲಿ, ಮರಣಶಯ್ಯೆಯಲ್ಲಿರುವವರ ಬಾಯಿಯಲ್ಲಿರಿಸಿದರೆ ಅವರು ದೇವರ ಪಾದವನ್ನು ಸೇರುವರೆಂದು ಹೇಳಲಾಗುತ್ತದೆ. ಪುರಾತನ ಈಜಿಪ್ಷಿಯನ್ನರು ಹಾಗು ಪುರಾತನ ಗ್ರೀಕರು, ಇದು ಸಾಯಲಿರುವ ಮನುಷ್ಯನಿಗೆ ಸ್ವರ್ಗದ ಬಾಗಿಲು-ಮಾರ್ಗವನ್ನು ತೋರುತ್ತದೆಂದು ನಂಬುತ್ತಾರೆ.[ಸೂಕ್ತ ಉಲ್ಲೇಖನ ಬೇಕು]
ಬೊಕ್ಕಕ್ಕಿಯೊನ ಡೆಕಮೆರೊನ್ ನಲ್ಲಿ, ಸ್ಮರಣೀಯವಾದ ವಿಷಾದ ಕಥೆಯು(ಸಣ್ಣಕಥೆ V) ಲಿಸಬೆತ್ತಳ ಬಗ್ಗೆ ಉಲ್ಲೇಖಿಸುತ್ತದೆ, ಇದರಂತೆ ಅವಳ ಸಹೋದರರು ಅವಳ ಪ್ರೇಮಿಯನ್ನು ಕೊಲ್ಲುತ್ತಾರೆ. ಪ್ರೇಮಿಯು ಅವಳಿಗೆ ಕನಸಿನಲ್ಲಿ ಬಂದು ತನ್ನನ್ನು ಹೂತು ಹಾಕಿದ ಸ್ಥಳವನ್ನು ತೋರಿಸುತ್ತಾನೆ. ಅವಳು ರಹಸ್ಯವಾಗಿ ಅವನ ತಲೆಯನ್ನು ಅಗೆದು ತೆಗೆದು, ತುಳಸಿಯ ಕುಂಡದಲ್ಲಿ ಇರಿಸುತ್ತಾಳೆ, ಹಾಗು ತನ್ನ ಕಣ್ಣೀರಿನಿಂದ ಅದಕ್ಕೆ ನೀರುಣಿಸುತ್ತಾಳೆ. ಕುಂಡವನ್ನು ಅವಳಿಂದ ಅವಳ ಸಹೋದರರು ಕಸಿದುಕೊಳ್ಳುತ್ತಾರೆ, ಇದಾದ ಸ್ವಲ್ಪ ದಿನಗಳಲ್ಲೇ ದುಃಖದಿಂದ ಅವಳು ಸಾಯುತ್ತಾಳೆ. ಬೊಕ್ಕಕ್ಕಿಯೊನ ಕಥೆಯು ಜಾನ್ ಕೀಟ್ಸ್ ರ ಇಸಬೆಲ್ಲ ಆರ್ ದಿ ಪಾಟ್ ಆಫ್ ಬೇಸಿಲ್ ಪದ್ಯಕ್ಕೆ ಆಧಾರವಾಗಿದೆ - ಇದು ಅನುಕ್ರಮವಾಗಿ ವರ್ಣಚಿತ್ರಗಳಾದ ಇಸಬೆಲ್ಲ(ಮಿಲ್ಲಯಿಸ್ ವರ್ಣಚಿತ್ರ) ಹಾಗು ಇಸಬೆಲ್ಲ ಅಂಡ್ ದಿ ಪಾಟ್ ಆಫ್ ಬೇಸಿಲ್ ಗೆ ಸ್ಫೂರ್ತಿ ನೀಡಿತು. ಇದೇ ರೀತಿಯಾದ ಕಥೆಯೊಂದನ್ನು ಲೊಂಗೋಬರ್ಡ್ ನ ರಾಣಿ ರೋಸಲಿಂಡ್ ಬಗೆಗೂ ಸಹ ಹೇಳಲಾಗುತ್ತದೆ.
ವಿಷದ ಪ್ರಮಾಣದ ಬಗ್ಗೆ ನಡೆಸಲಾದ ಅಧ್ಯಯನಗಳು
[ಬದಲಾಯಿಸಿ]ಸಾರ ತೈಲದ ಬಗ್ಗೆ ನಡೆಸಲಾದ ೧೯೮೯ರ ಒಂದು ಅಧ್ಯಯನವು ಇದು ಶಿಲೀಂದ್ರ ಪ್ರತಿರೋಧಕ ಹಾಗು ಕೀಟ-ನಿವಾರಕ ಭೌತಿಕ ಅಂಶಗಳ ಬಗ್ಗೆ ಉಲ್ಲೇಖಿಸಿತು.[೧೨] ೨೦೦೯ರಲ್ಲಿ ವರದಿಯಾದ ಇದೇ ಮಾದರಿಯ ಅಧ್ಯಯನವು, ಸಸ್ಯದ ಸಾರವು ಸೊಳ್ಳೆಗಳಿಗೆ ಬಹಳ ವಿಷಕಾರಕವೆಂದು ದೃಢಪಡಿಸಿತು.[೧೩] ಆದಾಗ್ಯೂ, ಸಸ್ಯವು ಇಲಿಗಳಿಗೆ ವಿಷಕಾರಿಯಲ್ಲ [೧೪][clarification needed].
ಚಿತ್ರಸಂಪುಟ
[ಬದಲಾಯಿಸಿ]-
ಹೂಬಿಟ್ಟಿರುವ ತುಳಸಿ ಕಾಂಡ ಹಾಗು ಎಲೆಗಳು
-
ತಾಜಾ ತುಳಸಿ ಎಲೆಗಳು
-
ತುಳಸಿ ಬೀಜಗಳು
-
ತುಳಸಿ ಸಸ್ಯ
-
ಅರಳುತ್ತಿರುವ ತುಳಸಿ ಕಾಂಡ
-
ತುಳಸಿ ಎಲೆಗಳು.
ಇವನ್ನೂ ಗಮನಿಸಿ
[ಬದಲಾಯಿಸಿ]- ತುಳಸಿ ಕೃಷಿಕರ ಪಟ್ಟಿ
ಉಲ್ಲೇಖಗಳು
[ಬದಲಾಯಿಸಿ]- ತುಳಸಿಗೆ ತಗುಲುವ ರೋಗಗಳು ಹಾಗು ಅವುಗಳ ನಿರ್ವಹಣೆ
- http://www.rpsgb.org.uk/pdfs/pr090909sabs132.pdf
- ಅಶರ್, ಜೊನಾಥನ್, "ನರೇಟಿವ್ ಅಂಡ್ ಡಿಸ್ಕ್ರಿಪ್ಟಿವ್ ಸೀಕ್ವೆನ್ಸಸ್ ಇನ್ ದಿ ನಾವೆಲ್ಲಾ ಆಫ್ ಲಿಸಬೆತ್ತ ಅಂಡ್ ದಿ ಪಾಟ್ ಆಫ್ ಬೇಸಿಲ್ (ಡೆಕಾಮೆರೊನ್, IV. ೫)," ಇಟಾಲಿಯನ್ ಸ್ಟಡೀಸ್ , ೩೮ (೧೯೮೩), ೫೬-೬೯.
ಅಡಿ ಟಿಪ್ಪಣಿಗಳು
[ಬದಲಾಯಿಸಿ]- ↑ J. Janick (ed.), James E. Simon, Mario R. Morales, Winthrop B. Phippen, Roberto Fontes Vieira, and Zhigang Hao, "ಬೇಸಿಲ್: ಏ ಸೋರ್ಸ್ ಆಫ್ ಅರೋಮ ಕಾಂಪೌಂಡ್ಸ್ ಅಂಡ್ ಏ ಪಾಪ್ಯುಲರ್ ಕಲಿನರಿ ಅಂಡ್ ಆರ್ನಮೆಂಟಲ್ ಹರ್ಬ್" ಪರ್ಸ್ಪೆಕ್ಟೀವ್ಸ್ ಆನ್ ನ್ಯೂ ಕ್ರಾಪ್ಸ್ ಅಂಡ್ ನ್ಯೂ ಯೂಸಸ್ (೧೯೯೯), ASHS ಪ್ರೆಸ್, ಅಲೆಕ್ಸಾಂಡ್ರಿಯ, VA, ISBN ೯೭೮-೦-೯೬೧೫೦೨೭-೦-೬
- ↑ ಸಸ್ಯಗಳಲ್ಲಿ ಪತ್ತೆಯಾದ ಭಂಗಿ ಗಿಡದ ಉದ್ರೇಕ ಪ್ರತಿರೋಧಕ ಸಂಯುಕ್ತ
- ↑ "Basil". Archived from the original on 4 ಅಕ್ಟೋಬರ್ 2013. Retrieved 22 ಡಿಸೆಂಬರ್ 2010.
- ↑ "The Self-Sufficient Gardener Podcast Episode 24 Companion Planting and Crop Rotation". Archived from the original on 24 ನವೆಂಬರ್ 2010. Retrieved 22 ಡಿಸೆಂಬರ್ 2010.
- ↑ Bozin B, Mimica-Dukic N, Simin N, Anackov G (2006). "Characterization of the volatile composition of essential oils of some lamiaceae spices and the antimicrobial and antioxidant activities of the entire oils". J. Agric. Food Chem. 54 (5): 1822–8. doi:10.1021/jf051922u. PMID 16506839.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Chiang LC, Ng LT, Cheng PW, Chiang W, Lin CC (2005). "Antiviral activities of extracts and selected pure constituents of Ocimum basilicum". Clin. Exp. Pharmacol. Physiol. 32 (10): 811–6. doi:10.1111/j.1440-1681.2005.04270.x. PMID 16173941.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ de Almeida I, Alviano DS, Vieira DP; et al. (2007). "Antigiardial activity of Ocimum basilicum essential oil". Parasitol. Res. 101 (2): 443–52. doi:10.1007/s00436-007-0502-2. PMID 17342533.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Manosroi J, Dhumtanom P, Manosroi A (2006). "Anti-proliferative activity of essential oil extracted from Thai medicinal plants on KB and P388 cell lines". Cancer Lett. 235 (1): 114–20. doi:10.1016/j.canlet.2005.04.021. PMID 15979235.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Tohti I, Tursun M, Umar A, Turdi S, Imin H, Moore N (2006). "Aqueous extracts of Ocimum basilicum L. (sweet basil) decrease platelet aggregation induced by ADP and thrombin in vitro and rats arterio--venous shunt thrombosis in vivo". Thromb. Res. 118 (6): 733–9. doi:10.1016/j.thromres.2005.12.011. PMID 16469363.
{{cite journal}}
: CS1 maint: multiple names: authors list (link) - ↑ Duke, James A. "Basil as the Holy Hindu Highness". doi:10.1089/act.2008.14101. Retrieved 10 ಮೇ 2008.
{{cite web}}
: Cite has empty unknown parameter:|coauthors=
(help) - ↑ EMEA (3 ಮಾರ್ಚ್ 2004). "Position Paper on the use of HMP containing estragole" (PDF). p. 5. Archived from the original (PDF) on 27 ಜೂನ್ 2011. Retrieved 17 ನವೆಂಬರ್ 2006.
In particular, rodent studies show that these events are minimal probably in the dose range of 1-10 mg/kg body weight, which is approximately ೧೦೦-೧೦೦೦ times the anticipated human exposure to this substance
- ↑ Dube, S.; et al. (1989). "Antifungal, physicochemical, and insect-repelling activity of the essential oil of Ocimum basilicum". Retrieved 30 ಮೇ 2009.
{{cite web}}
: Cite has empty unknown parameter:|coauthors=
(help); Explicit use of et al. in:|first=
(help) - ↑ Maurya, Prejwltta; Sharma, Preeti; Mohan, Lalit; Batabyal, Lata; Srivastava, C.N.; et al. (2009). "Evaluation of the toxicity of different phytoextracts of Ocimum basilicum against Anopheles stephensi and Culex quinquefasciatus". Journal of Asia-Pacific Entomology. 12 (2): 113–115. doi:10.1016/j.aspen.2009.02.004.
{{cite journal}}
:|access-date=
requires|url=
(help); Cite has empty unknown parameter:|coauthors=
(help); Explicit use of et al. in:|first=
(help) - ↑ Fandohan, P.; Gnonlonfin, B; Laleye, A; Gbenou, JD; Darboux, R; Moudachirou, M; et al. (2008). "Toxicity and gastric tolerance of essential oils from Cymbopogon citratus, Ocimum gratissimum and Ocimum basilicum in Wistar rats". Food and Chemical Toxicology. 46 (7): 2493–2497. doi:10.1016/j.fct.2008.04.006. PMID 18511170.
{{cite journal}}
:|access-date=
requires|url=
(help); Cite has empty unknown parameter:|coauthors=
(help); Explicit use of et al. in:|first=
(help)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ತುಳಸಿಯನ್ನು ಬೆಳೆಸುವುದು ಹೇಗೆ Archived 21 August 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ತುಳಸಿ ಸಸಿ ನೆಡುವುದು, ಹೊಸ ಸಸಿ ಅಭಿವೃದ್ಧಿ ಹಾಗು ಅದನ್ನು ಬೆಳೆಸುವ ಬಗ್ಗೆ ಮಾಹಿತಿ.
- ಗರ್ನೋಟ್ ಕಟ್ಜರ್'ಸ್ ಸ್ಪೈಸ್ ಪೇಜಸ್ Archived 30 November 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಯುರೋಪಿಯನ್ ಹಾಗು ಏಷಿಯನ್ ಪಾಕದಲ್ಲಿ ತುಳಸಿಯ ಬಳಕೆಯ ಬಗ್ಗೆ ವಿವರಿಸುತ್ತದೆ; ಮತ್ತಷ್ಟು ವೆಬ್ ಸಂಪರ್ಕ ಕೊಂಡಿಗಳು.
- ತುಳಸಿ ಎಲೆಯ ಉಪಯೋಗಗಳು, ಮಹತ್ವ ಹಾಗೂ ಆರೋಗ್ಯ ಪ್ರಯೋಜನಗಳು
- Pages using the JsonConfig extension
- CS1 errors: unsupported parameter
- CS1 maint: multiple names: authors list
- CS1 errors: explicit use of et al.
- CS1 errors: empty unknown parameters
- CS1 errors: access-date without URL
- Articles with hatnote templates targeting a nonexistent page
- Articles to be merged from April 2010
- All articles to be merged
- Articles with 'species' microformats
- Taxobox articles missing a taxonbar
- Pages with plain IPA
- Articles with unsourced statements from January 2010
- All articles with specifically marked weasel-worded phrases
- Articles with specifically marked weasel-worded phrases from August 2009
- Articles to be expanded from June 2009
- All articles to be expanded
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles containing Chinese-language text
- Articles with unsourced statements from June 2009
- Articles with unsourced statements from July 2009
- Articles with unsourced statements from November 2009
- Articles with unsourced statements from July 2010
- Articles with unsourced statements from November 2010
- Wikipedia articles needing clarification from July 2009
- Commons link is locally defined
- Use dmy dates from November 2010
- ಸಸ್ಯಗಳು
- ಲಾಮಿಯಾಸಿಯೆ
- ಔಷಧೀಯ ಸಸ್ಯಗಳು
- ಆಯುರ್ವೇದ
- Uses