ವಿಷಯಕ್ಕೆ ಹೋಗು

ಆಲಿವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Olive Tree
Olea europaea, Dead Sea, Jordan
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
O. europaea
Binomial name
Olea europaea
ಹತ್ತೊಂಬತ್ತನೆಯ ಶತಮಾನದ ಸಚಿತ್ರ ವಿವರಣೆ

ಆಲಿವ್‌ (English pronunciation: /'ɑːlɪv/, /'ɑːlɨv/, ಅಥವಾ /'ɑːləv/) (ಆಲಿಯಾ ಯುರೊಪಿಯಾ ) ಎಂಬುದು ಸಣ್ಣ ಮರಗಳ ಪ್ರಭೇದ. ಇದು ಆಲಿಯೆಸೀ ಕುಟುಂಬಕ್ಕೆ ಸೇರಿದೆ. ಇದು ಪೂರ್ವ ಮೆಡಿಟರೇನಿಯನ್‌ ಜಲಾನಯನ ಪ್ರದೇಶ (ಅಕ್ಕಪಕ್ಕದ ಅಗ್ನೇಯ ಯುರೋಪ್‌, ಪಶ್ಚಿಮ ಏಷ್ಯಾ ಹಾಗೂ ಉತ್ತರ ಆಫ್ರಿಕಾದ ಕರಾವಳಿ ಪ್ರದೇಶಗಳು) ಹಾಗೂ ಕ್ಯಾಸ್ಪಿಯನ್‌ ಸಮುದ್ರದ ದಕ್ಷಿಣ ಕೊನೆಯಲ್ಲಿರುವ ಉತ್ತರ ಇರಾನ್‌ ನಲ್ಲಿ ಬೆಳೆಯುತ್ತದೆ. ಆಲಿವ್‌ ಎಂದು ಕೂಡ ಕರೆಯಲಾಗುವ ಇದರ ಹಣ್ಣು ಆಲಿವ್‌ ತೈಲದ ಮೂಲವಾಗಿ, ಮೆಡಿಟರೇನಿಯನ್‌ ಪ್ರದೇಶದಲ್ಲಿ ಪ್ರಮುಖ ಕೃಷಿ ಬೆಳೆಯಾಗಿ ಪ್ರಾಮುಖ್ಯತೆ ಗಳಿಸಿದೆ. ಮರ ಹಾಗೂ ಅದರ ಹಣ್ಣಿನಿಂದಲೇ ಈ ಗಿಡದ ಕುಟುಂಬಕ್ಕೆ ಹೆಸರು ಬಂದಿದೆ. ಈ ಕುಟುಂಬವು ನೀಲಕಗಳು, ಮಲ್ಲಿಗೆ, ಫಾರ್ಸಿತಿಯಾ ಹೂವು ಹಾಗೂ ನೈಜ ಬೂದು ಬಣ್ಣದ ಮರಗಳು (ಫ್ರ್ಯಾಕ್ಸಿನಸ್‌ ) ಮುಂತಾದ ಪ್ರಭೇದಗಳನ್ನು ಒಳಗೊಂಡಿವೆ. ಆಲಿವ್‌ ಪದವು ಲ್ಯಾಟಿನ್‌ ಭಾಷೆಯ ಆಲಿವಾ ಪದದಿಂದ ವ್ಯತ್ಪತ್ತಿಯಾಗಿದೆ. ಆಲಿವು ಪದವು ಗ್ರೀಕ್‌ ἐλαία (ಇಲೈಯಾ )[] ದಿಂದ ವ್ಯುತ್ಪತ್ತಿಯಾಗಿದೆ. ಅಂತಿಮವಾಗಿ, ಇದೂ ಸಹ ಮೈಸಿನೇಯನ್‌ ಗ್ರೀಕ್‌ ಪದ e-ra-wa ('ಇಲೈವಾ') ದಿಂದ ಬಂದಿದೆ. ಇದನ್ನು ಲೀನಿಯರ್‌ ಬಿಸಿಲಬಿಕ್ ಲಿಪಿಯಲ್ಲಿ ನಮೂದಿಸಲಾಗಿದೆ.[][] ಹಲವು ಭಾಷೆಗಳಲ್ಲಿ 'ತೈಲ' ಎಂಬ ಪದವು ಅಂತಿಮವಾಗಿ ಈ ಆಲಿವ್‌ ಮರ ಹಾಗೂ ಅದರ ಹಣ್ಣಿನಿಂದ ವ್ಯುತ್ಪತ್ತಿಯಾಗಿದೆ.

ವಿವರಣೆ

[ಬದಲಾಯಿಸಿ]

ಆಲಿವ್ ಮರವು ಮೆಡಿಟರೇನಿಯನ್‌, ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಮೂಲದ ನಿತ್ಯಹರಿದ್ವರ್ಣ ಮರ ಅಥವಾ ಪೊದೆಯಾಗಿದೆ. ಗಿಡ್ಡವಾದ ಎತ್ತರ ಹಾಗೂ ದಪ್ಪನಾಗಿದ್ದು, 8–15 metres (26–49 ft) ಎತ್ತರವನ್ನು ಅಪರೂಪವಾಗಿ ಮೀರುತ್ತದೆ. ರಜತವರ್ಣ-ಮಿಶ್ರಿತ ಹಸಿರು ಎಲೆಗಳು ಆಯಾಕಾರದಲ್ಲಿದ್ದು, 4–10 centimetres (1.6–3.9 in) ಉದ್ದ ಹಾಗೂ 1–3 centimetres (0.39–1.18 in) ಅಗಲ ಇವೆ. ಆಲಿವ್‌ ಮರದ ಕಾಂಡವು ಸಾಮಾನ್ಯವಾಗಿ ಗಂಟುಗಂಟಾಗಿದೆ ಹಾಗೂ ತಿರುಚಿದಂತಿದೆ. ಹತ್ತು-ಸೀಳುಗಳುಳ್ಳ ಹೂಬಟ್ಟಲು (calyx) ಮತ್ತು ದಳಸಂಪುಟ (corolla), ಎರಡು ಕೇಸರ (stamen)ಗಳು ಹಾಗೂ ಇಬ್ಭಾಗವಾದ ಶಲಾಕಾಗ್ರ (stigma)ವುಳ್ಳ ಚಿಕ್ಕ, ಬಿಳಿಯ ಬಣ್ಣದ ಹೂವುಗಳು, ಸಾಮಾನ್ಯವಾಗಿ ಕಳೆದ ವರ್ಷದ ಮರದಲ್ಲಿ, ಎಲೆಗಳ ಕವಲು ಮೂಲೆ (axil)ಗಳಿಂದ ಹೊಮ್ಮುವ ಅಸೀಮಾಕ್ಷ (raceme)ದಲ್ಲಿ ಬೆಳೆಯುತ್ತವೆ. ಹಣ್ಣು ಸಣ್ಣ ಗಾತ್ರದ ಓಟೆಯ ಹಣ್ಣು. ತೋಟಗಳಲ್ಲಿ ಬೆಳೆಸಲಾಗುವ ಹಣ್ಣುಗಳಿಗಿಂತ ವನ ಪ್ರದೇಶದಲ್ಲಿ ಬೆಳೆಯುವ ಗಿಡಗಳಲ್ಲಿ ಉದ್ದವಿದ್ದು, ತೆಳುವಾದ ಹಣ್ಣುತಿರುಳು ಮತ್ತು ಸಣ್ಣ ಗಾತ್ರದ್ದಾಗಿರುತ್ತವೆ. 1–2.5 centimetres (0.39–0.98 in) ಆಲಿವ್‌ ಹಣ್ಣುಗಳು ಹಸಿರಿನಿಂದ ನೇರಳೆ ಬಣ್ಣದ ಹಂತಕ್ಕೆ ಬಂದಾಗ ಕೊಯ್ಲು ಮಾಡಲಾಗುತ್ತದೆ. ಡಬ್ಬ ಅಥವಾ ಜಾಡಿಯಲ್ಲಿ ಹಾಕಿ ಸಂರಕ್ಷಿಸಲಾದ ಆಲಿವ್‌ ಹಣ್ಣುಗಳು ಸಾಮಾನ್ಯವಾಗಿ ಫೆರಸ್‌ ಸಲ್ಫೇಟ್‌ನಂತಹ ರಾಸಾಯನಿಕಗಳನ್ನು ಹೊಂದಿರಬಹುದು, ಇದು ಅವನ್ನು ಕೃತಕವಾಗಿ ಕಪ್ಪಾಗಿಸುತ್ತದೆ.

ಇತಿಹಾಸ

[ಬದಲಾಯಿಸಿ]

ಸಾಹಿತ್ಯಗಳಲ್ಲಿ ಬಹಳಷ್ಟು ಸಲ ಉಲ್ಲೇಖಿತ ಗಿಡಗಳಲ್ಲಿ ಆಲಿವ್‌ ಸಹ ಒಂದು. ಹೊಮರ್‌ರ ಒಡಿಸಿ ಯಲ್ಲಿ ಒಡಿಸ್ಸಿಯಸ್‌ ಒಂದೇ ಕಾಂಡದಿಂದ ಬೆಳೆಯುವ ಎರಡು ಆಲಿವ್‌ ಚಿಗುರುಗಳ ಕೆಳಗೆ ತೆವಳಿಕೊಂಡು ಹೋಗಿದ್ದುಂಟು. ಇಲ್ಯಾಡ್ ‌ (XVII.53ff) ನಲ್ಲಿ, ಬೆಟ್ಟಗಳಲ್ಲಿ ಝರಿಯೊಂದರ ಪಕ್ಕದಲ್ಲಿರುವ ಏಕೈಕ ಆಲಿವ್‌ ಮರವನ್ನು ರೂಪಕವಾಗಿ ವಿವರಿಸಲಾಗಿದೆ. ಆಲಿವ್‌ ಸಮುದ್ರದಿಂದ ದೂರದ ಪ್ರದೇಶದಲ್ಲಿ ಬೆಳೆಯುವುದು ವಿರಳ. ಅರ್ಥಾತ್‌ ಗ್ರೀಸ್‌ನಲ್ಲಿ ಬೆಟ್ಟದ ಇಳಿಜಾರುಗಳ ಮೇಲೆ ಬೆಳೆಯುತ್ತದೆ ಎಂದರ್ಥ. ಆದ್ಯರೂಪದ ಸಾಂಸ್ಕೃತಿಕ ವೀರ ಅರಿಸ್ಟೇಯಸ್‌ಗೆ ಸಂಬಂಧಿಸಿದ ಗ್ರೀಕ್ ಪುರಾಣದಲ್ಲಿ ಗಿಣ್ಣು ತಯಾರಿಕೆ ಮತ್ತು ಜೇನುಹುಳು ಸಾಕಣೆಯೊಂದಿಗೆ, ಆಲಿವ್‌ ಸಸ್ಯ ಸಂಗೋಪನೆಯ ಅರ್ಥವನ್ನು ಉಲ್ಲೇಖಿಸಲಾಗಿದೆ.[] ಕ್ಸೊವಾನಾ ಎಂಬ ಗ್ರೀಕ್‌ನ ಅತಿ ಪುರಾತನ ಆರಾಧನಾ ವಿಗ್ರಹಗಳನ್ನು ಕೆತ್ತಲು ಬಳಸಲಾದ ಮರಗಳಲ್ಲಿ ಆಲಿವ್‌ ಸಹ ಒಂದಾಗಿತ್ತು. ಅದು ಅವರ ಮರದ ವಸ್ತುವನ್ನು ಉಲ್ಲೇಖಿಸುತ್ತದೆ ಹಾಗೂ ಶತಮಾನಗಳ ಕಾಲಗಳಿಂದ ಇವನ್ನು ಬಹಳ ಪೂಜ್ಯಭಾವದಿಂದ ಸಂರಕ್ಷಿಸಲಾಗುತ್ತಿತ್ತು.[] ಆಲಿವ್‌ ಮೊಟ್ಟಮೊದಲಿಗೆ ಅಥೆನ್ಸ್‌ನಲ್ಲಿ ಬೆಳೆಯಿತು ಎಂದು ಅಥೆನ್ಸ್‌ ವಾಸಿಗಳು ಹೇಳುವುದು ಸ್ಥಳೀಯ ಹೆಮ್ಮೆಯ ವಿಷಯವಾಗಿತ್ತು.[] ಪುರಾತನ ಕಾಲದ ಅಥೆನಿಯನ್‌ ಆಧಾರದ ಕಲ್ಪನೆಯಲ್ಲಿ, ಅಥೆನಾ ಆಲಿವ್‌ ಉಡುಗೊರೆಯೊಂದಿಗೆ, ಅಟ್ಟಿಕಾದ ಪೋಷಣಾ ಹಕ್ಕನ್ನು ಪೊಸೇಡಾನ್‌ನಿಂದ ಪಡೆಯುತ್ತಾಳೆ. ಆದರೂ, ಕ್ರಿಸ್ತ ಪೂರ್ವ ನಾಲ್ಕನೆಯ ಶತಮಾನದಲ್ಲಿ, ಸಸ್ಯವಿಜ್ಞಾನದ ಪಿತಾಮಹ ಥಿಯೊಫ್ರಾಸ್ಟಸ್‌, ಪ್ರಕಾರ, ಆಲಿವ್‌ ಮರಗಳು ಸಾಮಾನ್ಯವಾಗಿ ಸುಮಾರು 200 ವರ್ಷಗಳ ತನಕ ಬದುಕಿದ್ದುಂಟು. ಅಥೆನಾದ ಆಲಿವ್‌ ಮರವು ಆಕ್ರೊಪೊಲಿಸ್‌ ನಲ್ಲಿ ಇನ್ನೂ ಬೆಳೆಯುತ್ತಿತ್ತು. ಕ್ರಿಸ್ತ ಶಕ ಎರಡನೆಯ ಶತಮಾನದಲ್ಲಿಯೂ ಸಹ ಅದು ಉಳಿದುಕೊಂಡದ್ದುಂಟು.[] ಕ್ರಿಸ್ತ ಶಕ ಸುಮಾರು 170ರಲ್ಲಿ ಇದನ್ನು ಪಾಸ್ಯಾನಿಯಾಸ್‌ರಿಗೆ ತೋರಿಸಿದಾಗ, ‘ಪರ್ಷಿಯನ್ನರು ಅಥೆನ್ಸ್‌ಗೆ ಬೆಂಕಿ ಹಚ್ಚಿದಾಗ ಆಲಿವ್‌ ಸುಟ್ಟುಹೋಯಿತು, ಆದರೆ, ಅದೇ ದಿನ ಈ ಮರವು ಪುನಃ ಸುಮಾರು ಎರಡು ಮೊಳಗಳಷ್ಟು ಬೆಳೆದು ನಿಂತಿತು’ ಎಂದು ಅವರು ವರದಿ ಮಾಡಿದರು.[] ನಿಜಕ್ಕೂ, ಆಲಿವ್‌ ಮರದ ತುಂಡಿನಿಂದ ಬಹಳ ಬೇಗ ಬೆಳೆಯುತ್ತದೆ, ಅಸ್ತಿತ್ವದಲ್ಲಿದ್ದ ಕೆಲವು ಆಲಿವ್ ಮರಗಳ ದೀರ್ಘಾಯಸ್ಸನ್ನು ಲೆಕ್ಕಿಸಿದಲ್ಲಿ, ಆಕ್ರೊಪೊಲಿಸ್‌ನ ಆಲಿವ್‌ ಮರವು ಬ್ರಾಂಜ್ ಏಜ್‌ಗೆ ಸೇರಿರುವ ಎಲ್ಲಾ ಸಾಧ್ಯತೆಯೂ ಇವೆ. ಈ ಆಲಿವ್‌ ಅಥೆನಾಗೆ ಬಹಳ ಪವಿತ್ರವಾಗಿದ್ದು, ಅಥೆನಿಯನ್‌ ನಾಣ್ಯಗಳ ಮೇಲೆ ಅಚ್ಚಾಗುತ್ತಿದ್ದವು. ರೋಮನ್‌ ಕವಿ ಹಾರೇಸ್‌ ತನ್ನ ಆಹಾರದಲ್ಲಿ ಇದನ್ನು ಉಲ್ಲೇಖಿಸಿ ಪ್ರಸ್ತಾಪಿಸುತ್ತಾ, ಅದು ಅತೀ ಸರಳವೆಂದು ವಿವರಿಸುತ್ತಾನೆ. ' ನನಗೆ ಆಲಿವ್‌ಗಳು, ಎಂಡಿವಿಯಾ ಚಿಕೊರಿ ಗಿಡಗಳು ಹಾಗೂ ನುಣುಪಾದ ಸೀಮೆಬೆಂಡೆ ಬಳಗದ ಗಿಡಗಳು ಪೋಷಣೆ ಒದಗಿಸುತ್ತದೆ' ಎಂದು ವಿವರಿಸಿದ್ದಾನೆ.[] ಪುರಾತನ ಕಾಲದವರು ಆಯ್ಕೆ ಮಾಡಿಕೊಳ್ಳುವ ಆಹಾರಗಳಲ್ಲಿ ಆಲಿವ್‌ ಸಹ ಒಂದು, ಇದು ಪರಿಪೂರ್ಣ ಆಹಾರಗಳಲ್ಲಿಯೂ ಸಹ ಒಂದು ಎಂದು ಲಾರ್ಡ್‌ ಮಾನ್ಬೊಡೊ 1779ರಲ್ಲಿ ಆಲಿವ್‌ ಬಗ್ಗೆ ಟಿಪ್ಪಣಿ ಮಾಡಿದ್ದರು.[೧೦] ಆಲಿವ್‌ ಮರಗಳ ಎಲೆಗಳುಳ್ಳ ಕೊಂಬೆಗಳು - ಆಲಿವ್‌ ಎಲೆಗಳು ವಿಪುಲತೆ, ವಿಜಯ ಮತ್ತು ಶಾಂತಿಯ ಸಂಕೇತವಾಗಿ, ಸ್ನೇಹಾರ್ಥ ಕ್ರೀಡೆಗಳು ಹಾಗೂ ರಕ್ತಸಿಕ್ತ ಸಮರಗಳಲ್ಲಿ ವಿಜಯಿಯಾದವರಿಗೆ ಪುರಸ್ಕರಿಸಲು ಬಳಸಲಾಗುತ್ತಿತ್ತು. ದೈವಾನುಗ್ರಹ ಮತ್ತು ಪರಿಶುದ್ಧತೆಯ ಸಂಕೇತಗಳಾಗಿ, ದೇವತೆಗಳು ಹಾಗೂ ಪ್ರಬಲ ವ್ಯಕ್ತಿಗಳಿಗೆ ಅಲಿವ್‌ ಶಾಖೆಗಳು ಮತ್ತು ಎಲೆಗಳನ್ನು ಮತಾಚರಣೆಯಾಗಿ ಅರ್ಪಿಸಲಾಗುತ್ತಿತ್ತು. ಟುಟನ್‌ಖಾಮೆನ್‌ನ ಗೋರಿಯಲ್ಲೂ ಸಹ ಕೆಲವು ಆಲಿವ್‌ ಎಲೆಗಳು ಕಂಡುಬಂದಿದ್ದವು. ಆಲಿವ್‌ ತೈಲವನ್ನು ಬಹಳ ಹಿಂದಿನ ಕಾಲದಿಂದಲೂ ಪವಿತ್ರವೆಂದು ಪರಿಗಣಿಸಲಾಗಿದೆ. ಪುರಾತನ ಗ್ರೀಸ್‌ನಲ್ಲಿ ರಾಜರು ಮತ್ತು ಕ್ರೀಡಾಪಟುಗಳಿಗೆ ಲೇಪಿಸಲು ಬಳಸಲಾಗುತ್ತಿತ್ತು. ದೇವಾಲಯಗಳಲ್ಲಿನ ಪವಿತ್ರ ದೀಪಗಳನ್ನು ಬೆಳಗಿಸಲು ಹಾಗೂ ಮೂಲ ಒಲಂಪಿಕ್ ಕ್ರೀಡಾಕೂಟಗಳಲ್ಲಿ ಶಾಶ್ವತ ಜ್ವಾಲೆಯಾಗಿ ಬೆಳಗಿಸಲು ಇದನ್ನು ಬಳಸಲಾಯಿತು. ಈ ಒಲಿಂಪಿಕ್‌ ಕ್ರೀಡೆಗಳಲ್ಲಿ ಗೆದ್ದವರಿಗೆ ಆಲಿವ್‌ ಎಲೆಗಳ ಕಿರೀಟ ತೊಡಿಸಲಾಗುತ್ತಿತ್ತು. ಇಂದಿಗೂ ಸಹ, ಹಲವು ಧಾರ್ಮಿಕ ಸಮಾರಂಭಗಳಲ್ಲಿ ಆಲಿವ್‌ ಎಲೆಗಳನ್ನು ಬಳಸಲಾಗುತ್ತಿದೆ. ಹಲವು ವರ್ಷಗಳ ಕಾಲದಿಂದ, ಆಲಿವ್‌ ಶಾಂತಿ, ವಿವೇಚನೆ, ವೈಭವ, ಫಲವಂತಿಕೆ, ಶಕ್ತಿ ಮತ್ತು ಶುದ್ಧತೆಯ ಸಂಕೇತವಾಗಿದೆ. ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್‌ನ ಹಳೆಯ ಮತ್ತು ಹೊಸ ಒಡಂಬಡಿಕೆಗಳಲ್ಲಿ ಆಲಿವ್‌ ಮರ ಮತ್ತು ಆಲಿವ್‌ ಹಣ್ಣುಗಳನ್ನು ಸುಮಾರು 30 ಸಲ ಉಲ್ಲೇಖಿಸಲಾಗಿದೆ. ಬೈಬಲ್‌ನಲ್ಲಿ ಉಲ್ಲೇಖಿಸಲಾದ ಮೊದಲ ಗಿಡಗಳು ಹಾಗೂ ಅತಿ ಗಮನಾರ್ಹ ಗಿಡಗಳಲ್ಲಿ ಆಲಿವ್‌ ಸಹ ಒಂದು. ಉದಾಹರಣೆಗೆ, ಜಲಪ್ರವಾಹ ಮುಗಿದಿದೆ ಎಂಬ ಸಂಕೇತ ತರಲು, ಪಾರಿವಾಳವು ಆಲಿವ್‌ ಎಲೆಯನ್ನು ನೋಹ್‌ಗೆ ತಂದುಕೊಟ್ಟ ಉಲ್ಲೇಖನವಿದೆ. ಜೆರುಸಲೆಮ್‌ನ ಪೂರ್ವದಲ್ಲಿರುವ ಮೌಂಟ್‌ ಆಫ್‌ ಆಲಿವ್ಸ್‌ ಹಲವು ಸಲ ಪ್ರಸ್ತಾಪವಾಗಿದೆ. ಬುಕ್‌ ಆಫ್‌ ಮಾರ್ಮನ್‌‌ನಲ್ಲಿನ, ಬುಕ್‌ ಆಫ್‌ ಜೇಕಬ್‌ನ 5ನೇ ಅಧ್ಯಾಯದಲ್ಲಿ ಅಲಿವ್‌ ಮರದ ಕುರಿತು ಅನ್ಯೋಕ್ತಿಯಲ್ಲಿ, ಇಸ್ರೇಲ್‌ ದೇಶದ ಹರಡುವಿಕೆ ಮತ್ತು ಒಗ್ಗೂಡುವಿಕೆಯ ಕುರಿತು ವಿವರಿಸಲಾಗಿದೆ. ಅದು ಇಸ್ರೇಲಿಗರು ಮತ್ತು ಯಹೂದ್ಯೇತರರನ್ನು ಕ್ರಮವಾಗಿ ಬಹಳ ಮೃದು ಹಾಗೂ ವನ್ಯ ಆಲಿವ್‌ ಮರಗಳಿಗೆ ಹೋಲಿಸುತ್ತದೆ. ಆಲಿವ್‌ ಮರ, ಆಲಿವ್‌ ತೈಲ ಮತ್ತು ಆಲಿವ್‌ ಹಣ್ಣುಗಳಿಗೆ ಬೈಬಲ್‌ನಲ್ಲಿ ಪ್ರಮುಖ ಸ್ಥಾನಗಳಿವೆ.[೧೧] ಕುರಾನ್‌ ಧರ್ಮಗ್ರಂಥದಲ್ಲಿ ಆಲಿವ್‌ನ್ನು ಅತ್ಯಮೂಲ್ಯ ಹಣ್ಣು ಎಂದು ಪ್ರಶಂಸಿಸಲಾಗಿದೆ. ಕುರಾನ್‌ನಲ್ಲಿ ಆಲಿವ್‌ ಮರ ಹಾಗೂ ಆಲಿವ್‌ ತೈಲವನ್ನು ಏಳು ಸಲ ಉಲ್ಲೇಖಿಸಲಾಗಿದೆ. ಇಪ್ಪತ್ತನಾಲ್ಕನೆಯ ಅಧ್ಯಾಯ 'ಅಲ್-ನೂರ್‌' ಪ್ರಕಾರ, 'ಅಲ್ಲಾಹನು ಸ್ವರ್ಗ ಹಾಗೂ ಭೂಮಿಯ ಬೆಳಕು. ಅವನ ಬೆಳಕಿನ ರೂಪಕದಲ್ಲಿ ಒಂದು ಗೂಡು, ಈ ಗೂಡಿನಲ್ಲಿ ಒಂದು ದೀಪ, ದೀಪವು ಗಾಜಿನೊಳಗಿದೆ, ಈ ಗಾಜು ಆಲಿವ್‌ ಪವಿತ್ರ ಮರದಿಂದ ಉಜ್ವಲ ತಾರೆಯಂತೆ ಬೆಳಗಿಸಲಾಗಿದೆ, ಪೂರ್ವಕ್ಕಾಗಲಿ ಪಶ್ಚಿಮಕ್ಕಾಗಲಿ ಸೇರಿರದ ಇದರ ತೈಲವು ಅಗ್ನಿಸ್ಪರ್ಶವಾಗದಿದ್ದರೂ ಬೆಳಕನ್ನು ನೀಡುತ್ತದೆ. ಬೆಳಕಿನ ಮೇಲೆ ಬೆಳಕು. ಅಲ್ಲಾಹನು ತಾನು ಇಚ್ಛಿಸಿದವನನ್ನು ತನ್ನ ಬೆಳಕಿನತ್ತ ಮಾರ್ಗದರ್ಶನ ನೀಡುತ್ತಾನೆ. ಮನುಕುಲಕ್ಕಾಗಿ ಅಲ್ಲಾಹನು ರೂಪಕಗಳನ್ನು ಸೃಷ್ಟಿಸುತ್ತಾನೆ ಹಾಗು ಅಲ್ಲಾಹನಿಗೆ ಎಲ್ಲಾ ವಸ್ತುಗಳ ಕುರಿತು ಜ್ಞಾನವಿದೆ.' (ಕುರಾನ್‌‌, 24:35). ಆಲಿವ್‌ ಮರ ಹಾಗೂ ಆಲಿವ್‌ ತೈಲದ ಆರೋಗ್ಯ ಅನುಕೂಲಗಳನ್ನು ಪ್ರವಾದೀ ವೈದ್ಯಕೀಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಪ್ರವಾದಿ ಮಹಮ್ಮದ್‌ ಈ ರೀತಿ ಹೇಳಿದಂತೆ ವರದಿಯಾಗಿದೆ: 'ಆಲಿವ್‌ ತೈಲವನ್ನು ತೆಗೆದು ಅದನ್ನು ಹಚ್ಚಿ ಮಾಲೀಸು ಮಾಡಿ - ಅದು ಪವಿತ್ರ ಮರ' (ಸುನಾನ್‌-ಅಲ್‌-ದರಿಮಿ, 69:103). ಆಲಿವ್ ಮರವು ಮೆಡಿಟರೇನಿಯನ್‌ ಪ್ರದೇಶ ಹಾಗೂ ಪಶ್ಚಿಮ ಏಷ್ಯಾ ಮೂಲದ್ದಾಗಿದೆ, ಅಲ್ಲಿಂದ ಅವು ಸಮೀಪದ ದೇಶಗಳಿಗೆ ವಿಸ್ತರಿಸಿದವು. ಆಲಿವ್‌ ಮರಗಳ ಬೇಸಾಯವು ಸುಮಾರು 7000 ವರ್ಷಗಳಿಗಿಂತಲೂ ಹಿಂದಿನಿಂದ ಆರಂಭವಾಯಿತು ಎಂದು ಅಂದಾಜು ಮಾಡಲಾಗಿದೆ. ಕ್ರಿಸ್ತಪೂರ್ವ 3000ನೆಯ ಇಸವಿಯಷ್ಟು ಹಿಂದಿನಿಂದಲೂ ಆಲಿವ್‌ಗಳನ್ನು ಕ್ರೇಟ್‌ನಲ್ಲಿ ವಾಣಿಜ್ಯೋಪಯೋಗಿ ಬೆಳೆಯಾಗಿ ಬೆಳೆಸಿದ್ದುಂಟು.ಅವು ಮಿನೊವನ್‌ ನಾಗರಿಕತೆಯ ಸಂಪತ್ತಿನ ಮೂಲವಾಗಿರಬಹುದು.[೧೨] ಲಕ್ಷಣವಾಗಿ ಕಾಣಲು ಹಾಗು ಒಳ್ಳೆಯ ಆರೋಗ್ಯಕ್ಕಾಗಿ ಪುರಾತನ ಗ್ರೀಕರು ತಮ್ಮ ಶರೀರ ಹಾಗೂ ತಲೆಗೂದಲಿಗೆ ಆಲಿವ್‌ ತೈಲ ಲೇಪಿಸುತ್ತಿದ್ದರು. ಆನ್‌ ದಿ ನೇಚರ್‌ ಆಫ್‌ ಪ್ಲ್ಯಾಂಟ್ಸ್‌ ನಲ್ಲಿ ಥಿಯೊಫ್ರಾಸ್ಟಸ್‌ ದ್ರಾಕ್ಷಿ ಸಂಗೋಪನೆಗೆ ಹೋಲಿಸಿದರೆ, ಆಲಿವ್‌ ಸಂಗೋಪನೆ ಕುರಿತು ವ್ಯವಸ್ಥಿತ ಮತ್ತು ವಿಸ್ತೃತ ವಿವರಣೆ ನೀಡಿಲ್ಲ. ಆದರೆ, ಕೃಷಿ ಮಾಡಲಾದ ಆಲಿವ್‌ನ್ನು ಸಸ್ಯೀಯವಾಗಿ ಸಂತಾನವೃದ್ಧಿ ಮಾಡತಕ್ಕದ್ದು ಎಂದು 1.16.10ರಲ್ಲಿ ಸ್ಪಷ್ಟಪಡಿಸಲಾಗಿದೆ. ನಿಜಕ್ಕೂ, ಓಟೆಗಳು(ಪಿಟ್ಸ್) ಮುಳ್ಳುಳ್ಳ, ಕಾಡಿನಲ್ಲಿ ಬೆಳೆಯುವ ವಿಧದ ಆಲಿವ್‌ ಗಿಡಗಳನ್ನು ಹುಟ್ಟುಹಾಕುತ್ತವೆ. ಹಕ್ಕಿಗಳು ಇವನ್ನು ಹರಡುವಲ್ಲಿ ನೆರವಾಗುತ್ತವೆ. ಸಾಕಣೆಯ ಆಲಿವ್‌ ಹಾಗೂ ವನ್ಯ ಆಲಿವ್‌ ಗಿಡಗಳನ್ನು ಕಸಿ ಮಾಡಬಹುದು; ಈ ಕಸಿ ಆಲಿವ್‌ಗೆ ಕೊಟಿನೊಸ್ ಎನ್ನಲಾಗಿದೆ ಎಂದು ಥಿಯೊಫ್ರಾಸ್ಟಸ್‌ ವರದಿ ಮಾಡಿದ್ದಾನೆ.[೧೩]

ಹದಿನಾರನೆಯ ಶತಮಾನದ ನಂತರ, ಯುರೋಪಿಯನ್‌ರು ನೂತನ ಪ್ರಪಂಚಕ್ಕೆ ಆಲಿವ್‌ನ್ನು ಪರಿಚಯಿಸಿದರು. ಮೆಕ್ಸಿಕೊ, ಪೆರು, ಚಿಲಿ ಮತ್ತು ಅರ್ಜೆಂಟೀನಾ ದೇಶಗಳಲ್ಲಿ ಹಾಗೂ 18ನೆಯ ಶತಮಾನದಲ್ಲಿ ಕ್ಯಾಲಿಫೊರ್ನಿಯಾದಲ್ಲಿ ಆಲಿವ್‌ ಬೆಳಸಲಾಯಿತು. ಇಂದು ವಿಶ್ವಾದ್ಯಂತ ಸುಮಾರು 800 ದಶಲಕ್ಷ ಆಲಿವ್ ಮರಗಳಿವೆ. ಇವುಗಳಲ್ಲಿ ಹೆಚ್ಚಿನವು ಮೆಡಿಟೆರೇನಿಯನ್‌ ದೇಶಗಳಲ್ಲಿ ಕಂಡುಬಂದಿವೆ. [ಸೂಕ್ತ ಉಲ್ಲೇಖನ ಬೇಕು]

ಹಳೆಯ ಆಲಿವ್‌ ಮರಗಳು

[ಬದಲಾಯಿಸಿ]
ಮಾಂಟೆನಿಗ್ರೊದ ಬಾರ್‌ನಲ್ಲಿರುವ ಆಲಿಯಾ ಯುರೊಪಿಯಾ ಆಲಿವ್‌ ಮರ. ಇದು 2,000 ವರ್ಷಗಳಿಗಿಂಗಲೂ ಹೆಚ್ಚು ಹಳೆಯದು.

ಆಲಿವ್‌ ಮರಗಳು ಬಹಳ ದೃಢವಾಗಿದ್ದು, ಬರಗಾಲ, ರೋಗ ಹಾಗೂ ಬೆಂಕಿಗಳನ್ನು ನಿರೋಧಿಸಬಲ್ಲವು. ಇವು ಬಹಳ ವರ್ಷಗಳ ಕಾಲ ಬದುಕಬಲ್ಲವು. ಇದರ ಬೇರು ವ್ಯವಸ್ಥೆಯು ಸಧೃಢವಾಗಿದ್ದು, ಭೂಮಿಯ ಮೇಲಿನ ಭಾಗವು ನಾಶವಾಗಿದ್ದರೂ, ಮರವನ್ನು ಪುನಃ ಬೆಳೆಸುವ ಸಾಮರ್ಥ್ಯ ಹೊಂದಿವೆ. ಆಲಿವ್‌ ಮರಕ್ಕೆ ಆಯುಸ್ಸು ಹೆಚ್ಚಾದಷ್ಟು, ಅದರ ಕಾಂಡವು ಇನ್ನಷ್ಟು ಅಗಲ ಹಾಗೂ ಇನ್ನಷ್ಟು ತಿರುಚಿದಂತೆ ಹಾಣುತ್ತದೆ. ಮೆಡಿಟೆರೇನಿಯನ್‌ ವಲಯದ ಸುತ್ತಲೂ ಇರುವ ತೋಪುಗಳಲ್ಲಿನ ಹಲವು ಆಲಿವ್‌ ಮರಗಳು ಹಲವು ಶತಮಾನಗಳಷ್ಟು ಹಳೆಯದಾಗಿವೆ. ಕೆಲವು ಪ್ರಕರಣಗಳಲ್ಲಿ ಇವೆಲ್ಲವನ್ನೂ ವೈಜ್ಞಾನಿಕವಾಗಿ ಪರಿಶೀಲಿಸಲಾಗಿದೆ. ರೇಡಿಯೊಕಾರ್ಬನ್‌ ಡೇಟಿಂಗ್‌ ವಿಶ್ಲೇಷಣೆಯ ಪ್ರಕಾರ, ಪೊರ್ಚುಗಲ್‌ಅಲ್ಗಾರ್ವ್‌ನಲ್ಲಿರುವ ಆಲಿವ್‌ ಮರವು 2000 ವರ್ಷಗಳಷ್ಟು ಹಳೆಯದು.[೧೪] ಪ್ಲಿನಿ ದಿ ಎಲ್ಡರ್‌ ವಿವರಣೆಯ ಪ್ರಕಾರ, ಪವಿತ್ರ ಗ್ರೀಕ್‌ ಆಲಿವ್‌ ಮರವು 1,600 ವರ್ಷ ಹಳೆಯದು ಎನ್ನಲಾಗಿದೆ. ಜೆರುಸಲೆಮ್‌ನ ಗೆತ್ಸೆಮೇನ್‌ ತೋಟದಲ್ಲಿರುವ (ಯೆಹೂದ್ಯ ಭಾಷೆ 'ಗತ್‌ ಷೆಮಾನಿಮ್‌' ಅಥವಾ ಆಲಿವ್‌ ಗಿರಣಿ) ಹಲವು ಮರಗಳು ಯೇಸು ಕ್ರಿಸ್ತನ ಕಾಲದಷ್ಟು ಹಿಂದಿನದು ಎಂದು ತಿಳಿದುಬಂದಿದೆ.[೧೫] ಇಟಲಿಯ ಕೆಲವು ಆಲಿವ್‌ ಮರಗಳು ರೋಮನ್‌ ಯುಗದಷ್ಟು ಹಿಂದಿನವು ಎಂದು ಭಾವಿಸಲಾಗಿದೆ. ಆದರೂ ಪುರಾತನ ಮೂಲಗಳಲ್ಲಿ ಮೂಲಜನಕ ಮರಗಳನ್ನು ಗುರುತಿಸುವುದು ಕಷ್ಟಕರ. ಮಾಂಟೆನಿಗ್ರೊದ ಬಾರ್‌ನಲ್ಲಿರುವ ಆಲಿವ್‌ ಮರವು ಸುಮಾರು 2,000 ವರ್ಷಗಳಿಗಿಂತಲೂ ಹಳೆಯದು ಎನ್ನಲಾಗಿದೆ.[೧೬] ಜೊತೆಗೆ, ಕ್ರೆಟ್‌ನಲ್ಲಿರುವ ಆಲಿವ್‌ ಮರದ ಆಯುಸ್ಸು ಸುಮಾರು 2,000 ವರ್ಷ ಎನ್ನಲಾಗಿದ್ದು, ಮರದ ಉಂಗುರಾಕಾರ ವಿಶ್ಲೇಷಣೆಯ ಆಧಾರದ ಮೇಲೆ ನಿರ್ಣಯಿಸಲಾಗಿದೆ.[೧೭] ಕ್ರೊಯೆಷಿಯಾಇಸ್ಟ್ರಿಯಾದಲ್ಲಿರುವ ಬ್ರಿಜುನಿ (ಬ್ರಿಯೊನಿ) ದ್ವೀಪದಲ್ಲಿ ಇನ್ನೊಂದು ಚಿರಪರಿಚಿತ ಆಲಿವ ಮರದ ಆಯುಸ್ಸು 1,600 ವರ್ಷಗಳು ಎಂದು ಲೆಕ್ಕಹಾಕಲಾಗಿದೆ. ಇಂದಿಗೂ ಸಹ ಈ ಮರದಲ್ಲಿ ಹಣ್ಣುಗಳು ಲಭಿಸುತ್ತವೆ (ವರ್ಷಕ್ಕೆ ಸುಮಾರು 30 kg (66 lb)*ಹಣ್ಣುಗಳು) ಈ ಹಣ್ಣುಗಳಿಂದ ಉತ್ತಮ ಗುಣಮಟ್ಟದ ಆಲಿವ್‌ ತೈಲ ತಯಾರಿಸಬಹುದು.[೧೮] ಪಶ್ಚಿಮ ಅಥೆನ್ಸ್‌ನಲ್ಲಿರುವ ಒಂದು ಆಲಿವ್‌ ಮರವನ್ನು 'ಪ್ಲಾಟೊರ ಆಲಿವ್‌ ಮರ' ಎನ್ನಲಾಗಿದೆ.ಇದು ಪ್ಲಾಟೊಅಕಾಡೆಮಿ ಸ್ಥಾಪಿತವಾಗಿದ್ದ ಸ್ಥಳದಲ್ಲಿದ್ದ ಆಲಿವ್ ತೋಪಿನ ಅವಶೇಷವಾಗಿದೆ ಎನ್ನುವ ವದಂತಿಯಿದೆ. ಈ ಮರವು ಸುಮಾರು 2,400 ವರ್ಷಗಳು ಹಿಂದಿನದು ಎಂದು ಅಂದಾಜು ಮಾಡಲಾಗಿದೆ.

ಈ ಮರವು ರಂಧ್ರಮಯ ಕಾಂಡವನ್ನು ಹೊಂದಿತ್ತು. ಇಸವಿ 1975ರಲ್ಲಿ ಅದರಿಂದ ಕೆಲವು ಕೊಂಬೆಗಳು ಹೊಮ್ಮಿದ್ದವು. ಆದರೆ ರಸ್ತೆ ಅಪಘಾತದಲ್ಲಿ ಬಸ್ಸೊಂದು ಅದರ ಮೇಲೆ ಬಿದ್ದು, ಬುಡಸಹಿತ ಕಿತ್ತುಬಂತು. ಅಂದಿನಿಂದಲೂ, ಈ ಮರದ ಕಾಂಡವನ್ನು ಸಂರಕ್ಷಿಸಿ, ಸನಿಹದಲ್ಲಿರುವ ಅಥೆನ್ಸ್‌ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇನ್ನಷ್ಟು ಹಳೆಯದು ಎನ್ನಲಾದ ಪೇಸಿಸ್ಟ್ರಾಟೊಸ್‌ ಮರವು ಅಗ್ಯೊಯಿ ಅನರಗಿರೊಯಿ ಸ್ಥಳೀಯ ಆಡಳಿತ ಪ್ರದೇಶದ ಸೆಫಿಸಸ್‌ ನದಿಯ ದಂಡೆಯಲ್ಲಿದೆ. ಕ್ರಿಸ್ತಪೂರ್ವ ಆರನೆಯ ಶತಮಾನದಲ್ಲಿ ಅಥೆನ್ಸ್‌ನ ನಿರಂಕುಶಾಧಿಕಾರಿ ಪೇಸಿಸ್ಟ್ರಾಟೊಸ್‌ ನೆಟ್ಟಿದ್ದ ಆಲಿವ್ ತೋಪಿನ ಅವಶೇಷವೇ ಈ ಮರ.

ಇತ್ತೀಚೆಗಿನ ವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಬೈಬಲ್ಲಿಗೆ ಸಂಬಂಧಿಸಿದ ಪ್ಯಾಲೆಸ್ಟೀನ್‌ನಲ್ಲಿ, ಇಸ್ಲಾಂ ಧರ್ಮ ಉದಯಿಸುವುದಕ್ಕಿಂತ ಮುಂಚೆಯೇ, 1600-2000ವರ್ಷಗಳಷ್ಟು ಹಳೆಯದಾದ ಇಂತಹ ಹತ್ತಾರು ಪುರಾತನ ಆಲಿವ್‌ ಮರಗಳಿವೆ.[೧೯] ವಿಶಿಷ್ಟವಾಗಿ, ಅರಬಾ ಎಂಬ ಅರಬ್‌ ಪಟ್ಟಣದಲ್ಲಿನ ಎರಡು ಬೃಹತ್ ಗಾತ್ರದ ಆಲಿವ್‌ ಮರಗಳು ಹಾಗೂ ದೇರ್‌ ಹಾನ್ನಾದಲ್ಲಿನ ಐದು ಮರಗಳು (ಇವೆರಡೂ ಪ್ರದೇಶಗಳು ಗೆಲಿಲೀ ವಲಯದಲ್ಲಿವೆ) ಸುಮಾರು 3,000 ವರ್ಷಗಳಿಗಿಂತಲೂ ಹಳೆಯದು ಎಂದು ನಿರ್ಣಯಿಸಲಾಗಿದೆ. ಈ ಏಳೂ ಮರಗಳು ಇಂದಿಗೂ ಆಲಿವ್‌ ಹಣ್ಣುಗಳನ್ನು ಬಿಡುವುದನ್ನು ಮುಂದುವರಿಸಿವೆ.[೧೯] ಇಟಲಿ ದೇಶದ ಸಾರ್ಡಿನಿಯಾದಲ್ಲಿರುವ (ಲುರಾಸ್‌ ಸ್ಥಳೀಯ ಆಡಳಿತ ಪ್ರದೇಶ) ಸಾಂಟು ಬಾಲ್ಟೊಲು ಡಿ ಕರಾನಾ ದಲ್ಲಿರುವ ಮರವನ್ನು ಈ ಪ್ರದೇಶದ ನಿವಾಸಿಗಳು ಗೌರವದಿಂದಒಝಾಸ್ಟ್ರು ಎಂದು ಹೆಸರಿಸಿದ್ದು, ವಿವಿಧ ಅಧ್ಯಯನಗಳ ಪ್ರಕಾರ, ಈ ಮರವು 3,000ದಿಂದ 4,000 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ಇದೇ ನೈಸರ್ಗಿಕ ತೋಟದಲ್ಲಿ, ಇನ್ನಷ್ಟು ಸಹಸ್ರಮಾನ ಆಯಸ್ಸಿನ ಮರಗಳನ್ನು ನೋಡಬಹುದಾಗಿದೆ.

ಬೆಳೆ ಮತ್ತು ಉಪಯೋಗಗಳು

[ಬದಲಾಯಿಸಿ]
ಕಪ್ಪು ಬಣ್ಣದ ಆಲಿವ್‌ಗಳ ಒಂದು ಉದಾಹರಣೆ

ಆಲಿವ್‌ ತೈಲ, ಉತ್ಕೃಷ್ಟ ಮರ, ಆಲಿವ್‌ ಎಲೆ ಹಾಗು ಆಲಿವ್ ಹಣ್ಣುಗಳಿಗಾಗಿ ಅಲಿವ್ ಮರವನ್ನು ಬೆಳೆಸಲಾಗುತ್ತದೆ. ಆಲಿವ್‌ಗಳ ಸಂಗೋಪನೆಯ ಅತಿ ಹಿಂದಿನ ಸಾಕ್ಷ್ಯಗಳು ಇಂದಿನ ಜೊರ್ಡಾನ್‌ ದೇಶದಲ್ಲಿರುವ ಚಾಲ್ಕೊಲಿಥಿಕ್‌ ಯುಗದ,ತೆಲೇಲತ್‌ ಗಸುಲ್‌ನ ಪುರಾತತ್ವ ಸ್ಥಳದಲ್ಲಿವೆ. ಸಮುದ್ರಕ್ಕೆ ತೀರಾ ಹತ್ತಿರಕ್ಕಿಂತ ಹೆಚ್ಚು ದೂರದಲ್ಲಿ ನೆಟ್ಟರೆ ಅಲಿವ್ ಮರಗಳು ಸರಿಯಾಗಿ ಬೆಳೆಯದು ಎಂದು ಪ್ರಾಚೀನ ಕಾಲದ ರೈತರು ನಂಬಿದ್ದರು. 300 ಸ್ಟೆಡಿಯಾ (55.6 km (34.5 mi)*) ಮಿತಿ ಎಂದು ಥಿಯೊಫ್ರಾಸ್ಟಸ್‌ ನೀಡಿದ್ದಾರೆ. ಆಧುನಿಕ ಅನುಭವವು ಇದನ್ನು ಯಾವಾಗಲೂ ಖಚಿತಪಡಿಸುವುದಿಲ್ಲ. ಜೊತೆಗೆ, ಕರಾವಳಿ ಪ್ರದೇಶಕ್ಕೆ ಆದ್ಯತೆ ನೀಡಿದರೂ ಕೂಡ, ಸೂಕ್ತ ಹವಾಗುಣವಿದ್ದಲ್ಲಿ, ಇನ್ನಷ್ಟು ಒಳನಾಡಿನಲ್ಲಿ ಆಲಿವ್‌ ಮರಗಳನ್ನು ಬೆಳೆಸಲಾಗಿದೆ; ವಿಶೇಷವಾಗಿ ಹಿತಕರ ಚಳಿಗಾಲವಿರುವ ನೈಋತ್ಯ ಮೆಡಿಟರೇನಿಯನ್‌ ಐಬೀರಿಯಾ, ವಾಯವ್ಯ ಆಫ್ರಿಕಾ ಪ್ರದೇಶಗಳಲ್ಲಿ ಆಲಿವ್‌ ಮರಗಳನ್ನು ಬೆಳೆಸಲಾಗಿದೆ.

ಸ್ಪೇನ್‌ ದೇಶದ ಆಂಡಾಲೂಷಿಯಾಲ್ಲಿ ಆಲಿವ್‌ ತೋಟ

ಈಗ, ದಕ್ಷಿಣ ಆಫ್ರಿಕಾ, ಚಿಲಿ, ಆಸ್ಟ್ರೇಲಿಯಾ, ಮೆಡಿಟರೇನಿಯನ್‌ ಜಲಾನಯನ, ಇಸ್ರೇಲ್‌, ಪ್ಯಾಲೆಸ್ಟೀನಿಯನ್‌ ಪ್ರಾಂತ್ಯಗಳು ಹಾಗೂ ಕ್ಯಾಲಿಫೊರ್ನಿಯಾದಂತಹ ಮೆಡಿಟರೇನಿಯನ್‌ ಹವಾಗುಣ ಹೊಂದಿರುವ ವಿಶ್ವದ ಹಲವು ಪ್ರದೇಶಗಳು, ಹಾಗೂ ಸಮಶೀತೋಷ್ಣ ಹವಾಗುಣದ ದೇಶವಾದ ನ್ಯೂಜೀಲೆಂಡ್‌, ಮರುಭೂಮಿ ಹವಾಮಾನದ ಅರ್ಜಂಟೈನಾದ ಕುಯೊ ಪ್ರದೇಶಗಳಲ್ಲಿ ಆಲಿವ್‌ ನೀರಾವರಿ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ಮಳೆ ಹಾಗೂ ಶುಷ್ಕ ಚಳಿಗಾಲವುಳ್ಳ ಸಮಶೀತೋಷ್ಣ ವಲಯವಾದ ಅರ್ಜೆಂಟೀನಾ ದೇಶದ ಕಾರ್ಡೊಬಾ ಪ್ರಾಂತ್ಯದಲ್ಲಿಯೂ ಸಹ ಆಲಿವ್‌ ಬೆಳೆಸಲಾಗುತ್ತದೆ (Cwa).[೨೦] ಅರ್ಜೆಂಟೀನಾದ ಹವಾಗುಣವು ಗಿಡದ ಬಾಹ್ಯ ಗುಣಲಕ್ಷಣಗಳನ್ನು ಬದಲಿಸುತ್ತದೆ. ಆದರೆ ಹಣ್ಣು ತನ್ನ ಮೂಲ ಗುಣಗಳನ್ನು ಉಳಿಸಿಕೊಳ್ಳುತ್ತವೆ.[೨೧]

ಇಸ್ರೇಲ್‌ ದೇಶದ ಟೆಲ್‌ ಅವಿವ್‌ ನಗರದ ಮಾರುಕಟ್ಟೆಯಲ್ಲಿ ಆಲಿವ್‌ ಸಂಗ್ರಹ.

ಆಲಿವ್‌ ಹಣ್ಣುಗಳು, ಆಲಿವ್‌ ಎಲೆ ಮತ್ತು ಆಲಿವ್‌ ತೈಲಗಳನ್ನು ಸೇವಿಸುವುದರಿಂದ ಲಭಿಸುವ ಆರೋಗ್ಯ ಅನುಕೂಲಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ಪುಷ್ಟಿ ನೀಡುತ್ತವೆ (ಸಂಶೋಧನಾ ಫಲಿತಾಂಶಗಳಿಗಾಗಿ, ಕೆಳಗೆ ನೀಡಲಾದ ಬಾಹ್ಯ ಕೊಂಡಿಗಳನ್ನು ನೋಡಿ). ಔಷಧೀಯ ಚಹಾಗಳಲ್ಲಿ ಆಲಿವ್‌ ಎಲೆಗಳನ್ನು ಬಳಸಲಾಗಿದೆ. ಆಲಿವ್‌ಗಳನ್ನು [೨೨] ಈಗ ನವೀಕರಿಸಬಹುದಾದ ಇಂಧನ ಮೂಲವನ್ನಾಗಿ ಬಳಸುವುದನ್ನು ಕಾಣಲಾಗಿದೆ. ಆಲಿವ್‌ ಗಿಡಗಳಿಂದ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಇಂಧನ ಮೂಲವನ್ನಾಗಿ ಬಳಸಲಾಗುತ್ತದೆ. ಅಷ್ಟೇ ಪ್ರಮಾಣದಲ್ಲಿ ಮರವನ್ನು ಸುಟ್ಟು ಉತ್ಪಾದಿಸುವ ಇಂಧನದ 2.5ರಷ್ಟು ಹೆಚ್ಚು ಪ್ರಮಾಣದ ಇಂಧನವು ಆಲಿವ್‌ ತ್ಯಾಜ್ಯದಿಂದ ಲಭಿಸುವುದು. ಆಲಿವ್‌ ತ್ಯಾಜ್ಯ ಸುಡುವುದರಿಂದ ಬಿಡುಗಡೆಯಾಗುವ ಹೊಗೆಯು ನೆರೆಹೊರೆಯವರು ಅಥವಾ ವಾತಾವರಣಕ್ಕೆ ಯಾವುದೇ ಪ್ರತಿಕೂಲ ಪರಿಣಾಮ ಬೀರದು, ಒಲೆಯಲ್ಲಿ ಉಳಿದುಕೊಂಡ ಬೂದಿಯನ್ನು ತೋಟಗಳು ಮತ್ತು ಸಸ್ಯಗಳನ್ನು ಫಲವತ್ತಾಗಿಲು ಬಳಸಬಹುದು. ಈ ಕಾರ್ಯವಿಧಾನವು ಮಧ್ಯಪ್ರಾಚ್ಯ ಹಾಗೂ ಅಮೆರಿಕಾ ದೇಶದಲ್ಲಿ ಹಕ್ಕುಸ್ವಾಮ್ಯ ಹೊಂದಿದೆ. (ಉದಾಹರಣೆಗೆ [೨೩]).

ಉಪಜಾತಿಗಳು

[ಬದಲಾಯಿಸಿ]

ವಿಶಾಲ ವ್ಯಾಪ್ತಿಯಲ್ಲಿ ವಿತರಣೆಯಾದ ಆಲಿವ್‌ ಗಿಡದ ಆರು ನೈಸರ್ಗಿಕ ಉಪಜಾತಿಗಳಿವೆ:[೨೪]

  • ಆಲಿಯಾ ಯುರೊಪಿಯಾ ಉಪಜಾತಿ ಯುರೋಪಿಯಾ (europaea) (ಮೆಡಿಟರೇನಿಯನ್‌ ಬೋಗುಣಿ)
  • ಆಲಿಯಾ ಯುರೊಪಿಯಾ ಉಪಜಾತಿ ಕಸ್ಪಿಡೇಟಾ (cuspidata) (ದಕ್ಷಿಣ ಆಫ್ರಿಕಾದಿಂದ ಹಿಡಿದು ಪೂರ್ವ ಆಫ್ರಿಕಾ, ಅರಬಿಯಾ ಹಾಗೂ ನೈಋತ್ಯ ಚೀನಾ ವರೆಗೆ)
  • ಆಲಿಯಾ ಯುರೊಪಿಯಾ ಉಪಜಾತಿ ಗುವಾಂಚಿಜಾ (guanchica) (ಕ್ಯಾನರೀಸ್‌)
  • ಆಲಿಯಾ ಯುರೊಪಿಯಾ ಉಪಜಾತಿ ಸೆರಾಸಿಫಾರ್ಮಿಸ್‌ (cerasiformis) (ಮೆಡೇರಾ)
  • ಆಲಿಯಾ ಯುರೊಪಿಯಾ ಉಪಜಾತಿ ಮರೊಕನಾ (maroccana) ಮೊರೊಕೊ
  • ಆಲಿಯಾ ಯುರೊಪಿಯಾ ಉಪಜಾತಿ ಲ್ಯಾಪೆರಿನೀ (laperrinei) (ಅಲ್ಜೀರಿಯಾ, ಸುದಾನ್‌, ನೈಜರ್)

ಮರೊಕನಾ ಮತ್ತು ಸೆರಾಸಿಫಾರ್ಮಿಸ್ ‌ ಕ್ರಮವಾಗಿ ಹೆಕ್ಸಾಪ್ಲಾಯಿಡ್ (ಆರು ಕ್ರೊಮೊಸೋಮ್‌ ತಂಡಗಳ ಜೀವಕೋಶ)ಹಾಗು ಟೆಟ್ರಾಪ್ಲಾಯಿಡ್( ನಾಲ್ಕು ಕ್ರೊಮೊಸೋಮ್‌ ತಂಡಗಳ ಜೀವಕೋಶ) ಹೊಂದಿವೆ.[೨೫]

ಕೃಷಿ ಪ್ರಭೇದ

[ಬದಲಾಯಿಸಿ]

ಆಲಿವ್‌ನ ಸಾವಿರಾರು ಕೃಷಿ-ಪ್ರಭೇದಗಳಿವೆ. ಇಟಲಿಯೊಂದರಲ್ಲೇ ಕನಿಷ್ಠಪಕ್ಷ ಮುನ್ನೂರು ಕೃಷಿ-ಪ್ರಭೇದಗಳನ್ನು ಎಣಿಸಲಾಗಿದೆ, ಆದರೆ ಇವುಗಳಲ್ಲಿ ಕೇವಲ ಕೆಲವನ್ನು ಮಾತ್ರ ಭಾರಿ ಪ್ರಮಾಣದಲ್ಲಿ ಬೆಳೆಸಲಾಗಿದೆ. ಪುರಾತನ ವಿರವಣೆಗಳೊಂದಿಗೆ ಇವು ಯಾವುದನ್ನೂ ನಿಖರವಾಗಿ ಗುರುತಿಸಲಾಗದು. ಆದರೂ, ಒತ್ತೊತ್ತಾಗಿರುವ ಎಲೆಗಳುಳ್ಳ ಕೃಷಿ-ಪ್ರಭೇದಗಳು ಲಿಸಿನಿಯನ್‌ ಆಲಿವ್‌ ಕುಲಕ್ಕೆ ಸೇರಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಐಬೀರಿಯನ್‌ ಆಲಿವ್‌‌ಗಳನ್ನು ಸಾಮಾನ್ಯವಾಗಿ,ಬೀಜಗಳನ್ನು ತೆಗೆದು,ತುಂಬಿ (ಪಿಮೆಂಟೊ, ಆಂಚೊವಿಗಳು ಅಥವಾ ಇತರೆ ಮಿಶ್ರಣಗಳೊಂದಿಗೆ ಸೇರಿಸಿ) ಉಪ್ಪುನೀರಿನಲ್ಲಿ ನೆನೆಹಾಕಿ ಜಾಡಿಗಳಲ್ಲೋ ಡಬ್ಬಗಳಲ್ಲೋ ಸಿದ್ಧಪಡಿಸಿದ ನಂತರ, ಕೆಡದಂತೆ ರಕ್ಷಿಸಿಟ್ಟು ತಿನ್ನಲಾಗುತ್ತದೆ. ಇನ್ನೂ ಕೆಲವರು ತಮ್ಮ ಮನೆಗಳಲ್ಲಿ ಆಲಿವ್‌ಗಳನ್ನು ಉಪ್ಪಿನ ದ್ರಾವಣದಲ್ಲಿ ಇರಿಸುತ್ತಾರೆ.

ಮನೆಯಲ್ಲಿ ಉಪ್ಪಿನ ದ್ರಾವಣದಲ್ಲಿ ಅದ್ದಿದ ಆಲಿವ್‌

ಆಲಿವ್‌ ಗಿಡದ ಹಲವು ಕೃಷಿ-ಪ್ರಭೇದಗಳು ಸ್ವತಃ ಫಲವತ್ತಾಗಿರದ ಕಾರಣ, ಅವುಗಳನ್ನು ಜೋಡಿಯಾಗಿಯೇ ನೆಡಲಾಗುತ್ತದೆ. ಮುಖ್ಯ ಕೃಷಿ-ಪ್ರಭೇದದ ಸಂತಾನೋತ್ಪತ್ತಿಗಾಗಿ ಒಂಟಿ ಮುಖ್ಯ ಕೃಷಿ-ಪ್ರಭೇದ ಹಾಗೂ ಎರಡನೆಯ ಕೃಷಿ-ಪ್ರಭೇದವನ್ನು ಆಯ್ದು ಜೋಡಿಯಾಗಿ ನೆಡಲಾಗುತ್ತದೆ. ರೋಗಗಳನ್ನು ನಿರೋಧಿಸುವ, ವೇಗವಾಗಿ ಬೆಳೆಯಬಲ್ಲ, ದೊಡ್ಡ ಅಥವಾ ಇನ್ನಷ್ಟು ಸುಸಂಗತ ಫಸಲುಗಳನ್ನು ನೀಡಬಲ್ಲ ಗುಣಗಳುಳ್ಳ ಮಿಶ್ರತಳಿ ಕೃಷಿ-ಪ್ರಭೇದಗಳನ್ನು ಉತ್ಪಾದಿಸುವ ಯತ್ನಗಳು ಇತ್ತೀಚಿನ ಸಮಯದಲ್ಲಿ ನಡೆದಿವೆ. ಆಲಿವ್‌ನ ವಿಶಿಷ್ಟವಾಗಿ ಪ್ರಮುಖ ಕೃಷಿ ಪ್ರಭೇದಗಳಲ್ಲಿ ಕೆಳಕಂಡವು ಸೇರಿವೆ:

  • ಆಮ್ಫಿಸಾ ಎಂಬುದು ಅತ್ಯುತ್ತಮ ಗುಣಮಟ್ಟದ ಗ್ರೀಕ್‌ ಟೇಬಲ್ ಆಲಿವ್‌. ಕೇಂದ್ರೀಯ ಗ್ರೀಸ್‌ನಲ್ಲಿ ಡೆಲ್ಫೈ ದೇವವಾಣಿ ಕ್ಷೇತ್ರದ ಬಳಿ ಆಮ್ಫಿಸಾದಲ್ಲಿ ಬೆಳೆಸಲಾಗುತ್ತದೆ. ಆಮ್ಫಿಸಾ ಆಲಿವ್‌ಗಳು ಪ್ರೊಟೆಕ್ಟಡ್ ಡಿಸೈನೇಷನ್ ಆಫ್ ಒರಿಜಿನ್ (ಮೂಲ ಸ್ಥಳದ ರಕ್ಷಿತ ಹೆಸರು) (PDO) ಸ್ಥಿತಿ ಹೊಂದಿದ್ದು, ಇದು ಆಲಿವ್ ತೈಲ ಸಂಸ್ಕರಣಕ್ಕೆ ಕೂಡ ಒಳ್ಳೆಯದು. ಆಮ್ಫಿಸಾದಲ್ಲಿರುವ ಆಲಿವ್‌ ತೋಪಿನಲ್ಲಿ ಸುಮಾರು 1,200,000 ಆಲಿವ್‌ ಮರಗಳಿವೆ. ಇವು ರಕ್ಷಿತ ನೈಸರ್ಗಿಕ ಭೂಚಿತ್ರಣದ ಭಾಗವಾಗಿದೆ.
  • ಉತ್ತರ ತುರ್ಕಿ ದೇಶದ ಗೆಮ್ಲಿಕ್‌ ಪ್ರದೇಶದ ಗೆಮ್ಲಿಕ್‌ ಎಂಬುದು ಆಲಿವ್‌ನ ಒಂದು‌ ಪ್ರಭೇದವಾಗಿದೆ. ಹೆಚ್ಚು ತೈಲ ಅಂಶ ಹೊಂದಿರುವ ಈ ಆಲಿವ್‌ಗಳು ಸಣ್ಣ ಗಾತ್ರದಿಂದ ಮಧ್ಯಮ ಗಾತ್ರದ ಕಪ್ಪು ಬಣ್ಣದಿಂದ ಕೂಡಿವೆ. ತುರ್ಕಿಯಲ್ಲಿ ಇಂತಹ ಆಲಿವ್‌ಗಳು ಸರ್ವೇಸಾಮಾನ್ಯ. ಇವನ್ನು ಯಗ್ಲಿ ಸೆಲೆ, ಸಲಾಮುರಾ ಅಥವಾ ಡ್ಯುಬಲ್ ಎಂಬ ಹದಗೊಳಿಸಿದ ಸ್ವರೂಪಗಳಲ್ಲಿ ಬೆಳಗಿನ ತಿಂಡಿಯ ಆಲಿವ್‌ನಂತೆ ಮಾರಲಾಗುತ್ತದೆ. ಸಾಂಪ್ರದಾಯಿಕವಾಗಿ ಹದ ಮಾಡಲಾದ ಗೆಮ್ಲಿಕ್‌ ಆಲಿವ್‌ನ ಲಕ್ಷಣವೇನೆಂದರೆ ಹಣ್ಣಿನ ತಿರುಳು ಬೀಜದಿಂದ ಸುಲಭವಾಗಿ ಬೇರ್ಪಡುತ್ತದೆ.
  • 'ಬೊಸಾನಾ' ಎಂಬುದು ಸಾರ್ಡಿನಿಯಾದಲ್ಲಿ ಬೆಳೆಸಲಾದ ಅತಿ ಸಾಮಾನ್ಯ ಆಲಿವ್‌. ಇದನ್ನು ಹೆಚ್ಚಾಗಿ ತೈಲಗಳಿಗಾಗಿ ಬಳಸಲಾಗುತ್ತದೆ.
  • ಮಂಝಾನಿಲೊ ಅಥವಾ ಮಾಂಝಾನಿಲಾ ಎಂಬುದು ದೊಡ್ಡ ಗಾತ್ರದ, ದುಂಡಗಿನ-ಅಂಡಾಕಾರದ ಹಣ್ಣು. ಇದು ನೇರಳೆ-ಹಸಿರು ಸಿಪ್ಪೆಯನ್ನು ಹೊಂದಿದೆ. ದಕ್ಷಿಣ ಸ್ಪೇನ್‌ನ ಸೆವಿಲ್‌ನಲ್ಲಿನ ಡಾಸ್‌ ಹರ್ಮಾನಾಸ್‌ ಇದರ ಮೂಲ. ಸ್ಪ್ಯಾನಿಷ್‌ ಭಾಷೆಯಲ್ಲಿ ಮಾಂಝಾನಿಲಾ ಎಂದರೆ ಸಣ್ಣ ಸೇಬು ಎಂದರ್ಥ. ಇದು ಸಮೃದ್ಧ ರುಚಿ ಹಾಗೂ ದಪ್ಪನಾದ ತಿರುಳಿಗೆ ಹೆಸರಾಗಿದೆ. ಇದು ಅತ್ಯುತ್ತಮ ವಾಹಕವಾಗಿದ್ದು, ವಿಶ್ವದಾದ್ಯಂತ ಬೆಳೆಸಲಾಗಿದೆ.
  • ಟಸ್ಕನಿಯ ಇಟಲಿ ಆಲಿವ್‌ ತೈಲಗಳಿಗಾಗಿ 'ಫ್ರಾಂಟೊಯೊ' ಹಾಗೂ ಲೆಕ್ಸಿನೊ' ಕೃಷಿ ಪ್ರಭೇದಗಳು ಪ್ರಮುಖ ಕಚ್ಚಾ ವಸ್ತುಗಳಾಗಿವೆ. ಲೆಕ್ಸಿನೊ ಮೃದು ಸಿಹಿ ರುಚಿಯನ್ನು ಹೊಂದಿದೆ. ಫ್ರಾಂಟೊಯೊ ಹಣ್ಣಿನ ರುಚಿಯುಳಿಕೆ ಪ್ರಬಲವಾಗಿರುತ್ತದೆ. ಇವುಗಳ ಅತ್ಯಮೂಲ್ಯ ರುಚಿಯ ಕಾರಣ, ಈ ಕೃಷಿ ಪ್ರಭೇದಗಳನ್ನು ಇಂದು ಇತರೆ ದೇಶಗಳಲ್ಲಿಯೂ ಬೆಳೆಸಲಾಗಿದೆ.
  • ಅರ್ಬೆಕ್ವಿನಾ ಎಂಬುದು ಸಣ್ಣ, ಕಂದುಬಣ್ಣದ ಆಲಿವ್‌. ಇದನ್ನು ಸ್ಪೇನ್‌ ದೇಶದ ಕ್ಯಾಟಲೊನಿಯಾದಲ್ಲಿ ಬೆಳೆಸಲಾಗಿದೆ. ಇದು ತಿನ್ನಲು ಹಾಗೂ ತೈಲ ಉದ್ದೇಶಗಳಿಗೆ ಒಳ್ಳೆಯದು.
  • ಕಾರ್ನಿಕಾಬ್ರಾ ಎಂಬುದು ಸ್ಪೇನ್‌ನ ಟೊಲೆಡೊ ಮೂಲದ್ದು. ಇದು ಸ್ಪೇನ್‌ನ ಉತ್ಪಾದನೆಯ 12%ರಷ್ಟಿದೆ. ಇದನ್ನು ಮುಖ್ಯವಾಗಿ ತೈಲಕ್ಕಾಗಿ ಬಳಸಲಾಗಿದೆ.
  • ಸ್ಪೇನ್‌ನಲ್ಲಿ ಬೆಳೆಸಲಾದ 'ಎಂಪೆಲ್ಟ್ರೆ' ಎಂಬ ಮಧ್ಯಮ ಗಾತ್ರದ ಕಪ್ಪು ಬಣ್ಣದ ಆಲಿವ್‌ ಸಹ ಉಭಯ ಉದ್ದೇಶದ ಹಣ್ಣು.
  • ಹೊಜಿಬ್ಲಾಂಕಾ ಎಂಬುದು ಸ್ಪೇನ್‌ನ ಕಾರ್ಡೊಬಾ ಪ್ರಾಂತ್ಯದ ಮೂಲ. ಇದರ ತೈಲವು ಸ್ವಲ್ಪ ಕಹಿ ಸುವಾಸನೆ ಹೊಂದಿರುವ ಕಾರಣ ಬಹಳಷ್ಟು ಜನಪ್ರಿಯವಾಗಿದೆ.
  • ಕಾಲಾಮಾಟಾ ಎಂಬುದು ನುಣಪಾದ, ಮಾಂಸದಂತಹ ರುಚಿಯುಳ್ಳ ದೊಡ್ಡ ಆಲಿವ್‌. ಗ್ರೀಸ್‌ ದೇಶದ ಕಾಲಾಮಾಟಾ ನಗರದ ಹೆಸರನ್ನು ಈ ಹಣ್ಣಿಗೆ ಸೂಚಿಸಲಾಗಿದೆ. ಇದನ್ನು ಮೇಜಿನ ಆಲಿವ್‌ ರೂಪದಲ್ಲಿ ಬಳಸಲಾಗಿದೆ. ಈ ಆಲಿವ್‌ಗಳನ್ನು ಸಾಮಾನ್ಯವಾಗಿ ವೈನ್‌, ದ್ರಾಕ್ಷಿ ರಸ ಅಥವಾ ಅಲಿವ್ ತೈಲದಲ್ಲಿ ಸಂರಕ್ಷಿಸಲಾಗುತ್ತದೆ. ಕಾಲಾಮಾಟಾ ಆಲಿವ್‌ಗಳು PDO ಸ್ಥಾನಮಾನ ಹೊಂದಿವೆ.[೨೬]
  • ಕೊರೊನೇಕಿ ಎಂಬುದು ದಕ್ಷಿಣ ಪೆಲೊಪೊನೀಸ್‌ ಮೂಲದಿಂದ ಬಂದಿದೆ. ಗ್ರೀಸ್‌ನಿಂದ ಕಾಲಾಮಾಟಾ ಮತ್ತು ಮಾನಿ ಪ್ರಭೇದಗಳು ಬಂದ ಕಾಲದಲ್ಲೇ ಇವೂ ಬಂದವು. ಈ ಸಣ್ಣ ಆಲಿವ್‌ನ್ನು ಬೆಳೆ ತೆಗೆಯಲು ಕಷ್ಟವಾದರೂ, ಇದರಿಂದ ಅತ್ಯುತ್ತಮ ಗುಣಮಟ್ಟದ ಅಲಿವ್‌ ತೈಲ ಹೆಚ್ಚಿನ ಪ್ರಮಾಣದಲ್ಲಿ ಲಭಿಸುತ್ತದೆ.
  • 'ಪಿಚೊಲಿನ್‌' ಅಥವಾ 'ಪೆಚೊಲಿನ್‌', ಫ್ರಾನ್ಸ್‌ನ ದಕ್ಷಿಣ ವಲಯದಲ್ಲಿ ಬೆಳೆಸಲಾಗಿದೆ. ಇದು ಹಸಿರು ಬಣ್ಣದ, ಮಧ್ಯಮ ಗಾತ್ರದ ಹಾಗೂ ಉದ್ದನೆಯ ಆಕಾರ ಹೊಂದಿದೆ. ಇದರದು ಮೃದುವಾದ, ಬೀಜದಂತ ರುಚಿ.
  • ದಕ್ಷಿಣ ಸ್ಪೇನ್‌ನ ಜೇಎನ್‌ ಪ್ರಾಂತ್ಯದ 'ಪಿಕ್ವಾಲ್' ಸ್ಪೇನ್‌ನಲ್ಲಿ‌ ವ್ಯಾಪಕವಾಗಿ ಕೊಯ್ಲು ಮಾಡಲಾದ ಆಲಿವ್‌. ಇದು ಸ್ಪೇನ್‌ನ ಆಲಿವ್ ಉತ್ಪಾದನೆಯ 50% ಹಾಗೂ ವಿಶ್ವದಲ್ಲೇ 20%ರಷ್ಟು ಆಲಿವ್‌ ಉತ್ಪಾದನೆಯ ಪಾಲಾಗಿದೆ. ಇದಕ್ಕೆ ಬಹಳ ಗಾಢವಾದ, ಆದರೆ ಸಿಹಿ ರುಚಿಯಿದೆ, ಇದನ್ನು ಸ್ಪೇನ್‌ ದೇಶದಲ್ಲಿ ಟೇಬಲ್‌ ಆಲಿವ್‌ ರೂಪದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜೊತೆಗೆ, ಇದರ ತೈಲವು, ಆಲಿವ್‌ ತೈಲದಲ್ಲಿ ಕಂಡುಬರುವ ಅತ್ಯುತ್ತಮ ರಾಸಾಯನಿಕ ಗುಣಗಳಲ್ಲಿ ಕೆಲವನ್ನು ಹೊಂದಿದೆ. ಇದರಲ್ಲಿ ಒಲಿಯಿಕ್‌ ಆಮ್ಲ ಹಾಗೂ ವಿಟಮಿನ್ Eಸಮೃದ್ಧವಾಗಿದೆ.. [ಸೂಕ್ತ ಉಲ್ಲೇಖನ ಬೇಕು]
  • ಲುಕ್ವೆಸ್‌ ಎಂಬುದು ಫ್ರಾನ್ಸ್‌ನ ದಕ್ಷಿಣ ಭಾಗದ ಆಡ್‌ ಡೆಪಾರ್ಟ್ಮೆಂಟ್‌ನಲ್ಲಿ ಬೆಳೆಸಲಾಗಿದೆ. ಅವು ಹಸಿರು ಬಣ್ಣ ಹೊಂದಿದ್ದು, ದೊಡ್ಡದಾಗಿವೆ ಹಾಗೂ ಉದ್ದನೆದಾಗಿವೆ. ಇದರ ಬೀಜ ಬಿಲ್ಲಿನ ಆಕಾರದಲ್ಲಿದೆ. ಇವುಗಳ ರುಚಿ ಸೌಮ್ಯ ಹಾಗು ಬೀಜಗಳ ರುಚಿಯಂತಿದೆ.
  • 'ಸೌರಿ'ಯನ್ನು ಲೆಬನಾನ್‌ ದೇಶದ ಸುರ್‌ (ಟೈರ್‌) ಪಟ್ಟಣದ ಸಮೀಪ ಬೆಳಸಿ, ಲೆವ್ಯಾಂಟ್‌ನಲ್ಲಿ ವ್ಯಾಪಕವಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಲಭಿಸುತ್ತದೆ ಹಾಗೂ ಉತ್ಕೃಷ್ಟ ಪರಿಮಳ ಹಾಗೂ ರುಚಿ ಹೊಂದಿದೆ.
  • ನಬಾಲಿ ಎಂಬ ಪ್ಯಾಲೆಸ್ಟಿನಿ ಕೃಷಿ ಪ್ರಭೇದ [೨೭] - ಇದನ್ನು ಬಾಲಾಡಿ ಎನ್ನಲಾಗಿದೆ. ಸೌರಿ ಮತ್ತು ಮಾಲಿಸಿ ಪ್ರಭೇದಗಳೊಂದಿಗೆ ಇದೂ ಸಹ ವಿಶ್ವದಲ್ಲೇ ಅತ್ಯುತ್ತಮ ಗುಣಮಟ್ಟದ ತೈಲ ಉತ್ಪಾದಿಸುತ್ತದೆ ಎನ್ನಲಾಗಿದೆ.[೨೮]
  • 'ಬಾರ್ನಿಯಾ' - ಇದು ಆಧುನಿಕ ದ್ವಿಮುಖ ಉದ್ದೇಶದ ಕೃಷಿ ಪ್ರಭೇದವಾಗಿದೆ. ಇದನ್ನು ಇಸ್ರೇಲ್‌ನಲ್ಲಿ ಬೆಳೆಸಲಾಗಿದ್ದು, ರೋಗ-ನಿರೋಧಕ ಗುಣಗಳನ್ನು ಹೊಂದಿದೆ ಹಾಗೂ ಹೇರಳ ಪ್ರಮಾಣದಲ್ಲಿ ಫಸಲು ಉತ್ಪಾದನೆಯ ಕ್ಷಮತೆ ಹೊಂದಿದೆ. ತೈಲವು ಬಹಳ ತೀಕ್ಷ್ಣ ಸುವಾಸನೆ ಹೊಂದಿದ್ದು, ಹಸಿರು ಎಲೆಯ ಪರಿಮಳದ ಅಂಶವನ್ನೂ ಹೊಂದಿದೆ. ಬಾರ್ನಿಯಾವನ್ನು ಇಸ್ರೇಲ್‌ ಹಾಗೂ ದಕ್ಷಿಣ ಗೋಲಾರ್ಧದಲ್ಲಿ, ಅದರಲ್ಲೂ ವಿಶಿಷ್ಟವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜೀಲೆಂಡ್‌ ದೇಶಗಳಲ್ಲಿಯೂ ಸಹ ಬೆಳೆಸಲಾಗುತ್ತಿದೆ.
  • 'ಮಾಲೊಟ್‌' ('ಮೆರಿಟ್ಸ್‌'ಗೆ ಯಹೂದ್ಯ ಭಾಷೆಯ ಅರ್ಥ) ರೋಗ-ನಿರೋಧಕ, ಪೂರ್ವ ಮೆಡಿಟರೇನಿಯನ್‌ ಕೃಷಿ-ಪ್ರಭೇದ. ಇಸ್ರೇಲ್‌ನಲ್ಲಿ ಬೆಳೆಸಲಾಗುತ್ತಿರುವ, ಉತ್ತರ ಆಫ್ರಿಕಾ ಮೂಲದ 'ಕೆಮ್ಲಾಲಿ' ಪ್ರಭೇದದಿಂದ ಪಡೆಯಲಾಗಿದೆ. ಈ ಆಲಿವ್‌ ಮದ್ಯಮ ಗಾತ್ರದ್ದಾಗಿದ್ದು, ಹಣ್ಣಿನಂತಹ ರುಚಿ ಹೊಂದಿದೆ. ಇದನ್ನು ವಿಶಿಷ್ಟವಾಗಿ ತೈಲ ಉತ್ಪಾದನೆಗೆ ಬಳಸಲಾಗಿದೆ.
  • ಮಿಷನ್‌ ಎಂಬುದು ಕ್ಯಾಲಿಫೊರ್ನಿಯಾ ಮಿಷನ್ಸ್‌ ಇಂದ ಉದ್ಭವವಾಯಿತು. ಇದು ರಾಜ್ಯವುದ್ದಕ್ಕೂ ಬೆಳೆಸಲಾಗಿದೆ. ಇವು ಕಪ್ಪು ಬಣ್ಣದ್ದಾಗಿದ್ದು, ಸಾಮಾನ್ಯವಾಗಿ ಊಟ ಅಥವಾ ತಿಂಡಿಯ ಜೊತೆಗೆ ಸೇವಿಸಲು ಸೂಕ್ತವಾಗಿದೆ.

ಬೆಳವಣಿಗೆ ಮತ್ತು ಪಸರಿಸುವಿಕೆ

[ಬದಲಾಯಿಸಿ]
ಗ್ರೀಸ್‌ ದೇಶದ ಥಾಸೊಸ್‌‌ನಲ್ಲಿ ಆಲಿವ್‌ ಮರಗಳು

ಆಲಿವ್‌ ಮರಗಳು ಸಾಮಾನ್ಯವಾಗಿ ಸುಣ್ಣಯುಕ್ತ ಮಣ್ಣುಳ್ಳ ಪ್ರದೇಶಗಳಲ್ಲಿ ಬೆಳೆಯುತ್ತವೆ. ಇದು ಸುಣ್ಣಕಲ್ಲು ಇಳಿಜಾರುಗಳು ಮತ್ತು ಚಿಪ್ಪು-ಬೆರೆತ ಮರಳುಗಳು ಹಾಗೂ ಕರಾವಳಿಯ ಹವಾಗುಣಗಳಲ್ಲಿ ಬೆಳೆಯುತ್ತವೆ. ಅವು ಯಾವುದೇ ರೀತಿಯ 'ಹಗುರ' ಮಣ್ಣಿನಲ್ಲಿ ಬೆಳೆಯುತ್ತವೆ. ಚೆನ್ನಾಗಿ ಒಣಗಿದ ಆವೆಮಣ್ಣಲ್ಲಿಯೂ ಸಹ ಬೆಳೆಯುತ್ತದೆ. ಆದರೆ, ಕಳಪೆ ಮಣ್ಣಿಗಿಂತ ಸಮೃದ್ಧ ಮಣ್ಣಿನಲ್ಲಿ ಇವು ರೋಗಗಳಿಗೆ ತುತ್ತಾಗಿ ಕಳಪೆ ಗುಣಮಟ್ಟದ ಆಲಿವ್‌ ತೈಲ ಉತ್ಪಾದಿಸಬಹುದು. (ಇದನ್ನು ಪ್ಲಿನಿ ದಿ ಎಲ್ಡರ್‌ ಗಮನಿಸಿದ್ದರು.) ಆಲಿವ್‌ಗಳು ಹೆಚ್ಚಿನ ಉಷ್ಣಾಂಶದಲ್ಲಿ ಚೆನ್ನಾಗಿ ಬೆಳೆಯುತ್ತವೆ. −10 °C (14 °F)ಕ್ಕಿಂತಲೂ ಕಡಿಮೆ ಉಷ್ಣಾಂಶಗಳಲ್ಲಿ ಪಕ್ವವಾದ ಮರಗಳಿಗೂ ಹಾನಿಯೊಡ್ಡುವ ಸಾಧ್ಯತೆಗಳಿವೆ. ದೃಢ ಹಾಗೂ ವಿಸ್ತರಿತ ಬೇರು ವ್ಯವಸ್ಥೆ ಹೊಂದಿರುವ ಕಾರಣ, ಆಲಿವ್‌ ಮರಗಳು ಬರಗಾಲವನ್ನು ನಿಭಾಯಿಸಬಲ್ಲವು. ಸಮರ್ಪಕವಾಗಿ ಮತ್ತು ನಿಯಮಿತವಾಗಿ ಓರಣಗೊಳಿಸಿದಲ್ಲಿ, ಆಲಿವ್‌ ಮರಗಳು ಬಹಳಷ್ಟು ದೀರ್ಘಕಾಲ ಹಲವು ಶತಮಾನಗಳ ವರೆಗೂ ಉಳಿದುಕೊಳ್ಳಬಲ್ಲವು ಮತ್ತು ಉತ್ಪನ್ನಕಾರಿಯಾಗಿ ದೀರ್ಘಕಾಲ ಉಳಿಯಬಲ್ಲದು. ಆಲಿವ್‌ ಮರಗಳು ಬಹಳ ನಿಧಾನವಾಗಿ ಬೆಳೆಯುತ್ತವೆ. ಹಲವು ವರ್ಷಗಳ ಅವಧಿಯಲ್ಲಿ ಮರದ ಕಾಂಡವು ಗಮನಾರ್ಹ ವ್ಯಾಸದಷ್ಟು ಹಿಗ್ಗುತ್ತವೆ. ಆಲಿವ್‌ ಮರವೊಂದರ ಕಾಂಡದ ಸುತ್ತಳತೆ 10 metres (33 ft) ಮೀರಿದ್ದನ್ನು ಎ. ಪಿ. ಡಿ ಕ್ಯಾಂಡೊಲ್‌ ದಾಖಲಿಸಿದ್ದರು. ಆಲಿವ್‌ ಮರಗಳು 15 metres (49 ft) ಎತ್ತರವನ್ನು ಮೀರುವುದು ಬಹಳ ವಿರಳ. ನಿಯಮಿತ ಓರಣಗೊಳಿಸುವಿಕೆಯಿಂದ ಆಲಿವ್‌ ಮರಗಳು ಇನ್ನಷ್ಟು ಸೀಮಿತ ಅಳತೆಗಳಿಗೆ ಹೊಂದಿಸಬಹುದಾಗಿದೆ. ಹಳದಿ ಅಥವಾ ತಿಳಿ ಹಸಿರು-ಕಂದು ಬಣ್ಣದ ಮರವು ಕಡು ಬಣ್ಣದ ಎಳೆಗಳಿಂದ ಕೂಡಿರುತ್ತದೆ. ಈ ಮರವು ಅತಿ ಗಟ್ಟಿ ಹಾಗೂ ಸಮೀಪದ ಗೆರೆಗಳನ್ನು(ಉಂಗುರಗಳು) ಹೊಂದಿವೆ. ಮರಗೆಲಸದವರು ಇದಕ್ಕೆ ಉತ್ತಮ ಮೌಲ್ಯ ನೀಡುತ್ತಾರೆ. ಮಿಶ್ರ ಪರಾಗಸ್ಪರ್ಶ ಮಾಡಲು ಬಳಸಲಾದ ಆಲಿವ್‌ ಪ್ರಭೇದಗಳಲ್ಲಿ ಕೇವಲ ಬೆರಳಣಿಕೆಯಷ್ಟು ಮಾತ್ರ ಲಭ್ಯ. ಪೆಂಡೊಲಿನೊ ಆಲಿವ್‌ ಮರಗಳು ಭಾಗಶಃ ಸ್ವ-ಫಲವತ್ತತೆ ಹೊಂದಿದೆ, ಆದರೆ ದೊಡ್ಡ ಹಣ್ಣಿನ ಫಸಲಿಗಾಗಿ ಪರಾಗಸ್ಪರ್ಶಕದ ಅಗತ್ಯವಿದೆ. ಆಲಿವ್‌ ಮರಗಳಿಗೆ ಸರಿಹೊಂದುವಂತಹ ಪರಾಗಸ್ಪರ್ಶ ವಾಹಕಗಳಲ್ಲಿ(ಪಾಲಿನೈಜರ್) ಲೆಕ್ಸಿನೊ ಮತ್ತು ಮೌರಿನೊ ಸೇರಿವೆ. ದೊಡ್ಡ ಆಲಿವ್‌ ಮರ ತೋಪುಗಳಲ್ಲಿ ಪೆಂಡೊಲಿನೊ ಆಲಿವ್‌ ಮರಗಳನ್ನು ಪರಾಗಸ್ಪರ್ಶಕ ವಾಹಕವನ್ನಾಗಿ ಬಳಸಲಾಗುತ್ತಿವೆ. ಆಲಿವ್‌ಗಳನ್ನು ವಿಭಿನ್ನ ವಿಧಾನಗಳಲ್ಲಿ ಪಸರಿಸಲಾಗುತ್ತದೆ. ಕತ್ತರಿಸುವಿಕೆ ಅಥವಾ ಪದರಗಳು ಸಮರ್ಪಕ ವಿಧಾನಗಳಾಗಿವೆ. ಮರದ ಬೇರುಗಳು ಅನುಕೂಲವಾಗಿರುವ ಮಣ್ಣಿನಲ್ಲಿ ಸರಾಗವಾಗಿ ಬೇರೂರುತ್ತವೆ. ಮರವನ್ನು ಕಡಿದಾಗ ಅದರಿಂದ ಚೂಷಕಗಳನ್ನು ಉತ್ಪತ್ತಿಮಾಡುತ್ತದೆ. ಆದರೆ, ಚೂಷಕಗಳು ಅಥವಾ ಬೀಜಗಳಿಂದ ಬೆಳೆದ ಮರಗಳಲ್ಲಿ ಹಣ್ಣು ಮತ್ತು ತೈಲ ಉತ್ಪಾದನೆ ತೀರಾ ಕಡಿಮೆ. ಆದ್ದರಿಂದ, ಅವು ಚೆನ್ನಾಗಿ ಬೆಳೆಯಬೇಕೆಂದರೆ, ಅವುಗಳನ್ನು ಇತರೆ ಆಲಿವ್‌ ಪ್ರಭೇದಗಳೊಂದಿಗೆ ಬಡ್ಡಿಂಗ್ ಮಾಡಬೇಕು ಅಥವಾ ಕಸಿ ಕಟ್ಟಬೇಕು (ಲೆವಿಂಗ್ಟನ್‌ ಮತ್ತು ಪಾರ್ಕರ್‌, 114). ವಿವಿಧ ದಪ್ಪದ ಕೊಂಬೆಗಳನ್ನು 1 metre (3.3 ft) ಉದ್ದದ ವರೆಗೆ ಕತ್ತರಿಸಿ, ಗೊಬ್ಬರದ ಮಣ್ಣಲ್ಲಿ ಆಳವಾಗಿ ನೆಡಲಾಗುತ್ತದೆ. ಇವು ಅಲ್ಪಕಾಲದಲ್ಲೇ ಸಸ್ಯಗಳಂತೆ ಬೆಳೆಯುತ್ತವೆ. ಕೆಲವೊಮ್ಮೆ, ಕಡಿಮೆ ಆಳವಿರುವ ಹಳ್ಳಗಳಲ್ಲಿ ಕಡಿಮೆ ಉದ್ದದ ಕೊಂಬೆ ತುಂಡುಗಳನ್ನು ಅಡ್ಡಲಾಗಿಟ್ಟು, ಕೆಲವು ಸೆಂಟಿಮೀಟರ್‌ಗಳಷ್ಟು ಮಣ್ಣು ಮುಚ್ಚಿದಲ್ಲಿ ಅವು ಬಹುಬೇಗನೆ ಚೂಷಕದಂತಹ ಕಾಂಡಗಳನ್ನು ಹೊರಹೊಮ್ಮಿಸುತ್ತವೆ. ಗ್ರೀಸ್‌ನಲ್ಲಿ, ವನ್ಯ ಮರಕ್ಕೆ ಬೆಳೆಸಲಾದ ಮರವನ್ನು ಕಸಿ ಮಾಡುವುದು ಸಾಮಾನ್ಯ ಪದ್ಧತಿಯಾಗಿದೆ. ಇಟಲಿಯಲ್ಲಿ, ಕಾಂಡಗಳ ಮೇಲೆ ಸಣ್ಣ ಉಬ್ಬರಗಳನ್ನುಂಟು ಮಾಡುವ ಭ್ರೂಣೀಯ ಮೊಳಕೆಗಳನ್ನು ನಾಜೂಕಾಗಿ ಹೆಕ್ಕಿ, ಮಣ್ಣಿನಡಿ ನೆಡಲಾಗುತ್ತದೆ. ಇದು ಅಲ್ಪಕಾಲದಲ್ಲಿ ಕಾಂಡವಾಗಿ ಬೆಳೆಯುತ್ತದೆ. ಕೆಲವೊಮ್ಮೆ, ಎಳೆಯ ಮರಗಳನ್ನು ಪಡೆಯಲು, ದೊಡ್ಡ ಕೊಂಬೆಗಳನ್ನು ಕಸಿ ಮಾಡಿ ಇನ್ನೊಂದೆಡೆ ನೆಡಲಾಗುತ್ತದೆ [clarification needed]. ಆಲಿವ್‌ ಮರವನ್ನು ಕೆಲವೊಮ್ಮೆ ಬೀಜದಿಂದಲೂ ಬೆಳೆಸಲಾಗುತ್ತದೆ. ಮೊಳಕೆ ಒಡೆಯುವಂತೆ ಮಾಡಲು, ತೈಲಮಯ ಬೀಜಕೋಶವನ್ನು ಸ್ವಲ್ಪ ಮಟ್ಟಿಗೆ ಕೊಳೆಯುವಂತೆ ಮಾಡಿ, ಅಥವಾ ಬಿಸಿನೀರಿನಲ್ಲಿ ಅಥವಾ ಕ್ಷಾರೀಯ ದ್ರವದಲ್ಲಿ ನೆನೆಸಿ ಮೃದುಗೊಳಿಸಲಾಗುತ್ತದೆ. ಲ್ಯಾಂಗೆಡಾಕ್‌ ಮತ್ತು ಪ್ರೊವೆನ್ಸ್‌ನಂತಹ ಸ್ಥಳಗಳಲ್ಲಿ ಆಲಿವ್‌ನ್ನು ನಾಜೂಕಾಗಿ ಕೃಷಿ ಮಾಡಿ, ಮರಗಳನ್ನು ನಿಯಮಿತವಾಗಿ ಓರಣಗೊಳಿಸಲಾಗುತ್ತದೆ. ಓರಣಗೊಳಿಸುವಿಕೆ, ಹಿಂದಿನ ವರ್ಷದ ಹೂ-ಬಿಡುವ ಕಾಂಡಗಳನ್ನು ಸಂರಕ್ಷಿಸುತ್ತದೆ, ಇದೇ ವೇಳೆ, ಹಣ್ಣುಗಳನ್ನು ಕೀಳಲು, ಮರದ ಎತ್ತರ ಕಡಿಮೆಯಾಗಿರಿಸಲು ನೆರವಾಗುತ್ತದೆ. ಮರಗಳ ನಡುವಿನ ಅಂತರಗಳನ್ನು ನಿಯಮಿತವಾಗಿ ಫಲವತ್ತತೆಗೊಳಿಸಲಾಗುತ್ತದೆ. ಕೆಲವೊಮ್ಮೆ ಹಳೆಯ ಮರಗಳಿಂದ ಫಸಲುಗಳು ಬಹಳ ಹೇರಳವಾಗಿರುತ್ತವೆ, ಆದರೆ ಅವು ಸತತ ಎರಡು ವರ್ಷಗಳ ಕಾಳ ಚೆನ್ನಾಗಿ ಫಲ ನೀಡುವುದಿಲ್ಲ. ಹಲವು ಸಂದರ್ಭಗಳಲ್ಲಿ ಪ್ರತಿ ಆರನೆಯ ಅಥವಾ ಏಳನೆಯ ಋತುವಿನಲ್ಲಿ ದೊಡ್ಡ ಪ್ರಮಾಣದ ಕೊಯ್ಲು ಮಾಡಲಾಗುತ್ತದೆ.

Olive Trees in Turkish famous oil region, Edremit Bay

ಹಣ್ಣುಗಳ ಕೊಯ್ಲು ಮತ್ತು ಸಂಸ್ಕರಣೆ

[ಬದಲಾಯಿಸಿ]

ಶರತ್ಕಾಲ ಅಥವಾ ಚಳಿಗಾಲದಲ್ಲಿ ಆಲಿವ್‌ಗಳನ್ನು ಕೊಯ್ಲು ಮಾಡಲಾಗುತ್ತದೆ. ಇನ್ನೂ ವಿಶಿಷ್ಟವಾಗಿ, ಉತ್ತರ ಗೋಲಾರ್ಧದಲ್ಲಿ, ಹಸಿರು ಆಲಿವ್‌ಗಳನ್ನು ಸೆಪ್ಟೆಂಬರ್‌ ತಿಂಗಳ ಅಂತ್ಯದಿಂದ ನವೆಂಬರ್‌ ಮಧ್ಯದ ತನಕ ಕೀಳಲಾಗುತ್ತದೆ. ಕೆಂಚು ಬಣ್ಣದ ಆಲಿವ್‌ಗಳನ್ನು ಅಕ್ಟೋಬರ್‌ ಮಧ್ಯದಿಂದ ನವೆಂಬರ್‌ ಅಂತ್ಯದ ವರೆಗೂ ಕೀಳಲಾಗುತ್ತದೆ. ಕಪ್ಪು ಬಣ್ಣದ ಆಲಿವ್‌ಗಳನ್ನು ನವೆಂಬರ್‌ ಮಧ್ಯದಿಂದ ಜನವರಿ ಅಂತ್ಯ ಅಥವಾ ಫೆಬ್ರವರಿ ಆರಂಭದ ವರೆಗೆ ಸಂಗ್ರಹಿಸಲಾಗುತ್ತದೆ. ದಕ್ಷಿಣ ಯುರೋಪ್‌ನಲ್ಲಿ, ಚಳಿಗಾಲದಲ್ಲಿ ಹಲವು ವಾರಗಳ ಕಾಲ ಕೊಯ್ಲು ಮಾಡಲಾಗುತ್ತದೆ. ಆದರೆ ಕಾಲಾವಧಿಯು ದೇಶದಿಂದ ದೇಶಕ್ಕೆ, ಋತು ಹಾಗೂ ಕೃಷಿ-ಪ್ರಭೇದಗಳ ವಿಚಾರದಲ್ಲಿ ಬದಲಾಗುತ್ತದೆ. ಮರದ ಕೊಂಬೆಗಳನ್ನು ಅಲುಗಾಡಿಸಿ ಅಥವಾ ಇಡೀ ಮರವನ್ನು ಅಲ್ಲಾಡಿಸಿ, ಬಹುತೇಕ ಆಲೀವ್‌ಗಳಿಂದ ಫಸಲು ಸಂಗ್ರಹಿಸಲಾಗುತ್ತದೆ. ನೆಲದ ಮೇಲೆ ಬಿದ್ದಿರುವ ಆಲಿವ್ ಹಣ್ಣುಗಳನ್ನು ಬಳಸಿದಲ್ಲಿ ಕಳಪೆ ಗುಣಮಟ್ಟದ ತೈಲ ಲಭಿಸಬಹುದು. ಏಣಿಯ ಮೇಲೆ ನಿಂತು, ಆಲಿವ್‌ ಹಣ್ಣುಗಳನ್ನು ಹಿಂಡಿ, ಕೊಯ್ಲು ಮಾಡುವವರು ಸೊಂಟಕ್ಕೆ ಧರಿಸಿದ ಚೀಲದಲ್ಲಿ ತುಂಬುವುದು ಇನ್ನೊಂದು ವಿಧಾನವಾಗಿದೆ. [ಸೂಕ್ತ ಉಲ್ಲೇಖನ ಬೇಕು] ಆಲಿ-ನೆಟ್‌ ಎಂಬ ಕೊಡೆಯಂತಹ ಸಾಧನವನ್ನು ಮರದ ಕಾಂಡದ ಸುತ್ತಲೂ ಸುತ್ತಿ, ಕಾರ್ಮಿಕರು ಅದರಿಂದ ಹಣ್ಣುಗಳನ್ನು ಸಂಗ್ರಹಿಸುತ್ತಾರೆ. ಅತಿವೇಗವಾಗಿ ತಿರುಗುವ ದೊಡ್ಡ ಗಾತ್ರದ ಇಕ್ಕೆಲಗಳುಳ್ಳ ಆಲಿವಿಯೆರಾ ಎಂಬ ವಿದ್ಯುತ್‌ ಸಾಧನದ ಮೂಲಕ ಮರದಿಂದ ಹಣ್ಣುಗಳನ್ನು ತೆಗೆಯುವುದು ನಾಲ್ಕನೆಯ ವಿಧಾನವಾಗಿದೆ. ತೈಲಕ್ಕಾಗಿ ಬಳಸಬೇಕಾದ ಹಣ್ಣುಗಳನ್ನು ಸಂಗ್ರಹಿಸಲು ಈ ಪದ್ಧತಿಯನ್ನು ಬಳಸಲಾಗಿದೆ. ಟೆಬಲ್‌ ಆಲಿವ್‌ ಪ್ರಭೇದಗಳನ್ನು ಕೊಯ್ಲು ಮಾಡುವುದು ಕಷ್ಟ, ಏಕೆಂದರೆ ಕೊಯ್ಲು ಮಾಡುವವರು ಹಣ್ಣು ಒಡೆಯದಂತೆ ಎಚ್ಚರ ವಹಿಸಬೇಕು. ಕೆಲಸಗಾರರ ಕುತ್ತಿಗೆಗೆ ತಗುಲಿಹಾಕಿರುವ ಬುಟ್ಟಿಗಳನ್ನು ಬಳಸಲಾಗುತ್ತವೆ. ಇಟಲಿ ಮತ್ತು ಗ್ರೀಸ್‌ ದೇಶಗಳಲ್ಲಿ ಕೆಲವು ಸ್ಥಳಗಳಲ್ಲಿ, ಗುಡ್ಡಗಾಡು ಪ್ರದೇಶವಿರುವ ಕಾರಣ, ಆಲಿವ್‌ಗಳನ್ನು ಕೈಯಿಂದಲೇ ಕೊಯ್ಲು ಮಾಡಲಾಗುತ್ತದೆ. ಇದರ ಪರಿಣಾಮವಾಗಿ, ಹಣ್ಣಿಗೆ ಯಾವ ತರಚು ಉಂಟಾಗುವುದಿಲ್ಲ. ಇದರಿಂದಾಗಿ ಉತ್ತಮ ಗುಣಮಟ್ಟದ ಉತ್ಪನ್ನ ಲಭಿಸುತ್ತದೆ. ಈ ವಿಧಾನದಲ್ಲಿ ರೆಂಬೆ ಕತ್ತರಿಸುವುದು ಸಹ ಸೇರಿದೆ. ಇದು ಮುಂದಿನ ಉತ್ಪಾದನೆಗೆ ಆರೋಗ್ಯಕರವಾಗಿರುತ್ತದೆ.[೨೯] ಹಣ್ಣಿನಲ್ಲಿರುವ ತೈಲದ ಅಂಶವು ಕೃಷಿ-ಪ್ರಭೇದಗಳ ಪ್ರಕಾರ ಬಹಳಷ್ಟು ವ್ಯತ್ಯಾಸವಾಗುತ್ತದೆ. ಬೀಜಕೋಶದಲ್ಲಿ ಸಾಮಾನ್ಯವಾಗಿ 60-70%ರಷ್ಟು ತೈಲವಿರುತ್ತದೆ. ಪ್ರತಿ ವರ್ಷ ಪ್ರತಿ ಮರಕ್ಕೆ ಮಾದರಿಯಾಗಿ 1.5–2.2 kg (3.3–4.9 lb)ರಷ್ಟು ತೈಲವಿರುತ್ತದೆ.[೩೦]

ಸಾಂಪ್ರದಾಯಿಕ ಹುದುಗುವಿಕೆ(ಹುಳಿಸುವಿಕೆ) ಮತ್ತು ಸಂಸ್ಕರಣೆ

[ಬದಲಾಯಿಸಿ]
ಹಸಿರು ಮತ್ತು ಕಪ್ಪು ಬಣ್ಣದ ಆಲಿವ್‌ಗಳು

ಆಲಿವ್‌ಗಳು ಸಹಜವಾಗಿ ಕಹಿ ಹಣ್ಣುಗಳಾಗಿರುತ್ತವೆ. ಇವುಗಳನ್ನು ರುಚಿಯಾಗಿಸಬೇಕಾದಲ್ಲಿ, ಯಾವುದೇ ಕ್ಷಾರ ದ್ರಾವಣ ಅಥವಾ ಲವಣಜಲದೊಂದಿಗೆ ಹುದುಗುವಿಕೆಗೆ (ಫರ್ಮಂಟೇಶನ್)ಗುರಿಪಡಿಸಲಾಗುತ್ತದೆ ಅಥವಾ ಸಂಸ್ಕರಿಸಲಾಗುತ್ತದೆ. ಆಲೊರೊಪೀನ್‌ ಎಂಬ ಕಹಿ ಕಾರ್ಬೊಹೈಡ್ರೇಟ್‌ನ್ನು ತೆಗೆಯಲು, ಹಸಿರು ಹಾಗೂ ಕಪ್ಪು ಬಣ್ಣದ ಆಲಿವ್‌ಗಳನ್ನು ಸಾಮಾನ್ಯವಾಗಿ ನೀರಿನಲ್ಲಿ ಚೆನ್ನಾಗಿ ತೊಳೆಯಲಾಗುತ್ತದೆ. ಈ ಪ್ರಕ್ರಿಯೆಯ ವೇಗ ವರ್ಧಿಸಲು, ಕೆಲವೊಮ್ಮೆ ಆಲಿವ್‌ಗಳನ್ನು ಫುಡ್ ಗ್ರೇಡ್ ಸೊಡಿಯಮ್‌ ಹೈಡ್ರಾಕ್ಸೈಡ್‌ ದ್ರಾವಣದಲ್ಲಿ ನೆನೆಸಲಾಗುತ್ತದೆ. ಹಸಿರು ಆಲಿವ್‌ಗಳನ್ನು ಉಪ್ಪುನೀರಿನ ದ್ರಾವಣದಲ್ಲಿ ಪ್ಯಾಕ್ ಮಾಡುವ ಮುಂಚೆ ಕೆಲ ಸಮಯ ಹುದುಗುವಿಕೆಗೆ ಅವಕಾಶ ನೀಡಲಾಗುತ್ತದೆ. ಅಮೆರಿಕನ್‌ ಕಪ್ಪು ಬಣ್ಣದ ಕ್ಯಾಲಿಫೊರ್ನಿಯಾ) ಆಲಿವ್‌ಗಳನ್ನು ಹುದುಗುವಿಕೆಗೆ ಗುರಿಪಡಿಸಲಾಗುವುದಿಲ್ಲ. ಇದರಿಂದಾಗಿಯೇ, ಈ ಆಲಿವ್‌ಗಳ ರುಚಿಯು ಹಸಿರು ಆಲಿವ್‌ಗಳದ್ದಕ್ಕಿಂತಲೂ ಸೌಮ್ಯವಾಗಿರುತ್ತದೆ. ಆಗ ತಾನೇ ಕೀಳಲಾದ ತಾಜಾ ಆಲಿವ್‌ ಹಣ್ಣುಗಳು ರುಚಿಕರವಾಗಿರುವುದಿಲ್ಲ, ಏಕೆಂದರೆ ಇದರಲ್ಲಿ ಫೀನಾಲ್‌ ರೀತಿಯ ಸಂಯುಕ್ತಗಳು ಹಾಗೂ ಆಲೊರೊಪೀನ್‌ ಎಂಬ ಗ್ಲೈಕೊಸೈಡ್‌ ದ್ರವವನ್ನು ಹೊಂದಿರುತ್ತದೆ. ಈ ರಾಸಾಯನಿಕ ಅಂಶಗಳಿಂದಾಗಿ, ಈ ಹಣ್ಣು ಆರೋಗ್ಯಕ್ಕೆ ಹಾನಿಕಾರಕವಲ್ಲದಿದ್ದರೂ, ತೀರಾ ಕಹಿಯಾಗಿರುತ್ತವೆ.[೨೯] (ಥಾಸೊಸ್‌ ಆಲಿವ್ ಎಂಬುದು ಮಾತ್ರ ಇದಕ್ಕೆ ಅಪವಾದ. ಈ ಹಣ್ಣನ್ನು ಮಾತ್ರ ತಾಜಾ ಸ್ಥಿತಿಯಲ್ಲಿ ತಿನ್ನಬಹುದು.) [ಸೂಕ್ತ ಉಲ್ಲೇಖನ ಬೇಕು] ಆಲಿವ್‌ ಹಣ್ಣುಗಳನ್ನು ತಿನ್ನಲು ಹಲವು ಸಂಸ್ಕರಣಾ ವಿಧಾನಗಳುಂಟು. ಸಾಂಪ್ರದಾಯಿಕ ವಿಧಾನಗಳಲ್ಲಿ, ಹಣ್ಣಿನ ಮೇಲೆ ಮೈಕ್ರೊಫ್ಲೊರಾ ಬಳಸಲಾಗಿದ್ದು, ಅ ಹಣ್ಣನ್ನು ಹುದುಗುವಿಕೆಗೆ ಗುರಿಪಡಿಸಲು ಅಗತ್ಯ ಫ್ಲೊರಾಗಳಿಗೆ ಕ್ರಮವಿಧಾನಗಳನ್ನು ಸಹ ಆಯ್ದುಕೊಳ್ಳಬಹುದು. ಈ ಕಿಣ್ವನದಿಂದ ಮೂರು ಪ್ರಮುಖ ಫಲಿತಾಂಶಗಳು ಲಭ್ಯವಾಗುತ್ತವೆ - ಅಲೊರೊಪೀನ್‌ ಮತ್ತು ಫೀನಾಲ್‌ ಸಂಯುಕ್ತಗಳ ತೊಟ್ಟಿಕುವಿಕೆ ಅಥವಾ ಸರಳ ಅಂಶಗಳಾಗಿ ಒಡೆಯುವಿಕೆ; ನೈಸರ್ಗಿಕ ಸಂರಕ್ಷಕ ಲ್ಯಾಕ್ಟಿಕ್‌ ಆಮ್ಲದ ರಚನೆ, ಹಾಗೂ ಹುದುಗುವಿಕೆಯ ಉತ್ಪನ್ನಗಳ ರುಚಿಯುಳ್ಳ ಸಂಕೀರ್ಣ. ಇದರ ಫಲಿತಾಂಶವು ಶೈತ್ಯಾಗಾರದಲ್ಲಿ ಅಥವಾ ಹೊರತಾಗಿ ಇದನ್ನು ಶೇಖರಿಸಬಹುದಾದ ಉತ್ಪನ್ನವಾಗಿರುತ್ತದೆ. ತಾಜಾ ಆಲಿವ್‌ಗಳನ್ನು ಆಗಾಗ್ಗೆ ಮಾರುಕಟ್ಟೆಗಳಲ್ಲಿ ಮಾರಲಾಗುತ್ತವೆ. ಆಲಿವ್‌ಗಳನ್ನು ಹಸಿರು, ಪಕ್ವ ಹಸಿರು ಬಣ್ಣದಿಂದ ಹಿಡಿದು (ಹಳದಿ ಬಣ್ಣದ ಛಾಯೆ ಹೊಂದಿರುವ ಹಸಿರು ಬಣ್ಣ, ಅಥವಾ ಇತರೆ ಬಣ್ಣ ಮಿಶ್ರಿತ ಹಸಿರು) ಪೂರ್ಣ ನೇರಳೆ ಅಥವಾ ಕಪ್ಪು ಬಣ್ಣದ ಮಾಗಿದ ಹಣ್ಣಿನ ತನಕ ಬಳಸಬಹುದಾಗಿದೆ. ಆಲಿವ್‌ಗಳು ಹಸಿರಾಗಿದ್ದಲ್ಲಿ ಸಾಮಾನ್ಯ ಸುಸ್ಥಿತಿ ಮತ್ತು ದೃಢತೆಗೆ ಅಯ್ಕೆ ಮಾಡಿಕೊಳ್ಳಬೇಕು. ಹುದುಗುವಿಕೆಗಾಗಿ ಆಲಿವ್‌ಗಳನ್ನು ನೀರಿನಲ್ಲಿ ಅದ್ದಿ ನಂತರ ಒಣಗಿಸಲಾಗುತ್ತದೆ. ಒಂದು ವಿಧಾನದ ಪ್ರಕಾರ, ಏಳು ಲೀಟರ್‌ಗಳ ಸಹಜ ಉಷ್ಣಾಂಶದ ನೀರು, ಜೊತೆಗೆ 800 g (28 oz) ಸಮುದ್ರದ ಉಪ್ಪು ಹಾಗೂ ಒಂದು ಲೋಟ (300 g (11 oz)*) ಬಿಳಿ ವೈನ್‌ ಅಥವಾ ಸಿಡಾರ್‌ ವಿನಿಗರ್‌ನ ಅನುಪಾತವನ್ನು ಬಳಸುವುದಾಗಿದೆ. ಪ್ರತಿಯೊಂದು ಆಲಿವ್‌ನ್ನು ಸಣ್ಣ ಕತ್ತಿಯಿಂದ ಆಳವಾಗಿ ಕೊಯ್ಯಲಾಗುತ್ತದೆ. ದೊಡ್ಡ ಹಣ್ಣುಗಳಾಗಿದ್ದರೆ, (ಉದಾಹರಣೆಗೆ ಪ್ರತಿ ಕಿಲೊಗ್ರಾಮ್‌ಗೆ 60 ಹಣ್ಣುಗಳು) ಹಲವು ಸ್ಥಳಗಳಲ್ಲಿ ಕೊಯ್ಯಲಾಗುತ್ತದೆ. ಆಲಿವ್‌ಗಳನ್ನು ತುಂಬಿರುವ ಧಾರಕಕ್ಕೆ ಈ ದ್ರಾವಣವನ್ನು ಸುರಿಯಲಾಗುತ್ತದೆ. ತಟ್ಟೆ ಮುಂತಾದ ಜಡವಸ್ತುವಿನಿಂದ ಬಾರ ಹೇರಲಾಗುತ್ತದೆ,ಇದರಿಂದ ಅವು ಪೂರ್ಣವಾಗಿ ಮುಳುಗಿ ಧಾರಕದಲ್ಲಿ ಲಘುವಾಗಿ ಮುಚ್ಚಲಾಗುತ್ತದೆ. ಹುದುಗುವಿಕೆಯಿಂದ ಉದ್ಭವಿಸುವ ಅನಿಲಗಳು ಹೊರಹೋಗಲು ಸಾಧ್ಯವಾಗಿರಬೇಕು. ಪ್ಲ್ಯಾಸ್ಟಿಕ್‌ ಚೀಲವೊಂದರಲ್ಲಿ ಅರ್ಧಕ್ಕೆ ನೀರು ತುಂಬಿಸಿ ಹಿಡಿಕೆಯ ಮೇಲ್ಭಾಗದಲ್ಲಿ ಇಡುವ ಮೂಲಕ ತೆರಪಿನ ಮುಚ್ಚಳದಂತೆ ವರ್ತಿಸುತ್ತದೆ. ಇದು ಭದ್ರವಾದ ಮುಚ್ಚಳವೂ ಸಹ ಆಗಬಹುದು. ಆಮ್ಲಜನಕವನ್ನು ಹೊರಗಿಡುವುದು ಉಪಯುಕ್ತವಾಗಿದೆ, ಆದರೆ ವೈನ್‌ ತಯಾರಿಸಲು ದ್ರಾಕ್ಷಿಗಳನ್ನು ಹುಳಿಯಾಗಿಸುವ ರೀತಿಯಲ್ಲಿ ಇದು ಪೂರ್ಣ ಅವಶ್ಯಕವಲ್ಲ. ಆಲಿವ್‌ನಲ್ಲಿರುವ ನೀರು ದ್ರಾವಣಕ್ಕೆ ಹೋಗಿ, ದ್ರಾವಣದಲ್ಲಿನ ಉಪ್ಪು ಆಲಿವ್‌ಗಳೊಳಗೆ ಚಲಿಸಿದೊಡನೆ, ಕೆಲವು ವಾರಗಳ ನಂತರ, ಕ್ಷಾರ ಅಂಶವು 10%ರಿಂದ 5ರಿಂದ 6%ಕ್ಕೆ ಇಳಿಯುತ್ತದೆ. ಆಲಿವ್ ಹಣ್ಣುಗಳನ್ನು ಎರಡು ವಾರಗಳು ಅಥವಾ ಒಂದು ತಿಂಗಳೊಳಗೆ ತಿನ್ನಬಹುದಾಗಿದೆ. ಆದರೆ ಸಂಸ್ಕರಣೆಯಾಗಲು ಮೂರು ತಿಂಗಳುಗಳ ತನಕ ಅವಕಾಶ ನೀಡಲಾಗುತ್ತದೆ. ಆಲಿವ್‌ ಹಣ್ಣುಗಳಲ್ಲಿನ ಕಹಿ ಸಂಯುಕ್ತಗಳು ವಿಷಕಾರಿಯಾಗಿರದ ಕಾರಣ, ಯಾವುದೇ ಸಮಯದಲ್ಲಿ ಈ ಹಣ್ಣುಗಳ ರುಚಿ ಸವಿಯಬಹುದಾಗಿದೆ. ಮಾನವನ ಆಹಾರಪಥ್ಯದಲ್ಲಿ ಆಲೊರೊಪೀನ್‌ ಉಪಯುಕ್ತ ಉತ್ಕರ್ಷಣಕಾರ-ನಿರೋಧಕವಾಗಿದೆ. ಹಲವು ವಿಧಾನಗಳ ಮೂಲಕ ಆಲಿವ್‌ ಹಣ್ಣುಗಳನ್ನು ಸಂಸ್ಕರಿಸಬಹುದಾಗಿದೆ: ಅತಿಕ್ಷಾರ-ದ್ರವಣ ಸಂಸ್ಕರಣ, ಉಪ್ಪುನೀರು ಸಂಸ್ಕರಣ ಹಾಗೂ ಸಿಹಿನೀರು ಸಂಸ್ಕರಣ. ಉಪ್ಪು-ಸಂಸ್ಕರಣ (ಒಣ-ಸಂಸ್ಕರಣ) ಎಂದರೆ, ಕನಿಷ್ಠ ಪಕ್ಷ ಸುಮಾರು ಒಂದು ತಿಂಗಳ ಕಾಲ ಹಣ್ಣುಗಳನ್ನು ಬರೀ ಉಪ್ಪಿನಲ್ಲಿ ಕಟ್ಟಿಡಲಾಗುತ್ತದೆ. ಈ ರೀತಿ ಆಲಿವ್‌ ಹಣ್ಣುಗಳು ಉಪ್ಪಿನ ರುಚಿ ಮತ್ತು ಸುಕ್ಕಿನಿಂದ ಕೂಡುತ್ತವೆ. ಉಪ್ಪು ನೀರು ಸಂಸ್ಕರಣವೆಂದರೆ, ಕೆಲವು ದಿನಗಳ ಕಾಲ ಆಲಿವ್‌ಗಳನ್ನು ಉಪ್ಪುನೀರಿನ ದ್ರಾವಣದಲ್ಲಿ ನೆನೆಸಿಡುವುದು. ತಾಜಾ ನೀರು ಸಂಸ್ಕರಣ ಎಂದರೆ, ನೀರು ತುಂಬಿದ ಒಂದು ಬೋಗುಣಿಯಲ್ಲಿ ಹಣ್ಣುಗಳನ್ನು ನೆನೆಸಲಾಗುತ್ತದೆ. ಪ್ರತಿದಿನವೂ ಈ ನೀರನ್ನು ಬದಲಾಯಿಸಲಾಗುತ್ತದೆ.[೨೯] ಸಾಮಾನ್ಯವಾಗಿ, ಹಸಿರು ಆಲಿವ್‌ಗಳು ಕಪ್ಪು ಆಲಿವ್‌ಗಳಿಗಿಂತಲೂ ಗಟ್ಟಿಯಾಗಿರುತ್ತವೆ. ಆಲಿವ್‌ಗಳನ್ನು ವಿವಿಧ ಮ್ಯಾರಿನೇಡ್‌ಗಳಲ್ಲಿ ಅದ್ದಿಟ್ಟು, ಅಥವಾ, ಬೀಜಕೋಶವನ್ನು ತೆಗೆದು ತುಂಬಿಸುವುದರ ಮೂಲಕ ರುಚಿ ನೀಡಬಹುದು. ಗಿಡಮೂಲಿಕೆಗಳು, ಮೆಣಸುಗಳು, ಆಲಿವ್‌ ತೈಲ, ಫೆಟಾ, ದೊಣ್ಣೆ ಮೆಣಸಿನಕಾಯಿ (ಪಿಮೆಂಟೊ), ಹಸಿಮೆಣಸಿನಕಾಯಿ, ನಿಂಬೆಹಣ್ಣು ರುಚಿಕಾರಕ, ನಿಂಬೆಹಣ್ಣು ರಸ, ಬೆಳ್ಳುಳ್ಳಿಹಿಳುಕು , ವೈನ್‌, ದ್ರಾಕ್ಷಿ ರಸ, ಶಂಕುಫಲಿ ಬೆರಿ ಹಣ್ಣುಗಳು ಹಾಗೂ ಆಂಚೋವಿಗಳು ಜನಪ್ರಿಯ ರುಚಿಗಳಾಗಿವೆ. ಹುದುಗುವಿಕೆ ಪ್ರಚೋದಿಸಲು ಕೆಲವೊಮ್ಮೆ ಆಲಿವ್‌‌ ಹಣ್ಣುಗಳನ್ನು ಸುತ್ತಿಗೆಯಿಂದಲೂ ಅಥವ ಕಲ್ಲಿನಿಂದಲೂ ಮೆಲ್ಲನೆ ಕುಟ್ಟಿ ಒಡೆಯಲಾಗುತ್ತದೆ. ಈ ರೀತಿಯ ಸಂಸ್ಕರಣೆಯಿಂದಾಗಿ ತುಸು ಕಹಿ ರುಚಿ ಹೊಂದುತ್ತದೆ.

ಕೀಟಗಳು, ರೋಗಗಳು ಹಾಗೂ ಹವಾಮಾನ

[ಬದಲಾಯಿಸಿ]

ಸೈಕ್ಲೊಕೊನಿಯಮ್‌ ಆಲಿಯಜಿನಮ್ ‌ ಎಂಬ ಶಿಲೀಂಧ್ರವು ಸತತ ಹಲವು ಋತುಗಳ ಕಾಲ ಆಲಿವ್‌ ಮರಗಳನ್ನು ಸೋಂಕುಗೊಳಿಸಬಹುದು. ಇದರಿಂದಾಗಿ ಅಲಿವ್‌ ತೋಟಗಳಿಗೆ ಬಹಳಷ್ಟು ಹಾನಿಯೊಡ್ಡಬಹುದು. ಸೂಡೊಮೊನಾಸ್‌ ಸವಸ್ಟನೊಯಿ ಪಿವಿ. ಆಲೀ [೩೧] ಎಂಬ ಬ್ಯಾಕ್ಟೀರಿಯಮ್‌ ಪ್ರಭೇದವು ಆಲಿವ್‌ ಮರದ ಕಾಂಡಗಳಲ್ಲಿ ಗೆಡ್ಡೆ ಬೆಳೆಯಲು ಹಾರಣವಾಗಬಹುದು. ಕೆಲವು ಲೆಪಿಡಾಪ್ಟೆರಸ್‌ ಪ್ರಭೇದದ ಮರಿಹುಳುಗಳು ಆಲಿವ್‌ ಮರಗಳ ಎಲೆಗಳು ಮತ್ತು ಹೂವುಗಳನ್ನು ಭಕ್ಷಿಸುತ್ತವೆ. ಆಲಿವ್‌ ಮರದ ಹಣ್ಣುಗಳ ಮೇಲೆ ಆಲಿವ್‌-ನೊಣಗಳ ಅಕ್ರಮಣದಿಂದಾಗಿ ಇನ್ನಷ್ಟು ಹಾನಿ ಸಂಭವಿಸುತ್ತದೆ. ಬ್ಲ್ಯಾಕ್‌ ಸ್ಕೇಲ್‌ ಕೀಟವೆಂಬ ಸಣ್ಣ ಗಾತ್ರದ ಕಪ್ಪು ಬಣ್ಣದ ದುಂಬಿಯು ಆಲಿವ್‌‌ ಮರಗಳಲ್ಲಿ ಹರಡುತ್ತವೆ. ಇದು ಸಣ್ಣ ಕಪ್ಪು ಮಚ್ಚೆಯಂತಿರುತ್ತದೆ. ಅವು ಆಲಿವ್‌ ಮರಗಳಿಗೆ ಗಟ್ಟಿಯಾಗಿ ಅಂಟಿಕೊಂಡು, ಹಣ್ಣಿನ ಗುಣಮಟ್ಟವನ್ನು ಕೆಡಿಸುತ್ತವೆ. ಕಣಜಗಳು ಇವುಗಳ ಪರಭಕ್ಷಕಗಳು. ಕರ್ಕುಲಿಯೊ ದುಂಬಿಯು ಎಲೆಗಳ ಅಂಚುಗಳನ್ನು ತಿಂದು ಗರಗಸ-ಹಲ್ಲಿನಂತಹ ಹಾನಿಯೊಡ್ಡುತ್ತದೆ.[೩೨] ಮೊಲಗಳು ಆಲಿವ್‌ ಮರಗಳ ಕಾಂಡವನ್ನು ತಿಂದು, ಎಳೆಯ ಮರಗಳಿಗೆ ಗಣನೀಯ ಹಾನಿಯನ್ನು ಉಂಟುಮಾಡುತ್ತವೆ. ಮರದ ಸುತ್ತಲಿನ ತೊಗಟನ್ನು ತೆಗೆದರೆ, ಮರವು ಸತ್ತುಹೋಗುವ ಸಾಧ್ಯತೆಯಿದೆ. ಫ್ರಾನ್ಸ್‌ ಮತ್ತು ಉತ್ತರ ಮಧ್ಯ ಇಟಲಿಯಲ್ಲಿ ನೀರುಗಡ್ಡೆಕಟ್ಟುವಿಕೆಯಿಂದಾಗಿ ಕೆಲವೊಮ್ಮೆ ಆಲಿವ್‌ ಮರಗಳಿಗೆ ತೊಂದರೆಯಾಗುವುದುಂಟು. ಕೊಯ್ಲಿನ ಸಮಯ ಬಿರುಗಾಳಿ ಹಾಗೂ ದೀರ್ಘಾವಧಿಯ ಮಳೆಗಳಿಂದಾಗಿ ಹಾನಿಯಾಗಬಹುದು.

ಉತ್ಪಾದನೆ

[ಬದಲಾಯಿಸಿ]

ಆಲಿವ್‌ ವಿಶ್ವದಾದ್ಯಂತ ವ್ಯಾಪಕವಾಗಿ ಕೃಷಿಮಾಡುವ ಹಣ್ಣಿನ ಬೆಳೆಯಾಗಿದೆ.[೩೩] ಇಸವಿ 1960ರಿಂದ 2004ರ ವರೆಗೆ, ಕೃಷಿ ಮಾಡಬಹುದಾದ ಕ್ಷೇತ್ರವು 2,600,000 to 8,500,000 hectares (6,400,000 to 21,000,000 acres) ಇದ್ದದ್ದು ಮುಪ್ಪಟ್ಟಾಯಿತು. ಆಹಾರ ಮತ್ತು ಕೃಷಿ ಸಂಘಟನೆಯ ಪ್ರಕಾರ, ಆಲಿವ್‌ ಕೃಷಿಯ ಹತ್ತು ಪ್ರಮುಖ ದೇಶಗಳಲ್ಲಿ ಎಲ್ಲವೂ ಸಹ ಮೆಡಿಟರೇನಿಯನ್‌ ವಲಯದಲ್ಲಿದೆ. ಆಲಿವ್‌ನ ವಿಶ್ವದಾದ್ಯಂತ ಉತ್ಪಾದನೆಯಲ್ಲಿ 95%ರಷ್ಟು ಪಾಲನ್ನು ಅವು ಉತ್ಪಾದಿಸುತ್ತವೆ.

ಉತ್ಪಾದನೆಯ ಪ್ರಮುಖ ರಾಷ್ಟ್ರಗಳು(ವರ್ಷ 2007)
ಶ್ರೇಣಿ ದೇಶ / ವಲಯ ಉತ್ಪಾದನೆ
(ಟನ್‌ಗಳಲ್ಲಿ)
ಬೆಳೆ ಮಾಡಲಾದ ಕ್ಷೇತ್ರ
(ಹೆಕ್ಟೇರ್‌ಗಳು)
ಇಳುವರಿ
(q/Ha)
ವಿಶ್ವ 17,317,089 8,597,064 20.1
1  Spain 6,222,100 2,400,000 25.7
2  ಇಟಲಿ 3,429,771 1,140,685 27.6
3  Greece 2,444,230 765,000 31.4
4  ಟರ್ಕಿ 1,075,854 594,000 30.3
5  ಟುನೀಶಿಯ 998,000 1,500,000 3.0
6  ಮೊರಾಕೊ 659,100 550,000 8.5
7  ಸಿರಿಯಾ 495,310 498,981 20.0
8  ಈಜಿಪ್ಟ್ 318,000 49,888 63.8
9  ಅಲ್ಜೀರಿಯ 208,952 178,000 16.9
10  ಪೋರ್ಚುಗಲ್ 280,000 430,000 6.5
11  ಲೆಬನನ್ 76,200 250,000 6.5

ಚಿತ್ರ ಸಂಪುಟ

[ಬದಲಾಯಿಸಿ]


ಆಕ್ರಮಣಶೀಲ ಪ್ರಭೇದಗಳಾಗಿ

[ಬದಲಾಯಿಸಿ]

ಮೊದಲ ಬಾರಿ ಸ್ಥಳೀಯ ಒಗ್ಗಿಸುವಿಕೆ ನಂತರ ಆಲಿಯಾ ಯುರೊಪಿಯಾ ನೆಡಲಾದ ತೋಪುಗಳಿಂದ ಪುನಃ ವನದತ್ತ ಹರಡುತ್ತಿದೆ. ದಕ್ಷಿಣ ಯುರೋಪ್‌ನಲ್ಲಿ ಇದರ ಮೂಲ ವನ್ಯಸಂಪತ್ತು ಬಹುತೇಕ ಕಾಡುಗಿಡಗಳಿಂದ ಕೂಡಿದೆ.[೩೪] ಆಲಿವ್‌ ಗಿಡವನ್ನು ಪರಿಚಯಿಸಲಾದ ವಿಶ್ವದ ಇತರೆಡೆ, ಅದರಲ್ಲೂ ಗಮನಾರ್ಹವಾಗಿ ದಕ್ಷಿಣ ಆಸ್ಟ್ರೇಲಿಯಾದಲ್ಲಿ, ಆಲಿವ್‌ ಮರಗಳು, ಸ್ಥಳೀಯ ಸಸ್ಯ ವರ್ಗವನ್ನು ಸ್ಥಾನಪಲ್ಲಟ ಮಾಡುವ ಮರ-ರೂಪೀ ಕಳೆಯಾಗಿದೆ. ದಕ್ಷಿಣ ಆಸ್ಟ್ರೇಲಿಯಾದಲ್ಲಿ, ಪರಿಚಯಿಸಲಾದ ಕೆಂಪು ನರಿ ಹಾಗೂ, ಯುರೋಪಿಯನ್‌ ಸ್ಟಾರ್ಲಿಂಗ್‌ ಮತ್ತು ಸ್ಥಳೀಯ ಎಮು ಸೇರಿದಂತೆ, ಹಲವು ಹಕ್ಕಿ ಪ್ರಭೇದಗಳಿಂದಾಗಿ ಆಲಿವ್‌ ಬೀಜಗಳು ಕಾಡು ಪ್ರದೇಶಗಳಲ್ಲಿ ಹರಡುತ್ತವೆ. ಇದು ಮೊಳಕೆಯೊಡೆದು, ದಟ್ಟವಾದ ಚಾವಣಿಯನ್ನು ನಿರ್ಮಿಸಿ, ಸ್ಥಳೀಯ ಮರಗಳ ಪುನರ್‌ಸೃಷ್ಟಿಗೆ ಅಡ್ಡಿಯುಂಟು ಮಾಡುತ್ತದೆ.[೩೫] ದಕ್ಷಿಣ ಆಸ್ಟ್ರೇಲಿಯಾದಲ್ಲಿ ಒಣ ಹವಾಗುಣವಿದ್ದು, ಕಾಳ್ಗಿಚ್ಚಿನ ಸಂಭವ ಹೆಚ್ಚಾಗಿರುವ ಹಾರಣ, ತೈಲ ಸಮೃದ್ಧ ಕಾಡಿನ ಆಲಿವ್‌ ಮರವು ಸ್ಥಳೀಯ ಪೆಡಸುಪರ್ಣಿ‌ ಕಾಡು ಪ್ರದೇಶದಲ್ಲಿ ಕಾಳ್ಗಿಚ್ಚಿನ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.[೩೬]

ಇವನ್ನೂ ಗಮನಿಸಿ

[ಬದಲಾಯಿಸಿ]

ಟೆಂಪ್ಲೇಟು:Portal

ಉಲ್ಲೇಖಗಳು

[ಬದಲಾಯಿಸಿ]
  1. ἐλαία, ಹೆನ್ರಿ ಜಾರ್ಜ್‌ ಲಿಡೆಲ್‌, ರಾಬರ್ಟ್ ಸ್ಕಾಟ್‌, ಪರ್ಸಿಯಸ್‌ ಪ್ರಾಜೆಕ್ಟ್‌ ಕುರಿತು ಲೇಖನ ಎ ಗ್ರೀಕ್‌-ಇಂಗ್ಲಿಷ್‌ ಲೆಕ್ಸಿಕಾನ್‌
  2. e-ra-wa Archived 2015-11-06 ವೇಬ್ಯಾಕ್ ಮೆಷಿನ್ ನಲ್ಲಿ., ಮೈಸೆನೇಯನ್‌ (ಲೀನಿಯರ್‌ ಬಿ) - ಇಂಗ್ಲಿಷ್‌ ಶಬ್ದಸಂಗ್ರಹ
  3. [15] ^ Palaeolexicon (ಪಲೆಯೊಲೆಕ್ಸಿಕಾನ್‌), ಪ್ರಾಚೀನ ಭಾಷೆಗಳ ಪದವನ್ನು ಓದುವ ಸಾಧನ
  4. "ಹಿ ಲರ್ನಡ್ ಫ್ರಂ ದಿ ನಿಂಫ್ಹೈ ಹೌ ಟು ಕರ್ಡಲ್ ಮಿಲ್ಕ್, ಟು ಮೇಕ್ ಬೀ ಹೈವ್ಸ್, ಎಂಡ್ ಟು ಕಲ್ಟಿವೇಟ್ ಆಲಿವ್ ಟ್ರೀಸ್, ಎಂಡ್ ವಾಸ್ ದಿ ಫರ್ಸ್ಟ್ ಟು ಇನ್‌ಸ್ಟ್ರಕ್ಟ್ ಮೆನ್ ಇನ್ ದೀಸ್ ಮ್ಯಾಟರ್ಸ್." (ಡಿಯೊಡೊರುಸ್‌ ಸಿಕುಲಸ್‌ (Diodorus Siculus), 4. 81. 1).
  5. ಕ್ರಿಸ್ತ ಶಕ ಎರಡನೆಯ ಶತಮಾನದ ಅಂತ್ಯದಲ್ಲಿ, ಪಾಸ್ಯಾನಿಯಾಸ್‌ ಇಂತಹ ಬಹಳಷ್ಟು ಪುರಾತನ ಆರಾಧನಾ ಆಕೃತಿಗಳನ್ನು ನೋಡಿದ.
  6. "ಇಂಡೀಡ್ ಇಟ್ ಈಸ್ ಸೆಡ್ ಎಟ್ ದೆಟ್ [ಏನ್ಸೀಂಟ್]ಟೈಮ್ ದೇರ್ ವರ್ ನೊ ಆಲೀವ್ಸ್ ಎನಿವೇರ್ ಸೇವ್ ಎಟ್ ಅಥೆನ್ಸ್." (ಹೆರೊಡೊಟಸ್‌, 5. 82. 1 ).
  7. "...ವಿಚ್ ಈಸ್ ಸ್ಟಿಲ್ ಶೋನ್ ಇನ್ ದಿಪ್ಯಾಂಡ್ರೋಸಿಯನ್" (ಸೂಡೋ-ಅಪೊಲೊಡೊರಸ್, ಬಿಬ್ಲಿಯೊಥೆಕ್‌ , 3.14.1).
  8. ಪಾಸ್ಯಾನಿಯಾಸ್‌, ಡಿಸ್ಕ್ರಿಪ್ಷನ್‌ ಆಫ್‌ ಗ್ರೀಸ್ 1. 27. 1.
  9. "Me pascunt olivae, me cichorea levesque malvae." ಹಾರೇಸ್‌, ಒಡ್ಸ್‌ 1.31.15 , ಸುಮಾರು 30 BC
  10. ದಿನಾಂಕ 29 ಏಪ್ರಿಲ್‌ 1779ರ ಲಾರ್ಡ್‌ ಮಾನ್ಬೊಡೊ ಇಂದ ಜಾನ್ ಹೋಪ್‌ಗೆ ಪತ್ರ ; ವಿಲಿಯಮ್‌ ನೈಟ್‌ ಪುನಃ ಪ್ರಕಟಿಸಿದ್ದು. 1900 ISBN 1855062070
  11. ಬಾಲ್ಫೊರ್‌, ಜಾನ್ ಹಟ್ಟನ್‌, "ಪ್ಲ್ಯಾಂಟ್ಸ್‌ ಆಫ್‌ ದಿ ಬೈಬಲ್‌" 1885. ಗೂಗಲ್‌ ಬುಕ್ಸ್‌ ಮೂಲಕ ಲಭ್ಯ.
  12. ಗೂಚ್, ಎಲೆನ್‌, "10+1 ಥಿಂಗ್ಸ್ ಯು ಮೇ ನಾಟ್ ನೊ ಎಬೌಟ್ ಆಲಿವ್‌ ಆಯಿಲ್", ಎಪಿಕೂರಿಯಾ ಮ್ಯಾಗಝಿನ್ , ಫಾಲ್‌/ಸ್ಪ್ರಿಂಗ್‌ (2005)
  13. ಇಸಾಗರ್‌ ಮತ್ತು ಸ್ಕಿಡ್ಸ್‌ಗಾರ್ಡ್‌ 1992, ಪು. 35.
  14. "ಎಕೊಸ್ಫೆರಾ , [[ಪಬ್ಲಿಕೊ (Público)]], 13 ಮೇ 2010". Archived from the original on 2010-05-31. Retrieved 2010-08-17.
  15. ಲೆವಿಂಗ್ಟನ್‌ಎ., & ಪಾರ್ಕರ್‌, ಇ. (1999) ಏನ್ಷಿಯೆಂಟ್‌ ಟ್ರೀಸ್. , ಪಿಪಿ 110–113, ಲಂಡನ್‌: ಕಾಲಿನ್ಸ್‌ & ಬ್ರೌನ್‌ ಲಿಮಿಟೆಡ್‌. ISBN 1-85585-704-9
  16. ಮುನಿಸಿಪಾಲಿಟಿ ಬಾರ್‌, "Kod Starog Bara u Tombi (Mirovica) nalazi se maslina stara više od 2,000 godina"- ಟೊಂಬಿಯಲ್ಲಿರುವ ಓಲ್ಡ್‌ ಬಾರ್‌ ಸಮೀಪ, 2,000 ವರ್ಷ ಹಳೆಯ ಆಲಿವ್‌ ಮರವಿದೆ.
  17. ಒ. ರಾಕ್‌ಹ್ಯಾಮ್‌, ಜೆ. ಮೂಡಿ, ದಿ ಮೇಕಿಂಗ್‌ ಆಫ್‌ ದಿ ಕ್ರೆಟನ್‌ ಲ್ಯಾಂಡ್‌ಸ್ಕೇಪ್‌ , 1996, ಎಫ್‌. ಆರ್‌. ರೈಲಿಯಲ್ಲಿ ಉಲ್ಲೇಖಿತ (2002). ಆಲಿವ್‌ ಆಯಿಲ್‌ ಪ್ರೊಡಕ್ಷನ್‌ ಆನ್‌ ಬ್ರಾಂಝ್‌ ಏಜ್‌ ಕ್ರೆಟ್‌: ನ್ಯೂಟ್ರಿಷನಲ್‌ ಪ್ರಾಪರ್ಟೀಸ್‌, ಪ್ರಾಸೆಸಿಂಗ್‌ ಮೆಥಡ್ಸ್‌, ಅಂಡ್‌ ಸ್ಟೊರೇಜ್‌ ಲೈಫ್‌ ಆಫ್‌ ಮಿನೊವನ್‌ ಆಲಿವ್‌ ಆಯಿಲ್‌. ಆಕ್ಸ್‌ಫರ್ಡ್‌ ಜರ್ನಲ್‌ ಆಫ್‌ ಆರ್ಕಿಯಾಲಜಿ 21 (1): 63–75
  18. "Old Olive Tree". Brijuni National Park. Archived from the original on 2011-07-21. Retrieved 2007-03-10.
  19. ೧೯.೦ ೧೯.೧ ಎಂ. ಕಿಸ್ಲೂ, ವೈ. ಟಬಕ್‌ & ಒ. ಸಿಂಹೊನಿ, ಐಡೆಂಟಿಫಯಿಂಗ್‌ ದಿ ನೇಮ್ಸ್‌ ಆಫ್‌ ಫ್ರೂಟ್ಸ್‌ ಇನ್ ಏನ್ಸೀಂಟ್‌ ರಬೈನಿಕ್‌ ಲಿಟರೇಚರ್ , ಲೆಷೊನೆನು (Leshonenu) (ಯೆಹೂದ್ಯ ಭಾಷೆ), ಸಂಪುಟ. 69, ಪು.279
  20. ಎನ್ಸಿಕ್ಲೊಪೀಡಿಯಾ ಯುನಿವರ್ಸಲ್‌ ಯುರೊಪಿಯೊ ಅಮೆರಿಕನಾ. ಸಂಪುಟ 15 . ಮ್ಯಾಡ್ರಿಡ್‌ 1981. ಎಸ್ಪಾಸಾ-ಕ್ಯಾಲ್ಪೆ ಎಸ್‌.ಎ. ISBN 84-239-4-500-6 (ಸಂಪೂರ್ಣ ವಿಶ್ವಕೋಶ) ಹಾಗೂ ISBN 84-239-4-515-4 (ಸಂಪುಟ 15)
  21. Discriminación de variedades de olivo a través del uso de caracteres morfológigos y de marcadores moleculares. 2001. ಕೆವೆಗ್ನೇರೊ ಪಿ., ಜೆ. ಜುವಾರೆಜ್‌, ಎಮ್‌. ಬಾಜಾ & ಆರ್‌. ಡಬ್ಲ್ಯೂ. ಮಾಸುಯೆಲಿ. ಅಗ್ರಿಸಿಯೆಂಟಾ (AGRISCIENTA). ಸಂಪುಟ 18:27-35
  22. [೧]
  23. http://www.faqs.org/patents/app/20090031619
  24. ಗ್ರೀನ್‌ ಪಿಎಸ್‌ (2002) ಆಲಿಯಾ ಎಲ್‌. ಕ್ಯೂ ವಾರ್ತಾ ಸಂಚಿಕೆಯ ಪರಿಷ್ಕರಣ. 57:91–140; ಬೆಸ್ನಾರ್ಡ್‌ ಜಿ, ರೂಬಿಯೊ ಡಿ ಕ್ಯಾಸಾಸ್‌ ಆರ್, ಕ್ರಿಸ್ಟಿನ್‌ ಪಿಎ, ವಾರ್ಗಾಸ್‌ ಪಿ (2009) ಪ್ಲಾಸ್ಟಿಡ್ ಮತ್ತು ನ್ಯೂಕ್ಲಿಯರ್ ರೈಬೋಸೋಮಲ್ DNAಸರಣಿಯ ಆಧಾರದ ಮೇಲೆ ಫ್ಲಯೋಜೆನೆಟಿಕ್ಸ್ ಆಫ್ ಆಲಿಯಾ (ಆಲಿಯಸಿಯೆ) : ಮೂರನೇ ಹವಾಮಾನ ಬದಲಾವಣೆಗಳು ಮತ್ತು ರೇಖೀಯ ಪ್ರಭೇದಕರಣ ಕಾಲಗಳು. ಅನಲ್ಸ್‌ ಆಫ್‌ ಬಾಟನಿ 104, 143-160
  25. ಬೆಸ್ನಾರ್ಡ್‌ ಜಿ, ಗಾರ್ಷಿಯಾ-ವರ್ಡುಗೊ ಸಿ, ರೂಬಿಯೊ ಡಿ ಕ್ಯಾಸಾಸ್‌ ಆರ್‌, ಟ್ರೇಯರ್‌ ಯುಎ, ಗ್ಯಾಲೆಂಡ್‌ ಎನ್‌, ವಾರ್ಗಾಸ್‌ ಪಿ (2008) ಪಾಲಿಪ್ಲಾಯಿಡಿ ಇನ್ ಆಲಿವ್‌ ಕಾಂಪೆಕ್ಸ್ (ಆಲಿಯಾ ಯುರೊಪಿಯಾ): ಎವಿಡೆನ್ಸ್ ಫ್ರಂ ಫ್ಲೋ ಸಿಟೋಮಿಟ್ರಿ ಎಂಡ್ ನ್ಯೂಕ್ಲಿಯರ್ ಮೈಕ್ರೋಸ್ಯಾಟಲೈಟ್ ಎನಲಿಸಿಸ್. ಅನಲ್ಸ್‌ ಆಫ್‌ ಬಾಟನಿ 101, 25-30
  26. ಫೊಟಿಯಡಿ, ಎಲೆನಾ "ಅನ್‌ಯೂಷುವಲ್‌ ಆಲಿವ್ಸ್‌", ಎಪಿಕೂರಿಯಾ ಮ್ಯಾಗಝೀನ್‌ (ಸ್ಪ್ರಿಂಗ್‌/ಸಮ್ಮರ್‌‌ 2006)
  27. Belaj; et al. (2002). "Genetic diversity and relationships in olive (Olea europaea L.) germplasm collections as determined by randomly amplified polymorphic DNA". TAG Theoretical and Applied Genetics. Springer Berlin / Heidelberg (vol. 105, Number 4). Retrieved 2007-08-31. {{cite journal}}: Explicit use of et al. in: |author= (help); Unknown parameter |month= ignored (help)[ಶಾಶ್ವತವಾಗಿ ಮಡಿದ ಕೊಂಡಿ]
  28. PFTA & Canaan Fair Trading. "A Brief Study of Olives and Olive Oil in Palestine". Zatoun. Archived from the original on 2007-08-21. Retrieved 2007-08-31.
  29. ೨೯.೦ ೨೯.೧ ೨೯.೨ "ಅನೂಷುಯಲ್‌ ಆಲಿವ್ಸ್‌", ಎಪಿಕೂರಿಯಾ ಮ್ಯಾಗಝೀನ್‌ , ಸ್ಪ್ರಿಂಗ್‌/ಸಮ್ಮರ್‌ 2006
  30. ರೈಲಿ, ಒಪಿ.ಸಿಐಟಿ.
  31. ಜ್ಯಾನ್ಸೆ, ಜೆ. ಡಿ. 1982. Pseudomonas syringae subsp. savastanoi (ex Smith) subsp. nov., nom. rev., - ಆಲಿಯೇಸೀ ಮತ್ತು ನೆರಿಯಮ್‌ ಆಲಿಯಾಂಡರ್‌ ಮೇಲೆ ದುರ್ಮಾಂಸವೆಬ್ಬಿಸುವ ಎಲ್‌. ಇಂಟ್‌. ಜೆ. ಸಿಸ್ಟ್‌. ಬ್ಯಾಕ್ಟೀರಿಯಲ್. 32:166–169.
  32. ಬರ್‌, ಎಂ. 1999. ಆಸ್ಟ್ರೇಲಿಯನ್‌ ಆಲಿವ್ಸ್‌. ಪರಿಶುದ್ಧ ತೈಲಗಳ ಉತ್ಪಾದಕರು ಮತ್ತು ಬೆಳೆಗಾರರಿಗೆ ಮಾರ್ಗದರ್ಶಿ 4ನೆಯ ಆವೃತ್ತಿ.
  33. "FAO, 2004". Apps3.fao.org. Archived from the original on 2007-03-13. Retrieved 2009-05-18.
  34. ಲ್ಯುಮರೆಟ್‌, ಆರ್‌ & ಒವಝಾನಿ, ಎನ್‌. (2001) ಏನ್ಷಿಯೆಂಟ್‌ ವೈಲ್ಡ್‌ ಆಲಿವ್ಸ್‌ ಇನ್‌ ಮೆಡಿಟರೇನಿಯನ್‌ ಫಾರೆಸ್ಟ್ಸ್. ನೇಚರ್‌ 413: 700
  35. ಡಿರ್ಕ್‌ ಹೆಚ್‌ಆರ್‌ ಸ್ಪೆನ್ಮನ್‌ & ಅಲೆನ್‌, ಎಲ್‌.ಆರ್‌. (2000) ಫೆರಲ್‌ ಆಲಿವ್ಸ್‌ (ಆಲಿಯಾ ಯುರೊಪಿಯಾ ) ಆಸ್‌ ಫ್ಯೂಚರ್‌ ವುಡಿ ವೀಡ್ಸ್‌ ಇನ್‌ ಆಸ್ಟ್ರೇಲಿಯಾ: ಎ ರೆವ್ಯೂ. ಆಸ್ಟ್ರೇಲಿಯನ್‌ ಜರ್ನಲ್‌ ಆಫ್‌ ಎಕ್ಸ್‌ಪೆರಿಮೆಂಟಲ್‌ ಅಗ್ರಿಕಲ್ಚರ್‌ 40: 889–901.
  36. ಆಲಿವ್ಸ್‌ ಆಸ್‌ ವೀಡ್ಸ್‌ ಅನಿಮಲ್‌ ಅಂಡ್‌ ಪ್ಲ್ಯಾಂಟ್‌ ಕಂಟ್ರೊಲ್‌ ಕಮಿಷನ್‌ ಆಫ್‌ ಸೌತ್‌ ಆಸ್ಟ್ರೇಲಿಯಾ

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  • Olives ಓಪನ್ ಡೈರೆಕ್ಟರಿ ಪ್ರಾಜೆಕ್ಟ್
"https://kn.wikipedia.org/w/index.php?title=ಆಲಿವ್&oldid=1201652" ಇಂದ ಪಡೆಯಲ್ಪಟ್ಟಿದೆ