ಕಿರುಬಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಒಂದು ಬಾಹ್ಯ ರಕ್ತ ಲೇಪನದಿಂದ ಒಂದು ದ್ಯುತಿ ಸೂಕ್ಷ್ಮದರ್ಶಕದ (೪೦x) ಕೆಳಗೆ ಕೆಂಪು ರಕ್ತ ಕಣಗಳಿಂದ ಸುತ್ತುವರಿಯಲ್ಪಟ್ಟಿರುವ ಎರಡು ಕಿರುಬಿಲ್ಲೆಗಳು (ನೇರಳೆ ಬಣ್ಣ).

ಕಿರುಬಿಲ್ಲೆಗಳು, ಅಥವಾ ಥ್ರಾಂಬಸೈಟ್‌ಗಳು, ಚಿಕ್ಕ, ವ್ಯಾಸದಲ್ಲಿ ೨-೩ µಮಿ ಇರುವ, ಅಸಮ ಆಕಾರದ, ಜೀವಕಣಕೇಂದ್ರವನ್ನು ಹೊಂದಿರದ, ಪೂರ್ವಗಾಮಿ ಮೆಗಕ್ಯಾರಿಯಸೈಟ್‌ಗಳ ವಿಚ್ಛೇದದಿಂದ ಉದ್ಭವಿಸಿದ ಜೀವಕೋಶಗಳು. ಒಂದು ಕಿರುಬಿಲ್ಲೆಯ ಸರಾಸರಿ ಜೀವಾವಧಿ ೮ರಿಂದ ೧೨ ದಿನಗಳು. ಕಿರುಬಿಲ್ಲೆಗಳು ರಕ್ತಸ್ತಂಭನದಲ್ಲಿ ಮಹತ್ವದ ಪಾತ್ರವಹಿಸುತ್ತವೆ ಮತ್ತು ಬೆಳವಣಿಗೆ ಅಂಶಗಳ ನೈಸರ್ಗಿಕ ಮೂಲಗಳಾಗಿವೆ.