ಶುಂಠಿ
ಶುಂಠಿ | |
---|---|
![]() | |
Conservation status | |
Secure
| |
ವೈಜ್ಞಾನಿಕ ವರ್ಗೀಕರಣ | |
ಸಾಮ್ರಾಜ್ಯ: | Plantae |
(unranked): | Angiosperms |
(unranked): | Monocots |
(unranked): | Commelinids |
ಗಣ: | Zingiberales |
ಕುಟುಂಬ: | Zingiberaceae |
ಕುಲ: | Zingiber |
ಪ್ರಭೇದ: | Z. officinale |
ದ್ವಿಪದ ಹೆಸರು | |
Zingiber officinale Roscoe |
ಶುಂಠಿ ಆಹಾರದಲ್ಲಿ ಬಳಸಲಾಗುವ ಒಂದು ಸಂಬಾರ ವಸ್ತು. ಶುಂಠಿಯನ್ನು ಔಷಧಿಗಳಲ್ಲಿ ಸಹ ಬಳಸುವರು. ಶುಂಠಿಯ ಗಿಡದ ನೆಲದೊಳಗಿನ ಭಾಗದ ಕಾಂಡವು ಶುಂಠಿಯೆನಿಸಿಕೊಳ್ಳುತ್ತದೆ.ಶುಂಠಿಯ ಕೃಷಿಗೆ ಸುದೀರ್ಘ ಇತಿಹಾಸವಿದೆ. ಏಷ್ಯಾ ಮೂಲದ ಶುಂಠಿಯನ್ನು ಭಾರತ, ಆಗ್ನೇಯ ಏಷ್ಯಾ, ಪಶ್ಚಿಮ ಆಫ್ರಿಕಾ ಮತ್ತು ಕೆರಿಬ್ಬಿಯನ್ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.
ಶುಂಠಿಯ ತೀಕ್ಷ್ಣ ಘಾಟು ಮತ್ತು ರುಚಿಗಳು ಅದರಲ್ಲಿನ ಜಿಂಜೆರೋಲ್, ಶೊಗಾಲ್ ಮತ್ತು ಜಿಂಜೆರೋನ್‌ಗಳೆಂಬ ಸಸ್ಯತೈಲಗಳ ಮಿಶ್ರಣದಿಂದ ಉಂಟಾಗುತ್ತದೆ. ಈ ತೈಲಗಳು ತಾಜಾ ಶುಂಠಿಯ ಒಟ್ಟು ತೂಕದ ೧ ರಿಂದ ೩ ಶೇಕಡಾದಷ್ಟು ಇರುತ್ತವೆ. ಸುಮಾರು ೩ ರಿಂದ ೪ ಅಡಿ ಎತ್ತರಕ್ಕಿರುವ ಶುಂಠಿಯ ಗಿಡವು ತೆಳ್ಳಗೆ ನೇರವಾಗಿರುತ್ತದೆ. ಗಿಡದ ಬಿಳಿ ಮತ್ತು ರೋಜಾ ಬಣ್ಣದ ಮೊಗ್ಗುಗಳು ಹಳದಿ ಬಣ್ಣದ ಹೂವಾಗಿ ಅರಳುತ್ತವೆ.
ಹಸಿ ಶುಂಠಿ ಮತ್ತು ಒಣಶುಂಠಿಗಳನ್ನು ಅಡುಗೆಯಲ್ಲಿ ಸಂಬಾರ ಪದಾರ್ಥವನ್ನಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.
ಶುಂಠಿಯ ಉತ್ಪಾದನೆ[ಬದಲಾಯಿಸಿ]
ಜಗತ್ತಿನ ಒಟ್ಟು ಶುಂಠಿಯ ಉತ್ಪಾದನೆಯ ೩೦% ಪಾಲನ್ನು ಬೆಳೆಯುವ ಭಾರತ ಮೊದಲ ಸ್ಥಾನದಲ್ಲಿದೆ.
ವಿಶ್ವದ ಮೊದಲ ಹತ್ತು ಶುಂಠಿ ಉತ್ಪಾದಕ ದೇಶಗಳು — 11 ಜೂನ್ 2008ರಂತೆ | ||||
---|---|---|---|---|
ದೇಶ | ಉತ್ಪಾದನೆ (ಟನ್ನುಗಳಲ್ಲಿ) | |||
ಭಾರತ | ೫೦೦೦೦೦ | |||
ಚೀನಾ | 285000 | |||
ಇಂಡೋನೇಷ್ಯಾ | 177000 | |||
ನೇಪಾಳ | 158905 | |||
ನೈಜೀರಿಯ | 138000 | |||
ಬಾಂಗ್ಲಾದೇಶ | 57000 | |||
ಜಪಾನ್ | 42000 | |||
ಥೈಲ್ಯಾಂಡ್ | 34000 | |||
ಫಿಲಿಪ್ಪೀನ್ಸ್ | 28000 | |||
ಶ್ರೀಲಂಕಾ | 8270 | |||
ಒಟ್ಟು ವಿಶ್ವ | 1387445 |
ಔಷಧೀಯ ಗುಣಗಳು[ಬದಲಾಯಿಸಿ]
- ಶುಂಠಿಯಲ್ಲಿರುವ ಜಿಂಜೆರೋಲ್‌ಗಳು ನೋವುನಿವಾರಕ, ಉದ್ವೇಗಶಾಮಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಜೊತೆಗೆ ಇವು ಜೀರ್ಣಶಕ್ತಿಯನ್ನು ಹೆಚ್ಚಿಸುವ ವಿಶೇಷ ಗುಣವನ್ನು ಸಹ ಹೊಂದಿವೆ.
- ಶುಂಠಿಯು ಕೆಲ ಬಗೆಯ ಅತಿಸಾರಕ್ಕೆ ಪರಿಣಾಮಕಾರಿ ಔಷಧಿಯೆಂದು ಕಂಡುಕೊಳ್ಳಲಾಗಿದೆ.
- ಸಮುದ್ರಯಾನದಿಂದ ಉಂಟಾಗುವ ತಲೆಸುತ್ತುವಿಕೆ, ಹೊಟ್ಟೆ ತೊಳಸುವಿಕೆಗಳಿಗೆ ಉತ್ತಮ ಶಮನವೆಂದು ಸಿದ್ಧವಾಗಿದೆ.
- ಉರಿಯೂತ ನಿವಾರಕ ಮತ್ತು ಜೀರ್ಣಕಾರಕ
- ಮುಟ್ಟಿನ ನೋವನ್ನು ಶಮನಗೊಳಿಸಲು ಸಹಕಾರಿ.
- ರಕ್ತದಲ್ಲಿನ ಕೆಟ್ಟ ಕೊಬ್ಬನ್ನು ಕಡಿತಗೊಳಿಸುತ್ತದೆ.
- ನರಮಂಡಲದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
- ಜೇನುತುಪ್ಪ,ತುಳಸಿ ರಸವನ್ನು ಶುಂಠಿರಸದೊಂದಿಗೆ ಬೆರೆಸಿ ಕುಡಿದರೆ,ಕಪ ನಿವಾರಣೆಯಾಗುತ್ತದೆ.
ಬಾಹ್ಯ ಸಂಪರ್ಕಕೊಂಡಿಗಳು[ಬದಲಾಯಿಸಿ]
![]() |
ವಿಕಿಮೀಡಿಯ ಕಣಜದಲ್ಲಿ Ginger ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |